ಮನಪರಿವರ್ತನೆಯಿಂದ ಮದ್ಯವರ್ಜನೆ 


Team Udayavani, Jan 29, 2017, 3:45 AM IST

Alcohol.jpg

ಇನ್ನೊಬ್ಬರು ಹೇಳಿ ಅಥವಾ ಕಾಯ್ದೆಯ ಬಲದಿಂದ ಕುಡಿತವನ್ನು ನಿಲ್ಲಿಸುವುದಕ್ಕಿಂತ ಸ್ವತಃ ತಿಳಿದು ನಿಲ್ಲಿಸುವುದು ಮತ್ತು ನಿಯಂತ್ರಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮದ್ಯಪಾನ ಸಂಯಮ ಮಂಡಳಿಯ ಕಾರ್ಯ ವಿಸ್ತಾರವಾಗಬೇಕಾಗಿದೆ ಮತ್ತು ಈ ಮಂಡಳಿ ಇನ್ನೂ ಕ್ರಿಯಾಶೀಲವಾಗಬೇಕಾಗಿದೆ.

ಕುಡಿತದಿಂದ ಸರ್ವ ನಾಶ. ಕುಡಿತ, ಕುಡುಕನ ಸಂಗಡ ಅವನ ಕುಟುಂಬವನ್ನೂ ನಾಶಪಡಿಸುತ್ತದೆ… ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತದೆ’.

ಊರುಗೋಲು ಹಿಡಿದು ನಿಂತಿರುವ ಮಹಾತ್ಮಾ ಗಾಂಧಿ ಭಾವಚಿತ್ರದೊಂದಿಗೆ ಈ ಘೋಷಣೆಗಳನ್ನು ಬರೆದ ಸಾವಿರಾರು ಫ‌ಲಕಗಳು ದೇಶಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಎದ್ದು ಕಾಣುತ್ತವೆ. ಈ “ಪಾನ ನಿರೋಧ’ ಅಭಿಯಾನದ ಹಿಂದೆ “ಪಾನ ನಿರೋಧ’ ಮಂಡಳಿಯ ನಿರಂತರ ಪ್ರಯತ್ನ ಇದೆ. ಇತರ ಕೆಲವು ಸಂಘ ಸಂಸ್ಥೆಗಳು ಕೂಡ ಪಾನ ನಿರೋಧವನ್ನು ಪ್ರಚಾರ ಮಾಡುತ್ತಿದ್ದು, ಕುಡಿತದಿಂದಾಗುವ ದುಷ್ಪರಿಣಾಮಗಳ ಬಗೆಗೆ ಮನದಟ್ಟು ಮಾಡಿಕೊಡುತ್ತಿವೆ. ಆದರೂ ಮಾಧ್ಯಮ ವರದಿಗಳ ಪ್ರಕಾರ ಭಾರತದಲ್ಲಿಯೇ ಅತೀ ಹೆಚ್ಚು ಕುಡುಕರಿದ್ದಾರೆ. 2015ರಲ್ಲಿ ಅಲ್ಕೋಹಾಲ್‌ ಬಳಕೆ ಶೇ.55 ಹೆಚ್ಚಿಗೆ ಆಗಿದೆಯಂತೆ. ಕುಡಿತದಲ್ಲಿ ಅವಿಭಜಿತ ಆಂಧ್ರಪ್ರದೇಶ ಮೊದಲ ಸ್ಥಳದಲ್ಲಿದ್ದರೆ, ಗೋವಾ ಎರಡನೇ ಸ್ಥಾನದಲ್ಲಿ ಕೇವಲ ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿ ಇವೆ. 

