ಯಶಸ್ಸಿನ ವ್ಯಾಖ್ಯಾನ ಬದಲಾಗಬೇಕಲ್ಲವೇ?


Team Udayavani, Aug 23, 2018, 6:00 AM IST

s-11.jpg

ಹೆಚ್ಚು ಡೊನೇಶನ್‌, ಹೆಚ್ಚು ಪ್ರತಿಷ್ಠೆ, ಹೆಚ್ಚಿನ ಗುಣಮಟ್ಟವೆಂಬ ವ್ಯಾಖ್ಯಾನದಲ್ಲಿ ಒದ್ದಾಡುತ್ತಿದ್ದೇವೆ. ಮಕ್ಕಳು ನಮ್ಮ ಸಂಪತ್ತಿನ ಶೋಕೇಸ್‌ಗಳಾಗುತ್ತಿದ್ದಾರೆ. ಮಕ್ಕಳಿಗೆ ತಮ್ಮ ಕೆಲಸಗಳನ್ನು ತಾವೇ ಮಾಡುವ, ಕನಿಷ್ಠ ಪಕ್ಷ ತಿಂದ ಪಾತ್ರೆಯನ್ನು ಎತ್ತಿಡುವ ಸಂಸ್ಕಾರವನ್ನು ಕಲಿಸಿಕೊಡದಿರುವುದು ದುಃಖದ ಸಂಗತಿ.

ಪರೀಕ್ಷೆಯ ಕಾಲ ಎಂದರೆ ನಮ್ಮ ಮನೆಯಲ್ಲಿ ಒಂದು ಗಂಭೀರ ವಾದ ವಾತಾವರಣ ನಿರ್ಮಾಣವಾಗುವ ಕಾಲ. ಅಪ್ಪ ಅಮ್ಮನಿಗೆ ನಿದ್ದೆಯಿಲ್ಲದ ದಿನಗಳವು. ತಮ್ಮ ಮಕ್ಕಳು ಎಲ್ಲರಿಗಿಂತಲೂ ಮುಂದಿರಬೇಕೆನ್ನುವ ಕಲ್ಪನೆಯಲ್ಲಿ ಹೆಚ್ಚು ಹಣ ತೆತ್ತು ಪ್ರಸಿದ್ಧ ಶಾಲೆಗೆ ಸೇರಿಸಿಯಾಗಿತ್ತು. ಆದರೆ, ಮಕ್ಕಳು ಮಾತು ಕೇಳುತ್ತಿಲ್ಲ. ಪ್ರಶ್ನೆಗಳಿಗೆ ಉತ್ತರವನ್ನು ಕಂಠಪಾಠ ಮಾಡುತ್ತಿಲ್ಲ. ಪರೀಕ್ಷೆಯಲ್ಲಿ out of out ತೆಗೆಯುತ್ತಿಲ್ಲ. ಸಮಯ ಸಿಕ್ಕರೆ ಕಾಟೂìನುಗಳ ಲೋಕದಲ್ಲಿ ವಿಹರಿಸುವ ಮಕ್ಕಳನ್ನು ಸರಿದಾರಿಗೆ ತರುವುದಾದರೂ ಹೇಗೆ ? ಇದು ಎಲ್ಲಾ ಮನೆಯ ಸವಾಲು.

ಕಳೆದ ಕೆಲವು ವರ್ಷಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಟೀಕಿಸಿ ಸುಸ್ತಾಗಿದ್ದೇವೆ. ಈ ಶಿಕ್ಷಣ ಪದ್ಧತಿ ನಮ್ಮ ಮಕ್ಕಳನ್ನು ಬರೇ ಕಾರಕೂನರನ್ನಾಗಿ ರೂಪಿಸಲು ಮಾಡಿದ ಕುತಂತ್ರವೆಂದು ಲಾರ್ಡ್‌ ಮೆಕಾಲೆಗೆ ಹಿಡಿ ಶಾಪ ಹಾಕುವುದು ತಪ್ಪುತ್ತಿಲ್ಲ. ಆದರೆ ವ್ಯವಸ್ಥೆಯ ಸಾಧಕ ಬಾಧಕಗಳೇನು? ಯಾವ ರೀತಿ ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬಹುದು ? ಹೇಗೆ ನಮ್ಮ ಮಕ್ಕಳನ್ನು ಸೃಜನಶೀಲರಾಗಿ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬಹುದು? ಚರ್ಚೆ ನಡೆದೇ ಇದೆ, ಫ‌ಲಿತಾಂಶ ಮಾತ್ರ ಶೂನ್ಯ.

