ಗುಣಸಂಪನ್ನ ಮುಖವಾಡ ತೊಟ್ಟವರು
Team Udayavani, Jul 22, 2017, 7:12 AM IST
ಇಂದು ತಮ್ಮ ಮನೆಯ ಹಿರಿಯರನ್ನು ತೀರ್ಥಯಾತ್ರೆಗೆ (ಮುಖ್ಯವಾಗಿ ಕಾಶ್ಮೀರಕ್ಕೆ) ಕಳುಹಿಸುವ ಮುನ್ನ ಹಿಂದೂಗಳು ಎರಡೆರಡು ಬಾರಿ ಯೋಚಿಸುವಂತಾಗಿದೆ. ಇದನ್ನೆಲ್ಲ ಕೇಳಿಸಿಕೊಳ್ಳಲು ಅಹಿತವಾಗಬಹುದು. ಆದರೆ ಈ ವಿಷಯವಾಗಿ ಚರ್ಚೆ ನಡೆಯುವ ಅಗತ್ಯವಿದೆ. ಅದೇಕೆ ನಮ್ಮ ದೇಶ ಹೀಗಾಯಿತು? ಬಹುಸಂಖ್ಯಾತರಿಗೆ ತಮ್ಮ ಶ್ರದ್ಧಾಕೇಂದ್ರಗಳಿಗೆ ಹೋಗಲು ಅಸುರಕ್ಷಿತ ಭಾವ ಕಾಡುವಂಥ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ಈ ವಿಷಯದಲ್ಲಿ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಅದ್ಹೇಗೆ ಸಂಪ್ರದಾಯವಾದ ಆಗುತ್ತದೆ?
ಕಳೆದ ಕೆಲವು ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಜಗತ್ತಿನ ತೀವ್ರ ವಿಸ್ತಾರವಾಗಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸ್‌ಆ್ಯಪ್‌ನ ಸಾವಿರಾರು ಸ್ಥಳೀಯ ಗುಂಪುಗಳಲ್ಲಿ ಹಲವಾರು ಸಾರ್ವಜನಿಕ ವಿಷಯಗಳ ಮೇಲೆ ಚರ್ಚೆಗಳು, ವಾದ-ವಿವಾದಗಳು ನಡೆ ಯುತ್ತವೆ. ಲಕ್ಷಾಂತರ ಜನರನ್ನು ಬೆಸೆದಿರುವ ಈ ವೇದಿಕೆಗಳು ವಿಚಾರ-ವಿಮರ್ಶೆಯ ಮೂಲಕ ಬಲಿಷ್ಠ ನಿಲುವನ್ನು ನಮ್ಮ ಮುಂದಿಡುತ್ತವೆ, ನಂತರ ನಮ್ಮ ನಿಲುವನ್ನು ರೂಪಿಸುತ್ತವೆ ಎಂದೂ ನಾವು ಭಾವಿಸಬಹುದು. ಆದರೆ ಇದರಲ್ಲೊಂದು ಸಮಸ್ಯೆಯಿದೆ. ವಿಚಾರ-ವಿಮರ್ಶೆಯ ಈ ವೇದಿಕೆಗಳು ಸಾರ್ವಜನಿಕವಾಗಿ ಮುಕ್ತವಾಗಿರುತ್ತವೆ ಮತ್ತು ಸಾರ್ವಜನಿಕ ಸ್ತರದಲ್ಲಿ ಬಹಳಷ್ಟು ನಕಲಿ ಜನರಿರುತ್ತಾರೆ! ಈ ನಕಲಿ ಜನರು ತಮ್ಮನ್ನು ತಾವು ನೈತಿಕವಾಗಿ ಗುಣವಂತರೆಂದು ತೋರಿಸಿಕೊಳ್ಳುತ್ತಾರೆ. ಅಲ್ಲದೇ ತಮ್ಮದು ಸಮತೋಲಿತ ದೃಷ್ಟಿಕೋನವೆಂದೂ, ತಾವು ಆಧುನಿಕರು-ಪ್ರಗತಿಶೀಲರು ಎಂದೂ ಬಿಂಬಿಸಿಕೊಳ್ಳುತ್ತಾರೆ.
