ಗಿರಡ್ಡಿಯವರ ಅನುಪಸ್ಥಿತಿಯಲ್ಲಿ “ಸಾಹಿತ್ಯ ಸಂಭ್ರಮ’


Team Udayavani, Jan 18, 2019, 12:30 AM IST

28.jpg

2013 ರಲ್ಲಿ ಡಾ. ಗಿರಡ್ಡಿ ಗೋಂದರಾಜ ಅವರು ಆರಂಭಿಸಿದ ಧಾರವಾಡ ಸಾಹಿತ್ಯ ಸಂಭ್ರಮವು ಈಗ ಏಳನೇ ಆವೃತ್ತಿಗೆ ಕಾಲಿಟ್ಟಿದೆ. ಡಾ. ಗಿರಡ್ಡಿ ಗೋವಿಂದರಾಜ ಅವರ ಅನುಪಸ್ಥಿತಿಯಲ್ಲಿ ಸಂಭ್ರಮದ ಏಳನೇ ಆವೃತ್ತಿಯ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆಯನ್ನು ರಾಘವೇಂದ್ರ ಪಾಟೀಲರು ಹೊತ್ತಿದ್ದಾರೆ. ಡಾ. ಗಿರಡ್ಡಿ ಗೋವಿಂದರಾಜ ಅವರು ಧಾರವಾಡ ಸಾಹಿತ್ಯ ಸಂಭ್ರಮವನ್ನು ಯಾವ ಪರಿಕಲ್ಪನೆಯಲ್ಲಿ ಆರಂಭಿಸಿ, ನಡೆಸಿಕೊಂಡು ಬಂದರೋ ಆ ಎಲ್ಲ ಆಶಯಗಳನ್ನು ತಪ್ಪದೇ ಪಾಲಿಸಿಕೊಂಡು ಸಂಭ್ರಮವನ್ನು ಇನ್ನುಮೇಲೆಯೂ ಮುನ್ನಡೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಈಗ ಅವರ ಆಪ್ತರ ಮೇಲಿದೆ.

2013ರಲ್ಲಿ ಡಾ. ಗಿರಡ್ಡಿ ಗೋವಿಂದರಾಜ್‌ ಅವರು ಮೊದಲ ಬಾರಿಗೆ, ಸಂಸ್ಕೃತಿ ಸಂವಾದ ಪರಿಕಲ್ಪನೆಯಲ್ಲಿ “ಸಾಹಿತ್ಯ ಸಂಭ್ರಮ’ ಆಯೋಜಿಸುವ ಕುರಿತು ಮಾತನಾಡಿದಾಗ, ಸಾಹಿತ್ಯವನ್ನು ಸಂಭ್ರಮಿಸುವಂತಹದು ಏನಿರುತ್ತದೆ? ಅಲ್ಲದೇ ಹಲವು ನಿಬಂಧನೆ ಗಳನ್ನು ಹಾಕಿಕೊಂಡು ಇಂತಹ ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಾದರೂ ಏನಿದೆ? ಎಂಬಿತ್ಯಾದಿ ಪ್ರಶ್ನೆಗಳು ಹಲವರಿಂದ ವ್ಯಕ್ತವಾಗಿದ್ದವು. ಈಗ ಅದೇ “ಸಾಹಿತ್ಯ ಸಂಭ್ರಮ’ ಇಂತಹ ಪ್ರಶ್ನೆಗಳಿಗೆ ಕ್ರಿಯೆ ಮೂಲಕ ಉತ್ತರ ನೀಡುತ್ತ ಆರು ವರ್ಷ ಯಶಸ್ವಿಯಾಗಿ ಏಳನೇ ಆವೃತ್ತಿಯ ಸಂಭ್ರಮದಲ್ಲಿದೆ.