ಇತ್ತೀಚೆಗೆ ಶಿಕ್ಷಣ ಸಚಿವರು ಶಿಕ್ಷಣದಲ್ಲಿ ಯಾವ ರೀತಿ ಬದಲಾವಣೆಯನ್ನು ತರಬಹುದು ಎಂಬುದರ ಬಗ್ಗೆ ಸಲಹೆ ಸೂಚನೆ ಕೊಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದರು. ಅದಕ್ಕೆ ಎಷ್ಟು ಜನ ಸ್ಪಂದಿಸಿದರೆಂದು ತಿಳಿಯದು. ಆದರೆ ಬದಲಾವಣೆ ಯಾಗಬೇಕೆಂಬುದು ಎಲ್ಲರ ಆಸೆ, ಆಕಾಂಕ್ಷೆ.
ಇನ್ನೊಂದು ವಿಪರ್ಯಾಸವೆಂದರೆ ಈ ಶಿಕ್ಷಣ ಪದ್ಧತಿಯನ್ನು ಟೀಕಿಸುತ್ತಲೇ ಅಧ್ಯಾಪಕರು ಮತ್ತು ತಂದೆ ತಾಯಿಯರು 
ಮಕ್ಕಳ ಅಂಕಗಳ ಹಿಂದೆ ಬಿದ್ದಿದ್ದಾರೆ. ನೂರಕ್ಕೆ ನೂರು ಇದು ನಮ್ಮ ಗುರಿ. ಹೆಚ್ಚು ಅಂಕ, ಹೆಚ್ಚು ಯಶಸ್ಸು ಎಂಬ ಸೂತ್ರಕ್ಕೆ ಇಡೀ ಸಮಾಜ ಅಂಟಿಕೊಂಡಂತಿದೆ. ನಮ್ಮ ಮಕ್ಕಳು ಹುಟ್ಟಿರುವುದೇ ಪರೀಕ್ಷೆಯ ತಯಾರಿಗಾಗಿ ಎನ್ನುವ ರೀತಿಯಲ್ಲಿ ಹೆತ್ತವರು, ಕೋಚಿಂಗ್‌ ಕ್ಲಾಸುಗಳು ಹಗಲಿರುಳು ದುಡಿಯುತ್ತಿವೆ. ಗಣಿತ ಮತ್ತು ವಿಜ್ಞಾನದಲ್ಲಿ ಮುಂದಿದ್ದರೆ ಮಾತ್ರ ನಮ್ಮ ಮಗುವಿಗೆ ಭವಿಷ್ಯವೆನ್ನುವ ತಪ್ಪು ತಿಳುವಳಿಕೆ ಮಕ್ಕಳ ಬಾಲ್ಯವನ್ನು ಕಸಿದು ಕೊಳ್ಳುತ್ತಿದೆ. ಕೆಲವು ಕೋಚಿಂಗ್‌ ಸೆಂಟರ್‌ಗಳಂತೂ ವಿದ್ಯಾರ್ಥಿಗಳನ್ನು ಕಾಲೇಜ್‌ ಬಿಡಿಸಿ ಪರೀಕ್ಷೆಗಾಗಿ ತರಬೇತುಗೊಳಿಸುತ್ತಿವೆ. ಪರೀಕ್ಷೆಗಾಗಿ ಓದೇ, ಅಥವಾ ಓದಿನ ಮೌಲ್ಯಮಾಪನಕ್ಕಾಗಿ ಪರೀಕ್ಷೆಯೇ, ಅರ್ಥವಾಗದ ಸ್ಥಿತಿ. ಶಾಲಾ ಕಾಲೇಜುಗಳು ಜ್ಞಾನ ಕೇಂದ್ರಗಳಲ್ಲ, ಪರೀಕ್ಷಾ ಕೇಂದ್ರಗಳಾಗಿ ಬಿಟ್ಟಿವೆ. 

