ಬ್ಯಾಂಕ್‌ಗಳನ್ನು ಕಿತ್ತು ತಿನ್ನುತ್ತಿರುವ ವಂಚನೆ, ಭ್ರಷ್ಟಾಚಾರ


Team Udayavani, Nov 12, 2019, 5:43 AM IST

banking

ಇತ್ತೀಚೆಗಿನ ಹಲವಾರು ವಿತ್ತೀಯ ಅಪರಾಧಗಳು ದಿಗ್ಭ್ರಮೆ ಮತ್ತು ಭೀತಿಹುಟ್ಟಿಸುತ್ತವೆ. ಬ್ಯಾಂಕುಗಳ ಮೇಲಿರುವ ವಿಶ್ವಾಸ ಹಾಗೂ ಬ್ಯಾಂಕ್‌ಗಳ ಜನಪ್ರಿಯತೆಗೆ ಇದರಿಂದ ಧಕ್ಕೆಯಾಗುತ್ತಿದೆ. ಈ ವೈಟ್‌ ಕಾಲರ್‌ ಅಪರಾಧ ದೇಶದ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ.

ವಿಜ್ಞಾನದಲ್ಲಿ ಬೆಂಕಿ, ತಂತ್ರಜ್ಞಾನದಲ್ಲಿ ಚಕ್ರ, ರಾಜ್ಯ ಶಾಸ್ತ್ರದಲ್ಲಿ ಮತ ಮತ್ತು ಅರ್ಥಶಾಸ್ತ್ರದಲ್ಲಿ ಹಣ ಅತ್ಯಂತ ಮಹತ್ವದ ವಿಚಾರಗಳು. ಇವುಗಳ ನಿಯಂತ್ರಣ ತಪ್ಪಿದರೆ ಅಪಾಯ ನಿಶ್ಚಿತ. ಇದೀಗ ಬ್ಯಾಂಕ್‌ಗಳು ನಿಯಂತ್ರಣ ತಪ್ಪಿದ ಸಾಲಗಳನ್ನು ಸರಿದಾರಿಗೆ ತರಲು ಹರಸಾಹಸ ಪಡುತ್ತಿವೆ. ಹಲವಾರು ಅನುತ್ಪಾದಕ ಸಾಲಗಳು ದುರದ್ದೇಶ ಮತ್ತು ಭ್ರಷ್ಟಾಚಾರದಿಂದಾಗಿವೆ ಎಂದರೆ ತಪ್ಪಿಲ್ಲ. ಮೇಲ್ನೋಟಕ್ಕೆ ಕೆಲವು ಬ್ಯಾಂಕ್‌ಗಳಲ್ಲಿ ಸುಧಾರಣೆಯ ದೃಶ್ಯ ಗೋಚರವಾಗುತ್ತಿದ್ದರೂ ಸಮಸ್ಯೆ ಗಂಭೀರವಾಗಿಯೇ ಉಳಿದಿದೆ.

ರಾಷ್ಟ್ರೀಕರಣದ ಮೊದಲು ಬ್ಯಾಂಕ್‌ಗಳು ಹೈಪ್ರೊಫೈಲ್‌ ಕಾರ್ಪೊàರೇಟ್‌ ಕುಳಗಳ ನಿಯಂತ್ರಣದಲ್ಲಿದ್ದವು. ಇವತ್ತು ಬ್ಯಾಂಕ್‌ಗಳು ಸರಕಾರದ ಅಧೀನದಲ್ಲಿದ್ದರೂ ಕಾರ್ಪೊàರೇಟ್‌ ಕುಳಗಳಿಂದ ವಂಚನೆಯಾಗುತ್ತಿದೆ. ಸುಸ್ತಿ ಸಾಲದಲ್ಲಿ ಕಾರ್ಪೊರೇಟ್‌ ಸಾಲಗಳೇ ದೊಡ್ಡ ಪ್ರಮಾಣದ ಪಾಲು ಹೊಂದಿವೆ. ಇದೀಗ ಬ್ಯಾಂಕ್‌ ವಂಚನೆ ವೈಟ್‌ ಕಾಲರ್‌ ಭ್ರಷ್ಟಾಚಾರವಾಗಿದೆ.