ಇದೇ ವೇಳೆಯಲ್ಲೇ ಅಂತರ್ಜಾಲದಲ್ಲಿ “ವಚ್ಯುì ಸಿಗ್ನಲಿಂಗ್’ ಎನ್ನುವ ಪದ ಬಹಳ ಲೋಕಪ್ರಿಯವಾಗಿದೆ. ಆದಾಗ್ಯೂ ಈ ಪದವನ್ನು ಅನೇಕ ವರ್ಷಗಳಿಂದ ಬಳಸಲಾಗುತ್ತಿದೆಯಾದರೂ, ಈಗ ಆ ಪದದ ನಿಜಾರ್ಥವನ್ನು ನೀವು ಪೂರ್ಣ ರೂಪದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಒಂದು ವೇಳೆ ನೀವೇನಾದರೂ ಅಮರ್‌ನಾಥ್ ಯಾತ್ರಿಕರ ಮೇಲಾದ ದಾಳಿಯ ಕುರಿತು ಹೀಗೆ ಕಮೆಂಟ್ ಮಾಡಿದಿರೆಂದುಕೊಳ್ಳಿ: “”ಹಿಂದೂ ಭಕ್ತಾದಿಗಳ ಮೇಲೆ ಮುಸಲ್ಮಾನ ಉಗ್ರರು ದಾಳಿಮಾಡಿದ ಮೇಲೆ, ನನ್ನ ಅಪ್ಪ-ಅಮ್ಮನನ್ನು ಅಮರ್‌ನಾಥ್ ಯಾತ್ರೆಗೆ ಕಳುಹಿಸುವುದು ಸುರಕ್ಷಿತವಲ್ಲ ಎನಿಸುತ್ತಿದೆ..”
ನೀವು ಹೀಗೆ ಕಮೆಂಟ್ ಮಾಡಿದ್ದೇ…ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ನಿಮ್ಮ ಮೇಲೆ ಮುರಿದುಕೊಂಡು ಬೀಳುವ ಜನರು ನಿಮ್ಮನ್ನು “ಸಂಪ್ರದಾಯವಾದಿ’ ಎಂದು ಕರೆಯಲಾರಂಭಿಸುತ್ತಾರೆ.
ಆದಾಗ್ಯೂ ನೀವು ಮಾಡಿದ ಕಮೆಂಟ್‌ನಲ್ಲಿ ತಪ್ಪೇನೂ ಇರುವುದಿಲ್ಲ. ಒಂದು ಘಟನೆಯ ಆಧಾರದಲ್ಲಿ ನೀವು ಭಯ ವ್ಯಕ್ತಪಡಿಸಿರುತ್ತೀರಿ ಅಷ್ಟೆ. ಆದರೆ ಇಂಟರ್ನೆಟ್‌ನಲ್ಲಿ ತುಂಬಿ ತುಳುಕಾಡುತ್ತಿರುವ ಈ ನೈತಿಕ ಗುಣಸಂಪನ್ನರು ನಿಮ್ಮ ಮಾತಿನಲ್ಲಿ ಸಾಂಪ್ರದಾಯಿಕತೆಯ ವಾಸನೆಯನ್ನು ಹುಡುಕಿ ತೆಗೆಯುತ್ತಾರೆ. ಈ ನೈತಿಕ ಸಂಪನ್ನರು ಬಯಸುವುದು ಇಷ್ಟೆ: ಮೊದಲನೆಯದಾಗಿ, ನೀವು ಯಾವತ್ತಿಗೂ ಧರ್ಮದ ಉಲ್ಲೇಖ ಮಾಡಬಾರದು. ಎರಡನೆಯದಾಗಿ, ಹಿಂದೂಗಳು ಬಹುಸಂಖ್ಯಾತರಾಗಿ ರುವ ಕಾರಣ, ಅವರನ್ನು ಪ್ರಭಾವಿಸುವಂಥ ಯಾವುದೇ ವಿಷಯವನ್ನು ಎತ್ತಿಕೊಳ್ಳಬಾರದು. ಹೀಗೆ ಮಾಡಿಬಿಟ್ಟರೆ ಬಹು ಸಂಖ್ಯಾತರಪರ ಎನಿಸಿಕೊಳ್ಳಬೇಕಾಗುತ್ತದೆ. ಮೂರನೆಯದಾಗಿ, ನಿಜವಾದ ಗುಣ ವಂತನಾದವನು ಇಂಥ ಘಟನೆಗಳನ್ನು ಹಿಂದೂಗಳ ವಿರುದ್ಧದ ದಾಳಿ ಎಂದು ನೋಡಬಾರದು, ಬದಲಾಗಿ ಒಳ್ಳೆಯವರಿಗೆ ಹಾನಿ ಮಾಡಲು ಕೆಟ್ಟವರು ನಡೆಸಿದ ದಾಳಿ ಎಂದಷ್ಟೇ ಇದನ್ನೆಲ್ಲ ಪರಿಗಣಿಸಬೇಕು ಎನ್ನುವ ಗುಣ ಈ ಗುಣಸಂಪನ್ನರದ್ದು!
