ಈರುಳ್ಳಿ ಬೆಲೆಯ ಹಾವು ಏಣಿ ಪಂದ್ಯ


Team Udayavani, Dec 19, 2019, 5:36 AM IST

onion

ನಮ್ಮ ಅಡುಗೆ ಮನೆಯ ಬಹುಮುಖ್ಯ ತರಕಾರಿ ಈರುಳ್ಳಿ. ಈರುಳ್ಳಿ ಇಲ್ಲದೆ ಪದಾರ್ಥ ಇಲ್ಲ. ಈ ಈರುಳ್ಳಿಯು ನಮ್ಮ ದೇಹಕ್ಕೆ ಅಗತ್ಯವಿರುವ ಪೊಟ್ಯಾಸಿಯಂ, ಪೋನ್ಪೋರಸ್‌, ಕ್ಯಾಲಿÏಯಂ, ಮ್ಯಾಗ್ನೇಶಿಯಂ ಮತ್ತು ವಿಟಮಿನ್‌ ಸಿ ಯನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ ಹೊಸ ದಾಖಲೆ ಸೃಷ್ಟಿಯಾಗಿದೆ. ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆ ಕುಸಿತದ ಸಮಯದಲ್ಲಿ ಈರುಳ್ಳಿ ಬೆಲೆ ಏರಿದರೆ 1 ಕೆ.ಜಿ. ಈರುಳ್ಳಿಯ ಬೆಲೆ 1 ಡಾಲರ್‌ ಎನ್ನುವುದಿತ್ತು. ಈ ತಮಾಷೆಯ ಮಾತು ಆಗಾಗ ನೆನಪಿಗೆ ಬರುವುದುಂಟು. ಇವತ್ತಿನ ವಿನಿಮಯ ಮಾರುಕಟ್ಟೆಯ ಡಾಲರ್‌-ರೂಪಾಯಿ ದರ ಪರಿಗಣಿಸಿದರೆ 1 ಕೆ.ಜಿ. ಈರುಳ್ಳಿಯು ಸುಮಾರು ಮೂರು ಡಾಲರ್‌ಗೆ ಸಮ. ಇವತ್ತು ಕಳ್ಳರು ಮನೆಯಲ್ಲಿ ಕ್ಯಾಶ್‌ ಬದಲು ಈರುಳ್ಳಿ ಕದ್ದರೂ ವಿಶೇಷವಿಲ್ಲ.

ಬೆಲೆ ಏರಿದರೆ ಬೊಬ್ಬೆ
ಮಾರುಕಟ್ಟೆಯಲ್ಲಿ ವಸ್ತುವಿನ ಬೇಡಿಕೆಯು ಪೂರೈಕೆಗಿಂತ ಜಾಸ್ತಿಯಾದರೆ ಬೆಲೆ ಏರುತ್ತದೆ. ಬೇಡಿಕೆಗಿಂತ ಪೂರೈಕೆ ಜಾಸ್ತಿಯಾದರೆ ಬೆಲೆ ಇಳಿಯುತ್ತದೆ. ಈರುಳ್ಳಿ ಬೆಲೆಯಲ್ಲಿ ಆಗಾಗ ಕಂಡುಬರುವ ಉಬ್ಬರ ಇಳಿತಗಳು ಬೇಡಿಕೆ-ಪೂರೈಕೆ ನಡುವಿನ ಅಂತರದ ಕಾರಣ. ಈರುಳ್ಳಿಯ ಬೆಲೆ ಏರಿದರೆ ಮಾರುಕಟ್ಟೆಯಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿಯ ವಾತಾವರಣ, ಬಳಕೆದಾರರು ಬೊಬ್ಬೆ ಹಾಕುತ್ತಾರೆ. ಬೆಲೆ ಇಳಿದರೆ ನಷ್ಟ ರೈತರಿಗೆ. ಉತ್ಪಾದಿಸಿದ ವಸ್ತುವಿಗೆ ಯೋಗ್ಯ ಬೆಲೆ ಬರದಿದ್ದರೆ ಕೃಷಿಕನು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಪರಿಣಾಮ ಆತ್ಮಹತ್ಯೆ. ನಮ್ಮಲ್ಲಾಗುವುದು ಇದೇ . ಇವತ್ತು ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಪೂರೈಕೆಯಲ್ಲಾಗುವ ಗೊಂದಲ. ಹೆಚ್ಚಾಗಿ ಈರುಳ್ಳಿಯ ಬೇಡಿಕೆಯಲ್ಲಿ ಹೆಚ್ಚು ಬದಲಾವಣೆಯಾಗುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಪೂರೈಕೆಯ ಪ್ರಮಾಣದಲ್ಲಿ ಕಡಿಮೆಯಾಗಿ ಬೆಲೆ ಏರುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ತಡೆಹಿಡಿದು ಕೃತಕ ಕೊರತೆಯನ್ನು ಸೃಷ್ಟಿಸಿದ ಪರಿಣಾಮ ಬೆಲೆ ಏರುವುದುಂಟು. ಈ ಬಾರಿಯ ಬೆಲೆ ಏರಿಕೆಗೆ ಅತಿವೃಷ್ಟಿ ಮತ್ತು ಅನಾವೃಷ್ಟಿಯೇ ಕಾರಣ. ತಡವಾಗಿ ಬಂದ ಮಾನ್ಸೂನ್‌ ಮತ್ತು ವಿಪರೀತ ಮಳೆಯಿಂದಾಗಿ ಪೂರೈಕೆಯಲ್ಲಾದ ಕೊರತೆಯಿಂದ ಬೆಲೆ ಏರಿದ್ದು.

