ಪ್ರಭಾವಿಗಳ ಪ್ರಚಾರಕ್ಕೆ ಕಡಿವಾಣ ಬೇಕು


Team Udayavani, Jul 25, 2023, 6:10 AM IST

ಪ್ರಭಾವಿಗಳ ಪ್ರಚಾರಕ್ಕೆ ಕಡಿವಾಣ ಬೇಕು

ಪ್ರಭಾವಿಗಳ ಪ್ರಚಾರಕ್ಕೆ ಕಡಿವಾಣ ಬೇಕುಯಾವುದೇ ನಿಯಂತ್ರಣಕ್ಕೆ ಒಳಪಡದ ಈ ಡಿಜಿಟಲ್‌ ಮಾಧ್ಯಮ ಪ್ರಭಾವಿಗಳ ಮಾತಿಗೆ ಮರುಳಾಗಿ ತಮ್ಮ ಜೀವಿತಮಾನದ ಉಳಿತಾಯ ಕಳೆದುಕೊಂಡವರು, ಆರೋಗ್ಯ ಕೆಡಿಸಿ ಕೊಂಡವರು ಸಾಕಷ್ಟಿದ್ದಾರೆ. ತಾವು ಯಾವ ಸರಕುಗಳಿಗೆ ಪ್ರಚಾರ ನೀಡುತ್ತಾರೋ ಅದನ್ನು ಸ್ವತ: ಅವರು ಬಳಸದಿದ್ದರೂ ಅದರ ಗುಣಮಟ್ಟವನ್ನು ವೈಭವೀಕರಿಸಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇಂತಹ ಪ್ರಭಾವಿಗಳನ್ನು ನಿಯಂತ್ರಿಸಲು ಸರಕಾರ ಮುಂದಾಗಿದೆ.

ಬಿಳಿ ಕೋಟ್‌ ಧರಿಸಿ, ಕೈಯಲ್ಲಿ ಸ್ಟೆತಾಸ್ಕೋಪ್‌ ಹಿಡಿದು ಥೇಟ್‌ ವೈದ್ಯರಂತೆ ಅಥವಾ ಆಹಾರ ತಜ್ಞ ಡಯಾಟಿಶಿಯನ್‌ರಂತೆ ವರ್ತಿಸುತ್ತಾ ಯಾವುದೆ ವೈದ್ಯಕೀಯ ಶಿಕ್ಷಣ, ಅನುಭವ ಇಲ್ಲದವರು ಯೂಟ್ಯೂಬ್‌, ಇನ್‌ಸ್ಟಾ ಗ್ರಾಮ್‌ ಮುಂತಾದ ಜಾಲತಾಣಗಳ‌ಲ್ಲಿ ಸಲಹೆ ನೀಡುವುದು ಈಗ ಒಂದು ಬೃಹತ್‌ ಉದ್ಯಮವಾಗಿದೆ. ಇವರು ಬಳಕೆದಾರರ ಖರೀದಿ ವರ್ತನೆಯ(Purchasing Behavior) ಮೇಲೆ ಪ್ರಭಾವ ಬೀರುತ್ತಾರೆ. ಆರೋಗ್ಯ, ದೇಹಸೌಂದರ್ಯ, ಹಣಕಾಸು ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿ ಹರಡಿರುವ ಈ ಡಿಜಿಟಲ್‌ ಪ್ರಭಾವಿಗಳ (Influencers) ಉದ್ಯಮದ ಮೌಲ್ಯ ಸುಮಾರು ರೂ.1275 ಕೋಟಿ. ಈ ಮೊತ್ತ 2023-24ರ ಅಂತ್ಯಕ್ಕೆ 3,000 ಕೋಟಿ ರೂ. ಮೀರಲಿದೆ ಎಂದು ಅಂದಾಜು ಮಾಡಲಾಗಿದೆ. ಪ್ರಭಾವಿಗಳ ಮಾರ್ಕೆಟಿಂಗ್‌ ಸಂಸ್ಥೆಯೊಂದರ 2022ರ ವರದಿ ಪ್ರಕಾರ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಭಾವಿಗಳು ಆ ಉದ್ಯಮದಲ್ಲಿದ್ದಾರೆ. ಈ ವರ್ಷದ ಅಂತ್ಯಕ್ಕೆ ಪ್ರಭಾವಿಗಳ (Influencers) ಸಂಖ್ಯೆ ಸುಮಾರು 1 ಕೋಟಿ ದಾಟಲಿದೆ.

