ಅಭಿಮತ: ಅನ್ಯ ರೋಗಿಗಳ ಆರೈಕೆಗೂ ಇರಲಿ ಆದ್ಯತೆ


Team Udayavani, Sep 29, 2020, 7:10 AM IST

Sudarshan-Ballal-02

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

– ಡಾ| ಎಚ್‌. ಸುದರ್ಶನ ಬಲ್ಲಾಳ್‌, ಮುಖ್ಯಸ್ಥರು, ಮಣಿಪಾಲ ಆಸ್ಪತ್ರೆಗಳು

ಕೋವಿಡ್‌ ಸಾಂಕ್ರಾಮಿಕ ಮತ್ತು ಅದರೆಡೆಗೆ ವ್ಯಕ್ತವಾಗುತ್ತಿರುವ ಇಂಥ ಪ್ರತಿಕ್ರಿಯೆಗಳನ್ನು ಜಗತ್ತು ಕಳೆದ ನೂರು ವರ್ಷಗಳಲ್ಲೇ ನೋಡಿರಲಿಲ್ಲ.

ಇಷ್ಟು ಕಡಿಮೆ ಅವಧಿಯಲ್ಲೇ, ಜಾಗತಿಕವಾಗಿ 3.3 ಕೋಟಿಗೂ ಅಧಿಕ ಪ್ರಕರಣಗಳು ದಾಖಲಾಗಿದ್ದರೆ, 10 ಲಕ್ಷ ಜನ ಮೃತಪಟ್ಟಿದ್ದಾರೆ.

ನನ್ನ ಈ 5 ದಶಕಗಳ ವೈದ್ಯಕೀಯ ವೃತ್ತಿಯಲ್ಲಿ ಯಾವೊಂದು ವೈರಸ್‌ ಸಹ ಈ ಪ್ರಮಾಣದಲ್ಲಿ ಸರಕಾರಗಳನ್ನು, ವಿಜ್ಞಾನಿಗಳನ್ನು, ಮಾಧ್ಯಮಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರನ್ನು ಹಿಡಿದಿಟ್ಟ ಉದಾಹರಣೆ ಇಲ್ಲ.

ಈ ಸಾಂಕ್ರಾಮಿಕ ಜಗತ್ತನ್ನು ತಲೆಕೆಳಗಾಗಿಸಿಬಿಟ್ಟಿದೆ. ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ, ಹೆಲ್ತ್‌ಕೇರ್‌ ಉದ್ಯಮ ಬದುಕುಳಿಯಲು ಪ್ರಯಾಸ ಪಡುತ್ತಿದೆ, ಪ್ರವಾಸೋದ್ಯಮ, ಹಾಸ್ಪಿಟಾಲಿಟಿ ಮತ್ತು ವಿಮಾನಯಾನ ಉದ್ಯಮಗಳು ಸಂಪೂರ್ಣ ದಿವಾಳಿಯಾಗಿವೆ.

ನಮ್ಮ ಮಕ್ಕಳು ಹಿಂದೆ ಉಳಿದುಬಿಡುತ್ತಿದ್ದಾರೆ, ಗೆಳೆಯರು ಮತ್ತು ಕುಟುಂಬದ ಸದಸ್ಯರನ್ನು ಭೇಟಿಯಾಗುವಂಥ, ರಜೆಗಾಗಿ ಪ್ರವಾಸ ಮಾಡುವಂಥ, ರೆಸ್ಟಾರೆಂಟ್‌ಗಳು, ಮಾಲ್‌ಗ‌ಳು ಮತ್ತು ಸಿನೆಮಾ ಮಂದಿರಗಳಿಗೆ ಹೋಗುವಂಥ ಜೀವನದ ಸರಳ ಸಂತೋಷಗಳು ದೂರದ ಕನಸಾಗಿ ಬದಲಾಗಿವೆ. ಈ ರೋಗ ಸಾವಿನ ಮೇಲೂ ತನ್ನ ಛಾಯೆ ಬೀರಿದ್ದು, ಅಂತ್ಯಕ್ರಿಯೆಯ ಪ್ರಕ್ರಿಯೆಗಳೀಗ, ಆನ್‌ಲೈನ್‌ ವೀಕ್ಷಣೆಯ ರೂಪ ಪಡೆದಿವೆ.

