ನೆಹರೂ ಮತ್ತು ಮಕ್ಕಳ ದಿನಾಚರಣೆಯ ಸುಳ್ಳು ಕಥೆ


Team Udayavani, Nov 20, 2018, 6:00 AM IST

jawaharlal-nehru-aaa.jpg

ಪ್ರತಿ ವರ್ಷ ಭಾರತದಲ್ಲಿ ನವೆಂಬರ್‌ 14ರಂದು ಜವಾಹರ್‌ಲಾಲ್‌ ನೆಹರೂ ಅವರಿಗೆ ಗೌರವಾರ್ಥವಾಗಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದೇ ಭಾವಿಸಲಾಗಿದೆ. ನೆಹರೂ ಅವರಿಗೆ ಮಕ್ಕಳ ಮೇಲೆ ಪ್ರೀತಿಯಿತ್ತು. ಹೀಗಾಗಿ ಅವರು ಕಾಲವಾದ ನಂತರ ಅವರ ಜನ್ಮದಿನವನ್ನು “ಮಕ್ಕಳ ದಿನಾಚರಣೆ’ ಎಂದು ಘೋಷಿಸಲಾಯಿತು ಎನ್ನುವುದೇ ಜನಪ್ರಿಯ ವ್ಯಾಖ್ಯಾನವಾಗಿದೆ. 

ಈ ಕಥೆಯಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎನ್ನುವುದನ್ನೂ ನೋಡದೇ ಅನೇಕ ಮಾಧ್ಯಮಗಳು ಈ ಕಥೆಯನ್ನು ಪುನರು ಚ್ಚರಿಸುತ್ತಲೇ ಇರುತ್ತವೆ. ನೆಹರೂರವರ ಜನ್ಮವಾರ್ಷಿಕೋತ್ಸವ ಮತ್ತು “ಮಕ್ಕಳ ದಿನಾಚರಣೆ’ಯಂದು, ಅನೇಕ ಮಾಧ್ಯಮ ಮನೆಗಳು ಕಿರಿಕಿರಿಯಾಗುವ ಮಟ್ಟಕ್ಕೆ ಈ ಸುಳ್ಳನ್ನು ಪುನರಾವರ್ತಿಸುತ್ತಲೇ ಇರುತ್ತವೆ. 

ಎನ್‌ಡಿಟಿವಿ ಜಾಲತಾಣ ಇತ್ತೀಚೆಗೆ ಒಂದು ಲೇಖನ ಪ್ರಕಟಿಸಿತ್ತು. ಲೇಖನದ ಶೀರ್ಷಿಕೆ: “ಅದೇಕೆ ನವೆಂಬರ್‌ 14ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ?’ ಎನ್ನುವುದಾಗಿತ್ತು. ಈ ಲೇಖನದ ಬ್ಲಿರ್ಬ್ನಲ್ಲಿ “1964ರಲ್ಲಿ ಪಂಡಿತ್‌ ನೆಹರೂ ನಿಧನರಾ ಗುವುದಕ್ಕೂ ಮುನ್ನ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್‌ 20ರಂದು ಆಚರಿಸಲಾಗುತ್ತಿತ್ತು. ನವೆಂಬರ್‌ 20ನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆಯೆಂದು ಘೋಷಿಸಿತ್ತು.’ ಎನ್ನಲಾಗಿದೆ. ಮುಂದುವರಿದು, “ಆದರೆ ಪಂಡಿತ್‌ ನೆಹರೂ 1964ರಲ್ಲಿ ನಿಧನರಾದ ನಂತರ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಸರ್ವಾನುಮತದಿಂದ ನಿರ್ಧರಿಸಲಾಯಿತು. ಇದಕ್ಕೆ ಕಾರಣ ನೆಹರೂ ಅವರಿಗೆ ಮಕ್ಕಳೆಡೆಗೆ ಇದ್ದ ಪ್ರೀತಿ ಮತ್ತು ಮಮತೆ’ ಎಂದೂ ಹೇಳಲಾಗಿದೆ. ಅಷ್ಟಕ್ಕೇ ನಿಲ್ಲದೇ ಈ ಲೇಖನದಲ್ಲಿ ಮತ್ತಷ್ಟು ಕಂತೆಪುರಾಣಗಳನ್ನು ಉದುರಿಸಲಾಗಿದೆ. 

ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಮಕ್ಕಳ ದಿನಾಚರಣೆಯ ಕುರಿತ ಲೇಖನದಲ್ಲೂ ಕೂಡ “ವಿಶ್ವಸಂಸ್ಥೆ ಮಕ್ಕಳ ದಿನಾಚರಣೆಯನ್ನು ನವೆಂಬರ್‌ 20ರಂದು ಘೋಷಿಸಿತ್ತು. ಆದರೆ ಪಂಡಿತ್‌ ನೆಹರೂರ ನಿಧನಾನಂತರ ಅವರ ಹುಟ್ಟುಹಬ್ಬದ ದಿನವನ್ನೇ ಮಕ್ಕಳ ದಿನಾಚರಣೆಯೆಂದು ಘೋಷಿಸಲಾಯಿತು’ ಎಂದು ಹೇಳಲಾಗಿದೆ. 

ಈ ವರ್ಷವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಟೈಮ್ಸ್‌ನೌ ಚಾನೆಲ್‌ ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಲೇಖನ ಕೂಡ ಇದೇ ಸುಳ್ಳನ್ನೇ ಪುನರಾವರ್ತಿಸುತ್ತದೆ. ಇದೇ ಕಥೆಯನ್ನೇ ಒತ್ತಿ ಹೇಳುವ ಲೇಖನವನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಕೂಡ ಪ್ರಕಟಿಸಿದೆ. 

ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಿತ ಲೇಖನದಲ್ಲಿ, “1964ರಲ್ಲಿ ನೆಹರೂರ ನಿಧನವಾದ ನಂತರದಿಂದಲೇ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್‌ 14ರಿಂದ ಆಚರಿಸುತ್ತಾ ಬರಲಾಗಿದೆ.  ಇದಕ್ಕೂ ಮುನ್ನ ಉಳಿದೆಲ್ಲ ರಾಷ್ಟ್ರಗಳಂತೆ ಭಾರತದಲ್ಲೂ ನವೆಂಬರ್‌ 20ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು.’ ಎನ್ನಲಾಗಿದೆ. 

ಆದರೆ, ನೆಹರೂರ ನಿಧನಾ ನಂತರ ಸರ್ವಾನುಮತದಿಂದ ನವೆಂಬರ್‌ 14ನ್ನು ಮಕ್ಕಳ ದಿನವೆಂದು ನಿರ್ಧರಿಸಲಾಯಿತು ಎನ್ನುವ ವಾದವೇ ಅಕ್ಷರಶಃ ಸುಳ್ಳು. ಮಕ್ಕಳ ದಿನಾಚರಣೆಯ ನಿಜ ಕಥೆಯೇ ಬೇರೆಯಿದೆ. ಈ ಕಥೆ ಹೋಗಿ ನಿಲ್ಲುವುದು 1951ಕ್ಕೆ. ಆಗ, ವಿಎಂ ಕುಲಕರ್ಣಿ ಎನ್ನುವವರು ವಿಶ್ವಸಂಸ್ಥೆಯ ಸಾಮಾಜಕಲ್ಯಾಣ ವಿಭಾಗದ ಸದಸ್ಯರಾಗಿದ್ದರು. ಯುನೈಟೆಡ್‌ ಕಿಂಗ್ಡಂನಲ್ಲಿ ಅಪರಾಧದಿಂದ ಸಂತ್ರಸ್ತರಾಗಿರುವ ಮಕ್ಕಳ ಪುನರ್ವಸತಿಯ ಕುರಿತು ಅವರು ಅಧ್ಯಯನ ನಡೆಸಿದ್ದರು. ಭಾರತದಲ್ಲಿನ ಬಡಮಕ್ಕಳ ವಿಷಯದಲ್ಲಿ ಇಂಥ ಯಾವುದೇ ವ್ಯವಸ್ಥೆಯೂ ಇಲ್ಲ ಎನ್ನುವುದು ಅವರಿಗೆ ಅರಿವಾಯಿತು. 