ಸಾಮಾಜಿಕ ಜಾಲತಾಣ, ಟೆಲಿವಿಷನ್‌ ಮತ್ತು ಇತರೆ ದೃಶ್ಯ ಮಾಧ್ಯಮದಲ್ಲಿ ದೇಹ ಸೌಂದರ್ಯ, ಆರೋಗ್ಯ ಮತ್ತು ಹಣಕಾಸು ಹೂಡಿಕೆ ವಿಷಯಗಳನ್ನು ಕುರಿತು ಸಲಹೆ ನೀಡುವ ಪ್ರಭಾವಿಗಳು ಹೆಚ್ಚು ಬೇಡಿಕೆಯಲ್ಲಿದ್ದಾರೆ. ಜನ‌ಪ್ರಿಯ ಸಿನೆಮಾ ನಟ, ನಟಿಯರು, ಕ್ರೀಡಾಪಟುಗಳು, ರಕ್ತದೊತ್ತಡ, ಮಧುಮೇಹ, ಆಸ್ತಮಾ, ಲೈಂಗಿಕ ದುರ್ಬಲತೆ ಇತ್ಯಾದಿ ಕಾಯಿಲೆಗಳನ್ನು ಯಾವುದೇ ಔಷಧವಿಲ್ಲದೆ ಗುಣ ಪಡಿಸ ಬಹುದೆಂದು ಸಲಹೆ ನೀಡುವ ಪ್ರಭಾವಿಗಳಿಗೆ ಲೆಕ್ಕವಿಲ್ಲ. ಯಾವುದೆ ನಿಯಂ ತ್ರಣಕ್ಕೆ ಒಳಪಡದ ಈ ಡಿಜಿಟಲ್‌ ಮಾಧ್ಯಮದ ಪ್ರಭಾವಿಗಳ ಮಾತಿಗೆ ಮರುಳಾಗಿ ತಮ್ಮ ಜೀವಿತಮಾನದ ಉಳಿತಾಯ ಕಳೆದುಕೊಂಡವರು, ಆರೋಗ್ಯ ಕೆಡಿಸಿ ಕೊಂಡವರು ಸಾಕಷ್ಟಿದ್ದಾರೆ. ತಾವು ಯಾವ ಸರಕುಗಳಿಗೆ ಪ್ರಚಾರ ನೀಡುತ್ತಾರೋ ಅದನ್ನು ಸ್ವತ: ಅವರು ಬಳಸದಿದ್ದರೂ ಅದರ ಗುಣಮಟ್ಟವನ್ನು ವೈಭವೀಕರಿಸಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇಂತಹ ಪ್ರಭಾವಿಗಳನ್ನು ನಿಯಂತ್ರಿಸಲು ಸರಕಾರ ಮುಂದಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕಳೆದ ಮಾರ್ಚ್‌ ತಿಂಗಳಿನಲ್ಲಿ ಡಿಜಿಟಲ್‌ ಪ್ರಭಾವಿಗಳನ್ನು ನಿಯಂತ್ರಿಸುವ Endorsements Know-Hows ಎನ್ನುವ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಗಳಾಗಿ ನಿರತ ರಾಗಿರುವವರು ಗ್ರಾಹಕ ಸಂರಕ್ಷಣ ಅಧಿನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಮಾಡುವುದು ಹಾಗೂ ಅವರಲ್ಲಿ ಪಾರದರ್ಶಕತೆ ಮತ್ತು ಉತ್ತರ ದಾಯಿತ್ವ ಉಂಟುಮಾಡುವುದು ಹಾಗೂ ಈ ಮೂಲಕ ಬಳಕೆದಾರರ ಹಿತರಕ್ಷಣೆ ಮಾಡುವುದು ಮಾರ್ಗಸೂಚಿಯ ಉದ್ದೇಶ. ಗ್ರಾಹಕ ಸಂರಕ್ಷಣ ಅಧಿನಿಯಮ 2019ರ ಅಡಿಯಲ್ಲಿ ಸರಕಾರ ಜಾಹೀರಾತುಗಳನ್ನು ಕುರಿತು ಹೊರಡಿಸಿರುವ ನಿಯಮಕ್ಕೆ ಹೆಚ್ಚುವರಿಯಾಗಿ ಈ ಮಾರ್ಗಸೂಚಿ ಅನ್ವಯವಾಗಲಿದೆ.

