ನ್ಯೂಯಾರ್ಕ್‌ ಟೈಮ್ಸ್‌ ಮತ್ತು “ಹಿಂದೂ’ ಸೀರೆ


Team Udayavani, Nov 22, 2017, 10:03 AM IST

22-21.jpg

ನಾನು ಇಂಥ ಅಜ್ಞಾನಿ ವಿದೇಶಿ ಪತ್ರಕರ್ತರನ್ನು ನೋಡಿದ್ದು ಇದೇ ಮೊದಲೇನೂ ಅಲ್ಲ. 80ರ ದಶಕದಲ್ಲಿ ಕೆಲ ವರ್ಷಗಳವರೆಗೆ ಲಂಡನ್‌ನ “ಸಂಡೆ ಟೈಮ್ಸ್‌’ ಪತ್ರಿಕೆಗೆ ಬಾತ್ಮೀದಾರಳಾಗಿ ಕೆಲಸ ಮಾಡಿದ್ದೇನೆ. ಆಗ ನಾನು ಒಂದು ವಿಷಯವನ್ನು ಗಮನಿಸಿದ್ದೆ. ಆ ಪತ್ರಿಕೆಗೆ ಆಧುನಿಕ ಭಾರತದ ಬಗ್ಗೆ ಲೇಖನ ಬೇಕಿರಲಿಲ್ಲ. ಭಾರತದ ಬಗ್ಗೆ ಯಾವುದಾದರೂ ಋಣಾತ್ಮಕ ವರದಿಗಳು ಅಥವಾ ಭಾರತವನ್ನು ತೀರಾ ಹಿಂದುಳಿದ ದೇಶ ಎಂದು ಸಾರುವಂಥ ಸುದ್ದಿಗಳಷ್ಟೇ ಅವರಿಗೆ ಬಹಳ ಪ್ರಿಯವಾಗಿದ್ದವು. ಹೀಗಾಗಿ ಕಾಶಿಯಲ್ಲಿನ ಡೋಮ ರಾಜಾಗಳ(ಹೆಣ ಸುಡುವವರು) ಬಗ್ಗೆ ಎಷ್ಟು ಬಾರಿಯಾದರೂ ಸುದ್ದಿ ಬರೆಯಲಿ, ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. 

ಕಳೆದ ವಾರ ಅಮೆರಿಕದ ಪ್ರಸಿದ್ಧ ಪತ್ರಿಕೆ “ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಅದನ್ನೋದುತ್ತಿದ್ದಂತೆಯೇ ಅನೇಕ ಭಾರತೀಯರ ರಕ್ತ ಕುದಿಯತೊಡಗಿತು. ನನಗೂ ಆ ಲೇಖನ ಪಿತ್ತನೆತ್ತಿಗೇರುವಂತೆ ಮಾಡಿತು. ಏಕೆಂದರೆ ಇಂಥದ್ದೊಂದು ಅರ್ಥಹೀನ ಲೇಖನವನ್ನು ನಾನು ಹಿಂದೆಂದೂ ಓದಿರಲಿಲ್ಲ. ಬಹುಶಃ ಆ ಲೇಖಕ ಭಾರತೀಯ ಮೂಲದವನೆನಿಸುತ್ತದೆ, ಆದರೂ ಆತನಿಗೆ “ಹರ ಹರ ಮಹಾದೇವ’ ಎನ್ನುವ ಸಾಲಿನ ಅರ್ಥವೇ ಗೊತ್ತಿಲ್ಲ. ಹರಹರ ಮಹಾದೇವ ಎಂದರೆ “ನಾವೆಲ್ಲರೂ ಶಿವ’ ಎಂದು ಆತ ಭಾವಿಸಿದ್ದಾನೆ! ಆತನಿಂದ ಇದೊಂದೇ ತಪ್ಪಾಗಿದ್ದರೆ ಇದನ್ನೆಲ್ಲ ಬರೆಯುವ ಅಗತ್ಯ ಎದುರಾಗುತ್ತಿರಲಿಲ್ಲ. ಆದರೆ ಆತನ ಲೇಖನದಲ್ಲಿ ಎಷ್ಟೊಂದು ತಪ್ಪುಗಳು ಮತ್ತು ಪೂರ್ವಗ್ರಹ ತುಂಬಿದೆಯೆಂದರೆ ಇದನ್ನೆಲ್ಲ ಪ್ರಶ್ನಿಸಲೇಬೇಕಿದೆ. ಎಲ್ಲಕ್ಕಿಂತ ವಿಚಿತ್ರ ಸಂಗತಿಯೆಂದರೆ, “ಭಾರತೀಯ ಫ್ಯಾಶನ್‌’ ಮೇಲೆ ಲೇಖನ ಬರೆಯುವುದು ಆತನ ಮೂಲ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಆತ ಬನಾರಸಿ ಸೀರೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಬನಾರಸ್‌(ಕಾಶಿ)ಗೆ ಹೋದ. ಕಾಶಿಗೆ ತಲುಪಿದ್ದೇ ಅಲ್ಲಿನ ನೇಕಾರರನ್ನು ಭೇಟಿಯಾದ. ಆ ನೇಕಾರರ ಬಡತನವನ್ನು ನೋಡಿದ ಲೇಖಕ, ಅವರ ದಯನೀಯ ಪರಿಸ್ಥಿತಿಗೆ ನರೇಂದ್ರ ಮೋದಿಯೇ ಕಾರಣ ಎಂದು ನಿರ್ಧರಿಸಿಬಿಟ್ಟ! ಅದೇಕೆ ಹೀಗೆ?

