ರಾಜಕಾರಣಿಗಳಿಗೆ ಕನಿಷ್ಠ ವಿದ್ಯಾರ್ಹತೆ ಬೇಕೇ?

Team Udayavani, Jun 17, 2018, 6:00 AM IST

q-1.jpg

ಭಾರತವು ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯಬೇಕು ಎಂದಾದರೆ, ನಮ್ಮ ಜನಪ್ರತಿನಿಧಿಗಳೇಕೆ ವಿದ್ಯಾರ್ಹತೆ ಇರಬಾರದು? ಡಿ ವರ್ಗದ ಸರಕಾರಿ ಸೇವೆ ಸೇರುವವನಿಗೆ ಕನಿಷ್ಠ ವಿದ್ಯಾರ್ಹತೆ ಅವಶ್ಯ. ಆದರೆ ಯಾವೊಂದೂ ಶಿಕ್ಷಣದ ಅರ್ಹತೆಯಿರದ ವ್ಯಕ್ತಿಗೆ ಮಂತ್ರಿಯಾಗಲು ಅವಕಾಶವನ್ನು ನೀಡಿದ್ದು ಸಂವಿಧಾನದ ಲೋಪವೆ? 

ರಾಜ್ಯ ಸರಕಾರದ ನೂತನ ಸಚಿವರುಗಳ ವಿದ್ಯಾರ್ಹತೆ ಜಾಲ ತಾಣದಲ್ಲಿ ವೈರಲ್‌ ಆಗಿದೆ. ನಮ್ಮ ಎಂಎಲ್‌ಎ, ಎಂಪಿಗಳಿಗೆ ಕನಿಷ್ಠ ಅರ್ಹತೆ ಬೇಕೇ ಬೇಡವೇ ಎನ್ನುವ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ವಾಸ್ತವಾಂಶ ಎಂದರೆ ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ದೇಶದ ಸಾಕ್ಷರತೆ ಶೇ.17ರಷ್ಟಿದ್ದಿತು. ಕೇವಲ ಶಿಕ್ಷಿತರು ಮಾತ್ರ ಜನಪ್ರತಿನಿಧಿ ಗಳಾಗಲು ಅರ್ಹರು ಎಂದಾದರೆ, ಉಳಿದ ಶೇ.83 ಜನರ, ಜನ ಪ್ರತಿನಿಧಿ ಸ್ವಾತಂತ್ರ್ಯವನ್ನು ಕಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂವಿ

ಧಾನ ಸಮಿತಿ ವಿದ್ಯಾರ್ಹತೆಯ ಮಾನದಂಡವನ್ನು ನಿಗದಿಪಡಿಸಲಿಲ್ಲ. ಇದರ ಪರಿಣಾಮವಾಗಿ, ಮಸೂದೆ/ಕಾನೂನನ್ನು ಸೃಷ್ಟಿಸು ವವರಿಗೆ ಅದರ ಕಿಂಚಿತ್ತೂ ಅರಿವಿಲ್ಲ. ಒಂದು ಸಲಹೆಯಂತೆ ಎಲ್ಲ ರಾಜಕಾರಣಿಗಳಿಗೆ ವಿಶೇಷವಾಗಿ ಉದಯೋನ್ಮುಖ ಯುವ ರಾಜ ಕಾರಣಿಗಳಿಗೆ ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಬೇಕು. ಭಾರತದ ಸಂವಿಧಾನ, ಸುಪ್ರೀಂಕೋರ್ಟು ಆದೇಶಗಳು, ಸಂವಿಧಾನದ ತಿದ್ದು ಪಡಿಗಳು, ಕಾನೂನು ರಚಿಸುವ ಕೇಸ್‌ ಸ್ಟಡಿಗಳು ಇತ್ಯಾದಿ ವಿಷಯ ಗಳಲ್ಲಿ ತೇರ್ಗಡೆ ಹೊಂದಿದವರು ಜನಪ್ರತಿನಿಧಿಗಳಾಗಲು ಅರ್ಹರು. ಇದರ ಜತೆಗೆ ಕನಿಷ್ಠ ಪದವೀಧರನಾಗಿರಬೇಕು. ಆಗ ಮಾತ್ರ ಸದನಗಳಲ್ಲಿ ಗಂಭೀರ ಚರ್ಚೆಗಳು ನಡೆಯಬಹುದು. ಈಗ ನಮ್ಮ ಚುನಾವಣೆಗಳು ಸಾರ್ವಜನಿಕ ಹಣದ ಸರಕಾರಿ ಪ್ರಾಯೋಜಿತ ಲೂಟಿಗೆ ಅನುಮೋದನೆ ನೀಡುವ ಒಂದು ಪ್ರಕ್ರಿಯೆಯಾಗಿವೆ. ಆಡಳಿತದಲ್ಲಿ ಪಾರದರ್ಶಕತೆಯಿಲ್ಲ, ಉತ್ತರದಾಯಿತ್ವವಿಲ್ಲ. ಕಳೆದ 300-400 ವರ್ಷಗಳಲ್ಲಿ ಪ್ರಜಾಪ್ರಭುತ್ವ ಜಗತ್ತಿನ ಅನುಭವದಂತೆ ಯಾವ ರಾಷ್ಟ್ರದಲ್ಲಿ ಸಾರ್ವಜನಿಕರು ಒಂದು ನಿಗದಿತ ಮಟ್ಟದ ನಾಗರಿಕತೆಯನ್ನು ಹೊಂದಿ, ಅರ್ಹ ಜನಪ್ರತಿನಿಧಿಗಳನ್ನು ಆರಿಸುವ ಪ್ರೌಢಿಮೆಯನ್ನು ಗಳಿಸುವರೋ ಅಲ್ಲಿ ಪ್ರಜಾಪ್ರಭುತ್ವ ಸುಗಮವಾಗಿ ನಡೆಯುತ್ತದೆ. ಅವಿದ್ಯಾವಂತರು, ಅನಾಗರಿಕರಿಗೆ ಅವರಂತಿರುವ ವರನ್ನು ಜನಪ್ರತಿನಿಧಿಗಳನ್ನಾಗಿ ಆರಿಸುವುದರಲ್ಲಿ ತಪ್ಪೇನೂ ಕಾಣುವು ದಿಲ್ಲ. ಪರಿಣಾಮವಾಗಿ ಭಾರತವು ಅತ್ಯುತ್ತಮ ಭಾರತೀಯರಿಗಿಂತ, ಸರ್ವೇಸಾಧಾರಣ ವ್ಯಕ್ತಿಗಳಿಂದ ಆಳಲ್ಪಡುತ್ತದೆ. ಅತ್ಯುತ್ತಮ ಆಡಳಿ ತಾತ್ಮಕ ಪ್ರತಿಭೆಯು ವ್ಯರ್ಥವಾಗಿ ಹೋಗುತ್ತದೆ. 

