ಬರೇ ಜನನಾಯಕರೆನಿಸಿಕೊಂಡರೆ ಸಾಲದು; ಜನಸೇವಕರೂ ಆಗಬೇಕಿದೆ


Team Udayavani, Mar 18, 2017, 3:50 AM IST

17-PTI-15.jpg

ಒಬ್ಬನ ತಪ್ಪಿನಿಂದಾಗಿ ದೋಣಿ ಮಗುಚಿದರೆ ದೋಣಿಯಲ್ಲಿದ್ದವರೆಲ್ಲರೂ ನೀರು ಕುಡಿಯಬೇಕಾಗುತ್ತದೆ. ಜನನಾಯಕರು ಬರೀ ಜನನಾಯಕರಾಗಿದ್ದರೆ ಸಾಲದು, ಜನಸೇವಕರೂ ಆಗಬೇಕಿದೆ. ಚುನಾವಣೆ ವೇಳೆ ರಣತಂತ್ರ ಹೆಣೆದು ಅಧಿಕಾರಕ್ಕೆ ಬರುವುದಷ್ಟೇ ಅಲ್ಲ. ಚೆನ್ನಾಗಿ ಸರಕಾರ ನಡೆಸಿ, ನಾಡಿನ ಅಭಿವೃದ್ಧಿ ಸಾಧಿಸಿ ಜನಮನ್ನಣೆಗಳಿಸಲೂ ತಕ್ಕ ರಣತಂತ್ರ ಹೆಣೆಯಬೇಕಿದೆ. 

ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ಹೊರಬಿದ್ದಿದೆ. ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಸೋಲು-ಗೆಲುವುಗಳ ಕಾರಣಗಳ ಬಗ್ಗೆ ಚರ್ಚೆ ನಡೆದಿದೆ. ಚುನಾವಣಾ ಫ‌ಲಿತಾಂಶ ಹೊರಬಿದ್ದ ಸಂದರ್ಭ ಜನನಾಯಕರೆಲ್ಲರಿಗೂ ಆತ್ಮಾವಲೋಕನಕ್ಕೆ ಸಕಾಲ.