ಮಕ್ಕಳನ್ನು ಶಾಲೆ ಕಾಲೇಜುಗಳು ಬೆಳೆಸುತ್ತಿರುವ ರೀತಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಸಣ್ಣ ಮಗುವೊಂದು A for Apple, B for Bat ಎಂದು ಕಲಿಯುತ್ತದೆ. ಪರೀಕ್ಷೆಯ scheme ಹೇಗಿರುತ್ತದೆಯೆಂದರೆ A for Aeroplane ಬರೆದ ಮಗು Fail. ಅತ್ಯಂತ ಚಿಂತನಶೀಲ ಮಗುವನ್ನು out of the box ಚಿಂತಿಸದಂತೆ ನಾವು ಶಿಕ್ಷಣ ವ್ಯವಸ್ಥೆಯ ಮೂಲಕ ಬೆಳೆಸುತ್ತಿದ್ದೇವೆೆ. ಪ್ರಶ್ನೆಗಳ ಆಗರವಾಗಿರುವ ಮಗುವನ್ನು “ಕೈ ಕಟ್ಟು ಬಾಯಿ ಮುಚ್ಚು’ ಎಂಬ ಶಿಸ್ತಿನ ಕೋಟೆಯಲ್ಲಿ ಬಂಧಿಸಿ ಬಿಡುತ್ತೇವೆ. ಬೇರೆ ರೀತಿಯಲ್ಲಿ ಯೋಚಿ ಸುವ, ಪ್ರಶ್ನಿಸಿ ತಿಳಿದುಕೊಳ್ಳುವ ಅವಕಾಶ, ಭಯವಿಲ್ಲದ ಮುಕ್ತ ವಾತಾವರಣ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ದೂರವೇ ಉಳಿದಿದೆ ಯೆಂದರೆ ತಪ್ಪಾಗಲಾರದು. ಓದಿನ ಜೊತೆಗೆ ಮಕ್ಕಳಿಗೆ ಆಟದ ಅಗತ್ಯವಿದೆಯೆಂಬ ಕಲ್ಪನೆಯಿಂದಲೇ ದೂರವಿದ್ದೇವೆ. ಪ್ರತಿ ಯೊಂದು ಮಗುವನ್ನು ಒಂದು ನಿರ್ದಿಷ್ಟ ದಾರಿಯಲ್ಲಿ ಮಾತ್ರ ಮೇಲೆ ತರಬೇಕೆಂಬ ನಮ್ಮ ಒತ್ತಾಯ ಹೆದರಿಕೆ ಹುಟ್ಟಿಸುವಂತದ್ದು. ಹುಟ್ಟಿದ ಪ್ರತಿಯೊಂದು ಮಗುವೂ ವಿಭಿನ್ನ, ಅದರ ಪ್ರತಿಭೆಯೇ ಬೇರೆ. ನೃತ್ಯ ಸಂಗೀತ, ಅಭಿನಯ, ಕ್ರೀಡೆ, ಮಾತುಗಾರಿಕೆ, ಸಾಹಿತ್ಯ, ಉದ್ಯಮಶೀಲತೆ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧಿಸುವ ಅವಕಾಶವನ್ನು ನಾವಿಂದು ನಮ್ಮ ಮಗುವಿಗೆ ಕೊಡುತ್ತಿಲ್ಲ. ಮೀನಿಗೆ ಮರ ಹತ್ತಿದರೆ ಮಾತ್ರ ಪಾಸ್‌ ಸರ್ಟಿಫಿಕೇಟ್‌ ಕೊಡುವ ಮಟ್ಟಕ್ಕೆ ನಾವು ಚೌಕಟ್ಟು ನಿರ್ಮಿಸಿಬಿಟ್ಟಿದ್ದೇವೆ. ಈ ರೀತಿಯಾಗಿದ್ದರೆ ಕಲಿಕೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಸಚಿನ್‌ ತೆಂಡುಲ್ಕರ್‌ ಭಾರತ ರತ್ನವಾಗುತ್ತಿರಲಿಲ್ಲ. ಗಣಿತದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ರಾಗಿದ್ದ ಜಾಕ್‌ ಮಾ ಒಬ್ಬ ಉದ್ಯಮಿಯಾಗುತ್ತಿರಲಿಲ್ಲ. 

