ಮೀನುಗಾರಿಕೆ ಹೊಸ ಚೈತನ್ಯ


Team Udayavani, Jul 21, 2017, 1:43 PM IST

21-ANKANA-1.gif

ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದಾಗ ಮೀನುಗಾರರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಉಪಗ್ರಹ ಆಧಾರಿತ ಮೀನುಗಾರಿಕೆಯನ್ನು ಅನುಷ್ಠಾನಗೊಳಿಸಿದರು. ಪ್ರತಿ ಯಾಂತ್ರಿಕ ಮೀನುಗಾರರಿಗೆ ಜಿ.ಪಿ.ಎಸ್‌. ಹೊಂದಿದ ಕಿಟ್‌ನ್ನು ಯಾಂತ್ರಿಕ ನಾವೆಯಲ್ಲಿ ಸ್ಥಾಪಿಸುತ್ತಾರೆ. ಅದಕ್ಕೆ ಇಸ್ರೋ ಸಂಪರ್ಕ ನೀಡುತ್ತಾರೆ. 

ಮಲ್ಪೆಯ ಸಮುದ್ರ ಕಿನಾರೆಯಲ್ಲಿ ಸೂರ್ಯಾಸ್ತದ ಸೊಬಗನ್ನು ವೀಕ್ಷಿಸುತ್ತಿದ್ದಾರೆ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದೀಜಿಯವರು. 2004ರ ಕರ್ನಾಟಕದ ವಿಧಾನಸಭೆಯ ಚುನಾವಣೆಯ ಬಿಜೆಪಿಯ ರಘುಪತಿ ಭಟ್‌ ಅವರ ಪರವಾಗಿ ಚುನಾವಣಾ ಪ್ರಚಾರ ಭಾಷಣಕ್ಕೆ ಮಲ್ಪೆಗೆ ಆಗಮಿಸಿದ್ದರು. ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ. ಕಚೇರಿಯಿಂದ ಈ ಪ್ರಚಾರ ಸಭೆಗೆ ಮುಂಬಯಿ ಸಂಸದ ಗೋಪಾಲ ಶೆಟ್ಟಿಯವರೊಂದಿಗೆ ನಾನು ಭಾಗವಹಿಸಿದ್ದೆ. ಜನಸಂದಣಿ ಕಡಿಮೆ ಇತ್ತು. ಮೋದಿಜಿಯವರು ಡಾಕ್ಟರ್‌ ವಿ.ಎಸ್‌. ಆಚಾರ್ಯರೊಡನೆ ಕರ್ನಾಟಕದ ಮೀನುಗಾರಿಕಾ ಪ್ರಗತಿಯ ಬಗ್ಗೆ ಮಾಹಿತಿ ಕೇಳಿದರು. ತತ್‌ಕ್ಷಣ ಡಾ| ಆಚಾರ್ಯರು ನನ್ನನ್ನು ಪರಿಚಯಿಸಿ “ಇವರು ಸಾಂಪ್ರದಾಯಿಕ ಮೀನುಗಾರ ನಾಯಕ, ಅಧಿಕೃತ ಮಾಹಿತಿ ನೀಡುತ್ತಾರೆ’ ಎಂದರು. ವೇದಿಕೆಯ ಹಿಂಭಾಗದಲ್ಲಿ ಮೋದಿಯವರು ನನ್ನನ್ನು ಕುಳ್ಳಿರಿಸಿ ವರ್ಷದ ಕರ್ನಾಟಕದ ಮೀನುಗಾರಿಕೆ ಬಜೆಟ್‌ ವಿಚಾರಿಸಿದರು. “ಕೇವಲ 120 ಕೋಟಿ ರೂ.’ ಅಂದೆ. ಮೋದೀಜಿ ವಿಸ್ಮಿತರಾದರು. “ಕರ್ನಾಟಕದಲ್ಲಿ 60 ವರ್ಷ ಆಳಿದ ಎಲ್ಲ ಸರಕಾರಗಳು ಮೀನುಗಾರರು ಮತ್ತು ಮೀನುಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿವೆ’ ಎಂದೆ. ಮುಂದೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದಾಗ ಮೀನುಗಾರರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಉಪಗ್ರಹ ಆಧಾರಿತ ಮೀನುಗಾರಿಕೆಯನ್ನು ಅನುಷ್ಠಾನಗೊಳಿಸಿದರು. ಪ್ರತಿ ಯಾಂತ್ರಿಕ ಮೀನುಗಾರರಿಗೆ ಜಿ.ಪಿ.ಎಸ್‌. ಹೊಂದಿದ ಕಿಟ್‌ನ್ನು ಯಾಂತ್ರಿಕ ನಾವೆಯಲ್ಲಿ ಸ್ಥಾಪಿಸುತ್ತಾರೆ. ಅದಕ್ಕೆ ಇಸ್ರೋ ಸಂಪರ್ಕ ನೀಡುತ್ತಾರೆ. ನೀರಿನ ರಭಸ ಮತ್ತು ಗಾಳಿಯ ದಿಕ್ಕನ್ನು ಆಧರಿಸಿ ತೆಪ್ಪದ ಮೀನಿನ ಚಿತ್ರಣ ಈ ಕಿಟ್ಟಿನಲ್ಲಿ ಗೋಚರಿಸುತ್ತದೆ. ಸುಮಾರು 30 ಕಿಲೋ ಮೀಟರ್‌ ದೂರದಲ್ಲಿರುವ ಮೀನಿನ ತೆಪ್ಪವನ್ನು ವೀಕ್ಷಿಸಿದ ನೇರ ಮೀನುಗಾರ ಅಲ್ಲಿಗೆ ತೆರಳಿ ತೆಪ್ಪದ ಮೀನನ್ನು ಹಿಡಿಯುತ್ತಾರೆ. ಈ ರೀತಿಯ ಅತ್ಯಾಧುನಿಕ ತಾಂತ್ರಿಕತೆಯ ಅನುಷ್ಠಾನದಿಂದ ಡೀಸೆಲ್‌, ಸಮಯ ಮತ್ತು ಶಕ್ತಿಯ ಉಳಿತಾಯ ಆಗಿ ಅಂದು ಕನಿಷ್ಠ ಎರಡರಿಂದ ಮೂರು ಬಾರಿ ಮತ್ತೆ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತದೆ. ಇದೇ ಗುಜರಾತಿನಲ್ಲಿ ಮೋದಿ ಅನುಷ್ಠಾನಗೊಳಿಸಿದ ನೀಲ ಕ್ರಾಂತಿಯ ಯಶೋಗಾಥೆ.