ಗೃಹಿಣಿಯೊಬ್ಬಳು ಬಿಚ್ಚಿಟ್ಟ ಘಟನೆ
ಆಕೆಯ ಮನೆಮುಂದೆ ಹಾದು ಹೋಗುವ ರಸ್ತೆಗೆ ಆಗಷ್ಟೇ ಡಾಮರು ಹಾಕಲಾಗಿತ್ತು. ಡಾಮರೀಕರಣದ ವೇಳೆ ರಸ್ತೆ ಸ್ವತ್ಛಗೊಳಿಸಿ ಕಸ, ಕಲ್ಲುಗಳನ್ನು ರಸ್ತೆಯಂಚಿನಲ್ಲಿ ಗುಡ್ಡೆಹಾಕಲಾಗಿತ್ತು. ಗೃಹಿಣಿ ಅವುಗಳನ್ನು ತೆರವುಗೊಳಿಸುವಂತೆ ಕಾರ್ಪೊರೇಟರ್‌ಗೆ ವಿನಂತಿಸಿಕೊಂಡಳು. ಆಗಲಿ, ಕ್ರಮಕೈಗೊಳ್ಳುತ್ತೇನೆ ಅಂದರೂ ಅದು ಬರಿ ಆಶ್ವಾಸನೆಯಾಗಿಯೇ ಉಳಿಯಿತು. ಆಕೆ ಮತ್ತೆ ಮತ್ತೆ ಫೋನಾಯಿಸಿ ನೆನಪಿಸಿದಾಗ ಇದೊಳ್ಳೇ ಕಿರಿಕ್‌ ಪಾರ್ಟಿ ಅನಿಸಿರಬೇಕು. ಆ ಕಾರ್ಪೊರೇಟರ್‌ ಕೂಡ ಮಹಿಳೆ. ಕೊನೆಗೂ ಸ್ಥಳಕ್ಕೆ ಧಾವಿಸಿದಳಾದರೂ ಕಾರಿನಿಂದ ಕೆಳಗಿಳಿಯಲಿಲ್ಲ. ಪಕ್ಕದಲ್ಲಿದ್ದ ಗಂಡನನ್ನು ಕೆಳಗಿಳಿಸಿದಳು. ಆತ ಆ ಗೃಹಿಣಿಯನ್ನು ದಬಾಯಿಸಿ ಬಾಯಿ ಮುಚ್ಚಿಸಿ ಕಾರು ಹತ್ತಿದ. ಅದಾದ ಅನಂತರ ಫೋನು ಮಾಡಿ ಮಾತನಾಡಿಸಲು ಪ್ರಯತ್ನಿಸಿದರೂ ಫ‌ಲ ನೀಡಲಿಲ್ಲ! ಊರ ಹಿತಕ್ಕಾಗಿ ದೂರು ನೀಡಿ ನಾಗರಿಕ ಪ್ರಜ್ಞೆ ಮೆರೆಯಲು ನೋಡಿದ ಗೃಹಿಣಿಗೆ ತಕ್ಕ ಶಾಸ್ತಿಯಾಗಿತ್ತು! ಜನಪ್ರತಿನಿಧಿಗಳನ್ನು ಆರಿಸಿ ಕಳುಹುವುದಷ್ಟೇ ಜನಸಾಮಾನ್ಯನಿಗಿರುವ ಹಕ್ಕು ಎಂಬುದನ್ನಾಕೆಗೆ ಮನವರಿಕೆ ಮಾಡಿಕೊಟ್ಟಿತ್ತು ಅಂದಿನ ಪ್ರಸಂಗ. ಸಣ್ಣ ಪ್ರಸಂಗ, ಆದರೂ ನಮ್ಮ ಜನಪ್ರತಿನಿಧಿಗಳ ಬಗ್ಗೆ ಚಿಂತಿಸುವಂತೆ ಮಾಡಿತ್ತು.

ಪೊಳ್ಳು ಆಶ್ವಾಸನೆ ಹೊಟ್ಟೆ ತುಂಬದು
ಗೆದ್ದು ಬಂದ ಹೊಸದರಲ್ಲಿ ಏನೇನೋ ಕನಸು. ಮಾಧ್ಯಮದವರು ಮಾತನಾಡಿಸಿದಾಗ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಅಂಗೈಯಲ್ಲೇ ಅರಮನೆ ತೋರಿಸುವ ಹಂಬಲ. ಹಾಗಾಗಿ ಜನತಾ ದರ್ಶನದಲ್ಲಿ ಜನಸೇವಕರಂತೆ ಪೋಸು ಕೊಡುತ್ತಾರೆ. ಭ್ರಷ್ಟಾಚಾರವನ್ನು ಬಡಿದಟ್ಟುವ ಭರವಸೆ ನೀಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರು ಎಲ್ಲರಂತಾಗಿಬಿಡುತ್ತಾರೆ. ಆದರೆ ಪೊಳ್ಳು ಆಶ್ವಾಸನೆ ಹೊಟ್ಟೆ ತುಂಬದು. ಜನರ ಸಮಸ್ಯೆ ಪರಿಹರಿಸದು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. “ಸಾರ್ವಜನಿಕರಿಗೆ ತಮಗೆ ಏನು ಬೇಕೋ ತಿಳಿಯದು. ಆದರೆ ಅವರಿಗೆ ಏನು ಬೇಕು ಎಂಬುದನ್ನು ತಿಳಿದು ಅದನ್ನು ಒದಗಿಸಿಕೊಡುವುದು ಜನನಾಯಕರ ಕೆಲಸ ಎಂದಿದ್ದಾರೆ’ ಸರ್‌ ಎಂ. ವಿಶ್ವೇಶ್ವರಯ್ಯ.

