ಅಸಮಾನ ಹಂಚಿಕೆಯಿಂದ ಅಭಿವೃದ್ಧಿಯಾಗದ ಹೈದ್ರಾಬಾದ್‌ ಕರ್ನಾಟಕ


Team Udayavani, Sep 15, 2017, 7:45 AM IST

15-ANANANA-1.jpg

ರಾಜ್ಯದ ಇತರೆಡೆಗಳಿಗಿಂತ ಹೆಚ್ಚಾಗಿ ಇಲ್ಲಿನ ಕೃಷಿ ಕೂಲಿಕಾರರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇದರ ನೇರ ಪರಿಣಾಮ ಶಾಲಾ ವಿದ್ಯಾರ್ಥಿಗಳ ಮೇಲಾಗಿ 6ರಿಂದ 14 ವರ್ಷದ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ಅನಿವಾರ್ಯವಾಗಿ ತೊಡಗುತ್ತಿದ್ದಾರೆ.   ಅದರಲ್ಲೂ ಹೆಣ್ಣು ಮಕ್ಕಳು ವಿದ್ಯೆ ಕಲಿಯಬೇಕಾದ ಕಾಲದಲ್ಲಿ  ಕೃಷಿಯಲ್ಲಿ ನಿರತವಾಗುವುದು ಅನಿವಾರ್ಯ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ಲಾಭ ಎಲ್ಲರಿಗೂ ತಲುಪುತ್ತಿಲ್ಲ. ಕಾರಣ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆ ಎಂಬ ಕೂಪ ಅದರ ಹುಟ್ಟಿನಿಂದಲೇ ಕಾಡುತ್ತಾ ಬಂದಿದೆ. ಅಖಂಡ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿದ್ದ ಅಭಿವೃದ್ಧಿಯ ವಿವಿಧ ವಲಯಗಳಲ್ಲಿನ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೆಡೆ ಸೇರಿದ್ದರಿಂದ ಆಗ ಅಭಿವೃದ್ಧಿ ಸಂಬಂಧಿ ಅಸಮಾನತೆಗಳು ಅನಿವಾರ್ಯವಾಗಿ ದ್ದವು. ಕನ್ನಡನಾಡು 1956ರಲ್ಲಿ ಏಕೀಕರಣವಾದ ಮೇಲೆ ಮೈಸೂರು ಪ್ರದೇಶವು ಅಖಂಡ ದೇಶಕ್ಕೆ ಮಾದರಿ ಪ್ರಾಂತ ವಾಗಿತ್ತು. ಆಗ ವಸಾಹತುಶಾಹಿಯ ಹಿಡಿತಕ್ಕೊಳಪಟ್ಟ ಉತ್ತರ ಭಾಗದ ವಿವಿಧ ಪ್ರಾಂತಗಳು ಸಮೃದ್ಧಿಯಾಗಿದ್ದವು. ಆದರೆ ಹೈದ್ರಾಬಾದ್‌ ನಿಜಾಮ್‌ ಪ್ರಾಂತವು 1956ರಲ್ಲಿ ಕರ್ನಾಟಕ ಸೇರಿದ ಈ ಭಾಗದ ಜಿಲ್ಲೆಗಳಿಗೆ ಅಭಿವೃದ್ಧಿಯ ಯಾವ ಗಂಧಗಾಳಿಯು ಬೀಸಿರಲಿಲ್ಲ. ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲದ ಲಭ್ಯತೆ ಹೆಚ್ಚಾಗಿದ್ದರೂ ಈ ಜಿಲ್ಲೆಯು ಸಹ ಆಗ ಆರ್ಥಿಕವಾಗಿ ತೀವ್ರ ಹಿಂದುಳಿದಿತ್ತು. ಅಭಿವೃದ್ಧಿ ಎಂಬ ಪರಿಕಲ್ಪನೆಯ ಪ್ರಾದೇಶಿಕ ಅಸಮಾನತೆಯೂ ಈ ಭಾಗದ ಜನರಿಗೆ ನಿಖರವಾದ ಅರಿವು ಬಾರದೇ ಇದ್ದದ್ದು ಮಾತ್ರ ಒಂದೆಡೆ ವಿಪರ್ಯಾಸದ ಸಂಗತಿಯಾದರೂ ಕಳೆದ 70ವರ್ಷಗಳಲ್ಲಿ ಈ ನಾಡನ್ನು ಕಾಡುತ್ತಾ ಬಂದಿರುವ ಹಲವು ಸಮಸ್ಯೆಗಳನ್ನು ನಾವು ಎಷ್ಟರಮಟ್ಟಿಗೆ ನಿವಾರಿಸಿಕೊಂಡಿದ್ದೇವೆ ಎಂಬುದನ್ನು ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ. ಈ ದಿಶೆಯಲ್ಲಿ ಈ ಭಾಗದ ಜನರ ದುಸ್ಥಿತಿಯನ್ನು ಅನುಭವಿಸುತ್ತಿರುವ ಜನರ ನೆಲೆಯಿಂದಲೇ ಅಧಿಕಾರ ಪಡೆದುಕೊಂಡ ಯಾವ ಒಬ್ಬ ನಾಯಕನೂ ಕೂಡ ಪ್ರಾಮಾಣಿಕವಾಗಿ ಅಸಮಾನತೆ ನಿವಾರಣೆ ಮಾಡುವ ಕೆಲಸ ಮಾಡಲಿಲ್ಲ ಎಂಬುದೇ ಬಹುಕಾಲದಿಂದ ಹಾಗೇ ಉಳಿದುಕೊಂಡಿರುವ ವ್ಯಥೆ. 

