ಶಬ್ದಮಾಲಿನ್ಯ ಯಾಕೆ ಉದಾಸೀನ?


Team Udayavani, Jul 18, 2022, 11:30 AM IST

shabda-malinya

ಭಾರತದಲ್ಲಿ ಕೆಲವೊಂದು ಕಾನೂನುಗಳು ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆ. ಜಾರಿಯಾಗಲು ಅನೇಕಾನೇಕ ಅಡ್ಡಿ ಆತಂಕಗಳು. ನಿರ್ಲಕ್ಷ್ಯದಿಂದಲೋ ಅಥವಾ ಇತರ ಕಾರಣಗಳಿಂದಲೋ ಕಾನೂನುಗಳು ಕಾಗದದಲ್ಲಿ ಉಳಿಯುವುದೇ ಹೆಚ್ಚು. ಜಾರಿಯಾಗದ ಹಲವಾರು ಕಾನೂನುಗಳು, ಕಾನೂನು ಉಲ್ಲಂಘನೆಯಾದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದಿರುವುದು, ಎಲ್ಲವನ್ನೂ ಕಂಡೂ ಕಾಣದಂತಿ ರುವುದು, ಕಾನೂನುಬಾಹಿರವಾಗಿ ನಡೆಯಲು ಲಂಚ, ಭ್ರಷ್ಟಾಚಾರಗಳ ಆಮಿಷ ಮುಂತಾದವುಗಳು ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟುತ್ತವೆ.

ಪರಿಸರ ರಕ್ಷಣೆಯ ಉದ್ದೇಶದಿಂದ ರೂಪಿಸಲಾದ ಅನೇಕ ಕಾನೂನುಗಳು ಜಾರಿಯಾಗದೇ ಉಳಿದಿವೆ. ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯಗಳ ನಿಯಂತ್ರಣದ ಕಾನೂನುಗಳು ಜಾರಿಯಾಗದೆ ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಅದೆಷ್ಟೋ ಕಾನೂನು ಗಳಿಗೆ ಬೆಲೆಯೇ ಇಲ್ಲದೆ ಮೂಲೆಗುಂಪಾಗಿವೆ.