ಅಧಿಕಾರ ದಾಹ
ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡೇ ಓಡಾಡುತ್ತಿದ್ದ ಜನನಾಯಕರಿದ್ದರು. ರೈಲು ಅಪಘಾತದ ಸುದ್ದಿ ಕಿವಿಗೆ ಬೀಳುತ್ತಲೇ ನೆಹರೂ ಸಂಪುಟದಲ್ಲಿ ರೈಲ್ವೇ ಸಚಿವರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರಂತೆ. ಮುಂಬಯಿ ಬಾಂಬು ಸ್ಫೋಟ ಸಂದರ್ಭ ಆಗಿನ ಕೇಂದ್ರ ಗೃಹ ಸಚಿವ ಶಿವರಾಜ್‌ ಪಾಟೀಲ್‌ ರಾಜೀನಾಮೆ ನೀಡಿದ್ದರು. ಆದರೆ ಇಂದಿನವರು ಅಧಿಕಾರಕ್ಕೆ ಅಂಟಿಕೊಂಡ ಪರಿ ಅಚ್ಚರಿ ಮೂಡಿಸುವಂತಿದೆ. ಹಿರಿಜೀವವಾದರೂ ಇನ್ನೊಂದು ಅವಕಾಶಕ್ಕಾಗಿ ಹಪಹಪಿಸುವ ಜನನಾಯಕರು, 92ರ ಹರೆಯದಲ್ಲೂ ಮುಖ್ಯಮಂತ್ರಿಯಾಗುವ ಕನಸು ಹೊತ್ತು ಚುನಾವಣಾ ಕಣಕ್ಕಿಳಿದ ಕರುಣಾನಿಧಿಯಂಥವರು, ಚುನಾವಣಾ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮುದಿವಯಸ್ಸಿನಲ್ಲೂ ಪಕ್ಷಾಂತರ ಮಾಡುವವರು ಉದಾಹರಣೆಗಳು. ಇಂಥವರಿಗಾಗಿಯೇ ಹೊಸ ಹುದ್ದೆಗಳು ಹುಟ್ಟಿಕೊಳ್ಳುವುದೂ ಇದೆ! ಬದುಕು ಶಾಶ್ವತವಲ್ಲ ಎಂಬ ಅರಿವು ಇಲ್ಲದಿದ್ದರೂ ಅಧಿಕಾರ ಶಾಶ್ವತವಲ್ಲ ಎಂಬ ಅರಿವುಳ್ಳ ಇಂಥವರಿಗೆ ಇನ್ನೊಮ್ಮೆ ಅಧಿಕಾರಕ್ಕೆ ಬರುವ ಭರವಸೆಯಿಲ್ಲ. ಹಾಗಾಗಿಯೇ ಅವರದು ಗಾಳಿ ಬಂದಾಗ ತೂರಿಕೊಳ್ಳುವ ಜಾಯಮಾನ.

