ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌


Team Udayavani, Sep 30, 2020, 7:09 AM IST

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಮೊದಲ ತ್ತೈಮಾಸಿಕದಲ್ಲಿ ಜಿಡಿಪಿಯಲ್ಲಿ 23.9 ಪ್ರತಿಶತದಷ್ಟು ಕುಸಿತ ಕಾಣಿಸಿಕೊಂಡಿದೆ. ಹಾಗಿದ್ದರೆ ವಾರ್ಷಿಕ ಜಿಡಿಪಿಗೆ ಏನಾಗಬಹುದು ಎನ್ನುವ ನಿಟ್ಟಿನಲ್ಲಿ ಮೌಲ್ಯಮಾಪನ ನಡೆಸಿದ್ದೀರಾ?
– ನಾವು ಮೌಲ್ಯಮಾಪನ ನಡೆಸಿದ್ದೇವೆ. ಆದರೆ, ಯಾವುದೇ ಅಂಕಿ ಸಂಖ್ಯೆಯನ್ನು ತಲುಪಲು ಆಗಿಲ್ಲ ಎಂದು ನನಗನ್ನಿಸುತ್ತದೆ. ತಾರ್ಕಿಕವಾಗಿ ನೋಡುವುದಾದರೆ, ಸಂಪೂರ್ಣ ಲಾಕ್‌ಡೌನ್‌ನ ಪರಿಣಾಮವು ಮೊದಲ ತ್ತೈಮಾಸಿಕ ಮತ್ತು ಅದರ ಅಂಕಿಸಂಖ್ಯೆಗಳ ಮೇಲೆ ಕಾಣಿಸಿಕೊಂಡಿದೆ. ಮೊದಲ ತ್ತೈಮಾಸಿಕದ ಅನಂತರ ನಿಧಾನಕ್ಕೆ ಅನ್‌ಲಾಕ್‌ ಆರಂಭವಾಯಿತು.

ಜುಲೈ ತಿಂಗಳ ವೇಳೆಗಾಗಲೇ ಕೆಲವು ಉದ್ಯಮಗಳಲ್ಲಿ ಚೇತರಿಕೆ ಕಾಣಿಸಿಕೊಳ್ಳಲು ಆರಂಭಿಸಿತು. ಈಗ ಅನೇಕ ಉದ್ಯಮಗಳು ಕೋವಿಡ್‌ಗೂ ಮುಂಚೆ ಇದ್ದ ಸ್ಥಿತಿಗೆ ತಲುಪಿರುವುದಾಗಿ ಹೇಳುತ್ತಿವೆ.

ಕಾರ್ಮಿಕ ಕೇಂದ್ರಿತ ಕ್ಷೇತ್ರಗಳಲ್ಲೂ ಪುನರುಜ್ಜೀವನವಾಗುತ್ತಿದೆ. ಅನೇಕ ರಾಜ್ಯಗಳಿಂದ ವಲಸಿಗ ಕಾರ್ಮಿಕರು ತಮ್ಮ ಕಾರ್ಯಕ್ಷೇತ್ರಕ್ಕೆ ಹಿಂದಿರುಗುತ್ತಿರುವುದು ಇದನ್ನು ದೃಢೀಕರಿಸುತ್ತದೆ.

ದೇಶೀಯ ಬೇಡಿಕೆ ಹೆಚ್ಚುತ್ತಿದೆ ಎಂದು ಕೆಲವು ಉದ್ಯಮಗಳು ನನಗೆ ಹೇಳುತ್ತಿವೆ. ಇದರಲ್ಲಿ ಸಂಶಯ ವಿಲ್ಲ. ಆದರೆ ಇದೇ ವೇಳೆಗೇ ಎಕ್ಸ್‌ ಪೋರ್ಟ್‌ ಆರ್ಡರ್‌ಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣಿಸಿಕೊಳ್ಳುತ್ತಿದೆ. ನನ್ನ ಪ್ರಕಾರ, 2 ಮತ್ತು 3 ತ್ತೈಮಾಸಿಕದಲ್ಲಿ ಪರಿಸ್ಥಿತಿ ಉತ್ತಮವಾಗಿರಲಿದೆ.

