ನಮ್ಮ ಭಾಷೆ ಉಳಿಯಬೇಕು ಅಭಿಮಾನಕ್ಕೆ ಅಲ್ಲ, ಲೌಕಿಕ ಹಿತಕ್ಕಾಗಿ!


Team Udayavani, Jan 20, 2019, 12:30 AM IST

manipal.jpg

ಪಂಪ, ರನ್ನ, ಶರಣರ ವಚನಗಳು, ದಾಸರ ಪದಗಳು, ಮಂಕುತಿಮ್ಮನ ಕಗ್ಗ ಈ ರೀತಿ ಭಾಷಾ ಸಾಹಿತ್ಯ ಸಂಪತ್ತಿನ ಆದರ್ಶದ ಗಣಿಯೇ ಇರುವಾಗ, ಬದುಕಿನ ವಿಕಾಸಕ್ಕೆ ಬಗೆದಷ್ಟು ಸಿಗುವ ಹೇರಳವಾದ ಸಂಪತ್ತಿರುವಾಗ ಇಂಗ್ಲಿಷ್‌ ಭಾಷೆಯೇ ಜ್ಞಾನದ ಗಣಿ ಎಂದು ಭ್ರಮಿಸುವವರು ಅನೇಕರಿದ್ದಾರೆ

21ನೆಯ ಶತಮಾನದ ಆರಂಭದಿಂದಲೇ ಇಂಗ್ಲಿಷ್‌ ಭಾಷೆಯ ಅಟ್ಟಹಾಸಕ್ಕೆ ಸರಕಾರಿ ಕನ್ನಡ ಶಾಲೆಗಳು ನಲುಗುತ್ತಾ ಬಂದಿವೆ. ಇಂದಿನ ಪರಿಸ್ಥಿತಿಯನ್ನು ನೋಡಿದಾಗ ಕವಿಯೊಬ್ಬರ ಮಾತು ನೆನಪಿಗೆ ಬರುತ್ತಿದೆ.
 
“ತೋಟದ ಅಂಚಿನಲ್ಲೆಲ್ಲೋ ಬೆಳೆದಿದ್ದ ಕಳೆಹುಲ್ಲು ಕಣ್ಣ ನೋಟವನು ತಪ್ಪಿಸಿ ನುಗ್ಗುತಿಹುದಲ್ಲೋ’ ಎಂಬಂತೆ ಇಂಗ್ಲಿಷ್‌ ಎನ್ನುವುದು ತನ್ನ ಕಬಂಧಬಾಹುವನ್ನು ಜಗತ್ತಿನಾದ್ಯಂತ ವಿಸ್ತರಿಸುತ್ತಿದ್ದು ಅದಕ್ಕೆ ನಮ್ಮ ಕನ್ನಡವು ಬಲಿಯಾಗುತ್ತಿದೆ. ಇಂಗ್ಲಿಷ್‌ ಕಲಿಯುವುದು ತಪ್ಪಲ್ಲ, ಆದರೆ ಈ ವೇಳೆಯಲ್ಲಿ ಕನ್ನಡದ ಕಡೆಗಣನೆ ಅಗುತ್ತಿರುವುದು ವಿಪರ್ಯಾಸ.
ಕನ್ನಡ ಶಾಲೆಗಳ ವಿಚಾರ ಅಂದರೆ, ಅದು ಕನ್ನಡ ಭಾಷೆಯ ವಿಚಾರ. ರಾಷ್ಟ್ರಕವಿ ಗೋವಿಂದ ಪೈ ಅವರು ಒಂದು ಮಾತನ್ನು ಹೇಳಿದ್ದರು.

“ಎನ್ನ ಕಂಪನರಿಯದವನಿಗೆ ಹುಡುಕುವ ಮೂರ್ಖತನಕ್ಕೆ ಏನೆನ್ನಬೇಕು?’ ಎಂದು. ಪಂಪ, ರನ್ನ, ರಾಮಾಯಣ, ಮಹಾಭಾರತ, ಶರಣರ ವಚನಗಳು, ದಾಸರ ಪದಗಳು, ಮಂಕುತಿಮ್ಮನ ಕಗ್ಗ ಈ ರೀತಿ ಭಾಷಾ ಸಾಹಿತ್ಯ ಸಂಪತ್ತಿನ ಆದರ್ಶದ ಗಣಿಯೇ ಇರುವಾಗ, ಬದುಕಿನ ವಿಕಾಸಕ್ಕೆ ಬಗೆದಷ್ಟು ಸಿಗುವ ಹೇರಳವಾದ ಸಂಪತ್ತಿರುವಾಗ ಅದರ ಅರಿವಿಲ್ಲದೇ ಇಂಗ್ಲಿಷ್‌ ಭಾಷೆಯೇ ಜ್ಞಾನದ ಗಣಿ ಎಂದು ಭಾವಿಸಿ ಅದನ್ನರಸಿ ಹೋಗುವವರೆಗೆ ಇದೊಂದು ಕಿವಿಮಾತು.

