ಜಾತಿ ವಿನಾಶದ ಪ್ರಕ್ರಿಯೆ ಅಗತ್ಯ: ಮೂಲಧರ್ಮ ತ್ಯಜಿಸುವುದು ಸೂಕ್ತವಲ್ಲ


Team Udayavani, Aug 5, 2017, 7:25 AM IST

05-anakana-2.jpg

ಈಗಿನ ಕಾಲದ ಜಾತಿ ವಿನಾಶದ ಬೆಳವಣಿಗೆಗಳನ್ನು ವೀರಶೈವ ಮಠಗಳು, ವೀರಶೈವ ಸಮಾಜವು ತೀವ್ರಗೊಳಿಸುವ ಮೂಲಕ ಬಸವಣ್ಣನಿಗೆ ಭಕ್ತಿಯನ್ನು ಸಲ್ಲಿಸಬೇಕು ಹೊರತು ಬಸವಣ್ಣನು ಸುಧಾರಿಸಲು ಹೆಣಗಿದ ಮೂಲಧರ್ಮವನ್ನೇ ತ್ಯಜಿಸಲು ಹೊರಡುವುದು ಸೂಕ್ತವಲ್ಲ.

ವೀರಶೈವ-ಲಿಂಗಾಯಿತ ವಾಗ್ವಾದವನ್ನು ಕುರಿತು ನನ್ನ ವಿಚಾರವನ್ನು ವ್ಯಕ್ತಪಡಿಸುವಂತೆ ವಾರದಿಂದಲೂ ಮಾಧ್ಯಮದ ಮಿತ್ರರು ಕೇಳುತ್ತಿದ್ದಾರೆ. ಒಂದು ಸಮುದಾಯದ ಒಳ ವಾಗ್ವಾದದಲ್ಲಿ ಪ್ರವೇಶಿಸಬಾರದೆಂದು ನಾನು ಮೌನವಾಗಿದ್ದೆ. ಆದರೆ ಇದು ಒಂದು ಸಮುದಾಯದ ವಾಗ್ವಾದವಾಗಿಲ್ಲ. ಇದರ ಬೇರು ಎಲ್ಲೆಲ್ಲಿಯೋ ಹರಡಿದೆ ಎಂಬುದು ಈಗ ಸ್ಪಷ್ಟವಾಗಿದೆ. ಚಿದಾನಂದಮೂರ್ತಿಗಳಂತಹ ಘನ ವಿದ್ವಾಂಸರು ಶೈವದ ಹಾಗು ವೀರಶೈವದ ಪ್ರಾಚೀನತೆಯನ್ನು ಅದು ಹೇಗೆ ಹಿಂದೂ ಧರ್ಮದ ಬೇರಿನ ಭಾಗವೇ ಆಗಿರುವುದನ್ನು ವಿವರಿಸಿದ್ದಾರೆ. ಈ ಬಗೆಗೆ ಹತ್ತಾರು ಸಂಪುಟಗಳನ್ನೇ ಬರೆಯುವಷ್ಟು ವಿವರಗಳು ಸಿಕ್ಕುತ್ತವೆ. ಆದರೆ, ಸಮಸ್ಯೆ ಇರುವುದು ಐತಿಹಾಸಿಕ ಸತ್ಯಗಳ ಬಗೆಗಲ್ಲ. ನಮ್ಮ ರಾಜಕೀಯದ ಹುನ್ನಾರಗಳಲ್ಲಿ. ಪೇಜಾವರಶ್ರೀ ಗಳು ಈ ವಿಷಯದಲ್ಲಿ ವಿವೇಕದ ಮಾತನ್ನು ಹೇಳಿ ಈ ಬೇರೆ ಜಾತಿಯ ಮಠಾಧೀಶರಿಗೇಕೆ ಬೇಕು ನಮ್ಮ ಜಾತಿಯ ಉಸಾಬರಿ ಎನ್ನಿಸಿಕೊಂಡರು. ನನ್ನ ಈ ಲೇಖನಕ್ಕೂ ಅಂಥದೇ ಟೀಕೆ ಬರುತ್ತದೆಂದು ನನಗೆ ಗೊತ್ತಿದೆ. ಆದರೆ ನನ್ನ ತಿಳಿವಳಿಕೆಯನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಸಂದರ್ಭವು ಇದು ಎಂದು ನನಗೆ ಅನ್ನಿಸುತ್ತಿದೆ.