ಏಳನೇ ಆವೃತ್ತಿಯ ಪ್ರಸ್ತುತ ಸಂದರ್ಭದಲ್ಲಿ “ಸಾಹಿತ್ಯ ಸಂಭ್ರಮ’ಕ್ಕೆ ಪ್ರೇರಣೆಯಾದ ಅಂಶಗಳು ಹಾಗೂ ಇದನ್ನು ಕಟ್ಟಿ ಬೆಳೆಸಿದ ಪ್ರಮುಖ ಸಂಘಟಕರಾದ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಅನುಪಸ್ಥಿತಿ ಕುರಿತು ಅವಲೋಕಿಸುವ ಅಗತ್ಯತೆ ಇದ್ದೇ ಇದೆ. ಸಾಹಿತ್ಯ ಕ್ಷೇತ್ರದ ವಿವಿಧ ಮಗ್ಗಲುಗಳನ್ನು ಕಸಿತಗೊಳಿಸುವಲ್ಲಿ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಿನ್ನ ನೆಲೆಗಳನ್ನು ಶೋಧಿಸುವ ನಿಟ್ಟಿನಲ್ಲಿ ಡಾ. ಗಿರಡ್ಡಿ ಗೋವಿಂದರಾಜ ಅವರ ತುಡಿತ ನಿರಂತರ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ಡಾ. ಗಿರಡ್ಡಿ ಗೋವಿಂದರಾಜ, ಲೋಹಿತ ನಾಯ್ಕರ, ಸಮೀರ ಜೋಶಿ ಇನ್ನಿತರರು ಜೈಪುರದ “ಲಿಟರೇಚರ್‌ ಫೆಸ್ಟಿವಲ್‌’ನಲ್ಲಿ ಭಾಗವಹಿಸಿದಾಗ ಅದರ ವೈವಿಧ್ಯತೆ, ಅರ್ಥಪೂರ್ಣತೆ ಮನಗಂಡು, ಕನ್ನಡದಲ್ಲೂ ಇಂತಹವೊಂದು ಸಾಹಿತ್ಯ-ಸಂಸ್ಕೃತಿ ಸಂವಾದದ ಹಬ್ಬ ನಡೆಯಬೇಕು ಎಂದು ನಿರ್ಧರಿಸಿಕೊಂಡಿದ್ದರು. ಹೀಗೆ ದೊರೆತ ಪ್ರೇರಣೆಯೇ ಸಾಹಿತ್ಯ ಸಂಭ್ರಮವಾಗಿ ಧಾರವಾಡಲ್ಲಿ ವೇದಿಕೆ ನಿರ್ಮಿಸಿತು. ಆದರೆ ಜೈಪುರದ “ಲಿಟರೇಚರ್‌ ಫೆಸ್ಟಿವಲ್‌’ಅನ್ನು ಯಥಾವತ್‌ ನಕಲು ಮಾಡುವುದು ಡಾ. ಗಿರಡ್ಡಿ ಗೋವಿಂದರಾಜ ಅವರ ಉದ್ದೇಶವಾಗಿರಲಿಲ್ಲ. ಅಲ್ಲಿನ ಹಲವು ಅಂಶಗಳನ್ನು ಮಾರ್ಪಾಡು ಮಾಡಿಕೊಂಡು, ವರ್ತಮಾನದಲ್ಲಿ ಕನ್ನಡಕ್ಕೆ ಅಗತ್ಯವಿರುವ ಸಾಂಸ್ಕೃತಿಕ ಪುನರುತ್ಥಾನ ಮಾಡುವುದು ಅವರ ಉದ್ದೇಶವಾಗಿತ್ತು. ಆ ಎಲ್ಲ ಹೊಸ ಪರಿಕಲ್ಪನೆ, ಚಟುವಟಿಕೆಗಳನ್ನು ಡಾ. ಗಿರಡ್ಡಿ ಗೋವಿಂದರಾಜ ಅವರು ಸಾಹಿತ್ಯ ಸಂಭ್ರಮದ ಮೂಲಕ ಸಾಕಾರಗೊಳಿಸಿದರು. ಆದರೆ ಅವರು ಸಾಹಿತ್ಯ ಸಂಭ್ರಮದ ಆರನೇ ಆವೃತ್ತಿ ಮುಗಿಸಿ ನಮ್ಮನ್ನಗಲಿದ್ದಾರೆ. 

