ನುಡಿನಮನ: ಅಜಾತಶತ್ರು ಅಂಗಡಿ ; ಸಾಧನೆಗಳ ಹೆಜ್ಜೆ ಗುರುತು ಬಿಟ್ಟು ಹೋದ ಜನನಾಯಕ

ಕಳಚಿತು ಮತ್ತೂಂದು ದಿಲ್ಲಿ ಕೊಂಡಿ

Team Udayavani, Sep 24, 2020, 6:29 AM IST

ನುಡಿನಮನ: ಅಜಾತಶತ್ರು ಅಂಗಡಿ ; ಸಾಧನೆಗಳ ಹೆಜ್ಜೆ ಗುರುತು ಬಿಟ್ಟು ಹೋದ ಜನನಾಯಕ

ವಿನಯಶೀಲತೆ. ಕ್ಷೇತ್ರದ ಬಗ್ಗೆ ತುಡಿತ. ಅಜಾತಶತ್ರು. ಸದಾ ಹಸನ್ಮುಖ. ಮನೆಗೆ ಬಂದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಮಾತನಾಡಿಸುವ ಹೃದಯ ವೈಶಾಲ್ಯತೆ.

ರಾಜಕೀಯ, ಶಿಕ್ಷಣ, ಸಾಮಾಜಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದ ಹಿರಿಯ ಸಂಸದ ಹಾಗೂ ರೈಲ್ವೇ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಬಗ್ಗೆ ಇಷ್ಟು ಪರಿಚಯ ಸಾಕು. ಇದು ಅವರ ಇಡೀ ವ್ಯಕಿತ್ವವನ್ನು ಪರಿಚಯಿಸುತ್ತದೆ.

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ರೈಲ್ವೇ ಅಭಿವೃದ್ಧಿಗೆ ಸುರೇಶ ಅಂಗಡಿ ಹೊಸ ಭಾಷ್ಯೆಯನ್ನೇ ಬರೆದಿದ್ದರು.

ಓರ್ವ ಉದ್ಯಮಿಯಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದ ಸುರೇಶ ಅಂಗಡಿ ರಾಜಕೀಯವಾಗಿ ಎತ್ತರಕ್ಕೆ ಬೆಳೆದವರು. ಹೊಸದಿಲ್ಲಿ ಮಟ್ಟದಲ್ಲಿ ಪ್ರಭಾವಿ ಹಾಗೂ ಅನುಭವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.
ರಾಜ್ಯಮಟ್ಟದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು. ರಾಜ್ಯದ ಮತ್ತೂಬ್ಬ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಬೀಗತನ ಮಾಡಿದ ಅನಂತರ ಸುರೇಶ ಅಂಗಡಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿತು.

ಗಡಿಭಾಗದಲ್ಲಿ ಮರಾಠಿ ಭಾಷಿಕ ಪ್ರಾಬಲ್ಯದ ನಡುವೆಯೂ ಎಲ್ಲ ಭಾಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಸುರೇಶ ಅಂಗಡಿ ಬೇರೆ ರಾಜಕೀಯ ಪಕ್ಷಗಳಿಗೂ ಬಹಳ ಆತ್ಮೀಯರಾಗಿದ್ದರು. ಸಾಧನೆಗಳು ಮಾತಾಗಬೇಕು ಎಂಬ ತತ್ವವನ್ನು ಬಹಳವಾಗಿ ನಂಬಿಕೊಂಡಿದ್ದ ಸುರೇಶ ಅಂಗಡಿ, ತಮ್ಮ ಸುದೀರ್ಘ‌ ರಾಜಕೀಯ ಜೀವನದಲ್ಲಿ ಅದರಂತೆ ನಡೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿ ದೊಡ್ಡ ಜವಾಬ್ದಾರಿ ಜತೆಗೆ ಹಲವಾರು ಸವಾಲುಗಳನ್ನು ಸ್ವೀಕರಿಸಿದ ಸುರೇಶ ಅಂಗಡಿ, ಕರ್ನಾಟಕದ ಹತ್ತಾರು ಯೋಜನೆಗಳು ಹಾಗೂ ಹೊಸ ಮಾರ್ಗಗಳಿಗೆ ಚಾಲನೆ ನೀಡುವ ಮೂಲಕ ತಮ್ಮ ಕತೃತ್ವ ಶಕ್ತಿಯನ್ನು ದೇಶಕ್ಕೆ ಪರಿಚಯಿಸಿದರು.