ಏಕೆಂದರೆ ಆತ ಅವರೆಲ್ಲರ ಜೀವನೋಪಾಯದ ಸಂಪೂರ್ಣ ವಿಶ್ಲೇಷಣೆ ಮಾಡಿದ ಮೇಲೆ, “ಬನಾರಸ್‌ನಲ್ಲಿನ ಹಿಂದೂ ಮಾರಾಟಗಾರರನ್ನು ಶ್ರೀಮಂತಿಕೆಯಲ್ಲಿಡುವುದಕ್ಕಾಗಿ ಅಲ್ಲಿನ ಮುಸಲ್ಮಾನ ನೇಕಾರರನ್ನು ಉದ್ದೇಶಪೂರ್ವಕವಾಗಿ ಬಡತನದಲ್ಲಿ ಇಡಲಾಗಿದೆ’ ಎಂಬ ನಿರ್ಣಯಕ್ಕೆ ಬಂದ. ಲೇಖಕನ ಪ್ರಕಾರ ಹಿಂದುತ್ವ ವಿಚಾರಧಾರೆಯನ್ನು ಹರಡುವುದಕ್ಕಾಗಿಯೇ ಹೀಗೆಲ್ಲ ಆಗುತ್ತಿದೆಯಂತೆ. ಲೇಖಕ ಯಾವ್ಯಾವ ದೇಶಿ ಡಿಸೈನರ್‌ಗಳನ್ನು ಭೇಟಿಯಾದನೋ ಅವರೆಲ್ಲರೂ “”ಹಿಂದುತ್ವವಾದಿ ವಿಚಾರಧಾರೆ ಲೋಕಪ್ರಿಯವಾಗಿರುವುದರಿಂದಲೇ ಹಿಂದೂ ಮಹಿಳೆಯರು ಪಾಶ್ಚಾತ್ಯ ಡಿಸೈನ್‌ಗಳನ್ನು ತಿರಸ್ಕರಿಸಿ ಸೀರೆ ಉಡಲಾರಂಭಿಸಿದ್ದಾರೆ” ಎನ್ನುತ್ತಾರಂತೆ! ಈ ಲೇಖನ ಇಷ್ಟಕ್ಕೇ ನಿಲ್ಲುವುದಿಲ್ಲ. ಪಾಶ್ಚಿಮಾತ್ಯ ವಸ್ತ್ರಗಳನ್ನು ತಿರಸ್ಕರಿಸಿ, ಅವಕ್ಕೆ ರಾಜಕೀಯ ಬಣ್ಣ ಬಳಿಯುವ ಗುಣ ಭಾರತೀಯ ರಾಜಕಾರಣಿಗಳಿಗೆ ಮೊದಲಿನಿಂದಲೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಗಾಂಧೀಜಿ ಪಂಚೆ ಧರಿಸಲಾ ರಂಭಿಸಿ ದರಂತೆ, ಪಂಡಿತ್‌ ನೆಹರೂ ಹೈನೆಕ್‌ ಮೇಲ್ದಿರಿಸು ತೊಟ್ಟರಂತೆ. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದಿರಿಸುಗಳ ರಾಜಕೀಕರಣ ಹಿಂದೆಂದೂ ಕಾಣಿಸದಷ್ಟು ಮಟ್ಟದಲ್ಲಿ ಆಗಿದೆಯಂತೆ. ಇದೆಲ್ಲವೂ ಮೋದಿಯವರ “ಮೇಕ್‌ ಇನ್‌ ಇಂಡಿಯಾ ಅಭಿಯಾನ’ದಿಂದಾಗಿ ಆಗುತ್ತಿದೆ ಎನ್ನುವುದು ಲೇಖಕನ ಮತ್ತೂಂದು ಅಭಿಪ್ರಾಯ. 