ಕೋವಿಡ್‌-19 ನಿಸ್ಸಂಶಯವಾಗಿಯೂ ಗಂಭೀರ ಸಮಸ್ಯೆಯಾಗಿದ್ದು, ಈ ವೈರಸ್‌ನ ತಡೆಗೆ ಲಾಕ್‌ಡೌನ್‌ನಂಥ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸರಕಾರ ಮತ್ತು ವೈದ್ಯಕೀಯ ಸಮುದಾಯ (ನನ್ನನ್ನೂ ಒಳಗೊಂಡು) ಒಮ್ಮತಕ್ಕೆ ಬಂದೆವು.

ದುರದೃಷ್ಟವಶಾತ್‌, ಈಗ ಕೋವಿಡ್ 19ನೇ ಮುನ್ನೆಲೆಗೆ ಬಂದಿರುವುದರಿಂದ, ಅನ್ಯ ರೋಗಗಳು ಹಿನ್ನೆಲೆಗೆ ತಳ್ಳಲ್ಪಟ್ಟು, ಅಪರಿಮಿತ ಸಂಕಟಕ್ಕೆ ಕಾರಣವಾಗಿದೆ. ಕೋವಿಡ್‌ ಬಹಳ ಸಾಂಕ್ರಾಮಿಕ ರೋಗವೆನ್ನುವುದು ನಿಜವಾದರೂ, ಎಬೊಲಾ, ಸಿಡುಬು ಮತ್ತು ಸಾರ್ಸ್‌ನಂಥ ವೈರಾಣು ರೋಗಗಳಿಗೆ ಹೋಲಿಸಿದರೆ, ಇದರಲ್ಲಿ ಮರಣ ಪ್ರಮಾಣ ಕಡಿಮೆಯಿದೆ.

ಸುಮಾರು 140 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೋವಿಡ್ 19 95 ಸಾವಿರದಷ್ಟು ಜನರನ್ನು ಬಲಿಪಡೆದಿದೆ. ನಮ್ಮ ಆರೋಗ್ಯ ವ್ಯವಸ್ಥೆಯ ಬಹುತೇಕ ಬಜೆಟ್‌ ಹಾಗೂ ವೈದ್ಯಕೀಯ ಸಂಪನ್ಮೂಲಗಳನ್ನು ಕೋವಿಡ್ 19ನತ್ತ ಹರಿಸಿರುವುದರಿಂದಾಗಿ, ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವ, ಹೆಚ್ಚು ಅಸ್ವಸ್ಥತೆಗೆ ಕಾರಣವಾಗುವ ಮರಣ ಪ್ರಮಾಣ ಅಧಿಕವಿರುವ ರೋಗಗಳ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ದೇಶದಲ್ಲಿ ಕೋವಿಡ್‌ಗೆ ಹೋಲಿಸಿದರೆ, ಇತರ ರೋಗಗಳ ಅಂಕಿಸಂಖ್ಯೆ ಹೇಗಿದೆ ಎನ್ನುವುದನ್ನು ನೋಡೋಣ.

ಈ ಅಂಶಗಳನ್ನು ಪರಿಗಣಿಸಿದಾಗ, ದೇಶದಲ್ಲಿನ ಮರಣ ಪ್ರಮಾಣದಲ್ಲಿ ಕೋವಿಡ್‌ನ‌ ಪಾಲು ಅತಿ ಚಿಕ್ಕದು ಎನ್ನುವುದು ಸ್ಪಷ್ಟವಾಗುತ್ತದೆ. ಆದರೂ ಲೆಕ್ಕವಿಲ್ಲದಷ್ಟು ಸಂಪನ್ಮೂಲಗಳನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಳಸಲಾಗುತ್ತಿದೆ.

ಅಮೆರಿಕ ಮತ್ತು ಬ್ರಿಟನ್‌ನಂಥ ಅತ್ಯಂತ ಮುಂದುವರಿದ ರಾಷ್ಟ್ರಗಳು ಸಹ ಲಕ್ಷಾಂತರ ಡಾಲರ್‌ ವ್ಯಯಿಸಿದರೂ ಕೋವಿಡ್‌ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆ ರಾಷ್ಟ್ರಗಳೀಗ ಬೃಹತ್‌ ಆರ್ಥಿಕ ಕುಸಿತದ ಅಂಚಿನಲ್ಲಿವೆ.

ಭಾರತವು ಸಾರ್ಸ್‌, ಎಚ್‌1ಎನ್‌1 ಸೇರಿದಂತೆ ಅನೇಕ ಸಾಂಕ್ರಾಮಿಕಗಳನ್ನು ಎದುರಿಸುತ್ತಲೇ ಬಂದಿದೆ. ಆದರೂ ಕೋವಿಡ್‌ ಎಂಥ ಸಾಂಕ್ರಾಮಿಕ ಎಂದರೆ, ಇದರ ಹಾವಳಿ ಅಧಿಕವಿದ್ದರೂ ಆಸ್ಪತ್ರೆಗಳಿಗೆ ಬರುವ ಜನರ ಸಂಖ್ಯೆಯಲ್ಲಿ 60-80 ಪ್ರತಿಶತ ಇಳಿಕೆಯಾಗಿದೆ.