ಪ್ರತಿಯೊಂದು ಹುದ್ದೆಗೂ ಕನಿಷ್ಠ ವಿದ್ಯಾರ್ಹತೆಯಿದೆ. ಆದರೆ ಜನಪ್ರತಿನಿಧಿಗಳಿಗೆ ಅಂತಹ ಯಾವ ಅರ್ಹತೆಯನ್ನೂ ನಮ್ಮ ಸಂವಿ ಧಾನ ರೂಪಿಸಲಿಲ್ಲ. ಸಾರ್ವಜನಿಕ ಹುದ್ದೆಗಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವಾತನಿಗೆ ಕನಿಷ್ಠ 20 ವರ್ಷಗಳ ಸಾರ್ವಜನಿಕ ಹೊಣೆಗಾರಿಕೆ ಯನ್ನು ನಿಭಾಯಿಸಿದ ಅನುಭವ ಕಡ್ಡಾಯವಿರಬೇಕು. ಅದರಲ್ಲಿ ಐಎಎಸ್‌, ಐಪಿಸ್‌ ಅಧಿಕಾರಿಗಳು, ದೊಡ್ಡ ಕಾರ್ಪೊರೇಟ್‌ಗಳ ಸಿಇಓಗಳು, ಹೈಕೋರ್ಟು, ಸುಪ್ರೀಂಕೋರ್ಟಿನ ಜಡ್ಜ್ಗಳು, ಹಿರಿಯ ಸೇನಾಧಿಕಾರಿಗಳು ಈ ವರ್ಗದಲ್ಲಿ ಒಳಗೊಂಡಿರುತ್ತಾರೆ. ಅವರಲ್ಲೂ ಕಪ್ಪು ಚುಕ್ಕೆಯಿಲ್ಲದಿರುವವರನ್ನು, ಭ್ರಷ್ಟರನ್ನು, ಕಳಂಕಿತರನ್ನು ಮತ್ತಷ್ಟು ಫಿಲ್ಟರ್‌ಗೆ ಒಳಪಡಿಸಿ ಆರಿಸಬೇಕು. 

