ಸರಕಾರಿ ನೌಕರರ ವರ್ಗಾವಣೆ ರಾಜಕೀಯ ಮುಕ್ತವಾಗಿರಲಿ


Team Udayavani, Jul 21, 2023, 5:34 AM IST

TRANSFER

ಸರಕಾರಿ ಅಧಿಕಾರಿ-ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾದರೆ ರಾಜಕಾರಣಿಗಳ ಹಸ್ತಕ್ಷೇಪ ಅನುಚಿತವೇ? ಎಂಬ ಪ್ರಶ್ನೆಗೆ ಈ ವರ್ಗಾವಣೆಯ ಹಿಂದಿನ ಉದ್ದೇಶ ಹಾಗೂ ನೌಕರಶಾಹಿಯ ನೇಮಕ, ಸೇವಾ ನಿಯಮಗಳ ಅವಲೋಕನ ಪ್ರಸ್ತುತವಾದೀತು. ನೌಕರರು ದೀರ್ಘ‌ಕಾಲ ಒಂದೇ ಕಡೆ ಕೆಲಸ ಮಾಡಿಕೊಂಡು ಇರುವಾಗ ಆ ಕೆಲಸದ ಸ್ವರೂಪ, ಪರಿಸರ ಒಂದೇ ತೆರನಾಗಿದ್ದು ಕ್ರಮೇಣ ಏಕತಾನತೆಯಿಂದ ಜಡತ್ವಕ್ಕೆ ಗುರಿಯಾಗುವ ಸಂಭವವುಂಟು.

ಅವರಲ್ಲಿ ದಕ್ಷತೆ ಕುಸಿಯುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆ. ಹಾಗಾಗದಂತೆ ನೌಕರರಲ್ಲಿ ಸದಾ ಸೇವಾ ಮನೋಭಾವ ಜಾಗೃತವಾಗಿರುವಂತೆ ಚುರುಕುಗೊಳಿಸಲು ಉಪಕ್ರಮವೆಂಬಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗ ಮಾಡಲಾಗುತ್ತದೆ. ಅಲ್ಲದೆ ಪ್ರಮಾಣಬದ್ಧ ಸಿಬಂದಿ ಹಂಚಿಕೆ, ನೂತನ ಯೋಜನೆಗಳ ಅನುಷ್ಠಾನ, ತುರ್ತು ಪರಿಸ್ಥಿತಿ ನಿರ್ವಹಣೆ ಇತ್ಯಾದಿ ಕಾರಣಗಳಿಂದ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎನ್ನುವುದು ಸ್ಪಷ್ಟ. ಹಾಗೆ ವರ್ಗಾವಣೆಯ ಆದೇಶದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಎದ್ದು ಕಾಣಬೇಕು ಎನ್ನುವುದು ಅಷ್ಟೇ ಮುಖ್ಯ.

