ಮನುಕುಲದ  ಮುಂದಿನ ಮೂರು ಸವಾಲುಗಳು


Team Udayavani, Jan 2, 2019, 2:50 AM IST

x-29.jpg

ಅನಿಲ್‌ ಅಗರ್‌ವಾಲ್‌ರವರ ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅನಿಲ್‌ “ಯಾವ ದೇಶ ಹೆಚ್ಚು ಅನಿಲ ಹೊರಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು’ ಎಂದಿದ್ದರು.

ಅನಿಲ್‌ ಕುಮಾರ್‌ ಅಗರ್‌ವಾಲ್‌ ಭಾರತದ ಒಬ್ಬ ಹೆಸರಾಂತ ಪರಿಸರ ತಜ್ಞ. ಕಾನ್ಪುರದಲ್ಲಿ ಜನಿಸಿದ ಅವರು ಐಐಟಿಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದರು. ಆ ನಂತರ ಅವರು ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಜಾಗತಿಕ ತಾಪಮಾನ ನಿಯಂತ್ರಣ ಕುರಿತು ಅರಿವು ಮೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ವಿಶ್ವಸಂಸ್ಥೆಯ  ಪರಿಸರ ಕಾರ್ಯಕ್ರಮ ವಿಭಾಗ 1987ರಲ್ಲಿ ಅವರಿಗೆ “ಗ್ಲೋಬಲ್‌ 500 ರೋಲ್‌ ಆಫ್ ಆನರ್‌’ ನೀಡಿ ಪುರಸ್ಕರಿಸಿತ್ತು. ಇಂದಿಗೆ ಅನಿಲ್‌ ವಿಧಿವಶರಾಗಿ 17 ವರ್ಷಗಳಾಯಿತು. ಅವರ ನೆನಪಿನಲ್ಲಿ ಈ ಲೇಖನ.

“ನಮ್ಮ ಕಾಲವೇ ಚೆನ್ನಾಗಿತ್ತು’ ಎಂದು ಹಿರಿಯರು ತಮ್ಮ ಕಾಲವನ್ನು ನೆನೆಸಿಕೊಂಡು ಗತ ವೈಭವವನ್ನು ಮೆಲುಕು ಹಾಕುವುದಿದೆ. ಒಂದಿಷ್ಟು ದಶಕಗಳು, ಶತಮಾನಗಳು ಹಿಂದೆ ಹೋದರೆಷ್ಟು ಚೆನ್ನ ಎಂದು ತಾವು ಕಂಡ, ಇಲ್ಲವೇ ಕೇಳಿದ ಆ ಬಣ್ಣನೆಗಳ ನೆನಪಿನಲ್ಲಿ ಜಾರಿ ಹೋಗುತ್ತಾರೆ. ಇದೆಲ್ಲಾ ಭ್ರಮೆ, ಅಪ್ರಸ್ತುತ ಎಂದು ಪ್ರಗತಿಪರರಿಗೆ ಅನಿಸುವುದುಂಟು. ಯಾರೋ ಸಾಮಾನ್ಯರು ಹೇಳಿದರೆ ಇಂತಹ ಮಾತುಗಳು ಅರುಳು ಮರುಳಿನ ಹಲುಬುವಿಕೆಗಳು ಎಂದೋ, ಇಲ್ಲ, ಅರ್ಥವಿಲ್ಲದ ಬಡಬಡಿಕೆಗಳು ಎಂದೋ ಅನಿಸುವುದಿದೆ. ಅದರೆ ನಮ್ಮ ದೇಶದ ಖ್ಯಾತ ಪರಿಸರವಾದಿ ಅನಿಲ್‌ ಅಗರ್‌ವಾಲ್‌ 21ನೇ ಶತಮಾನದ ನಮ್ಮ ದೇಶ 15ನೇ ಶತಮಾನದಲ್ಲಿದ್ದ ಹಾಗಿದ್ದರೆ ಎಷ್ಟು ಚೆನ್ನ ಎಂದು ಅಭಿಪ್ರಾಯಪಟ್ಟಿದ್ದರೆಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅಗರ್‌ವಾಲ್‌ ಈ ಮಾತನ್ನು ಹೇಳಿದ ಮಾತ್ರಕ್ಕೆ ಅವರು ಪ್ರಗತಿಯ ವಿರೋಧಿಗಳು, ದೇಶವನ್ನು ಹಿನ್ನಡೆಸುವ ಮಾತಾಡಿದ್ದರು ಎಂದಲ್ಲ. ಅವರು ಈ ಮಾತನ್ನು ಹೇಳಿರುವುದು ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ.