ಭಾರತದ ಸ್ವಾತಂತ್ರ್ಯ ಚಳುವಳಿಯು ಶುರುವಾದಾಗಲೇ ಚಾಣಾಕ್ಷ ಬ್ರಿಟಿಷರು ಎರಡು ಬಗೆಯ ತಂತ್ರವನ್ನು ಹುಟ್ಟುಹಾಕಿದರು. ಮುಸಲ್ಮಾನ ಮುಂದಾಳುಗಳನ್ನು ಕರೆದು ನಾವು ಬರುವ ಮೊದಲು ಈ ದೇಶವನ್ನು ನೀವು ಆಳುತ್ತಿದ್ದೀರಿ, ಈಗ ನಾವು ಹೋದರೆ ಬಹು ಸಂಖ್ಯಾತ ಹಿಂದುಗಳು ನಿಮ್ಮನ್ನು ತುಳಿದು ಬಿಡುತ್ತಾರೆ. ನಿಮ್ಮನ್ನು ಕಾಪಾಡುವ ನಾವು ಇರಬೇಕೋ? ಹೋಗಬೇಕೋ?ಎಂದರು. ಅಲ್ಲಿಂದ ಹಿಂದೂ ಮುಸ್ಲಿಂ ಜಗಳ, ಬಂಗಾಳ ವಿಭಜನೆ, ಜಿನ್ನಾ ಸಂಸ್ಥಾನಗಳು ಬೆಳೆದವು. ಕಂಪನಿ ಆಡಳಿತ, ಆನಂತರ ಬ್ರಿಟಿಷ್‌ ಸರ್ಕಾರದ ನೌಕರಿಗಳನ್ನೇ ಮುಂದುವರೆದ ಮಾನ ದಂಡವಾಗಿ ಬಳಸಿ ಬ್ರಿಟಿಷರು ಉಳಿದ ಜಾತಿಗಳೆಲ್ಲ ಅವರಲ್ಲಿ ಕೆಲವು ಜಾತಿಗಳು ಆರ್ಥಿಕವಾಗಿ, ಕುಶಲ ಕೈಗಾರಿಕೆಗಳಲ್ಲಿ, ವಾಣಿಜ್ಯದಲ್ಲಿ, ಜಮೀನಿನ ಒಡೆತನದಲ್ಲಿ, ಎಷ್ಟೇ ಮುಂದಿದ್ದರೂ ಅವರನ್ನು ಹಿಂದುಳಿದವರೆಂದು ಸೆನ್ಸಸ್‌ ಮೂಲಕ ವಿಂಗಡಿಸಿ ಹಿಂದೂಗಳಲ್ಲಿ ಒಡಕು ಮೂಡಿಸಿದರು. ಜೊತೆಗೆ ಆರ್ಯ-ದ್ರಾವಿಡ, ಆರ್ಯರ ಆಕ್ರಮಣ, ಉತ್ತರ-ದಕ್ಷಿಣ ಮೊದಲಾದ ಸಿದ್ಧಾಂತಗಳನ್ನು ಬರೆಸಿ ಪಠ್ಯವನ್ನಾಗಿಸಿ ಶಾಲೆ ಕಾಲೇಜು ಓದುವ ತಲೆತಲೆಮಾರು ವಿದ್ಯಾರ್ಥಿಗಳ ತಲೆಗೆ ತುಂಬಿದರು. ಬ್ರಿಟನ್‌ನಲ್ಲಿಯೇ ಓದಿ, ಬ್ರಿಟಿಷ್‌ ತಂತ್ರಗಳನ್ನು ಮೈಗೂಡಿಸಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರು ಬ್ರಿಟಿಷರು ರೂಪಿಸಿದ ಈ ಮೂರು ತಂತ್ರಗಳನ್ನು ತಮ್ಮ ಪಕ್ಷವಾದ ಕಾಂಗ್ರೆಸ್ಸನ್ನು ಬಲಪಡಿಸಲು ಬಳಸಿಕೊಂಡರು. ಅಲ್ಪ$ಸಂಖ್ಯಾತ ಎಂಬ ಹೊಸ ಕಲ್ಪನೆಯನ್ನು ಹುಟ್ಟುಹಾಕಿ ಜನತೆಯನ್ನು ಪರಿಣಾಮಕಾರಿಯಾಗಿ ಒಡೆದರು. ಹಿಂದೂಗಳಲ್ಲಿ ಆರ್ಥಿಕ ವರ್ಗಗಳನ್ನು ಜಾತಿ ಜಾತಿಗಳಾಗಿ ಒಡೆದು ಆಯಾ ಜಾತಿಯ ಬಾಹುಳ್ಯವಿದ್ದ ಪ್ರದೇಶಗಳಲ್ಲಿ ಆಯಾ ಜಾತಿಯ ಹುದ್ದರಿಗಳನ್ನು ಕಾಂಗ್ರಸಿಗರಾಗಿ ಬೆಳೆಸಿ ಒಡೆದರು. ದಶಕಗಳ ಕಾಲ ದುರ್ಬಲವಾಗಿದ್ದ ವಿರೋಧಪಕ್ಷಗಳಿಗೂ ಇವೇ ತಂತ್ರಕ್ಕೆ ಶರಣಾಗದೆ ಬೇರೆ ದಾರಿ ಇರಲಿಲ್ಲ. 

ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಅನುಭವಿಸುತ್ತಿರುವ ಕಿರುಕುಳ, ಕೇರಳ ಮಾದರಿಯ ರಾಜಕೀಯ ಕೊಲೆಗಳು ಮೊದಲಾಗಿ ಜನಗಳು ರೋಸಿ ಹೋಗಿರುವುದು ತಿಳಿದಿದೆ. ಈ ಸಂದರ್ಭದಲ್ಲಿ ರಾಜಕೀಯದಲ್ಲಿ ಜಾಗೃತವಾಗಿರುವ ವೀರಶೈವ ಸಮುದಾಯವು ಯಡಿಯೂರಪ್ಪನವರ ಪರ ನಿಂತಿರುವುದು, ಇವುಗಳಿಗೆ ತಕ್ಕ ಪ್ರತಿತಂತ್ರವಾಗಿ ಸಿದ್ಧರಾಮಯ್ಯನವರು ವೀರಶೈವ-ಲಿಂಗಾಯಿತರು ತಾವು ಹಿಂದೂಗಳೇ ಅಲ್ಲವೆಂಬ ಚಳುವಳಿಗೆ ಜೀವ ಕೊಡುವ ಉಪಾಯ ಮಾಡಿದ್ದಾರೆ ಎಂಬ ವದಂತಿ ಅನಕ್ಷರಸ್ಥರಲ್ಲಿಯೂ ಹರಡಿದೆ. ಮುಖ್ಯಮಂತ್ರಿಗಳು ಎಷ್ಟು ನಿರಾಕರಿಸಿದರೂ ಜನರು ನಂಬುತ್ತಿಲ್ಲ. ಇದು ನಿಜವಿದ್ದರೆ ಇದರ ಕತೃì ಕೇವಲ ಸಿದ್ದರಾಮಯ್ಯನವರಾಗಿರುವುದಿಲ್ಲ. ಹೈಕಮಾಂಡಿನ ಮಟ್ಟದಲ್ಲಿ ಮೇಡಂ ಅವರ ಮೇಲ್ವಿಚಾರಣೆಯಲ್ಲಿ ರೂಪಿತವಾಗಿರುತ್ತದೆ ಎಂಬುದು ಹಲವರ ಊಹೆ. ಈ ಊಹೆಯನ್ನು ಪೂರ್ತಿ ತೆಗೆದು ಹಾಕುವಂತಿಲ್ಲ. ಬೇರೆ ಮತಗಳಾದ ಮುಸ್ಲಿಂ, ಕ್ರೈಸ್ತ ಎಂಬ ಎರಡು ಸೆಮೆಟಿಕ್‌ ಮತಗಳು ಇಡೀ ಪ್ರಪಂಚವನ್ನು ತಮ್ಮ ಮತವಾಗಿ ಪರಿವರ್ತಿಸುವ ಗುರಿಯನ್ನು ಮುಚ್ಚು ಮರೆಮಾಡಿಲ್ಲ.   ಹಿಂದೂ ಎಂದರೆ ವೈದಿಕ. ಜೈನ ಮತ್ತು ಬೌದ್ಧ ಇವುಗಳ ಶಾಖೆಗಳು. ಇವುಗಳು ಕೆಲವು ಮುಖ್ಯ ಅಂಶಗಳಲ್ಲಿ ಪರಸ್ಪರ ವಿರೋಧಿಗಳಾದರೂ ಸಾವಿರಾರು ವರ್ಷಗಳ ಪರಸ್ಪರ ಚರ್ಚೆ ವಾಗ್ವಾದಗಳ ಕೊಡುಕೊಳ್ಳುವಿಕೆಗಳಿಂದ ಒಂದು ಸಮಾನ ಸಂಸ್ಕೃತಿಯನ್ನು ಬೆಳೆಸಿದೆವು. ಇವುಗಳಲ್ಲಿ ಶೈವ, ವೀರಶೈವ, ವೈಷ್ಣವ ಮೊದಲಾದ ಹಲವು ಶಾಖೆಗಳಿವೆ. ಈ ವಾಹಿನಿಗಳಲ್ಲಿ ಪರಸ್ಪರ ವಿರೋಧವನ್ನು ಹೆಚ್ಚಿಸಿ ತಾವು ಮುಖ್ಯವಾಹಿನಿಗೆ ಸೇರಿದವರೇ ಅಲ್ಲ ಎಂಬ ನಂಬಿಕೆಯನ್ನು ಹುಟ್ಟಿಸಿ, ಬೆಳೆಸುವುದು ಕ್ರೈಸ್ತಚರ್ಚಿನ ಒಂದು ತಂತ್ರ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಸುರಕ್ಷಿತವಾಗಿ ಉಳಿಸಲು ಹಿಂದೂ ಸಮಾಜದ ಒಂದು ಪ್ರಮುಖ ಶಾಖೆಯಾದ ವೀರಶೈವ ಲಿಂಗಾಯತವನ್ನು ಮುಖ್ಯವೃಕ್ಷದಿಂದ ಬೇರ್ಪಡಿಸುವುದು ಚರ್ಚಿನ  ವಿಧಾನಕ್ಕೂ ಕಾಂಗ್ರೆಸ್‌ ಅಭ್ಯಸ್ಥವಾದ ರಾಜಕೀಯ ತಂತ್ರಕ್ಕೂ ಸಮಾನವಾಗಿ ಹೊಂದಿಕೆಯಾಗುತ್ತದೆ.