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಿದ್ಧಾಂತಕ್ಕೆ (theory) ಎಷ್ಟು ಅಂಟಿಕೊಂಡಿದ್ದೇವೆಂದರೆ, ಸೈಕಲ್‌ ಓಡಿಸುವುದರ ಬಗ್ಗೆ ದೊಡ್ಡ ಭಾಷಣವನ್ನೆ ಮಾಡುತ್ತೇವೆ. ಮೊದಲು ಸೈಕಲ್‌ ಚಿತ್ರ ಬೋರ್ಡ್‌ ನಲ್ಲಿ ಬರೆದು ಭಾಗಗಳ ಮಾಹಿತಿ, ಕೊನೆಗೆ ಸೈಕಲ್‌ನ್ನು ಯಾವ ರೀತಿ balance ಮಾಡಬೇಕೆಂಬ ವಿವರಣೆ. ಒಂದು ವೇಳೆ ಸೈಕಲ್‌ ಬಗ್ಗೆ ವಿವರಣೆ, ಸಮತೋಲನ, ಗುರುತ್ವ ಕೇಂದ್ರ, ಸೈಕಲ್‌ನ ವೇಗ, ಆವೇಗದ ಬಗ್ಗೆ ವಿವರಣೆ ಕೊಡುತ್ತಾ ಸೈಕಲ್‌ ಕಲಿಯು ವಂತಿದ್ದರೆ ನಮ್ಮಲ್ಲಿ ಹೆಚ್ಚಿನವರು ಸೈಕಲ್‌ನ ಹತ್ತಿರ ಹೋಗುತ್ತಿರಲಿಲ್ಲ ಅಥವಾ ಸೈಕಲ್‌ ಕಲಿಯಲು 7-8 ವರ್ಷ ತೆಗೆದುಕೊಳ್ಳುತ್ತಿ ದ್ದೇವೆಯೋ ಏನೋ? ಖ್ಯಾತ ಗಣಿತ ಶಾಸ್ತ್ರಜ್ಞ ಗಣಿತದಲ್ಲಿ ನೊಬೆಲ್‌ ಸರಿಸಮಾನವಾಗಿರುವ ಫೀಲ್ಡ್‌ ಮೆಡಲ್‌ ಪ್ರಶಸ್ತಿ ಪಡೆದ ಮಂಜುಳಾ ಭಾರ್ಗವ ಅವರ ಮಾತುಗಳ ಪ್ರಕಾರ ಭಾರತದಲ್ಲಿ ಗಣಿತವನ್ನು ಕಲಿಸುವ ವಿಧಾನದ ಸಂಕೀರ್ಣತೆ ಯಿಂದಾಗಿ ಹಲವಾರು ವಿದ್ಯಾರ್ಥಿಗಳು ಗಣಿತವನ್ನು ದ್ವೇಷಿಸು ವಂತಾಗಿದೆ. ಇದು ಎಲ್ಲಾ ವಿಷಯಗಳಿಗೂ ಅನ್ವಯ. 

ನಾವು ಮಕ್ಕಳಿಗೆ ಕಲಿಕೆಯನ್ನು ಒಂದು ಸಂತೋಷದಾಯಕ ಸಂಗತಿಯಾಗಿ ರೂಪಿಸಿದ್ದೇವೆಯೇ? ಕಷ್ಟಪಟ್ಟು ಓದಬೇಕೆಂದು ಒತ್ತಾಯಿಸುವ ನಾವು, ಓದನ್ನು ಇಷ್ಟಪಡುವ‌ ಪರಿಸರ ನಿರ್ಮಿಸಿದ್ದೇವೆಯೇ ? ಪರಿಸರದ ಕಡೆಗಿನ ಕೂತೂಹಲ, ಕಾಳಜಿ, ಸ್ವತ್ಛ ಪರಿಸರ, ಹಿರಿಯರಿಗೆ ಗೌರವ, ಜೀವನ ಮೌಲ್ಯಗಳು, ನಮ್ಮ ದೇಶದ ಬಗ್ಗೆ ಅಭಿಮಾನ, ಸಾರ್ವಜನಿಕ ಸಂಪತ್ತಿನ ಬಗ್ಗೆ ಜವಾಬ್ದಾರಿ, ಕೌಟುಂಬಿಕ ಮೌಲ್ಯಗಳು, ನಮ್ಮ ಪಠ್ಯ ಕ್ರಮದಲ್ಲೇ ಇಲ್ಲ. ನಮ್ಮ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ಮಹಾನ್‌ ಗಣಿತ ಶಾಸ್ತ್ರಜ್ಞರು, ಖಗೋಳ ಶಾಸ್ತ್ರಜ್ಞರು, ಭೌತ ವಿಜ್ಞಾನಿಗಳು, ರಸಾಯನ ಶಾಸ್ತ್ರಜ್ಞರು, ವೈದ್ಯಕೀಯ ಶಾಸ್ತ್ರಜ್ಞರುಗಳ ಬಗ್ಗೆ ಸಣ್ಣ ಮಕ್ಕಳಿಗೆ ಬಿಡಿ, ಈ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯು ವವರಿಗೂ ಮಾಹಿತಿ ಇಲ್ಲ. 