ಆಗಸ್ಟ್‌ 30 ರಂದು ಹಣಕಾಸು ಸಚಿವೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೆಗಾ ವಿಲೀನದ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರಕ್ರಿಯೆ ವೇಗದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಅವರು ಒಟ್ಟಾರೆ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ರೂ. 8.65 ಲಕ್ಷ ಕೋಟಿಯಿಂದ ರೂ. 7.90 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ನೀಡಿದುದಲ್ಲದೆ ವಂಚನೆ, ಸುಸ್ತಿ ಸಾಲಗಳನ್ನು ಕಡಿಮೆ ಮಾಡಲು ಹೊಸ ವಿಧಾನಗಳನ್ನು ಜಾರಿಗೆ ತರಲಾಗಿದೆ. ಬ್ಯಾಂಕ್‌ಗಳಲ್ಲಿ ಉತ್ತಮ ಆಡಳಿತ ನೀಡಬೇಕು. ಅಂತಾರಾ ಷ್ಟ್ರೀಯ ಬ್ಯಾಂಕ್‌ಗಳ ಸುಲಲಿತ ವ್ಯವಹಾರ ಮಾಡಿ ವ್ಯಾಪಾರ ವಿನಿಮಯ ವೃದ್ಧಿಯಾಗಬೇಕು ಎಂಬ ಉದ್ದೇಶವನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.

ಇದೀಗ ಬ್ಯಾಂಕ್‌ ವಿಲೀನದ ಮಹತ್ತರ ಕಾಲಘಟ್ಟದಲ್ಲಿ ಸದೃಢ ಹಣಕಾಸು ವ್ಯವಸ್ಥೆಗೆ, ವ್ಯವಹಾರಗಳ ಪಾರದರ್ಶಕತೆ, ಆರ್‌ಬಿಐ ನಿಯಮ ಪಾಲನೆ, ಬ್ಯಾಂಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಸುಸ್ತಿ ಸಾಲ ವಸೂಲಾತಿಗೆ ಆದ್ಯತೆ ನೀಡುವುದು, ಕಾರ್ಪೊàರೇಟ್‌ ಸಾಲಗಳ ಬಗ್ಗೆ ನಿಗಾ ವಹಿಸುವುದು, ದೊಡ್ಡ ಸಾಲಗಾರರ ಸಾಲದ ಜೊತೆಗೆ ಅವರ ವಿದೇಶಿ ಯಾತ್ರೆಯನ್ನು ಗಮನಿಸುವುದು, ಉನ್ನತ ಅಧಿಕಾರಿಗಳು ಮತ್ತು ಹಗರಣದಲ್ಲಿ ಭಾಗಿಯಾದವರ ಮೇಲೆ ನಿಗಾ, ರಾಜಕೀಯ ಕೈವಾಡಕ್ಕೆ ಕಡಿವಾಣ ಹಾಕುವುದು, ಉದ್ದೇಶಪೂರ್ವಕ ವಂಚನೆ, ಆರೋಪಿಗಳ ತ್ವರಿತ ವಿಚಾರಣೆ ಸರಕಾರದ ಆದ್ಯತೆಯಾಗಬೇಕು. ಬ್ಯಾಂಕ್‌ ಅಧಿಕಾರಿಗಳು ಪರಿಣಾಮಕಾರಿಯಾಗಿ, ಪ್ರಾಮಾ ಣಿಕವಾಗಿ ಸಣ್ಣ ಸಾಲಗಾರರನ್ನೂ ಎಚ್ಚರದಿಂದ ಗಮನಿಸುತ್ತಿರಬೇಕು.

ಅಂತಾರಾಷ್ಟ್ರಿಯ ಹಣಕಾಸು ಸಂಸ್ಥೆ (ಐಎಂಎಫ್) ವರದಿ ಪ್ರಕಾರ ಎನ್‌ಪಿಎ ಶೇ.10.9 ಕ್ಕೆ ತಲುಪಿದೆ. ಅಲ್ಲದೇ ಶೇ.37 ರಷ್ಟು ಸಾಲಗಳು ಅಪಾಯದಂಚಿನಲ್ಲಿವೆ .