ಹೊಸತೇನಲ್ಲ
ಈರುಳ್ಳಿ ಬೆಲೆ ಏರಿಕೆಯ ಕತೆಯ ವ್ಯಥೆ ಹೊಸತೇನಲ್ಲ ನಮಗೆ. ಈ ಸಮಸ್ಯೆ ಸುಮಾರು 3 ದಶಕಗಳಷ್ಟು ಹಳೆಯದು. 1980ರಲ್ಲಿ ಕಾಣಿಸಿಕೊಂಡ ಈ ಸಮಸ್ಯೆ 1998ರಲ್ಲಿ ಮರುಕಳಿಸಿತು. ಪುನಃ ಈ ತುರ್ತು ಪರಿಸ್ಥಿತಿ 2010 ಮತ್ತು 2013ರಲ್ಲಿ ಕಾಣಿಸಿಕೊಂಡಿತು. ಮತ್ತೆ 2015 ರಲ್ಲಿ ಪ್ರತ್ಯಕ್ಷ. ಪ್ರತೀ ಬಾರಿ ಬೆಲೆ ಏರುವಾಗ ಈರುಳ್ಳಿಯ ಬೆಲೆ ತನ್ನ ಹಿಂದಿನ ಏರಿಕೆಯ ದಾಖಲೆಗಳನ್ನೆಲ್ಲಾ ಮುರಿದಿದೆ.

ಎಷ್ಟರವರೆಗೆ ಏರಬಹುದೆಂದು ಗೊತ್ತಿಲ್ಲ. ಇಳಿದರೆ ಮಾತ್ರ ಪಾತಾಳಕ್ಕೆ. ಇನ್ನು ಕೆಲವೇ ತಿಂಗಳುಗಳಲ್ಲಿ ಬೆಲೆ ಪಾತಾಳಕ್ಕಿಳಿದ ಸುದ್ದಿ ಕೇಳಿದರೆ ವಿಶೇಷವೇನೂ ಇಲ್ಲ. ಬೆಲೆ ಏರುವಾಗ ಮಾತ್ರ ಎಲ್ಲಿಲ್ಲದ ಆಕ್ರೋಶ, ಚರ್ಚೆ. ಈಗ ಪೂರೈಕೆ ಕಡಿಮೆ ಇರಬಹುದು. ಮುಂದೊಂದು ದಿನ ಹೊಸ ಉತ್ಪಾದನೆ ಮಾರುಕಟ್ಟೆಗೆ ಬರುವಾಗ ಈರುಳ್ಳಿ ಬೆಲೆ ಇಳಿತದ ಹಾದಿ ಹಿಡಿಯುತ್ತದೆ. ಆಮದು ಮಾಡಿದ ಈರುಳ್ಳಿಯೂ ಪ್ರವಾಹೋಪಾದಿಯಲ್ಲಿ ಮಾರುಕಟ್ಟೆಗೆ ಬಂದು ಬಿಟ್ಟಿದೆ.

