ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?
Team Udayavani, Apr 1, 2020, 3:38 PM IST
ಬರ ಸಿಡಿಲಿನಂತೆ ಧರೆಗೆರಗಿ ಬಂದಿಹುದು ಕೋವಿಡ್
ತಳೆದಿಹುದು ಚೀನಾದಲಿ ಅದರ ಜನುಮ
ಜಾತಿ ನೀತಿಗಳ ಬೇಧವಿಲ್ಲದೆ ಬೇಧಿಸಿದ ಸೈತಾನ
ಆಗದಿರಲಿ ಕೋವಿಡ್ ನ ಕಬಂದ ಬಾಹುವಿಗೆ ಜಗವೆ ಹೈರಾಣ
***************
ಬಂದಿಹುದು ಚೀನದಾ ಮಹಾಗೋಡೆಯ ಪುಟಿದೆದ್ದು ದಾಟಿ
ಜಗದ ಮೂಲೆಯಲ್ಲೂ ಆಗುತ್ತಿದೆ ಪ್ರತಿಯೊಬ್ಬರ ಭೇಟಿ
ಸಾವು ಕುಣಿಯುತ್ತಿದೆ ಸೋಂಕಿದ ಹೃದಯಗಳ ಮೀಟಿ
ಬೀಗುತಿದೆ ಕೋವಿಡ್ ನನಗಿಲ್ಲ ಇನ್ನೂ ಯಾರೂ ಸರಿಸಾಠಿ
***************
ಚುಂಬಿಸಲು ಹೊರಟಿಹುದು ಹತ್ತೊಂಬತ್ತರ ಹರೆಯದ ಈ ವೈರಾಣು
ಯಮಕಿಂಕರನಂತ ಕೋವಿಡ್ -19 ಎಂಬೀ ಸೂಕ್ಶ್ಮಾಣು
ಕೆಮ್ಮಿದರೆ ದಹಿಸುವುದು ಶರೀರದ ಅಣು ಅಣುವಿನ ಜೀವಕಣ
ಸ್ಪಂದಿಸದೇ ಚಿಕಿತ್ಸೆಗೆ ಸೇರಬಲ್ಲುದು ಜೀವ ಈ ಮಣ್ಣ
***************
ಇದ್ದುದೆಲ್ಲವ ಕಳೆದು ಅನುಭವಿಸಲಾಗದೆ ಒದ್ದಾಡುತ್ತಿದೆ ಜನ ಜೀವನ
ಹೊರಬಂದು ಬೆರೆಯಲು ಅಂಜುತ್ತಿದೆ ಈ ಮನಃ
ಕೋಟೆಗಳ ಬೇಧಿಸಿ ಭೂಮಂಡಲವ ಮಾಡುತಿದೆ ಬರೀ ಮೌನ
ಅದಾಗಲೇ ಸೇರಿಹರು ಹಲವಾರು ಜನ ಸ್ಮಶಾನ
***************
ಬಡವ, ಶ್ರೀಮಂತ, ಬಲ್ಲಿದ ಎಂಬೀ ಬೇಲಿಗಳ ಮೀರಿ
ಕಂಡಿಹೆವು ಹೊಸ ಬದುಕ ಸಾಗರದಾಚೆಗೆ ವಿಮಾನವೇರಿ
ಅದಾಗಲೇ ಬಂದಿಹುದು ಕೋವಿಡ್ ಎಂಬೀ ಮಾರಿ
ಅಸಾಧ್ಯವಾಗಿಹುದು ಆತಂಕವ ಕಳೆಯಲು ಬಂದುಗಳ ಸೇರಿ
***************
ಅಂದು ಹಸ್ತಲಾಘವ ಆಗಿತ್ತು ಅಭಿನಂದನೆಯ ಸಂಕೇತ
ಈಗ ಕಿರುನಗೆ, ಕೈ ಜೋಡಣೆಯೇ ಸಾಕೆಂಬ ಇಂಗಿತ
ಆರಡಿ ಅಂತರದಲಿ ನಡೆಯಲಿ ದಿನನಿತ್ಯದ ಮಾತು
ಮುಖ ತುಂಬ ಆವರಿಸಿರಲಿ ಎನ್- 95 ಮಾಸ್ಕು
***************
ಭರದಿಂದ ಸಾಗುತಿದೆ ವಿಜ್ಞಾನಿಗಳ, ವೈದ್ಯರ ಸಂಶೋಧನೆಯ ದಾರಿ
ಹಾರೈಸೋಣ ಆ ಶ್ರಮಕ್ಕೆ ಕೈಜೋಡಿಸಿ ನಾವೆಲ್ಲರೂ ಸೇರಿ
ಬಗ್ಗುಬಡಿಯಲೇ ಬೇಕು ಭಾರಿಸಲು ಜಯಭೇರಿ
ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?
– ಸ. ರಾ. ಪರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.