ಅನಿಲ್‌ ಅಗರ್‌ವಾಲ್‌ ಪ್ರಕಾರ ಇದು ಭಾರತಕ್ಕಷ್ಟೇ ಅಲ್ಲ, ಪ್ರಪಂಚದ ಬಹುತೇಕ ಅಭಿವೃದ್ಧಿಶೀಲ ದೇಶಗಳಿಗೂ ಅನ್ವಯವಾಗುತ್ತದೆ. ನಮ್ಮ ಆಡಳಿತ ಸಂಸ್ಥೆಗಳು ಸುಮಾರು 150 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ವಸಾಹತುಶಾಹಿ ಮಾದರಿಗಳು. ಬ್ರಿಟಿಷರ ಆಳ್ವಿಕೆಗಿಂತ ಮುಂಚೆ ನಮ್ಮ ದೇಶ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಹಾಗಾಗಿಯೇ ಪರಕೀಯರು ನಮ್ಮ ಮೇಲೆ ಆಕ್ರಮಣ ನಡೆಸಿ ಇಲ್ಲಿನ ಸಂಪತ್ತನ್ನು ದೋಚಿದ್ದು. ವಸಾಹತು ಶಾಹಿಯ ಪ್ರಭಾವದಿಂದ ನಮ್ಮ ಸಂಪತ್ತು ನಾಶವಾಯಿತು, ಶೇ.90ರಷ್ಟಿದ್ದ ಅಕ್ಷರಸ್ಥರ ಪ್ರಮಾಣ ಕುಸಿದು ಬಿತ್ತು. ಇಂದಿಗೂ ನಾವು ಆ ವಸಾಹತುಶಾಹಿ ಮಾದರಿಯ ಆಡಳಿತದ ಹ್ಯಾಂಗೋವರ್‌ನಿಂದ ಪೂರಾ ಹೊರಬರಲಾಗಿಲ್ಲ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಮತ್ತೆ ನಮ್ಮನ್ನು ನಾವು ಸಶಕ್ತರನ್ನಾಗಿ ಪುನರೂಪಿಸಿಕೊಳ್ಳಲಾಗಿಲ್ಲ. ಆದರೆ ಒಂದು ವಿಷಯ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. 200 ವರ್ಷಗಳ ಹಿಂದೆ ಅತ್ಯಂತ ಕ್ರೂರರೂ, ಭ್ರಷ್ಟರೂ ಆದ ರಾಜರು ಆಳುತ್ತಿದ್ದರೂ ರಾಜ್ಯಗಳು ಸಂಪದ್ಭರಿತವಾಗಿದ್ದವು. ಸಾಕ್ಷರತೆಯ ಪ್ರಮಾಣ ಹೆಚ್ಚಿತ್ತು, ಇದಕ್ಕೆ ಕಾರಣ ಪ್ರಾಕೃತಿಕ ಸಂಪನ್ಮೂಲಗಳು ಈಗಿನಂತೆ ಆಡಳಿತ ಸಂಸ್ಥೆಗಳ ಕೈಲಿರಲಿಲ್ಲ. ಆಗ ಜನರೇ ಸ್ಥಳೀಯ ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿದ್ದರು. ಅದನ್ನು ಮುಕ್ತವಾಗಿ ಬಳಸುವ ಅವಕಾಶವಿದ್ದರೂ ವಿವೇಚನೆಯಿಂದ ಬಳಸುತ್ತಿದ್ದರು. ಯಾವೊಂದು ಕೆರೆಯನ್ನೂ ರಾಜ ಕಟ್ಟಿಸಲಿಲ್ಲ. ಅವೆಲ್ಲ ಜನ ತಾವಾಗೇ ತಮ್ಮದೇ ಸಹಭಾಗಿತ್ವದಲ್ಲಿ ಕಟ್ಟಿದ್ದು. ಅವನ್ನು ಅವರು ಅತ್ಯಂತ ಸಮರ್ಪಕವಾಗಿ ಮಾಲಿನ್ಯವಾಗದಂತೆ ನಿರ್ವಹಿಸುತ್ತಿದ್ದರು. ಅದೊಂದು ಅತ್ಯಂತ ಪ್ರಜಾತಾಂತ್ರಿಕ, ವಿಕೇಂದ್ರೀಕೃತ ವ್ಯವಸ್ಥೆ ಆಗಿತ್ತು. ಆದರೆ ಇವತ್ತು ಸರ್ಕಾರಗಳು, ಆಡಳಿತ ಸಂಸ್ಥೆಗಳು ಜನರನ್ನು ದೂರವಿಟ್ಟು  ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿವೆ. ಈ ಸಂಸ್ಥೆಗಳು ಸಂಪನ್ಮೂಲಗಳ ನಿರ್ವಹಣೆಯಲ್ಲಿ ಅಸಮರ್ಥ, ಭ್ರಷ್ಟ ಮತ್ತು ಸ್ಪರ್ಧಾತ್ಮಕವಲ್ಲದವು ಎಂಬುದನ್ನು ಪದೇ ಪದೇ ಸಾಬೀತು ಮಾಡಿವೆ. ಹಾಗಾಗಿ ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಕಾಪಾಡುವಂತಹ ಆಡಳಿತ ವ್ಯವಸ್ಥೆ ಮತ್ತೆ ಹಿಂದಿರುಗೀತೇ  ಎಂದು ಎದುರು ನೋಡಬೇಕಿದೆ. 