ಈ ವಿತ್ತ ವರ್ಷವು “ಆರ್ಥಿಕ ಹಿಂಜರಿತದ ವರ್ಷ’ವಾಗಿ ಉಳಿಯಲಿದೆಯೇ?
– ಸಂಪೂರ್ಣ ವರ್ಷದ ಬಗ್ಗೆ ಈಗಲೇ ನಾನು ಮಾತನಾಡಬಹುದೇ ಎನ್ನುವುದು ತಿಳಿಯದು. ಆದರೆ ಮೊದಲ ತ್ತೈಮಾಸಿಕದಲ್ಲಿ ಕಾಣಿಸಿಕೊಂಡ ಕುಸಿತ ಗಣನೀಯವಾದದ್ದು ಎನ್ನುವುದನ್ನಂತೂ ಅಲ್ಲಗಳೆಯಲಾಗದು.

ಸೇವಾ ಕ್ಷೇತ್ರಕ್ಕೆ ತುಂಬಾ ತೊಂದರೆಯಾಗಿದೆಯಲ್ಲ?
– ಅದೂ ನಿಜ. ಹಾಸ್ಪಿಟಾಲಿಟಿ, ಹೊಟೇಲ್‌, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಬಹಳ ತೊಂದರೆಯಾ ಗಿದೆ. ದೇಶದ ಕೆಲವು ಭಾಗಗಳಲ್ಲಿ ಪ್ರವಾಸಿಗಳು ಮತ್ತೆ ಬರಲಾರಂಭಿಸಿದ್ದಾರೆ ಎನ್ನುವ ಸುದ್ದಿ ಬರುತ್ತಿದೆ. ಹಬ್ಬದ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದೇನೋ. ಒಟ್ಟಾರೆ ಈ ಕ್ಷೇತ್ರದಲ್ಲಿ ಮಿಶ್ರ ಬೆಳವಣಿಗೆಯಿದೆ.

ಉದ್ಯೋಗ, ಬೆಳವಣಿಗೆ ಹಾಗೂ ಭರವಸೆಯನ್ನು ಹೆಚ್ಚಿಸಲು ನಿಮ್ಮ ತತ್‌ಕ್ಷಣದ ಕ್ರಮಗಳೇನು?
– ಸರಕಾರ ತನ್ನ ಗಮನವನ್ನು ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವತ್ತ, ಸ್ಥಳೀಯ ಉತ್ಪನ್ನಗಳಿಗೆ ಪೂರಕವಾದಂಥ ನೀತಿಗಳನ್ನು ಒದಗಿಸಿದಾಗ, ಬೆಳವಣಿಗೆಗೆ ಅಗತ್ಯವಿರುವಂಥ ವಾತಾವರಣವನ್ನು ನಿರ್ಮಿಸಿದಾಗ ಉತ್ಪಾದನೆ ಹಾಗೂ ಹೂಡಿಕೆಯ ‘ಆದ್ಯತೆ’ಗಳಲ್ಲಿ ತತ್‌ಕ್ಷಣದ ಬದಲಾವಣೆ ಕಾಣಿಸಿಕೊಳ್ಳುತ್ತದೆ.ಆತ್ಮನಿರ್ಭರ ಭಾರತದ ಜತೆಗೆ ವೋಕಲ್‌ ಫಾರ್‌ ಲೋಕಲ್‌ನಂಥ ಕಾರ್ಯಕ್ರಮವು ಭರವಸೆಯನ್ನು, ಉತ್ಪಾದನೆಯನ್ನು ಹೆಚ್ಚಿಸುವ ಬಹುದೊಡ್ಡ ಮಾರ್ಗವಾಗಿವೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಎರಡನೇ ಉತ್ತೇಜನ ಪ್ಯಾಕೇಜ್‌ ಬೇಕೆಂಬ ಬೇಡಿಕೆ ಪದೇ ಪದೆ ಕೇಳಿಬರುತ್ತಿದೆ. ಅದು ಯಾವಾಗ ಸಾಧ್ಯವಾಗಬಹುದು? ಉದ್ಯಮ ವಲಯಕ್ಕೆ ತೀರಾ ಅಗತ್ಯ ಎದುರಾದ ಸಂದರ್ಭದಲ್ಲೇ?
– ನಾವು ಎಲ್ಲರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದೇವೆ. ಆರ್ಥಿಕತೆಯ ಪ್ರತಿ ಕ್ಷೇತ್ರವನ್ನೂ ವಿಶ್ಲೇಷಿಸುತ್ತಿದ್ದೇವೆ. ಅಗತ ಬಿದ್ದರೆ ಹೆಚ್ಚಿನ ಬೆಂಬಲ ನೀಡಲು ನಾನಂತೂ ಸಿದ್ಧವಿದ್ದೇನೆ.