ಮುಜುಗರ ಉಂಟುಮಾಡುವ ಕೆಲಸ
ಜನನಾಯಕರೆಲ್ಲ ಕೆಟ್ಟವರಲ್ಲ. ಆದರೆ ಒಬ್ಬಿಬ್ಬರು ಮಾಡಿದ ಕೆಟ್ಟ ಕೆಲಸ ಎಲ್ಲರನ್ನೂ ಮುಜುಗರಕ್ಕೀಡು ಮಾಡಿಬಿಡುತ್ತದೆ. ಅನಾಣ್ಯೀಕರಣ ಕ್ರಮದ ಬಳಿಕ ಅಲ್ಲಲ್ಲಿ ಐಟಿ ದಾಳಿ ನಡೆದಿದೆ. ದಾಳಿಗೊಳಗಾದವರಲ್ಲಿ ಹೆಚ್ಚಿನವರೂ ಮಂತ್ರಿ ಮಹೋದಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಮುಜುಗರ ಪಡುವಂತಾಗುವ ಪ್ರಸಂಗ ನಮಗೆ ಹೊಸದಲ್ಲ. ಹಿಂದಿನ ಸರಕಾರಾವಧಿಯಲ್ಲಿ ಒಬ್ಬಿಬ್ಬರು ಶಾಸಕರು ಸದನದ ಕಲಾಪದ ನಡುವೆಯೇ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದರು. ಇಂದಿನ ಸರಕಾರದಲ್ಲಿ ಸಚಿವರೊಬ್ಬರು ಸಾರ್ವಜನಿಕ ಸಮಾರಂಭದಲ್ಲೇ ಹಾಗೆ ಮಾಡಿ ಸರಕಾರ ಮುಜುಗರ ಪಡುವಂತೆ ಮಾಡಿದರು. 70ರ ಹರೆಯದ ಸಚಿವ ಮೇಟಿಯವರಂತೂ ಇನ್ನೂ ಒಂದು ಹೆಜ್ಜೆ ಮುಂದುವರಿದರು. ಸರಕಾರ ಮತ್ತಷ್ಟು ಮುಜುಗರ ಪಡುವಂತಾಯಿತು. ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿತು. ಪ್ರಭಾವಶಾಲಿಯಾಗಿದ್ದರೆ ಹಾಗೆಲ್ಲ ಬಿಟ್ಟುಹಾಕುವುದಕ್ಕಾಗುವುದೇ? ಮುಂಬಾಗಿಲಿನಿಂದ ಹೊರಹಾಕಿದರೂ ಹಿಂಬಾಗಿಲಿನಿಂದ ಬರಮಾಡಿಕೊಳ್ಳಬೇಕಾಗುತ್ತದೆ. ಆದರೆ ಸರಕಾರ ರಕ್ಷಣೆ ಕೊಟ್ಟರೂ ಮತದಾರ ಪ್ರಭು ರಕ್ಷಣೆ ಕೊಡುವ ಭರವಸೆಯಿಲ್ಲ. ಉತ್ತರ ಪ್ರದೇಶದ ಅಖೀಲೇಶ್‌ ಯಾದವ್‌ ಸಚಿವ ಸಂಪುಟದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಸಚಿವ ಗಾಯತ್ರಿ ಪ್ರಜಾಪತಿಯನ್ನು ಮೊನ್ನೆ ನಡೆದ ಚುನಾವಣೆಯಲ್ಲಿ ಮತದಾರ ಪ್ರಭು ಕೈಹಿಡಿಯಲಿಲ್ಲ.

ಆರೋಪ-ಪ್ರತ್ಯಾರೋಪ
ವಿಶ್ವೇಶ್ವರಯ್ಯನಂಥವರದು ಜನಕಲ್ಯಾಣಕ್ಕಾಗಿ ಬಿಡುವಿಲ್ಲದ ದುಡಿಮೆ. ಇಂದೂ ಅಂಥವರು ಅಲ್ಲೋ ಇಲ್ಲೋ ಸಿಗಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಶ್ರಮ-ಸಮಯ ದುರ್ಬಳಕೆಯಾಗುವುದೇ ಹೆಚ್ಚು. ಚುನಾವಣಾ ಪ್ರಚಾರಸಭೆಯಾದರೂ ಅಷ್ಟೇ. ಸ್ವಪಕ್ಷ ಸಾಧನೆಗಿಂತ ವಿಪಕ್ಷ ದೂಷಣೆಗೇ ಮೀಸಲು. ನಾಲಿಗೆ ಹರಿಬಿಟ್ಟು ಅಸಂಬದ್ಧ ಹೇಳಿಕೆ ನೀಡಿ ಕಿಡಿಹಚ್ಚಿಬಿಡುವವರೇ ಹೆಚ್ಚು. ಒಂದಷ್ಟು ದಿನ ಪರಸ್ಪರ ಕೆಸರೆರಚಾಟ ನಡೆಯುತ್ತದೆ. ಮತ್ತೆ ಸದ್ದಡಗುತ್ತದೆ. ಆದರೆ ಅವರ ಈ ಅನ್ವೇಷಣಾ ಗುಣ ಯಾವುದಾದರೂ ರಚನಾತ್ಮಕ ಕೆಲಸಕ್ಕೆ ಬಳಕೆಯಾಗಿದ್ದರೆ ಚೆನ್ನಾಗಿತ್ತು. ನಮ್ಮ ಜನನಾಯಕರು ಚೆನ್ನಾಗಿ ಹೋಂವರ್ಕ್‌ ಮಾಡಬಲ್ಲರು. ಆದರೆ ಆಡಳಿತ ಪಕ್ಷದವರಿಗಿಂತಲೂ ವಿರೋಧ ಪಕ್ಷದಲ್ಲಿರುವವರೇ ಹೆಚ್ಚು. 