ಶಿಕ್ಷಣ ಪದ್ಧತಿಯ ಜೊತೆಗೆ ಹೆತ್ತವರ ಬೇಜವಾಬ್ದಾರಿ ಪರಿಸ್ಥಿತಿ ಯನ್ನು ಇನ್ನಷ್ಟು ಬಿಗಡಾಯಿಸಿದೆ. ಶಿಕ್ಷಣದ ಗುರಿಯೇ ಮಕ್ಕಳನ್ನು ಎಲ್ಲರಿಗಿಂತ ಶ್ರೀಮಂತರನ್ನಾಗಿಸುವುದಕ್ಕಾಗಿ ಎನ್ನುವ ಪರಿಕಲ್ಪನೆಯೇ ಹೆಚ್ಚಿನವರಲ್ಲಿ ಇದ್ದಂತಿದೆ. ಹೆಚ್ಚು ಡೊನೇಶನ್‌, ಹೆಚ್ಚು ಪ್ರತಿಷ್ಠೆ, ಹೆಚ್ಚಿನ ಗುಣಮಟ್ಟವೆಂಬ ವ್ಯಾಖ್ಯಾನದಲ್ಲಿ ಒದ್ದಾಡುತ್ತಿದ್ದೇವೆ. ಮಕ್ಕಳು ನಮ್ಮ ಸಂಪತ್ತಿನ ಶೋಕೇಸ್‌ಗಳಾಗುತ್ತಿದ್ದಾರೆ. ಮಕ್ಕಳಿಗೆ ತಮ್ಮ ಕೆಲಸಗಳನ್ನು ತಾವೇ ಮಾಡುವ, ಕನಿಷ್ಠ ಪಕ್ಷ ತಿಂದ ಪಾತ್ರೆಯನ್ನು ಎತ್ತಿಡುವ ಸಂಸ್ಕಾರವನ್ನು ಕಲಿಸಿ ಕೊಡದಿ ರುವುದು ದುಃಖದ ಸಂಗತಿ. ನಾವು ಮಕ್ಕಳನ್ನು ಹಣಗಳಿಸುವ ಯಂತ್ರವಾಗಿ ಸಬೇಕೆಂದು ಬಯಸುತ್ತೇವೆಯೇ ಹೊರತು, ನಮ್ಮ ಶಿಕ್ಷಣ ವ್ಯವಸ್ಥೆಯಾಗಲಿ, ಹೆತ್ತವರಾಗಲಿ ಮಕ್ಕಳನ್ನು ಯೋಗ್ಯ ಮನುಷ್ಯ ರನ್ನಾಗಿ ರೂಪಿಸುತ್ತಿಲ್ಲ. ಸಾಮಾಜಿಕ ಸ್ಥಾನಮಾನಗಳ ಹೆಸರಿನಲ್ಲಿ ನಮ್ಮ ಮಕ್ಕಳು ರೋಬೋಟ್‌ಗಳಾಗುತ್ತಿದ್ದಾರೆಯೇ ಹೊರತು ಸಂತೋಷ ಜೀವಿಗಳಾಗುತ್ತಿಲ್ಲ. ಯಾವುದೋ ದೊಡ್ಡ ಗುರಿಯ ಕಡೆಗೆ ಒತ್ತಡದಿಂದ ಓಡುತ್ತಿದ್ದಾರೆಯೇ ಹೊರತು ಪ್ರತಿಯೊಂದು ಕ್ಷಣನ್ನೂ ಆಸ್ವಾದಿಸಿ, ಆನಂದಿಸಿ ನಲಿಯುವ ಯಾರನ್ನೂ ನಾವು ಕಾಣುತ್ತಿಲ್ಲ. ನಾಳೆಯ ಸಂತೋಷಕ್ಕಾಗಿ ಪರದಾಡುವ ನಾವು ಈ ದಿನ ಆನಂದಿಸುವುದನ್ನು ಮುಂದೂಡುತ್ತಾ ಬಂದಿದ್ದೇವೆ.