ಬ್ರಿಟನ್‌ ಮತ್ತು ಅಮೆರಿಕ ಮಾದರಿಯಲ್ಲಿ ಜನರ ಖಾತೆಗೇ ನೇರ ಹಣ ವರ್ಗಾವಣೆ ಅಥವಾ ಉದ್ಯಮಗಳಿಗೆ ಆರ್ಥಿಕ ಉತ್ತೇಜನ ನೀಡಬೇಕು ಎಂಬ ಬೇಡಿಕೆ ಇದೆಯಲ್ಲ?
– ವಿವಿಧ ವಲಯಗಳಿಂದ ಸಲಹೆಗಳು ನಿರಂತರವಾಗಿ ಹರಿದುಬರುತ್ತಿವೆ. ನಾವು ಯಾವ ಮಾರ್ಗವನ್ನೂ ಮುಚ್ಚಿಲ್ಲ ಎಂದು ಹೇಳಬಯಸುತ್ತೇನೆ.

ಚೀನದಿಂದ ಉದ್ಯಮಗಳನ್ನು ಭಾರತದೆಡೆಗೆ ಸೆಳೆಯುವ ಪ್ರಯತ್ನಗಳು ಫ‌ಲ ನೀಡುತ್ತಿವೆಯೇ?
– ಅದು ಫ‌ಲ ನೀಡುತ್ತಿದೆ. ಭಾರತಕ್ಕೆ ನೆಲೆ ಬದಲಿಸಲು ಯೋಚಿಸುತ್ತಿರುವ ಅನೇಕ ಕಂಪೆನಿಗಳನ್ನು ನಾವು ಭೇಟಿಯಾಗಿ, ಚರ್ಚೆ ಮಾಡಿದ್ದೇವೆ. ಇದಷ್ಟೇ ಅಲ್ಲದೇ, ಉತ್ಪಾದನ ಕೇಂದ್ರಿತ ಪ್ರೋತ್ಸಾಹಕ ಯೋಜನೆ (ಪಿಎಲ್‌ಐ) ಗಳನ್ನೂ ರೂಪಿಸಿದ್ದೇವೆ. ಈಗ ಈ ಸ್ಕೀಮುಗಳು ಮುಖ್ಯವಾಗಿ ಟೆಲಿಕಾಂ ವಲಯದಲ್ಲಿ ಯಶಸ್ವಿಯಾಗುತ್ತಿವೆ.

ಮೊದಲು ಪಿಎಲ್‌ಐ ಸ್ಕೀಮನ್ನು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಕ್ಕಾಗಿ ಘೋಷಿಸಿದ್ದೆವು. ತತ್ಪರಿಣಾಮವಾಗಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ವಿವಿಧ ಕಂಪೆನಿಗಳನ್ನು ಭಾರತದತ್ತ ಸೆಳೆಯುತ್ತಿದೆ. ಇದನ್ನು ಅನ್ಯ ಇಲಾಖೆಗಳು ಗಮನಿಸುತ್ತಿವೆ. ಈ ನಿಟ್ಟಿನಲ್ಲಿ ಆ ಇಲಾಖೆಗಳೆಲ್ಲ ಇದೇ ರೀತಿಯ ತಯಾರಿ ನಡೆಸಿವೆ.