ಆಗ ಇಂಗ್ಲೆಂಡಿನಲ್ಲಿ ಬ್ರಿಟನ್‌ ರಾಣಿ ಎರಡನೇ ಎಲಿಜಬತ್‌ರ ಜನ್ಮದಿನವಾದ  ಜೂನ್‌ 19ನ್ನು “ಧ್ವಜ ದಿನಾಚರಣೆ’ ಎಂದು ಆಚರಿಸಿ, “ಸೇವ್‌ ದಿ ಚೈಲ್ಡ್‌’ ಎಂಬ ಫ‌ಂಡ್‌ಗೆ ಹಣ ಸಂಗ್ರಹಿಸಲಾಗುತ್ತಿತ್ತು. ಇದರಿಂದ ಪ್ರೇರಣೆ ಪಡೆದ ಕುಲಕರ್ಣಿಯವರು ಭಾರತದಲ್ಲಿ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನವನ್ನೂ ಧ್ವಜ ದಿನವನ್ನಾಗಿ ಆಚರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಹಣ ಸಂಗ್ರಹಿಸಲು ಅನುವು ಮಾಡಬೇಕು ಎಂದು ವಿಶ್ವಸಂಸ್ಥೆಗೆ ವರದಿ ನೀಡಿದರು. ವಿಶ್ವಸಂಸ್ಥೆಯಲ್ಲಿ ಅವರ ಪ್ರಸ್ತಾಪಕ್ಕೆ ಅನುಮತಿ ದೊರಕಿತು ಎಂದು ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ಈ ವರದಿ (ಜಟಟ.ಜl/8ಒಟಿಅಜu) ಹೇಳುತ್ತದೆ.  ಈ ಕುರಿತು ಜವಾಹರ್‌ಲಾಲ್‌ ನೆಹರೂ ಅವರ ಅನುಮತಿ ಕೇಳಲು ಮುಂದಾದಾಗ ನೆಹರು ಮೊದಲಿಗೆ ಮುಜುಗರಪಟ್ಟುಕೊಂಡರು, ಆಮೇಲೆ ಒಪ್ಪಿಕೊಂಡರಂತೆ. 1951ರಲ್ಲಿ ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌(ಐಸಿಸಿಡಬ್ಲೂé) ವತಿಯಿಂದ ಅಂತಾರಾಷ್ಟ್ರೀಯ ಮೇಳವೊಂದನ್ನು ಆಯೋಜಿಸಲಾಯಿತು. ಆ ವರ್ಷದಿಂದಲೇ ನೆಹರೂರ ಜನ್ಮದಿನಾಚರಣೆ ಮಕ್ಕಳ ದಿನಾಚರಣೆಯಾಗಿ ಬದಲಾಯಿತು! 

ಅಂದರೆ, ಪಂಡಿತ್‌ ನೆಹರೂ ಜೀವಂತವಿದ್ದಾಗಲೇ ಅವರ ಜನ್ಮದಿನದಂದು ಮಕ್ಕಳ ದಿನಾಚರಣೆ ಆರಂಭವಾಗಿದ್ದಷ್ಟೇ ಅಲ್ಲದೆ, ಈ ಪರಿಕಲ್ಪನೆಗೆ ನೆಹರೂರ ಒಪ್ಪಿಗೆಯೂ ಇತ್ತು. ಆದರೆ ಎಲ್ಲರೂ ಭಾವಿಸುವಂತೆ ಈ ಐಸಿಸಿಡಬ್ಲೂé ಏನೂ ಒಂದು ಸ್ವತಂತ್ರ ಸಂಸ್ಥೆಯಾಗಿರಲಿಲ್ಲ! ಅದಕ್ಕೆ ರಾಜಕೀಯದೊಂದಿಗೆ ಮತ್ತು ನೆಹರೂ-ಗಾಂಧಿ ಕುಟುಂಬದೊಂದಿಗೆ ಬಿಡಿಸಲಾರದ ನಂಟಿತ್ತು. 

1952-58ರವರೆಗೆ ಐಸಿಸಿಡಬ್ಲೂéನ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ರಾಜಕುಮಾರಿ ಅಮೃತ್‌ ಕೌರ್‌. ಈ ಅಮೃತ್‌ ಕೌರ್‌ ಜವಾಹರ್‌ಲಾಲ್‌ ನೆಹರೂ ಅವರ ಮೊದಲ ಕ್ಯಾಬಿನೆಟ್‌ನ ಸದಸ್ಯರಾದವರು ಮತ್ತು ಕ್ಯಾಬಿನೆಟ್‌ ದರ್ಜೆ ಹೊಂದಿದ ಮೊದಲ ಮಹಿಳೆಯೆಂದೂ ಗುರುತಿಸಿಕೊಂಡರು. ನವ ದೆಹಲಿಯಲ್ಲಿನ ಆಲ್‌ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ಹಿಂದಿನ ಸ್ಥಾಪಕ ಶಕ್ತಿಯಾಗಿದ್ದ ಅಮೃತ್‌ ಕೌರ್‌, ಆ ಸಂಸ್ಥೆಯ ಮೊದಲ ಅಧ್ಯಕ್ಷರೂ ಆದರು. ಇನ್ನು 1958ರಿಂದ 1964ರವರೆಗೆ ಐಸಿಸಿಡಬ್ಲೂéನ ಮುಂದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಬೇರಾರೂ ಅಲ್ಲ, ಮಾಜಿ ಪ್ರಧಾನಿ, ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ.ನೆಹರೂ ಜೀವಂತವಿದ್ದಾಗಲೇ ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು ಎನ್ನುವುದಕ್ಕೆ ಐತಿಹಾಸಿಕ ಘಟನಾವಳಿಗಳಷ್ಟೇ ಅಲ್ಲ, ಮಕ್ಕಳ ದಿನಾಚರಣೆಯಂದು ಬಿಡುಗಡೆಯಾದ “ಸ್ಟಾಂಪ್‌’ ಗಳು ಕೂಡ ರುಜುವಾತು ಮಾಡುತ್ತವೆ. 