ರಾಜಕೀಯದವರ ಕಣ್ಣೀರು
ಈರುಳ್ಳಿ ಬೆಲೆ ಏರಿದಂತೆಲ್ಲಾ ಜನನಾಯಕರಿಗೆ, ಆಡಳಿತದಲ್ಲಿರುವವರಿಗೆ ಒಂದು ರೀತಿಯ ನಡುಕ. ಪ್ರಜಾಪ್ರಭುತ್ವದಲ್ಲಿ ಮತದಾರನು ಸರಕಾರದ ಸಾಧನೆಯನ್ನು ಮಾರುಕಟ್ಟೆಯಲ್ಲಿ ತನಗೆ ಬೇಕಾದ ಅವಶ್ಯಕ ವಸ್ತುಗಳ ಬೆಲೆಯನ್ನು ಅವಲಂಭಿಸಿ ಮೌಲ್ಯಮಾಪನ ಮಾಡುತ್ತಾನೆ. ಸಾಮಾನ್ಯವಾಗಿ ಅಗತ್ಯ ವಸ್ತುಗಳ ಬೆಲೆ ಏರಿದರೆ ಸರಕಾರದ ನಿರ್ವಹಣೆ ಕೆಟ್ಟದ್ದೆಂದು ವಾದ.

ಬೆಲೆಯಲ್ಲಿ ಸ್ಥಿರತೆ ಇದ್ದರೆ ಆಡಳಿತ ಪರವಾಗಿಲ್ಲ ಎಂಬ ವಾದ. ಈರುಳ್ಳಿಗೆ ಮಾತ್ರವೇ ದೇಶದಲ್ಲಿ ಆಳುವ ಸರಕಾರವನ್ನು ಉರುಳಿಸುವ ತಾಕತ್ತು ಇದೆ. 1980ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಈರುಳ್ಳಿ ಬೆಲೆ ಪ್ರಮುಖ ಚುನಾವಣಾ ವಿಷಯವಾಗಿತ್ತು.

ಇವರು ತಮ್ಮ ಭಾಷಣಗಳಲ್ಲಿ ಇಷ್ಟು ಸಣ್ಣ ಈರುಳ್ಳಿಯ ಬೆಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗದ ಸರಕಾರವನ್ನು ಆಡಳಿತ ಮಾಡಲು ಅವಕಾಶ ನೀಡಬಾರದೆಂದು ಅವರ ವಾದ. ಆ ಚುನಾವಣೆಯಲ್ಲಿ ಅವರೇ ಗೆದ್ದು ಬಂದಿದ್ದರು.

ಈ ವರ್ಷ ಮಾನ್ಸೂನ್‌ ಮಳೆ ತಡವಾಗಿ ಬಂದಿದ್ದರೆ ಜೊತೆಗೆ ಅತಿಯಾಗಿ ಸುರಿಯಿತು. ಅತಿಯಾದ ಮಳೆ ಈರುಳ್ಳಿ ಫ‌ಸಲನ್ನು ಹಾಳುಗೆಡವಿತು. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಜ್ಯಗಳಲ್ಲಿ ಈರುಳ್ಳಿ ಉತ್ಪಾದನೆಯಾಗುತ್ತದೆ. ಪ್ರಕೃತಿ ಕರುಣಾಮಯಿ. ಮುನಿದರೆ ಶಾಪ, ಒಲಿದರೆ ವರವಾಗಿ ಪರಿಣಮಿಸುತ್ತದೆ. ಈ ಪ್ರಮುಖ ಕಾರಣದ ಜೊತೆಗೆ ಇನ್ನೂ ಹಲವಾರು ಕಾರಣಗಳು- ಕಳಪೆ ಮೂಲಭೂತ ಸೌಕರ್ಯಗಳು, ಶೇಖರಣೆ ಸಮಸ್ಯೆ, ದಲ್ಲಾಳಿಗಳ ಪಾರುಪತ್ಯ, ಕಳಪೆ ಪೂರೈಕೆ ವ್ಯವಸ್ಥೆ, ಫಾರ್ಮ್ನಿಂದ ಪ್ಲೇಟ್‌ ವರೆಗೆ ಆಗುವ ನಷ್ಟಗಳೆಲ್ಲವೂ ಬೆಲೆ ಏರಿಕೆಗೆ ಕಾರಣ.

