ಸಮಾನ ನಾಗರಿಕ ಸಂಹಿತೆ: ಸಾಧಕ – ಬಾಧಕಗಳು


Team Udayavani, Jul 12, 2023, 6:15 AM IST

ಸಮಾನ ನಾಗರಿಕ ಸಂಹಿತೆ: ಸಾಧಕ – ಬಾಧಕಗಳು

ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಸುದ್ದಿ ಈಗ ಪ್ರಚಲಿತ ವಿವಾದಾತ್ಮಕ ವಿಷಯ. ಭಾರತದ ಕಾನೂನು ಆಯೋಗವು ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಮತ್ತೊಮ್ಮೆ ತೊಡಗಿದೆ. ಇದರ ರಾಜ ಕೀಯ ಕೋನವನ್ನು ಬದಿಗಿಟ್ಟು ಕಾನೂನಾತ್ಮಕವಾಗಿ ವಿಮರ್ಶಿಸುವುದು ಈಗ ಪ್ರಸ್ತುತ.

ಇದರ ಕಲ್ಪನೆ ಎಲ್ಲಿದೆ?
ಸಮಾನ ನಾಗರಿಕ ಸಂಹಿತೆಯ ಕಲ್ಪನೆಯು ನಮ್ಮ ಸಂವಿಧಾನದಲ್ಲಿಯೇ ಇದೆ. ಸಂವಿಧಾನದ 4ನೇ ಭಾಗದಲ್ಲಿ ರಾಜ್ಯನೀತಿಯ ನಿರ್ದೇಶಕ ತತ್ತÌಗಳನ್ನು ನಮೂದಿಸಲಾಗಿದೆ. ಸರಕಾರವು ಕಾನೂನುಗಳನ್ನು ಯಾವ ದಿಸೆಯಲ್ಲಿ ತಯಾರಿಸಬಹುದು ಎಂಬುದರ ಆಶಯವನ್ನು ಈ ಭಾಗದಲ್ಲಿ ವಿವಿಧ ಆಯಾಮಗಳಲ್ಲಿ ತಿಳಿಸಲಾಗಿದೆ. 37ನೇ ಆರ್ಟಿಕಲ್‌ನಲ್ಲಿ ತಿಳಿಸುವಂತೆ ಈ ಭಾಗದಲ್ಲಿ ಅಡಕವಾಗಿರುವ ಉಪಬಂಧಗಳು ಯಾ ವುದೇ ನ್ಯಾಯಾಲಯದ ಮೂಲಕ ಜಾರಿಗೊಳಿಸುವಂ ಥವುಗಳಾಗಿರತಕ್ಕದ್ದಲ್ಲ; ಆದಾಗ್ಯೂ ಈ ಭಾಗದಲ್ಲಿ ಹೇಳಲಾಗಿರುವ ತತ್ತÌಗಳು ದೇಶದ ಆಡಳಿತ ನಿರ್ವ ಹಣೆಯಲ್ಲಿ ಮೂಲ ಭೂತವಾದವುಗಳಾಗಿರುತ್ತವೆ ಮತ್ತು ಕಾನೂನುಗಳನ್ನು ರೂಪಿಸುವಲ್ಲಿ ಈ ತತ್ತÌಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯವಾಗಿರತಕ್ಕದ್ದು. ಅಂತಹ ತತ್ತÌಗಳಲ್ಲಿ ಸಮಾನ ನಾಗರಿಕ ಸಂಹಿತೆಯೂ ಒಂದು. ಆರ್ಟಿಕಲ್‌ 44 ತಿಳಿಸುವಂತೆ ಭಾರತದ ಕ್ಷೇತ್ರ ದಾದ್ಯಂತ ನಾಗರಿಕರಿಗೆ ಏಕರೂಪದ ಸಿವಿಲ್‌ ಸಂಹಿ ತೆಯು ಇರುವ ಹಾಗೆ ಪ್ರಯತ್ನಿಸತಕ್ಕದ್ದು. ವ್ಯಕ್ತಿಗತ ಕಾನೂನು ದೇಶಾದ್ಯಂತ ಒಂದೇ ರೀತಿಯಾಗಿರಬೇಕು.