ಮಾಲಿನ್ಯಗಳಲ್ಲಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿರುವ ಮಾಲಿನ್ಯವೆಂದರೆ ಶಬ್ದ ಮಾಲಿನ್ಯ. ಸಾರಿಗೆ ವಾಹನಗಳು, ಕೈಗಾರಿಕೆಗಳು, ನಗರಗಳ ಬೆಳವಣಿಗೆ, ಜನದಟ್ಟಣೆ, ಮೆಹಂದಿ ಪಾರ್ಟಿಗಳು, ಧಾರ್ಮಿಕ ಕ್ಷೇತ್ರಗಳಲ್ಲಿನ ಧ್ವನಿವರ್ಧಕಗಳೇ ಮುಂತಾದವುಗಳು ಶಬ್ದ ಮಾಲಿನ್ಯದ ಪ್ರಮುಖ ಮೂಲಗಳು. ಶೇ.90ಕ್ಕಿಂತಲೂ ಹೆಚ್ಚು ಶಬ್ದ ಮಾಲಿನ್ಯವು ಮಾನವ ಚಟುವಟಿಕೆಗಳಿಂದಲೇ ಉಂಟಾಗುತ್ತದೆ. ಅತಿಯಾದ ಶಬ್ದದಿಂದಾಗಿ ಮಾನವರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಸಮಸ್ಯೆ ಉಂಟಾಗುತ್ತದೆ. ಇತರ ಮಾಲಿನ್ಯಗಳು ಉಂಟುಮಾಡುವ ಪರಿಣಾಮಗಳ ಹಾಗೆ ಶಬ್ದ ಮಾಲಿನ್ಯ ಉಂಟುಮಾಡುವ ಪರಿ ಣಾಮಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯ ವಿಲ್ಲವಾದರೂ ಅದು ಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶಬ್ದವನ್ನು ಡೆಸಿಬಲ್‌(ಡಿಬಿ)ಗಳ ಮೂಲಕ ಮಾಪನ ಮಾಡಲಾಗುತ್ತದೆ. ಅಧಿಕ ಡಿಬಿಯು ಹೆಚ್ಚಿನ ಶಬ್ದವನ್ನು ಪ್ರತಿನಿಧಿಸುತ್ತದೆ. ಸಾಮಾನ್ಯ ಉಸಿರಾಟವು 10ಡಿಬಿಗಳಾದರೆ ಪಿಸುಗುಟ್ಟುವ ಧ್ವನಿಯು 30ಡಿಬಿ. ಸಾಮಾನ್ಯ ಸಂಭಾಷಣೆಯು 50ರಿಂದ 65ಡಿಬಿಗಳು. ನಗರ ಸಂಚಾರಿ ವಾಹನಗಳ ಶಬ್ದವು 80ಡಿಬಿಗಳೆಂದು ಅಂದಾಜಿಸಲಾಗಿದೆ. ಹೊಲಗಳಲ್ಲಿ ಬಳಸುವ ಟ್ರಾಕ್ಟರ್‌ 95ಡಿಬಿ ಶಬ್ದವನ್ನು ಉಂಟುಮಾಡುತ್ತದೆ. ಪಟಾಕಿಯ ಶಬ್ದವು 145ಡಿಬಿ. ಅನಪೇಕ್ಷಿತ, ಕರ್ಕಶ ಹಾಗೂ ಅತಿಯಾದ ಶಬ್ದವನ್ನು ನಾವು ಶಬ್ದಮಾಲಿನ್ಯ ಎನ್ನುತ್ತೇವೆ. ಈ ಅನಪೇಕ್ಷಿತ ಶಬ್ದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಶಬ್ದ ಮಾಲಿನ್ಯವು ವಯಸ್ಕರು ಮತ್ತು ಮಕ್ಕಳಲ್ಲಿ ಮಾತ್ರವಲ್ಲ ಭ್ರೂಣಗಳಲ್ಲಿಯೂ ಸಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಆರೋಗ್ಯಕ್ಕೆ ಹಾನಿಕಾರಕವಾಗದಂತೆ 65 ಡೆಸಿಬಲ್‌ಗ‌ಳ (ಡಿಬಿ) ಹಗಲಿನ ಶಬ್ದ ಮಿತಿಯನ್ನು ನಿಗದಿಪಡಿಸುತ್ತದೆ. 65 ಡೆಸಿಬಲ್‌ಗ‌ಳಿಗಿಂತ ಹೆಚ್ಚಿನ ಶಬ್ದವನ್ನು ಮಾಲಿನ್ಯವೆಂದು ಅದು ಪರಿಗಣಿಸುತ್ತದೆ. ಶಬ್ದ ಮಾಲಿನ್ಯದ ಪರಿಣಾಮಗಳನ್ನು ಅಳೆಯಲು ಮತ್ತು ಪ್ರಮಾಣೀಕರಿಸುವುದು ಸಂಕೀರ್ಣವಾಗಿದೆ. ಹೆಚ್ಚಿನ ಶಬ್ದ ಮಟ್ಟಕ್ಕೆ ನಿರಂತರವಾಗಿ ಒಡ್ಡಿ ಕೊಳ್ಳುವುದರಿಂದ ಅನಾರೋಗ್ಯ ಅಥವಾ ತೊಂದರೆಗಳು ಉಂಟಾಗಬಹುದು. ಒತ್ತಡ, ಆತಂಕ, ಹೃದಯಾಘಾತ, ರಕ್ತನಾಳದ ಸಮಸ್ಯೆಗಳು ಕಾಣಿಸ ಬಹುದು ಮತ್ತು ಮಕ್ಕಳಲ್ಲಿಯೂ ಸಹ ಅವರ ಕಲಿಕೆಯ ಪ್ರಕ್ರಿಯೆಯಲ್ಲಿ ದುರ್ಬಲವಾಗಿರುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 65 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಟ್ಟಗಳಿಗೆ ದೀರ್ಘ‌ಕಾಲದ ದೈನಂದಿನ ಅಥವಾ 80-85 ಡೆಸಿಬಲ್‌ಗಿಂತ ಹೆಚ್ಚಿನ ತೀವ್ರ ಮಾಲಿನ್ಯ ಬಾಧಿತರು ರೋಗದ ಲಕ್ಷಣಗಳನ್ನು ಗಮನಿಸದಿದ್ದರೂ ಸಹ, ದೀರ್ಘ‌ಕಾಲದ ಹೃದಯ ತೊಂದರೆಗಳಿಗೆ ಕಾರಣವಾಗಬಹುದು. ಒಬ್ಬ ವ್ಯಕ್ತಿಯು ಶ್ರವಣ ಮಟ್ಟವು 85 ಡೆಸಿಬಲ್‌ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪುವ ಶಬ್ದಗಳನ್ನು ಕೇಳಿದರೆ ಅವರ ಕಿವಿಗಳು ಹಾನಿಗೊಳ ಗಾಗಬಹುದು.

