ಹಸುರು ಜಲಜನಕ: ಭವಿಷ್ಯದ ಇಂಧನ
Team Udayavani, Jan 10, 2023, 6:15 AM IST
ಹಸುರು ಜಲಜನಕ ಇಂಧನದ ಉತ್ಪಾದನೆಗೆ ಪ್ಲಾ ಟಿನಂ, ಇರಿಡಿಯಮ್‌ನಂತಹ ಭೂಮಿಯಲ್ಲಿನ ಅಪರೂಪದ ಲೋಹಗಳು ಅಗತ್ಯವಿದ್ದು, ಅವುಗಳ ಲಭ್ಯತೆಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪರ್ಯಾಯ ಲೋಹಗಳು ಅಥವಾ ಮಿಶ್ರ ಲೋಹಗಳನ್ನು ಅಭಿವೃದ್ಧಿ ಪಡಿಸಿದರೆ, ಹಸುರು ಜಲಜನಕದ ಉತ್ಪಾದನೆಗೆ ಮಹತ್ವದ ತಿರುವು
ಕೊಟ್ಟಂತಾಗುತ್ತದೆ.
ಹಸುರು ಜಲಜನಕವು ನವೀಕರಿ ಸಬಹುದಾದ ಶಕ್ತಿಯಿಂದ ಅಥವಾ ಕಡಿ ಮೆ ಇಂಗಾಲದ ಶಕ್ತಿಯಿಂದ ಉತ್ಪತ್ತಿ ಆಗುವ ಜಲಜನಕವಾಗಿದ್ದು, ಭಾರತೀಯ ಕೈಗಾರಿ ಕೆಗಳು ಮತ್ತು ಸಾರಿಗೆ ಕ್ಷೇತ್ರದ ಭವಿಷ್ಯ ಎನ್ನ ಲಾಗಿದೆ. ಹಸುರು ಜಲಜನಕವು ಪರಿಶುದ್ಧ ಇಂಧನವಾಗಿರುವುದರಿಂದ ಗ್ರೀನ್ ಹೌಸ್‌ನ ಅಡ್ಡ ಪರಿಣಾಮವನ್ನು ಕಡಿಮೆ ಮಾಡಿ ಪರಿ ಸರ ಹಾನಿಯಾಗುವುದನ್ನು ತಪ್ಪಿಸುತ್ತದೆಯ ಲ್ಲದೆ, ತೈಲದ ಮೇಲಿನ ಅವಲಂಬನೆ ಯನ್ನು ತೀವ್ರವಾಗಿ ಕಡಿಮೆಗೊಳಿಸುತ್ತದೆ.
ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ, ರಾಸಾ ಯನಿಕ ಘಟಕ ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂದಿನ ದಶಕದಲ್ಲಿ ಅತೀ ವೇಗದ ಬೆಳವಣಿಗೆಯನ್ನು ಹೊಂದುವ ಪರಿ ಕಲ್ಪನೆ ಯೊಂದಿಗೆ, ನವೀಕರಿಸಬಹುದಾದ ಇಂಧನ ವನ್ನು ಅನುಷ್ಠಾನಗೊಳಿಸುವ ಉದ್ದೇ ಶವನ್ನು ಭಾರತ ಸರಕಾರ ಹೊಂದಿದೆ. ಇದೇ ದೃಷ್ಟಿಯಿಂದ ರೂಪಿಸಲಾಗಿರುವ ರಾಷ್ಟ್ರೀಯ ಹಸುರು ಜಲಜನಕ ಮಿಷನ್‌ಗೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ನೀಡಿದೆ.
ಹಸುರು ಜಲಜನಕ ಯಾಕೆ?
1. ತೈಲಕ್ಕಾಗಿ ಮಧ್ಯ ಪ್ರಾಚ್ಯ ದೇಶಗಳ ಮೇಲಿನ ಅವಲಂಬನೆ- ಭೌಗೋಳಿಕ, ರಾಜ ಕೀಯ ಉದ್ವೇಗವು ತೈಲ ಪೂರೈಕೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದ್ದು ಭವಿಷ್ಯ ದಲ್ಲಿ ದೇಶವು ತೈಲ ಲಭ್ಯತೆಯ ಕೊರತೆಯನ್ನು ಅನುಭವಿಸಬಹುದು.
2. ಹವಾಮಾನ ಬದಲಾವಣೆಯ ಕುರಿತು – ಭೌಗೋಳಿಕ ತಾಪಮಾನವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತವು 100 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧ ನ ಸ್ಥಾವರವನ್ನು ಸ್ಥಾಪಿಸಿದ್ದು, ಇದನ್ನು 2030ರ ಒಳಗೆ 500ಗಿಗಾ ವ್ಯಾಟ್‌ಗೆ ಹೆಚ್ಚಿಸುವ ಗುರಿ ಯನ್ನು ಹೊಂದಿದೆ.