ಈ ಕಾನೂನನ್ನು ಯಾರು ರೂಪಿಸಬಹುದು?
ನಮ್ಮ ಸಂವಿಧಾನದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಎರಡೂ ಸರಕಾರಗಳು ಯಾವ ಯಾವ ವಿಷಯಗಳಲ್ಲಿ ಕಾನೂನನ್ನು ರೂಪಿಸಬಹುದು ಎಂಬುದನ್ನು 7ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ. ಇದರ 3ನೇ ಪಟ್ಟಿಯಲ್ಲಿ 5ನೇ ವಿಷಯ ಹೀಗಿದೆ: ವಿವಾಹ ಮತ್ತು ವಿವಾಹ ವಿಚ್ಛೇದನ; ಶಿಶುಗಳು ಮತ್ತು ಅಪ್ರಾಪ್ತ ವಯಸ್ಕರು; ದತ್ತು ಸ್ವೀಕಾರ; ಉಯಿಲುಗಳು, ಮರಣಶಾಸನ ಇಲ್ಲದಿರುವುದು ಮತ್ತು ಉತ್ತರಾ ಧಿಕಾರ; ಅವಿಭಕ್ತ ಕುಟುಂಬ ಮತ್ತು ವಿಭಜನೆ; ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷಕಾರರು ನ್ಯಾ ಯಿಕ ವ್ಯವಹರಣೆಯಲ್ಲಿ ಈ ಸಂವಿಧಾನದ ಪ್ರಾರಂಭಕ್ಕೆ ನಿಕಟ ಪೂರ್ವದಲ್ಲಿ ತಮ್ಮ ಮತ ಸಂಬಂಧವಾದ ವಿಷ ಯಕ್ಕೆ ಒಳಪಟ್ಟಿದ್ದರೋ ಅಂಥ ಎಲ್ಲ ವಿಷಯಗಳು. 3ನೇ ಪಟ್ಟಿಯಲ್ಲಿ ನಮೂದಿಸಿದ ವಿಷಯಗಳಿಗೆ ರಾಜ್ಯ ಗಳು ಕಾನೂನು ಮಾಡಬಹುದು. ಆದರೆ ಕೇಂದ್ರವು ಆ ವಿಷಯದಲ್ಲಿ ಕಾನೂನನ್ನು ರೂಪಿಸಿದರೆ ಅದೇ ದೇಶಾದ್ಯಂತ ಜಾರಿಯಲ್ಲಿ ಇರುವುದು. ಭಾರತದಲ್ಲಿ ಬ್ರಿಟಿಷರು ಕೋರ್ಟ್‌ಗಳನ್ನು ಸ್ಥಾಪಿಸಿದಾಗ ಮಾಡಿದ್ದ ಸಿವಿಲ್‌ ಕೋರ್ಟ್‌ನ ಕಾನೂನಿನಲ್ಲಿ ಹಿಂದುಗಳು ಮತ್ತು ಮುಸಲ್ಮಾನರು ಅನುಸರಿಸುವ ಮತೀಯ ಕಾನೂನುಗಳನ್ನು ಅನುಸರಿಸಿ ತೀರ್ಮಾನಿಸಬೇಕು ಎಂಬುದಾಗಿ ಸೂಚಿಸಲಾಗಿತ್ತು.