ವೀರಶೈವರು ಮತ್ತು ವೀರಶೈವ ಮಠಗಳು ವಿದ್ಯಾಸಂಸ್ಥೆಗಳನ್ನು, ಅದರಲ್ಲೂ ತಾಂತ್ರಿಕ ವಿದ್ಯಾಸಂಸ್ಥೆಗಳನ್ನು ವಿಫ‌ುಲವಾಗಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಪಸಂಖ್ಯಾತರು ನಡೆಸುತ್ತಿರುವ ಸಂಸ್ಥೆಗಳಿಗೆ ಇಲ್ಲದ ಕಟ್ಟುಪಾಡುಗಳನ್ನು ಬೇರೆ ಬೇರೆ ಹೆಸರಿನಲ್ಲಿ ಹಿಂದುಗಳು ನಡೆಸುವ ಸಂಸ್ಥೆಗಳ ಮೇಲೆ ಸರ್ಕಾರವು ಹೇರುತ್ತಿರುವುದೂ ಎಲ್ಲರಿಗೂ ಗೊತ್ತಿರುವುದೇ. ತಾವೂ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದರೆ ಈ ಭೇದಭಾವದಿಂದ ಪಾರಾಗಬಹುದೆಂಬುದು ವೀರಶೈವ ವಿದ್ಯಾಸಂಸ್ಥೆಗಳ ನಿರ್ವಾಹಕರಿಗೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದು ಮಾತೃಧರ್ಮಕ್ಕೆ ಮಾಡುವ ಆಘಾತವಾಗುತ್ತದೆ ಎಂಬುದು ಮನಗಾಣಬೇಕು. 

ಬಸವಣ್ಣನವರ ಕ್ರಾಂತಿಕಾರಿ ಸುಧಾರಣೆಗಳಲ್ಲಿ ಇಂದಿಗೂ ಸಂಗತವಾಗಿರುವ ಎರಡು ಅಂಶಗಳೆಂದರೆ ಕಾಯಕದ ಘನತೆ ಮತ್ತು ಅಂತರ್ಜಾತೀಯ ವಿವಾಹ. ವೃತ್ತಿಗಳು ಕುಲಕಸುಬುಗಳಾಗಿ ಇವುಗಳಲ್ಲಿ ಮೇಲು ಕೀಳುಗಳೆಂಬ ಭೇದವಿದ್ದು, ಜಾತಿಗಳು ಘನತೆಗಳನ್ನು ತೀವ್ರವಾಗಿ ಏರುಪೇರು ಮಾಡುತಿದ್ದ ಕಾಲದಲ್ಲಿ ಬಸವಣ್ಣನವರ ಈ ಸುಧಾರಣಾ ತತ್ವವು ಪರಿಣಾಮಕಾರಿ ಕ್ರಾಂತಿಕಾರಿಯಾಯಿತು. ಈ ಭೇದವು ಈಗಲೂ ಇದೆ. ವೃತ್ತಿಗಳು ಆಧುನಿಕ ತಂತ್ರಜ್ಞಾನ ಶಿಕ್ಷಣವನ್ನು ಅವಂಬಿಸಿರುತ್ತಿರುವ ಈ ಕಾಲದಲ್ಲಿ ಕೆಳವೃತ್ತಿಯ ಜಾತಿಯ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣದ ಅವಕಾಶ ಮಾಡಿಕೊಡುವ ಪ್ರಕ್ರಿಯೆಯು ನಡೆದೇ ಇದೆ. ಇದರಲ್ಲಿ ವೀರಶೈವ ಶಿಕ್ಷಣ ಸಂಸ್ಥೆಗಳ ಪಾಲು ಇದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುವ ಮೂಲಕ ಬಸವಣ್ಣನಿಗೆ ಭಕ್ತಿಯನ್ನು ಸಲ್ಲಿಸಬೇಕೇ ಹೊರತು ವೀರಶೈವರು ಬಸವಣ್ಣನು ಸುಧಾರಿಸಲು ಹೆಣಗಿದ ಮೂಲಧರ್ಮವನ್ನೇ ತ್ಯಜಿಸಲು ಹೊರಡುವುದು ಸೂಕ್ತವಲ್ಲ.