ಈ ಪ್ರದೇಶದ ಜಿಲ್ಲಾವಾರು ವಲಯಗಳನ್ನು ಪರಿಶೀಲಿಸಿ ದರೂ ಅವು ಹಿಂದುಳಿದಿರುವುದೇ ಎದ್ದು ಕಾಣುತ್ತದೆ. ರಸ್ತೆಸಾರಿಗೆ, ಆರೋಗ್ಯ, ಪರಿಸರ, ಶಿಕ್ಷಣ ಮುಂತಾದ ಯಾವುದೇ ಕ್ಷೇತ್ರದ ಅಂಕಿಅಂಶಗಳ ವರದಿ ಕಡತದಲ್ಲಿ ನಮಗೆ ಅಭಿವೃದ್ಧಿಯಾಗ ದಿರುವ ಮಾಹಿತಿಯೇ ಸಿಗುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರದ ಬೆಳವಣಿಗೆಯಲ್ಲಿ ಈ ಭಾಗ ಹಿಂದುಳಿಯಲು ಗತಿಸಿದ ಘಟನೆಗಳೇ ನೂರು ಕಾರಣಗಳನ್ನು ಒದಗಿಸುತ್ತದೆ. ಈ ಶಿಕ್ಷಣದ ಬೆಳವಣಿಗೆಯ ದುಸ್ತರಕ್ಕೆ ಇತಿಹಾಸದಲ್ಲಿ ಹಲವಾರು ಕಾರಣಗಳು ಸಿಗುತ್ತವೆ. ಈ ಭಾಗದ ಜನರ ಬಡತನವನ್ನು ಪೂರ್ತಿಯಾಗಿ ತೊಡೆದು ಹಾಕುವುದು ಅತ್ಯಂತ ಅವಶ್ಯವಾಗಿ ಈ ಜನರ ಸಾಕ್ಷರತಾ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವ ಪ್ರಮಾಣಿಕ ಪ್ರಯತ್ನಗಳಾಗಿಲ್ಲವೆಂಬುದೇ ವ್ಯಥೆ. ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್‌ 2012ರ ಸ್ವಾತಂತ್ರೊತ್ಸವದ ಆಚರಣೆಯಲ್ಲಿ “”ಭಾರತವು ಜಾತಿ, ಧರ್ಮ, ಲಿಂಗ ಆಧಾರಿತವಾಗಿ ವಿಭಜನೆಯಾಗಿಲ್ಲ. ಇಲ್ಲಿ ಅಶಕ್ತ ಮತ್ತು ತುಳಿತಕ್ಕೊಳಗಾದವರನ್ನು ಸಶಕ್ತಗೊಳಿಸಲಾಗಿದೆ. ದುರ್ಬಲರಿಗೆ ಆಸರೆ ನೀಡಲಾಗಿದೆ. ದೀನ ದರಿದ್ರರಿಗೂ ನೆರವು ನೀಡಲಾಗಿದೆ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿಗೂ ಏಳ್ಗೆ ಮತ್ತು ಅಭಿವೃ ದ್ಧಿಯ ಹಸ್ತಸ್ಪರ್ಶ ನೀಡಲಾಗಿದೆ. ಈ ದೇಶದಲ್ಲಿ ಯಾವುದೇ ಪ್ರಜೆಯನ್ನಾಗಲಿ, ಪ್ರದೇಶವನ್ನಾಗಲಿ ಅಭಿವೃದ್ಧಿ ಮತ್ತು ಪ್ರಗತಿಯ ಪಯಣದಿಂದ ಹೊರಗಿಟ್ಟಲ್ಲ. ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಘನತೆಯಿಂದ, ಆತ್ಮಗೌರವದಿಂದ ಮತ್ತು ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು” ಎಂದು ಹೇಳಿದ್ದರು.

