ಬದಲಾಗಲಿ ಚುನಾವಣಾ ನಿಯಮಗಳು 


Team Udayavani, Nov 7, 2018, 12:08 PM IST

4.jpg

ಸರಕಾರಿ ನೌಕರರಿಗೆ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿ ಮಾಡಿರುವಾಗ, ಸರಕಾರ ನಡೆಸುವ ರಾಜಕರಣಿಗಳಿಗೆ ನಿವೃತ್ತಿ ವಯಸ್ಸು ಏಕ್ಕಿಲ್ಲ? ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸಬೇಕು. ಇವರ ನಿವೃತ್ತಿಯಿಂದ ಪ್ರತಿಭಾವಂತ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರಕಬಹುದು . ರಾಜಕಾರಣದಲ್ಲಿ ಏಕಸ್ವಾಮ್ಯತೆಯನ್ನು ಕಡಿಮೆ ಮಾಡಬಹುದು.ಪದೇ ಪದೇ ಚುನಾವಣೆ ನಡೆಸುವುದರಿಂದ  ದೇಶದ ಬೊಕ್ಕಸಕ್ಕೆ ಆಗುವ ಆರ್ಥಿಕ ಹೊರೆಯೂ ಅಪಾರ. ಒಂದು ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಸುವುದೆಂದರೆ ಈಗ ಕೋಟಿಗಟ್ಟಲೆ ರೂಪಾಯಿ ಖರ್ಚಿನ ಬಾಬತ್ತು. ಏಕಕಾಲದಲ್ಲಿ ಚುನಾವಣೆ ನಡೆದರೆ ಈ ಹಣವನ್ನು ಅಭಿವೃದ್ಧಿಗೆ ಉಪಯೋಗಿಸಬಹುದು.                          

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೇ ಮುಖ್ಯ ವಾಗಿರುತ್ತವೆಯಾದರೂ ಪದೇ ಪದೇ ಚುನಾವಣೆಗಳು ನಡೆಯುವುದು ದೇಶದ ಸರ್ವತೋಮುಖವಾದ ಅಭಿವೃದ್ದಿಯ ದೃಷ್ಟಿಯಿಂದ ಹಿತವಾದುದಲ್ಲ .ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಪೋಲಾಗುವುದರಿಂದ ಇದು ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಏಕಕಾಲದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತನೆಗಳು ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ . ಈ ನಡುವೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಉಪಚುನಾವಣೆಗಳು ಸರಕಾರ ಮತ್ತಷ್ಟು ಹೊರೆಯಾಗುತ್ತಿದೆ. ಆಶ್ಚರ್ಯವೆಂದರೆ ಕೇವಲ 6 ತಿಂಗಳ ಅಧಿಕಾರ ಅವಧಿಗಾಗಿ ಚುನಾವಣಾ ಆಯೋಗವು ಮೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಘೋಷಣೆ ಮಾಡಿದೆ.ಆರು ತಿಂಗಳಿಗಿಂತ ಹೆಚ್ಚು ಸಮಯ ಯಾವ ಕ್ಷೇತ್ರವು ಪ್ರತಿನಿಧಿ ರಹಿತವಾಗಿರಬಾರದು ಎನ್ನುವ ನಿಯಮ ಇರುವುದರಿಂದ ಚುನಾವಣೆಯನ್ನು ಘೋಷಣೆ ಮಾಡಿದೆ. ಆದರೂ ಈ 6 ತಿಂಗಳಿಗಾಗಿ ಸರಕಾರದ ಮೇಲೆ ಬೀಳುವ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದಾಗ ಈ ಉಪಚುನಾವಣೆಗಳ ಅಗತ್ಯವಿತ್ತೇ ಎಂಬ ಪ್ರಶ್ನೆ ಮತದಾರಲ್ಲಿ ಮೂಡುವುದು ಸಹಜ. ಈ ರೀತಿಯ ಅಲ್ವಾವಧಿಯ ಚುನಾವಣೆಯನ್ನು ತಪ್ಪಿಸುವ ಜೊತೆಯಲ್ಲಿ ಚುನಾವಣೆಯ ಕೆಲವೊಂದು ನೀತಿ ನಿಯಮಗಳಲ್ಲಿ ಬದಲಾವಣೆಯಾದರೆ ಒಳ್ಳೆಯದು .ಅವುಗಳ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ. 

