ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ


Team Udayavani, May 17, 2022, 6:10 AM IST

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ದೇಶದಲ್ಲಿ 14.5 ಕೋಟಿಗೂ ಅಧಿಕ ಕೃಷಿ ಕುಟುಂಬಗಳಿವೆ. ಭಾರತ ಆತ್ಮನಿರ್ಭರವಾಗಲು ಕೃಷಿಯಲ್ಲಿ ಸದೃಢತೆ ಸಾಧಿಸುವುದು ಅವಶ್ಯ. ಆದ್ದರಿಂದ ಕೇಂದ್ರ ಸರಕಾರವು ರೈತರ ಆದಾಯ ದ್ವಿಗುಣಗೊಳಿಸಲು ಹೊಸ ನೀತಿಗಳನ್ನು ಅನುಸರಿಸುತ್ತಿದೆ. ಬೆಳೆ ಉತ್ಪಾದಕತೆ ವೃದ್ದಿಸುವುದು, ಪಶು ಸಂಗೋಪನೆಗೆ ಉತ್ತೇಜನ. ಸಂಪನ್ಮೂಲಗಳ ಸದ್ಭಳಕೆ, ಉತ್ಪಾದನ ವೆಚ್ಚಕ್ಕೆ ಕಡಿವಾಣ, ಸಮಗ್ರ ಕೃಷಿ ಅಳವಡಿಕೆ, ಲಾಭದಾಯಕ ಬೆಳೆಗಳ ಪ್ರೋತ್ಸಾಹ, ರೈತರಿಗೆ ದೊರೆಯುವ ಮೂಲಬೆಲೆ ಮೌಲ್ಯ ವೃದ್ದಿ ಹಾಗೂ ಕೃಷಿ ನವೋ ದ್ಯಮಕ್ಕೆ ಪ್ರೇರೇಪಣೆಯಂತಹ ಪರಿಕಲ್ಪನೆಗಳೊಂದಿಗೆ ಹಿರಿಯ ಐಎಎಸ್‌ ಅಧಿಕಾರಿ ಅಶೋಕ ದಳವಾಯಿಯವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವೀಗುಣ ಅಭಿಯಾನ ಆರಂಭವಾಗಿದೆ.

ಉದ್ಯಮ ಹಾಗೂ ಸೇವಾ ವಲಯಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರ ಕಡಿಮೆ ಬೆಳವಣಿಗೆಯಾಗಿದೆ. 1951-52ರಿಂದ ಇಲ್ಲಿಯವರೆಗೆ ಉದ್ಯಮ ಕ್ಷೇತ್ರ ಶೇ. 6.1 ಹಾಗೂ ಸೇವಾ ವಲಯ ಶೇ.6.2ರಷ್ಟು ಅಭಿವೃದ್ದಿಯಾಗಿದೆ. ಆದರೆ ಕೃಷಿ ವಲಯದ ಪ್ರಗತಿ ಶೇ 2.9ರಷ್ಟು ಮಾತ್ರ. ಇದರ ಫ‌ಲವಾಗಿ ದೇಶದ ಜಿಡಿಪಿಯಲ್ಲಿ ಕೃಷಿ ಪಾಲು ಕುಸಿ ದಿದೆ. ಡಾ| ಎಂ.ಎಸ್‌. ಸ್ವಾಮಿನಾಥನ್‌ ವರದಿ ಪ್ರಕಾರ ದೇಶದ ಶೇ.58ರಷ್ಟು ಜನಸಂಖ್ಯೆಗೆ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮ ಗಳೇ ಉದ್ಯೋಗ ಸೃಷ್ಟಿಸುತ್ತಿವೆ. ಹೀಗಾಗಿ ಕೃಷಿಗೆ ವೃತ್ತಿಪರತೆ ತುಂಬಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು. ಉತ್ಪಾದನ ಕೇಂದ್ರಿತವಾದ ಕೃಷಿಯು ಆದಾಯ ಕೇಂದ್ರಿತವಾಗಿಸಬೇಕು. ತಂತ್ರಜ್ಞಾನದ ಬಳಕೆ ಹಾಗೂ ಸುಧಾರಿತ ಕೃಷಿ ಪದ್ಧತಿಯು ಉತ್ಪಾದನ ವೆಚ್ಚಕ್ಕೆ ಕಡಿವಾಣ ಹಾಕುವ ಜತೆಗೆ ಉತ್ತಮ ಇಳು ವರಿಯನ್ನು ನೀಡುತ್ತದೆ. ಕೇಂದ್ರ ಸರಕಾರ ರೈತನಿಗೆ ಕೃಷಿಕಾರ್ಯ ಗಳಿಗೆ ಸಹಾಯವಾಗಲು ಪಿ.ಎಂ.ಕಿಸಾನ್‌ ಸಮ್ಮಾನ ಯೋಜನೆ ಯಡಿ ವಾರ್ಷಿಕ 6,000ರೂ.ಗಳ ಸಹಾಯಧನ ನೀಡುತ್ತಿದೆ. ರಾಜ್ಯ ಸರಕಾರವು ಹೆಚ್ಚುವರಿಯಾಗಿ 4,000 ರೂ. ನೀಡುತ್ತಿದೆ.