ಡಾ. ಗಿರಡ್ಡಿ ಗೋವಿಂದರಾಜ ಅವರ ಅನುಪಸ್ಥಿತಿಯಲ್ಲಿ ಸಂಭ್ರಮದ ಏಳನೇ ಆವೃತ್ತಿಯ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆಯನ್ನು ರಾಘವೇಂದ್ರ ಪಾಟೀಲರು ಹೊತ್ತಿದ್ದಾರೆ. “ಪ್ರಸ್ತುತ ಸಂದರ್ಭದಲ್ಲಿ ಡಾ. ಗಿರಡ್ಡಿ ಗೋವಿಂದರಾಜ ಅವರು ಇಲ್ಲದಿರು ವುದೇ ದೊಡ್ಡ ಕೊರತೆ. ಅವರು ಯಾವುದೇ ನಿರ್ಧಾರ ತೆಗೆದು ಕೊಂಡರೂ ಅದರ ಹಿಂದೆ ಚಿಂತನ-ಮಂಥನ ಇರುತ್ತಿತ್ತು. ಆ ಚಿಂತನವೇ ಮೌಲಿಕ ಚಟುವಟಿಕೆ ನಡೆಸಲು ಮಾರ್ಗವಾಗುತ್ತಿತ್ತು. ಹಾಗಾಗಿ ನಮ್ಮಂತಹ ಅನೇಕ ಸಮಾನ ಮನಸ್ಕರಿಗೆ ಅವರು ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಯ ತರಬೇತಿ ಕೇಂದ್ರವಾಗಿದ್ದರು. ಅವರ ಅಂತಹ ಗರಡಿಯಲ್ಲಿ ಪಳಗಿದ ನಾನು ತಕ್ಕ ಮಟ್ಟಿಗಾದರೂ ಅವರ ಸಾಂಸ್ಕೃತಿಕ ದೃಷ್ಟಿ ಅಳವಡಿಸಕೊಂಡಿದ್ದೇನೆ ಎಂದು ನಂಬಿದ್ದೇನೆ. ಸಾಹಿತ್ಯ ಸಂಭ್ರಮ ಮಾತ್ರವಲ್ಲ ಧಾರವಾಡದಲ್ಲಿ ನಡೆಯುವ ಹಲವು ಸಾಹಿತ್ಯಿಕ ಚಟುವಟಿಕೆಗಳಿಗೆ ಅವರು ಕೇಂದ್ರ ಬಿಂದುವಾಗಿದ್ದರು. ಎಲ್ಲ ವರ್ಗದ, ಮನಸ್ಥಿತಿಯ ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೇ ಕೊಂಡೊಯ್ಯುವ ಶಕ್ತಿ ಅವರಿಗಿತ್ತು. ಹಾಗಾಗಿಯೇ ಸಾಹಿತ್ಯ ಸಂಭ್ರಮದಂತಹ ಬೃಹತ್‌ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಲು ಅವರಿಗೆ ಸಾಧ್ಯವಾಯಿತು. ಈ ಸಾಧ್ಯತೆಯನ್ನು ಅವರು ಕನ್ನಡ ಸಾಹಿತ್ಯ- ಸಂಸ್ಕೃತಿ ಕಟ್ಟಲು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದರು. ಸಂಭ್ರಮದ ಪ್ರತಿಯೊಂದು ಗೋಷ್ಠಿಗಳ ನಿರ್ವಹಣೆ, ಶಿಸ್ತು, ಸಂವಾದಕರ ನಿರ್ವ ಹಣೆ, ಇಡೀ ಕಾರ್ಯಕ್ರಮದ ಸಾಧ್ಯತೆ ಮುಂತಾದ ವಿಷಯಗಳ ಕುರಿತು ಅವರು ನನ್ನಂತಹ ಅನೇಕರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಖಚಿತ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು. ಒಮ್ಮೊಮ್ಮೆ ಸಂಭ್ರಮದ ಹಿತಾಸಕ್ತಿಗಾಗಿ, ಉದ್ದೇಶ ಸಾಕಾರಕ್ಕಾಗಿ ಅವರು ಕಠಿಣ ನಿರ್ಧಾರಗಳನ್ನೂ ತೆಗೆದುಕೊಂಡು, ಆ ನಿರ್ಧಾರ- ವಿಚಾರಗಳನ್ನು ಬಹಿರಂಗ ವಾ ಗಿಯೂ ವ್ಯಕ್ತಪಡಿಸುತ್ತಿದ್ದರು. ಆದರೆ, ಅವರಿಲ್ಲದ ಈ ಸಂದರ್ಭದಲ್ಲಿ ಅವರ ಇಂತಹ ನಿಲುವುಗಳನ್ನು ನಾವು ವ್ಯಕ್ತಪಡಿಸು ವುದು, ಪ್ರದರ್ಶಿಸುವುದು ಅಸಾಧ್ಯದ ಮಾತು. ಹಾಗಾಗಿ ಸಾಹಿತ್ಯ ಸಂಭ್ರಮದ ಏಳನೇ ಆವೃತ್ತಿಗೆ ಇದೊಂದು ದೊಡ್ಡ ಕೊರತೆ. 