ಪ್ರತಿಯೊಬ್ಬರೂ ಆನಂದವಾಗಿರುವುದೇ ಅತ್ಯಂತ ಮುಖ್ಯ ಎಂಬ ಶಿಕ್ಷಣವನ್ನು ನಾವು ಕೊಡಬೇಕಿದೆ. ಜೀವನದಲ್ಲಿ ಏನೇ ಆಗಿ, ಎಲ್ಲವನ್ನೂ ಆನಂದಿಸಿ ಎನ್ನುವುದನ್ನು ಕಲಿಸಬೇಕಿದೆ. ಜೀವನದ ಯಶಸ್ಸಿನ ವ್ಯಾಖ್ಯಾನವನ್ನು ಬದಲಾಯಿಸಬೇಕಿದೆ ನಮ್ಮ ಶಿಕ್ಷಣ. ನಮ್ಮ ಮಕ್ಕಳನ್ನು ಗೆಲುವಿಗಾಗಿ ಮಾತ್ರವಲ್ಲ ಸೋಲಿಗಾಗಿಯೂ ತಯಾರುಮಾಡಬೇಕಿದೆ. ಹಲವಾರು ಸಂದರ್ಭಗಳಲ್ಲಿ ನಮ್ಮ ಸೋಲೇ ನಮಗೆ ಜೀವನದಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎನ್ನುವ ಸತ್ಯ ಮಕ್ಕಳಿಗೆ ಅರಿವಾಗಬೇಕಿದೆ. ಎ.ಪಿ.ಜೆ ಅಬ್ದುಲ್‌ ಕಲಾಂ ತಮ್ಮ ಕನಸಾದ ಯುದ್ಧ ವಿಮಾನದ ಪೈಲಟ್‌ ಆಗುವುದರಲ್ಲಿ ಸೋತಿದ್ದರು. ಆದರೆ ಆ ಸೋಲೇ ಅವರು ಮುಂದೆ ಭಾರತ ರತ್ನವಾಗುವುದಕ್ಕೆ ನಾಂದಿಯಾಯಿತು. ಮಕ್ಕಳಲ್ಲಿ ಸೋಲನ್ನು ಸ್ವೀಕರಿಸುವ ಮನಸ್ಥಿತಿ ನಿರ್ಮಾಣವಾದಾಗ, ರ್‍ಯಾಂಕ್‌ ಬರಲಿಲ್ಲ ವೆಂದೋ, ಪರೀಕ್ಷೆಯಲ್ಲಿ ಫೇಲಾದೆನೆಂದೋ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ; ಮಾಡಿಕೊಳ್ಳಬಾರದು. 

ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತರಬೇಕೆಂದರೆ ಅತ್ಯಂತ ಸಣ್ಣ ಕ್ಲಾಸಿನ pre kg ಅಧ್ಯಾಪಕರ ಬೋಧನಾ ಕ್ರಮದಿಂದ ಆರಂಭಿಸಬೇಕು. ಹೆಚ್ಚಾಗಿ ಅಧ್ಯಾಪಕರು ಅವರ ಅಧ್ಯಾಪಕರು ಮಾಡಿದ ಪಾಠ ಕ್ರಮವನ್ನು ಅನುಸ ರಿಸುತ್ತಾರೆ. ಹಿಂದಿನ ತಲೆಮಾರಿನ ತಪ್ಪು ಒಪ್ಪುಗಳೆಲ್ಲ ಮುಂದಿನ ತಲೆಮಾರಿಗೂ ದಾಟಿಸಲ್ಪಡುತ್ತದೆೆ. ಮೊದಲನೆಯದಾಗಿ ಅಧ್ಯಾಪನ ಕ್ಷೇತ್ರವನ್ನು ಒಂದು ಆಕರ್ಷಕ ವೃತ್ತಿಯಾಗಿಸಬೇಕಿದೆ. ಹೇಗೆ ಜನ IIT/IISc/IIM ಗಳಲ್ಲಿ ತರಬೇತು ಪಡೆದು, ಎಂಜಿನಿಯರ್‌ಗಳು, ವಿಜ್ಞಾನಿಗಳು, ಪ್ರೊಫೆಸರುಗಳು, ಉದ್ಯಮಿಗಳಾಗಲು ಹಾತೊರೆಯುತ್ತಾರೋ, ಅದೇ ರೀತಿ ಶಿಶುವಿಹಾರ ಪೂರ್ವ (pre kg), ಶಿಶುವಿಹಾರ (kg) ಮತ್ತು ಪ್ರಾಥಮಿಕ (primary) ಅಧ್ಯಾಪಕರುಗಳಾಗುವುದಕ್ಕೆ ಮುಗಿಬೀಳುವಂತಾಗಬೇಕು. 