ಶಬ್ದ ಮಾಲಿನ್ಯವು ಪ್ರಾಥಮಿಕವಾಗಿ ವ್ಯಕ್ತಿಯ ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದು ಶಾಶ್ವತ ಶ್ರವಣ ದೋಷವನ್ನು ಉಂಟುಮಾಡುತ್ತದೆ. ಇದಲ್ಲದೆ ಇದು ರಕ್ತದೊತ್ತಡ, ಅಧಿಕ ರಕ್ತದೊತ್ತಡ ಮತ್ತು ಇತರ ಒತ್ತಡ-ಸಂಬಂಧಿತ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣ ವಾಗಬಹುದು. ಇನ್ನು ಅನೇಕ ಸಂದರ್ಭಗಳಲ್ಲಿ ಶಬ್ದ ಮಾಲಿನ್ಯವು ವ್ಯಕ್ತಿಯ ಮನಸ್ಸಿನ ಸ್ಥಿತಿಯ ಮೇಲೆ ಅಡಚಣೆಯನ್ನು ಉಂಟುಮಾಡಬಹುದು. ಇದು ನಿದ್ರಾಹೀನತೆ, ಒತ್ತಡ, ಸಿಟ್ಟು, ಕಿರಿಕಿರಿ, ಮಾನಸಿಕ ಅಸಮತೋಲನ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಶಬ್ದ ಮಾಲಿನ್ಯಕ್ಕೆ ನಿಯ  ಮಿತವಾಗಿ ಒಡ್ಡಿಕೊಳ್ಳುವುದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯವೂ ತೊಂದರೆಗೊಳಗಾಗ ಬಹುದು. ಅದೇ ರೀತಿ ಅತಿಯಾದ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಕಿವಿಮೊರೆತ, ಕಿವುಡುತನ, ಮರೆಗುಳಿತನ, ನಿದ್ರಾಭಂಗ, ತಲೆನೋವು, ತೀವ್ರ ಖನ್ನತೆ ಮತ್ತು ಕೆಲವು ವೇಳೆ ಭೀತಿ ಆಕ್ರಮಿಸುವಿಕೆಗೂ ಕಾರಣವಾಗುತ್ತದೆ.

ಅತಿಯಾದ ಶಬ್ದಕ್ಕೆ ನಿರಂತರವಾಗಿ ಒಳಗಾಗುವುದು ಶಬ್ದ ಪ್ರೇರಿತ ಕಿವುಡುತನಕ್ಕೆ ಕಾರಣವಾಗಬಹುದು. ಶಬ್ದ ಮಾಲಿನ್ಯವು ನಮ್ಮ ಏಕಾಗ್ರತೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ ಮತ್ತು ನಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಶಬ್ದ ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಹಾಗೂ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಭಾರೀ ಶಬ್ದಗಳು ಕಾರ್ಡಿಯೋವ್ಯಾಸ್ಕಾಲರ್‌ (ಹೃದಯ ರಕ್ತನಾಳ ವ್ಯವಸ್ಥೆ ) ಕಾಯಿಲೆಗೆ ಕಾರಣ ವಾಗಬಹುದು ಮತ್ತು ವ್ಯಕ್ತಿಯೊಬ್ಬ ಸತತ ಎಂಟು ಗಂಟೆಗಳ ಅವಧಿ ಉನ್ನತ ಮಟ್ಟದ ಶಬ್ದಕ್ಕೆ ಒಡ್ಡಿಕೊಂಡಿದ್ದರೆ ಕಾಯಿಲೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ಅಂದರೆ ಅದರಿಂದ ರಕ್ತದೊತ್ತಡ ಐದು ಪಾಯಿಂಟ್‌ನಿಂದ ಹತ್ತು ಪಾಯಿಂಟ್‌ವರೆಗೆ ಏರಬಹುದು. ಶಬ್ದ ಮಾಲಿನ್ಯ ಮಾನಸಿಕ ಮುಜುಗರಕ್ಕೆ ಈಡಾಗುವಂತೆ ಮಾಡುತ್ತದೆ. ವಯಸ್ಸಾದ ಜನರು ಮತ್ತು ಮಕ್ಕಳು ಶಬ್ದಕ್ಕೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಶಬ್ದ ಮಾಲಿನ್ಯವು ಭವಿಷ್ಯದ ಪೀಳಿಗೆಯ ಮೇಲೂ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ.