ಸಾಂಪ್ರದಾಯಿಕ ನೀರಾವರಿಯಿಂದ ಇಳುವರಿ ಕಡಿಮೆಯಾಗುವ ಜತೆಗೆ ನೀರು ಪೋಲಾಗುತ್ತದೆ. ಹನಿ ತುಂತುರು ನೀರಾವರಿ ಅಳವಡಿಸಿಕೊಂಡರೆ ಕಡಿಮೆ ನೀರಿನಲ್ಲಿ ಹೆಚ್ಚು ಭೂಮಿಯಲ್ಲಿ ಕೃಷಿ ಮಾಡಿ ಅಧಿಕ ಇಳುವರಿ ಪಡೆಯಬಹುದು. ಆದ್ದರಿಂದ ಕೇಂದ್ರ ಸರಕಾರ ಪರ್‌ ಡ್ರಾಪ್‌ ಮೋರ್‌ ಕ್ರಾಪ್‌ ಮೂಲಕ ಸೂಕ್ಷ್ಮ ನೀರಾವರಿಗೆ ಪ್ರೋತ್ಸಾಹಿಸುತ್ತಿದೆ. ಕಾರ್ಪಸ್‌ ನಿಧಿ ಮೂಲಕ ಸೂಕ್ಷ್ಮನೀರಾವರಿಗೆ 5,000 ಕೋಟಿ ರೂ.ಗಳನ್ನು ಮಿಸಲಿಟ್ಟಿದ್ದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿ 36 ಲಕ್ಷ ಹೆಕ್ಟೇರ್‌ ನೀರಾವರಿ ಕ್ಷೇತ್ರವಿದ್ದು, ಈ ಪೈಕಿ 16 ಲಕ್ಷ ಹೆಕ್ಟೇರ್‌ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ. ಮುಂದಿನ 5 ವರ್ಷಗಳಲ್ಲಿ 45 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಲು ಸೂಕ್ಷ್ಮ ನೀರಾವರಿ ಅಳವಡಿಕೆಯೊಂದೇ ಮಾರ್ಗ. ಕೃಷಿಯೊಂದಿಗೆ ಹೈನುಗಾರಿಕೆ, ತೋಟಗಾರಿಕೆ, ಕುರಿ- ಕೋಳಿ ಸಾಕಾಣಿಕೆ, ಅಣಬೆ ಬೇಸಾಯ, ಸಿರಿಕಲ್ಚರ್‌, ವಾರ್ಮಿ ಕಾಂಪೋಸ್ಟ್‌, ಬಯೋ ಫ‌ರ್ಟಿಲೈಜರ್‌ ತಯಾರಿಕೆಯಂತಹ ಉಪಕಸುಬುಗಳು ನಿರಂತರ ಆದಾಯ ತರುತ್ತವೆ. ಮಿಷನ್‌ ಫಾರ್‌ ಇಂಟಿಗ್ರೆಟೆಡ್‌ ಡೆವಲಪಮೆಂಟ್‌ ಆಪ್‌ ಹಾರ್ಟಿಕಲ್ಚರ್‌ ಮೂಲಕ ಕೇಂದ್ರ ಸರಕಾರ ಜೇನು ಸಾಕಾಣಿಕೆಯನ್ನು ಉತ್ತೇಜಿಸುತ್ತಿದೆ. ಪರಾಗಸ್ಪರ್ಶದಿಂದ ಬೆಳೆಗಳ ಉತ್ಪಾದಕತೆ ಹೆಚ್ಚಾಗಿ ಅಗ್ರಿಕಲ್ಚರ್‌ ಬಹುಬೇಗನೇ ಫಾಸ್ಟ್‌ಟ್ರಾಕ್‌ಗೆ ಬರುತ್ತದೆ.