ನೌಕರರ ವರ್ಗಾವಣೆ ಕಾಲಕಾಲಕ್ಕೆ ಸರಕಾರ ಕೈಗೊಳ್ಳುವ ಧೋರಣೆಗೆ ಸಂಬಂಧಿಸಿದ್ದು, ಆದ ಕಾರಣ ಶಾಶ್ವತ ಕಾನೂನನ್ನು ರೂಪಿಸುವ ಕ್ರಮವಿಲ್ಲ. ಸರಕಾರ ವರ್ಗಾವಣೆಗೆ ಮಾರ್ಗಸೂಚಿಯನ್ನು ರೂಪಿಸಿ ಅನುಷ್ಠಾನಕ್ಕೆ ಇಲಾಖೆಗಳಿಗೆ ವಹಿಸಿ ಮೇಲುಸ್ತುವಾರಿ ನೋಡುವುದು ಲಾಗಾಯ್ತಿನಿಂದ ಬಂದ ಕ್ರಮ. ಈ ಮಾರ್ಗಸೂಚಿಯಲ್ಲಿ ಸಾಮಾನ್ಯ ವರ್ಗಾವಣೆ (General Transfer)ಯ ಅವಧಿ ಮತ್ತು ಇತರ ಸ್ವರೂಪದ ವರ್ಗಾವಣೆಗಳಾದ ಬೇಡಿಕೆ, ಸತಿಪತಿ, ಪರಸ್ಪರ, ಯೋಜನೆಗಳ ಅನುಷ್ಠಾನ, ತುರ್ತು ಪರಿಸ್ಥಿತಿ ಯಲ್ಲಿ ವರ್ಗಾವಣೆಯ ಪ್ರಕ್ರಿಯೆ ಹೇಗಿರಬೇಕೆಂಬ ಸೂಚನೆ ಇರುತ್ತದೆ. ಸಾಮಾನ್ಯ ವರ್ಗಾವಣೆಯನ್ನು ಮೇ, ಜೂನ್‌ ತಿಂಗಳಲ್ಲಿ ಮಾಡುವುದಾದರೂ ಸಾಕಷ್ಟು ಪೂರ್ವದಲ್ಲಿ ನೌಕರರು ಬಯಸುವ ಸ್ಥಳದ ಆಯ್ಕೆಗೆ ಅವಕಾಶವಿದೆ. ಹಿಂದೆ ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ವರ್ಗಾ ವಣೆಯನ್ನು ಶೈಕ್ಷಣಿಕ ವರ್ಷ (Academic Year) ಆರಂಭವಾಗುವ ಮುನ್ನ ಮಾಡಿ ಮುಗಿಸಬೇಕೆಂಬ ಸ್ಪಷ್ಟ ಸೂಚನೆ ಇಲಾಖೆಗಳಿಗಿತ್ತು.

ನ್ನ ಅಕ್ಷದ ಮೇಲೆ ನಿರಾತಂಕವಾಗಿ ಸುತ್ತುವ ಚಕ್ರದಂತಿರುವ ವರ್ಗಾವಣೆ ಪ್ರಕ್ರಿಯೆಗೆ ಗುಂಡೂರಾವ್‌ ಮುಖ್ಯಮಂತ್ರಿಯಾಗಿರುವಾಗ ಭಾರೀ ಬದಲಾವಣೆ ತರಲಾಯಿತು. ಸರಕಾರಿ ನೌಕರರ ವರ್ಗಾವಣೆಯ ಅಧಿಕಾರವನ್ನು ಇಲಾಖಾ ಮುಖ್ಯಸ್ಥರಿಂದ ಆಯಾ ಇಲಾಖಾ ಸಚಿವರಿಗೆ ವರ್ಗಾಯಿಸಲಾಯಿತು. ಸಚಿವರು ಸರಕಾರದ ಭಾಗವೇ ಆದರೂ ಅವರು ಚುನಾಯಿತ ಪ್ರತಿನಿಧಿಯಾಗಿದ್ದು ಅವರ ಪೂರ್ವಾಶ್ರಮ ರಾಜಕೀಯವೇ. ಅವರಿಗೆ ದತ್ತವಾದ ಅಧಿಕಾರ ನಿಧಾನವಾಗಿ ಶಿಥಿಲವಾಗತೊಡಗಿತು. ಮುಂದಿನ ಸರಕಾರಗಳು ಅಧಿಕಾರಕ್ಕೆ ಬಂದಾಗ ನೌಕರರ ವರ್ಗಾವಣೆಯಲ್ಲಿ ಇನ್ನೂ ಹೆಚ್ಚಿನ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಲಾಯಿತು. ಅಲ್ಲಿಂದ ನೌಕರರ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕುಂಠಿತವಾಯಿತು. ಪರಿಣಾಮ ವಾಗಿ ನೌಕರಶಾಹಿಯ ದಕ್ಷತೆಯೂ ಕುಸಿಯಿತು ಎಂದು ಹೇಳಿದರೆ ಅವಸರದ ಹೇಳಿಕೆಯಾಗಲಾರದು. ಸಾಲದೆಂಬಂತೆ ಸರಕಾರ ಕಲ್ಪಿಸಿದ ಕೌನ್ಸೆಲಿಂಗ್‌ ವ್ಯವಸ್ಥೆ ಮೊದಲ ಒಂದೆರಡು ವರ್ಷ ಸರಿಯಾಗಿ ನಡೆದರೂ, ಅನಂತರ ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಹಠಾತ್‌ ಬ್ಲಾಕ್‌ ಮಾಡುವ ಹಾಗೂ ಬೇಕೆಂದಾಗ ಓಪನ್‌ ಮಾಡುವ ಸರ್ಕಸ್‌ ನಡೆಯುತ್ತಿದೆ ಎಂಬ ದೂರಿದೆ.