ವ0ಚನೆ ಪ್ರಕರಣಗಳು ಮಾನವನ ಇತಿಹಾಸದಷ್ಟೇ ಪುರಾತನವಾದುವುಗಳು. ಸರಕಾರ ಆರ್ಥಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದೆ. ಎನ್‌ಪಿಎ ಮತ್ತು ಆಗಾಗ ಘಟಿಸುತ್ತಿರುವ ವಂಚನೆ ಪ್ರಕರಣಗಳು ಬ್ಯಾಂಕ್‌ ಉದ್ದಿಮೆಯನ್ನು ತಲ್ಲಣಗೊಳಿಸಿರುವುದು ಮಾತ್ರವಲ್ಲ, ದೇಶದ ಅರ್ಥ ವ್ಯವಸ್ಥೆಗೆ ಸವಾಲಾಗಿದೆ. ಬೃಹತ್‌ ಕಂಪೆನಿಗಳ ಸಾಲ ಮರುಪಾವತಿ ಸರಿಯಾಗಿದ್ದಲ್ಲಿ ದೇಶದ ಬ್ಯಾಂಕ್‌ಗಳ ಅನುತ್ಪಾದಕ ಸಾಲದ ಪ್ರಮಾಣ ಈ ಪರಿ ಹೆಚ್ಚಾಗುತ್ತಿರಲಿಲ್ಲ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ಆರ್‌ಬಿಐ ನಿರಂತರ ಶ್ರಮಿಸುತ್ತಲೇ ಇವೆ. 2014ರಲ್ಲಿ ನಮ್ಮ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರ ಹೂಡಿಕೆ 100 ಲಕ್ಷ ಕೋಟಿಯಾಗಿತ್ತು. ಸುಸ್ತಿ ಸಾಲ 10.25 ಲಕ್ಷ ಕೋಟಿ. ಸ್ವಾತಂತ್ರ್ಯ ಬಂದಾಗಿನಿಂದ 2008ರ ವರೆಗೆ ಕೈಗಾರಿಕೆಗಳಿಗೆ ಕೊಟ್ಟ ಸಾಲ 18.6 ಲಕ್ಷ ಕೋಟಿ ರೂ. ಆದರೆ 2008ರಿಂದ 2014ರವರೆಗೆ ಕೈಗಾರಿಕೆಗಳಿಗೆ ವಿತರಣೆ ಆದ ಸಾಲದ ಮೊತ್ತ 34.40 ಲಕ್ಷ ಕೋಟಿ ರೂ. ಕೇವಲ 5 ವರ್ಷಗಳಲ್ಲಿ ದುಪ್ಪಟ್ಟು ಹಣ ಕೈಗಾರಿಕಾ ವಲಯಕ್ಕೆ ಸಂದಾಯವಾಗಿತ್ತು. ಬ್ಯಾಂಕ್‌ ಅಧಿಕಾರಿಗಳ, ಹಲವು ರಾಜಕೀಯ ನಾಯಕರ ಕ್ರೋನಿ ಕ್ಯಾಪಿಟಿಲ್‌ನಿಂದಾಗಿ (ಬ್ಯಾಂಕ್‌ ಸಾಲವನ್ನು ವೈಯಕ್ತಿಕ ಆಸಕ್ತಿಗೆ ಬಳಸುವವರು) ಸುಸ್ತಿ ಸಾಲ ಗಗನಕ್ಕೇರಿತು.

ಕಳೆದ 11 ಹಣಕಾಸು ವರ್ಷಗಳಲ್ಲಿ ಒಟ್ಟಾರೆ 2.05 ಲಕ್ಷ ಕೋಟಿ ಮೊತ್ತದ ವಂಚನೆ ನಡೆದಿದೆ. 2018-19 ರಲ್ಲಿ 6,800 ಪ್ರಕರಣಗಳಲ್ಲಿ ನಡೆದ ವಂಚನೆ ರೂ. 71,500 ಕೋಟಿ. ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ. ಬ್ರಿಟನ್‌ ಕೋರ್ಟ್‌ ನಾಲ್ಕನೇ ಸಲ ಜಾಮೀನು ಅರ್ಜಿ ತಿರಸ್ಕರಿಸಿದ ಅನಂತರ ಹತಾಶನಾಗಿರುವ ನೀರವ್‌ ಮೋದಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾನೆ. ಮಾರ್ಚ್‌ 19 ರಿಂದ ಆತ ಜೈಲಿನಲ್ಲಿದ್ದಾನೆ. ಈತನ ಒಟ್ಟು ರೂ. 4000 ಕೋಟಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಯನ್ನು ಇ.ಡಿ. ಪ್ರಾರಂಭಿಸಿದೆ.