ಹರ್‌ ಮೇಧ್‌ ಪರ್‌ ಪೇಢ್‌ ಘೋಷಣೆಯೊಂದಿಗೆ ಅರಣ್ಯ ಕೃಷಿ ಉತ್ತೇಜಿಸಲು ಭಾರತೀಯ ಅರಣ್ಯ ಕಾಯ್ದೆ-1927ಕ್ಕೆ ತಿದ್ದುಪಡಿ ತಂದು ಮರಗಳ ವ್ಯಾಖ್ಯಾನದಿಂದ ಬಿದಿರನ್ನು ಕೈ ಬಿಡಲಾಗಿದೆ. ಇದರಿಂದ ಅರಣ್ಯೇತರ ಸರಕಾರಿ ಖಾಸಗಿ ಭೂಮಿಗಳಲ್ಲಿ ಬಿದಿರು ಬೆಳೆಯಬಹುದು. ಕರ್ನಾಟಕದಲ್ಲಿ ಶೇ. 22ರಷ್ಟು ಅರಣ್ಯ ಪ್ರದೇಶವಿದ್ದು, ರಾಷ್ಟ್ರೀಯ ಅರಣ್ಯ ರಕ್ಷಣೆ ಪ್ರಕಾರ ಕನಿಷ್ಠ ಶೇ.33ರಷ್ಟು ಇರಬೇಕು. ಕೆ.ಪಿ.ಟಿ.-76 ಮತ್ತು ಕೆ.ಎಫ್.ಆರ್‌-1969 ನಿಯಮಗಳಿಗೆ ತಿದ್ದುಪಡಿ ತಂದು ಅರಣ್ಯ ಹಾಗೂ ಮಲೆನಾಡು ಹೊರತುಪಡಿಸಿ ಬಯಲು ಸೀಮೆಯಲ್ಲಿ ರೈತನು ಬೆಳೆಯುವ ಅರಣ್ಯ ಮರಗಳಿಗೆ ಕಟಾವು, ಸಾಗಾಣಿಕೆ ಹಾಗೂ ಮಾರಾಟ ನಿರ್ಭಂಧ ತೆರವುಗೊಳಿಸಿದರೆ ಅರಣ್ಯದ ಜತೆಗೆ ರೈತನ ಆದಾಯವು ವೃದ್ದಿಯಾಗುತ್ತದೆ.

ರೈತನಿಗೆ ಕನಿಷ್ಠ ಬೆಂಬಲ ಬೆಲೆ, ಉತ್ತಮ ಮಾರುಕಟ್ಟೆ ಕಲ್ಪಿಸುವುದು ಸರಕಾರದ ಜವಾಬ್ದಾರಿ. ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ನಡುವೆ ಸಮತೋಲನ ಸಾಧಿಸುವುದು ಅವಶ್ಯ. ರೈತನಿಗೆ ಉತ್ತಮ ಬೆಳೆ ಬಂದರೂ ಬೆಲೆ ಸಿಗದೆ ಕಂಗಾಲಾಗುತ್ತಾನೆ. ಹೀಗಾಗಿ 2018-19ರಿಂದ ಮುಂಗಾರು ಹಾಗೂ ಹಿಂಗಾರು 2 ಬೆಳೆಗಳಿಗೂ ಅನ್ವಯವಾಗುವಂತೆ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನ ವೆಚ್ಚದ ಕನಿಷ್ಠ ಶೇ. 150ರಷ್ಟು ಹೆಚ್ಚಿಸಲಾಗಿದೆ. ಎಂ.ಎಸ್‌.ಪಿ. ಅಡಿ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದಲ್ಲಿ ಅನುಕೂಲವಾಗುತ್ತದೆ.

ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂರಕ್ಷಣ ಅಭಿಯಾನದ ಮೂಲಕ ರೈತರ ಆದಾಯ ಸಂರಕ್ಷಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರೈಸ್‌ ಸಪೊರ್ಟ್‌ ಸ್ಕಿಂ ಮೂಲಕ ಕೇಂದ್ರ ಸರಕಾರದ ನೋಡಲ್‌ ಏಜನ್ಸಿ ರಾಜ್ಯಗಳ ಸಹಭಾಗಿತ್ವದಲ್ಲಿ ಬೆಳೆ ಕಾಳುಗಳು, ಎಣ್ಣೆಕಾಳುಗಳು ಹಾಗೂ ಕೊಬ್ಬರಿಯನ್ನು ಖರೀದಿಸು ತ್ತದೆ. ಖರೀದಿ ಏಜನ್ಸಿಗಳಿಗೆ ಬ್ಯಾಂಕ್‌ ಗ್ಯಾರಂಟಿ ನೀಡಲು ಕೇಂದ್ರ ಸರಕಾರ 16,000 ಕೋಟಿ ರೂ. ಮೀಸಲಿಟ್ಟಿದೆ. ಪ್ರçಸ್‌ ಡೆಫಿಶಿಯನ್ಸಿ ಪೆಮೆಂಟ್‌ ಯೋಜನೆಯಡಿ ಎಂ.ಎಸ್‌.ಪಿ.ಗಿಂತ ಮಾರುಕಟ್ಟೆ ಬೆಲೆ ಕಡಿಮೆ ಇದ್ದಲ್ಲಿ ಆ ವ್ಯತ್ಯಾಸದ ಹಣವನ್ನು ರಾಜ್ಯ ಸರಕಾರ ಒದಗಿಸುತ್ತದೆ. ಪಿ.ಪಿ.ಎಸ್‌. ಹಾಗೂ ಪಿ.ಡಿ.ಪಿ.ಎಸ್‌. ಬದಲಿಗೆ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪೈಲೆಟ್‌ ಆಪ್‌ ಪ್ರವೈಟ್‌ ಪ್ರೋಕ್ಯುಪಮೆಂಟ್‌ ಸ್ಟಾಕಿಸ್ಟ್‌ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಮೂಲಕ ಖಾಸಗಿ ಏಜನ್ಸಿಗಳು ಸರಕಾರದ ಸಹಯೋಗದೊಂದಿಗೆ ಎಣ್ಣೆಕಾಳುಗಳನ್ನು ಸಂಗ್ರಹಿಸುತ್ತವೆ.

ಕೃಷಿ ಯೋಜನೆಗಳು ಹತ್ತಾರು ಇಲಾಖೆಗಳಡಿ ಸಾಗುವುದರಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ, ಪಶು ಸಂಗೋಪನೆ, ಕೈಗಾರಿಕೆ, ಸಕ್ಕರೆ, ಕೃಷಿ ಮಾರುಕಟ್ಟೆ ಎಲ್ಲ ಸಚಿವರನ್ನು ಒಳಗೊಂಡ “”ಕೃಷಿ ಕ್ಯಾಬಿನೆಟ್‌” ಹೆಸರಿನಡಿ ಸಂಪುಟ ಉಪಸಮಿತಿ ಹಾಗೂ ಜಿಲ್ಲಾವಾರು ಅಗ್ರಿ ಟಾಸ್ಕಫೋರ್ಸ್‌ ರಚಿಸುವುದರಿಂದ ಯೋಜನೆಗಳನ್ನು ರೈತರಿಗೆ ತ್ವರಿತವಾಗಿ ತಲುಪಿಸಬಹುದು.

ರೈತರ ಉತ್ಪನ ಮಾರುಕಟ್ಟೆಗೆ ತಲುಪುವ ಮೊದಲೇ ಶೇ. 20-30ರಷ್ಟು ನಾಶವಾಗುತ್ತಿದೆ. ಇದನ್ನು ತಡೆಯಲು ಸ್ಟೋರೇಜ್‌, ಸಾರಿಗೆ ಮತ್ತು ಪ್ರೊಸೆಸಿಂಗ್‌ ಬಗ್ಗೆ ಗಮನ ಹರಿಸಬೇಕಿದೆ. ಕೇಂದ್ರ ಸರಕಾರವು ಮೊದಲ ಹಂತದಲ್ಲಿ 22 ಸಾವಿರ ಚಿಕ್ಕ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಸ್ಥಾಪಿಸುತ್ತಿದೆ. ರೈತನ ಬಹುತೇಕ ಆದಾಯ ಮಧ್ಯವರ್ತಿಗಳ ಪಾಲಾಗುತ್ತಿದೆ. ಆನಲೈನ್‌ ಸ್ಪರ್ಧಾತ್ಮಕ ಮಾರುಕಟ್ಟೆ ಸೃಷ್ಟಿಸಿ ಪಾರದರ್ಶಕತೆ ಕಾಯ್ದುಕೊಳ್ಳಲು ಇ-ನ್ಯಾಮ್‌ ವ್ಯವಸ್ಥೆ ಸಹಕಾರಿಯಾಗುತ್ತದೆ. ಕೇಂದ್ರ ಸರಕಾರ ಹೊಸ ರಫ್ತು ನೀತಿ ರೂಪಿ ಸಿದ್ದು, ಕೃಷಿ ಉತ್ಪನ ರಫ‌¤ನ್ನು ದುಪ್ಪಟ್ಟು ಮಾಡುವ ಚಿಂತನೆಗಳು ನಡೆಯುತ್ತಿವೆ. ಅಗತ್ಯ ಸರಕುಗಳ ಕಾಯ್ದೆ-1955ಕ್ಕೆ ತಿದ್ದುಪಡಿ ತಂದ ಪರಿಣಾಮ ವಿವಿಧ ಕೃಷಿ ಸರಕುಗಳ ಮೇಲಿನ ನಿಯಂತ್ರ ಣವನ್ನು ತೆರವುಗೊಳಿಸಿದ್ದು ರೈತರಿಗೆ ಅನುಕೂಲವಾಗಲಿದೆ.

