ಸೈನಿಕರ ಕೈಕಟ್ಟಿ ಹಾಕುವ ಪ್ರಯತ್ನ ಸರಿಯಲ್ಲ
Team Udayavani, Feb 8, 2018, 10:00 AM IST
ಸೇನೆಯ ಕಠಿಣ ಶಿಸ್ತಿನ ನಿರ್ಬಂಧಕ್ಕೊಳಗಾಗಿ ಕೈಯ್ಯಲ್ಲಿ ಬಂದೂಕಿದ್ದರೂ ಆದೇಶವಿಲ್ಲದಿರುವುದರಿಂದ ಚಲಾಯಿಸಲಾಗದೇ ಅಸಹಾಯಕರಾಗಿ ನಾಗರಿಕ ಗುಂಪುಗಳ ಹೊಡೆತ ತಿನ್ನುವ ನಮ್ಮ ಸೈನಿಕರಿಗೆ ಭಾವನೆಗಳಿಲ್ಲವೇ? ಬಂಧು ಬಳಗದಿಂದ ಸಹಸ್ರಾರು ಮೈಲಿ ದೂರವಿರುವ ಯೋಧರಿಗೆ ತಮ್ಮ ಸಹಯೋಧರೇ ಆಪ್ತರು. ತನ್ನ ಅಧೀನದಲ್ಲಿರುವ ಜವಾನ ಗಾಯಗೊಂಡು ಕೆಳಕ್ಕೆ ಬಿದ್ದಿರುವಾಗ ಆತನನ್ನು ಕೊಲ್ಲಲು ಮುಂದಾಗುತ್ತಿರುವ ದುರುಳರ ಮೇಲೆ, ತನ್ನವರ ರಕ್ಷಣೆಗಾಗಿ ಬಂದೂಕು ಚಲಾಯಿಸುವ ಅಧಿಕಾರ ಸೈನಿಕರಿಗಿಲ್ಲವೇ?
ಜಮ್ಮು ಕಾಶ್ಮೀರದ ಶೋಪಿಯಾದಲ್ಲಿ ಜ.27ರಂದು 200- 250ರಷ್ಟು ಸಂಖ್ಯೆಯಲ್ಲಿದ್ದ ಉದ್ರಿಕ್ತ ಗುಂಪೊಂದರಿಂದ ತಮ್ಮ ಅಧಿಕಾರಿಯೋರ್ವರ ಪ್ರಾಣ ರಕ್ಷಿಸಲು ಗಢವಾಲ್ ರೈಫಲ್ಸ್ ಜವಾನರು ಅನಿವಾರ್ಯವಾಗಿ ಗುಂಡು ಹಾರಿಸಿದಾಗ ಇಬ್ಬರು ಯುವಕರು ಸಾವಿಗೀಡಾದರು. ಕಲ್ಲು ತೂರಾಟದ ಈ ಘಟನೆಯಲ್ಲಿ ಓರ್ವ ಕಿರಿಯ ಅಧಿಕಾರಿ (JCO)ಮತ್ತು 7 ಜವಾನರು ಗಾಯ ಗೊಂಡರು. ತಲೆಗೆ ಕÇÉೇಟು ತಗುಲಿ ಪ್ರಜ್ಞೆ ತಪ್ಪಿ ಬಿದ್ದ ಜ್ಯೂನಿಯರ್ ಕಮಿಷನ್x ಅಧಿಕಾರಿಯನ್ನು ಜೀವಂತ ಸುಡಲು ಹಾತೊರೆಯು ತ್ತಿದ್ದ ಗುಂಪಿನಿಂದ ತಮ್ಮ ಅಧಿಕಾರಿಯ ರಕ್ಷಣೆಗಾಗಿ ಬಂದೂಕನ್ನು ಪ್ರಯೋಗಿಸುವುದಲ್ಲದೇ ಬೇರೆ ದಾರಿ ಆ ಜವಾನರ ಬಳಿ ಇರಲಿಲ್ಲ ಎನ್ನುವುದು ಮಾಧ್ಯಮಗಳ ವರದಿಯಿಂದ ಸ್ಪಷ್ಟವಾಗುತ್ತದೆ. ಮೆಹಬೂಬಾ ಮುಫ್ತಿ ಸರಕಾರ ಸೇನಾ ತುಕಡಿಯ ನಾಯಕತ್ವ ವಹಿಸಿದ್ದ ಮೇಜರ್ ರ್‍ಯಾಂಕಿನ ಅಧಿಕಾರಿ ಸಹಿತ ಜವಾನರ ವಿರುದ್ಧ ಕೊಲೆ ಮೊಕದ್ದಮೆ ನಡೆಸಲು FIR ದಾಖಲಿಸುವಂತೆ ಆದೇಶಿಸಿದೆ. ಕಾಶ್ಮೀರ ಕಣಿವೆಯ ಶೋಪಿಯಾ, ಹಂದವಾಡಾ, ಸೊಪೂರ್‌ನಂತಹ ಸ್ಥಳಗಳು ಉಗ್ರವಾದಿಗಳ ಮತ್ತು ಭಾರತ ವಿರೋಧಿ ಮಾನಸಿಕತೆ ವ್ಯಾಪಕವಾಗಿ ಬೇರೂರಿರುವ ಜನರಿರುವ ಪ್ರದೇಶಗಳಾಗಿವೆ. ಜಮ್ಮು ಕಾಶ್ಮೀರದ ಸ್ಥಳೀಯ ಪೊಲೀಸರೂ ಕೂಡಾ ಆಗಾಗ್ಗೆ ಈ ಕಿಡಿಗೇಡಿಗಳ ದಾಳಿಯಿಂದ ಸಾವಿಗೀಡಾದ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ನಡೆದಿವೆ. ಕಳೆದ ವರ್ಷ ಕುಖ್ಯಾತ ಭಯೋತ್ಪಾದಕನ ಹತ್ಯೆಯ ನಂತರ ನಿರಂತರ ನಡೆದ ಗಲಭೆಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ತಮ್ಮ ಮನೆಗಳಿಗೆ ತೆರಳದಂತೆ ಪೊಲೀಸ್ ಮುಖ್ಯಸ್ಥರು ನಿರ್ದೇಶನ ನೀಡಿದ್ದರು.
ಸೈನಿಕರಿಗೂ ಭಾವನೆಗಳಿವೆ
ಕಳೆದ ಸೆಪ್ಟೆಂಬರ್‌ನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವ ಹಿಸಲು ರಜೆಯ ಮೇಲೆ ಹಳ್ಳಿಗೆ ಬಂದಿದ್ದ ಸೇನೆಯ ಯುವ ಅಧಿಕಾರಿ ಉಮರ್ ಫಯಾಜರನ್ನು ಉಗ್ರವಾದಿಗಳು ಕೊಂದು ಹಾಕಿದ್ದರು. ಶ್ರೀನಗರದ ಮಸೀದಿಯೊಂದರ ಹೊರಗೆ ಪೊಲೀಸ್ ಬಂದೊಬಸ್ತುನಲ್ಲಿದ್ದ ಈಖಕ ಅಯೂಬ್ ಪಂಡಿತ್‌ರವರನ್ನು ಕಳೆದ ಜುಲೈನಲ್ಲಿ ನಮಾಜು ಮುಗಿಸಿ ಹೊರಗೆ ಬಂದ ಗುಂಪು ನಿಷ್ಕರುಣೆಯಿಂದ ಹೊಸಕಿ ಹಾಕಿದ ದಾರುಣ ಘಟನೆ ನಡೆದಿತ್ತು. ಇನ್ನೆಷ್ಟು ಪೊಲೀಸ್ ಮತ್ತು ರಕ್ಷಣಾ ಪಡೆಗಳ ಯೋಧರು ಈ ರೀತಿ ದಾರುಣ ಸಾವನ್ನಪ್ಪಬೇಕು? ಕಾಶ್ಮೀರಿ ಯುವಕರು ಕೈಯ್ಯಲ್ಲಿ ಕಲ್ಲು ಹಿಡಿದುಕೊಂಡು ಸೇನಾ ಯೋಧರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋ ಕ್ಲಿಪ್ಪಿಂಗ್‌ಗಳನ್ನುಯೂ ಟ್ಯೂಬ್‌ಗಳಲ್ಲಿ ನೋಡುವಾಗ ಮನ ಕಲಕುತ್ತದೆ. ಸೇನೆಯ ಕಠಿಣ ಶಿಸ್ತಿನ ನಿರ್ಬಂಧಕ್ಕೊಳಗಾಗಿ ಕೈಯ್ಯಲ್ಲಿ ಬಂದೂಕಿದ್ದರೂ ಆದೇಶವಿಲ್ಲದಿರುವುದರಿಂದ ಚಲಾಯಿಸಲಾಗದೇ ಅಸಹಾಯಕರಾಗಿ ನಾಗರಿಕ ಗುಂಪುಗಳ ಹೊಡೆತ ತಿನ್ನುವ ನಮ್ಮ ಸೈನಿಕರಿಗೆ ಭಾವನೆಗಳಿಲ್ಲವೇ? ಬಂಧು ಬಳಗದಿಂದ ಸಹಸ್ರಾರು ಮೈಲಿ ದೂರವಿರುವ ಯೋಧರಿಗೆ ತಮ್ಮ ಸಹಯೋಧರೇ ಆಪ್ತರು. ತಮ್ಮ ಅಧಿಕಾರಿಗಳೇ ಸರ್ವಸ್ವ. ತಮ್ಮವರ ಹೆಣ ಬಿದ್ದರೂ ಕೈಚೆಲ್ಲಿ ರಣಹೇಡಿಗಳಾಗಿ ಕುಳಿತುಕೊಂಡಿರುವುದು ಸಾಧ್ಯವೇ? ತನ್ನ ಅಧೀನದಲ್ಲಿರುವ ಜವಾನ ಗಾಯಗೊಂಡು ಕೆಳಕ್ಕೆ ಬಿದ್ದಿರುವಾಗ ಆತನನ್ನು ಕೊಲ್ಲಲು ಮುಂದಾಗುತ್ತಿರುವ ದುರುಳರ ಮೇಲೆ, ತನ್ನವರ ರಕ್ಷಣೆಗಾಗಿ ಬಂದೂಕು ಚಲಾಯಿಸುವ ಅಧಿಕಾರ ಸೈನಿಕರಿಗಿಲ್ಲವೇ?
ಬಂದೂಕಿನ ಮಹತ್ವ
ಸೈನಿಕರ ವೃತ್ತಿ ಬದುಕಿನಲ್ಲಿ ಬಂದೂಕಿಗೆ ವಿಶೇಷ ಮಹತ್ವವಿದೆ. ಬಂದೂಕು ಆತನ ವೃತ್ತಿ ಬದುಕಿನ ಅವಿಭಾಜ್ಯ ಅಂಗ. ತರಬೇತಿಯಲ್ಲಿ, ಯುದ್ಧ ಭೂಮಿಯಲ್ಲಿ ಅದು ಆತನ ಸದಾ ಕಾಲದ ಒಡನಾಡಿ. ಅದರ ಒಂದೊಂದು ಭಾಗಗಳನ್ನು ಸ್ವತ್ಛವಾಗಿ, ಜೋಪಾನವಾಗಿ ಇಟ್ಟುಕೊಳ್ಳುವುದನ್ನು ಸೈನಿಕರಿಗೆ ಕಲಿಸಲಾಗುತ್ತದೆ. ನಿಯಂತ್ರಣ ರೇಖೆ ಸಹಿತ ಜಮ್ಮು-ಕಾಶ್ಮೀರದ ಉಗ್ರವಾದ ಪೀಡಿತ ಪ್ರದೇಶದಲ್ಲಿ ಬಂದೂಕನ್ನು ಹಾಸಿಗೆಯಲ್ಲಿ ಇಟ್ಟುಕೊಂಡೇ ಮಲಗಬೇಕಾಗುತ್ತದೆ. ಬಂದೂಕು ಕಿತ್ತುಕೊಳ್ಳುವುದಕ್ಕಿಂತ ದೊಡ್ಡ ಅಪಮಾನಕರ ಘಟನೆ ಸೈನಿಕರಾದವರ ಬದುಕಿನಲ್ಲಿ ಇನ್ನೊಂದಿಲ್ಲ. ಅಂತಹದರಲ್ಲಿ ಕೆಳಕ್ಕೆ ಬಿದ್ದ ಅಧಿಕಾರಿಯ ಬಂದೂಕನ್ನು ಕಿತ್ತುಕೊಳ್ಳಲು