ಈ ಲೇಖಕನಿಗೆ ಭಾರತದ ಬಗ್ಗೆ ಎಷ್ಟೊಂದು ಕಡಿಮೆ ಜ್ಞಾನವಿದೆಯೆಂದರೆ, “ಹಿಂದೂ ಮಹಿಳೆಯರು ಮಾತ್ರ ಸೀರೆ ಉಡುತ್ತಾರೆ’ ಎಂದೂ ಆತ ಬರೆದಿದ್ದಾನೆ. ವಾಹ್‌ ರೇ ನ್ಯೂಯಾರ್ಕ್‌ ಟೈಮ್ಸ್‌! ಎಲ್ಲಿಂದ ಹುಡುಕಿದ್ರಪ್ಪ ಇಂಥ ಲೇಖಕನನ್ನು? ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಭಾರತದ ಬಗ್ಗೆ ಇಂಥ ಅಸಂಬದ್ಧ ಲೇಖನವನ್ನು ಮೊದಲ ಬಾರಿ ಪ್ರಕಟಿಸಿದ್ದರೆ ಕ್ಷಮಿಸಬಹುದಿತ್ತು. ಸತ್ಯವೇನೆಂದರೆ, ಭಾರತೀಯ ರಾಜಕೀಯ ರೂಪಾಂತರಗಳ ಬಗ್ಗೆ ಈ ಪ್ರಸಿದ್ಧ ಪತ್ರಿಕೆಯಲ್ಲಿ ಲೇಖನಗಳು-ವರದಿಗಳು ಪ್ರಕಟ ವಾದಾಗಲೆಲ್ಲ, ಬಹುತೇಕ ಬಾರಿ ಅವೆಲ್ಲ ಪೂರ್ವಗ್ರಹಗಳಿಂದ ಅಥವಾ ವ್ಯರ್ಥಾಲಾಪಗಳಿಂದ ತುಂಬಿರುತ್ತವೆ. ವೈಯಕ್ತಿಕವಾಗಿ ನಾನೊಂದು ವಿಷಯವನ್ನು ಗಮನಿಸಿದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾದ ಅನಂತರದಿಂದ ಇಂಥ ಲೇಖನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಗೆಂದು ನ್ಯೂಯಾರ್ಕ್‌ ಟೈಮ್ಸ್‌ನ ಪತ್ರಕರ್ತರು ಮೋದಿಯವರನ್ನು ದ್ವೇಷಿಸಲಾರಂಭಿಸಿದ್ದು ಇತ್ತೀಚೆಗಲ್ಲ, ಮೋದಿ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೇ ದ್ವೇಷಿಸುತ್ತಾ ಬಂದವರು. ನನಗೆ ನೆನಪಿದೆ- 2014ರ ಚುನಾವಣಾ ಪ್ರಚಾರ ಆರಂಭವಾಗುವುದಕ್ಕೂ ಮುನ್ನ ನರೇಂದ್ರ ಮೋದಿ ತಮ್ಮ ನಾಮನಿರ್ದೇಶನ ಅರ್ಜಿಯನ್ನು ತುಂಬಲು ಕಾಶಿಗೆ ಹೋಗಿದ್ದರಲ್ಲ, ಆಗ ನನಗೆ ನ್ಯೂಯಾರ್ಕ್‌ ಟೈಮ್ಸ್‌ನ ವರದಿ ಗಾರರೊಬ್ಬರು ಸಿಕ್ಕಿದ್ದರು. ಮೋದಿಯವರನ್ನು ನೋಡಲು ಆ ಪಾಟಿ ಜನಸಾಗರ ನೆರೆದದ್ದನ್ನು ಕಂಡು ಆ ಪತ್ರಕರ್ತರು ಹೈರಾಣಾ ದರಂತೆ! ಏಕೆಂದರೆ ಅವರ ದೃಷ್ಟಿಯಲ್ಲಿ ಮೋದಿ ಒಬ್ಬ ರಾಕ್ಷಸನಿಗೆ ಸಮ. ಗುಜರಾತ್‌ನಲ್ಲಿ ಮುಸಲ್ಮಾನರನ್ನು ಕೊಲ್ಲಿಸಿದ ಇಂಥ ವ್ಯಕ್ತಿಯ ಮೇಲೆ ಜನಕ್ಕೆ ಈ ಪರಿ ಪ್ರೀತಿಯೇಕೆ ಎಂಬ ಪ್ರಶ್ನೆ ಆ ವರದಿಗಾರರದ್ದು. ಆಗ ನಾನು ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿದೆ. ನಾನಂದೆ- “”ನೋಡಿ ಭಾರತದ ಅನೇಕ ರಾಜ್ಯಗಳಲ್ಲಿ ಇಂಥ ದಂಗೆಗಳು ಅನೇಕ ಬಾರಿ ನಡೆದಿವೆ”. ಆಗ ಅವರಂದರು- “”ನಡೆದಿದ್ದರೂ ನಡೆದಿರಬಹುದು, ಆದರೆ 1947ರ ಅನಂತರ ಈ ಪ್ರಮಾಣದ ಹತ್ಯಾಕಾಂಡ ಭಾರತದಲ್ಲಿ ಆಗಿಯೇ ಇಲ್ಲ”!