3. ಕೆಲವು ಕೈಗಾರಿಕೆಗಳು ಪರ್ಯಾಯ ಶಕ್ತಿಯ ಅಂದರೆ ನವೀಕರಿಸಬಹುದಾದ ಇಂಧನದ ಪೂರೈಕೆ ಹಾಗೂ ಪಡೆಯುವಲ್ಲಿ ವಿಫಲವಾಗಿರುವುದು. ಅಂತಾರಾಷ್ಟ್ರೀಯ ಶಕ್ತಿ ಸಂಸ್ಥೆಯ ಅಧ್ಯಯನದ ಪ್ರಕಾರ, ವಿಶ್ವಾ ದ್ಯಂತ ಒಟ್ಟಾರೆ ಇಂಗಾಲದ ಹೊರಸೂ ಸುವಿಕೆಯಲ್ಲಿ ಆಟೋಮೊಬೈಲ್ ಕ್ಷೇತ್ರದ ಪಾಲು ಶೇ.18 ರಷ್ಟಿದ್ದು, ಭಾರತದಲ್ಲಿ ಅದರ ಪಾಲು ಶೇ. 8ರಷ್ಟಾಗಿದೆ. ಆದ್ದರಿಂದ ಸರ ಕಾರವು ಅಕ್ಷರಶಃ ಶೂನ್ಯ ಹೊರಸೂಸು ವಿಕೆಯನ್ನು ಹೊಂದಿ ದಂತಹ ಹಸುರು ಜಲಜನಕ ಇಂಧನವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದೆ.
ಹಸುರು ಜಲಜನಕ ಎಂದರೆ ಏನು?
ಜಲಜನಕದ ಉತ್ಪಾದನೆಯು ಹಲವು ವಿಧಗಳಲ್ಲಿ ನಡೆಯುತ್ತದೆ. ಬಹುತೇಕ ವಿಧಾನಗಳು ಪರಿಸರ ಮಾಲಿನ್ಯವನ್ನು ಉಂಟುಮಾಡುವ ಪ್ರಕ್ರಿಯೆಗಳಾಗಿದ್ದರೆ ಹಸುರು ಜಲಜನಕದ ಉತ್ಪಾದನೆ ಪರಿಶುದ್ಧ ಪ್ರಕ್ರಿಯೆಯಾಗಿದ್ದು ಪರಿಸರಸ್ನೇಹಿ ಆಗಿದೆ. ಹಸುರು (ಗ್ರೀನ್) ಜಲಜನಕವನ್ನು ನವೀ ಕರಿಸಬಹುದಾದ ಶಕ್ತಿಯನ್ನು ಉಪಯೋಗಿಸಿ ವಿದ್ಯುದ್ವಿಭಜನೆ (ಎಲೆಕ್ಟ್ರೋಲೈಸಿಸ್) ಕ್ರಿಯೆ ಯ ಮೂಲಕ ಉತ್ಪಾದಿಸಲಾಗುತ್ತದೆ. ಇದು ಇಂಗಾಲದ ಯಾವುದೇ ಉಪ ಉತ್ಪನ್ನವನ್ನು ಹೊಂದಿಲ್ಲ. ಹಸುರು ಜಲಜನಕದ ತಯಾರಿಕೆಯ ಮೊದಲ ಹಂತದಲ್ಲಿ – ಗಾಳಿ ಗಿರಣಿ (ವಿಂಡ್ ಮಿಲ…) ಅಥವಾ ಸೌರ ಫಲಕ (ಸೋಲಾರ್ ಪ್ಯಾನೆಲ…) ದಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು, ನೀರಿನ ಮೂಲಕ ಹಾಯಿಸಿದಾಗ ನೀರು, ಜಲಜನಕ ಹಾಗೂ ಆಮ್ಲಜನಕದ ಕಣಗಳಾಗಿ ವಿಭಜನೆ ಹೊಂದುತ್ತದೆ. ಈ ಜಲಜನಕ ಕಣಗಳನ್ನು ಸಂಗ್ರಹಿಸಿ, ಅನಂತರ ಹಸುರು ಜಲಜ ನಕವನ್ನು ಇಂಧನವನ್ನಾಗಿ ಉಪಯೋಗಿಸ ಲಾಗುತ್ತದೆ. ಈ ರೀತಿ ಉತ್ಪಾದಿಸಲ್ಪಡುವ ಜಲ ಜನಕವು ಶಕ್ತಿಯ ಮೂಲವಾಗಿರದೆ ಶಕ್ತಿಯ ವಾಹಕವಾಗಿರುತ್ತದೆ. ಸೌರ ಫಲಕದ ಅಥವಾ ಗಾಳಿ ಗಿರಣಿಯ ವಿದ್ಯುತ್ ಅಗ್ಗವಾ ಗಿರುವುದರಿಂದ ಹಸುರು ಜಲಜನಕ ಉತ್ಪಾದನೆಗೆ ಹೆಚ್ಚು ಸೂಕ್ತ.
ಆಟೋಮೊಬೈಲ್ ಕ್ಷೇತ್ರಕ್ಕೆ ಹೇಗೆ ಪ್ರಯೋಜನ?
ಭಾರತೀಯ ಆಟೋಮೊಬೈಲ್ ಸಂಶೋ ಧನ ಸಂಸ್ಥೆಯ ಅಧ್ಯಯನದ ವರದಿಯ ಪ್ರಕಾರ ಸಾರಿಗೆ ಅಥವಾ ಆಟೋಮೊಬೈಲ್ ಕಾರ್ಯಕ್ಷೇತ್ರವನ್ನು ಪರಿಗಣಿಸಿದರೆ ವ್ಯಾಪ್ತಿ ಮತ್ತು ಸ್ಥಳ ಪರಿಮಾಣದ ಇರುವಿಕೆ ಈಗಿನ ವಾಹನದಲ್ಲಿ ಅತೀ ಮುಖ್ಯವಾದುದಾಗಿದೆ. ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಜಲಜನಕ ಇಂಧನ ಚಾಲಿತ ವಾಹನಗಳು ಸಮಾನ ವ್ಯಾಪ್ತಿಯನ್ನು ಹೊಂದಿದ್ದು , 4 ಪಟ್ಟು ಕಡಿಮೆ ಸ್ಥಳ ಪರಿಮಾಣವನ್ನು ಹೊಂ ದಿದೆ. ಅದಲ್ಲದೆ ಜಲಜನಕ ಇಂಧನದ ಶಕ್ತಿ ಮತ್ತು ತೂಕದ ಅನುಪಾತ ಬ್ಯಾಟರಿಗಿಂತ 10 ಪಟ್ಟು ಹೆಚ್ಚು ಆಗಿದ್ದು , ಹೆಚ್ಚಿನ ವ್ಯಾಪ್ತಿಗಾಗಿ ಹೆಚ್ಚಿನ ಜಲಜನಕ ಸೆಲ್ ಅನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಜಲಜನಕ ಚಾಲಿತ ಭಾರೀ ವಾಣಿಜ್ಯ ವಾಹನಗಳು 400ಕಿ.ಮೀ. ವ್ಯಾಪ್ತಿಗೆ ಕೇವಲ 8 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಜಲಜನಕ ಇಂಧನವು ಭಾರೀ ವಾಣಿಜ್ಯ ವಾಹನದ ವಿಭಾಗದಲ್ಲಿ ಅತೀ ಉಪಯುಕ್ತವಾಗಿದ್ದು 80 ಟನ್ ಭಾರ ಹೊರುವ ಸಾಮರ್ಥ್ಯದ ವಾಹನವು ಸರಾಸರಿ 400-500 ಕಿ.ಮೀ. ಮೈಲೇಜ್ ಕೊಡುತ್ತದೆ. ಅದೇ ರೀತಿ 130 ಟನ್ ಭಾರ ಹೊರುವ ಸಾಮರ್ಥ್ಯದ ವಾಹ ನವು 800-1,000ಕಿ.ಮೀ. ಮೈಲೇಜ್‌ನ್ನೂ 1,000 ಟನ್ ಭಾರ ಹೊರುವ ಸಾಮರ್ಥ್ಯದ ರೈಲು, ಸರಾಸರಿ 1,000 ಕಿ.ಮೀ. ಮೈಲೇಜ್ ಅನ್ನು ಕೊಡುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಜಲಜನಕ ಇಂಧನವು ಭಾರೀ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಅತೀ ಮುಖ್ಯ ಎನಿಸಿದ್ದು, ಭವಿಷ್ಯದಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ಆಳುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
ಸವಾಲುಗಳು