ಆದರೆ ಡಾ. ಗಿರಡ್ಡಿ ಗೋವಿಂದರಾಜ ಅವರು ಯಾವ ಪರಿಕಲ್ಪನೆಯಲ್ಲಿ ಸಂಭ್ರಮವನ್ನು ಆರಂಭಿಸಿ, ನಡೆಸಿಕೊಂಡು ಬಂದರೋ ಆ ಎಲ್ಲ ಆಶಯಗಳನ್ನು ತಪ್ಪದೇ ಪಾಲಿಸಿಕೊಂಡು ಸಂಭ್ರಮವನ್ನು ಇನ್ನು ಮೇಲೆಯೂ ಮುನ್ನಡೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಅವರ ಮಟ್ಟಕ್ಕಲ್ಲದಿದ್ದರೂ ಸಂಭ್ರಮದ ಎಲ್ಲ ಉದ್ದೇಶಗಳನ್ನು, ಆಶಯಗಳನ್ನು ನಾನು ಸಾಧ್ಯವಾದ ಮಟ್ಟಿಗೆ ಉಳಿಸಿ-ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ’ ಎಂದು ರಾಘವೇಂದ್ರ ಪಾಟೀಲ ಅವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಜಗತ್ತು ಕಾಲಕಾಲಕ್ಕೆ ಹೊಸ ಪರಿಕಲ್ಪನೆ, ಸಂವೇದನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತ ಸಾಧಕವಾದದ್ದನ್ನು ಅಳವಡಿಸಿಕೊಂಡು, ಬಾಧಕವಾದ ಅಂಶಗಳನ್ನು ನಿರ್ಲಕ್ಷಿಸುತ್ತ ಬಂದಿದೆ. ಅದರಂತೆ ಅನೇಕ ಚಳವಳಿ- ಸಂವೇದನಾತ್ಮಕ ಆಶಯಗಳನ್ನು ಒಳಗೊಂಡ ಸಾಹಿತ್ಯ ಕನ್ನಡದಲ್ಲಿ ಹೇರಳವಾಗಿದೆ. ಆದರೆ ರಚನೆಗೊಂಡ ಸಾಹಿತ್ಯ ವಿಮರ್ಶೆ, ಅವಲೋಕನ, ಸಂವಾದಕ್ಕೆ ಎಡೆಯಾಗುವುದು “ಸಂಭ್ರಮದಂತಹ’ ಗಂಭೀರ ವೇದಿಕೆಗಳಲ್ಲಿ ಮಾತ್ರ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವ ಸರ್ಕಾರ ಪೋಷಿತ ಜಾತ್ರೆಯಲ್ಲಿ ಇದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಂಭ್ರಮದಂತಹ ಗಂಭೀರವಾದ ಹಾಗೂ ಶಿಸ್ತುಬದ್ಧವಾದ ವೇದಿಕೆಗಳು ರಾಜ್ಯದ ಹಲವೆಡೆ ತಲೆ ಎತ್ತಿದರೆ ಕನ್ನಡ ಸಾಹಿತ್ಯ ಸಂವಾದ ಕ್ರಿಯೆ ಇನ್ನೋ ಉತ್ತುಂಗದ ಸ್ಥಿತಿಗೆ ಏರಬಹುದು. ಪುಸ್ತಕದಲ್ಲೇ ಉಳಿದು ಧೂಳುಹಿಡಿದ ಹಲವು ವಿಚಾರಗಳು ಊರ್ಜಿತಾ ವಸ್ಥೆಗೆ ಬಂದು ಸಾಹಿತ್ಯ ವರ್ತಮಾನಕ್ಕೆ ದನಿಯಾಗಬಹುದು.  ಈ ನಿಟ್ಟಿನಲ್ಲಿ ಧಾರಾವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನಂತಹ ಸಂಘಟನೆಗಳಿಗೆ ಸರ್ಕಾರದ ಕನ್ನಡ-ಸಂಸ್ಕೃತಿ ಇಲಾಖೆ ಅಗತ್ಯ ಅನುದಾನ ನೀಡಿ, ಹಸ್ತಕ್ಷೇಪ ಮಾಡದೇ ಸ್ವಾಯತ್ತತೆ ನೀಡುವುದು ಅಗತ್ಯ.