ಈಗಿನ  ಕಾಲದ  ಜಾತಿ ವಿನಾಶದ ಪ್ರಮುಖ ಬೆಳವಣಿಗೆಯನ್ನು ವೀರಶೈವ ಮಠಗಳು, ವೀರಶೈವ ಸಮಾಜವು ತೀವ್ರಗೊಳಿಸುವ ಮೂಲಕ ಬಸವಣ್ಣನಿಗೆ ಭಕ್ತಿಯನ್ನು ಸಲ್ಲಿಸಬೇಕು. ವೀರಶೈವರು ಮಾತ್ರವಲ್ಲ, ಇತರೆ ಜಾತಿಯ ಮಠಾಧೀಶರು ಒಟ್ಟುಗೂಡಿ ಹಿಂದುಗಳಲ್ಲಿ ಯಾರು ಯಾರನ್ನಾದರೂ ಮದುವೆಯಾಗುವುದು ಕ್ರಮಬದ್ಧ ಎಂಬ ನಿಲುವನ್ನು ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರುಗಳಲ್ಲಿ ಮಠಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಹಿಂದೂ ಸಮಾಜವು ಕ್ರಮೇಣ ವರ್ಣ ವ್ಯವಸ್ಥೆಯನ್ನು ಕಳಚಿಕೊಳ್ಳುತ್ತಿದೆ. ಮೀಸಲು ಎಂಬ ಆಮಿಷವನ್ನು ಪ್ರತಿಯೊಂದು ರಾಜಕೀಯ ಪಕ್ಷವೂ, ಅದರಲ್ಲೂ ಕಾಂಗ್ರೆಸ್‌ ಮತ್ತು ಕಟ್ಟಾ ಎಡಪಂಥೀಯ ಪಕ್ಷಗಳು ಒಡ್ಡುತ್ತಿವೆ.  ಅಮೆರಿಕದಲ್ಲಿ ಸರ್ಕಾರಿ ನೌಕರಿಗಿಂತ ಉದ್ಯಮಗಳ ಉದ್ಯೋಗವನ್ನು ಜನರು ಬಯಸುತ್ತಾರೆ. ನಮ್ಮ ದೇಶದಲ್ಲೂ ತಾಂತ್ರಿಕ ತರಬೇತಿ ಮತ್ತು ಸಾಮಾರ್ಥ್ಯಗಳಿರುವ ತರುಣರು ಇಂಥದ್ದನ್ನೇ ಬಯಸಲು ಆರಂಭಿಸಿದ್ದಾರೆ. ವೀರಶೈವ ಮುಖಂಡರು ಇದನ್ನು ಮನಗಾಣಬೇಕು.  ಉದ್ಯಮವು ಸಣ್ಣಪ್ರಮಾಣದಲ್ಲಿದ್ದು ಸ್ಪರ್ಧೆಯೂ ಇಲ್ಲದಿರುವಾಗ ತಮ್ಮ ಜಾತಿಯವರನ್ನೇ ನೇಮಿಸಿ ಕೊಳ್ಳುವುದು ನಡೆಯಬಹುದು. ಉದ್ಯಮವು ಬೆಳೆದು ಹೆಚ್ಚು ಹೆಚ್ಚು ತಂತ್ರಾವಲಂಬಿಯಾದಾಗ ಸಾಮರ್ಥ್ಯಕ್ಕೆ ಆದ್ಯತೆಯನ್ನು ಕೊಡದಿದ್ದರೆ ಅದು ಉಳಿಯುವುದಿಲ್ಲ. ಅಜೀಂ ಪ್ರೇಮ್‌ಜೀಯವರ ವಿಪ್ರೋ ಸಂಸ್ಥೆಯಲ್ಲಿ ಮುಸ್ಲಿಮರಿಗೆಂದು ಯಾವ ಆದ್ಯತೆಯೂ ಇಲ್ಲ. ಅದು ಪ್ರೇಮ್‌ಜೀಯವರ ಧರ್ಮ ನಿರಪೇಕ್ಷ ಮನೋಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬದುಕಿ ಬೆಳೆಯಬೇಕಾದ ಸಾಮರ್ಥ್ಯ ನಿಷ್ಠೆಗಳಲ್ಲಿ ಚೌಕಾಶಿ ಮಾಡಿಕೊಂಡರೆ ಸಂಸ್ಥೆ ಬೆಳೆಯುವುದಿಲ್ಲ. ಟಾಟಾ ಅವರು  ಪಾರ್ಸಿ ಮತಿಯರೇ ಆದರ ಸೈರಸ್‌ ಮಿಸ್ತ್ರಿಯವರನ್ನು ತೆಗೆದುಹಾಕಿ ಪಾರ್ಸಿ ಅಲ್ಲದ ಎನ್‌.