ವೃತ್ತಿಗೆ ವಿದಾಯ ಹೇಳಲಿರುವ ಖಾಸಗಿ ವೈದ್ಯರು


Team Udayavani, Nov 14, 2017, 6:50 AM IST

doctors.jpg

ಹೌದು, ಎಂಬತ್ತು ಸಾವಿರ ವೈದ್ಯರು ಇಂದು ಕರ್ನಾಟಕದಲ್ಲಿ ವೃತ್ತಿಗೆ ವಿದಾಯ ಹೇಳುವ ಘಟ್ಟದಲ್ಲಿ ಬಂದು ನಿಂತಿದ್ದಾರೆ. ದಶಕಗಳಿಂದ ಉಸಿರಾಗಿ, ಅನ್ನವಾಗಿ, ಪ್ರಾಣವಾಗಿ, ಶಕ್ತಿಯಾಗಿ, ಅಂತಃಸ್ಸತ್ವವಾಗಿ ಸ್ವೀಕರಿಸಿಕೊಂಡು ಬಂದಿದ್ದ ವೃತ್ತಿಗೆ ಒತ್ತಾಯ ಪೂರ್ವಕವಾಗಿ ವಿದಾಯ ಹೇಳಲೇಬೇಕಾದ ಸ್ಥಿತಿಯೊಂದನ್ನು ಕರ್ನಾಟಕ ಸರಕಾರ ತಂದಿಟ್ಟಿದೆ.

ಖಾಸಗೀ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ 2007 ರಲ್ಲಿ ಜಾರಿಗೆ ಬಂದಾಗ ನಾವೆಲ್ಲ ಸ್ವಾಗತಿಸಿದ್ದೆವು. ಆಗ ಎಲ್ಲೆಂದರಲ್ಲಿ ಢೋಂಗಿ ವೈದ್ಯರ ಹಾವಳಿ. ಯಾರು ಢೋಂಗಿ, ಯಾರು ಸಾಚಾ ಎಂಬುದು ಸಾರ್ವಜನಿಕರಿಗಾಗಲಿ ಸರಕಾರಕ್ಕಾಗಲಿ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೆವು. ಢೋಂಗಿ ವೈದ್ಯರು ಮಾತ್ರವಲ್ಲ, ಢೋಂಗಿ ಸಂಸ್ಥೆಗಳೂ ಕಾರ್ಯಾಚರಿಸುತ್ತಿದ್ದವು. ಇದಕ್ಕೆಲ್ಲ ಕಾರಣ ಸರಕಾರಿ ಕ್ಷೇತ್ರದಲ್ಲಿದ್ದ ವೈದ್ಯರ ಕೊರತೆ. ಈ ಕೊರತೆಯಿಂದಾಗಿ ಕೆಲವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ತರಲು ಆಗುತ್ತಿರಲಿಲ್ಲ. ಖಾಸಗಿ ಸಂಸ್ಥೆ ಗಳನ್ನು ಈ ಕಾರ್ಯಕ್ರಮಗಳಿಗೆ ಸೇರಿಸಿಕೊಳ್ಳುವುದಾದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಯಾವ್ಯಾವು, ಎಲ್ಲೆಲ್ಲಿವೆ, ಅವುಗಳಲ್ಲಿರುವ ಸವಲತ್ತೇನು ಎಂಬ ಮಾಹಿತಿಯುಳ್ಳ ಜಿಲ್ಲಾವಾರು ಪಟ್ಟಿಯೂ ಸರಕಾರಕ್ಕೆ ಬೇಕಿತ್ತು. ಹೀಗೆ ಢೋಂಗಿ ವೈದ್ಯರ ನಿಯಂತ್ರಣಕ್ಕೆ, ಖಾಸಗಿ ಸಂಸ್ಥೆಗಳ ರಿಜಿಸ್ಟ್ರಿ ತಯಾರಿಸಲಿಕ್ಕೆ, ಅದರೊಂದಿಗೆ ವೈದ್ಯ ಕೀಯ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು ಹಾಗೂ ರಾಜ್ಯದೆಲ್ಲೆಡೆ ನಿರ್ದಿಷ್ಟ ಗುಣಮಟ್ಟ ಲಭ್ಯವಾಗಲಿ ಎಂಬ ಸದುದ್ದೇಶದಿಂದ ಈ ಕಾನೂನು ರಚನೆಯಾಗಲು ನಾವೂ ರಚನಾತ್ಮಕ ಸಲಹೆ ಕೊಟ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಜಾರಿಗೆ ಬರಲು ಸಹಕಾರ ನೀಡಿದೆವು, ಬಂದಾಗ ಸಂತೋಷಪಟ್ಟೆವು.