ಅವಧಿ ಪೂರ್ವ ರಾಜೀನಾಮೇ ತಡೆ
ನಾವು ಜನಪ್ರತಿನಿಧಿಗಳನ್ನು 5 ವರ್ಷದ ಅವಧಿಗೆ ಆಯ್ಕೆ ಮಾಡಿ ಕಳುಹಿಸುತ್ತೇವೆ. ಪ್ರತಿಯೊಂದು ಕ್ಷೇತ್ರದಲ್ಲಿ ಆಯ್ಕೆಯಾದ ಅಭ್ಯರ್ಥಿಯು 5 ವರ್ಷಗಳ ವರೆಗೆ ಆ ಕ್ಷೇತ್ರದ ಜನಪ್ರತಿನಿಧಿಯಾ ಗಿಯೇ ಮುಂದುವರಿಯಬೇಕು .ಆವಾಗ ಉಪಚುಣಾವಣೆಗಳು ಸಂಭವಿಸಲು ಸಾಧ್ಯವಿಲ್ಲ. ಅನಿವಾರ್ಯ ಕಾರಣದ ಹೊರತಾಗಿ ಯಾವ ಸಂಸದರು ಅಥವಾ ಶಾಸಕರು ರಾಜೀನಾಮೆ ನೀಡಬಾರದು ಎನ್ನುವ ಕಾನೂನು ಜಾರಿಗೆ ಬಂದರೆ ಚುನಾಯಿತ ಅಭ್ಯರ್ಥಿ ಅರ್ಧದಲ್ಲಿ ರಾಜೀನಾಮೆ ಕೊಡುವುದು ಅಸಾಧ್ಯವಾಗುತ್ತದೆ. ರಾಜೀನಾಮೆ ಕೊಡಲೇ ಬೇಕಾದರೆ 5 ವರ್ಷದ ಅವಧಿಯ ನಂತರ ರಾಜೀನಾಮೆ ಕೊಡುವ ಪದ್ಧತಿ ಜಾರಿಗೆ ಬಂದರೆ ಈ ಉಪಚುನಾವಣೆಗಳನ್ನು ಕಡಿಮೆಗೊಳಿಸಬಹುದು. 

ಏಕಕ್ಷೇತ್ರದಲ್ಲಿ ಮಾತ್ರ ಸ್ವರ್ಧೆ
ರಾಜಕಾರಣಿಗಳು ತಮ್ಮ ಅನುಕೂಲ ನೋಡಿಕೊಂಡು ಎರಡು ಕ್ಷೇತ್ರಗಳಲ್ಲಿ ಸ್ವರ್ಧೆಗಿಳಿಯುತ್ತಾರೆ. ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಒಂದು ಕ್ಷೇತ್ರವನ್ನು ಬಿಟ್ಟು ಕೊಡಬೇಕಾಗುತ್ತದೆ. ಆ ಕ್ಷೇತ್ರದಲ್ಲಿ ಉಪಚುನಾವಣೆ ಮಾಡಲೇ ಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ವರ್ಧಿಸುವ ನಿಯಮ ಜಾರಿಗೆ ಬರಬೇಕು. ಇದರಿಂದ ಉಪಚುನಾವಣೆಗಳಗೆ ಹಾಗೂ ಅದಕ್ಕಾಗುವ ಖರ್ಚುವೆಚ್ಚಗಳಿಗೆ ತಡೆತರಬಹುದು. ಮತದಾರರು ಕೂಡಾ ಪದೇ ಪದೇ ಮತದಾನ ಮಾಡುವುದನ್ನು ತಪ್ಪಿಸಬಹುದು. 