ಅನಿಲ್‌ ಅಗರ್‌ವಾಲ್‌ 21ನೇ ಶತಮಾನದಲ್ಲಿ ಮನುಕುಲ ಎದುರಿಸಬೇಕಾದ ಮೂರು ಸವಾಲುಗಳ ಬಗ್ಗೆ ಗಮನ ಸೆಳೆದಿದ್ದರು. ಮೊದಲನೆಯದು ಪರಿಸರ ಮಾಲಿನ್ಯ ನಿಯಂತ್ರಣದ ಸವಾಲು. ಆರ್ಥಿಕ ಬೆಳವಣಿಗೆಯಷ್ಟೇ ಕ್ಷಿಪ್ರವಾಗಿ ಮಾಲಿನ್ಯದ ಪ್ರಮಾಣವೂ ಏರುತ್ತಿದೆ ಎಂಬುದನ್ನು ಅವರು ಗಮನಿಸಿದ್ದರು. ಎರಡನೇ ಮಹಾಯುದ್ಧದ ನಂತರ ಉಂಟಾದ ಆರ್ಥಿಕ ಸಂಚಲನದಿಂದಾಗಿ ಮತ್ತು ಕೈಗಾರಿಕೀಕರಣದಿಂದಾಗಿ 15 ವರ್ಷಗಳೊಳಗೆ ಪಶ್ಚಿಮ ಜಗತ್ತು ಅಸಾಮಾನ್ಯವಾಗಿ ಮಾಲಿನ್ಯಕ್ಕೊಳಗಾಯಿತು. 60ರ ದಶಕದ ನಂತರವಷ್ಟೇ ಪರಿಸರದ ಬಗ್ಗೆ ಕಾಳಜಿ ಬೆಳೆಯಲಾರಂಭಿಸಿದ್ದು. ತೀರಾ ಆತಂಕದ ಸಂಗತಿ ಎಂದರೆ ಯಾವ ಅಭಿವೃದ್ಧಿ ಹೊಂದಿದ ದೇಶಗಳು ಪರಿಸರ ಮಾಲಿನ್ಯದ ವಾಸ್ತವತೆಯನ್ನು ಅರಿತು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪ್ರಾರಂಭಿಸಿದವೋ ಆ ನಂತರದ ವರ್ಷಗಳಲ್ಲಿ ಅಭಿವೃದ್ಧಿಶೀಲ ದೇಶಗಳು ಅತಿ ಹೆಚ್ಚು ಮಾಲಿನ್ಯ ಹೊರಸೂಸತೊಡಗಿದವು. ಕಳೆದ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಗಳಿಗಿಂತ ಅಧಿಕ ಬೆಳವಣಿಗೆಯನ್ನು ಅಭಿವೃದ್ಧಿಶೀಲ ಜಗತ್ತು ಸಾಧಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳು 60ರ ದಶಕದಲ್ಲಿ ಯಾವ ರೀತಿ ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದವೋ ಅದೇ ಪ್ರಮಾಣದ ಸಮಸ್ಯೆಯನ್ನು ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿವೆ. ಇದನ್ನೆಲ್ಲಾ ಬದಲಾಯಿಸಬೇಕಾದ ಹೊಣೆ ನಾಗರಿಕ ಸಮಾಜದ ಮೇಲಿದೆ. ಜನರಿಗೆ ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಹೆಚ್ಚು ತಿಳಿವಳಿಕೆ ನೀಡಬೇಕಿದೆ. ನಾವು ಎಷ್ಟು ಶೀಘ್ರವಾಗಿ ಇದಕ್ಕೆ ನಿಯಂತ್ರಣವನ್ನು ಹೇರುತ್ತೇವೆಯೋ ಅಷ್ಟು ವೇಗವಾಗಿ ನಾವು ಪರಿಸರ ಮಾಲಿನ್ಯದ ಮೇಲೆ ನಿಯಂತ್ರಣ ಸಾಧಿಸಬಹುದು.. ನಾಗರಿಕ ಸಮಾಜ ವ್ಯವಸ್ಥಿತವಾಗಿ ಇದಕ್ಕೆ ಕೂಡಲೆ ಸನ್ನದ್ಧವಾಗದಿದ್ದಲ್ಲಿ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗೆ 40 ವರ್ಷ ಬೇಕಾಗಬಹದು, ಇದು ತೀರಾ ದುಬಾರಿ ಎಂದು ಅನಿಲ್‌ ಎಚ್ಚರಿಸಿದ್ದರು. 

ಎರಡನೆಯ ಸವಾಲೆಂದರೆ ರೈತನ ಭೂಮಿ ಅವನತಿ ಹೊಂದದಂತೆ ತಡೆಯುವುದು. ಈ ದೇಶದ ದೊಡ್ಡ ಸಮಸ್ಯೆ ಎಂದರೆ ಪರಿಸರದೊಂದಿಗೆ ನೇರ ಸಂಬಂಧ ಹೊಂದಿರುವಂತಹ ಬಡತನ. 21ನೇ ಶತಮಾನದ ಆರಂಭದಲ್ಲಿ ಆರ್ಥಿಕ ಜಾಗತೀಕರಣದಿಂದ ಅಪಾರ ಸಂಪತ್ತು ವೃದ್ಧಿಯಾಗುತ್ತದೆ. ಈ ಸಂಪತ್ತು ಮಾರುಕಟ್ಟೆ ಕೌಶಲ ಹೊಂದಿಲ್ಲದ ಕನಿಷ್ಠ ಒಂದು ಬಿಲಿಯನ್‌ ಜನರನ್ನು ಆರ್ಥಿಕ ಮತ್ತು ಸಾಮಾಜಿಕ ಮುಖ್ಯವಾಹಿನಿಯಿಂದ ಬೇರ್ಪಡಿಸುತ್ತದೆ ಎಂದು ಅನಿಲ್‌ ಭವಿಷ್ಯ ನುಡಿದಿದ್ದರು. ಅವರ ಮಾತು ಸತ್ಯವಾಗಿದೆ. ನಾವು ಸಮಾನತೆಯ ಬಗ್ಗೆ ಮಾತಾಡುವುದೇ ಆದರೆ ಈ ಬೇರ್ಪಟ್ಟ ಜನರನ್ನು ಮುಖ್ಯವಾಹಿನಿಯಲ್ಲಿ ಮತ್ತೆ ಸೇರಿಸಿಕೊಳ್ಳುವ ಮತ್ತು ಅವರ ಪ್ರಾಥಮಿಕ, ಮೂಲಭೂತ ಅಗತ್ಯಗಳನ್ನು ನೆರವೇರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು. ಇಂದಿಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಇದೊಂದು ಸವಾಲೇ! ಈ ಸಂದರ್ಭದಲ್ಲಿಯೂ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೌಶಲವಿಲ್ಲದ ಜನಸಮೂಹ ಹಳ್ಳಿಗಳಲ್ಲಿ ವಾಸಿಸುತ್ತದೆ. ಆದ್ದರಿಂದ ಅವರ ಕೃಷಿ, ಹೈನುಗಾರಿಕೆ ಇತ್ಯಾದಿ ಚಟುವಟಿಕೆಗಳು ಮತ್ತು ಅತಿ ಮುಖ್ಯವಾದ ಆರ್ಥಿಕ ಆದಾಯ ಅವರ ಜಮೀನಿನ ಉತ್ಪಾದನಾ ಮಟ್ಟವನ್ನೇ ಅವಲಂಬಿಸಿರುತ್ತದೆ. ಕೃಷಿ ಉತ್ಪಾದನೆ ಕುಸಿದರೆ ಅವರ ಬದುಕೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ರೈತರ ಭೂಮಿ ಸಂರಕ್ಷಣೆ ಅತಿ ಮುಖ್ಯ ಎಂದು ಅನಿಲ್‌ ಅಭಿಪ್ರಾಯಪಟ್ಟಿದ್ದರು. 