1990ರಲ್ಲಿ ಸರ್ಕಾರ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಮಂಡಳಿಯನ್ನು ಸ್ಥಾಪಿಸಿತು. ನಂತರ ಪ್ರಾದೇಶಿಕ ಅಸಮತೋಲ ನವನ್ನು ಅಧ್ಯಯನ ಮಾಡಿ ಅದರ ನಿವಾರಣೆಗೆ ಪರಿಹಾ ರೋಪಾಯಗಳನ್ನು ಕಂಡುಕೊಳ್ಳಲು ಡಾ.ಡಿ.ಎಂ. ನಂಜುಂಡಪ್ಪ ನವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಅಧಿಕಾರ ಸಮಿತಿಯನ್ನು 2000ನೇ ಇಸ್ವಿಯಲ್ಲಿ ನೇಮಿಸಲಾಯಿತು. ಈ ಸಮಿತಿಯು 2002ರಲ್ಲಿ ನೀಡಿದ ಒಂದು ಶಿಫಾರಸ್ಸಿನಂತೆ 2007-08ರ ಅವಧಿಯಲ್ಲಿ 31ಸಾವಿರ ಕೋಟಿ ರೂ.ಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಾ ಯಿತು. ಒಟ್ಟಾರೆ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಸಮಸ್ಯೆಯು ಇನ್ನೂ ಬಗೆಹರಿದಿಲ್ಲ. 