ರಕ್ಷಣ ಕಾರ್ಯಗಳಿಗೆ ಹಣ ವಿನಿಯೋಗಿಸಲು ಯಾವುದಾದರೂ ಅಡಚಣೆ ಅಥವಾ ನಿರ್ಬಂಧಗಳು ಎದುರಾಗುತ್ತಿವೆಯೇ?
– ಖಂಡಿತ ಯಾವ ಅಡಚಣೆ, ನಿರ್ಬಂಧಗಳೂ ಇಲ್ಲ. ನಾನು ರಕ್ಷಣ ಸಚಿವೆಯ ಸ್ಥಾನದಲ್ಲಿ ಹೆಚ್ಚು ದಿನ ಇರಲಿಲ್ಲವಾದರೂ, ರಕ್ಷಣ ಸಚಿವಾಲಯದ ಅಗತ್ಯಗಳೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ನಾನೀಗ ವಿತ್ತ ಸಚಿವಾಲಯದ ನೊಗ ಹೊತ್ತಿದ್ದೇನೆ, ಪ್ರಧಾನ ಮಂತ್ರಿ ಮೋದಿಯವರೂ ಭಾರತದ ರಕ್ಷಣ ಅಗತ್ಯಗಳ ಬಗ್ಗೆ ಅರಿವು ಹೊಂದಿರುವವರು. ಈ ಕಾರಣಕ್ಕಾಗಿಯೇ ರಕ್ಷಣ ವಲಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ.

ನಿಮ್ಮಲ್ಲಿ ಭರವಸೆ ಮೂಡಿಸುತ್ತಿರುವ ವಲಯಗಳು ಯಾವುವು?
– ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಎಷ್ಟೊಂದು ಜೀವಂತಿಕೆಯಿದೆ ಎನ್ನುವುದನ್ನು ನೋಡುವುದಕ್ಕಿಂತ ಪ್ರೋತ್ಸಾಹದಾಯಕ ಸಂಗತಿ ಮತ್ತೇನಿದೆ? ಸಾಂಕ್ರಾಮಿಕ, ನೆರೆ, ಭೂಕುಸಿತದಂಥ ಸಮಸ್ಯೆಗಳನ್ನು ಎದುರಿಸಿದರೂ ಈ ವಲಯ ಪುಟಿದೆದ್ದು ನಿಲ್ಲುತ್ತಾ ಬಂದಿದೆ. ಇಂದು ಭಾರತದ 50 ಪ್ರತಿಶತಕ್ಕೂ ಅಧಿಕ ಜನಸಂಖ್ಯೆ ಕೃಷಿ ಅಥವಾ ಕೃಷಿ ಸಂಬಂಧಿ ಚಟುವಟಿಕೆಯನ್ನು ಅವಲಂಬಿಸಿದೆ.

ಈ ಕಾರಣಕ್ಕಾ ಗಿಯೇ, ಕೃಷಿ ಸುಧಾರಣೆಗೆ ಒತ್ತುಕೊಟ್ಟಿರುವ ನರೇಂದ್ರ ಮೋದಿಯವರಿಗೆ ನಾನು ಸಂಪೂರ್ಣ ಶ್ರೇಯಸ್ಸು ಕೊಡುತ್ತೇನೆ. ಕೃಷಿ ಸುಧಾರಣಾ ಕ್ರಮಗಳು ಉತ್ಪಾದಕರಿಗೆ ಸ್ವಾತಂತ್ರ್ಯ ಕೊಡುತ್ತಿವೆ. ಇದರ ಸಕಾರಾತ್ಮಕ ಪರಿಣಾಮವು ಗ್ರಾಮೀಣ ಕೃಷಿ ಕಾರ್ಮಿಕರ ಮೇಲೆ, ಕೃಷಿ ಸಂಸ್ಕರಣ ಘಟಕಗಳ ಮೇಲೆ ಹಾಗೂ ತತ್‌ಕ್ಷಣಕ್ಕೆ ಆರ್ಥಿಕತೆಯ ಮೇಲೂ ಕಾಣಿಸಿಕೊಳ್ಳಲಿದೆ.