ಆದರೆ ಇಂದು ಈ ನಿಯಂತ್ರಣ ಕಾಯ್ದೆಯು ಆಡಳಿತ ನಡೆಸುವವರ ಅನನುಭವದಿಂದಲೋ ಗೊತ್ತಿಲ್ಲ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಕತ್ತು ಹಿಸುಕುವ ಕಾಯ್ದೆಯಾಗಿ ಮಾರ್ಪ ಟ್ಟಿದೆ. ಸರಕಾರವು ಅಗ್ಗದ ಜನಪ್ರಿಯತೆಗಾಗಿಯೋ, ವೈದ್ಯರ ಮೇಲಿನ ದ್ವೇಷಕ್ಕೋ, ತನ್ನ ಕೈಲಾಗದ ಕೆಲಸವನ್ನು ಮಾಡಿ ತೋರಿಸುತ್ತಿದ್ದಾರೆಂಬ ಅಸೂಯೆಗೋ ಗೊತ್ತಿಲ್ಲ; ಸಾರ್ವಜನಿಕರಿಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ ಅಗ್ಗದ ದರದಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಮರುಳು ಮಾಡಲು ಯತ್ನಿಸುತ್ತಿದೆ.

ಹೊಸ ಮನೆಯೊಂದನ್ನು ಕಟ್ಟುವಾಗ ಆ ಕೋಣೆ ಇಷ್ಟು ದೊಡ್ಡದಿರಬೇಕು, ಈ ಕೋಣೆ ಹೀಗಿರಬೇಕು, ಈ ಗೋಡೆ ಅಲ್ಲಿರಲಿ, ಹೀಗಿರಲಿ ಎಂದು ನಾವೇ ಸ್ವತಃ ನಕ್ಷೆ ಬಿಡಿಸುವುದಿಲ್ಲವೇ? ನಾವು ಬಿಡಿಸಿದ ನಕ್ಷೆ ಹೇಗಿದ್ದರೂ ಕೊನೆಯ ಮಾತು ನಡೆಯುವುದು ಇಂಜಿನಿಯರ್‌ ಅವರದ್ದಲ್ಲವೇ? ಈ ಅನುಭವವನ್ನು “”ವೃತ್ತಿ ಪರಿಣತಿ” ಎನ್ನುತ್ತಾರೆ. ಯಾರಾದರೊಬ್ಬ ತನ್ನ ಕನಸಿನ ಸೌಧ ಕಟ್ಟಲು ವೃತ್ತಿ ಪರಿಣತರ ಸಲಹೆ ಧಿಕ್ಕರಿಸಿ ಹೊರಟರೇನಾದೀತು ಊಹಿಸಿ. ಹಾಗೆಯೆ ಆರೋಗ್ಯ ಕ್ಷೇತ್ರದಲ್ಲಿ ವೈದ್ಯರೇ ವೃತ್ತಿ ಪರಿಣತರು. ಅವರ ಸಲಹೆಗಳನ್ನು ಗಾಳಿಗೆ ತೂರಿ ಕಟ್ಟಿದ ವ್ಯವಸ್ಥೆಯು ಅವ್ಯವಸ್ಥೆ ಯಾಗುವುದು ಖಂಡಿತ. ಹಾಗೆಯೇ ಯಾವುದೇ ವ್ಯವಸ್ಥೆಯನ್ನು ರೂಪಿಸಲು ಸಮಯ ಮತ್ತು ಸಂಪನ್ಮೂಲ ಬೇಕಾಗುತ್ತದೆ. ನಿಮ್ಮ ಅಂಗಳದಲ್ಲಿ ನಳನಳಿಸುವ ಮರವೊಂದು ಬೇಕೆಂದು ಆಸೆಯಾ ಯಿತು ಎಂದಿಟ್ಟುಕೊಳ್ಳಿ. ನೀವು ಹಲವು ವರ್ಷಗಳ ಹಿಂದೆ ಬೀಜ ಬಿತ್ತಿ, ಅದಕ್ಕೆ ನೀರು ಗೊಬ್ಬರ ಹಾಕಿ ಸಾಕಿದ್ದರೆ ಮಾತ್ರ ಆ ಆಸೆ ಫ‌ಲಿಸಲು ಸಾಧ್ಯವಲ್ಲವೇ? ಅದರ ಬದಲು ಬೇರೊಂದು ಮರದ ಗೆಲ್ಲುಗಳನ್ನು ಕಡಿದು ತಂದು ಈಗಿರುವ ಗಿಡವೊಂದಕ್ಕೆ ಸಿಕ್ಕಿಸಿದರೆ ಆಗುವುದೇ? ಹಾಗೆಯೇ ಆರೋಗ್ಯ ವ್ಯವಸ್ಥೆಯೊಂದು ಮರ. ಆದರೆ ಈ ಮರ ನಮ್ಮ ರಾಜಕೀಯ ನಾಯಕರ ದೂರದರ್ಶಿ ತ್ವದ ಕೊರತೆಯಿಂದಲೋ ವೃತ್ತಿ ಪರಿಣತರ ಸಲಹೆಗೆ ಬೆಲೆ ಕೊಡದಿ ದ್ದುದರಿಂದಲೋ ಸರಿಯಾಗಿ ಬೆಳೆದು ನಿಂತಿಲ್ಲ. ಆ ಮರವು ಬೆಳೆಯಬೇಕಾದರೆ ಇನ್ನಾದರೂ ವೃತ್ತಿ ಪರಿಣತರ ಸಲಹೆಗೆ ಕಿವಿಗೊಡಬೇಕು. 

ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸವಲತ್ತು ಸಿಗ ಬೇಕೆಂಬುದು ಪ್ರತಿಯೊಬ್ಬರ ಬಯಕೆ. ಇದು ಸಾಧ್ಯವಿದೆಯೇ? ಮೊದಲು ನಮ್ಮಲ್ಲಿ ಸಂಪನ್ಮೂಲಗಳೆಷ್ಟಿವೆ ಎಂದು ಗಮನಿಸಬೇಕು. ಮೊತ್ತಮೊದಲಾಗಿ ವೈದ್ಯರ ಕೊರತೆ. ಗಮನಿಸಿ, ಸ್ವಾತಂತ್ರಾÂ ನಂತರ ದಿಂದ 2007ನೇ ಇಸವಿಯ ತನಕ ನಮ್ಮ ರಾಜ್ಯದಲ್ಲಿ ಇದ್ದದ್ದು ನಾಲ್ಕೇ ನಾಲ್ಕು ಸರಕಾರಿ ವೈದ್ಯಕೀಯ ಕಾಲೇಜುಗಳು. ವರ್ಷಕ್ಕೆ ನಾಲ್ಕು ಕಾಲೇಜುಗಳು ಸೇರಿ ಒಟ್ಟು 480 ವೈದ್ಯರನ್ನಷ್ಟೇ ಹೊರ ತರುತ್ತಿದ್ದವು. ಉಳಿದೆಲ್ಲ ವೈದ್ಯರು ಖಾಸಗಿ ಕಾಲೇಜುಗಳ ಕೊಡುಗೆ. ಇನ್ನು ದಾದಿಯರದ್ದೂ ಅದೇ ಪರಿಸ್ಥಿತಿ. ಓರ್ವ ವೈದ್ಯ ಕಲಿತು ಪರಿಪೂರ್ಣ ಅನುಭವೀ ವೈದ್ಯನಾಗಿ ಹೊರ ಬರಲು ಕನಿಷ್ಟ ಹದಿನೈದು ವರುಷಗಳು ಬೇಕು. ಸರಕಾರ 2007ರಲ್ಲಿ ಇನ್ನೈದು ಕಾಲೇಜುಗಳನ್ನು ಅನಿವಾರ್ಯ ಪರಿಸ್ಥಿತಿಯಿಂದಾಗಿ (ಖಾಸಗಿ ಕಾಲೇಜುಗಳ ಸೀಟಿನ ಮೇಲೆ ಸರಕಾರಕ್ಕೆ ಅಧಿಕಾರವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತಾಗ) ಆರಂಭಿಸಿತು. ಇನ್ನೂ ನಾಲ್ಕು ಮೆಡಿಕಲ್‌ ಕಾಲೇಜುಗಳು ಈಗಷ್ಟೇ ಜನ್ಮ ತಾಳಿ ಕಣ್ಣು ಬಿಡುವುದನ್ನು ಕಲಿತಿವೆಯಷ್ಟೆ.

