ಜಗನ್ಮಾನ್ಯ ವಿಜ್ಞಾನಿಯ ನೆನಪಲ್ಲಿ…
Team Udayavani, Dec 16, 2020, 6:25 AM IST
ರೊದ್ದಂ ನರಸಿಂಹ ಅವರನ್ನು ಮೊದಲ ಬಾರಿ ಭೇಟಿಯಾದ ದಿನ ಇನ್ನೂ ನೆನಪಿನಲ್ಲಿದೆ. ಅದು 3ನೇ ಮಾರ್ಚ್ 1986. ಆಗ ನಾನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐ.ಐ.ಎಸ್‌ಸಿ.)ನ ಏರೋ ಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನ ಸಹಾಯ ಕನಾಗಿ ಕೆಲಸ ಮಾಡುತ್ತಿದ್ದೆ. ಅದೊಂದು ದಿನ ನೋಟಿಸ್ ಬೋರ್ಡ್‌ನಲ್ಲಿ ರೊದ್ದಂ ನರಸಿಂಹ ಅವರಿಂದ “ಆರ್ಡರ್ ಆ್ಯಂಡ್ ಕೇಯೋಸ್ ಇನ್ ಫ್ಲ್ಯೂಯಿಡ್ ಫ್ಲೋಸ್’ ಉಪನ್ಯಾಸ ಆಯೋಜನೆ ಯಾಗಿರುವ ಘೋಷಣೆ ಕಂಡಿತು.
ಸಮಯಕ್ಕೆ ಸರಿಯಾಗಿ ಯುವ ತರುಣರಂತೆ ಕಂಡವರೊಬ್ಬರು ವೇದಿಕೆಗೆ ಬಂದರು. ಎರಡೂವರೆ ಗಂಟೆಗಳ ಕಾಲ ನಮ್ಮ ಸುತ್ತಮುತ್ತಲೇ ಹರಿದಾಡುವ ನೂರಾರು ದ್ರವಚಲನೆಗಳ ಹಿಂದೆ ಯಾವುದು ನಿಯ ಮಕ್ಕೊಳಪಟ್ಟಿವೆ, ಮತ್ಯಾವುದು ನಿಯಮಾತೀತವಾ ಗಿವೆ ಎಂದು ತೂಕದ ಇಂಗ್ಲಿಷ್ ಪದಗಳೊಡನೆ ವಿವರಿ ಸಿದರು. ನಮ್ಮೆಲ್ಲರನ್ನು ಮಂತ್ರಮುಗ್ಧರಾಗಿಸಿದ ಆ ಉಪನ್ಯಾಸದ ಅನಂತರ ಚಹಾ ಕೂಟವಿತ್ತು. ನಮ್ಮಂಥ ಎಳೆಯರನ್ನೂ ಬಿಡದೆ ಎಲ್ಲರನ್ನೂ ವಿಚಾರಿಸಿ ಕೊಂಡರು. ಆಗಷ್ಟೇ ತಾವು ಅಧಿಕಾರವಹಿಸಿ ಕೊಂಡಿದ್ದ ನ್ಯಾಶನಲ್ ಏರೋಸ್ಪೇಸ್ ಲ್ಯಾಬೊರೇಟ ರೀಸ್‌ಗೆ ಪ್ರಯೋಗ ನಡೆಸಲು ಆಹ್ವಾನವನ್ನಿತ್ತರು.