ಈ ಮಾರ್ಗಸೂಚಿಯು ಪ್ರಭಾವಿಗಳನ್ನು ಸೆಲಿಬ್ರಿಟೀಸ್‌,(Celebrities), Influencers ಮತ್ತು ವರ್ಚುವಲ್‌ Influencers  ಎಂದು ಮೂರು ರೀತಿಯಲ್ಲಿ ವಿಂಗಡಿಸಿದೆ. ಸೆಲಿಬ್ರಿಟೀಸ್‌ ಪಟ್ಟಿಯಲ್ಲಿ ಜನಪ್ರಿಯ ವ್ಯಕ್ತಿಗಳು, ಮನೋರಂಜನ ಕ್ಷೇತ್ರದಲ್ಲಿರುವ ನಟನಟಿಯರು, ಕ್ರೀಡಾಪಟುಗಳು ಮುಂತಾದವರು ಸೇರಿದ್ದಾರೆ. ಸೆಲಿಬ್ರಿಟಿಗಳು ತಮ್ಮ ಶೋತೃಗಳ ಮೇಲೆ ಪ್ರಭಾವಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಬಳಕೆದಾರರ ಖರೀದಿ ವರ್ತ ನೆಯ ಮೇಲೆ ಪ್ರಭಾವ ಉಂಟುಮಾಡಿ ವಸ್ತು ಅಥವಾ ಸೇವೆಯ ಬಗ್ಗೆ ಬಳಕೆದಾರರು ಹೊಂದಿರುವ ಅಭಿಪ್ರಾಯವನ್ನು ಬದಲಿಸುವ ಶಕ್ತಿ ಇರುವವರನ್ನು ಇನ್‌ಪುಯನ್ಸ್‌ ರ್ ಗುಂಪಿಗೆ ಸೇರಿಸಲಾಗಿದೆ. ಕಡೆಯಾದಾಗಿ ಕಂಪ್ಯೂಟರ್‌ ಮೂಲಕ ಸೃಷ್ಟಿಸಿರುವ ವ್ಯಕ್ತಿ ಅಥವಾ ಅವತಾರವನ್ನು ವರ್ಜುವಲ್‌ ಇನ್‌ಪುಯನ್ಸ್‌ರ್ ಎನ್ನಲಾಗಿದೆ. ಈ ಮೂರೂ ರೀತಿಯ ಪ್ರಭಾವಿಗಳ ನಡುವಿನ ವ್ಯತ್ಯಾಸ ಕೂದಲಳೆಯಷ್ಟು.

