ಸತ್ಯದ ಮೇಲೆ ಫೇಕ್‌ ನ್ಯೂಸ್‌ಗಳ ದಾಳಿ: ನೆಹರೂ ಬಗ್ಗೆ ನೂರಾರು ಕಟ್ಟುಕತೆ


Team Udayavani, Aug 2, 2017, 7:31 AM IST

02-ANKAKA-3.jpg

ನೆಹರೂ ಈ ಜಗತ್ತಿನಲ್ಲಂತೂ ಈಗ ಇಲ್ಲ. ಹೀಗಾಗಿ, 2019ರಲ್ಲಿ ಅವರು ಪ್ರಧಾನಿ ಹುದ್ದೆಗೆ ಆಕಾಂಕ್ಷಿ ಆಗುವ ಸಾಧ್ಯತೆಯೂ ಇಲ್ಲ. ಆದರೂ ಒಂದು ರಾಜಕೀಯ ತಂತ್ರವೇಕೆ ಅವರ ಹೆಸರು ಕೆಡಿಸುತ್ತಲೇ ಹೊರಟಿದೆ? ನೆಹರೂ ಬಗ್ಗೆ ಜನರಿಗೆ ಜಿಗುಪ್ಸೆ ಹುಟ್ಟಿಸುವ ಪ್ರಯತ್ನ ಮಾಡುತ್ತಲೇ ಇದೆ? ಆ ವ್ಯಕ್ತಿಯನ್ನು ಕಾಶ್ಮೀರಿ ಬ್ರಾಹ್ಮಣನ ಬದಲಾಗಿ ಮುಸಲ್ಮಾನರನ್ನಾಗಿಸಲಾಯಿತು. ವ್ಯಭಿಚಾರಿ ಎನ್ನಲಾಯಿತು… ಒಂದು ವೀಡಿಯೋ ಅಂತೂ “ನೆಹರೂ ಏಡ್ಸ್‌ನಿಂದ ಸಾವನ್ನಪ್ಪಿದರು’ ಎನ್ನುತ್ತದೆ!  

ಸುದ್ದಿಯೊಂದು ನಮಗೆದುರಾದಾಗ ಅದು ಸತ್ಯವೋ ಸುಳ್ಳೋ ಎಂದು ಪತ್ತೆಹಚ್ಚುವುದು ಹೇಗೆ? ಇದೊಂದು ಸವಾಲಿನ ಸಂಗತಿಯೇ ಸರಿ. ಈಗಂತೂ ರಾಜಕೀಯ ವಿಚಾರಧಾರೆಯಿಂದ ಪ್ರಭಾವಿತವಾದ ಅನೇಕ ವೆಬ್‌ಸೈಟ್‌ಗಳು ಅಸ್ತಿತ್ವದಲ್ಲಿವೆ. ಈ ವೆಬ್‌ಸೈಟ್‌ಗಳು “ಮಾಧ್ಯಮ ಮನೆ’ಯ ವೇಷ ಧರಿಸಿ ನಿಮ್ಮನ್ನು ವಂಚಿಸುತ್ತಿವೆ. ಅವುಗಳ ಹೆಸರು ಕೇಳಿದಾಕ್ಷಣ ಅದು ನಿಜಕ್ಕೂ ಯಾವುದೋ ಅಧಿಕೃತ ಸುದ್ದಿ ಮಾಧ್ಯಮವೇ ಇರಬೇಕೆಂದು ನೀವು ಭಾವಿಸಿಬಿಡುತ್ತೀರಿ. 