ಕನಿಷ್ಟ ವಿದ್ಯಾರ್ಹತೆ 
ಚುನಾಯಿತನಾದ ಅಭ್ಯರ್ಥಿ ಆ ಕ್ಷೇತ್ರದ ಜನಪ್ರತಿನಿಧಿ ಆಗಿರುವುದರಿಂದ ಆತನು ಜ್ಞಾನ ಸಂಪನ್ನನಾಗಿರಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ದಿಯಲ್ಲಿ ಜನತೆಯ ಸಮಸ್ಯೆಗಳಿಗೆಲ್ಲ ಸೂಕ್ತವಾಗಿ ಸ್ವಂದಿಸಬೇಕಾದ ಅಗತ್ಯವಿರುತ್ತದೆ.ಜನಪ್ರತಿನಿಧಿಯಲ್ಲಿ ಈ ಬಗ್ಗೆ ಬಹಳಷ್ಟು ಜ್ಞಾನ ಇಲ್ಲವಾದರೆ ಮತದಾರರು ಅವನಿಂದ ಏನನ್ನೂ ನಿರೀಕ್ಷಿಸುವ ಹಾಗಿಲ್ಲ. ಆದ್ದರಿಂದ ರಾಜಕಾರಣಿಗಳಿಗೂ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿದರೆ ನಮ್ಮ ಜನಪ್ರತಿನಿಧಿಗಳು ಪ್ರಬುದ್ಧರಾಗಬಹುದು. ಅಂಥವರಿಂದ ಉತ್ತಮ ಸರಕಾರವನ್ನು ನಿರೀಕ್ಷಿಸಬಹುದು. 

ನಿವೃತ್ತಿ ವಯಸ್ಸು 
 ಸರಕಾರದ ಎಲ್ಲ ನೌಕರರಿಗೆ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿ ಮಾಡಿರುವಾಗ, ಸರಕಾರ ನಡೆಸುವ ರಾಜಕರಣಿಗಳಿಗೆ ನಿವೃತ್ತಿ ವಯಸ್ಸು ಏಕ್ಕಿಲ್ಲ? ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸಬೇಕು. ಇವರ ನಿವೃತ್ತಿಯಿಂದ ಪ್ರತಿಭಾವಂತ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರಕಬಹುದು . ರಾಜಕಾರಣದಲ್ಲಿ ಏಕಸ್ವಾಮ್ಯತೆಯನ್ನು ಕಡಿಮೆ ಮಾಡಬಹುದು. ಹಿರಿತನದ ಬಗ್ಗೆ ಹೊಡೆದಾಡಿಕೊಳ್ಳುವುದನ್ನು ನಿಲ್ಲಿಸಬಹುದು. ಯುವಜನಾಂಗಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಡಬಹುದು. 

ಪಕ್ಷಾಂತರಕ್ಕೆ ಕಟ್ಟುನಿಟ್ಟಿನ ಕಾನೂನು
ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರವನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಯಾವುದೇ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಯು 5 ವರ್ಷಗಳವರೆಗೆ ಪಕ್ಷಾಂತರ ಮಾಡುವುದನ್ನು ತಡೆಯುವ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬಂದರೆ ರಾಜಕಾರಣಿಗಳ ಪಕ್ಷಾಂತರ ಹಾವಳಿಯನ್ನು ತಡೆಯಬಹುದು. 