ಅಪರಾಧ ಪ್ರಕರಣಗಳು ಸಾಬೀತಾಗಿ ಮೂರು ವರ್ಷಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಗುರಿಯಾಗಿದ್ದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು ಎಂದಾಗಬೇಕು. ಉಮೇದುವಾರ 25 ವರ್ಷಕ್ಕಿಂತ ಕಿರಿಯ ಮತ್ತು 65 ವರ್ಷ ಮೇಲ್ಪಟ್ಟಿರಬಾರದು. ಮಂತ್ರಿ ಯಾಗುವವನಿಗೆ ಅವನ ಖಾತೆಗೆ ಸಂಬಂಧಿಸಿದಂತೆ ಕನಿಷ್ಟ ಜ್ಞಾನ ವಿರಬೇಕು. ಉದಾ: ಆರೋಗ್ಯ ಮಂತ್ರಿಯು ಕನಿಷ್ಠ ವೈದ್ಯಕೀಯ/ಅರೆ ವೈದ್ಯಕೀಯ ಪದವೀಧರನಾಗಿರಬೇಕು. ಉಮೇದುವಾರನ ಮೇಲೆ ಅಪರಾಧ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅಂತಹ ವ್ಯಕ್ತಿಗೆ ಚುನಾವಣೆಯಲ್ಲಿ ಎರಡು ಬಾರಿಗಿಂತ ಹೆಚ್ಚು ಸ್ಪರ್ಧಿಸಲು ಅವಕಾಶವಿಲ್ಲ. ಚುನಾವಣಾ ಆಯೋಗವು ಚುನಾ ವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರಿಗೆ, ಭಾರತದ ಚರಿತ್ರೆ, ರಾಜಕೀಯ, ಭೌಗೋಳ, ಸಂವಿಧಾನ ಮತ್ತು ವಿದೇಶೀ ನೀತಿಗಳ ಕುರಿತಾಗಿ ಅಖೀಲ ಭಾರತ ಪರೀಕ್ಷೆಯನ್ನು ಏರ್ಪಡಿಸಿ ಅದರಲ್ಲಿ ಉತ್ತೀರ್ಣರಾದವರನ್ನೇ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು ಎಂದು ತೀರ್ಮಾನಿಸಿ ಚುನಾವಣೆಯ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಎಂಎಲ್‌ಎ ಅಕ್ಷರದ ಪೂರ್ಣ ರೂಪ ಏನೆಂದು ತಿಳಿಯದ ಶಾಸಕರು ನಮ್ಮಲ್ಲಿದ್ದಾರೆ. ಭಾರತ ಹಿಂದುಳಿಯಲು ಕಾರಣವೇ ಅದರ ಅಶಿಕ್ಷಿತ ರಾಜಕಾರಣಿಗಳು. ಭಾರತವು ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯಬೇಕು ಎಂದಾದರೆ, ನಮ್ಮ ಜನಪ್ರತಿನಿಧಿಗಳೇಕೆ ವಿದ್ಯಾರ್ಹತೆ ಇರಬಾರದು? ಡಿ ವರ್ಗದ ಸರಕಾರಿ ಸೇವೆ ಸೇರುವವನಿಗೆ ಕನಿಷ್ಠ ವಿದ್ಯಾರ್ಹತೆ ಅವಶ್ಯ. ಆದರೆ ಯಾವೊಂದೂ ಶಿಕ್ಷಣದ ಅರ್ಹತೆಯಿರದ ವ್ಯಕ್ತಿಗೆ ಮಂತ್ರಿಯಾಗಲು ಅವಕಾಶವನ್ನು ನೀಡಿದ್ದು ಸಂವಿಧಾನದ ಲೋಪವೆ? ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲೂ ಶಿಕ್ಷಣ ಮತ್ತು ತರಬೇತಿ ಅವಶ್ಯ. ಆದರೆ ನಮ್ಮ ರಾಜಕಾರಣದಲ್ಲಿ ಅವೆರಡೂ ಅನಗತ್ಯ. The aim of education is the knowledge, not of facts,but of values  ಅನ್ನುವಂತೆ ಜೀವನ ಮೌಲ್ಯಗಳನ್ನು ಅರಿಯಲಾದರೂ ರಾಜಕಾರಣಿಗಳಿಗೆ ಬೇಕು ಶಿಕ್ಷಣ. ಹೀಗಾದರೆ ಮಾತ್ರ ನಿರ್ಮಲ ಸಮಾಜವನ್ನು ಕಟ್ಟಲು ಸಾಧ್ಯ. ಇದರರ್ಥ ರಾಜಕಾರಣಿಗಳು ಅಕ್ಷರಸ್ಥರಾದ ಮಾತ್ರಕ್ಕೆ ಭ್ರಷ್ಟರಹಿತ ದೇಶವನ್ನು ರೂಪಿಸಬಹುದು ಎಂದರೂ ತಪ್ಪಾದೀತು. ಅನಕ್ಷರಸ್ಥರಲ್ಲೂ ಉತ್ತಮ ನಾಯಕರನ್ನು ಕಾಣಬಹುದು. ಅಕ್ಷರಸ್ಥರಲ್ಲೂ ಭೃಷ್ಟ ನಾಯಕರುಗಳಿದ್ದಾರೆ.

ಜಲಂಚಾರು ರಘುಪತಿ ತಂತ್ರಿ 

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.