ರೈಲ್ವೇ ಇಲಾಖೆಯ ಮುಂದಿನ ಗುರಿ ಹಾಗೂ ಯೋಜನೆಗಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಂಗಡಿ, ರೈಲ್ವೇ ಇಲಾಖೆ ಹಾಗೂ ಈ ಕ್ಷೇತ್ರ ಜನರ ಜೀವನ ರೇಖೆ ಇದ್ದಂತೆ. ಇಲ್ಲಿ ಎಲ್ಲ ವರ್ಗದ ಜನರ ಸೇವೆ ಮಾಡಲು ಒಳ್ಳೆಯ ಅವಕಾಶ ಒದಗಿ ಬರುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಕೋವಿಡ್ ನ ಕಷ್ಟಕಾಲದಲ್ಲಿ ಎರಡು ತಿಂಗಳಿಂದ ದೇಶದ ವಿವಿಧ ಕಡೆಗಳಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿದ್ದ ಸುಮಾರು 50 ಲಕ್ಷ ಕಾರ್ಮಿಕರು, ಬಡ ವರ್ಗದ ಜನರನ್ನು ಸುರಕ್ಷಿತವಾಗಿ ಅವರ ಊರಿಗೆ ಕಳಿಸಿರುವುದು ರೈಲ್ವೇ ಇಲಾಖೆಯ ಸಾಧನೆ ಎಂದು ಹೆಮ್ಮೆಯಿಂದ ಸ್ಮರಿಸಿದ್ದರು ಸುರೇಶ ಅಂಗಡಿ.

ಅತ್ಯಂತ ದೊಡ್ಡದಾದ ರೈಲ್ವೇ ಕ್ಷೇತ್ರದಲ್ಲಿ ಒಂದು ವರ್ಷದ ಅವಧಿ ಬಹಳ ಚಿಕ್ಕದು. ಆದರೆ ಇದರಲ್ಲೇ ಪ್ರತಿ ಯೊಬ್ಬರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದು ಅಂಗಡಿ ಅವರ ಹೆಗ್ಗಳಿಕೆ. ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ಬೇಡಿಕೆ ಯಾಗಿಯೇ ಉಳಿದಿದ್ದ ರೈಲು ಮಾರ್ಗಗಳಿಗೆ ಚಾಲನೆ ಸಿಕ್ಕಿತ್ತು. ಹೊಸ ರೈಲುಗಳ ಓಡಾಟಕ್ಕೆ ಅವಕಾಶ ದೊರೆತಿತ್ತು. ಬೆಳಗಾವಿಯಿಂದ ಬೆಂಗಳೂರಿಗೆ ನೇರ ರೈಲು ಬೇಕು ಎಂಬ ಹಲವಾರು ವರ್ಷಗಳ ಆಸೆ ಈಡೇರಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಧಾರವಾಡ-ಕಿತ್ತೂರ ರೈಲ್ವೇ ಮಾರ್ಗ, ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣ ಸುರೇಶ ಅಂಗಡಿ ಅವರ ಹೆಮ್ಮೆಯ ಸಾಧನೆಗಳಲ್ಲಿ ಮುಖ್ಯವಾದವು. ಇದಲ್ಲದೆ ಶಿಕಾರಿಪುರ-ರಾಣಿಬೆನ್ನೂರು ಮಾರ್ಗಕ್ಕೆ ಹಸುರು ನಿಶಾನೆ ಸಿಕ್ಕಿದ್ದು ತಮ್ಮ ಜೀವನದ ಮರೆಯಲಾರದ ಕಾರ್ಯ ಎಂದು ಸುರೇಶ ಅಂಗಡಿ ಹೆಮ್ಮೆಯಿಂದ ಸ್ಮರಿಸಿದ್ದರು. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಜನರ ಬಹಳ ವರ್ಷಗಳ ಕನಸು. ಪರಿಸರ ಹಾಗೂ ಅರಣ್ಯ ರಕ್ಷಣೆ ಕಾರಣದಿಂದ ಈ ಯೋಜನೆ ಇನ್ನೂ ನನೆಗುದಿಯಲ್ಲೇ ಇತ್ತು. ಅದಕ್ಕೆ ಪರಿಸರ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿದ್ದರ ಹಿಂದೆ ಸುರೇಶ ಅಂಗಡಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ.