ಮೂರನೆಯ ಸವಾಲು ಪರಿಸರ ಜಾಗತೀಕರಣ. ಈ ಪರಿಸರ ಜಾಗತೀಕರಣವೂ ಅಪಾರ ಪ್ರಮಾಣದ ಸಂಪತ್ತನ್ನು ಸೃಷ್ಟಿಸುತ್ತದೆ. ಸಂಪತ್ತು ಸೃಷ್ಟಿಯ ಭರದಲ್ಲಿ ನಾವು ಯಾವ ಒಂದು ದೇಶದಲ್ಲಿ ಪರಿಸರಕ್ಕೆ ಹಾನಿಕರವಾದ್ದನ್ನು ಏನೇ ಮಾಡಿದರೂ ಅದು ಮತ್ತೂಂದು ದೇಶದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಒಂದೇ ದೇಶದ ಪರಿಸರ ನಿರ್ವಹಣೆಯ ಮೂಲಕ ನಾವು ಇಡೀ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಲು ಸಾಧ್ಯವಿಲ್ಲ. ನಾವು ಇಡೀ ವಿಶ್ವವನ್ನು ನಿರ್ವಹಿಸಬೇಕು. ಇದನ್ನೇ ಎಕಾಲಾಜಿಕಲ್‌ ಗ್ಲೋಬಲೈಸೇಶನ್‌ ಎನ್ನುವುದು.