ಪ್ರಾಣಿಗಳು ತಮ್ಮ ಸಂಪರ್ಕದಲ್ಲಿ ವಿಶೇಷವಾಗಿ ಸಂತಾನೋತ್ಪತ್ತಿ ಮತ್ತು ಆಹಾರ ಅನ್ವೇಷಣೆಯ ವಿಚಾರದಲ್ಲಿ ಅತಿಯಾದ ಶಬ್ದದಿಂದ ಅಡಚಣೆ ಯಾಗುತ್ತದೆ. ಪ್ರಕೃತಿಯ ಸೂಕ್ಷ್ಮ ಸಮತೋಲನವನ್ನು ಹಾಳುಗೆಡಹುವ ಶಬ್ದ ಮಾಲಿನ್ಯ ಪ್ರಾಣಿಗಳ ಮೇಲೆ ವಿನಾಶಕರ ಪರಿಣಾಮವನ್ನು ಬೀರುತ್ತದೆ. ಶಬ್ದ ಮಾಲಿನ್ಯವು ವನ್ಯಜೀವಿಗಳ ಮೇಲೂ ಪರಿಣಾಮ ಬೀರುತ್ತದೆ. ಕೀಟಗಳು, ಕಪ್ಪೆಗಳು, ಪಕ್ಷಿಗಳು ಮತ್ತು ಬಾವಲಿಗಳು, ನವಿಲುಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಾಣಿಗಳು ವಿವಿಧ ಕಾರಣಗಳಿಗಾಗಿ ಧ್ವನಿಯನ್ನು ಅವಲಂಬಿಸಿವೆ. ಶಬ್ದ ಮಾಲಿನ್ಯವು ಸಂಗಾತಿಯನ್ನು ಆಕರ್ಷಿಸುವ, ಸಂವಹನ ಮಾಡುವ, ಆಹಾರವನ್ನು ಹುಡುಕುವ ಅಥವಾ ಪರಭಕ್ಷಕಗಳನ್ನು ತಪ್ಪಿಸುವ ಪ್ರಾಣಿಗಳ ಸಾಮರ್ಥ್ಯವನ್ನು ಕುಂಠಿತ ಗೊಳಿಸುತ್ತದೆ ಮತ್ತು ಅವುಗಳ ಆವಾಸಸ್ಥಾನ ನಷ್ಟದೊಂದಿಗೆ ಜೀವ ವೈವಿಧ್ಯತೆಗೆ ಬೆದರಿಕೆ ಯಾಗುತ್ತದೆ.

ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಕಾನೂನುಗಳು ಈ ಮಿತಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿವೆ. ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರಮಾಣದ (ಡಿಬಿ) ಮಟ್ಟವನ್ನು ಮೀರಿ ಶಬ್ದವನ್ನು ಉಂಟು ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇವುಗಳಿಗೆ ಅಧಿಕಾರವಿದೆ. ಆದರೆ ನಮ್ಮ ವ್ಯವಸ್ಥೆ ಅನೇಕ ಸಂದರ್ಭಗಳಲ್ಲಿ ಕುರುಡರಂತೆ, ಕಿವುಡರಂತೆ ವರ್ತಿಸುತ್ತದೆ. ಹಣದ ಆಸೆ ಹಾಗೂ ಸ್ವಹಿತಾಸಕ್ತಿಗಳು ಎಲ್ಲ ಕಾನೂನುಗಳನ್ನು ಮೌನ ವಾಗಿಸುತ್ತವೆ. ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ಮತ್ತು ಶಿಸ್ತು ಕ್ರಮಗಳ ಹೊರತು ವ್ಯವಸ್ಥೆ ಬದಲಾಗದು.

– ವಿದ್ಯಾ ಡಿ.ಅಮ್ಮಣ್ಣಾಯ, ಕಾಪು

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.