ಹೀಗಾಗಿ, ಪಂಡಿತ್‌ ನೆಹರೂ ನಿಧನಾ ನಂತರ ಮಕ್ಕಳ ದಿನಾಚರಣೆಯನ್ನು ನವೆಂಬರ್‌ 14ರಂದು ಆಚರಿಸಲಾಯಿತು ಎನ್ನುವುದು ಮಾಧ್ಯಮಗಳು ನುಡಿಯುತ್ತಿರುವ ಸುಳ್ಳು. ಸ್ವತಃ ಬಡ ಕುಟುಂಬದಿಂದ ಬಂದ ವಿ ಎಂ ಕುಲಕರ್ಣಿಯವರು ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆರಂಭಿಸಿದ ಈ ಆಂದೋಲನವನ್ನು ಮುಂದೆ ರಾಜಕೀಯ ಭಟ್ಟಂಗಿತನವಾಗಿ ಬದಲಿಸಲಾಯಿತು ಮತ್ತು ಪಂಡಿತ್‌ ನೆಹರೂ ಈ ಸಂಗತಿಯನ್ನು ಸ್ವ-ವೈಭವೀಕರಣಕ್ಕಾಗಿ ಬಳಸಿಕೊಂಡರು (ಪ್ರಧಾನಿಯಾಗಿದ್ದಾಗಲೇ ಸ್ವತಃ ಭಾರತ ರತ್ನ ಸ್ವೀಕರಿಸುವ ವಿಚಾರದಲ್ಲೂ ಅವರಿಗೆ ಯಾವ ತೊಂದರೆಯೂ ಆಗಲಿಲ್ಲವಲ್ಲ, ಇದೂ ಹಾಗೆಯೇ)

1954ರಲ್ಲಿ ಮಕ್ಕಳ ದಿನದ ಆಚರಣೆಯ ವೇಳೆ “ನೆಹರೂ ಚಾಚಾ ಕೀ ಜೈ’ ಎಂದು ಕೂಗುವಂತೆ ಮಕ್ಕಳಿಗೆ ಹೇಳಲಾಯಿತಂತೆ. ನೆಹರೂರ ವಂದಿ ಮಾಗಧರು ಮತ್ತು ನೆಹರೂ ವಂಶಸ್ಥರು ಮಕ್ಕಳ ದಿನಾಚರಣೆಯನ್ನು ಪಂಡಿತ್‌ ನೆಹರೂರ ವೈಭವೀಕರಣಕ್ಕೆ ಬಳಸಿಕೊಳ್ಳಲಾರಂಭಿಸಿದರು. ವಿಎಂ ಕುಲಕರ್ಣಿ ಅವರು ನೆಹರೂ ಜನ್ಮದಿನವನ್ನು “ಧ್ವಜ ದಿನ’ವನ್ನಾಗಿ ಆಚರಿಸಿ, ಬಡಮಕ್ಕಳಿಗೆ ಹಣ ಸಂಗ್ರಹಿಸಬೇಕೆಂದು ಬಯಸಿದ್ದರು. ಆದರೆ, ಆ ದಿನವನ್ನು “ನೆಹರೂ ಮಕ್ಕಳನ್ನು ಎಷ್ಟು ಪ್ರೀತಿಸುತ್ತಿದ್ದರು, ನೆಹರೂ ಹೇಗೆ ಭಾರತೀಯ ರಾಜಕೀಯದಲ್ಲಿ ತಂದೆಯ ಪಾತ್ರ ವಹಿಸಿದರು’ ಎಂದು ಹಾಡುಹಾಡಿ ಗುಣಗಾನ ಮಾಡುವ “ಮಕ್ಕಳ ದಿನಾಚರಣೆ’ ಮಾಡಲಾಯಿತು. ಹೀಗೆ ಮಕ್ಕಳ ದಿನಾಚರಣೆಯ ಮೂಲಕ ಒಂದು ಕುಟುಂಬವನ್ನು ವೈಭವೀಕರಿಸುವ ಭರದಲ್ಲಿ, ವಿಎಂ ಕುಲಕರ್ಣಿ ಅವರ ಉದ್ದೇಶವೇ ಕಣ್ಮರೆಯಾಯಿತು. 
(ಲೇಖಕರು ಒಪಿ ಇಂಡಿಯಾದ ಸಂಪಾದಕರು)

– ನೂಪುರ್‌ ಶರ್ಮಾ, ಪತ್ರಕರ್ತೆ  

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.