ಅದೂ ಸದನ ಕಲಾಪದ ವೇಳೆ ಆಡಳಿತ ಪಕ್ಷದವರ ಬೆವರಿಳಿಸಲು! ಇಂತಹ ದುರುದ್ದೇಶಪೂರಿತ ಹೋಂವರ್ಕ್‌ನಿಂದ ಸದನದಲ್ಲಿ ಕದನವೇರ್ಪಟ್ಟು ಕಾಲಹರಣವಾಗುವುದೇ ವಿನಾ ಇನ್ನೇನೂ ಸಾಧಿಸಿದಂತಾಗುವುದಿಲ್ಲ. 2ಜಿ ಹಗರಣ, ತೆಹಲ್ಕಾ ಹಗರಣ, ಬೊಫೋರ್ಸ್‌ ಹಗರಣ ಇತ್ಯಾದಿ ಹತ್ತಾರು ಹಗರಣಗಳು ಕಲಾಪಗಳನ್ನು ಬಲಿತೆಗೆದುಕೊಂಡುದನ್ನು ಜನರಿನ್ನೂ ಮರೆತಿರಲಾರರು. ತಮ್ಮ ತಪ್ಪನ್ನು ಮರೆಮಾಚಲು ಇತರರ ತಪ್ಪನ್ನು ಎತ್ತಿ ಆಡುವವರೇ ಹೆಚ್ಚು. ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಲ್ಲ. ಯಾವ ಪಕ್ಷಕ್ಕೂ ಅಭಿವೃದ್ಧಿ ಕಾರ್ಯಗಳಲ್ಲಾದರೂ ಸರಕಾರದೊಂದಿಗೆ ಕೈಜೋಡುವ ಅಭ್ಯಾಸವಿದ್ದಂತಿಲ್ಲ.

ಜನವಿರೋಧಿ ಯೋಜನೆಗಳು
ಸರಕಾರದ ಯೋಜನೆಗಳಿರುವುದು ಜನರಿಗಾಗಿ. ಹಾಗಾಗಿ ಅವುಗಳನ್ನು ಕೈಗೊಳ್ಳುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲ ಯೋಜನೆಗಳಿಗೂ ಪರ-ವಿರೋಧಗಳು ಸಹಜ. ಆದರೆ ವಿರೋಧವೇ ಹೆಚ್ಚು ಕಂಡುಬಂದರೆ ಅದು ಜನವಿರೋಧಿ ಯೋಜನೆ ಅನಿಸಿಕೊಳ್ಳುತ್ತದೆ. ಜನ ಅದನ್ನು ವಿರೋಧಿಸುವುದಕ್ಕೂ ಬಲವಾದ ಕಾರಣವಿರುತ್ತದೆ. ಹಾಗಾಗಿ ಸರ್ಕಾರ ಅದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸದೆ ಕೈಬಿಡಬೇಕಾಗುತ್ತದೆ. ರಾಜ್ಯ ಸರಕಾರ ಉದ್ದೇಶಿತ ಉಕ್ಕಿನ ಸೇತು ನಿರ್ಮಾಣ ಯೋಜನೆಯನ್ನು ಕೈಬಿಟ್ಟಿತು. ಆದರೆ ಜನಪ್ರತಿರೋಧದ ನಡುವೆಯೂ ಎತ್ತಿನ ಹೊಳೆ ಯೋಜನೆಯನ್ನು ಪಟ್ಟು ಬಿಡದೆ ಮುಂದುವರಿಸಿದೆ.