ಉಚಿತ ಸಾರಿಗೆ, ಉಚಿತ ವಿದ್ಯೆ, ಉಚಿತ ಆಹಾರದಂತೆ ಉಚಿತ ಆರೋಗ್ಯವು ಸರಕಾರದ ಜವಾಬ್ದಾರಿ. ಈ ಜವಾಬ್ದಾರಿಯನ್ನು ಖಾಸಗಿಯವರ ಮೇಲೆ ಹೊರಿಸುವುದಾದರೆ ಸರಕಾರ ತೆರಿಗೆ ಸಂಗ್ರಹ ಮಾಡುವುದೇಕೆ? ಖಾಸಗಿ ವ್ಯವಸ್ಥೆಯಲ್ಲಿ ಪ್ರತಿಯೊಂದನ್ನೂ ವೆಚ್ಚ ಭರಿಸಿಯೇ ಪಡೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ಖಾಸಗಿ ವ್ಯವಸ್ಥೆಯಲ್ಲಿ ಬೆಲೆ ನಿಗದಿಗೆ ಕೆಲವು ಲೆಕ್ಕಾಚಾರಗಳಿವೆ. ಈ ಲೆಕ್ಕಾಚಾರಗಳನ್ನು ಮೀರಿ ಬಲವಂತವಾಗಿ ನಿಯಂತ್ರಿಸಲು ಹೊರಟರೆ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಬೆಲೆಯ ನಿರ್ಧಾರಕ್ಕೆ ಮಾನದಂಡಗಳಲ್ಲಿ ಮೊದಲನೆಯದು, ಬೇಡಿಕೆ ಹಾಗೂ ಪೂರೈಕೆಯ ಅಂತರ, ಎರಡನೆಯದು ಗುಣಮಟ್ಟ, ಮೂರನೆಯದು ಗ್ರಾಹಕನ ಅಗತ್ಯ, ಕೊನೆಯದು ಗ್ರಾಹಕನಿಗಿರುವ ಆ ಕ್ಷೇತ್ರದ ಜ್ಞಾನ.

ವೈದ್ಯಕೀಯ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಪೂರೈಕೆಯ ಅಂತರ ಅಗಾಧವಿರುವುದರಿಂದ ಕಾನೂನುಗಳ ಮುಖಾಂತರ ನಿಯಂತ್ರಿ ಸಲು ಹೊರಟರೆ ಹೂಡಿಕೆ ಮಾಡುವವರಿಲ್ಲದೇ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಥಳಕು ಹಾಗೂ ನಯ ವಾದ ಮಾತುಗಳಿಗಿಂತ ಅದರ ಪರಿಣಾಮಗಳಿಗೆ (ಗುಣಮಟ್ಟಕ್ಕೆ) ಮಹತ್ವ ಹೆಚ್ಚು. ನಿಜವಾದ ಗುಣಮಟ್ಟವನ್ನು ಸದಾ ಕಾಲ ಕಾಪಾಡಬೇಕಾದರೆ ಖರ್ಚು ಇದ್ದೇ ಇದೆ.

ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಗಾಧ ಅಂತರದ ನಡುವೆಯೂ ವಿದೇಶಿ ಪ್ರಜೆಗಳೂ ಬಂದು ನಮ್ಮಲ್ಲಿ ಚಿಕಿತ್ಸೆ ಪಡೆಯುವಂತಹ ಗುಣಮಟ್ಟದ ಆರೋಗ್ಯ ಸವಲತ್ತು ನಮ್ಮ ದೇಶದಲ್ಲಿ ಇಂದು ನ್ಯಾಯಯುತ ದರದಲ್ಲಿ ಲಭ್ಯವಿದೆ. ಇದಕ್ಕೆ ಕಾರಣ ನಮ್ಮ ದೇಶಕ್ಕೇ ವಿಶಿಷ್ಟವಾದ ವೈದ್ಯ-ರೋಗಿಯ ಸಂಬಂಧ. ಭಾರತ ದೇಶದ ವೈದ್ಯರು ಸೇವಾ ಮನೋಭಾವದಿಂದಲೇ ಕೆಲಸ ಮಾಡುವವರು. ಮೂಲಭೂತ ಸೌಕರ್ಯಗಳ ಕೊರತೆಯಿದ್ದಲ್ಲೂ, ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿ ಚಿಕಿತ್ಸೆ ನೀಡುವುದರಲ್ಲಿ ಇವರನ್ನು ಮೀರಿಸಿದವರಿಲ್ಲ. ಹಾಗೆಯೇ ನಮ್ಮ ರೋಗಿಗಳು ವೈದ್ಯನನ್ನು ನಾರಾಯಣ ಎಂದು ನಂಬಿಕೊಂಡು ಬಂದವರು. ಹೀಗೆ ಈ ರೋಗಿ -ವೈದ್ಯನ ಮಧುರ ಸಂಬಂಧದ ಎಳೆಯಿಂದಾಗಿಯೇ ನಮ್ಮಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೇಶದ ಮೂಲೆಮೂಲೆಗಳಲ್ಲಿ ಲಭ್ಯ
ವಿದೆ. ವೈದ್ಯರ ಕೊರತೆಯಿದ್ದಾಗ್ಯೂ ಮುಂದುವರಿದ ದೇಶಗಳಲ್ಲಿದ್ದಂತೆ ರೋಗಿಗಳು ಚಿಕಿತ್ಸೆಗಾಗಿ ವಾರಗಟ್ಟಲೆ, ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇಲ್ಲಿಲ್ಲ. ಅಂತಹ ಈ ಸಂಬಂಧಕ್ಕೆ ಯಾರಾದರೂ ಯಾಕೆ ಹುಳಿ ಹಿಂಡುತ್ತಿದ್ದಾರೋ ಗೊತ್ತಾಗುತ್ತಿಲ್ಲ, ಅಂತೂ ವ್ಯಥೆಯ ಕಥೆ ಇದು.