ಸಾಕ್ಷರತೆ ವಿಷಯದಲ್ಲಿ ಯಾದಗಿರಿ ಜಿಲ್ಲೆಯು ಶೇ.48.49 ರಷ್ಟು ಸಾಕ್ಷರತೆ ಪ್ರಮಾಣ ಹೊಂದಿ ರಾಜ್ಯದಲ್ಲಿಯೇ ಅತಿ ಹಿಂದುಳಿದಿದೆ. ಈ ಭಾಗದಲ್ಲಿ ಮಾನವ ಸಂಪನ್ಮೂಲವು ಸಹ ಹೇರಳ ವಾಗಿದೆ. ಆದರೆ ಉದ್ಯೋಗಾವಕಾಶದ ಕೊರತೆಯು ಅಷ್ಟೇ ಪ್ರಮಾಣದಲ್ಲಿದೆ. ಇಲ್ಲಿಗೆ ವಿವಿಧೆಡೆಗಳಿಂದ ಉದ್ಯೋಗ ಸಂಸ್ಥೆಗಳು ಧಾವಿಸಿ ಬರಲು ಸರ್ಕಾರ ಹಲವಾರು ರಿಯಾಯಿತಿಗಳನ್ನು ಈ ಸಂಸ್ಥೆಗಳಿಗೆ ಘೋಷಿಸಬೇಕಿದೆ. ಈ ಭಾಗದ ಸಮಗ್ರ ಅಭಿವೃದ್ಧಿಯ ಬಗ್ಗೆ ಸದಾ ನಿಗಾವಹಿಸಲು ಕಾರ್ಯ ಪಡೆಯೊಂದನ್ನು ಸಹ ರಚನೆ ಮಾಡುವ ಅಗತ್ಯತೆಯಿದೆ. ಡಾ.ನಂಜುಂಡಪ್ಪ ವರದಿಯ ಅನುಷ್ಟಾನ ಅವಧಿಯನ್ನು ವಿಸ್ತರಿಸಬೇಕು. ಸಂವಿಧಾನದ 371(ಜೆ) ಕಲಂ ಅನ್ವಯ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಬೇಕು. ಈಗಾಗಲೇ ಸವಲತ್ತು ಪಡೆದು ಕೊಂಡ ವಿಧರ್ಭ, ಮರಾಠವಾಡಾ ಮಾದರಿ ಅಭಿವೃದ್ಧಿ ಕೊರತೆ ಯಲ್ಲಿ ಆದ ಲೋಪ ದೋಷಗಳನ್ನು ಗುರುತಿಸಬೇಕು. ರಾಜ್ಯದ ಇತರೆಡೆಗಳಿಗಿಂತ ಹೆಚ್ಚಾಗಿ ಇಲ್ಲಿನ ಕೃಷಿ ಕೂಲಿಕಾರರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇದರ ನೇರ ಪರಿಣಾಮ ಶಾಲಾ ವಿದ್ಯಾರ್ಥಿಗಳ ಮೇಲಾಗಿ 6ರಿಂದ14 ವರ್ಷದ ಮಕ್ಕಳು ಕೃಷಿ ಚಟುವಟಿಕೆ ಗಳಲ್ಲಿ ಅನಿವಾರ್ಯವಾಗಿ ಅದರಲ್ಲೂ ಹೆಣ್ಣು ಮಕ್ಕಳು ವಿದ್ಯೆ ಕಲಿಯಬೇಕಾದ ಕಾಲದಲ್ಲಿ  ಕೃಷಿಯಲ್ಲಿ ನಿರತವಾಗುವುದು ಅನಿವಾರ್ಯ ಎಂಬಂತಾಗಿದೆ. ವಿಶ್ವದ ಬೃಹತ್‌ ಉದ್ಯೋಗ ಖಾತರಿ ಯೋಜನೆ ರಾಷ್ಟ್ರದ ಎಲ್ಲೆಡೆ ವ್ಯಾಪಕ ಪ್ರಚಾರದೊಂದಿಗೆ ಜಾರಿಗೊಳ್ಳುತ್ತಿದ್ದರೂ ಈ ಭಾಗದ ಕೃಷಿ ಕಾರ್ಮಿಕರು ಮಾತ್ರ ಉದ್ಯೋಗ ಅರಸಿ ಗೋವಾ, ಮಂಗಳೂರು ಮತ್ತು ಹೈದ್ರಾ ಬಾದ್‌ಗಳಲ್ಲದೇ ಇನ್ನು ಹಲವಾರು ಕಡೆ ಕುಟುಂಬ ಸಮೇತ ಗುಳೆ ಹೋಗುವುದು ಅನಿವಾರ್ಯವಾಗಿ ಬಿಟ್ಟಿದೆ. ಈ ಸಾಂಸ್ಥಿಕ ಕುಂದುಕೊರತೆಗಳನ್ನು ಸರಿಪಡಿಸದಿದ್ದರೆ ಸರ್ಕಾರದ ಗರಿಷ್ಟ ಕಾರ್ಯಕ್ರಮಗಳು ಯಾರಿಗೆ ತಲುಪಬೇಕಾಗಿತ್ತೋ ಅವರಿಗೆ ತಲುಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ.