ಹಸುರು ಜಲಜನಕದ ಉತ್ಪಾದನೆಯಲ್ಲಿ ಬರುವ ವಿದ್ಯುದ್ವಿಭಜನೆ ಕ್ರಿಯೆಯಿಂದಾಗಿ, ಉತ್ಪಾದನೆಯ ವೆಚ್ಚವು ಅತೀ ಹೆಚ್ಚಾಗಿದ್ದು, ಸಾರಿಗೆ ವಿಭಾಗದಲ್ಲಿ ಪ್ರತೀ ಕಿ.ಮೀ. ವೆಚ್ಚವು ಬ್ಯಾಟರಿ ಚಾಲಿತ ವಾಹನಗಳಿಗಿಂತ 3 ಪಟ್ಟು ಹೆಚ್ಚಾಗಿದೆ. ಹಾಗಾಗಿ ಭಾರೀ ವಾಣಿಜ್ಯ ವಾಹ ನದ ವಿಭಾಗದಲ್ಲಿ ಜಲಜನಕ ಇಂಧನದ ಸಂಪೂರ್ಣ ಅನುಷ್ಠಾನವು ಇನ್ನೂ ಆಗಬೇ ಕಾಗಿದ್ದು, ಹಸುರು ಜಲಜನಕದ ಬಗೆಗಿನ ಸಂಶೋಧನೆ, ಉತ್ಪಾದನೆ ಹಾಗೂ ಸರಕಾರದ ಪ್ರೋತ್ಸಾಹಗಳೊಂದಿಗೆ ಕಾರ್ಯ ಗತವಾಗುವುದು ಅಸಾಧ್ಯವೇನಲ್ಲ. ಹಸುರು ಜಲಜನಕ ಇಂಧನದ ಉತ್ಪಾದನೆಗೆ ಪ್ಲಾ ಟಿನಂ, ಇರಿಡಿಯಮ್‌ನಂತಹ ಭೂಮಿಯಲ್ಲಿನ ಅಪರೂಪದ ಲೋಹಗಳು ಅಗತ್ಯವಿದ್ದು, ಅವುಗಳ ಲಭ್ಯತೆಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪರ್ಯಾಯ ಲೋ ಹಗಳು ಅಥವಾ ಮಿಶ್ರ ಲೋಹಗಳನ್ನು ಅಭಿವೃದ್ಧಿ ಪಡಿಸಿದರೆ, ಹಸುರು ಜಲಜನಕದ ಉತ್ಪಾದನೆಗೆ ಮಹತ್ವದ ತಿರುವು ಕೊಟ್ಟಂ ತಾಗುತ್ತದೆ. ಇನ್ನು ಜಲಜನಕದ ಸಂಗ್ರ ಹಣೆಯೂ ಒಂದು ಸಮಸ್ಯೆಯಾಗಿದೆ. ಯಾಕೆಂದರೆ ಇತರ ಇಂಧನಗಳಿಗೆ ಹೋಲಿ ಸಿದರೆ ಜಲಜನಕವು ಅತೀ ಹೆಚ್ಚು ಪ್ರತಿ ದ್ರವ್ಯರಾಶಿ ಶಕ್ತಿಯನ್ನು ಹೊಂದಿದ್ದು ಅದರ ಕಡಿಮೆ ಸುತ್ತುವರಿದ ತಾಪಮಾನದ ಒತ್ತಡ ದಿಂದಾಗಿ ಪ್ರತೀ ಯೂನಿಟ್ ಪರಿಮಾಣಕ್ಕೆ ಕಡಿಮೆ ಶಕ್ತಿಯ ಫಲಿತಾಂಶವನ್ನು ಕೊಡು ವುದರಿಂದ, ಹೆಚ್ಚಿನ ಶಕ್ತಿ ಸಾಂದ್ರತೆಯನ್ನು ಒಗ್ಗೂಡಿಸುವ ಸಲುವಾಗಿ, ಸುಧಾರಿತ ಶೇಖ ರಣ ವಿಧಾನಗಳನ್ನು ಅಭಿವೃದ್ದಿಪಡಿಸಬೇಕು.ಅದಲ್ಲದೆ ರೌಂಡ್ ಟ್ರಿಪ್ ದಕ್ಷತೆ. ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾ ಲಜಿಯ ಅಧ್ಯಯನದ ಪ್ರಕಾರ ಹಸುರು ಜಲಜನಕದ ಉತ್ಪಾದನೆಯಲ್ಲಿ ಶೇ. 40ಮಾತ್ರ ಫಲಕಾರಿತ್ವ ಸಾಧ್ಯ. ಇದು ಆಟೋಮೊಬೈಲ್ ಕ್ಷೇತ್ರವನ್ನು ಲಾಭದಾಯಕವಾಗಿಸಲು ಈಗಿನ ಸನ್ನಿವೇಶದಲ್ಲಿ ಬಹುಶಃ ಅಸಾಧ್ಯ ವೆನಿಸಬಹುದು.
ಈ ಎಲ್ಲ ಸವಾಲುಗಳಿಂದಾಗಿ ಹಸುರು ಜಲಜನಕ ಕ್ಷೇತ್ರಕ್ಕೆ ಸಾಕಷ್ಟು ಸಂಶೋಧನೆ, ಸುಧಾರಣೆ ಹಾಗೂ ಸರಕಾರದ ನಿರಂತರ ಪ್ರೋತ್ಸಾಹದ ಅಗತ್ಯವಿದೆ.
-ಯತೀಶ್ ರಾವ್, ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.