ಈಗ ಕರ್ನಾಟಕ ಸರಕಾರ ತರಲಿರುವ ಖಾಸಗೀ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆಯೂ ಅಂತಹುದೇ ಹುಳಿಹಿಂಡುವ, ಹುಳಿ ಹಿಂಡುವವರ ಕಥೆ. ಇದು ಅಂತಿಂಥ ಹುಳಿಯಲ್ಲ, ವೈದ್ಯಕೀಯ ಕ್ಷೇತ್ರವೇ ಗಬ್ಬೆದ್ದು ನಾರಬೇಕು- ಅಂಥ ಹುಳಿ. ಮುಂದೆ ಯಾವೊಬ್ಬ ವೈದ್ಯನೂ ಯಾವೊಬ್ಬ ರೋಗಿಯನ್ನೂ ನಂಬಬಾರದು; ಹಾಗೆಯೇ ಯಾವೊಬ್ಬ ರೋಗಿಯೂ ಯಾವೊಬ್ಬ ವೈದ್ಯನನ್ನು ನಂಬಬಾರದು, ಅಂತಹ ಹುಳಿ ಇದು. 

ಸುಳ್ಳಲ್ಲ, ಈ ಕಾನೂನಿನಲ್ಲಿ ವೈದ್ಯರಿಗೆ ಅಧಿಕಾರಿಗಳಿಂದ ಪೀಡನೆ ಗೊಳಗಾಗಲು ಎಷ್ಟು ಸಾಧ್ಯವೋ ಅಷ್ಟು ಅವಕಾಶ ಮಾಡಿಕೊಡಲಾಗಿದೆ. ಸಾಕಪ್ಪಾ ಸಾಕು ಅನ್ನಿಸಿಕೊಳ್ಳುವಷ್ಟು ಕೆಂಪುಪಟ್ಟಿ ವ್ಯವಹಾರ ಜೋರಾಗಿದೆ. ರೋಗಿಯೊಂದಿಗೆ ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು, ಯಾವ ಭಾಷೆಯಲ್ಲಿ ಮಾತ ನಾಡಬೇಕು, ಏನೆಲ್ಲ ಮಾತನಾಡಬೇಕು ಎಂಬುದನ್ನೆಲ್ಲ ಸ್ವಂತಿಕೆಗೆ ಅವಕಾಶವೇ ಇಲ್ಲದಂತೆ ಸರಕಾರವೇ ಹೇಳಿಬಿಟ್ಟಿದೆ. ಅಷ್ಟು ಮಾತ್ರವಲ್ಲ, ಮಾತನಾಡಿದ್ದು ತಪ್ಪೆಂದಾದರೆ ಲಕ್ಷ ರೂಪಾಯಿಗಳ ಜುಲ್ಮಾನೆ ಬೇರೆ ಇದೆ. 