ಮುನ್ನುಗ್ಗುತ್ತಿದ್ದ ದುಷ್ಟರನ್ನು ಸೈನಿಕರಾದವರು ಹೇಗೆ ಸಹಿಸಿಕೊಳ್ಳಲು ಸಾಧ್ಯ? ತಮ್ಮ ಸಂಪೂರ್ಣ ಬೆಟಾಲಿಯನ್ ಎದುರು ಹೇಡಿಗಳಂತೆ ನಾಚಿಕೆಯಿಂದ ತಲೆ ತಗ್ಗಿಸುವುದಕ್ಕಿಂತ ಬಂದೂಕು ಚಲಾಯಿಸಿ ತಮ್ಮವರನ್ನು ಮತ್ತು ಅವರ ಬಂದೂಕನ್ನು ಸುರಕ್ಷಿತವಾಗಿಸಿಕೊಳ್ಳುವುದೇ ಮೇಲೆಂದು ಆ ಕ್ಷಣ ಆ ಯೋಧರು ಕಠಿಣ ನಿರ್ಧಾರಕ್ಕೆ ಬಂದಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. “ಸಿರ್ ಕಟಾಯೆಂಗೆ, ಪರ್ ಸಿರ್ ಜುಕಾಯೆಂಗೆ ನಹೀ’ ಎನ್ನುವ ಸೇನೆಯ ಸ್ಲೋಗನ್ ಗರೀಬಿ ಹಠಾಯೇಂಗೆ ಎನ್ನುವ ರಾಜಕಾರಣಿ ಗಳ ಬೊಗಳೆ ಸ್ಲೋಗನ್ ಅಲ್ಲ.
ದೇಶ ವಿರೋಧಿ ಭಾವನೆ
ಜಮ್ಮು – ಕಾಶ್ಮೀರದ ಸ್ಥಿತಿ ದೇಶದ ಇತರ ರಾಜ್ಯಗಳಲ್ಲಿರುವಂತೆ ಸಾಮಾನ್ಯವಾದುದಲ್ಲ. ಅಲ್ಲಿರುವುದು ಗಲಭೆ ಮತ್ತು ತಂಟೆಕೋ ರರ ಪ್ರಾಬಲ್ಯ. ಅಲ್ಲಿಯ ನಾಗರಿಕರು, ರಾಜಕಾರಣಿಗಳಲ್ಲಿ ಒಂದು ದೊಡ್ಡ ವರ್ಗ ಸೇನೆಯ ವಿರುದ್ಧ, ಭಾರತದ ಅಖಂಡತೆಯ ವಿರುದ್ಧ ನಿಲುವುಳ್ಳವರು. ಕಾಶ್ಮೀರಕ್ಕಾಗಿ ಕೇಂದ್ರ ಸರ್ಕಾರ 80,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. ಸೇನೆ ಅಪರೇಷನ್ ರಾಹತ್, ಸದ್ಭಾವನಾ ಮೊದಲಾದ ಹೆಸರಲ್ಲಿ ನಾಗರಿಕ ಸೇವೆಯಲ್ಲಿ ತೊಡಗಿಕೊಂಡಿದ್ದರೂ ಅಲ್ಲಿ ಭಾರತ ಸರಕಾರ ಮತ್ತು ಸೇನೆಯ ಕುರಿತು ಸದ್ಭಾವನೆ ಮೂಡಿಸುವುದು ಸಾಧ್ಯವಾಗಿಲ್ಲ. ಇತ್ತೀಚೆಗೆ ಸೇನಾ ಮುಖ್ಯಸ್ಥರು ಹೇಳಿದಂತೆ ಅಲ್ಲಿಯ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳೂ ವ್ಯವಸ್ಥಿತವಾಗಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ. ಅಧಿಕಾರಕ್ಕಾಗಿ ಮತ್ತು ತಮ್ಮ ಸುರಕ್ಷತೆಗಾಗಿ ಉಗ್ರಗಾಮಿಗಳನ್ನು ಮತ್ತು ಉಗ್ರವಾದವನ್ನು ಪೋಷಿಸುವುದು ಅಲ್ಲಿಯ ರಾಜಕಾರಣಿಗಳಿಗೆ ಅನುಕೂಲಕರವಾಗಿ ಕಾಣುತ್ತದೆ. ನ್ಯಾಯಾಲಯಗಳು, ಮಾನವಾಧಿಕಾರ ಆಯೋಗ , ರಾಜ್ಯ ಸರಕಾರದ ನೂರಾರು ಕಟ್ಟುಪಾಡುಗಳಿಗೆ ಒಳಗಾಗಿ ಕಾರ್ಯನಿರ್ವಹಿಸಬೇಕಾದ ಸೇನೆಯನ್ನು ವಿರೋಧಿಸುವುದು ಸುಲಭ. ಆದರೆ ಉಗ್ರಗಾಮಿಗಳನ್ನು ಎದುರುಹಾಕಿಕೊಳ್ಳುವುದು ಕಷ್ಟ. ಏಕೆಂದರೆ ಅವರಿಗೆ ಯಾವ ಮಾನವ ಅಧಿಕಾರದ, ನ್ಯಾಯಲಯದ ಭಯವಿಲ್ಲ.
ಪೊಲೀಸರಿಂದಾಗದ ಕೆಲಸಕ್ಕೆ ಸೇನೆ ನಿಯೋಜನೆ
ಜಮ್ಮು – ಕಾಶ್ಮೀರದಲ್ಲಿ ಹಲವಾರು ವರ್ಷ ಆಡಳಿತ ನಡೆಸಿದ್ದ ಫಾರೂಖ್ ಅಬ್ದುÇÉಾರವರು ಕೂಡಾ ಇತ್ತೀಚೆಗೆ ಹಲವಾರು ಬಾರಿ ವಿವಾದಾಸ್ಪದ ದೇಶದ್ರೋಹದ ಹೇಳಿಕೆಗಳನ್ನು ನೀಡುತ್ತಾ ಸೇನಾ ಪಡೆಗಳ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ಮಾಡುತ್ತಿ¨ªಾರೆ. ಕೆಲವು ಬುದ್ಧಿಜೀವಿಗಳೆನ್ನಿಸಿಕೊಂಡವರು, ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ನಡೆಸುತ್ತಾ ಉದರ ಪೋಷಣೆ ಮಾಡುತ್ತಿರುವವರು, ವಿದ್ಯಾರ್ಥಿ ನಾಯಕರು ಕೂಡ ಸೈನಿಕರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ದೇಶದ ದುರಂತವೇ ಸರಿ. ಸ್ವಾತಂತ್ರÂದ ಈ ಏಳು ದಶಕಗಳಲ್ಲಿ ದೇಶದ ಏಕತೆ ಮತ್ತು ಅಖಂಡತೆಯನ್ನು ರಕ್ಷಿಸುವುದರಲ್ಲಿ ಸೇನೆಯ ಮಹತ್ವಪೂರ್ಣ ಕೊಡುಗೆ ಇದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಾಗರಿಕ ಶಾಂತಿ ಪಾಲನೆ ಪೊಲೀಸರ ಕರ್ತವ್ಯ. ಜಮ್ಮು – ಕಾಶ್ಮೀರದಲ್ಲಿರುವ ಪ್ರತಿಕೂಲ ಸ್ಥಿತಿಯನ್ನು ಎದುರಿಸಲು ಪೊಲೀಸ್ ವ್ಯವಸ್ಥೆಯಿಂದ ಸಾಧ್ಯವಾಗದ ಸಂದರ್ಭದಲ್ಲಿÉ ಸೇನೆಯನ್ನು ನಿಯೋ ಜಿಸಲಾಗಿದೆ ಎನ್ನುವುದನ್ನು ಮರೆಯಬಾರದು. ಸೇನೆ ಇರುವುದು ಶತ್ರುಗಳನ್ನು ಬಗ್ಗು ಬಡಿಯಲು. ಸೈನಿಕರಿಗೆ ಶತ್ರು ಗಳನ್ನು ಸಂಹರಿಸುವ ತರಬೇತಿ ನೀಡಲಾಗುತ್ತದೆ. ಮಾನಸಿಕವಾಗಿ ಅವರನ್ನು ಹಾಗೆ ಸಿದ್ಧಪಡಿಸಲಾಗುತ್ತದೆ. ಅವರಿಂದ ನಾಗರಿಕ ಪೊಲೀಸರಂತೆ ಗುಂಪುಗಳನ್ನು ಎದುರಿಸಬೇಕೆಂದು ಅಪೇಕ್ಷಿಸು
ವುದು ಸರ್ವಥಾ ಸರಿಯಲ್ಲ.
ಅಲ್ಲಿನ ಸರಕಾರ ಸೇನೆಯ ವಿರುದ್ಧ ಕೊಲೆ ಮೊಕದ್ದಮೆ ಹೂಡುವ ನಿರ್ಣಯಕ್ಕೆ ಅಂಟಿಕೊಂಡರೆ ಸೈನಿಕರು ಮಾನಸಿಕ ಒತ್ತಡ ಮತ್ತು ಹತಾಶೆಗೆ ಒಳಗಾಗುವುದು ನಿಶ್ಚಿತ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿರುವಂತೆ ರಕ್ಷಣಾ ಸಚಿವರು ಸ್ಥಿತಿ ಸ್ಪಷ್ಟಪಡಿಸಲಿ. ಅಗತ್ಯ ಬಿದ್ದರೆ ಅಧಿಕಾರದ ವ್ಯಾಮೋಹ ಬಿಟ್ಟು ಕೇಂದ್ರ ಸರ್ಕಾರ ತಮ್ಮ ಪಾಲುದಾರಿಕೆಯ ಸರಕಾರವನ್ನು ವಜಾ ಗೊಳಿಸಿ ರಾಷ್ಟ್ರಪತಿ ಶಾಸನವನ್ನು ಜಾರಿಗೆ ತರಲಿ. ಸೈನಿಕರ ಕೈಗಳನ್ನು ಕಟ್ಟುವುದು ಸರಿಯಲ್ಲ. ಸೈನಿಕರು ಗುಂಡು ಹಾರಿಸಿರುವುದು ಅಮಾ ಯಕರ ಮೇಲಲ್ಲ. ಭಾರತದ ಅಖಂಡತೆಯನ್ನು ಪ್ರಶ್ನಿಸುತ್ತಿರುವ ವಿದ್ರೋಹಿಗಳ ವಿರುದ್ಧ. ದೇಶದ ಕಾನೂನಿಗನುಸಾರವಾಗಿ ಸಾಮಾನ್ಯ ನಾಗರಿಕರಿಗೆ ತಮ್ಮ ಆತ್ಮ ರಕ್ಷಣೆಯ ಅಧಿಕಾರವಿರುವಾಗ ಸೈನಿಕರಿಗೆ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳುವ ಅಧಿಕಾರವಿಲ್ಲವೇ?
– ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.