ಅನಿಲ್‌ ಅಗರವಾಲ್‌ರವರ ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅನಿಲ್‌ “ವಾತಾವರಣವನ್ನು ಸರ್ವರಿಗೂ ಸೇರಿದ ಜಾಗತಿಕ ಆಸ್ತಿಯಾಗಿ ಪರಿಗಣಿಸಿ ತಲಾ ಹೊರಸೂಸುವ ಹಕ್ಕು ಮತ್ತು ಹೊರಸೂಸುವ ಸಮಾನ ಜಾಗವನ್ನು ನಿಗದಿಪಡಿಸಬೇಕು. ಯಾವ ದೇಶ ಹೆಚ್ಚು ಅನಿಲ ಹೊರಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು. ಎರಡೂ ಗುಂಪಿನವರು ಸ್ವಯಂ ನಿಯಂತ್ರಣಕ್ಕೆ ಒಳಪಟ್ಟು ಸಮತೋಲನ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕು’ ಎಂದು ಪ್ರತಿಪಾದಿಸಿದ್ದರು. ಕೂಪನ್‌ ಹೇಗನ್‌ ವಾತಾವರಣ ಬದಲಾವಣೆ ಕುರಿತ ಶೃಂಗಸಭೆ ಮುಗಿದ ಬೆನ್ನಲ್ಲೇ ಜನವರಿ 2, 2002ರಂದು ಅನಿಲ್‌ ವಿಧಿವಶರಾದರು.  

ಹೊರಸೂಸುವಿಕೆಯ ತೀವ್ರ ಪರಿಣಾಮಗಳನ್ನು ಎದುರಿ ಸುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶುದ್ಧ ಶಕ್ತಿಯ ಮೂಲ ತಂತ್ರಜ್ಞಾನವನ್ನು ಮಾರ್ಪಾಡುಗೊಳಿಸುವುದು ಸವಾಲಿನ ಕೆಲಸವೇ ಆಗಿದೆ. ಈ ದೇಶಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳು ಹಣಕಾಸಿನ ಸಹಾಯ ಮಾಡುವುದು, ಶುದ್ಧ ತಂತ್ರಜ್ಞಾನವನ್ನು ಒದಗಿಸುವುದು, ತಂತ್ರಜ್ಞಾನದ ವಿತರಣೆ ಮತ್ತು ವರ್ಗಾವಣೆ ಮುಂತಾದವುಗಳು ಮೂಲಕ ಅವರನ್ನು ತಾಪಮಾನ ಬದಲಾವಣೆ ವಿರುದ್ಧ ಹೋರಾಡಲು ಸಜ್ಜುಗೊಳಿಸುವುದು, ಯೋಜನೆ ಆಧಾರಿತ ಮಾರ್ಗ ಸೂಚಿಸುವುದು-ಈ ಎಲ್ಲಾ ನೆರವು ನೀಡುವುದಾಗಿ ಹಿಂದಿನ ಹಲವಾರು ಶೃಂಗಸಭೆಗಳಲ್ಲಿ ಒಪ್ಪಿಕೊಂಡಿವೆ. ಆದರೆ ಮುಂದುವರೆದ ರಾಷ್ಟ್ರಗಳು ತಮ್ಮ ಬದ್ಧತೆಗೆ ಅನುಗುಣವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸು ನೆರವು ಒದಗಿಸದಿರುವುದು ಜಾಗತಿಕ ಮಟ್ಟದಲ್ಲಿ ಹಿನ್ನಡೆ ಕಾಣುವಂತಾಗಿದೆ. ಅನಿಲ್‌ ಅಗರ್‌ವಾಲ್‌ ಅವರ ಆಶಯಗಳನ್ನು ಈಗಲಾದರೂ ಜಾರಿಗೆ ತರುವುದು ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಅತ್ಯವಶ್ಯಕ ಕ್ರಮ ಎನಿಸುತ್ತದೆ.    

ತುರುವೇಕೆರೆ ಪ್ರಸಾದ್‌ 

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.