ಆಸ್ಪತ್ರೆಯಲ್ಲಿ ರೋಗಿ ಸತ್ತರೆ ಹಣ ಕೊಡದೆ ಹೆಣ ತೆಗೆದುಕೊಂಡು ಹೋಗಬಹುದು ಎಂಬ ಕಾನೂನು ಇದರಲ್ಲಿದೆ. ಈ ವೃತ್ತಿಯಲ್ಲಿ ನಾವು ಸುಮಾರು ಮೃತ್ಯುಗಳನ್ನು ಕಂಡಿದ್ದೇವೆ. ಸಾರ್ವಜನಿಕರಿಗೂ ತಮ್ಮ ಪ್ರೀತಿಪಾತ್ರರು ಆಸ್ಪತ್ರೆಯಲ್ಲಿ ಸತ್ತ ಅನುಭವವಿದೆ. ಹಣ ಕೊಡದೆ ಹೆಣ ಕೊಡುವುದಿಲ್ಲ ಎಂದು ಪಟ್ಟು ಹಿಡಿದ ಓರ್ವ ವೈದ್ಯನ ಹೆಸರು ಕೊಡಿ. ನಮ್ಮ ಅನುಭವದಂತೆ ನಾವು ಹಣ ಕೊಡದೆ ಹೆಣ ಕೊಡುವುದಿಲ್ಲ ಎಂದು ಯಾರನ್ನೂ ಪೀಡಿಸಿದ್ದಿಲ್ಲ. ನಮಗೆ ಇಲ್ಲಿಯ ತನಕ ಪರಿಚಯಸ್ಥ ರಾರೂ ಹಣ ಕೊಡದೇ ಬಾಕಿ ಇರಿಸಿ ಟೋಪಿ ಹಾಕಿದ್ದಿಲ್ಲ. ಮಣಿಪಾಲದಂತಹ ಆಸ್ಪತ್ರೆಗಳಲ್ಲಿ 400 ಕಿ.ಮೀ. ದೂರದ ಕೊಪ್ಪಳ ದಂಥ ಊರಿನಿಂದ ರೋಗಿ ಚಿಕಿತ್ಸೆಗೆ ಬರುವಾಗ, ಆಸ್ಪತ್ರೆಯವರು ಇಂತಹ ಕೆಲವು ನಿಯಮಗಳನ್ನು ಮಾಡಿಕೊಳ್ಳುವುದು ಸಹಜವೇ ಆಗಿದೆ (ಚಿಕಿತ್ಸೆ ಗಾಗಿ ಖಾಸಗೀ ಆಸ್ಪತ್ರೆಗೆ 400 ಕಿ.ಮೀ. ಕ್ರಮಿಸಿ ಬರುವ ಪರಿಸ್ಥಿತಿಗೆ ಏನೆನ್ನಲಿ!) ಆದರೆ ಕೆಲವು ಅವಕಾಶವಾದಿಗಳು ಈ ಕಾನೂನನ್ನು ದುರುಪಯೋಗಿಸಲು ಆರಂಭಿಸಿದರೆ ಈ “”ಸಾಯುವ ಸಾಧ್ಯತೆ ಗಳಿರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯ” ಮೇಲೆ ಬೀಳುವ ಪರಿಣಾಮವನ್ನು ನಿಮ್ಮ ಊಹೆಗೆ ಬಿಡುತ್ತೇನೆ.

ಇನ್ನು ಬೆಲೆ ನಿಯಂತ್ರಣದ ಬಗ್ಗೆ. ನಿಜವಾಗಿಯೂ ಖಾಸಗೀ ಕ್ಷೇತ್ರದಲ್ಲಿ ಚಿಕಿತ್ಸೆಯ ದರಗಳು ದುಬಾರಿಯಾಗಿಲ್ಲ. ದುಬಾರಿ ಆಸ್ಪತ್ರೆಗಳಿವೆ ನಿಜ, ಅವು ನಮ್ಮ ನಿಮ್ಮಂತಹವರಿಗಲ್ಲ. ದುಬಾರಿ ದರ ತೆರಬಯಸುವವರಿಗೆ ಮಾತ್ರ. ಕಡಿಮೆ ಖರ್ಚಿನಲ್ಲಿ ಅದೇ ಗುಣಮಟ್ಟದ ಸೇವೆ ನೀಡುವ ಸೇವಾತತ್ಪರ ಆಸ್ಪತ್ರೆಗಳು ದುಬಾರಿ ಅಸ್ಪತ್ರೆಗಳ ಬದಿಯಲ್ಲೆ ಇವೆ. ಇಂತಹ ಆಸ್ಪತ್ರೆಗಳು ನಿಮ್ಮ ಹಳ್ಳಿಯಲ್ಲಿಯೂ ಇವೆ. ನಿಮ್ಮ ಮನೆಯ ಬಳಿಯೇ ಇವೆ. ಈ ಆಸ್ಪತ್ರೆಗಳು ಕೆಲವು ಸವಲತ್ತಿನಲ್ಲಿ ಹೆಚ್ಚು ಲಾಭ, ಕೆಲವುಗಳಲ್ಲಿ ನಷ್ಟ, ಶ್ರೀಮಂತರಿಗೆ ಸ್ವಲ್ಪ ಹೆಚ್ಚು ಚಾರ್ಜು, ಬಡವರಿಗೆ ಕಡಿಮೆ – ಹೀಗೆ ಖರ್ಚುವೆಚ್ಚವನ್ನು ಸಮದೂಗಿಸಿಕೊಂಡು ಸವಲತ್ತನ್ನು ನೀಡುತ್ತ ಬರುತ್ತಿವೆ. ಇನ್ನು ಮುಂದೆ ಸವಲತ್ತಿನ ದರ ನಿಗದಿ ಸರಕಾರದಿಂದಲೇ ಆಗುವುದಾದರೆ ನಡೆಸಲಿಕ್ಕಾಗದ ಸವಲತ್ತನ್ನು ಮುಚ್ಚಲೇಬೇಕಾಗುತ್ತದೆ. ನೆನಪಿಡಿ, ಸರಕಾರ ಈ ಸವಲತ್ತನ್ನು ಒದಗಿಸಲು ಸಬ್ಸಿಡಿಯನ್ನೂ ಕೊಡುವುದಿಲ್ಲ. ಸಾಧ್ಯವಿಲ್ಲದಿದ್ದರೆ ಮುಚ್ಚಿ ಅನ್ನುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲ ಸವಲತ್ತುಗಳು ಒಂದೇ ಕಡೆ ಸಿಗುವುದು ಮುಖ್ಯ. ಎಲ್ಲ ಸವಲತ್ತುಗಳ ಲಭ್ಯತೆ ಗ್ರಾಹಕರ ಸಂಖ್ಯೆಯ ಮೇಲೆ ಆಧಾರವಾಗುವುದಾದರೆ ರೋಗಿಗಳು ಇಂದು ತಮ್ಮ ಮನೆಬಾಗಿಲಲ್ಲಿ ಸಿಗುವ ಸವಲತ್ತಿಗೆ ನಾಳೆ ರಾಜಧಾನಿಗೇ ಹೋಗಬೇಕಾಗುತ್ತದೆ. ಪರದೇಶಕ್ಕೂ ಹೋಗ ಬೇಕಾದ ಪ್ರಸಂಗವು ಬರಬಹುದು.