ಸಮಸ್ಯೆಯೇನೆಂದರೆ ಸುಳ್ಳು ಎಷ್ಟು ವೇಗವಾಗಿ ಹರಡಿಬಿಡುತ್ತದೆಂದರೆ, ಸತ್ಯದಿಂದ ಅದನ್ನು ಅಳಿಸಿಹಾಕಲು ಸಾಧ್ಯವೇ ಆಗುವುದಿಲ್ಲ. ಮುಖ್ಯವಾಗಿ ಇಂದು ಸುಳ್ಳು ಸುದ್ದಿಗಳು ಲೋಕತಂತ್ರ ಪ್ರಕ್ರಿಯೆಯನ್ನು ಪ್ರಭಾವಿಸಲು ಆರಂಭಿಸಿವೆ. ಇವುಗಳ ಮೂಲಕ ಒಂದೆಡೆ ಕೋಮು ದ್ವೇಷ ಹರಡಲಾಗುತ್ತಿದೆ, ಇನ್ನೊಂದೆಡೆ ನಾಯಕರಿಗೆ ಕೆಟ್ಟ ಹೆಸರು ತರುವ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ಒಂದು ಮಾಹಿತಿಯನ್ನು “ಸುದ್ದಿ’ಯ ವೇಷದಲ್ಲಿ ಹರಿಬಿಡಲಾಗುತ್ತದೆ. ಹಲವಾರು ತಿಂಗಳು ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ ನಂತರ, ಇದೇ ಮಾಹಿತಿಗೆ “ಜೋಕು’ ಎಂಬ ರೂಪಕೊಟ್ಟು ನಿರಂತರವಾಗಿ ನಿಮ್ಮ ಕಣ್ಣಿಗೆ ಬೀಳುವಂತೆ ಮಾಡಲಾಗುತ್ತದೆ. 

15 ಮೇ 2016ರಂದು “ಟೈಮ್ಸ್‌ ಆಫ್ ಇಂಡಿಯಾ’ ಪತ್ರಿಕೆಯ ಅಮೂಲ್ಯಾ ಗೋಪಾಲಕೃಷ್ಣನ್‌ ಅವರು ನೆಹರೂ ಕುರಿತು ಹರಡಲಾಗುತ್ತಿರುವ ಸುಳ್ಳು ಮಾಹಿತಿಯ ಮೇಲೆ ಬೆಳಕು ಚೆಲ್ಲುವ ವರದಿ ಪ್ರಕಟಿಸಿದ್ದರು. (ಅಂದರೆ ನೆಹರೂ ಕೂಡ ಫೇಕ್‌ ನ್ಯೂಸ್‌ ಹರಡುವವರಿಂದ ತಪ್ಪಿಸಿಕೊಂಡಿಲ್ಲ ಎಂದಂತಾಯಿತು). 

ನೆಹರೂ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಯೊಂದು ಹೀಗಿದೆ: “”ಜವಾಹರ್‌ ಎಂಬುದು ಅರಬ್ಬಿ ಪದ, ಹೀಗಿದ್ದಾಗ ಕಾಶ್ಮೀರ ಬ್ರಾಹ್ಮಣನೊಬ್ಬ ತನ್ನ ಮಗನಿಗೆ ಅರಬ್ಬಿ ಹೆಸರನ್ನು ಹೇಗಿಡಬಲ್ಲ? ನೆಹರೂ ಅವರ ತಾತನ ಹೆಸರು ಗಿಯಾಜುದ್ದೀನ್‌ ಗಾಜಿ. ಈ ಗಿಯಾಜುದ್ದೀನ್‌ ಮುಘಲರ ಕೋತವಾಲರಾಗಿದ್ದರು. ಮುಂದೆ ಅವರು ತಮ್ಮ ಹೆಸರನ್ನು ಗಂಗಾಧರ ನೆಹರೂ ಅಂತ ಬದಲಿಸಿಕೊಂಡುಬಿಟ್ಟರು. ಜವಾಹರ್‌ಲಾಲ್‌ ನೆಹರೂ ಹುಟ್ಟಿದ್ದು ಇಲಾಹಾಬಾದ್‌ನ ಸೂಳೆಗೇರಿಯೊಂದರಲ್ಲಿ. ನೆಹರೂ ಒಮ್ಮೆ ಕ್ಯಾಥೋಲಿಕ್‌ “ನನ್‌’ರನ್ನು ಗರ್ಭವತಿ ಮಾಡಿಬಿಟ್ಟರು. ಕೂಡಲೇ ಚರ್ಚ್‌ ಆ “ನನ್‌’ರನ್ನು ಭಾರತದಿಂದ ಹೊರಗೆ ಕಳುಹಿಸಿಬಿಟ್ಟಿತು. ಈ ಕಾರಣಕ್ಕಾಗಿ ನೆಹರೂ ಆ ಚರ್ಚ್‌ಗೆ ಜೀವನಪರ್ಯಂತ ಆಭಾರಿಯಾಗಿದ್ದರು”