2009ರಲ್ಲಿ ಯಡಿಯೂರಪ್ಪ ಸರಕಾರ ಬಂದಾಗ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನನ್ನನ್ನು ನೇಮಿಸಿದರು. ಡಾ| ವಿ.ಎಸ್‌. ಆಚಾರ್ಯರೊಡನೆ ಸೇರಿ ಕೇಂದ್ರ ಸರಕಾರದಿಂದ 100 ಕೋಟಿ ರೂ. ಅನುದಾನ ಪಡೆಯಲು ಯಡಿಯೂರಪ್ಪ ಸೂಚಿಸಿದರು. ಅಂತೆಯೇ ಉಪಗ್ರಹ ಆಧಾರಿತ ಕಿಟ್‌ಗೆ ರೂ. 100 ಕೋಟಿ ಅನುದಾನವೂ ಬಂತು. ಬಿ.ಜೆ.ಪಿ. ಸರಕಾರದ ಕೊನೆಯ ಗಳಿಗೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಕಾರ್ಯಗತವಾಗಲಿಲ್ಲ.

2014ರ  ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮೋದಿಯವರು ಮಂಗಳೂರು ನೆಹರು ಮೈದಾನದಲ್ಲಿ ಭಾಷಣ ಪ್ರಾರಂಭಿಸಿದರು. ಮುಂದಿನ ದಿನದಲ್ಲಿ ಬಿ.ಜೆ.ಪಿ. ಸರಕಾರ ಬಂದರೆ ಉಪಗ್ರಹ ಆಧಾರಿತ ಮೀನುಗಾರಿಕೆ ಅನುಷ್ಠಾನಗೊಳಿಸಿ ದೇಶಾದ್ಯಂತ ನೀಲ ಕ್ರಾಂತಿಗೆ ಅವಕಾಶ ದೊರೆಯುವುದು ಎಂದರು.

ಜೂನ್‌ 2016ರಂದು ಪ್ರಧಾನಿ ಮೋದಿ ದೇಶಾದ್ಯಂತ ಕೇಂದ್ರ ಸರಕಾರವು ಆಯೋಜಿತ ಬ್ಲೂ ರೆವೆಲ್ಯೂಶನ್‌ ಇಂಟಿಗ್ರೇಟೆಡ್‌ ಡೆವಲಪ್‌ಮೆಂಟ್‌ ಮೆನೇಜ್‌ಮೆಂಟ್‌ ಆಫ್ ಫಿಶರೀಸ್‌ ಎಂಬ ರಾಷ್ಟ್ರೀಯ ಮೀನುಗಾರಿಕೆಗೆ ಹೊಸ ಚೈತನ್ಯ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿದರು.

ಮೋದಿಯವರ ಪರಿಕಲ್ಪನೆಯ ನೀಲ ಕ್ರಾಂತಿಯ ಸ್ವರೂಪ ಅವರದೇ ಭಾಷೆಯಲ್ಲಿ ಈ ರೀತಿ ಇದೆ:
“Creating an enabling environment for integrated development of the full potential of fisheries of the country, along with substantially improvement in the income status of fishers and fish farmers keeping in view the sustainability, bio-security and environmental concerns.’ ರಾಷ್ಟ್ರೀಯ ಸಾಗರ ತೀರ ಪ್ರದೇಶ 8,108 ಕಿಲೊಮೀಟರ್‌ ಪಸರಿಸಿದೆ. ದೇಶದಲ್ಲಿ ಈ ಸಾಗರ ತೀರದಲ್ಲಿ 14.50 ಮಿಲಿಯ ಜನರು ಸಾಂಪ್ರದಾಯಿಕ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. 1950-51ರಲ್ಲಿ 7.5 ಲಕ್ಷ ಟನ್‌ ಮೀನು ಉತ್ಪಾದನೆಯಾಗಿದೆ. 2015-16ರಲ್ಲಿ ಇದು 107.95ಗೆ ಲಕ್ಷ ಟನ್‌ ಏರಿಕೆಯಾಗಿದ್ದು ರಫ್ತು ಉತ್ಪನ್ನವು 33,441 ಕೋಟಿಗೆ ತಲುಪಿದೆ.