ಕೋವಿಡ್ ನ ಸಂಕಷ್ಟದ ಕಾಲದಲ್ಲಿ ಲಾಕ್‌ಡೌನ್‌ ಜಾರಿಯಾದಾಗಿನಿಂದ ಬೆಳಗಾವಿ ಬಿಟ್ಟು ಎಲ್ಲಿಯೂ ಹೋಗದೆ ಜನರಿಗೆ ಸಹಾಯ ಮಾಡುವದರಲ್ಲಿ ನಿರತರಾಗಿದ್ದ ಸುರೇಶ ಅಂಗಡಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದರು. ಕೊರೊನಾ ಹಾವಳಿಗೆ ಹೆದರದಂತೆ ಧೈರ್ಯ ತುಂಬಿದ್ದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿದ್ದರು. ಒಂದು ಕಡೆ ಕೊರೊನಾ ವಾರಿಯರ್ಸ್‌ ರೀತಿ ಕೆಲಸ ಮಾಡುತ್ತಿದ್ದ ಸುರೇಶ ಅಂಗಡಿ ಇನ್ನೊಂದು ಕಡೆ ತಮ್ಮ ಮಹತ್ವದ ಸಚಿವ ಖಾತೆ ರೈಲ್ವೇ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು.

ದಿನದ 24 ಗಂಟೆಗಳ ಕಾಲ ರೈಲ್ವೇ ಅಭಿವೃದ್ಧಿ ಬಗ್ಗೆ ಮಿಡಿಯುತ್ತಿದ್ದ ಅಂಗಡಿ, ಕೊರೊನಾ ಹಾವಳಿಯನ್ನು ಲೆಕ್ಕಿಸದೆ ಅನೇಕ ರೈಲು ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ರೈಲ್ವೇ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಿದ್ದರು.

ತಾವು ಮೊದಲ ಬಾರಿ ಸಂಸದರಾಗಿದ್ದಾಗ ಕಂಡಿದ್ದ ಒಂದೊಂದೇ ಕನಸನ್ನು ನನಸು ಮಾಡುತ್ತಿದ್ದರು. ಸತತ ರೈಲ್ವೇ ಕೆಲಸದ ಮಧ್ಯೆ ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲೇ ಬೇಕಿದ್ದರಿಂದ ಅನಿವಾರ್ಯವಾಗಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಸುರೇಶ ಅಂಗಡಿ, ಸಹಜವಾಗಿಯೇ ಕೋವಿಡ್ ನ ಪರೀಕ್ಷೆಗೆ ಒಳಗಾಗಿದ್ದರು. ಕೊನೆಗೆ ಮಹಾಮಾರಿಯೇ ಅವರನ್ನು ಬಲಿಪಡೆದಿದ್ದು ವಿಪರ್ಯಾಸ.

ಅಂಗಡಿ ಕೊನೇ ಟ್ವೀಟ್‌ (ಸಾವಿಗೆ 22 ಗಂಟೆ ಮುನ್ನ)
ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಅವರು ಕೊರೊನಾ ಸೋಂಕಿನಿಂದ ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಎಂದಿನಂತೆ ನಾಡಿನ ಜನರ ಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ಹಾರೈಸುತ್ತಿದ್ದರು
ಕೋವಿಡ್ ಗೆ ತುತ್ತಾದ ಆಪ್ತರು, ಗಣ್ಯರು, ಹಿರಿಯರಿಗೆ ಬೇಗ ಗುಣವಾಗಿ ಬನ್ನಿ ಎಂದು ಅಂಗಡಿ ಅವರು ಟ್ವಿಟರ್‌ ಮೂಲಕ ಹಾರೈಸಿದ್ದರು. ಆದರೆ ಅದೇ ಕೋವಿಡ್ ಅವರ ಬಲಿ ಪಡೆದಿತ್ತು.

ಟಾಪ್ ನ್ಯೂಸ್

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

1-e-eqw

Netherlands: ಇಸ್ರೇಲ್‌ ಫುಟ್ಬಾಲ್‌ ಅಭಿಮಾನಿಗಳ ಮೇಲೆ ದಿಢೀರ್‌ ದಾಳಿ!

Modi 2

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

putin (2)

Vladimir Putin; ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಲು ಭಾರತ ಅರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

1-e-eqw

Netherlands: ಇಸ್ರೇಲ್‌ ಫುಟ್ಬಾಲ್‌ ಅಭಿಮಾನಿಗಳ ಮೇಲೆ ದಿಢೀರ್‌ ದಾಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.