ಆರ್ಥಿಕ ಪ್ರಗತಿ ಎನ್ನುವುದು ಯಾವತ್ತೂ ಸುಲಭವಲ್ಲ. ರೈತರ ಬದುಕಿನಲ್ಲಿ ಸಾಲ ಎನ್ನುವುದು ಬಹುಮುಖ್ಯ ಪಾತ್ರ ವಹಿಸುತ್ತದೆ. ರೈತರಿಗೆ ಆರ್ಥಿಕ ಬೆಂಬಲ ನೀಡಲು ಬ್ಯಾಂಕ್‌ಗಳು ಕೃಷಿ ವಲಯಕ್ಕೆ ನೀಡುವ ವಾರ್ಷಿಕ ಗುರಿಯನ್ನು ಹೆಚ್ಚಿಸಲಾಗುತ್ತಿದೆ. ಸಾಂಸ್ಥಿಕ ಸಾಲದ ವ್ಯಾಪ್ತಿಯನ್ನು ಹೆಚ್ಚು-ಹೆಚ್ಚು ರೈತರಿಗೆ ವಿಸ್ತರಿಸುವುದಕ್ಕಾಗಿ ಸರಕಾರ ರೈತರಿಗೆ ಶೇ.4 ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆಸಾಲ ನೀಡುತ್ತಿದೆ. ತ್ವರಿತ ಮರುಪಾವತಿ ಮಾಡುವವರಿಗೆ ಶೇ. 2 ಬಡ್ಡಿದರದ ರಿಯಾಯಿತಿ ಸೌಲಭ್ಯ ನೀಡಲಾಗಿದೆ. 2018-19ರ ಬಡ್ಡಿ ಉಪದಾನ ಯೋಜನೆಯಡಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ಆ ವರ್ಷ ನವೀಕರಿಸುವ ಬೆಳೆಸಾಲದ ಮೇಲಿನ ಶೇ. 2 ಬಡ್ಡಿ ರಿಯಾಯತಿ ನೀಡಲಾಗುತ್ತಿದೆ. ರೈತರಿಗೆ ಮಾರುಕಟ್ಟೆ ಸಂಕಷ್ಟ ಎದುರಾದಾಗ ಗೋದಾಮಿನಲ್ಲಿಯ ದಾಸ್ತಾನುವಿನ ನೆಗೋಶಿಯಬಲ್‌ ಬೆಲೆ ನಿರ್ಧರಿಸಿ ಈ ಯೋಜನೆ ಲಾಭ ಪಡೆಯಬಹುದು.