ಜನಪರವಾದ ಯಾವುದೇ ಕ್ರಾಂತಿಕಾರವಾದ ಬದಲಾವಣೆ ಆಗಬೇಕೆಂದಿದ್ದರೆ ಅದು ಜನಭಾಷೆಯಲ್ಲಿಯೇ ಆಗಬೇಕು. ಪ್ರಜಾತಂತ್ರ ನೆಲೆ ನಿಲ್ಲಬೇಕೆಂದರೆ ಮತ್ತು ಜನಪರವಾದ ಬದಲಾವಣೆ ಬೇಕೆಂದರೆ ಕನ್ನಡ ಬದುಕಲೇಬೇಕು. ಆದ್ದರಿಂದ ಎಲ್ಲ ವರ್ಗದವರಿಗೂ ಕನ್ನಡವನ್ನು ಅಂದರೆ ರಾಜ್ಯ ಭಾಷೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಬೇಕು.

ಕನ್ನಡ ಉಳಿಯಲೇಬೇಕು. ಅಭಿಮಾನಕ್ಕಾಗಿ ಅಲ್ಲ, ಲೌಕಿಕವಾದ ಹಿತಕ್ಕಾಗಿಯೇ ಉಳಿಯಬೇಕಾಗಿದೆ. ಅದು  ಉಳಿಯುವುದಿಲ್ಲವೆಂದರೆ ಕನ್ನಡ ಮಾತ್ರ ಸಾಯುವುದಿಲ್ಲ, ನಾವೇ ಸಾಯಬೇಕಾಗುತ್ತದೆ.

ಕನ್ನಡ ಜ್ಞಾನದ ಮಾಧ್ಯಮವಾಗಲು ರಾಜಕಾರಣ ಮತ್ತು ಅಧಿಕಾರಶಾಹಿ ಕೂಡ ತಡೆಯುತ್ತವೆ. “”ಜನಭಾಷೆಯ ವಿನಾ ಜನತಾ ಸ್ವರಾಜ್ಯ ಸಾಧ್ಯವೇ ಇಲ್ಲ” ಎಂದು ಡಾ|| ರಾಮ ಮನೋಹರ ಲೋಹಿಯಾ ಹೇಳಿದ ಮಾತು ಪ್ರಜಾಪ್ರಭುತ್ವದ ಕೇಂದ್ರ ತತ್ವವಾಗಿದೆ. ಜನಭಾಷೆ (ಇಲ್ಲಿ ಕನ್ನಡ) ಸತ್ತರೆ ಪ್ರಜಾಪ್ರಭುತ್ವ ಸಾಯುತ್ತದೆ.

ಹಿಂದೆ ಏನಾಯಿತೆಂದರೆ, ನಮ್ಮಲ್ಲಿನ ಸರಕಾರಗಳು ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಪಠ್ಯ ಕ್ರಮದಲ್ಲೇನೋ ಸೇರಿಸಿತು. ಆದರೆ ಕನ್ನಡ ಶಾಲೆಗಳಲ್ಲಿ ಅದನ್ನು ಸರಿಯಾಗಿ ಕಲಿಸುವ ತಯಾರಿಯನ್ನು ಸರಕಾರ ಮಾಡಲಿಲ್ಲ. ಈ ಪ್ರಕ್ರಿಯೆಯಿಂದ ಪ್ರಾಥಮಿಕ ಶಾಲೆಯಿಂದ ಇಂಗ್ಲಿಷ್‌ ಕಲಿತರೂ ಹತ್ತನೆಯ ತರಗತಿಯ ಮಕ್ಕಳಿಗೆ ಒಂದೆರಡು ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲು ಸಾಧ್ಯವಿಲ್ಲದಂತಾಯಿತು. ಆದ್ದರಿಂದ ಪಾಲಕರು ಅಂದುಕೊಂಡಿದ್ದು ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳ ಉದ್ಧಾರ ಸಾಧ್ಯ. ಜಾಗತೀಕರಣದ ಸಂದರ್ಭದಲ್ಲಿ ಈ ನಂಬಿಕೆ ಹಳ್ಳಿ ಹಳ್ಳಿಗೂ ಹಬ್ಬಿತು. 