“”ಅಂದಾಜು ವೆಚ್ಚ (ಎಸ್ಟಿಮೇಟ್‌) ಕೊಟ್ಟು ಚಿಕಿತ್ಸೆ ಮಾಡಿ” -ಇದು ಈ ಕಾಯಿದೆಯ ಇನ್ನೊಂದು ಅಣಿಮುತ್ತು. ಹೆಚ್ಚಿನ ಕಾಯಿಲೆಗಳಿಗೆ ಸರಕಾರ ಹೇಳುವಂತೆ ಪೂರ್ವನಿಗದಿಪಡಿಸಿದ ಹಣ ತೆಗೆದುಕೊಳ್ಳುವುದಾದರೆ ಈ ಎಸ್ಟಿಮೇಟು ಲಗಾವಾಗುವುದು ಯಾರಿಗೆ? ಅಂದರೆ ತುರ್ತುಚಿಕಿತ್ಸೆಗೆ ಬರುವವರಿಗೆ ಅಥವಾ ಕಾಯಿಲೆ ಯಾವುದೆಂದು ಸರಿಯಾಗಿ ಗೊತ್ತಾಗದವರಿಗೆ ಎಂದಾ ಯಿತು. ದಿನ ಕಳೆದರೂ ಕಾಯಿಲೆ ಯಾವುದೆಂದು ತಿಳಿಯದೇ ವೈದ್ಯ ಪೇಚಾಡುತ್ತಿರುವ ಕ್ಷಣದಲ್ಲಿ ಎಸ್ಟಿಮೇಟ್‌ ಕೊಡಲು ಸಾಧ್ಯವೇ? ಎಸ್ಟಿಮೇಟ್‌ ಇಲ್ಲದೆ ಚಿಕಿತ್ಸೆ ಮಾಡಬಾರದಂತೆ, ಎಸ್ಟಿಮೇಟ್‌ ಮೀರಿ ಬಿಲ್ಲಾದರೆ ವೈದ್ಯನೇ ಭರಿಸಬೇಕಂತೆ. ಕಾಯಿಲೆ ಬಿದ್ದಾಗ ಆಸ್ಪತ್ರೆ ಸೇರಿಕೊಳ್ಳಲು ರೋಗಿಗಳಿಗೇ ಭಯವಾಗಬೇಕು, ಅಂತಹ ನಿಯಮಗಳಿವು. 