ಭೂಮಿಯಿಂದ ಫ‌ಸಲು ತೆಗೆಯುವುದು ಪ್ರೈಮರಿ ಅಗ್ರಿಕಲ್ಚರ್‌. ಆದರೆ ಆ ಉತ್ಪನ್ನವನ್ನು ಮೌಲ್ಯವರ್ಧನಗೊಳಿಸಿ ಗ್ರಾಹಕರಿಗೆ ತಲುಪಿಸುವುದು ಸೆಕೆಂಡರಿ ಅಗ್ರಿಕಲ್ಚರ್‌. ರೈತ ತನ್ನ ಉತ್ಪನದ ಸ್ಟೋರೇಜ್‌, ಪ್ರೊಸೆಸಿಂಗ್‌, ಪ್ಯಾಕಿಂಗ್‌, ಬ್ರಾಂಡಿಂಗ್, ಮಾರ್ಕೆಟಿಂಗ್‌ ಮಾಡುವುದನ್ನು ಕಲಿಯಬೇಕು. ಇದರರ್ಥ ಕೇವಲ ಉತ್ಪಾದನೆ ಮಾತ್ರವಲ್ಲ, ಮಾರುಕಟ್ಟೆ ಲಾಭಗಳು ರೈತನಿಗೆ ದೊರೆಯಬೇಕು. ಮಾರುಕಟ್ಟೆ ಜ್ಞಾನ, ಮೌಲ್ಯವರ್ಧನೆ ಬಗೆಗಳನ್ನು ಅರಿಯದೆ ರೈತ ತನ್ನ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರಿ ಸೋಲುತ್ತಿದ್ದಾನೆ. ಹಾಲು ನಮ್ಮದು, ಪನ್ನೀರ್‌ ಅವರದ್ದು, ಟೋಮೆಟೋ ನಮ್ಮದು ಕಿಚಪ್‌ ಲಾಭ ಇನ್ನಾರಧ್ದೋ ಆಗಿದೆ. ರೈತನೂ ಕಿರು ಉದ್ಯಮ ತೆರೆಯುವುದರಿಂದ ಆದಾಯವನ್ನು ಬಹುಬೇಗನೇ ದ್ವಿಗುಣಗೊಳಿಸಿಕೊಳ್ಳಬಹುದು. ಈ ದೆಸೆಯಲ್ಲಿ ಕರ್ನಾಟಕ ಸರಕಾರವು ದೇಶದಲ್ಲಿಯೇ ಪ್ರಥಮ ಬಾರಿಗೆ ಸೆಕೆಂಡರಿ ಅಗ್ರಿಕಲ್ಚರ್‌ ನಿರ್ದೇಶನಾಲಯ ಸ್ಥಾಪಿಸಿದೆ. ನವೋದ್ಯಮ(ಸ್ಟಾರ್ಟ್‌ಪ್‌)ದ ವಿಕಾಸ ಕೃಷಿರಂಗಕ್ಕೂ ವಿಸ್ತರಿಸಬೇಕು. “”ಪ್ರಧಾನಮಂತ್ರಿ ಫಾರ್ಮಲೈಜೇಶನ್‌ ಆಫ್ ಮೈಕ್ರೋ ಫ‌ುಡ್‌ ಪ್ರೋಸೆಸಿಂಗ್‌ ಎಂಟರ್‌ಪ್ರçಸಸ್‌ ಸ್ಕೀಂ” ಸಣ್ಣ ಆಹಾರ ಉತ್ಪಾದನ ಘಟಕಗಳ ವಿಸ್ತರಣೆಗೆ ಹಣಕಾಸು, ತಾಂತ್ರಿಕ ಹಾಗೂ ಮಾರುಕಟ್ಟೆ ಸಹಾಯ ಕಲ್ಪಿಸುತ್ತಿದೆ.

ಸರಕಾರ ರೈತರ ಆತ್ಮಹತ್ಯೆಗೆ ಸಹಾನುಭೂತಿ ತೋರುವ ಬದಲು ಆತ್ಮಹತ್ಯೆ ಮಾಡಿಕೊಳ್ಳದಂತೆ ಸದೃಢವಾಗಿ ಜತೆ ನಿಲ್ಲಬೇಕು. ಸ್ಥಿತಿವಂತರು ಸರಕಾರದ ಸವಲತ್ತುಗಳನ್ನು ಸಣ್ಣ ರೈತರಿಗೆ ಬಿಟ್ಟು ಕೊಡಬೇಕು. ನಮ್ಮ ಹಳ್ಳಿ, ತಾಲೂಕು, ಜಿಲ್ಲೆಗಳು ಹಾಗೂ ರೈತ ಮೊದಲು ಆತ್ಮನಿರ್ಭರವಾಗಬೇಕು. ರೈತ ವಿಕಾಸವಾದರೆ ಮಾತ್ರ ಭಾರತ ವಿಕಾಸ, ಎಂಬುದನ್ನು ಅರಿತು ನಡೆದರೆ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು!

– ಸಂಗಮೇಶ ಆರ್‌. ನಿರಾಣಿ
ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.