ಅಂತಿಮ ತೀರ್ಪು
ಸಣ್ಣ-ಪುಟ್ಟ ವಿಷಯಗಳೆನಿಸಬಹುದು. ಆದರೆ ಮುಂಬರುವ ಚುನಾವಣೆಯ ಮೇಲೆ ಪರಿಣಾಮ ಬೀರದು ಎನ್ನುವಂತಿಲ್ಲ. ಅವು ಜನಪ್ರತಿನಿಧಿಗಳ ಲಾಭ-ನಷ್ಟಗಳ ಖಾತೆಯಲ್ಲಿ ಜಮೆಗೊಳ್ಳುತ್ತವೆ. ಲೆಕ್ಕ ಚುಕ್ತವಾಗಿ ಅಂತಿಮ ತೀರ್ಪು ಹೊರಬೀಳುವುದು ಚುನಾವಣಾ ಫ‌ಲಿತಾಂಶದ ವೇಳೆ. ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮತದಾರ ಪ್ರಭುವಿಗೆ ಚುನಾವಣೆ ಏಕಮೇವ ಸಂದರ್ಭ. ಅದನ್ನಾತ ಸಮರ್ಥವಾಗಿ ಬಳಸಿಕೊಳ್ಳುತ್ತಾನೆ. ತಪ್ಪಿ ನಡೆದವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ. ಈ ಸಾಲಿನ ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ಅದಕ್ಕೆ ಸಾಕ್ಷಿ. ಆಡಳಿತಾರೂಢ ಸರಕಾರದ ಮುಖ್ಯಮಂತ್ರಿಗಳನ್ನೇ ಮತದಾರ ಪ್ರಭು ಮುಲಾಜಿಲ್ಲದೆ ತಿರಸ್ಕರಿಸಿದ್ದಾನೆ. ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ವರ್ಸೆàಕರ್‌ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್‌ ರಾವತ್‌ರನ್ನು ಮನೆ ಹಾದಿ ಹಿಡಿಸಿದ್ದಾನೆ. ಚುನಾವಣೆಯಲ್ಲಿ ಅನುಭವಿಸಿದ ಸೋಲು-ಗೆಲುವು, ಆಡಳಿತ ವಿರೋಧಿ ಅಲೆ, ಅನಂತರ ಕಾಣಿಸಿಕೊಳ್ಳುವ ರಾಜಕೀಯ ಸ್ಥಿತ್ಯಂತರ ಇವೆಲ್ಲವುಗಳ ಹಿಂದೆಯೂ ಮತದಾರ ಪ್ರಭುವಿನ ಪಾತ್ರ ಇದ್ದೇ ಇದೆ. ಒಂದು ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬಂದು ಮತ್ತೂಂದು ಚುನಾವಣೆಯಲ್ಲಿ ನೆಲಕ್ಕಚ್ಚಿತೆಂದರೆ ಅದಕ್ಕೆ ಆ ಸರಕಾರದ ಬಗ್ಗೆ ಮತದಾರ ಪ್ರಭುವಿಗಾದ ಭ್ರಮನಿರಸನವೇ ಕಾರಣ.

ರಾಂ ಎಲ್ಲಂಗಳ

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.