ಮತದಾರರು 5 ವರ್ಷದ ಅವಧಿಗೆ ಒಂದು ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ನಡುವೆ ಈ ಅಭ್ಯರ್ಥಿ ಬೇರೊಂದು ಪಕ್ಷಕ್ಕೆ ಜಗಿದರೆ ಮತದಾರರು ಹಾಕಿದ ಮತದ ಸಿಂಧುತ್ವದ ಪ್ರಶ್ನೆ ಬರುತ್ತದೆ. ಒಂದು ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿ 5 ವರ್ಷದ ಮಟ್ಟಿಗಾದರೂ ಆ ಪಕ್ಷಕ್ಕೆ ನಿಷ್ಠಾರಾಗಿ ಇರಬೇಕಾಗುತ್ತದೆ. ಇಲ್ಲವಾದರೆ ಮತದಾರರ ಆಯ್ಕೆಗೆ ಮೌಲ್ಯವೇ ಇರಲಾರದು. 
ಕಳಂಕಿತರಿಗೆ ಸ್ವರ್ಧೆ ನಿಷೇಧ

ಕಳಂಕಿತರು ಚುನಾವಣೆಯಲ್ವಿ ಸ್ವರ್ಧೆ ಮಾಡದಂತೆ ತಡೆ ತರಬೇಕು. ರಾಜಕಾರಣಿಗಳು ಅಪರಾಧಿಗಳಾದರೆ ಯಾವ ಕಾರಣಕ್ಕೂ ಅವರು ಸ್ವರ್ಧಿಸಬಾರದು ಎಂಬ ತಿದ್ದಪಡಿ ಜಾರಿಗೆ ಬಂದರೆ ಕೆಟ್ಟ ರಾಜಕಾರಣಿಗಳ ಸಂಖ್ಯೆಯನ್ನು ಕಡಿಮೆಗೊಳಿಸ ಬಹುದು. ಇದರಿಂದ ಅಪರಾಧ ಮಾಡಲು ರಾಜಕಾರಣಿಗಳು ಹಿಂಜರಿಯುತ್ತಾರೆ. ರಾಜಕಾರಣದಲ್ಲಿ ಅಪರಾಧಗಳು ಕಡಿಮೆ ಯಾಗುತ್ತದೆ. ಉತ್ತಮ ಚಾರಿತ್ರ್ಯವುಳ್ಳ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರಜಾಪ್ರಭುತ್ವ ಸರಕಾರಕ್ಕೆ ಹೆಚ್ಚಿನ ಮೌಲ್ಯ ಪ್ತಾಪ್ತವಾಗುತ್ತದೆ. ಆದರೆ ಇದು ಯಾವುದು ನಮಗೆ ಬೇಡವಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಕೆಲವು ನಿಯಮಗಳನ್ನು ಕೂಡಾ ರಾಜಕಾರಣಿಗಳು ಗಾಳಿಗೆ ತೂರಲು ಪ್ರಯತ್ನಿಸುತ್ತಿದ್ದಾರೆ. 