ಕೂಡಲೇ ನಾನು ಅವರ ಮಾತನ್ನು ತಡೆದು, “”1984ರಲ್ಲಿ ದಿಲ್ಲಿಯಲ್ಲಿ 3,000ಕ್ಕಿಂತಲೂ ಹೆಚ್ಚು ಸಿಕ್ಖರ ಹತ್ಯೆಯಾಗಿತ್ತು” ಎಂದು ನೆನಪು ಮಾಡಿಕೊಟ್ಟೆ. ಆದರೆ ಅದನ್ನು ನಂಬಲು ಆವರಿಗೆ ಸಾಧ್ಯವೇ ಆಗಲಿಲ್ಲ. ಇದಾದ ಅನಂತರ ನಾನು, “ಕಾಂಗ್ರೆಸ್‌ ಸರಕಾರವಿದ್ದ ರಾಜ್ಯಗಳಲ್ಲೂ ಬಹಳಷ್ಟು ದಂಗೆಗಳು ನಡೆದಿವೆ  (ಭಾಗಲ್‌ಪುರ, ಮುರಾದಾಬಾದ್‌, ಮೇರs…, ಮಾಲಿಯಾನ ಮತ್ತು ಅನ್ಯ ಅನೇಕ ನಗರಗಳು)’ ಎಂದು ತಿಳಿಸಿದೆ. ಆದರೆ ಅವರಿಗೆ ಇದರ ಮೇಲೂ ನಂಬಿಕೆ ಬರಲಿಲ್ಲ. ಹೀಗಾಗಿ ಅವರಂದರು- “”ಬಹುಶಃ ನೀವು ಮೋದಿ ಸಮರ್ಥಕರೆನಿಸುತ್ತೆ, ಅದಕ್ಕೇ ಹೀಗೆಲ್ಲ ಮಾತಾಡ್ತಿದ್ದೀರಿ” 