ಏನಾಗಬೇಕು?
ಆಮದು , ಜೊತೆಗೆ ನಿರ್ಯಾತಕ್ಕೆ ಕಡಿವಾಣ, ಮೂಲಭೂತ ಸೌಕರ್ಯಗಳ ಸುಧಾರಣೆ, ಸಂಸ್ಕರಣೆ, ಹೆಚ್ಚು ಪ್ರೋತ್ಸಾಹ, ವಿತರಣಾ ವ್ಯವಸ್ಥೆಯಲ್ಲಿನ ಕುಂದು ಕೊರತೆಗಳನ್ನು ನಿವಾರಿಸುವುದು, ಊಹಾಪೋಹಗಳಿಗೆ ಕಡಿವಾಣ, ಉತ್ತಮ ಸಂಗ್ರಹಣಾ ವ್ಯವಸ್ಥೆ, ಬೆಲೆ ಸ್ಥಿರಗೊಳಿಸಲು ಪೂರಕವಾದ ವ್ಯಾಪಾರ ನೀತಿ, ಈರುಳ್ಳಿ ನಿರ್ಜಲೀಕರಣದ ಘಟಕಗಳ ಸ್ಥಾಪನೆ, ನಿರ್ಜಲೀಕರಿಸಲ್ಪಟ್ಟ ಈರುಳ್ಳಿಗೆ ಬೇಡಿಕೆಯನ್ನು ಕುದುರಿಸುವ ಪ್ರಯತ್ನಗಳು ಈ ಸಮಸ್ಯೆಗೆ ದೀರ್ಘ‌ಕಾಲೀನ ಪರಿಹಾರವಾಗಿದೆ. ಈ ಎಲ್ಲಾ ಪರಿಹಾರಗಳನ್ನು ನೆನಪಿಸಿಕೊಳ್ಳುವುದು ಬೆಲೆ ಏರಿದಾಗ ಮಾತ್ರ. ಬೆಲೆ ಇಳಿದರೆ ಎಲ್ಲವೂ ಸಪ್ಪೆ.

ತಜ್ಞರ ಪ್ರಕಾರ ದೇಶಕ್ಕೆ ಒಂದೇ ತೆರಿಗೆ ಪದ್ಧತಿ ಇದ್ದಂತೆ ದೇಶಕ್ಕೆ ಏಕೀಕೃತ ಕೃಷಿ ಮಾರುಕಟ್ಟೆ ವ್ಯವಸ್ಥೆ ಈ ಸಮಸ್ಯೆಗೆ ದೀರ್ಘ‌ ಕಾಲದ ಪರಿಹಾರ. ಯೂರೋ ರಾಷ್ಟ್ರದ ಸದಸ್ಯರುಗಳು ತಮ್ಮ 29 ರಾಷ್ಟ್ರಗಳಿಗೆ ಒಂದೇ ಕೃಷಿ ಮಾರುಕಟ್ಟೆಯನ್ನು ನಿರ್ಮಿಸಿದ್ದನ್ನು ಇಲ್ಲಿ ನೆನಪಿಸಬಹುದು. 29 ರಾಷ್ಟ್ರಗಳಿಗೆ ಸಾಧ್ಯವಾದದ್ದು 29 ರಾಜ್ಯಗಳಿಗೆ ಖಂಡಿತ ಸಾಧ್ಯ. ರಾಜಕೀಯ ಇಚ್ಚಾಶಕ್ತಿ ಬೇಕಷ್ಟೆ. ಏಕೀಕೃತ ಕೃಷಿ ಮಾರುಕಟ್ಟೆ ವ್ಯವಸ್ಥೆ ವಸ್ತುಗಳ ಚಲನೆಯಲ್ಲಿನ ಅಡೆತಡೆಗಳನ್ನೂ ಹೋಗಲಾಡಿಸುತ್ತದೆ. ಬೆಲೆಯಲ್ಲಿ ಸ್ಥಿರತೆ ಸಾಧ್ಯ. ಕೃಷಿಯ ಸಮಸ್ಯೆಗಳು ಇವತ್ತು ನಿನ್ನೆಯದ್ದಲ್ಲ. ಈ ಸಮಸ್ಯೆಗಳಿಂದಲೇ ಈ ಕ್ಷೇತ್ರ ಕುಂಟುತ್ತಾ ಸಾಗಿದೆ. ಉತ್ಪಾದನೆ ಮತ್ತು ಪೂರೈಕೆಯತ್ತ ಹೆಚ್ಚಿನ ಒತ್ತು ಕೊಟ್ಟ ನೀತಿಯು ರೈತನ ಹಿತವನ್ನೂ ಬಳಕೆದಾರನ ಕ್ಷೇಮವನ್ನು ಕಾಪಾಡುವುದರಲ್ಲಿ ಸಂಶಯವಿಲ್ಲ.

– ಡಾ| ರಾಘವೇಂದ್ರ ರಾವ್‌

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.