ಚಂದ್ರ ಅವರನ್ನು ಇಡೀ ಟಾಟಾ ಸಮೂಹದ ಅಧ್ಯಕ್ಷರನ್ನಾಗಿ ಮಾಡಿದುದು ಈ ಸತ್ಯದಿಂದಲೇ.  ಭಾರತೀಯರನ್ನು ಸಿಇಒ ಆಗಿ ನೇಮಿಸಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ದೈತ್ಯ ಕಂಪೆನಿಗಳು ಇದನ್ನು ಮನಗಂಡಿವೆ. ಜಾತಿ ಮತಗಳನ್ನು ಪ್ರೋತ್ಸಾಹಿಸುವ ಮೂಲಕವೇ ಅಧಿಕಾರವನ್ನು ಕಬಳಿಸುವ ರಾಜಕೀಯ ಪಕ್ಷಗಳು ಉದ್ಯಮಶೀಲತೆಯನ್ನು ಎಂದರೆ, ಬಸವಣ್ಣನವರ ಕಾಯಕ ಮಹತ್ವನ್ನು ಕಡೆಗಣಿಸಿ ಮೀಸಲು ಆಮಿಷಕ್ಕೆ ಒಳಗಾಗುವ ಮುಖಂಡರು ಮನಗಾಣುವುದು ಬಾಕಿ ಇದೆ. 

ಹಿಂದೂಗಳು ಚಾತುವಣ್ಯìವನ್ನು ಅನುಸರಿಸುತ್ತಾರೆ. ಲಿಂಗಾಯತವು ಅದನ್ನು ತಿರಸ್ಕರಿಸುತ್ತದೆ. ಆದ್ದರಿಂದ ನಾವು ಹಿಂದುಗಳಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಗುಣಕರ್ಮ ವಿಭಾಗಶಃ ಎಂಬುದನ್ನು ವಿದ್ವಾಂಸರು ಎಷ್ಟು ಹೇಳಿದರೂ, ಮೊಂಡು ಎಡಪಂಥೀಯರು ಚಾತುರ್ವಣ್ಯìದ ಹಳೆಯ ಅರ್ಥವನ್ನೇ ಭಜಿಸುತ್ತಿರುವುದು ಅರ್ಥವಾಗುತ್ತದೆ. ಆದರೆ, ವಿದ್ಯಾವಂತರಾದ ಲಿಂಗಾಯತ ಉರುಫ್ ವೀರಶೈವರು ಇದನ್ನು ಪಠಿಸುವುದು ಸೋಜಿಗವೆನಿಸುತ್ತದೆ. ಕಸುಬಿನ ಆಧಾರಿತ ಜಾತಿ ವಿಗಂಡನೆಯೂ ವೀರಶೈವರಲ್ಲಿ ಇನ್ನು ಉಳಿದಿಲ್ಲವೇ? ಅವರುಗಳಲ್ಲಿ ಪರಸ್ಪರ ವಿವಾಹವು ಆಚರಣೆಯಲ್ಲಿದೆಯೇ?