ನಾನು ಇಂಥ ಅಜ್ಞಾನಿ ವಿದೇಶಿ ಪತ್ರಕರ್ತರನ್ನು ನೋಡಿದ್ದು ಇದೇ ಮೊದಲೇನೂ ಅಲ್ಲ. 80ರ ದಶಕದಲ್ಲಿ ಕೆಲ ವರ್ಷಗಳ
ವರೆಗೆ ಲಂಡನ್‌ನ “ಸಂಡೆ ಟೈಮ್ಸ್‌’ ಪತ್ರಿಕೆಗೆ ಬಾತ್ಮಿದಾರಳಾಗಿ ಕೆಲಸ ಮಾಡಿದ್ದೇನೆ. ಆಗ ನಾನು ಒಂದು ವಿಷಯವನ್ನು ಗಮನಿಸಿದ್ದೆ. ಆ ಪತ್ರಿಕೆಗೆ ಆಧುನಿಕ ಭಾರತದ ಬಗ್ಗೆ ಲೇಖನ ಬೇಕಿರಲಿಲ್ಲ. ಭಾರತದ ಬಗ್ಗೆ ಯಾವುದಾದರೂ ಋಣಾತ್ಮಕ ವರದಿಗಳು ವರದಿಗಳು ಅಥವಾ ಭಾರತವನ್ನು ತೀರಾ ಹಿಂದುಳಿದ ದೇಶ ಎಂದು ಸಾರುವಂಥ ಸುದ್ದಿಗಳಷ್ಟೇ ಅವರಿಗೆ ಬಹಳ ಪ್ರಿಯವಾಗಿದ್ದವು. ಹೀಗಾಗಿ ಕಾಶಿಯಲ್ಲಿನ ಡೋಮ ರಾಜಾ ಗಳ(ಹೆಣ ಸುಡುವವರು) ಬಗ್ಗೆ ಎಷ್ಟು ಬಾರಿಯಾದರೂ ಸುದ್ದಿ ಬರೆಯಲಿ, ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಎಷ್ಟು ಬಾರಿ ಯಾದರೂ ಆ ಸುದ್ದಿಯನ್ನು ನಾನು ಕಳುಹಿಸಬಹುದಿತ್ತು. 

ಆದರೆ ಬಾಬರಿ ಮಸೀದಿ ಬೀಳುವ ಮುನ್ನ ನಾನು ಅಯೋಧ್ಯೆಗೆ ಹೋಗಿ ವರದಿ ಮಾಡುವ ಪ್ರಸ್ತಾವವಿಟ್ಟಾಗ ನಮ್ಮ ಸಂಪಾದಕರು ಸ್ಪಷ್ಟವಾಗಿ ಹೇಳಿಬಿಟ್ಟರು -“”ಇಂಥ ಸ್ಟೋರಿ ಯಿಂದ ನಮಗೇನೂ ಉಪ ಯೋಗವಿಲ್ಲ, ನೀವು ಅಲ್ಲಿಗೆ ಹೋಗುವುದು ಬೇಡ”.
ನನಗೆ ಅತಿಹೆಚ್ಚು ಕಿರಿಕಿರಿಯಾಗಿದ್ದೆಂದರೆ 1989ರ ಚುನಾ ವಣೆಯ ವೇಳೆಯಲ್ಲಿ. “ಈ ಚುನಾವಣೆಯಲ್ಲಿ ರಾಜೀವ್‌ ಗಾಂಧಿ ಸೋಲಬಹುದು’ ಎಂದು ನಾನು ಸಂಪಾದಕರಿಗೆ ಹೇಳಿದೆ. ಆದರೆ ಇದನ್ನು ಕೇಳಿದ್ದೇ ನಮ್ಮ ಆಂಗ್ಲ ಸಂಪಾದಕರೆಂದರು- “”ಅದೇನ್ರೀ ಹಾಗೆ ಹೇಳ್ತೀರಾ? ರಾಜೀವ್‌ ಗಾಂಧಿ ಎಷ್ಟು ಸುಂದರವಾಗಿದ್ದಾನೆ. ಇಂಥ ಯುವಕ ಆ ವಿಚಿತ್ರ ಟೋಪಿ ಮತ್ತು ದಪ್ಪ ಕನ್ನಡಕ ಧರಿಸಿದ ವ್ಯಕ್ತಿಯ ವಿರುದ್ಧ ಹೇಗೆ ತಾನೇ ಸೋಲುತ್ತಾನೆ?”