ಭಾರತದಲ್ಲಿ ಜನಸಂಖ್ಯೆಯ ಶೇ.30ರಷ್ಟು ಜನ ನಿಯಮಿತವಾಗಿ ಕುಡಿದರೆ, ಶೇ.11 ಜನ ಸಾಮಾನ್ಯದಿಂದ ಭಾರೀ ಕುಡುಕರಾಗಿರುತ್ತಾರೆ. ಭಾರತೀಯನ ಸರಾಸರಿ ಕುಡಿತ ವರ್ಷಕ್ಕೆ 4.3 ಲೀಟರ್‌ ಆಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಇದು 11.4 ಲೀಟರುಗಳು. ರಾಜ್ಯದಲ್ಲಿ 8,191 ಲಿಕ್ಕರ್‌ ಅಂಗಡಿಗಳು ಇವೆ. ಬೆಂಗಳೂರು ನಗರ ಒಂದರಲ್ಲಿಯೇ 853 ಅಂತಹ ಅಂಗಡಿಗಳು ಇವೆ, ಕುಡಿತದ ಸೇವೆ ನೀಡುವ ಕ್ಲಬ್‌ಗಳು 81 ಇದ್ದರೆ, ಮದ್ಯ ಒದಗಿಸುವ ಬೋರ್ಡಿಂಗ್‌ ಮತ್ತು ರೆಸ್ಟೋರೆಂಟ್‌ಗಳ ಸಂಖ್ಯೆ 131 ಮತ್ತು ಬಾರ್‌ ಮತ್ತು ರೆಸ್ಟೋರೆಂಟ್‌ಗಳು 1,346 ಇವೆ. ಮದ್ಯದ ಮೇಲೆ ಹೊರಿಸುವ ಅಬಕಾರಿ ತೆರಿಗೆ ರಾಜ್ಯಗಳ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಒದಗಿಸುವ  ಮೂಲ. ರಾಜ್ಯಗಳ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲಿ ಶೇ.20ರಷ್ಟು ಇದೇ. ಮದ್ಯ ಬಿಕರಿಯಿಂದ ಮಹಾರಾಷ್ಟ್ರ ರೂ.20,000 ಕೋಟಿ ಮತ್ತು ಕೇರಳ ರೂ.8,000 ಕೋಟಿ (ರಾಜ್ಯದ ಶೇ.22 ಆದಾಯ) ಆದಾಯವನ್ನು ಪಡೆಯುತ್ತವೆಯಂತೆ.

ರಾಜ್ಯಗಳ ಪಾನ ನಿಷೇಧ ಸಾಹಸ
ಕುಡಿತದಿಂದಾಗುವ ಸಾಮಾಜಿಕ ದುಷ್ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿದ ಕೆಲವು ರಾಜ್ಯಗಳು, ಮಹಿಳೆಯರ, ಆದರಲ್ಲೂ ಮುಖ್ಯವಾಗಿ ಸಮಾಜದ ಕೆಳಸ್ತರದ ಮಹಿಳೆಯರ ಆಕ್ರಂದನಕ್ಕೆ ಸ್ಪಂದಿಸಿ, ರಾಜ್ಯ ಬೊಕ್ಕಸಕ್ಕೆ ಉಂಟಾಗುವ ಆದಾಯ ಕೊರತೆಯನ್ನು ಲೆಕ್ಕಿಸದೆ ಪಾನ ನಿಷೇಧವನ್ನು ಜಾರಿಗೊಳಿಸುತ್ತಿವೆ. ಗುಜರಾತ್‌, ಕೇರಳ, ನಾಗಾಲ್ಯಾಂಡ್‌, ಮಣಿಪುರ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪದಲ್ಲಿ ಪಾನ ನಿಷೇಧ ಜಾರಿಯಲ್ಲಿದೆ. ಬಿಹಾರ ರಾಜ್ಯ ಇತ್ತೀಚೆಗೆ ಈ ಜನಸ್ನೇಹಿ ಮತ್ತು ಸಾಮಾಜಿಕ ಕಳಕಳಿಯ ಸಾಹಸಕ್ಕೆ ಕೈಹಾಕಿದೆ. ಬಿಹಾರದಲ್ಲಿ ಈಚೆಗೆ ಪಾನ ನಿರೋಧಕ್ಕೆ ಬೆಂಬಲ ಸೂಚಿಸಿ ಸುಮಾರು 3 ಕೋಟಿಗೂ ಅಧಿಕ ಮಂದಿ 11,000 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿ ಗಿನ್ನಿಸ್‌ ದಾಖಲೆಯನ್ನು ಮಾಡಿ ಕೇವಲ ಭಾರತಕ್ಕಲ್ಲ ಇಡೀ ವಿಶ್ವಕ್ಕೆ ಸಂದೇಶ ರವಾನಿಸಿದ್ದಾರೆ. ಇನ್ನೂ ಕೆಲವು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಆದಾಯ ನಷ್ಟ ಮತ್ತು ಕ್ರೋಢೀಕರಣದ ಲೆಕ್ಕಾಚಾರ ನಡೆಯುತ್ತಿದೆ. 