ಸರಕಾರದ ಅಸ್ತಿತ್ವಕ್ಕೆ ಸಂವಿಧಾನದ ಚೌಕಟ್ಟಿನಲ್ಲಿ ನೀತಿ ನಿಯಮಗಳಿದ್ದು ಅದು ಯಾವತ್ತೂ ಸ್ಥಿರ. ಪ್ರಜಾಸತ್ತೆಯ ಲಕ್ಷಣ. ಕಾಲಕಾಲಕ್ಕೆ ಆಡಳಿತದ ಧೋರಣೆಯನ್ನು ರೂಪಿಸಲು ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಶಾಸನ ಸಭೆ ಇದ್ದು ಅದರಲ್ಲಿರುವ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಧೋರಣೆಯನ್ನು ರೂಪಿಸುವ ಕಾರ್ಯ ಮಾಡುತ್ತದೆ. ಈ ಸರಕಾರಕ್ಕೆ ಹೊಂದಿಕೊಂಡು ಖಾಯಂ ವ್ಯವಸ್ಥೆಯಾದ ನೌಕರಶಾಹಿ ಇರುತ್ತದೆ. ಸಂವಿಧಾನದ ಆರ್ಟಿಕಲ್‌ 309ರಂತೆ ಸೂಕ್ತ ನಿಯಮಾವಳಿ ರೂಪಿಸಿ ನೌಕರಶಾಹಿಯನ್ನು ನೇಮಕ ಮಾಡುವ ಅಧಿಕಾರ ಸರಕಾರಕ್ಕೆ ದತ್ತವಾಗಿದೆ.

ಹಾಗೆ ನೇಮಕಗೊಂಡ ನೌಕರ, ನೌಕರಿಗೆ ಸೇರುವಾಗ ಸಂವಿಧಾನ ಪ್ರಭು-ರಾಜ್ಯದ ಸಂದರ್ಭದಲ್ಲಾದರೆ ರಾಜ್ಯಪಾಲರಿಗೆ ತಾನು ಭಾರತೀಯ ಸಂವಿಧಾನದಲ್ಲಿ ನಂಬಿಕೆಯುಳ್ಳವ (Oath of alliagience to Indian Constitution) ನಾಗಿದ್ದೇನೆ ಎಂಬ ಲಿಖೀತ ಪ್ರತಿಜ್ಞಾ ವಿಧಿಯನ್ನು ಸಲ್ಲಿಸತಕ್ಕದ್ದು. ರಾಜ್ಯಪಾಲರ ಇಚ್ಛೆಯಂತೆ ಸರಕಾರದ ಧೋರಣೆಯನ್ನು ಅನುಷ್ಠಾನಿ ಸುವುದು ನೌಕರಶಾಹಿಯ ಕರ್ತವ್ಯ. ಸೇವಾ ನಿಯಮಾ ವಳಿಯಂತೆ ಇಲಾಖೆ, ನೌಕರರನ್ನು ನಿಯಂತ್ರಿಸುತ್ತದೆ. ಹಾಗಾಗಿ ಸರಕಾರಿ ನೌಕರ ಸರಕಾರದ ನೇರ ಸ್ವಾಮ್ಯತೆಯಲ್ಲಿರುತ್ತಾನೆ. ವರ್ಗಾವಣೆಯು ಇಲಾಖಾ ಕಾರ್ಯ ಚಟುವಟಿಕೆಗಳಲ್ಲಿ ಒಂದು.