ಮೊದಲು ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ನೆಹರೂಗೆ ಸಂಬಂಧಿಸಿದ ಇಂಥ ಸುಳ್ಳು ಮಾಹಿತಿಯನ್ನು ನೀವು ಇಂಟರ್ನೆಟ್‌ ಅಥವಾ ವಾಟ್ಸಾಪ್‌ನಲ್ಲಿ ಗಮನಿಸಿದ್ದೀರಾ? ಹಾಗೆ ನೋಡಿದರೆ ದೇಶದಲ್ಲೀಗ 16ನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಆಡಳಿತ ನ‚ಡೆಯುತ್ತಿದೆ. ಇಂಥ ವೇಳೆಯಲ್ಲಿ ಹಿಂದಿನ ಪ್ರಧಾನಿಗಳ ವಂಶಾವಳಿಯನ್ನು ತಿರುಚುವುದಕ್ಕೆ ಅಥವಾ ಅವರನ್ನು ಮುಘಲ್‌ ವಂಶಸ್ಥರು ಎಂದು ಕರೆಯುವುದಕ್ಕೆ ಯಾರಿಗೆ ಆಸಕ್ತಿಯಿರಬಹುದು? ನೆಹರೂ ಕುರಿತು ಈ ರೀತಿಯ ಮಾತುಗಳನ್ನು ಹರಡುವ ವಿಚಾರದಲ್ಲಿ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡುತ್ತಿದೆ. ಯೂ ಟ್ಯೂಬ್‌ನಲ್ಲೂ ನೆಹರೂ ಕುರಿತ ಅನೇಕ ಕಟ್ಟುಕಥೆಗಳನ್ನು ನೋಡಬಹುದು. ಒಂದು ವೀಡಿಯೋ ಇದೆ, ಅದರ ಶೀರ್ಷಿಕೆ: “”ಜಗತ್ತಿನ ಅತ್ಯಂತ ವ್ಯಭಿಚಾರಿ ವ್ಯಕ್ತಿ”! ಈ ವೀಡಿಯೋವನ್ನು 40 ಲಕ್ಷ ಜನರು ನೋಡಿದ್ದಾರೆ. ಇದರ ಉದ್ದೇಶವಿಷ್ಟೆ. ನೆಹರೂ ಹೆಸರು ಕೆಡಿಸುವುದು. 

ನೆಹರೂ ಈ ಜಗತ್ತಿನಲ್ಲಂತೂ ಈಗ ಇಲ್ಲ. ಹೀಗಾಗಿ, 2019ರಲ್ಲಿ ಅವರು ಪ್ರಧಾನಿ ಹುದ್ದೆಗೆ ಆಕಾಂಕ್ಷಿ ಆಗುವ ಸಾಧ್ಯತೆಯೂ ಇಲ್ಲ. ಆದರೂ ಒಂದು ರಾಜಕೀಯ ತಂತ್ರವೇಕೆ ಅವರ ಹೆಸರು ಕೆಡಿಸುತ್ತಲೇ ಹೊರಟಿದೆ? ನೆಹರೂ ಬಗ್ಗೆ ಜನರಿಗೆ ಜಿಗುಪ್ಸೆ ಹುಟ್ಟಿಸುವ ಪ್ರಯತ್ನ ಮಾಡುತ್ತಲೇ ಇದೆ? ಆ ವ್ಯಕ್ತಿಯನ್ನು ಕಾಶ್ಮೀರಿ ಬ್ರಾಹ್ಮಣನ ಬದಲಾಗಿ ಮುಸಲ್ಮಾನನನ್ನಾಗಿಸಲಾಗುತ್ತಿದೆ. ವ್ಯಭಿಚಾರಿ ಎನ್ನಲಾಗುತ್ತಿದೆ… ಒಂದು ವೀಡಿಯೋ ಅಂತೂ “ನೆಹರೂ ಏಡ್ಸ್‌ ನಿಂದ ಸಾವನ್ನಪ್ಪಿದರು’ ಎನ್ನುತ್ತದೆ! ಫೋಟೋಶಾಪ್‌ ತಂತ್ರಜ್ಞಾನದ ಮೂಲಕ ಜಾಕ್ಲಿನ್‌ ಕೆನಡಿ ಮತ್ತು ಮೃಣಾಲಿನಿ ಸಾರಾಭಾಯಿ ಅವರ ನಡುವೆ ನೆಹರೂರನ್ನು ನಿಲ್ಲಿಸಿ. “ನೋಡಿ ಈ ವ್ಯಕ್ತಿ ಕಚ್ಚೆಹರುಕ’ ಎನ್ನಲಾಯಿತು. 