ಎಪ್ಪತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರು ರಾಜ್ಯದಲ್ಲಿ ಪಾನ ನಿಷೇಧವನ್ನು ರದ್ದು ಮಾಡಿದಾಗ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತ ಅವರಿಗೆ ಸಾಮಾಜಿಕ ಕಳಕಳಿ ಮುಖ್ಯವಾಗಿತ್ತು. ಕಳ್ಳಭಟ್ಟಿಯಿಂದ ಜೀವ ತೆತ್ತವರ ಮತ್ತು ಅವರ ಕುಟುಂಬದವರ ಆಕ್ರಂದನವನ್ನು ಕಣ್ಣಾರೆ ನೋಡಿದ ಬಳಿಕ, “”ಕುಡಿಯುವುದನ್ನು ತಪ್ಪಿಸಲಾಗದು… ಕುಡಿಯುವವರು ಕನಿಷ್ಟ ಒಳ್ಳೆಯದನ್ನಾದರೂ ಕುಡಿಯಲಿ” ಎನ್ನುವುದು ಸ್ವತಃ ಗಾಂಧೀವಾದಿ ಮತ್ತು ವಿನೋಬಾ ಅನುಯಾಯಿಯಾದ ಅವರ ಒಲ್ಲದ ಮನಸ್ಸಿನ ಇಂಗಿತವಾಗಿತ್ತು. ಪಾನ ನಿರೋಧದ ಅನುಷ್ಠಾನವೂ ಸುಲಭವಾಗಿರದೆ ಒಂದು ಸವಾಲಾಗಿತ್ತು. ಇದರ ಅನುಷ್ಠಾನದಲ್ಲಿ ದುರುಪಯೋಗ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಅನೇಕ ಅಮಾಯಕರು ಈ ಕಾಯ್ದೆ ಅಡಿಯಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರು.

ಸರಕಾರದ ನಿಲುವು
ಕುಡಿಯುವುದು ತಪ್ಪಲ್ಲ; ಆದರೆ, ಕುಡುಕನಾಗುವುದು ತಪ್ಪು ಎನ್ನುವುದು ಇಂದಿನ ಧ್ಯೇಯ. ಆದರೆ, ಸರಕಾರದ ಕೆಲವು ಕ್ರಮಗಳು ಜನರನ್ನು ಕುಡುಕರನ್ನಾಗಿ ಮಾಡುತ್ತಿರುವುದು ತೀರಾ ವಿಷಾದಕರ ಬೆಳವಣಿಗೆ. ಪಾನ ನಿರೋಧ ಮಂಡಳಿಯನ್ನು ಜೀವಂತವಾಗಿಟ್ಟುಕೊಂಡ ಸರಕಾರ ಹೊಸ ಹೊಸ ಮದ್ಯದಂಗಡಿಗಳಿಗೆ ಅನುಮತಿ ಕೊಡುವುದು ಒಂದು ವಿಪರ್ಯಾಸ. ಹಾಗೆಯೇ ಮದ್ಯದಂಗಡಿಗಳು ಮತ್ತು ಪಬ್‌ಗಳು ಮಾರಾಟ ಹೆಚ್ಚಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಆದಾಯ ವೃದ್ಧಿಸಲು ಪ್ರೇರೇಪಿಸುವುದು ಇನ್ನೊಂದು ವಿಶೇಷ. 

ಮಾಧ್ಯಮಗಳ ವರದಿಯಂತೆ, ಮದ್ಯದಂಗಡಿ ಮತ್ತು ಬಾರ್‌ಗಳು ಸರಕಾರ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಮಾರಾಟ ಮಾಡಿದರೆ, ದಂಡ ಕೊಡಬೇಕಂತೆ, ಪ್ರತಿದಿನವೂ ಕನಿಷ್ಟ 468 ಲೀಟರ್‌ ಮದ್ಯವನ್ನು ಮಾರಾಟ ಮಾಡಲೇ ಬೇಕಂತೆ. ಇತ್ತೀಚೆಗೆ ಸುಮಾರು 150 ಬಾರ್‌ ಮತ್ತು ರೆಸ್ಟೊರೆಂಟ್‌ಗಳಿಗೆ ಕೋಟಿಗಟ್ಟಲೆ ದಂಡ ವಿಧಿಸಲಾಗಿದೆಯಂತೆ, ಈ ದಂಡ ತಪ್ಪಿಸಿಕೊಳ್ಳ‌ಲು ಇವರು ಒತ್ತಾಯಪೂರ್ವಕವಾಗಿ ಗಿರಾಕಿಗಳಿಗೆ ಹೆಚ್ಚು ಹೆಚ್ಚು ಮದ್ಯ ಮಾರಾಟ ಮಾಡುವ ಅನಿವಾರ್ಯತೆ ಬಂದಿದೆ.