ವಸ್ತುಸ್ಥಿತಿ ಹೀಗಿರುವಾಗ ಸರಕಾರಿ ನೌಕರ ವರ್ಗಾವಣೆಗೆ ಸಚಿವ/ಶಾಸಕರ ಒಪ್ಪಿಗೆ ಯಾ ಅನು ಮೋದನೆ ಬೇಕೇ? ಅದರಲ್ಲಿಯೂ ಈ ವರ್ಗಾವಣೆಗಳು ಸರಕಾರವೇ ರೂಪಿಸಿದ ಮಾರ್ಗಸೂಚಿಯಂತೆ ಕಾರ್ಯ ರೂಪಕ್ಕೆ ಬರಬೇಕಾದದ್ದಷ್ಟೇ! ಈ ಮಾರ್ಗಸೂಚಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗಿಗಳಾದ ಸಚಿವರು ಅದರ ಅನುಷ್ಠಾನದಲ್ಲಿ ಭಾಗಿಗಳಾಗುವುದು ಸಂವಿಧಾನದ ಆಶಯಕ್ಕೆ ವಿರೋಧವಲ್ಲವೇ! ಸರಕಾರಿ ನೌಕರರ ವರ್ಗಾವಣೆಯ ಹೊಣೆ ಇಲಾಖೆಗಳಿಗೆ ಸೀಮಿತಗೊಳಿಸುವುದು ವಿಹಿತ.

ಇಲಾಖಾ ಮುಖ್ಯಸ್ಥರಲ್ಲಿ ನೌಕರರ ವರ್ಗವಾರು ಸೇವಾ ವಿವರಗಳಿರುತ್ತವೆ. ಹಾಗೆ ಯೋಜನೆಗಳ ಪ್ರಾಶಸ್ತವೂ ಇಲಾಖೆಗೆ ತಿಳಿದಿರುತ್ತದೆ ಮತ್ತು ಸಮರ್ಪಕವಾಗಿ ಅನುಷ್ಠಾನಿಸುವ ಜವಾಬ್ದಾರಿ ಹೊಂದಿರುತ್ತದೆ. ಆ ಪ್ರಕಾರ ನೌಕರರ ವರ್ಗಾವಣೆಯನ್ನು ಮಾರ್ಗಸೂಚಿಯಂತೆ ಕಾರ್ಯಗತಗೊಳಿಸುವ ಜವಾಬ್ದಾರಿ ಇಲಾಖೆಗೆ ಸೀಮಿತಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮ. ರಾಜಕೀಯ ನುಸುಳದಂತೆ ಆಡಳಿತ ನಡೆಸುವುದು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಅಂಶ.

ಹಾಲಿ ಇರುವ ವ್ಯವಸ್ಥೆಯಂತೆ ಬಹುಮತ ಗಳಿಸಿದ ರಾಜಕೀಯ ಪಕ್ಷ ಆಡಳಿತಕ್ಕೆ ಬರುತ್ತಲೇ ನೌಕರರ ವರ್ಗಾವರ್ಗಿ ಗರಿಕೆದರಿಕೊಳ್ಳುತ್ತದೆ. ಈ ವಿದ್ಯಮಾನ ಸಾರ್ವಜನಿಕ ಹಿತಾಸಕ್ತಿಗೆ ವಿರೋಧವಾದ ನಡೆ. ನೌಕರರ ವರ್ಗಾವಣೆ, ಮಾರ್ಗಸೂಚಿಯಂತೆ ನಡೆಯು ತ್ತಿರಬೇಕು. ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಇರಕೂಡದು. ಇತ್ತೀಚೆಗಿನ ವರ್ಷಗಳಲ್ಲಿ ಆಡಳಿತಕ್ಕೆ ಬರುವ ರಾಜಕೀಯ ಪಕ್ಷಗಳು ಆಡಳಿತದಲ್ಲಿ ರಾಜಕೀಯವನ್ನು ಬೆರೆಸುವ ಕಾನೂನು ರೂಪಿಸುವುದು ದುರದೃಷ್ಟದ ಸಂಗತಿ.