ಐ.ಐ.ಎಸ್‌ಸಿ.ಯ ಪ್ರೊಫೆಸರ್ ಆಗಿಯೂ ಮುಂದು ವರಿದಿದ್ದ ನರಸಿಂಹ, ಆವರಣದಲ್ಲಿಯೇ ಇದ್ದ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದರು. ಅಂತೆಯೇ ಅವರನ್ನು ಕಾಣುವ ಅವಕಾಶಗಳು ಹೆಚ್ಚಿದ್ದವು. ಹಾಗೆಯೇ ಅವರ ತರಗತಿಗಳಲ್ಲಿ ಕುಳಿತು ಪಾಠ ಕೇಳುವ ಅವಕಾಶಗಳು ಸಿಕ್ಕವು. ಮುಂದೆ ನಾನು ಡಿ.ಆರ್.ಡಿ.ಒ. ಸೇರಿದ ಸಮಯದಲ್ಲಿ “ಹಗುರ ಯುದ್ಧ ವಿಮಾನ- ಎಲ್.ಸಿ.ಎ.’ ಯೋಜನೆ ಭರದಿಂದ ಮುನ್ನಡೆಯುತ್ತಿತ್ತು. ಕಾಂಪಾಸಿಟ್‌ಗಳೆಂಬ ಸಮ್ಮಿಶ್ರ ವಸ್ತುವಿನಿಂದ ವಿಮಾನದ ರೆಕ್ಕೆಗಳನ್ನು ರೂಪಿಸುವ ಕೆಲಸ ಎನ್.ಎ.ಎಲ್.ನಲ್ಲಿಯೇ ನಡೆ ಯುತ್ತಿತ್ತು. ಅವುಗಳನ್ನು ಪ್ರತ್ಯಕ್ಷ ಕಾಣುವ, ವಿನ್ಯಾಸ ಗಳನ್ನು ಅರ್ಥ ಮಾಡಿಕೊಳ್ಳುವ, ಪರೀಕ್ಷೆಗಳನ್ನು ವೀಕ್ಷಿಸುವ ಸದವಕಾಶ ನಮಗೆ ಲಭ್ಯವಾದವು.
ಆ ಸಂದರ್ಭದಲ್ಲಿ ಯೋಜನೆಯ ವಿವಿಧ ಹಂತ ಗಳನ್ನು ವಿಮರ್ಶಿಸುವ ಅನೇಕ ತಾಂತ್ರಿಕ ಸಮಿತಿಗಳಿಗೆ ರೊದ್ದಂ ಅಧ್ಯಕ್ಷರಾಗಿದ್ದರು. ಅಂಥ ಸಮಿತಿಗಳನ್ನು ನಿರ್ವಹಿಸುವಲ್ಲಿ ಅವರು ತೋರುತ್ತಿದ್ದ ಸಂಯಮ, ಕ್ಷಿಪ್ರಗತಿಯಲ್ಲಿ ಸಮಸ್ಯೆಗಳನ್ನು ಅರ್ಥ ಮಾಡಿ ಕೊಳ್ಳುತ್ತಿದ್ದ ಪರಿ, ನಿರ್ಧಾರಗಳನ್ನು ತಿಳಿಸು ವಲ್ಲಿನ ಖಚಿತತೆ ಸಮಿತಿಯ ಇತರ ಸದಸ್ಯರುಗಳಿಗೆ ಮಾದರಿ ಯಾಗಿತ್ತು. ವಾಯುಚಲನ ವಿಜ್ಞಾನಕ್ಕೂ ಹೊರತಾದ ಅನೇಕ ಗಹನ ವಿಚಾರಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು.
ಅವರು ಎನ್.ಎ.ಎಲ್.ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ ಐ.ಐ.ಎಸ್‌ಸಿ.ಗೆ ಹಿಂದಿರುಗಿದರು. ಆಗಲೂ ಹೆಚ್.ಎ.ಎಲ್. ಮತ್ತು ಎನ್.ಎ.ಎಲ್.ನ ಅನೇಕ ಯೋಜನೆಗಳಿಗೆ ತೆರೆಮರೆಯ ಸೂತ್ರಧಾರ ರಾಗಿದ್ದರು. ಮಿಲಿಟರಿ ವಿಮಾನಗಳಷ್ಟೇ ಅಲ್ಲ, ನಾಗರಿಕರು ಪಯಣಿಸಬಲ್ಲ ವಿಮಾನಗಳು ಭಾರತ ದಲ್ಲಿ ನಿರ್ಮಾಣವಾಗಬೇಕೆಂಬ ಬಹುದೊಡ್ಡ ಕನಸನ್ನು ಅವರು ಹಮ್ಮಿಕೊಂಡಿದ್ದರು. ಇದಕ್ಕೆಂದೇ ರೂಪುಗೊಂಡಿದ್ದ ಹಿರಿಯ ವಿಜ್ಞಾನಿಗಳ ಸಮಿತಿಗೆ ನನ್ನ ಕಚೇರಿಯ ಮುಖ್ಯಸ್ಥರೂ ನೇಮಕಗೊಂ ಡಿದ್ದರು. ಅವರ ಸಹಾಯಕನಾಗಿ ಕೆಲಸ ಮಾಡುವ ಅವಕಾಶ ಗಳು ಸಿಕ್ಕವು. ಎನ್.ಎ.ಎಲ್. ನಿರ್ಮಿತ “ಸಾರಸ್’ ಎಂಬ ಕಿರು ಸಾಗಣೆ ವಿಮಾನ ವನ್ನು ಮಿಲಿಟರಿ ಕೆಲಸಗಳಿಗೂ ಬಳಸಬಹುದೆ? ಎಂಬ ಪರಿಶೀಲನೆ ನಡೆಸಿದ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ.