ಹೀಗಾಗಿ ಹಿಂದುಗಳಿಗೆ ಮಿತಾಕ್ಷರ ಮತ್ತು ದಾಯಭಾಗ ಎಂಬ ಪಿತ್ರಾರ್ಜಿತ ಆಸ್ತಿಯ ಹಕ್ಕಿನ ಕಾನೂನುಗಳನ್ನು ಅನುಸರಿಸಿದ ತೀರ್ಮಾನಗಳು ಬಂದವು. 1937ರಿಂದ ಮುಸ ಲ್ಮಾನರಿಗೆ ಶರಿಯತ್‌ ಕಾನೂನು ಲಗಾವು ಆಗ ತೊಡಗಿತು. ಸಂವಿಧಾನದಂತೆ ಕೇಂದ್ರ ಸರಕಾರವು ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಬಹುದು. ಹಾಗೆ ರೂಪಿಸಿದರೆ ಅದು ದೇಶಾದ್ಯಂತ ಜಾರಿಯಲ್ಲಿ ಇರಲಿದೆ.

ಸಮಾನ ನಾಗರಿಕ ಸಂಹಿತೆ ಎಂದರೇನು?
ಸಂವಿಧಾನದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಮಾಡುವ ಆಶಯವನ್ನೇನೋ ವ್ಯಕ್ತ ಗೊಳಿಸಿದರೂ ಸಮಾನ ನಾಗರಿಕ ಸಂಹಿತೆ ಎಂದರೆ ಏನಿದು ಎಂಬುದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಇದರಿಂದಾಗಿಯೋ ಏನೋ ಈ ಬಗ್ಗೆ ನಾಗರಿಕರಲ್ಲಿ ದ್ವಂದ್ವ ಉಂಟಾಗಿದೆ. ಮದುವೆ, ವಿಚ್ಛೇದನ, ಅಸಹಾ ಯಕರಿಗೆ ಅಶನಾರ್ಥ ನೀಡುವುದು, ಮಕ್ಕಳ ದತ್ತು ಸ್ವೀಕಾರ, ಅಪ್ರಾಪ್ತ ವಯಸ್ಕರ ರಕ್ಷಣೆ, ಆಸ್ತಿಯ ವಾರೀ ಸು ಹಕ್ಕು, ವಿಭಾಗದ ಹಕ್ಕು, ತನ್ನ ಸೊತ್ತಿಗೆ ಉತ್ತಾರಾ ಧಿಕಾರಿಯನ್ನು ನೇಮಿಸುವ ವಿಲ್‌ ಮಾಡುವ ಕ್ರಮ ಮತ್ತು ಹಕ್ಕು, ಸಂತಾನ ನಿಯಂತ್ರಣ ಇವಿಷ್ಟು ವಿಷಯ ಗಳನ್ನು ಒಳಗೊಳ್ಳುವ ನಾಗರಿಕ ಸಂಹಿತೆ ಇರುವುದಾದರೆ ಅದಕ್ಕೆ ಯಾಕೆ ದ್ವಂದ್ವ? ಈ ವಿಷಯಗಳಲ್ಲಿ ಈಗ ನಮ್ಮ ದೇಶದಲ್ಲಿ ಇರುವಷ್ಟು ಕಾನೂನಿನ ವಿವಿಧತೆ ಬೇರೆ ಯಾವ ದೇಶದಲ್ಲೂ ಇರಲಾರದು. ಯಾವುದೇ ಧರ್ಮದ ಅಥವಾ ಸಮುದಾಯದ ವ್ಯಕ್ತಿಯ ಜೀವನ ದಲ್ಲಿ ಈ ವಿಷಯಗಳು ಸಾಮಾನ್ಯವಲ್ಲವೆ? ಈ ವಿಷಯಗಳು ಲೌಕಿಕದ ವ್ಯಾವಹಾರಿಕ ವಿಷಯಗಳೇ ಹೊರತು ಧರ್ಮಾಚರಣೆಯ ವಿಷಯ ಅಲ್ಲವೇ ಅಲ್ಲ. ಹೀಗಾಗಿ ಇಂತಹ ವಿಷಯಗಳಿಗೆ ಸೀಮಿತವಾದ ಸಮಾನ ನಾಗರಿಕ ಸಂಹಿತೆಯನ್ನು ಕಾನೂನಿನ ದೃಷ್ಟಿ ಯಿಂದ ವಿರೋಧಿಸುವ ಅಗತ್ಯವಿಲ್ಲ. ವಿರೋಧಕ್ಕಾಗಿ ವಿರೋಧದ ಮಾತು ಬೇರೆ. ಸಮಾನ ನಾಗರಿಕ ಸಂಹಿತೆ ಎಂದರೇನು ಎಂಬುದನ್ನು ಮೇಲೆ ಬರೆದಂತೆ ಸ್ಪಷ್ಟ ಪಡಿಸಿದರೆ ಗೊಂದಲಕ್ಕೆ ಅವಕಾಶವಿಲ್ಲ. ಸಂವಿಧಾನದ 7ನೇ ಅನುಸೂಚಿಯ 3ನೇ ಪಟ್ಟಿಯ 5ನೇ ವಿಷಯ ದಲ್ಲಿ ಬರೆದುದಕ್ಕೆ ಸೀಮಿತ ಕಾನೂನು ಸಮಾನ ನಾಗರಿಕ ಸಂಹಿತೆಯ ಕಾನೂನು ಎನ್ನಬಹುದು.