ದೇಶದ ಅಭಿವೃದ್ಧಿಯ ಹೆಸರಿನಲ್ಲಿ ರಾಜಕಾರಣಿಗಳು ಅಭಿವೃದ್ಧಿ ಯಾಗುತ್ತಿರುವುದನ್ನು ನಾವಿಂದು ಎಲ್ಲ ಪಕ್ಷಗಳಲ್ಲೂ ಕಾಣುತ್ತಿದ್ದೇವೆ .ಯಾರಿಗೂ ದೇಶದ ಹಿತಾಸಕ್ತಿ ಬೇಡ, ಸ್ವಹಿತಾ ಸಕ್ತಿಯೇ ಮುಖ್ಯವಾಗುತ್ತಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಎಲ್ಲರೂ ಕಾತುರರಾಗಿರುತ್ತಾರೆ. ಪ್ರಜಾಪ್ರಭುತ್ವ ಸರಕಾರದಲ್ಲಿ “ನಂಬರ್‌ ಗೇಮ್‌’ ಆಟವು ಮುಖ್ಯ ಪಾತ್ರ ವಹಿಸುವುದರಿಂದ ಸರಕಾರ ರಚಿಸಲು ಅನುಕೂಲ ಸಿಂಧೂ ರಾಜಕಾರಣಕ್ಕೆ ಎಲ್ಲರೂ ಮನ ಮಾಡುತ್ತಾರೆ. ನೈತಿಕತೆ, ಸಿದ್ಧಾಂತ, ಧ್ಯೇಯ, ನಿಷ್ಠೆ, ಧೋರಣೆಗಳು ಯಾವುದೂ ಬೇಡವಾಗುತ್ತದೆ. ಚುನಾವಣಾ ಪೂರ್ವದಲ್ಲಿ ಕಚ್ಚಾಡಿಕೊಂಡವರೇ ಒಂದಾಗುತ್ತಾರೆ.ಬದ್ಧ ವೈರಿಗಳೆಲ್ಲ ಸೇರಿಕೊಂಡು ಸರಕಾರ ರಚಿಸುತ್ತಾರೆ. ಇವರಿಗೆ ಅತಂತ್ರವಾದ ಸರಕಾರವನ್ನು ಉಳಿಸಿಕೊಳ್ಳುವುದೇ ಮುಖ್ಯ ಕೆಲಸವಾಗುತ್ತದೆಯೇ ವಿನಃ ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಲು ಸಾಧ್ಯವಾಗುವುದಿಲ್ಲ .ಇದು ಇಂದಿನ ಪ್ರಜಾತಂತ್ರ ವ್ಯವಸ್ಥೆಯ ವಾಸ್ತವ ಚಿತ್ರಣ. 

ಚುನಾವಣಾ ನೀತಿ ನಿಯಮಗಳನ್ನಾದರೂ ಒಂದಿಷ್ಟು ಬದಲಾವಣಿ ಮಾಡಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಿಷ್ಟಾದರೂ ಸುಧಾರಣೆ ಆಗುವ ನಿರೀಕ್ಷೆಯನ್ನು ಇಟ್ಟುಕೊಳ್ಳ ಬಹುದು. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಇವುಗಳು ಜಾರಿಗೆ ಬರಬೇಕು. ಆದರೆ ಯಾವಾಗ ಅಂತ ಕಾದು ನೋಡಬೇಕಾಗಿದೆ. ನಾವು ಅಗತ್ಯಕ್ಕಿಂತಲೂ ಹೆಚ್ಚಿನ ಖರ್ಚುನ್ನು ಚುನಾವಣೆಗಾಗಿಯೇ ಮಾಡುತ್ತಿದ್ದೇವೆ. ಮತದಾರರು ಆಯ್ಕೆ ಮಾಡುವ ಸರಕಾರವು ಬಹುಮತದ ಸರಕಾರವಾದರೆ ಪರವಾಗಿಲ್ಲ.

ಒಂದು ಮೇಳೆ ಅತಂತ್ರ ಸರಕಾರ ಅಧಿಕಾರಕ್ಕೆ ಬಂದರೆ ಅದು ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಆವಾಗ ಮತ್ತೆ ಚುನಾವಣೆ ಯನ್ನು ಎದುರಿಸಬೇಕಾಗುತ್ತದೆ.ಕೇವಲ 4-5 ತಿಂಗಳುಗಳ ಅಲ್ವಾವಧಿಯ ಚುನಾವಣೆಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಬದಲು ಅದನ್ನು ಮುಂದಿನ ಲೋಕಸಭಾ ಚುನಾವಣೆಯ ಸಮಯದಲ್ಲೇ ಮಾಡಿದರೆ ಅಷ್ಟು ಖರ್ಚುನ್ನು ಉಳಿಸಬಹುದಿತ್ತು. ಇದಕ್ಕೆಲ್ಲ ಸೂಕ್ತ ನಿರ್ಧಾರವನ್ನು ಇನ್ನು ಮುಂದಾದರೂ ತೆಗೆದುಕೊಳ್ಳುವಂತಾಗಲಿ.

ಜಿ. ಕೇಶವ ಪೈ ಗಂಗೊಳ್ಳಿ

ಟಾಪ್ ನ್ಯೂಸ್

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.