ಏಕೆಂದರೆ, ಕೋವಿಡೇತರ ರೋಗಿಗಳು ಈಗ ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದಾರೆ ಅಥವಾ ಅವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಕ್ಕರೆ ಕಾಯಿಲೆ, ಹೈಪರ್‌ಟೆನ್ಶನ್‌, ಹೃದಯ ರೋಗ, ಸ್ಥೂಲಕಾಯದಂಥ ಸಮಸ್ಯೆಗಳಿಗೆ ಸಕಾಲಕ್ಕೆ ಆರೋಗ್ಯ ಸೇವೆ ಸಿಗದೇ ಹೋದರೆ ಅವು ಮಾರಣಾಂತಿಕವಾಗಿ ಪರಿಣಮಿಸಬಹುದು.

ಈ ರೀತಿಯ ತೊಂದರೆ ಕೇವಲ ಅನಾರೋಗ್ಯ ಪೀಡಿತರಿಗಷ್ಟೇ ಸೀಮಿತವಾಗಿಲ್ಲ. ಇಂದು ಜಗತ್ತಿನಾದ್ಯಂತ ಅನೇಕ ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಸಿಗುತ್ತಿಲ್ಲ. ಇದರಿಂದಾಗಿ ತಡೆಗಟ್ಟಬಹುದಾದ ರೋಗಗಳಿಗೆ ಇಡೀ ಸಮಾಜವೇ ಗ್ರಸ್ತವಾಗುವ ಸಾಧ್ಯತೆ ಇರುತ್ತದೆ. ಹಾಗೆಂದು ಕೈಚೆಲ್ಲುವುದು ಎಂದಿಗೂ ಉತ್ತರವಾಗುವುದಿಲ್ಲ.


ಕೋವಿಡ್‌ ಇನ್ನೆಷ್ಟು ದಿನ ಇರಲಿದೆಯೋ ಎಂದು ನಮಗೆ ಸ್ಪಷ್ಟವಾಗಿ ತಿಳಿದಿಲ್ಲವಾದ್ದರಿಂದ, ನಮ್ಮ ಅಪ್ರೋಚ್‌ ಅನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ನಾವು ಮಾಡಬೇಕಿರುವುದಿಷ್ಟು:

1. ಸಾಮಾಜಿಕ ಅಂತರದ ಪಾಲನೆ, ಮಾಸ್ಕ್ ಧರಿಸುವಿಕೆ, ಕೆಮ್ಮುವಾಗ ಎಚ್ಚರಿಕೆ, ಪದೇ ಪದೆ ಕೈತೊಳೆಯುವುದು, ನಿಮ್ಮ ಸುತ್ತ ಮುತ್ತಲ ಸ್ಥಳವನ್ನು ಸ್ವತ್ಛವಾಗಿಡು ವುದು ಮತ್ತು ಜನಸ್ತೋಮದಿಂದ ದೂರವಿರುವುದು.

2. ಲಕ್ಷಣರಹಿತ ಅಥವಾ ಸಣ್ಣ ಮಟ್ಟದಲ್ಲಿ ಲಕ್ಷಣ ಹೊಂದಿರುವ ರೋಗಿಗಳಿಗೆ ಆಸ್ಪತ್ರೆಯೇತರ ಆರೈಕೆ ಮಾಡುವುದು.

3. ರೋಗ ಲಕ್ಷಣ ಮಧ್ಯಮ ಸ್ತರದಲ್ಲಿರುವವರು ಮತ್ತು ಹೆಚ್ಚು ಅಸ್ವಸ್ಥರಾಗಿರುವ ರೋಗಿಗಳಿಗಷ್ಟೇ ಆಸ್ಪತ್ರೆಗಳ ಬೆಡ್‌ಗಳನ್ನು ಮೀಸಲಿಡುವುದು.

4. ಆರೋಗ್ಯ ಕಾರ್ಯಕರ್ತರಲ್ಲಿ ವೈಯಕ್ತಿಕ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ರಕ್ಷಿಸುವುದು, ಪಿಪಿಇ ಕಿಟ್‌ಗಳ ಬಳಕೆ ಮತ್ತು ಜಾಗತಿಕ ಸುರಕ್ಷತಾ ವಿಧಾನಗಳನ್ನು ಪಾಲಿಸುವುದು.