ಮಗು ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸದೇ ಇದ್ದರೆ ಅನ್ಯಭಾಷೆ ಕಲಿಯಲು ಸಾಧ್ಯವಿಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಆಂಗ್ಲಮಾಧ್ಯಮ ಶಿಕ್ಷಣ ಆರಂಭಿಸಿದ ಮಾತ್ರಕ್ಕೆ ಮಕ್ಕಳಿಗೆ ಆ ಭಾಷೆಯಲ್ಲಿ ಪ್ರಭುತ್ವ ಬರುವುದಿಲ್ಲ. ಮಾತೃ ಭಾಷೆ ಶಿಕ್ಷಣದಿಂದ ವಂಚಿತರಾಗಿ ಸೃಜನಶೀಲತೆ, ಜೀವಂತಿಕೆ ನಾಶವಾದ ಬಗ್ಗೆ ಸಾಕಷ್ಟು ಸಂಶೋಧನೆಗಳಿವೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇಂದು ನಮ್ಮ ಇಂಗ್ಲಿಷ್‌ ಮೋಹಕ್ಕೆ ಅಥವಾ ಇಂಗ್ಲಿಷ್‌ ಕಾನ್ವೆಂಟುಗಳು ಬೀಸಿದ ಬಲೆಗಳ ಜಾಲಕ್ಕೆ ಮತ್ತು ಜಾಗತೀಕರಣದ ಮೋಹದ ಬಲೆಗೆ ಬಿದ್ದ ಪಾಲಕರ ಸ್ಥಿತಿಯನ್ನು ಗಮನಿಸಿದಾಗ ಈ ಸ್ತರಗಳಲ್ಲಿ ಕನ್ನಡ ಭಾಷೆ ನಾಶವಾಗಲಿರುವ ಹಂತದಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸರಕಾರ ಆದೇಶ ಹೊರಡಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬೆಂಗಳೂರಿನ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ. ಅವರ ಅಭಿಪ್ರಾಯದಂತೆ ಸರಕಾರಿ ಶಾಲೆಗಳಲ್ಲಿ ಪ್ರಸ್ತುತ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ 88 ಮಾತ್ರ. ಆದರೆ ಖಾಸಗಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ 210 ರಷ್ಟಿದೆ. ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, ಅಂದಾಜು 15 ಸಾವಿರ ಶಾಲೆಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದ್ದಾರೆ. ಈ ಸ್ಥಿತಿಗೆ ಯಾರು ಹೊಣೆ? ಸರ್ಕಾರ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಿದರೆ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ರಾಜ್ಯದ ಕೆಲವು ಕಡೆಗಳಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಸೆಡ್ಡು ಹೊಡೆದು ಪ್ರಗತಿಪಥದತ್ತ ಮುನ್ನಡೆದಿರುವ ಉದಾಹರಣೆಯನ್ನು ನಾವು ಕಾಣುತ್ತೇವೆ. ಆದರೆ ಇವುಗಳ ಸಂಖ್ಯೆ ಬಹಳ ಕಡಿಮೆಯಿದೆ. 
ಇಡೀ ಜಗತ್ತಿನ ಬೇರೆ ಬೇರೆ ದೇಶಗಳ ಸಂದರ್ಭಗಳಲ್ಲಿ ಜ್ಞಾನವೆಲ್ಲವೂ ಇಂಗ್ಲಿಷ್‌ ಭಾಷೆಯ ಮೂಲಕವೇ ಉತ್ಪನ್ನಗೊಳ್ಳುತ್ತಿದೆಯೇ? ಜಪಾನ್‌, ಜರ್ಮನಿ, ಚೀನಾ ಮೊದಲಾದ ದೇಶಗಳೂ ಇದರಿಂದ ಹೊರತಾಗಿಲ್ಲವೆ? ವಿದ್ವಾಂಸರೇ ಇದನ್ನು ವಿವೇಚಿಸಿಕೊಳ್ಳಬೇಕು.

ಕನ್ನಡ ಮಾಧ್ಯಮ, ಇಂಗ್ಲಿಷ್‌ ಮಾಧ್ಯಮ ಅನ್ನೋ ಮುಖವಾಡ ಕಳಚಬೇಕಾಗಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಕನ್ನಡ ಶಾಲೆಗಳು ಅಳಿದುಳಿದ ಅವಶೇಷಗಳಾಗಿ ಸಿಗೋದು ಖಂಡಿತವಾಗುತ್ತದೆ. ಕನ್ನಡ ಶಾಲೆಗಳನ್ನು ಉಳಿಸೋದು ನಮ್ಮೆಲ್ಲರ ಕರ್ತವ್ಯ. ಕನ್ನಡ ಶಾಲೆಗಳು ಉಳಿಯಬೇಕು ಹಾಗೂ ಬೆಳೆಯಬೇಕು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

– ಸುರೇಶ ವೀ,  ರಾಮದುರ್ಗ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.