ಒಂದು ಉದಾಹರಣೆ: ಈಗ ಶಾಸಕ/ಸಂಸದರಿಗೆ ಆಪ್ತ ಸಹಾಯಕರನ್ನಾಗಿ ಸರಕಾರಿ ನೌಕರರನ್ನು ನೇಮಿಸುವ ಕಾನೂನಿದೆ. ಅವರಿಗೆ ಬೇಕಾದವರನ್ನು ಆಯ್ಕೆ ಮಾಡುವ ಅವಕಾಶವೂ ಇದೆ. ಅಂಥ ಬೇಡಿಕೆ ಬಂದಾಗ ಸಿಬಂದಿಯನ್ನು ಇಲಾಖೆ ಯಿಂದ ವರ್ಗ ಮಾಡಲಾಗುತ್ತದೆ. ಅವರು ಈ ಚುನಾಯಿತ ಪ್ರತಿನಿಧಿಗಳ ಆಪ್ತ ಸಹಾಯಕರಾಗಿರುವಷ್ಟು ಕಾಲ ಅವರ ಆಜ್ಞಾನುವರ್ತಿಯಾಗಿರ ಬೇಕಷ್ಟೇ! ಶಾಸಕ/ಸಂಸದರಲ್ಲಿ ಅನೇಕರು ವಿಪಕ್ಷದವರಿರುತ್ತಾರೆ. ಅವರು ಸರಕಾರದ ನಡೆಯನ್ನು ವಿರೋಧಿಸುತ್ತಲೇ ಇರುತ್ತಾರೆ. ಇವರ ವಿರೋಧದ ಚಟುವಟಿಕೆಗಳಲ್ಲಿ ಈ ಆಪ್ತ ಸಹಾಯಕರನ್ನು ಬಳಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸರಕಾರಿ ನೌಕರನೇ ಸರಕಾರದ ಧೋರಣೆಯ ವಿರುದ್ಧದ ಚಟುವಟಿಕೆಯಲ್ಲಿ ಭಾಗ ವಹಿಸುತ್ತಿರುವುದು ಕಾನೂನಾತ್ಮಕ ಸಹ್ಯವಾಗುವುದಾದರೆ ಇದೆಂಥ ವಿಪರ್ಯಾಸ.

ಶಾಸಕ/ಸಂಸದರು ಖಾಸಗಿ ವ್ಯಕ್ತಿಗಳನ್ನು ಆಪ್ತ ಸಹಾಯಕರಾಗಿ ತೆಗೆದುಕೊಳ್ಳಲಿ. ವೆಚ್ಚವನ್ನು ಸರಕಾರ ಭರಿಸಲಿ. ಇಲ್ಲಿ ವಿಷಯ ಸೂಕ್ಷ್ಮ, ಪರಿಣಾಮ ಗಂಭೀರ. ದುರದೃಷ್ಟ ವೇನೆಂದರೆ ಭಾರತದಲ್ಲಿ ಸಾರ್ವಜನಿಕರು ಇಂಥ ಸಾಂವಿಧಾನಿಕ ವಿರೋಧ ವನ್ನು ಗಮನಿಸಿ ಪ್ರತಿಕ್ರಿಯಿಸುವುದಿಲ್ಲ. ಏನೇ ಇರಲಿ, ನೌಕರಶಾಹಿಯ ವರ್ಗಾವಣೆ ಯಾವತ್ತೂ ರಾಜಕೀಯ ಮುಕ್ತವಾಗಿರಲಿ. ಈ ಬಗ್ಗೆ ಸಾರ್ವಜನಿಕರು, ಸಾರ್ವಜನಿಕ ಹಿತದೃಷ್ಟಿಯಿಂದ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ.

ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.