ಈ ಸಮಿತಿಗೆ ರೊದ್ದಂ ಅವರು ವಿಶೇಷ ಆಹ್ವಾನಿತರಾಗಿ ಅನೇಕ ಸಭೆಗಳಿಗೆ ಬಂದಿದ್ದರು. ಎಂದಿನಂತೆ ಅವರು ತಮ್ಮ ನಗುಮೊಗದ ಸ್ನೇಹದಿಂದ ಸಮಿತಿಗೆ ಬೇಕಿದ್ದ ತಾಂತ್ರಿಕ ನೆರವುಗಳನ್ನು ನೀಡಿದರು. ನಾನು ಹೆಚ್. ಎ.ಎಲ್.ನಲ್ಲಿ ಕಾರ್ಯನಿರ್ವಹಿಸುವ ಸಮಯದಲ್ಲಿ ಇಂಡಿಯನ್ ರೀಜನಲ್ ಜೆಟ್ ಎಂಬ ದೊಡ್ಡ ನಾಗರಿಕ ವಿಮಾನ ಯೋಜನೆಗೆ ಚಾಲನೆ ಸಿಕ್ಕಿತ್ತು. ತಮ್ಮ ಕನಸಿನ ಯೋಜನೆ ಸಾಕಾರವಾಗು ತ್ತಿದೆಯೆಂಬ ಸಂತಸದಲ್ಲಿ ರೊದ್ದಂ ಪರಿಶೀಲನ ಸಭೆಗಳ ನೇತೃತ್ವವನ್ನು ವಹಿಸಿಕೊಂಡಿದ್ದರು. ದುರದೃಷ್ಟ ವಶಾತ್ ಆ ಯೋಜನೆ ಮುಂದುವರಿಯಲಿಲ್ಲ.
ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆಯೋಜಿಸಿದ್ದ ಕಾರ್ಯಾಗಾರವೊಂದಕ್ಕೆ ಅಧ್ಯಕ್ಷರಾಗಿ ರೊದ್ದಂ ಬಂದಿದ್ದರು. ಅದೇ ಕಾರ್ಯಾ ಗಾರದಲ್ಲಿ ನನ್ನದೊಂದು ಉಪನ್ಯಾಸವೂ ಇತ್ತು. ಪೂರ್ತಿ ಮುಗಿಯುವ ತನಕ ಕುಳಿತಿದ್ದು ಅತ್ಯಾದರ ದಿಂದ ವಿಷಯ ಕುರಿತಂತೆ ಅನೇಕ ಸಲಹೆಗಳನ್ನು ಅವರು ನೀಡಿದ್ದರು. ಇದಕ್ಕೂ ಮುನ್ನ ಕೆ.ವಿ. ಸುಬ್ಬಣ್ಣ ಅವರು ತಮ್ಮ ನೀನಾಸಂ ವತಿಯಿಂದ “ವಿಜ್ಞಾನ ಜಿಜ್ಞಾಸೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ದ್ದರು. ಅದಕ್ಕೆ ಮುಖ್ಯ ಅತಿಥಿಗಳನ್ನಾಗಿ ರೊದ್ದಂ ನರಸಿಂಹ ಹಾಗೂ ಯು.ಆರ್. ಅನಂತಮೂರ್ತಿ ಯವರನ್ನು ಸುಬ್ಬಣ್ಣ ಕರೆಸಿದ್ದರು. ಮೂರು ದಿನಗಳ ಆ ಜುಗಲ್ಬಂದಿ ಕಾರ್ಯಕ್ರಮಕ್ಕೆ ನಾನು ವಿಶೇಷ ಆಹ್ವಾನಿತನಾಗಿ ಹೋಗಿದ್ದೆ. ಕಾರ್ಯಕ್ರಮದ ಆರಂಭದ ದಿನವೇ ಪತ್ರಿ ಕೆ ಯೊಂದ ರಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಕಾರ್ಯಕ್ರಮ ಕುರಿತಂತೆ ಪ್ರಸ್ತಾವಿ ಸುವುದರ ಜತೆಗೆ ರೊದ್ದಂ ಅವರು ಇಂಡಿಯನ್ ರೆಫರೆನ್ಸ್ ಅಟೊಸ್ಪಿಯರ್ ನಿಗದಿಗಾಗಿ ನೀಡಿದ ಕೊಡುಗೆಯನ್ನು ಲೇಖನದಲ್ಲಿ ಬರೆದಿದ್ದೆ. ರೊದ್ದಂ ಆ ಲೇಖನವನ್ನು ಓದಿರಲು ಸಾಧ್ಯವಿಲ್ಲವೆಂಬ ಹುಂಬ ನಂಬಿಕೆ ನನ್ನದಾಗಿತ್ತು. ಆದರೆ ಕಾರ್ಯ ಕ್ರಮದ ಆರಂಭ ಕ್ಕೂ ಮುನ್ನ ನನ್ನನ್ನು ಗುರುತಿಸಿ, ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಬಳಸಿದ್ದ ತಾಂತ್ರಿಕ ಪದವೊಂದಕ್ಕೆ ಪರ್ಯಾಯವನ್ನೂ ಸೂಚಿಸಿದ್ದರು. ಸಂಕಿರಣ ಮುಗಿದ ಅನಂತರ ಮೂರು ದಿನಗಳ ಚರ್ಚೆಯ ಸಾರಾಂಶಗಳನ್ನು ಮೂರು ಭಾಗಗಳಲ್ಲಿ ಮತ್ತೂಂದು ಪತ್ರಿಕೆಗೆ ವರದಿ ಬರೆದಿದ್ದೆ. ಆ ಲೇಖನಗಳ ಪ್ರತಿಯನ್ನೂ ರೊದ್ದಂ ನನ್ನಿಂದ ಕೇಳಿ ಪಡೆದಿದ್ದರು. ಅವರ ಮಾತಿನ ಗ್ರಹಿಕೆ ನನಗೆ ಸರಿಯಾಗಿ ಮನದಟ್ಟಾಗಿತ್ತೆ? ಎಂಬುದನ್ನೂ ಖಚಿತಪಡಿಸಿಕೊಂಡಿದ್ದರು.
ಮುಂದೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಅವರಿಗೆ ಜೀವಮಾನ ಸಾಧನೆ ಪುರಸ್ಕಾರ ಸಂದ ಸಂದರ್ಭದಲ್ಲಿ ಅವರ ಸನ್ಮಾನ ಪತ್ರವನ್ನು ಓದುವ ಜವಾಬ್ದಾರಿ ನನ್ನದಾಗಿತ್ತು. ಕಾರ್ಯಕ್ರಮ ಮುಗಿದ ಅನಂತರ ಬೆನ್ನು ಚಪ್ಪರಿಸಿ ಯೋಗಕ್ಷೇಮವನ್ನು ವಿಚಾರಿಸಿಕೊಂಡಿದ್ದರು. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದಿಂದ ಶ್ರೇಷ್ಠ ವಿಜ್ಞಾನ ಸಂವಹನಕಾರ ಪುರಸ್ಕಾರ ನನಗೆ ಲಭಿಸಿದಾಗ, ರೊದ್ದಂ ಅವರ ಕೈಯ್ಯಿಂದಲೇ ಪ್ರಶಸ್ತಿ ಫಲಕ ಸ್ವೀಕರಿ ಸುವ ಅವಕಾಶ ನನ್ನದಾಗಿತ್ತು.