ವಿಕೀಪೀಡಿಯಾದಲ್ಲೂ ನೆಹರೂ ಮತ್ತು ಅವರ ತಂದೆ ಮೋತೀಲಾಲ್‌ ನೆಹರೂ ಬಗ್ಗೆ ಮಾಹಿತಿಯನ್ನು ಬದಲಿಸಲಾಯಿತು. ಈ ಬಗ್ಗೆ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯು ಸೆಂಟರ್‌ ಫಾರ್‌ ಇಂಟರ್ನೆಟ್‌ ಸೊಸೈಟಿಯ ಪ್ರಾಣೇಶ್‌ ಪ್ರಕಾಶ್‌ ಜೊತೆ ಸೇರಿ ವರದಿ ಪ್ರಕಟಿಸಿತ್ತು. “ಸರ್ಕಾರದ ಐಪಿ ಅಡ್ರೆಸ್‌ನಿಂದಲೇ ನೆಹರೂ ಕುರಿತು ವಿಕೀಪೀಡಿಯಾದಲ್ಲಿ ಮಾಹಿತಿ ಬದಲಿಸಲಾಗಿದೆ’ ಎನ್ನುತ್ತಿದೆ ಈ ವರದಿ. 

ಇನ್ನು 24 ಜನವರಿ 2016ರಲ್ಲಿ ಸ್ಕೂಲ್ ಜಾಲತಾಣದಲ್ಲೂ ನೇತಾಜಿ ಕುರಿತ ಸುಳ್ಳು ಸುದ್ದಿಯೊಂದರ ಬಗ್ಗೆ ವರದಿ ಬಂದಿತ್ತು. ಕೇಂದ್ರ ಸರ್ಕಾರ ನೇತಾಜಿ ಬಗೆಗಿನ ಕಡತಗಳನ್ನು ಸಾರ್ವಜನಿಕಗೊಳಿಸಿತಲ್ಲ, ಆಗ ಅವುಗಳಲ್ಲಿ ನೆಹರೂ ಅವರು ನೇತಾಜಿ ಕುರಿತು ಬರೆದ ಪತ್ರವೊಂದು ಸಿಕ್ಕಿದೆ 
ಎನ್ನುವ ಸುದ್ದಿ ಶುರುವಾಯಿತು. ಈ ಪತ್ರ ವಾಟ್ಸ್‌ ಆ್ಯಪ್‌, ಟ್ವಿಟರ್‌ನಲ್ಲೂ ಹರಿದಾಡಲಾರಂಭಿಸಿತು. ಆದರೆ ಇದು ಸುಳ್ಳು ಸುದ್ದಿ, ನೆಹರೂ ಇಂಥ ಪತ್ರ ಬರೆದೇ ಇಲ್ಲ ಎಂದು ನಂತರ ತಿಳಿಯಿತು. ಅಷ್ಟರಲ್ಲೇ ಅನೇಕ ಪತ್ರಕರ್ತರು ಈ ನಕಲಿ ಪತ್ರವನ್ನೇ ಅಸಲಿ ಎಂದು ಭಾವಿಸಿ ಫೇಕ್‌ನ್ಯೂಸ್‌ನ ಬಲೆಗೆ ಬಿದ್ದಾಗಿತ್ತು. ನಂತರ ಅವರು ತಮ್ಮ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿ ಕ್ಷಮೆ ಕೇಳಿದರು. 