ಕಲೆ-ಸಾಹಿತ್ಯದ ರಸದೌತಣ
 ಧಾರವಾಡ ಸಾಹಿತ್ಯ ಸಂಭ್ರಮ ಎಂದರೆ ಸಂಸ್ಕೃತಿ ಸಂವಾದದ ಭಿನ್ನ ನೆಲೆ ಎನ್ನುವುದನ್ನು ಕನ್ನಡದ ಅನೇಕ ವಿಮರ್ಶಕರು, ಪ್ರಾಜ್ಞರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಪ್ರತಿವರ್ಷ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಕಾರಣವಿಷ್ಟೇ, ಸಾಹಿತ್ಯ ಸಂಭ್ರಮ ಪ್ರತಿ ವರ್ಷ ಸಾಹಿತ್ಯಾಸಕ್ತರಿಗೆ ಉಣಬಡಿಸುವ ಭಿನ್ನ ಗೋಷ್ಠಿ; ಸಂವಾದ, ಕಲೆ, ನಾಟಕ, ಕಾವ್ಯ-ಸಂಗೀತ ಪ್ರಸ್ತುತಿಯ ರಸದೌತಣ! ಪ್ರಾಯಶಃ ಈ ವಿಷಯದಲ್ಲಿ ಸಂಭ್ರಮಕ್ಕೆ ತಲೆದೂಗದವರೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಸಂಭ್ರಮಕ್ಕೆ ಸಾûಾತ್‌ ಬರಲಾಗದ ದೇಶದಲ್ಲಿರುವ ಸಾವಿರಾರು ಆಸಕ್ತರು ಕೂಡ ಜಾಲತಾಣದಲ್ಲಿ ದೊರೆಯುವ ನೇರ ಪ್ರಸಾರದಲ್ಲಿ ನೋಡಿ ತೃಪ್ತಿಪಡುತ್ತಾರೆ. ಇದು ಸಂಭ್ರಮದ ಹೆಚ್ಚುಗಾರಿಕೆ ಎನ್ನಬಹುದು. ಹಾಗಾಗಿ ಸಂಭ್ರಮ ಕನ್ನಡಿಗರ ಪ್ರಮುಖ ಸಂಸ್ಕೃತಿ ಹಬ್ಬವಾಗಿ ಪರಿಣಮಿಸಿದೆ.

“ಭಾವ ಸಂಚಯ’ ಶೇಷ
ಸಂಭ್ರಮದ ಏಳನೇ ಆವೃತ್ತಿಯನ್ನು ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಸಮರ್ಪಿಸಲಾಗಿದ್ದು, ಅವರ ಸ್ಮರಣೆಗಾಗಿ ಗೋಷ್ಠಿಯೊಂದನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಅಲ್ಲದೇ ಡಾ. ಗಿರಡ್ಡಿ ಗೋವಿಂದರಾಜ ಅವರ ವಿವಿಧ ಚಟುವಟಿಕೆಗಳನ್ನು ದಾಖಲಿಸುವ “ಭಾವ ಸಂಚಯ’ ಎಂಬ ಭಾವಚಿತ್ರಗಳ ಪ್ರದರ್ಶನವನ್ನು ಈ ಬಾರಿ ಆಯೋಜಿಸಲಾಗಿದೆ. ಇದು ಡಾ. ಗಿರಡ್ಡಿ ಅವರಿಗೆ ಸಲ್ಲಿಸುವ ಭಾವನಮನ ಎನ್ನುತ್ತಾರೆ ರಾಘವೇಂದ್ರ ಪಾಟೀಲ ಅವರು.

ಕುಮಾರ ಬೇಂದ್ರೆ

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

5-mudhol

Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.