ಮದ್ಯದ ದೊರೆ ದೇಶಭ್ರಷ್ಟ ವಿತ್ತಾಪರಾಧಿ ವಿಜಯ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿದ ಮೊತ್ತ 9,300 ಕೋಟಿ ರೂ. ಈ ಅಪಾದಿತನನ್ನು ದೇಶಕ್ಕೆ ಒಪ್ಪಿಸುವ ವಿಚಾರಣೆಯನ್ನು ಫೆಬ್ರವರಿ 11, 2020ಕ್ಕೆ ಮುಂದೂಡಲಾಗಿದೆ. ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್‌ ತಮ್ಮ ಬ್ಯಾಂಕಿನಿಂದ ವಿಡಿಯೋಕಾನ್‌ ಕಂಪೆನಿಗೆ ತನ್ನ ಪತಿಯ ಮುಖಾಂತರ ರೂ. 3250 ಕೋಟಿ ಸಾಲ ನೀಡಿದ್ದಾರೆ. ಭೂಷಣ್‌ ಸ್ಟೀಲ್‌ ಒಳಗೊಂಡ ಭಾರೀ ವಂಚನೆ ಜಗಜ್ಜಾಹೀರಾಗಿದೆ. ವಂಚನೆಯಾಗಿರುವ ಬಹುಪಾಲು ಹಣ ಸಾಲದ ರೂಪದಲ್ಲಿಯೇ ಆಗಿದೆ.

ಇತ್ತೀಚೆಗಿನ ಹಲವಾರು ವಿತ್ತೀಯ ಅಪರಾಧಗಳು ದಿಗ್ಭ್ರಮೆ ಮತ್ತು ಭೀತಿಹುಟ್ಟಿಸುತ್ತವೆ. ಬ್ಯಾಂಕುಗಳ ಮೇಲಿರುವ ವಿಶ್ವಾಸ ಹಾಗೂ ಬ್ಯಾಂಕ್‌ಗಳ ಜನಪ್ರಿಯತೆಗೆ ಇದರಿಂದ ಧಕ್ಕೆಯಾಗುತ್ತಿದೆ. ಈ ವೈಟ್‌ ಕಾಲರ್‌ ಅಪರಾಧ ದೇಶದ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಪರೋಕ್ಷವಾಗಿ ಪ್ರತಿಯೊಬ್ಬ ಪ್ರಾಮಾಣಿಕ ಪ್ರಜೆ ಬೆಲೆ ತೆರುವಂತಾಗಿದೆ. ಖಾಸಗಿ ವ್ಯಕ್ತಿಗಳ ವೈಯಕ್ತಿಕ ಲಾಭ- ಸಾರ್ವಜನಿಕರಿಗೆ ತಲೆದಂಡ.

ಇದೀಗ ಸುಸ್ತಿದಾರರ ಮೇಲೆ ಸಿಬಿಐ ಮುಗಿ ಬಿದ್ದಿದೆ. 169 ವಂಚಕ ಸುಸ್ತಿದಾರ ಕಂಪನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. 12 ಬ್ಯಾಂಕ್‌ಗಳಿಗೆ ರೂ. 7000 ಕೋಟಿ ವಂಚಿಸಿದ ಒಟ್ಟು 35 ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿದೆ. ಆರೋಪಿತರು ಮತ್ತು ಬ್ಯಾಂಕ್‌ ಅಧಿಕಾರಿಗಳ ಒಳಸಂಚು ಮತ್ತು ಖೋಟಾ ದಾಖಲೆಗಳು ಬೆಳಕಿಗೆ ಬಂದಿವೆ. ಸಾರ್ವಜನಿಕರ ಹಣದ ಹೊಣೆಗಾರಿಕೆ ಹೊತ್ತ ಬ್ಯಾಂಕ್‌ ಅಧಿಕಾರಿಗಳು ತಮ್ಮ ಹೊಣೆಯನ್ನು ಮರೆತು ಶ್ರೀಮಂತರನ್ನು ಮತ್ತು ಭ್ರಷ್ಟರನ್ನು ಓಲೈಸಿದರೆ ಮುಂದಿನ ಅನಾಹುತಗಳಿಗೆ ಅವರೇ ಕಾರಣರಾಗುತ್ತಾರೆ. ಇದೀಗ ಬ್ಯಾಂಕ್‌ಗಳನ್ನು ಸುಲಭವಾಗಿ ವಂಚಿಸಬಹುದೆಂಬ ಭಾವನೆ ಕೆಳಸ್ತರದ ಜನರಲ್ಲೂ ಮೂಡಿ ಹಲವಾರು ಉದ್ದೇಶ ಪೂರ್ವಕ ವಂಚನೆಗಳು ನಡೆಯುತ್ತಿವೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Karkala: ಜಾಗದ ವಿಚಾರ; ಮಹಿಳೆಗೆ ಹಲ್ಲೆ; ಪ್ರಕರಣ ದಾಖಲು

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.