ಚೆನ್ನಾಗಿ ತರಬೇತಾದವರನ್ನು ಈ ಕ್ಲಾಸಿಗೆ ಅಧ್ಯಾಪಕರಾಗಿ ನೇಮಿಸುವಂತಾಗಬೇಕು. ಅದಕ್ಕಾಗಿ ಪಿಯುಸಿ ನಂತರ ಸಿಇಟಿ (ಇಉಖ) ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಮೆರಿಟ್‌ ಆಧಾರ ದಲ್ಲಿ ಆಸಕ್ತ ವಿದ್ಯಾರ್ಥಿಗಳನ್ನು ಆರಿಸಿ 3 ಅಥವಾ 4 ವರ್ಷದ ಬ್ಯಾಚುಲರ್‌ ಆಫ್ ಎಜುಕೇಶನ್‌ (Bachelor of Education) ಎನ್ನುವ ಡಿಗ್ರಿಗಳನ್ನು ಉಚಿತವಾಗಿ ಒದಗಿಸುವಂತಾಗಬೇಕು. ನುರಿತ ಎಂಜಿನಿಯರ್‌ಗಳನ್ನು ನಮ್ಮ IIT/NITಗಳು ನಿರ್ಮಾಣ ಮಾಡುವಂತೆ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಅಧ್ಯಾಪಕರುಗಳನ್ನು ಈ ಕೋರ್ಸ್‌ ನಿರ್ಮಾಣ ಮಾಡು ವಂತಾಗಬೇಕು. ಈ ಕೋರ್ಸ್‌ಗಳಲ್ಲಿ ಮಕ್ಕಳ ಮನಃಶಾಸ್ತ್ರ, ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ಆನಂದದಾಯಕವಾಗಿ ಕಲಿಸುವ ಕಲೆ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವ ಬಗೆ, ಚಟುವಟಿಕೆ ಆಧಾರಿತ ಕಲಿಕೆ, ಗುಂಪು ಚರ್ಚೆ, ಬೇರೆ ಬೇರೆ ಕಲಿಕಾ ವಿಧಾನಗಳು (Pedagogies) ಇತ್ಯಾದಿ ವಿಚಾರಗಳಲ್ಲಿ ಅಧ್ಯಾಪ ಕರು ತರಬೇತಿ ಪಡೆಯುವಂತಾಗಬೇಕು. ಇಲ್ಲಿ ಪದವಿ ಮುಗಿಸಿ ದವರನ್ನು ಪ್ರಪಂಚದಲ್ಲೆ ಅತ್ಯಂತ ಒಳ್ಳೆಯ ಶಿಕ್ಷಣಕ್ಕೆ ಹೆಸರಾದ ಫಿನ್‌ಲ್ಯಾಂಡ್, ಸ್ವಿಜರ್ಲ್ಯಾಂಡ್‌ ಹಾಗೂ ಇನ್ನಿತರ ಯಾವುದೇ ದೇಶಗಳಲ್ಲಿ ಒಂದು ವರ್ಷದ ತರಬೇತಿಗೆ ಕಳುಹಿಸುವಂತಾಗಬೇಕು(ಪ್ರಾಯೋಗಿಕವಾಗಿಯಾದರೂ). ಮುಂದೆ ಈ ತರಬೇತಿ ಪಡೆದ ಅಧ್ಯಾಪಕರುಗಳನ್ನು ಒಳ್ಳೆಯ ವೇತನದೊಂದಿಗೆ ಸರಕಾರಿ ಮಾದರಿ ಶಾಲೆಗಳಲ್ಲಿ ನೇಮಿಸುವಂತಾಗಬೇಕು.(ಪಿಯುಸಿವರೆಗೆ ಎಲ್ಲಾ ಶಾಲೆ ಕಾಲೇಜುಗಳು ಸರಕಾರಿ ಪ್ರಾಯೋಜಿತವಾಗಿದ್ದರೆ ಉತ್ತಮ). ದೇಶವ್ಯಾಪಿಯಾಗಿ ಈ ರೀತಿ¿åಲ್ಲಿ ಅಧ್ಯಾಪಕರು ಗಳ ನಿರ್ಮಾಣವಾದಾಗ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಬದಲಾವಣೆ ಸಾಧ್ಯ. ಇದೇ ಅಧ್ಯಾಪಕರು ಮುಂದಿನ ತಲೆಮಾರಿನ ಅಧ್ಯಾಪಕ ರುಗಳನ್ನು ರೂಪಿಸುವಲ್ಲಿಯೂ ಮಹತ್ತರ ಪಾತ್ರವಹಿಸುತ್ತಾರೆ. ಇಂತಹ ನುರಿತ ಮತ್ತು ಸ್ವಯಂಸ್ಫೂರ್ತಿ ಪಡೆೆದ ಅಧ್ಯಾಪಕರು ಗಳಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಪ್ರತಿಭೆಗಳು ಹೊರ ಬರುವಂತಾಗುತ್ತದೆ. ಕ್ರೀಡೆಯಲ್ಲೂ ವಿಶೇಷ ಪ್ರೋತ್ಸಾಹ ಸಣ್ಣ ವಯಸ್ಸಿನಲ್ಲೇ ಸಿಗುವಂತಾಗಬೇಕು. ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾದರಿಯ ಕೋರ್ಸುಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸುವಂತಾಗಬೇಕು. 

ಸ್ವತ್ಛ ಭಾರತದ ಯಶಸ್ಸಿನ ಬಹು ಮುಖ್ಯ ಭಾಗವನ್ನು ನಮ್ಮ ದೇಶದ ಸಣ್ಣ ಮಕ್ಕಳಿಗೆ ಕೊಡಬೇಕಿದೆ. ಹಲವಾರು ಸಂದರ್ಭಗಳಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ‌ ಒಂದು ಸಣ್ಣ ಕಾಗದದ ಚೂರನ್ನೂ ಹೊರಗೆ ಎಸೆಯದಂತೆ ನನ್ನ ನಾಲ್ಕನೇ ಕ್ಲಾಸಿನ ಮಗಳು ಎಚ್ಚರಿಸುತ್ತಾಳೆ. ಸಣ್ಣ ವಯಸ್ಸಿನಲ್ಲಿ ಆಗುವ ಮನವರಿಕೆ ಮಕ್ಕಳನ್ನು ಜವಾಬ್ದಾರಿಯುತರನ್ನಾಗಿಸುವುದು ಮಾತ್ರವಲ್ಲ ಹಿರಿಯರಿಗೂ ಅವರು ಸ್ಫೂರ್ತಿಯಾಗಬಲ್ಲರು ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಹಾಗಾಗಿ ನಮ್ಮ ಪಠ್ಯದಲ್ಲಿ ಅನಗತ್ಯ ವಿಚಾರಗಳನ್ನು ತುರುಕುವುದಕ್ಕಿಂತ ಕೆಲವು ಅಗತ್ಯ ಜೀವನ್ಮುಖಿ ವಿಚಾರಗಳನ್ನು ಸೇರಿಸಬೇಕಿದೆ. ಸಣ್ಣ ವಯಸ್ಸಿನಲ್ಲಿ ಬೆಳೆಸುವ ಉತ್ತಮ ಜೀವನ ಮೌಲ್ಯಗಳು ಮಗುವಿನ ಜೀವನ ಪೂರ್ತಿ ಮಹತ್ತರ ಪಾತ್ರ ವಹಿಸುತ್ತವೆ. ಒಳ್ಳೆಯ ಪಠ್ಯಕ್ರಮ, ಅಧ್ಯಯನ- ಚಿಂತನ- ಸಂಶೋಧನಾಶೀಲ ಅಧ್ಯಾಪಕರುಗಳು, ಜವಾಬ್ದಾರಿಯುತ ಹೆತ್ತವರು ಮತ್ತು ಚಾರಿತ್ರವಂತ ಸಮಾಜ ದೇಶದ ಸ್ವರೂಪವನ್ನು ಬದಲಾಯಿಸಬಲ್ಲದು.

ಡಾ| ರಾಜೇಶ್‌ ಕುಮಾರ್‌ ಶೆಟ್ಟಿ 

ಟಾಪ್ ನ್ಯೂಸ್

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.