ಈ ಫೇಕ್‌ ನ್ಯೂಸ್‌ಗೆ ಇನ್ನೊಂದು ಗುಣವೂ ಇದೆ. ಅದು ಈಗಿನ ಕಾಲದಲ್ಲಿ ಸುಳ್ಳುಗಳನ್ನು ಹರಡುತ್ತದೆ ಮತ್ತು ಇತಿಹಾಸದ ಸತ್ಯವನ್ನೂ ಸುಳ್ಳಾಗಿಸಿಬಿಡುತ್ತದೆ. ಇದರಿಂದ ಏನಾಗುತ್ತದೋ ಯೋಚಿಸಿ. ಇತ್ತ ನಿಮಗೆ ವರ್ತಮಾನದ ಬಗ್ಗೆಯೂ ಸರಿಯಾದ ಮಾಹಿತಿಯಿರುವುದಿಲ್ಲ, ಅತ್ತ ಇತಿಹಾಸದ ಬಗ್ಗೆಯೂ ಸರಿಯಾಗಿ ತಿಳಿಯುವುದಿಲ್ಲ.  ನಿಮ್ಮ ಮಕ್ಕಳು ಸ್ಕೂಲ್‌ ಅಥವಾ ಕಾಲೇಜಿನ  ಪ್ರಾಜೆಕ್ಟ್ ಒಂದಕ್ಕಾಗಿ ನೆಹರೂ ಕುರಿತು ಅಂತರ್ಜಾಲದಿಂದ ಮಾಹಿತಿ ಡೌನ್‌ಲೋಡ್‌ ಮಾಡಿದರೆಂದುಕೊಳ್ಳಿ.  ಆಗ ತಪ್ಪು ಮಾಹಿತಿಯೇ ಬರುವ ಸಾಧ್ಯತೆ ಹೆಚ್ಚು. ಒಂದು ವೇಳೆ ರಾಜಕೀಯ ಪ್ರೇರಿತ ಶಿಕ್ಷಕನೊಬ್ಬ ಈ ತಪ್ಪು ಮಾಹಿತಿಯನ್ನೇ ಇಷ್ಟ ಪಟ್ಟು ಹೆಚ್ಚು ನಂಬರ್‌ ಕೊಟ್ಟುಬಿಟ್ಟನೆಂದರೆ, ನಿಮ್ಮ ಮಕ್ಕಳು ಜೀವನಪರ್ಯಂತ ಸುಳ್ಳನ್ನೇ ಸತ್ಯವೆಂದು ಭಾವಿಸುತ್ತಾ ಬದುಕಿಬಿಡುತ್ತಾರೆ.  ಇಂದು ಫೇಕ್‌ ನ್ಯೂಸ್‌ ಮತ್ತು ಫೇಕ್‌ ವೀಡಿಯೋಗಳಿಂದಾಗಿ ಅನೇಕ ಭಾಗಗಳಲ್ಲಿ ಕೋಮು ಹಿಂಸೆಗಳಾಗುತ್ತಿವೆ, ಹತ್ಯೆಗಳು ನಡೆಯುತ್ತಿವೆ ಮತ್ತು ಆಸ್ತಿಪಾಸ್ತಿಯ ನಷ್ಟವಾಗುತ್ತಿದೆ.  ಈ ಸುಳ್ಳು ಸುದ್ದಿಗಳ ಹಾವಳಿ ಎಷ್ಟಿದೆಯೆಂದರೆ ಪ್ರಪಂಚದ ಅತಿ ಕ್ರೂರ ಇತಿಹಾಸವನ್ನೂ ಅಳಿಸಿಹಾಕುವ ಪ್ರಯತ್ನ ಮಾಡಲಾಗುತ್ತಿದೆ!