ಪ್ರಭಾವಿಗಳು ಸ್ವತ: ಉಪಯೋಗಿಸದ ವಸ್ತು ಅಥವಾ ಸೇವೆಗಳ ಬಗ್ಗೆ ಪ್ರಚಾರ ಮಾಡು ವಂತಿಲ್ಲ. ಆದರೆ ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಮಾರ್ಗ ಸೂಚಿ ತಿಳಿಸುವುದಿಲ್ಲ. ಪ್ರಭಾವಿಗಳು ಬಳಸುವ ಭಾಷೆ ಸರಳವಾಗಿ, ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿರಬೇಕು. ಪ್ರಭಾವಿಗಳು ಎನೆಲ್ಲ ಮಾಹಿತಿ ಬಹಿರಂಗಪಡಿಸಬೇಕು ಎಂಬುದರ ದೊಡ್ಡ ಪಟ್ಟಿಯೇ ಇದೆ. ತಾವು ಮಾಡುವ ಪ್ರಚಾರ ಜಾಹೀರಾತು ಪ್ರಯೋಜಿತ ಕಾರ್ಯಕ್ರಮ ಹಣ ಪಡೆದಿರುವ ಪ್ರಚಾರ ಎಂಬ ಅಂಶವನ್ನು ಪ್ರಭಾವಿಗಳು ಸ್ಪಷ್ಟಪಡಿಸಬೇಕು. ತಾವು ಯಾವ ವಸ್ತು ಅಥವಾ ಸೇವೆ¿ ಬಗ್ಗೆ ಪ್ರಚಾರ ಮಾಡುತ್ತಾರೋ ಅದರ ಉತ್ಪಾದಕರು ಅಥವಾ ತಯಾರಕರೊಂದಿಗೆ ಹೊಂದಿರುವ ಸಂಬಂಧವನ್ನು ಬಹಿರಂಗ ಪಡಿಸಬೇಕು. ಪ್ರಭಾವಿಗಳಿಗೆ ತಯಾರಕರು ಹಣ ನೀಡುವುದರ ಜತೆಗೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತಾರೆ. ಉದಾಹರಣೆಗೆ ಪ್ರಚಾರ ಮಾಡುವ ವಸ್ತುಗಳನ್ನು ಅವರಿಗೆ ಉಚಿತವಾಗಿ ನೀಡಲಾಗುತ್ತದೆ. ಅವರನ್ನು ಪ್ರತಿಷ್ಠಿತ ಹೊಟೇಲ್‌ಗ‌ಳಲ್ಲಿ ತಂಗಲು ವ್ಯವಸ್ಥೆ ಮಾಡುತ್ತದೆ. ಪ್ರಭಾವಿಗಳ ಸಂಬಂಧಿಕರಿಗೆ ಉದ್ಯೋಗ ನೀಡುವ ಪದ್ಧತಿಯೂ ಇದೆ. ಇದೆಲ್ಲವೂ ಪ್ರಭಾವಿಗಳ ಮನವೊಲಿಸುವ ಸಾಧನಗಳಾದ್ದರಿಂದ ಪ್ರಭಾವಿಗಳು ಈ ಮಾಹಿತಿ ಕಡ್ಡಾಯವಾಗಿ ಬಹಿರಂಗಪಡಿಸಬೇಕೆಂದು ಮಾರ್ಗಸೂಚಿ ಹೇಳುತ್ತದೆ.

ಮೇಲ್ಕಂಡ ಮಾಹಿತಿ ಹೇಗೆ ಬಹಿರಂಗಪಡಿಸಬೇಕು ಎಂಬುದನ್ನು ಸಹ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಹಣಹೂಡಿಕೆ ಬಗ್ಗೆ ಬರುವ ಜಾಹೀರಾತನ್ನು ನೀವು ಗಮನಿಸಿರಬಹುದು. ಟಿವಿ ಸ್ಕ್ರೀನ್‌ ತುಂಬಾ ಇರುವ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಓದಿ ಮುಗಿಸಲಾಗುತ್ತದೆ. ಯಾವ ವೀಕ್ಷಕರಿಗೂ ಅದು ಅರ್ಥವಾಗುವುದಿಲ್ಲ. ಯಾವುದೋ ಒಂದು ಬ್ರಾಂಡ್‌ ಪಾನೀಯ ಕುಡಿದು ಎತ್ತರದ ಕಟ್ಟಡದಿಂದ ಮತ್ತೂಂದು ಕಟ್ಟಡಕ್ಕೆ ಜಿಗಿಯುವ ಚಿತ್ರ ನಟನ ಜಾಹೀರಾತಿನ ಕೆಳಗೆ ಇದನ್ನು ಯಾರೂ ಅನುಸರಿಸಬಾರದು ಎಂಬ ವಾಕ್ಯ ಇರುತ್ತದೆ. ಆದರೆ ಅದು ವೀಕ್ಷಕರ ಗಮನಕ್ಕೆ ಬರುವುದಿಲ್ಲ. ಆ ನಟನ ಅದೆಷ್ಟೋ ಅಭಿಮಾನಿಗಳು ಅದನ್ನೇ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಪ್ರಭಾವಿಗಳು ಬಹಿರಂಗ ಪಡಿಸಬೇಕಾದ ಮಾಹಿತಿ ಸ್ಪಷ್ಟವಾಗಿ ವೀಕ್ಷಕರಿಗೆ ಎದ್ದು ಕಾಣುವಂತೆ ಇರಬೇಕೆಂದು ಚಿತ್ರದ ಮೇಲೆ ಸೂಪರ್‌ಇಂಪೋಸ್‌ ಮಾಡಬೇಕೆಂದು ಮಾರ್ಗಸೂಚಿ ಹೇಳುತ್ತದೆ. ವೀಡಿಯೋದಲ್ಲಾದರೆ ಮಾಹಿತಿ ದೃಶ್ಯ ಮತ್ತು ಆಡಿಯೋ ಎರಡೂ ಮಾದರಿಯಲ್ಲಿರಬೇಕು. ಬಹಿರಂಗ ಪಡಿಸಬೇಕಾದ ಮಾಹಿತಿ ಒಮ್ಮೆ ಪ್ರದರ್ಶಿಸಿದರೆ ಸಾಲದು. ಜಾಹೀರಾತು ಎಷ್ಟು ಹೊತ್ತು ಸ್ಟ್ರೀಮ್‌ ಆಗುತ್ತದೋ ಅಷ್ಟು ಸಮಯ ಮಾಹಿತಿ ಮುಂದುವರಿಯಬೇಕು.

ಮಾರ್ಗಸೂಚಿಯ ಉಲ್ಲಂಘನೆ ಗ್ರಾಹಕ ಸಂರಕ್ಷಣ ಅಧಿನಿಯಮ 2019ರ ಅಡಿಯಲ್ಲಿ ಹಾದಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ಹೊರಡಿಸಿರುವ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಆದ್ದರಿಂದ ಪ್ರಭಾವಿಗಳು ಸರಕು ಅಥವಾ ಸೇವೆಯ ಬಗ್ಗೆ ಪ್ರಚಾರ ಮಾಡಲು ಒಪ್ಪಿಕೊಳ್ಳುವ ಮುನ್ನ ತಯಾರಕರು ಎಲ್ಲ ಕ್ರಮ ಅನುಸರಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯ. ಅಧಿನಿಯಮದ ಪ್ರಕಾರ ಹಾದಿ ತಪ್ಪಿಸುವ ಜಾಹೀರಾತು ನೀಡುವ ತಯಾರಕರು, ಉತ್ಪಾದಕರು, ಮಾರಾಟಗಾರರು ಮತ್ತು ಪ್ರಭಾವಿಗಳು ರೂ.10 ಲಕ್ಷ ದಂಡ ತೆರಬೇಕಾಗಬಹುದು. ಎರಡನೇ ಬಾರಿ ಉಲ್ಲಂಘನೆಗೆ ದಂಡದ ಮೊತ್ತ 50 ಲಕ್ಷ ರೂ. ಜತೆಗೆ ಪ್ರಭಾವಿಗಳು ಪ್ರಚಾರ ಮಾಡದಂತೆ ಒಂದು ವರ್ಷದಿಂದ ಐದು ವರ್ಷದ ವರೆಗೆ ನಿಷೇಧ ವಿಧಿಸಬಹುದಾಗಿದೆ.

– ವೈ.ಜಿ.ಮುರಳೀಧರನ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.