5. ವೃದ್ಧರು, ಸಕ್ಕರೆ ಕಾಯಿಲೆ ಪೀಡಿತರು, ಕ್ಯಾನ್ಸರ್‌ ರೋಗಿಗಳು ಸೇರಿದಂತೆ, ಸಿಕೆಡಿಯಂಥ ಸಮಸ್ಯೆಯಿಂದ ಬಳಲುತ್ತಿರು ವವರನ್ನು ಐಸೊಲೇಶನ್‌ ಮೂಲಕ ಚಿಕಿತ್ಸೆ ನಿರಂತರ ಸಿಗುವಂತೆ ಮಾಡುವುದು.

6. ಜನರಲ್ಲಿನ ಸೋಂಕಿನ ಭಯ ಮತ್ತು ಕಳಂಕದ ಆತಂಕವನ್ನು ನಿವಾರಿಸಲು ಮಾಧ್ಯಮಗಳನ್ನು ಬಳಸಿಕೊಳ್ಳುವುದು.

ಈ ಕ್ರಮಗಳ ಮೂಲಕ ನಾವು ಕೋವಿಡ್‌ ಸಾಂಕ್ರಾಮಿಕ ನಿಯಂ ತ್ರಣವಷ್ಟೇ ಅಲ್ಲದೇ ಇತರ ರೋಗಗಳಿಂದ ಬಳಲುತ್ತಿರುವವರಿಗೂ ಆರೋಗ್ಯ ಸೇವೆಗಳು ನಿರಂತರ ಸಿಗುವಂತೆ ಮಾಡಬಹುದು.

ನನ್ನ ವೃತ್ತಿಯೇ ಜನರ ಜೀವವನ್ನು ಉಳಿಸುವುದಾದ್ದರಿಂದ, ನನ್ನನ್ನು ನಾನು ಬಹಳ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ವೈದ್ಯಕೀಯ ಸಮುದಾಯದಲ್ಲಿರುವ ನಮ್ಮಂಥ ಅನೇಕರು ಈಗ ಒದ್ದಾಡುತ್ತಿದ್ದೇವೆ.

ಏಕೆಂದರೆ, ಬೆಡ್‌ಗಳ ಕೊರತೆಯಿಂದಾಗಿ, ಉಳಿಸಬಹುದಾಗಿದ್ದ ಅನೇಕ ರೋಗಿಗಳು ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಅಡಚಣೆಯಾಗುವುದನ್ನು ತಡೆಯುವ ಮೂಲಕ ನಾವು ಎಷ್ಟೋ ಜೀವಗಳನ್ನು ಉಳಿಸಬಹುದಾಗಿದೆ.

ಆದರೆ ಈ ವಿಷಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅಗತ್ಯವಿದೆ. ಸರಕಾರ, ತಂತ್ರಜ್ಞಾನ, ಜಾಗೃತಿ ಕಾರ್ಯಕ್ರಮಗಳು ಹಾಗೂ ವೈಯಕ್ತಿಕ ಜವಾಬ್ದಾರಿಯ ಒಟ್ಟಾರೆ ಶಕ್ತಿಯ ಮೂಲಕ, ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ರೋಗಿಗೂ ನಾವು ಸುರಕ್ಷಿತ ವಾತಾವರಣವನ್ನು ನಿರ್ಮಿಸಬಲ್ಲೆವು.

ಕೋವಿಡ್‌ ರೋಗಿಗಳ ಜೀವನ ಅಮೂಲ್ಯವಾದದ್ದು, ಅಂತೆಯೇ, ಉಳಿದೆಲ್ಲ ರೋಗಿಗಳದ್ದೂ ಸಹ. ಯಾವ ಸಾಂಕ್ರಾಮಿಕವೂ ಶಾಶ್ವತವಾಗಿ ಇರುವುದಿಲ್ಲ. ಈ ರೋಗದಿಂದಲೂ ನಾವು ಮುಕ್ತಿಪಡೆಯಲಿದ್ದೇವೆ. ಅಲ್ಲಿಯವರೆಗೂ ಒಂದು ಸಮತೋಲಿತ ಹಾದಿಯಲ್ಲಿ ಸಾಗಿ, ಎಲ್ಲ ರೋಗಿಗಳಿಗೆ ನಮ್ಮಿಂದ ಸಾಧ್ಯವಾದಷ್ಟೂ ಉತ್ತಮವಾಗಿ ಆರೈಕೆ ಮಾಡೋಣ.

ಟಾಪ್ ನ್ಯೂಸ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.