ಪ್ರಧಾನಿ ನರೇಂದ್ರ ಮೋದಿ ತಮ್ಮ ಇಸ್ರೇಲ್‌ ಪ್ರವಾಸದ ವೇಳೆ ಹೋಲೋಕಾಸ್ಟ್‌(ನಾಜಿಗಳು ನಡೆಸಿದ ಹತ್ಯಾಕಾಂಡ) ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದು ನಿಮಗೆ ನೆನಪಿರಬಹುದು. ಅಲ್ಲಿ ಅವರು ಇತಿಹಾಸವನ್ನು ಕ್ರೂರತಮ ಅಧ್ಯಾಯವೆಂದು ಕರೆದಿದ್ದರು. ಆದರೆ ಜಗತ್ತಿನಲ್ಲಿಂದು ಕೆಲವರು ನಾಜಿ ದೌರ್ಜನ್ಯದ ಕ್ರೂರ ಇತಿಹಾಸವನ್ನು ಅಳಿಸಿಹಾಕುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಗಾರ್ಡಿಯನ್‌ ಪತ್ರಿಕೆಯ ಕೆರೋಲ್‌ ಕ್ಯಾಡ್‌ವಾಲ್ಕರ್‌ ಒಂದು ವರದಿ ಪ್ರಕಟಿಸಿದ್ದರು. ಗೂಗಲ್‌ನಲ್ಲಿ “”Did the Holocaust really happen? “(ನಿಜಕ್ಕೂ ಹತ್ಯಾಕಾಂಡ ನಡೆಯಿತೇ?’) ಎಂದು ಸರ್ಚ್‌ ಮಾಡಿದರೆ, “ಹತ್ಯಾಕಾಂಡ ನಡೆದೇ ಇಲ್ಲ’ ಎಂಬ ಉತ್ತರ ಅವರಿಗೆ ಎದುರಾಯಿತು. ಹೀಗೆ ಉತ್ತರಿಸಿದ ಲಿಂಕ್‌ನ ಮೇಲೆ ಕ್ಲಿಕ್‌ ಮಾಡಿದಾಗ “ಸ್ಟಾರ್ಮ್ ಫ್ರಂಟ್‌’ ಎಂಬ ನವನಾಜಿ ವೆಬ್‌ಸೈಟ್‌ ತೆರೆದುಕೊಂಡಿತು. “ನಾಜಿಗಳು ಹತ್ಯಾಕಾಂಡ ನಡೆಸಲೇ ಇಲ್ಲ ಎನ್ನುವುದಕ್ಕೆ ಹತ್ತು ಕಾರಣಗಳು’ ಎಂದು ಆ ವೆಬ್‌ಸೈಟ್‌ನಲ್ಲಿ ಬರೆಯಲಾಗಿತ್ತು. ಈ ವಿಷಯವನ್ನು ವಿಸ್ತೃತವಾಗಿ 2016ರ ಡಿಸೆಂಬರ್‌ 11ರಂದು ಕೆರೋಲ್‌ ಗಾರ್ಡಿಯನ್‌ ಪತ್ರಿಕೆಯಲ್ಲಿ ಪ್ರಕಟಿಸಿದರು. ಅಲ್ಲದೇ ಯೂ ಟ್ಯೂಬ್‌ನಲ್ಲೂ ನಾಜಿಗಳ ಕ್ರೌರ್ಯವನ್ನು ಮುಚ್ಚಿಡುವ ಅನೇಕ ವೀಡಿಯೋಗಳು ಇರುವುದನ್ನೂ ಅವರು 
ಉಲ್ಲೇಖೀಸಿದರು. ಅಡಾಲ್ಫ್ ಹಿಟ್ಲರ್‌60 ಲಕ್ಷ ಜನರನ್ನು ಕೊಲ್ಲಿಸಿದ ಎನ್ನುವ ಸಂಗತಿ ಐತಿಹಾಸಿಕ ದಸ್ತಾವೇಜುಗಳಲ್ಲಿ ಮತ್ತು ಪುಸ್ತಕಗಳಲ್ಲಿ ದಾಖಲಾಗಿದೆ. ಹೀಗಿರುವಾಗ ಹತ್ಯಾಕಾಂಡ ನಡೆಯಿತೇ ಎಂಬ ಪ್ರಶ್ನೆ ಎದುರಿಟ್ಟಾಗ ಗೂಗಲ್‌ನಲ್ಲಿ ಫೇಕ್‌ ಸುದ್ದಿಗಳೇ ಏಕೆ ತೆರೆದುಕೊಳ್ಳುತ್ತವೆ ಎಂದು ಪ್ರಶ್ನಿಸಿದರು ಕೆರೋಲ್‌. ಅವರು ಈ ಪ್ರಶ್ನೆ ಎತ್ತುತ್ತಿದ್ದಂತೆಯೇ ಗೂಗಲ್‌ ತಪ್ಪನ್ನು ಸರಿಪಡಿಸಿ, ಸರ್ಚ್‌ ರಿಸಲ್ಟ್‌ಗಳನ್ನು ಬದಲಿಸಿತು. 