ಸಮಾಜ ವಿಜ್ಞಾನಿಗಳ ಪ್ರಕಾರ ಸುಮಾರು ಶೇ.80 ಅತ್ಯಾಚಾರದ ಪ್ರಕರಣಗಳಲ್ಲಿ ಮದ್ಯವೇ ಪ್ರೇರಕವಾಗಿರುತ್ತದೆ. ಮದ್ಯದ ಅಮಲು ತಲೆಗೇರಿ, ಸ್ಥಿಮಿತ ತಪ್ಪಿದಾಗ ಇಂತಹ ಹೀನ ಕೃತ್ಯಗಳು ನಡೆಯುತ್ತವೆ. ಇನ್ನಿತರ ಕ್ರಿಮಿನಲ್‌ ಪ್ರಕರಣಗಳಲ್ಲಿ ಕೂಡ ಮದ್ಯದ ವಾಸನೆ ಇದ್ದೇ ಇರುತ್ತದೆ. ಆದರೆ ಕೆಲವರು ಮಾಡುವ ತಪ್ಪಿಗಾಗಿ ಮದ್ಯ ಮಾರಾಟವನ್ನೇ  ಬಂದ್‌ ಮಾಡುವುದು, ನೆಗಡಿಯಾಯಿತೆಂದು ಮೂಗು ಕತ್ತರಿಸಿದಂತೆ. ಪಾನ ನಿರೋಧವನ್ನು ಕಾಯ್ದೆಯಿಂದ ಮಾಡುವುದು ಸುಲಭ ಸಾಧ್ಯವಲ್ಲ. ಇನ್ನೊಬ್ಬರು ಹೇಳಿ ಅಥವಾ ಕಾಯ್ದೆಯ ಬಲದಿಂದ ಕುಡಿತವನ್ನು ನಿಲ್ಲಿಸುವುದಕ್ಕಿಂತ ಸ್ವತಃ ತಿಳಿದು ನಿಲ್ಲಿಸುವುದು ಮತ್ತು ನಿಯಂತ್ರಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮದ್ಯಪಾನ ಸಂಯಮ ಮಂಡಳಿಯ ಕಾರ್ಯವ್ಯಾಪ್ತಿ ವಿಸ್ತಾರವಾಗಬೇಕಾಗಿದೆ ಮತ್ತು  ಮಂಡಳಿ ಇನ್ನೂ ಕ್ರಿಯಾಶೀಲವಾಗಬೇಕಾಗಿದೆ. 

ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ  ಮದ್ಯದಂಗಡಿಗಳನ್ನು ಮುಚ್ಚಬೇಕು ಎನ್ನುವ ಇತ್ತೀಚೆಗಿನ ಸುಪ್ರೀಂ ಕೋರ್ಟ್‌ ತೀರ್ಪು ಈ ನಿಟ್ಟಿನಲ್ಲಿ ಒಂದು ಸ್ವಾಗತಾರ್ಹ ಬೆಳವಣಿಗೆ.  ಇದು ದೇಶದ  ಸುಮಾರು ಶೇ.42 ಮದ್ಯದಂಗಡಿಗಳ ಮೇಲೆ ಪರಿಣಾಮ ಬೀರಬಹುದು. ಮದ್ಯಸೇವನೆಯ ಪರಿಣಾಮವನ್ನು ಮತ್ತು ಅದರಿಂದಾಗುವ ಅನಾಹುತವನ್ನು ನಿಯಂತ್ರಿಸುವ ದಿಶೆಯಲ್ಲಿ ನ್ಯಾಯಾಲಯದ ತೀರ್ಪು ಸ್ತುತ್ಯರ್ಹ. ಆದರೆ, ಈ ತೀರ್ಪು ಹೆದ್ದಾರಿಯ ಇಕ್ಕೆಲಗಳ ಮದ್ಯದಂಗಡಿಗಳನ್ನು ಮುಚ್ಚುವ ಬದಲು “ಸ್ಥಳಾಂತರ’ಕ್ಕೆ ಸೀಮಿತವಾದರೆ ತೀರ್ಪಿನ ನಿರೀಕ್ಷಿತ ಉದ್ದೇಶ ಸಾಧನೆಯಾಗುವುದು ಸಂದೇಹಾಸ್ಪದ. 

– ಎ. ಬಿ. ಶೆಟ್ಟಿ, ಬೆಂಗಳೂರು

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.