ದೀಕ್ಷೆ ತೆಗೆದುಕೊಂಡ ವೀರಶೈವ ಹಿರಿಯರು ಬೇರೆಯವರ ಮನೆಯಲ್ಲಿ ಊಟ ಮಾಡುತ್ತಾರೆಯೇ? ಹಿಂದಿನ ಸ್ಥಗಿತ ಸಮಾಜದಲ್ಲಿ ಬಸವಣ್ಣನ ಜಾತಿ ರಹಿತ ಸಮಾಜವು ಪೂರ್ಣವಾಗಿ ಸಾಧ್ಯವಾಗಲಿಲ್ಲ. ಈಗಿನ ಕೈಗಾರಿಕಾ ಕ್ರಾಂತಿಯ, ಉದ್ಯಮಶೀಲ, ದೇಶ ವಿದೇಶಗಳ ಪ್ರಭಾವಕ್ಕೆ ಒಳಗಾದ ಚಲನಶೀಲ ಸಮಾಜದಲ್ಲಿ ಇದು ಸಾಧ್ಯವಾಗಲು ಆರಂಭವಾಗಿದೆ. ಈ ವಾಸ್ತವತೆಗೆ ಕಣ್ಣುಮುಚ್ಚಿ ಯಾವುದೋ ಕಾಲದ ಮನುವನ್ನು ಭಗವದ್ಗೀತೆಯ ಶ್ಲೋಕದ ಒಂದು ತುಣಕಿನ ಅಪಾರ್ಥವನ್ನು ಬಳಸಿ ವಾದಿಸುವುದು ಮೊಂಡರಿಗೆ ಸಲ್ಲಬಹುದು. ಬಸವಣ್ಣನಂಥ ರಚನಾತ್ಮಕ ಸುಧಾರಕನ ಭಕ್ತರೆಂದು ಹೇಳಿಕೊಳ್ಳುವವರಿಗೆ ಅಲ್ಲ. ವೇದವಿರೋಧ, ಚಾತುರ್ವಣ್ಯìವಿರೋಧಗಳ ನಡುವೆ ವ್ಯತ್ಯಾಸವಿದೆ.  ಭಾರತದ ಸಂವಿಧಾನವು ಆಚರಣೆಗೆ ಬಂದ ಮೇಲೆ ದೌರ್ಜನ್ಯ ವಿರೋಧ ಕಾಯ್ದೆ, ದೇವಾಲಯ ಪ್ರವೇಶ, ದೇಗುಲಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕ ಮೊದಲಾದ ಆಚರಣೆಗಳಿಂದ ಮನುಧರ್ಮ ಶಾಸ್ತ್ರದ ನಿಯಮಗಳನ್ನು ಸಂವಿಧಾನದಲ್ಲಿಯೇ ತಿರಸ್ಕರಿಸಿ, ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿರುವಾಗ ಅದನ್ನೇ ವಾದ ಮಾಡುವುದು ಮೊಂಡತನ. ನಮ್ಮ ಸಂವಿಧಾನ ರಚನಾ ಸಭೆಯಲ್ಲಿದ್ದ ಅನೇಕರು ಮೇಲು ಜಾತಿಯವರು. ಅವರೇ ಚಾತುರ್ವಣ್ಯìವನ್ನು ತಿರಸ್ಕರಿಸಿ ಅದರ ಹೆಸರಿನಲ್ಲಿ ಸಮಾನತೆಗೆ ವಿರುದ್ಧವಾಗಿ ಬೇಧ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಕಾನೂನು ಮಾಡಿದರು ಎಂಬ ವಾಸ್ತವಕ್ಕೆ ನಾವು ಕುರುಡರಾಗಬಾರದು. ಒಟ್ಟಿನಲ್ಲಿ ಬಸವಣ್ಣನ ಮೂಲತಣ್ತೀಗಳನ್ನು ಇಂದಿನ ಸಮಾಜದಲ್ಲಿ ಸಕ್ರಿಯವಾಗಿಸುವುದು ವೀರಶೈವಲಿಂಗಾಯತರ ಮಾತ್ರವಲ್ಲ ಸಮಸ್ತ ಹಿಂದೂಗಳ ಧ್ಯೇಯವಾಗಬೇಕು.

ಎಸ್‌.ಎಲ್‌.ಭೈರಪ್ಪ

ಟಾಪ್ ನ್ಯೂಸ್

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.