ಹೀಗೆ ಈ ಕಾನೂನಿನ ಪ್ರತಿಯೊಂದು ಪ್ಯಾರಾದಲ್ಲಿ ಇರುವುದು ಇಂತಹುದೇ ಸೆಕ್ಷನ್‌ಗಳು. ಅದನ್ನು ಓದುವಾಗ ಈ ರಾಜ್ಯದಲ್ಲಿ ಜೇಬುಗಳ್ಳರು, ಕೊಲೆಗಡುಕರು, ಅತ್ಯಾಚಾರಿಗಳೇ ತಪ್ಪಿ ವೈದ್ಯರಾಗಿ ಬಿಟ್ಟಿದ್ದಾರೆನ್ನಿಸುತ್ತದೆ. ಈ ಜೇಬುಗಳ್ಳರು ಸದಾಕಾಲ ಫೈಲು ಹಿಡಿದು ಸರಕಾರಿ ಕಚೇರಿ ಅಡ್ಡಾಡುವಂತಾಗಬೇಕೆಂದು ಜಿಲ್ಲಾ ಮಟ್ಟದಲ್ಲಿ ದೂರು ದುಮ್ಮಾನಗಳ ಪ್ರಾಧಿಕಾರ ರಚಿಸಿದ್ದಾರೆ. ಯಾರಿಗಾದರೂ ವೈದ್ಯನ ಮೇಲೆ ಸಿಟ್ಟು ಬಂದರೆ ಸಾಕು, ಕೇಸು ಜಡಿಯಲು ಇದರಲ್ಲಿ ಸಾಕಷ್ಟು ಕಾರಣ ಕೊಟ್ಟಿದ್ದಾರೆ. ಇನ್ನು ಕೇಸು ಜಡಿಸಿಕೊಂಡರಂತೂ “ಸಾಕಪ್ಪಾ ಸಾಕು, ಔಷಧಿ ಕೊಟ್ಟು ಜೈಲು ಸೇರುವುದಕ್ಕಿಂತ ಜೇಬುಗಳ್ಳತನವೇ ವಾಸಿ’ ಅನಿಸುವಂತಹ ಶಿಕ್ಷೆಗಳ ಪ್ರಸ್ತಾವವೂ ಈ ಕಾನೂನಿನಲ್ಲಿದೆ.

ಹಾಗಾಗಿ ಸಾಕಪ್ಪ ಸಾಕು, ಈ ಹುಳಿ ಹಿಂಡುವವರ ಸಹವಾಸ; ನಾವಿದ್ದರೆ ತಾನೆ ಇವರು ಹುಳಿ ಹಿಂಡುವುದು- ಹಾಗಂತ ನಾವೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಅದೇನೆಂದರೆ ಈ ವೃತ್ತಿಯನ್ನೇ ತ್ಯಜಿಸುವುದು. ಹೆಂಡತಿ ತವರಿಗೆ ಹೋದಾಗ ಗಂಡನಿಗೆ ಹೆಂಡತಿಯ ಮಹಣ್ತೀ ತಿಳಿಯುತ್ತದೆಯಂತೆ, ಅದೇ ರೀತಿ. ಹಾಗೆಂದು ಹೆಂಡತಿ ಮುನಿಸಿ ತವರಿಗೆ ಹೋಗುವಾಗ ವಾರಕ್ಕೆ ಬೇಕಾದಷ್ಟು ಅಡುಗೆ ಮಾಡಿಟ್ಟು ಹೋಗೆಂದರೆ ಹೇಗೆ? ಹಾಗಾಗಿ ಇದ್ದದ್ದನ್ನು ಇದ್ದ ಹಾಗೆ ಬಿಟ್ಟು ಹೋಗುವ ನಿರ್ಧಾರ ನಮ್ಮದು. ಪರಿಸ್ಥಿತಿ ಸರಿಯಾಗದೆ ಹಿಂದೆ ಬಾರೆವು. ಈ ತನಕ ದೇಶ ಕೇಳಿರದ ಐತಿಹಾಸಿಕ ನಿರ್ಧಾರವಿದು. ಆದರೆ ಆ ಮಟ್ಟಕ್ಕೆ ಪರಿಸ್ಥಿತಿ ಹೋಗುವ ಮುನ್ನ ಸರಕಾರ ಎಚ್ಚೆತ್ತು ತನ್ನ ತಪ್ಪುಗಳನ್ನು ತಿದ್ದಿಕೊಂಡೀತೆಂಬ ಆಶಯ ನಮ್ಮದು.

– ಡಾ|ವೈ.ಸುದರ್ಶನ ರಾವ್‌
ಅಧ್ಯಕ್ಷರು, ಭಾರತೀಯ ವೈದ್ಯಕಿಯ ಸಂಘ, ಉಡುಪಿ ಕರಾವಳಿ ಶಾಖೆ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.