ಕೊನೆಯದಾಗಿ ಈ ಪ್ರದೇಶದ ಜನರಿಗೆ ಸೆಪ್ಟೆಂಬರ್‌ ತಿಂಗಳು ಮಾತ್ರ ವಿಶೇಷ. ಭಾರತೀಯರಿಗೆ ಸ್ವಾತಂತ್ರ್ಯ ಬಂದಿದ್ದರೂ ಈ ಭಾಗದ ಜನರಿಗೆ ಮಾತ್ರ ಸ್ವಾತಂತ್ರ್ಯ ಬಂದಿರಲಿಲ್ಲ. 1948ರ ಸೆಪ್ಟೆಂಬರ್‌ನಲ್ಲಿ ನಡೆದ ಪೋಲಿಸ್‌ ಕ್ರಮದ ಕಾಯಿದೆಯು ಈ ಭಾಗವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ಅನುವು ಮಾಡಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ಮುಸ್ಲಿಂ ಲಿಗ್‌ ಹಾಗು ಸಿಖ್‌ ಸಮುದಾಯಗಳು ಆಗಿನ ವೈಸ್‌ರಾಯ್‌ಯಾಗಿದ್ದ ಲಾರ್ಡ್‌ ಮೌಂಟ್‌ಬ್ಯಾಟನ್‌ರ ಜೊತೆಗೆ ಮಾಡಿಕೊಂಡ ಒಪ್ಪಂದ ಆಧರಿಸಿ ಮೌಂಟ್‌ ಬ್ಯಾಟನ್‌ ಪ್ಲಾನ್‌ ರೂಪಗೊಂಡಿತು. ಅದರ ಪ್ರಕಾರ ಆಗ ಅಸ್ತಿತ್ವದಲ್ಲಿದ್ದ 636 ರಾಜಪ್ರಭು ತ್ವಗಳ ಜತೆಗಿನ ಬ್ರಿಟಿಷರ ಒಪ್ಪಂದಗಳು ಕೊನೆಗೊಳ್ಳುವುದರಿಂದ ಅಲ್ಲಿ ರಾಜಪ್ರಭುತ್ವದ ಮುಂದೆ ಭಾರತದ ಅಥವಾ ಪಾಕಿಸ್ತಾನದ ಜೊತೆ ಸೇರುವುದು ಅಥವಾ ಸ್ವತಂತ್ರವಾಗಿ ಉಳಿಯುವ ಅವಕಾಶ ನೀಡಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ನೆಹರು ಪ್ರಧಾನಿಯಾಗಿ, ಸರ್ದಾರ್‌ ಪಟೇಲರು ದೇಶದ  ಉಪ ಪ್ರಧಾನಿಯಾದರು. 

ಆರಂಭದಲ್ಲಿಯೇ ಮೈಸೂರು ಸೇರಿ ದಂತೆ 565 ಪ್ರಾಂತಗಳ ರಾಜರು ಈ ಒಕ್ಕೂಟ ಸೇರಲು ಪ್ರತಿ ರೋಧಿಸಿದ್ದು ಈಗ ಅದು ಇತಿಹಾಸ. 1998ರಲ್ಲಿಯೇ ಜೆ.ಎಚ್‌. ಪಟೇಲ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹೈದ್ರಾಬಾದ್‌ ಕರ್ನಾಟಕ ವಿಮೋಚನೆಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಇದರ ಆಚರಣೆಯ ಪ್ರೇರಣೆಗೆ ಅಂದಿನ ವಿಧಾನ ಪರಿಷತ್‌ನ ಸಭಾಪತಿಗಳಾಗಿದ್ದ ಡಿ.ಬಿ.ಕಲ್ಮಣಕರ್‌ ಅವರ ಒತ್ತಾಸೆ ಕಾರಣ. ಅಂದಿನಿಂದ ಈ ವಿಶೇಷವಾದ ಈ ದಿನವನ್ನು ಸೆಪ್ಟಂಬರ್‌ 17ರಂದು ಹೈದ್ರಾಬಾದ್‌ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ.

ಮಂಜುನಾಥ ಉಲುವತ್ತಿ ಶೆಟ್ಟರ್‌

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.