ಹೀಗೆ ಪ್ರಾಸಂಗಿಕವಾಗಿ ಮಾತನಾಡುವಾಗ ಅವರು ಏರೋಸ್ಪೇಸ್ ಎಂಜಿನಿಯರಿಂಗ್ ಅನ್ನೇ ಏಕೆ ಆಯ್ಕೆ ಮಾಡಿಕೊಂಡರೆಂದು ಕೇಳಿ¨ªೆ. ಜಗತ್ತಿನ ನೂರು ಶ್ರೇಷ್ಠ ವಿಜ್ಞಾನಿಗಳು ತಾವೇಕೆ ವಿಜ್ಞಾನಿಗಳಾ ದೆವು ಎಂದು ಬರೆದಿದ್ದ ಪುಸ್ತಕವೊಂದು ಬ್ರಿಟನ್ನಿನಿಂದ ಪ್ರಕಟವಾಗಿತ್ತು. ಅದರಲ್ಲಿದ್ದ ಬೆರಳೆಣಿಕೆಯ ಭಾರತೀಯರಲ್ಲಿ ರೊದ್ದಂ ಅವರ ಲೇಖನವೂ ಸೇರಿತ್ತು. ಅದರ ಪ್ರತಿಯನ್ನು ನನಗೆ ತಲುಪಿಸಿ ದ್ದರು. ಅದನ್ನು ಕನ್ನಡಕ್ಕೆ ಅನುವಾದಿಸಿ ಪತ್ರಿಕೆಯಲ್ಲಿ ಪ್ರಕಟಿಸುವ ಇಚ್ಛೆಯನ್ನು ನಾನು ವ್ಯಕ್ತಪಡಿಸಿದಾಗ, ಪ್ರಕಾಶಕ ರಿಂದ ಅನುಮತಿ ಕೊಡಿಸಿದ್ದರು. ಅನುವಾ ದವನ್ನು ಪಾಸ್ ಮಾಡುವುದರ ಜತೆಗೆ ನನಗೊಂದು ಭೇಷ್ ಹೇಳಿದ್ದರು.
ಐದು ವರ್ಷಗಳ ಹಿಂದೆ ಮುಂಬಯಿಯಲ್ಲಿ ಜರಗಿದ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನಲ್ಲಿ ಭಾರತೀ ಯರ ಸಾಧನೆಗಳನ್ನು ಅನಗತ್ಯವಾಗಿ ಹಿಗ್ಗಿಸಿ, ನೈಜತೆಗೆ ದೂರವಾದ ಸಂಶೋಧನೆಗಳ ಹಿರಿಮೆಯನ್ನು ಸಾರಿಕೊಳ್ಳುವ ಪ್ರಯತ್ನ ಗಳಾಗಿದ್ದವು. ರೊದ್ದಂ ತಾವು ಸಂಪಾದಿಸುತ್ತಿದ್ದ “ಕರೆಂಟ್ ಸೈ®Õ…’ ಪತ್ರಿಕೆಯಲ್ಲಿ ಈ ಕುರಿತು ಸುದೀರ್ಘ ಸಂಪಾದಕೀಯ ಬರೆದಿದ್ದರು. ಅದರಲ್ಲಿ ಭಾರತದ ನಿಜವಾದ ಸಾಧನೆಗಳೇನು ಎಂಬುದರ ಕುರಿತು ಸಂಸ್ಕೃತ ಗ್ರಂಥಗಳ ಉಲ್ಲೇಖ ಗಳೊಡನೆ, ಐತಿಹಾಸಿಕ ದಾಖಲೆಗಳ ಆಕರಗಳೊಂದಿಗೆ ತಮ್ಮ ಭಾಷ್ಯ ಬರೆದಿದ್ದರು. ಇದನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೆ ರೊದ್ದಂ ನರಸಿಂಹ ಅವ ರಂಥ ಜಗನ್ಮಾನ್ಯ ವಿಜ್ಞಾನಿಗಳು ನಮ್ಮ ಕಾಲದಲ್ಲಿಯೇ ಇದ್ದರೆಂಬುದೇ ಸದಾ ಸ್ಮರಣೀಯ.
ಸುಧೀಂದ್ರ ಹಾಲ್ದೊಡ್ಡೇರಿ, ವಿಜ್ಞಾನಿ, ಲೇಖಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.