ಸಮಾನ ನಾಗರಿಕ ಸಂಹಿತೆ ಯಾಕೆ ಬೇಕು?
ಬೇರೆ ಬೇರೆ ಕಾನೂನು ಇದ್ದರೆ ತೊಂದರೆ ಏನು? ಏಕರೂಪದ ಕಾನೂನು ಯಾಕೆ ಬೇಕು? ಇದೂ ಇನ್ನೊಂದು ಪ್ರಶ್ನೆ. ಬ್ರಿಟಿಷರ ಕಾಲದಿಂದಲೂ ಇರುವ ಏಕರೂಪದ ಕಾನೂನು ಹೇಗೆ ಪ್ರಯೋಜನಕಾರಿ ಎಂಬುದನ್ನು ಗಮನಿಸಿದರೆ ಇದಕ್ಕೆ ಉತ್ತರ ಸುಲಭವಾಗಿ ಸಿಗುವುದು. ಭಾರತೀಯ ದಂಡ ಸಂಹಿತೆ (ಇಂಡಿ ಯನ್‌ ಪಿನಲ್‌ ಕೋಡ್‌), ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕ್ರಿಯಾ ಸಂಹಿತೆಗಳು (ಸಿಆರ್‌ಪಿಸಿ ಮತ್ತು ಸಿಪಿಸಿ) ಇಡೀ ಭಾರತದಲ್ಲಿ ಏಕರೂಪದ ಕಾನೂನು. ಮೋ ಟಾರು ವಾಹನ ಕಾಯಿದೆ ಎಲ್ಲರಿಗೂ ಅನ್ವಯ ವಾಗುವುದು. ಹೀಗೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇವುಗಳು ಜಾತಿ ಮತ ಭೇದವಿಲ್ಲದೆ ಲಗಾವು ಆಗುತ್ತವೆ. ಕಾನೂನಿನಲ್ಲಿ ಸ್ಪಷ್ಟತೆ ಮತ್ತು ಏಕತೆ ಇರುತ್ತದೆ. ಗೊಂದಲ ಇಲ್ಲ. ಗೋವಾ ರಾಜ್ಯದಲ್ಲಿ ನೋಡಿ. ಪೋರ್ಚುಗೀಸರು ಮಾಡಿದ ಏಕರೂಪದ ವಾರೀಸು ಕಾನೂನು, ವೈವಾಹಿಕ ಕಾನೂನು, ಉತ್ತರಾ ಧಿಕಾರಿಯ ನೇಮಕದ ಹಕ್ಕು ಇತ್ಯಾದಿ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಒಂದೇ ಆಗಿದೆ. ತಮ್ಮ ತಮ್ಮ ವೈಯಕ್ತಿಕ ವ್ಯವಹಾರವನ್ನು ಕಾನೂನಿನ ಗೊಂದಲ ವಿಲ್ಲದೆ ನೆರವೇರಿಸಬಹುದು.