ಯೋಚನೆ ಮತ್ತು ಯೋಜನೆ
1.    ರಾಷ್ಟ್ರಮಟ್ಟದಲ್ಲಿ ಸಾಗರ ಮೀನುಗಾರಿಕೆ ಮತ್ತು ಒಳನಾಡು ಮೀನುಗಾರಿಕೆಯನ್ನು ವಿಶ್ವದರ್ಜೆಗೆ ಉನ್ನತೀಕರಿಸುವುದು.
2.    ಮೀನುಗಾರರ ತಲಾ ಆದಾಯವನ್ನು ದುಪ್ಪಟ್ಟುಗೊಳಿಸುವುದು.
3.    ಸಾಗರ ಮತ್ತು ನದಿಗಳ ಜೀವ ವೈವಿಧ್ಯ ಸಂರಕ್ಷಣೆ ಮಾಡುವುದು.
4.    ಮತೊÕéàದ್ಯಮವನ್ನು ಸಂಪೂರ್ಣ ಮಾಲಿನ್ಯರಹಿತ ಉದ್ಯಮವನ್ನಾಗಿ ಬೆಳೆಸುವುದು.
5.    2020ರ ಅವಧಿಯಲ್ಲಿ ರಾಷ್ಟ್ರೀಯ ಸಾಗರ ಮತ್ತು ಒಳನಾಡು ಮೀನುಗಾರಿಕೆಯನ್ನು ಮೂರುಪಟ್ಟು ಅಭಿವೃದ್ಧಿಗೊಳಿಸುವುದು.
6.    ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಮತ್ಸೋದ್ಯಮದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಿಕೆ.
7.    ವಿಶ್ವದಾದ್ಯಂತ ಭಾರತೀಯ ಮತ್ಸೋದ್ಯಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಒದಗಿಸಿ, ಭಾರತೀಯ ಮತೊÕéàದ್ಯಮದ ಕಡೆಗೆ ಇತರ ರಾಷ್ಟ್ರಗಳನ್ನು ಆಕರ್ಷಿಸುವುದು.
8.    ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕ ಕಂಪೆನಿಗಳೊಂದಿಗೆ ನಿಗಮ, ಪೆಡರೇಷನ್‌ ಮೂಲಕ 2020ರ ಅವಧಿಗೆ ಅತ್ಯಧಿಕ ರಫ್ತು ಅಭಿವೃದ್ಧಿಯನ್ನು ದಾಖಲಿಸುವುದು.

ದೇಶಾದ್ಯಂತ 2,722 ಮಧ್ಯಮ ಮತ್ತು ಆಳ ಸಮುದ್ರ ಮೀನುಗಾರಿಕಾ ದೋಣಿಗಳಿವೆ. 10,437 ಯಾಂತ್ರಿಕ ಸಾಂಪ್ರದಾಯಿಕ ಮೀನುಗಾರಿಕಾ ನಾವೆಗಳಿವೆ. ಸಾಂಪ್ರಾದಾಯಿಕ ಮೀನುಗಾರಿಕೆಯ 55,325 ನಾವೆಗಳಿವೆ. ಒಟ್ಟು ದೇಶಾದ್ಯಂತ 2,12,524 ಮೀನುಗಾರಿಕಾ ನಾವೆಗಳು ಕಾರ್ಯ ನಿರ್ವಹಿಸುತ್ತಿವೆ.

ಕರ್ನಾಟಕದಲ್ಲಿ 2,488 ಮಧ್ಯಮ ಆಳ ಸಮುದ್ರ ಮೀನುಗಾರಿಕೆ, 2,970 ಯಂತ್ರ ಚಾಲಿತ ಸಾಂಪ್ರದಾಯಿಕ ನಾವೆಗಳು, 8,355 ಸಾಮಾನ್ಯ ಸಾಂಪ್ರದಾಯಿಕ ನಾವೆಗಳು -ಹೀಗೆ ಒಟ್ಟು 17,813 ಮೀನುಗಾರಿಕಾ ನಾವೆಗಳು ಕರ್ನಾಟಕ ಸಾಗರ ತೀರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿವೆ.

2014ರ ಸರ್ವೆಯಂತೆ ದೇಶಾದ್ಯಂತ 34,43,12,000 ಮೆಟ್ರಿಕ್‌ ಟನ್‌, ಕರ್ನಾಟಕದಾದ್ಯಂತ ಒಟ್ಟು 1,88,24,000 ಮೆಟ್ರಿಕ್‌ ಟನ್‌ ಮೀನು ಉತ್ಪತ್ತಿಯಾಗಿದೆ. ಗುಜರಾತ್‌ ರಾಜ್ಯದಲ್ಲಿ 6,95,50,000 ಮೆಟ್ರಿಕ್‌ ಟನ್‌ ಮೀನು ಉತ್ಪತ್ತಿಯಾಗಿದೆ. ದೇಶದಲ್ಲಿ ಗುಜರಾತ್‌ ಮೊದಲನೇ ಸ್ಥಾನದಲ್ಲಿದೆ. 

ಹೈದರಾಬಾದಿನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್‌ಎಫ್ಡಿಬಿ) ನಿಗಮದ ಮೂಲಕ ಕೇಂದ್ರ ಕೃಷಿ ಮತ್ತು ಮೀನುಗಾರಿಕಾ, ಪಶು ಸಂಗೋಪನಾ ಸಚಿವಾಲಯ ಇದೆ. ಸಕಲ ಮೀನುಗಾರಿಕಾ ಸೌಲಭ್ಯಗಳ ವಿತರಣೆಯನ್ನು ಸಾಗರ ಕ್ರಾಂತಿಯ ಹೆಸರಿನಲ್ಲಿ ಸಂಯೋಜನೆಗೊಳಿಸಿ ಎಲ್ಲ ರೀತಿಯ ಸಬ್ಸಿಡಿಗಳನ್ನು ವರ್ಗಿಕರಣಗೊಳಿಸಿ ಮೀನುಗಾರಿಕೆಗೆ ಅನುಷ್ಠಾಗೊಳಿಸಿರುವುದು ಗಮನಾರ್ಹ. ಮೀನುಗಾರಿಕಾ ಬಂದರು ನಿರ್ಮಾಣ ಮತ್ತು ಜಂಟಿ ನಿರ್ಮಾಣ, ಬಂದರಿನ ಹೂಳೆತ್ತುವಿಕೆ, ಯಾಂತ್ರಿಕ ನಾವೆಗಳ ನಿರ್ಮಾಣ, ಬೋಟ್‌ ಬಿಲ್ಡಿಂಗ್‌ ಯಾರ್ಡ್‌ ರಚನೆ, ಐಸ್‌ ಪ್ಲಾಂಟ್‌, ಶೀತಲೀಕರಣ ಪ್ಲಾಂಟ್‌, ಮೀನೆಣ್ಣೆ ಫ್ಯಾಕ್ಟರಿ, ಸಮುದ್ರದಲ್ಲಿ ಕೆ.ಜಿ. ಪದ್ಧತಿಯಲ್ಲಿ ಮೀನು ಸಾಕಣೆ, ಶೀತಲೀಕೃತ ವಾಹನ ತಯಾರಿಕೆ ಮತ್ತು ನೆಟ್‌ ಮತ್ತು ಇತರ ಪೂರಕ ಸಾಮಾಗ್ರಿಗಳ ತಯಾರಿಕೆಗೆ ಕನಿಷ್ಠ ಶೇ.50 ಸಬ್ಸಿಡಿಗಳನ್ನು ನೇರವಾಗಿ ಅದೇ ವರ್ಷ ಫ‌ಲಾನುಭವಿಗಳ ಖಾತೆಗೆ ಕೇಂದ್ರ ಸರಕಾರವು  ಸಂದಾಯ ಮಾಡುವುದು. ಈ ಯೋಜನೆಯ ಸಬ್ಸಿಡಿ ಸೌಲಭ್ಯಗಳು ಕೇವಲ ಸಾಗರ ಮೀನುಗಾರಿಕೆಗೆ ಮಾತ್ರವಲ್ಲ ಒಳನಾಡು ಮೀನುಗಾರಿಕೆಗೂ ಅನ್ವಯವಾಗುತ್ತದೆ.

ನೀಲ ಕ್ರಾಂತಿಯ ಯೋಜನೆಗೆ ಈ ಕೆಳಗಿನ ಸಂಸ್ಥೆಗಳ ನಿಯೋಜಿತ ಯೋಜನೆಗಳನ್ನು ಸಂಯೋಜನೆಗೊಳಿಸಲಾಗಿದೆ:
1. ಸಾಗರ ಮಾಲ ಯೋಜನೆ, ಶಿಪ್ಪಿಂಗ್‌ ಮಿನಿಸ್ಟ್ರಿ
2. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
3. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ರಾಮಚಂದರ್‌ ಬೈಕಂಪಾಡಿ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ

ಟಾಪ್ ನ್ಯೂಸ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.