ಕನಿಷ್ಠ ಬೆಂಬಲ ಬೆಲೆಯ ವಿಚಾರದಲ್ಲಿ ಕಾನೂನಾತ್ಮಕ ಖಾತ್ರಿ ಸಿಗಬೇಕು ಎಂದು ರೈತ ಸಂಘಟನೆಗಳು ಹಾಗೂ ವಿಪಕ್ಷಗಳು ಹೇಳುತ್ತಿವೆ. ಅಂದರೆ ಈ ವಿಚಾರವು ಬರೀ ಹೇಳಿಕೆಯಲ್ಲಷ್ಟೇ ಅಲ್ಲದೇಕಾನೂನಿನ ರೂಪದಲ್ಲೂ ಕಾಣಿಸಬೇಕು ಎನ್ನುವುದು ಅವರೆಲ್ಲರ ಆಗ್ರಹ.
– ಮೊದಲಿನಂತೆಯೇ ಈಗಲೂ ಎಪಿಎಂಸಿಗಳ ಮೂಲಕ ಸರಕಾರದ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ. ಇನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ವಿಚಾರಕ್ಕೆ ಬರುವುದಾದರೆ, ದಶಕಗಳಿಂದ ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಈಗ ಇದರಡಿಯಲ್ಲಿ ಬರುವ ಪದಾರ್ಥಗಳ ಸಂಖ್ಯೆ 23ಕ್ಕೆ ಏರಿದೆ. 2014 ಮತ್ತು 2016ರ ನಡುವೆ ಪ್ರಧಾನ ಮಂತ್ರಿಗಳು ಧಾನ್ಯಗಳ ವಿಚಾರದಲ್ಲಿ ಭಾರತ ಸ್ವಾವಲಂಬಿಯಾಗುವಂತೆ ಮಾಡುವತ್ತ ಗಮನ ಹರಿಸಿದರು. ನಾವು ಕನಿಷ್ಠ ಬೆಂಬಲ ಬೆಲೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಷ್ಟೇ ಅಲ್ಲದೇ, ಧಾನ್ಯ ಬೆಳೆಗಾರರಿಗೆ ಬೋನಸ್‌ ಕೊಟ್ಟೆವು.

ಕಾಂಗ್ರೆಸ್‌ ತನ್ನ ದೃಷ್ಟಿಯನ್ನು ಕೇವಲ ಕನಿಷ್ಠ ಬೆಂಬಲ ಬೆಲೆಗಷ್ಟೇ ಸೀಮಿತಗೊಳಿಸಿಕೊಂಡರೆ, ನಾವು ಇತರ ಬೆಳೆಗಳಿಗೂ ಆದ್ಯತೆ ನೀಡಿದೆವು. ಎಂಎಸ್‌ಪಿ ಮತ್ತು ಅದರ ಬಹು ಆಯಾಮದ ಬಳಕೆಯಿಂದಾಗಿ, ಸರಕಾರದ ಖರೀದಿ ಪ್ರಮಾಣ 2014ಕ್ಕಿಂತಲೂ ಅಧಿಕವಿದೆ.

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವುದಾದರೆ, ಅದನ್ನು ಹೇಗೆ ವಿವರಿಸುತ್ತೀರಿ?
– ನನಗನ್ನಿಸುವುದೇನೆಂದರೆ, ಜನರು ಎಲ್ಲ ಬಾಧೆಗಳನ್ನು ಎದುರಿಸುತ್ತಲೇ ಮತ್ತೆ ಎದ್ದು ನಿಲ್ಲಲು, ಮುನ್ನಡೆಯಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಹೊರಗೆ ಬರುತ್ತೇವೆ ಎನ್ನುವ ಆಶಾಭಾವನೆ ಅವರಲ್ಲಿದೆ ಎನ್ನುವುದು ಸ್ಪಷ್ಟ.

ಎಲ್ಲರೂ ತಾವು ಯಾವೆಲ್ಲ ರೀತಿಯ ಸಂಘರ್ಷವನ್ನು ಎದುರಿಸಬೇಕಾಗುತ್ತಿದೆ ಎನ್ನುವುದನ್ನು ಹೇಳುತ್ತಿದ್ದಾರೆ. ನಾನು ಅವನ್ನೆಲ್ಲ ಅರ್ಥಮಾಡಿಕೊಳ್ಳಬಲ್ಲೆ. ಮುಂದಿನ ದಿನಗಳಲ್ಲಿ ಕೋವಿಡ್‌ ಸಂಕಷ್ಟ ಕಡಿಮೆಯಾಗಿ, ಭಾರತೀಯ ಉದ್ಯಮಗಳು (ಚಿಕ್ಕ, ಮಧ್ಯಮ ಸೇರಿದಂತೆ) ಯಶಸ್ವಿಯಾಗಲಿವೆ ಎನ್ನುವ ಆಶಾಭಾವನೆ ನನಗಿದೆ.

(ಕೃಪೆ- ಹಿಂದೂಸ್ತಾನ್‌ ಟೈಮ್ಸ್‌, ದ ಇಂಡಿಯನ್‌ ಎಕ್ಸ್‌ಪ್ರೆಸ್‌)

ಟಾಪ್ ನ್ಯೂಸ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.