ಆ ಕಾಲದಲ್ಲಿ ಭಾರತೀಯ ಪತ್ರಕರ್ತರು ಬಹಳ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದರು. ಈ ಕಾರಣಕ್ಕಾಗಿಯೇ ನಾವು ಅನಿವಾರ್ಯವಾಗಿ ವಿದೇಶಿ ಪತ್ರಿಕೆಗಳಿಗೆ ಸ್ಟ್ರಿಂಜರ್‌ಗಳಾಗಿ ಕೆಲಸ ಮಾಡಿದೆವು. ಆದರೆ ಈಗ ಭಾರತೀಯ ಪತ್ರಕರ್ತರಿಗೆ ಭಾರತದಲ್ಲಿ ಒಳ್ಳೆಯ ಸಂಬಳವಿದೆ. ಒಂದು ವೇಳೆ ಅದೃಷ್ಟವಶಾತ್‌ ಅವರಿಗೆ ಟಿ.ವಿ.ಯಲ್ಲಿ ಅಲ್ಪಸ್ವಲ್ಪ ಕೆಲಸ ಸಿಕ್ಕು ಬಿಟ್ಟರೂ ಅವರ ನಸೀಬು ಬದಲಾಗಿಬಿಡುತ್ತದೆ. ಆಗ ಪರಿಸ್ಥಿತಿ ಎಷ್ಟು ಬದಲಾಗಿದೆ ಯೆಂದರೆ, ವಿದೇಶದಲ್ಲಿರುವ ಭಾರತೀಯ ಮೂಲದ ಪತ್ರ ಕರ್ತರೂ ಇಂದು ಭಾರತೀಯ ಪತ್ರಿಕೆಗಳಿಗೆ ಲೇಖನ ಬರೆಯಲು, ಭಾರತೀಯ ಟೆಲಿವಿಷನ್‌ ಚಾನೆಲ್‌ಗ‌ಳಲ್ಲಿ ಕೆಲಸ ಹುಡುಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಭಾರತೀಯ ಮೂಲದ ಪತ್ರಕರ್ತನೊಬ್ಬ ಭಾರತವನ್ನು ತೆಗಳುತ್ತಾ ವಿದೇಶಿ ಪತ್ರಿಕೆಗಳಿಗೆ ಅರ್ಥಹೀನ ಲೇಖನ ಬರೆಯುವ ಅಗತ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ಅದೇಕೆ ನ್ಯೂಯಾರ್ಕ್‌ ಟೈಮ್ಸ್‌ನಂಥ ಪ್ರಸಿದ್ಧ ಪತ್ರಿಕೆಯಲ್ಲಿ ಇಂಥ ಜನರಿಗೆ ಜಾಗ ಸಿಗುತ್ತಿದೆಯೋ ಅರ್ಥ ವಾಗುತ್ತಿಲ್ಲ. ಇಂಥ ಲೇಖನಗಳನ್ನು ನೋಡಿದಾಗಲೆಲ್ಲ, “ವಿದೇಶಿ ಮೀಡಿಯಾಗಳು ತಮ್ಮನ್ನು ದ್ವೇಷಿಸುತ್ತವೆ’ ಎಂದು ಮೋದಿ ಸರಕಾರಕ್ಕೆ ಅನಿಸಿದರೆ ಆಶ್ಚರ್ಯವೇನಿಲ್ಲ.

(ಹಿಂದಿಯ “ಜನಸತ್ತಾ’ ಜಾಲತಾಣದಲ್ಲಿ ಪ್ರಕಟಿತ ಲೇಖನ)

ತವೀನ್‌ ಸಿಂಗ್‌

ಟಾಪ್ ನ್ಯೂಸ್

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.