ದುರಂತವೆಂದರೆ, ಇಂದು ನಿಮ್ಮತ್ತ ನಿರಂತರವಾಗಿ ಫೇಕ್‌ನ್ಯೂಸ್‌ ಅನ್ನು ತೂರಿಬಿಡಲಾಗುತ್ತಿದೆ. ಇಂದು ಲಕ್ಷಾಂತರ ಜನರು ಸುಳ್ಳು ಸುದ್ದಿಗಳನ್ನು, ಸುಳ್ಳು ಇತಿಹಾಸವನ್ನು ಶೇರ್‌ ಮಾಡಲಾರಂಭಿಸಿದ್ದಾರೆ. ಒಂದು ವೇಳೆ ನೀವೂ  ನೆಹರೂ ಅಥವಾ ಹೋಲೋಕಾಸ್ಟ್‌ ಬಗ್ಗೆ ಫೇಕ್‌ನ್ಯೂಸ್‌ 
ಓದಿದ್ದೀರಿ ಎಂದರೆ, ನಾಳೆ ನಿಮ್ಮ ಮಗನೂ ಇದೇ ಸುದ್ದಿ ಓದಿ, ನಿಮ್ಮ ಮುಂದೆ ಬಂದು ಪಾಠ ಒಪ್ಪಿಸಿದರೆ “ವಾಹ್‌ ನಮ್ಮ ಮಗ ಎಷ್ಟು ಬುದ್ಧಿವಂತ, 
ಅವನಿಗೆ ಎಷ್ಟು ಇತಿಹಾಸ ಪ್ರಜ್ಞೆಯಿದೆ’ ಎಂದು ಖುಷಿಪಡುತ್ತೀರಿ!  ಸುಮ್ಮನೇ ಯೋಚಿಸಿ ನೋಡಿ. ಅಂತರ್ಜಾಲದಲ್ಲಿ ಈ ರೀತಿ ಎಷ್ಟೊಂದು ಫೇಕ್‌  ನ್ಯೂಸ್‌ಗಳು ಹರಿದಾಡುತ್ತಿವೆಯೋ?  ಐತಿಹಾಸಿಕ ಸತ್ಯಗಳನ್ನು ತಿರುಚಿ ಮಿಥ್ಯೆಗಳನ್ನೇ ಹರಡಲಾಗುತ್ತಿದೆಯೋ? 

(ಎನ್‌ಡಿಟಿವಿ ಜಾಲತಾಣದಲ್ಲಿ ಪ್ರಕಟಿತ  ಲೇಖನದ ಆಯ್ದ ಭಾಗ)

ರವೀಶ್‌ ಕುಮಾರ್‌, ಟಿ.ವಿ. ಪತ್ರಕರ್ತ

ಟಾಪ್ ನ್ಯೂಸ್

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವುMadikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.