ಸಮಾನ ನಾಗರಿಕ ಸಂಹಿತೆಯನ್ನು ಮಾಡಲು ಕಾನೂನಾತ್ಮಕ ಅಡ್ಡಿಗಳಿವೆಯೇ?
ಈಗ ಇರುವ ವಾರೀಸು ಮತ್ತು ವಿಭಾಗದ ಹಕ್ಕು ಗಳು, ಮದುವೆ ಮತ್ತು ವಿಚ್ಛೇದನಗಳ ಹಕ್ಕುಗಳು ಮತ್ತು ಅಪ್ರಾಪ್ತ ವಯಸ್ಕರ ಮತ್ತು ದತ್ತು ಸ್ವೀಕಾರದ ಕಾನೂನುಗಳು ವಿವಿಧತೆಯ ಪ್ರತೀಕವಾಗಿವೆ. ಇವುಗಳನ್ನು ಏಕರೂಪಕ್ಕೆ ತರಲು ಪ್ರಯತ್ನಿಸಿದಾಗ ಕೆಲವು ತೊಡರುಗಳು ಎದುರಾಗದೆ ಇರದು. ಉದಾ ಹರಣೆಗೆ, ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯ ಹಕ್ಕು ಮತ್ತು ಸ್ವಯಾರ್ಜಿತ ಆಸ್ತಿಯ ಹಕ್ಕು ಬೇರೆ ಬೇರೆ ಇದೆ. ಏಕರೂಪಕ್ಕೆ ತರಲು ಅವಿಭಕ್ತ ಕುಟುಂಬದ ಹಕ್ಕನ್ನು ಹೇಗೆ ಬದಲಾಯಿಸಬೇಕು ಎಂಬುದು ಒಂದು ಜಿಜ್ಞಾಸೆಯ ವಿಷಯ. 1976ರಲ್ಲಿ ಕೇರಳ ರಾಜ್ಯವು ಅನುಸರಿಸಿದ ಕ್ರಮವನ್ನು ಅಳವಡಿಸಬಹುದೇ ಎಂಬುದು ಗಮನಿಸಬಹುದಾಗಿದೆ. ಕಾನೂನು ಜಾರಿ ಆಗುವ ದಿನ ಕುಟುಂಬದಲ್ಲಿ ವಿಭಾಗವಾಗಿ ಆ ಕಾಲಕ್ಕೆ ಹಕ್ಕು ಳ್ಳವರು ತಮ್ಮ ತಮ್ಮ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂಬ ಕಲ್ಪನೆಯನ್ನು ಮಾಡಿ ಹಕ್ಕಿನ ಏಕತೆಯನ್ನು ರೂಪಿಸಬಹುದು. ಮುಂದೆ ವಾರಿಸು ಹಕ್ಕು ಮಾತ್ರ ಉಳಿಸ ಬಹುದು. ಗುಡ್ಡಗಾಡಿನ ಪರಿಶಿಷ್ಟ ಜನಾಂ ಗದವರ ಹಾಗೂ ಈಶಾನ್ಯ ರಾಜ್ಯಗಳ ಸಾಂಪ್ರದಾಯಕ ಹಕ್ಕು ಗಳನ್ನು ಏಕರೂಪಕ್ಕೆ ತರಲು ಯೋಗ್ಯ ಬದಲಾ ವಣೆಯನ್ನು ರೂಪಿಸಬಹುದು. ವಾರೀಸು ಹಕ್ಕಿನಂತೆ ವ್ಯಕ್ತಿಯ ಹೆಂಡತಿ, ಮಕ್ಕಳು ಸಮಾನ ಹಕ್ಕನ್ನು ಪಡೆ ಯಲು ಎಲ್ಲರಿಗೂ ಅನ್ವಯಿಸುವಂತೆ ಕಾನೂನು ಮಾ ಡಲು ಯಾವುದೇ ಆಕ್ಷೇಪ ಇರಲಿಕ್ಕಿಲ್ಲ. ಮುಸಲ್ಮಾನರ ಶರಿಯತ್‌ ಕಾನೂನಿನ ವಾರೀಸು ಹಕ್ಕು, ಪತ್ನಿ, ಮಗಳು, ಮಗ ಇವರೊಳಗೆ ಹಕ್ಕಿನ ವ್ಯತ್ಯಾಸವನ್ನು ಹೊಂದಿದೆ. ಕ್ರಿಶ್ಚಿಯನ್ನರಿಗೆ ಲಗಾವು ಆಗುವ 1925ರ ಇಂಡಿಯನ್‌ ಸಕ್ಸೆಶನ್‌ ಕಾನೂನು ತಿಳಿಸುವ ವಾರೀಸು ಹಕ್ಕಿನಲ್ಲಿ ಪತ್ನಿಗೆ ಮೂರನೇ ಒಂದು ಮತ್ತು ಉಳಿಕೆಯಲ್ಲಿ ಮಕ್ಕಳಿಗೆ ಸಮಾನ ಎಂಬುದಾಗಿದೆ. ಮುಸಲ್ಮಾನರ ಮತ್ತು ಕ್ರಿಶ್ಚಿಯನ್ನರ ಎಲ್ಲ ವಾರೀಸುದಾರರಿಗೂ ಅಂದರೆ ಹೆಂಡತಿ, ಮಕ್ಕಳಿಗೆ ಸಮಾನ ಹಕ್ಕು ಸಿಗುವಂತೆ ಮಾಡಲು ಧಾರ್ಮಿಕತೆಯ ಯಾವುದೇ ಅಡ್ಡಿ ಇಲ್ಲವಲ್ಲ. ಮಕ್ಕಳಿಲ್ಲ ದವರಿಗೆ ದತ್ತು ಪಡೆಯಲು ಕಾನೂನು ಮಾಡಿದರೆ ಎಲ್ಲ ಮತದವರಿಗೂ ಅನುಕೂಲವಲ್ಲವೆ? ಇದರಲ್ಲಿ ಧರ್ಮಾ ಚರಣೆಯ ಪಾತ್ರವಿಲ್ಲ. ಮನಸ್ಸಿದ್ದರೆ ಮಾರ್ಗವಿದೆ.

ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಸಂವಿಧಾನದ ಆಶಯವನ್ನು ಕಾರ್ಯಗತಗೊಳಿಸಲು ಸರಕಾರಗಳು ಔದಾಸೀನ್ಯವನ್ನು ತಾಳಿದುದನ್ನು ಸುಪ್ರೀಂ ಕೋರ್ಟ್‌ ಹಲವು ಬಾರಿ ಎಚ್ಚರಿಸಿದೆ. ಯಾವುದೇ ಬದಲಾವಣೆಯು ಆರಂಭದಲ್ಲಿ ಅಸಮಾ ಧಾನವನ್ನು ಒಡ್ಡಿದರೂ ಕ್ರಮೇಣ ಒಗ್ಗಿ ಹೋದಾಗ ಒಪ್ಪಿಗೆಯಾಗುವುದು ಸಹಜ. ಆಗ ಇಡೀ ದೇಶದಲ್ಲಿ ಸಮಾನ ಸಂಹಿತೆಯಿರುವುದು ಮುಂದಿನ ಪೀಳಿಗೆಗೆ ಅನುಕೂಲವಾಗದೆ ಇರದು. ಭವಿಷ್ಯವನ್ನು ಕಾಲವೇ ನಿರ್ಧರಿಸಲಿದೆ.

-ಯಂ. ವಿ. ಶಂಕರ ಭಟ್‌, ಮಂಗಳೂರು

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.