ಮನುಷ್ಯನ ಮನಸ್ಸು ಈ ರೀತಿ ಕೆಲಸ ಮಾಡುವುದಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಸತ್ಯವೇನೆಂದರೆ, ಇಂದು ತಮ್ಮ ಮನೆಯ ಹಿರಿಯರನ್ನು ತೀರ್ಥಯಾತ್ರೆಗೆ (ಮುಖ್ಯವಾಗಿ ಕಾಶ್ಮೀರಕ್ಕೆ) ಕಳುಹಿಸುವ ಮುನ್ನ ಹಿಂದೂಗಳು ಎರಡೆರಡು ಬಾರಿ ಯೋಚಿಸುವಂತಾಗಿದೆ. ಇದನ್ನೆಲ್ಲ ಕೇಳಿಸಿಕೊಳ್ಳಲು ಅಹಿತವಾಗ ಬಹುದು. ಆದರೆ ಈ ವಿಷಯವಾಗಿ ಚರ್ಚೆ ನಡೆಯುವ ಅಗತ್ಯ ವಿದೆ. ಅದೇಕೆ ನಮ್ಮ ದೇಶ ಹೀಗಾಯಿತು? ಬಹುಸಂಖ್ಯಾತರಿಗೆ ತಮ್ಮ ಶ್ರದ್ಧಾಕೇಂದ್ರಗಳಿಗೆ ಹೋಗಲು ಅಸುರಕ್ಷಿತ ಭಾವ ಕಾಡು ವಂಥ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ಈ ವಿಷಯದಲ್ಲಿ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಅದ್ಹೇಗೆ ಸಂಪ್ರದಾಯವಾದ ಆಗುತ್ತದೆ?
ವಚ್ಯುì ಸಿಗ್ನಲರ್‌ಗಳ ಪ್ರಕಾರ ನೀವು ಹಿಂದೂ ಎನ್ನುವ ಪದ ಬಳಸಿದರೂ ನೀವು ಸಂಪ್ರದಾಯವಾದಿಗಳು! ಅವರು ಹೀಗೇಕೆ ಮಾಡುತ್ತಾರೆ ಎಂದು ಆಗಲೇ ಹೇಳಿದೆನಲ್ಲ? ಹಿಂದೂಗಳನ್ನು ಸಂಪ್ರದಾಯವಾದಿಗಳು ಎನ್ನುವ ಮೂಲಕ ತಮ್ಮನ್ನು ತಾವು ನೈತಿಕ ಗುಣಸಂಪನ್ನರೆಂದು ಬಿಂಬಿಸಿಕೊಳ್ಳುವುದು. ಈ ಗುಣ ತಮ್ಮಲ್ಲಿರುವುದರಿಂದ ತಮಗೆ ಯಾರ ಮೇಲಾದರೂ ಹರಿಹಾಯುವ ಅಧಿಕಾರವಿದೆಯೆಂದು ಇವರು ಭಾವಿಸುತ್ತಾರೆ. ತಾವು ಒಳ್ಳೆಯವರಾದ್ದರಿಂದ ಇನ್ನೊಬ್ಬರನ್ನು ಅವಮಾನಿಸುವ, ಅವರ ಜೊತೆಗೆ ವರಟಾಗಿ ವರ್ತಿಸುವ, ವ್ಯಂಗ್ಯ ಮಾಡುವ ಹಕ್ಕು ತಮಗೆ ಇದೆ ಎನ್ನುವ ಭ್ರಮೆಯಲ್ಲೇ ಬದುಕುವವರಿವರು.
ಬಹಳಷ್ಟು ಬಾರಿ ನಾವು ಇಂಥವರನ್ನು ನಕಲಿ ಉದಾರವಾದಿ ಗಳು, ಛದ್ಮ ಧರ್ಮನಿರಪೇಕ್ಷತಾವಾದಿಗಳು ಅಥವಾ ಬುದ್ಧಿಜೀವಿ ಗಳು ಎಂದು ತಪ್ಪಾಗಿ ಭಾವಿಸುತ್ತೇವೆ. ಸತ್ಯವೇನೆಂದರೆ, ಇವರು ನಕಲಿ ಉದಾರವಾದಿಗಳೂ ಅಲ್ಲ, ಬುದ್ಧಿಜೀವಿಗಳೂ ಅಲ್ಲ, ಇವರೆಲ್ಲ ವಚ್ಯುì ಸಿಗ್ನಲಿಂಗ್ ಮಾಡುವವರು(ತಾವು ನೈತಿಕವಾಗಿ ಅತ್ಯುತ್ತಮರೆಂದು ಬಿಂಬಿಸಿಕೊಳ್ಳುವವರು). ತಾವು ಬಹಳ ಆಧುನಿಕ ವಿಚಾರಧಾರೆಯುಳ್ಳವರು, ತಮಗೆ ಅಭಿವೃದ್ಧಿ ಬಹಳ ಮುಖ್ಯ ಎಂದು ತೋರಿಸಿಕೊಳ್ಳುವ ಮೂಲಕ ಜಗತ್ತಿನ ಕಣ್ಣಲ್ಲಿ ಮೆಚ್ಚುಗೆ ಗಳಿಸಲು ಬಯಸುವ ವರ್ಗದವರು ಇವರು. ಮತ್ತೂಂದು ಉದಾಹರಣೆ ನೋಡೋಣ. ಒಂದು ವೇಳೆ ನೀವೇನಾದರೂ””ಮಹಿಳೆಯರ ರಕ್ಷಣೆಗಾಗಿ ಕಾನುನು ಇರುವುದು ಒಳ್ಳೆಯದೇ. ಆದರೆ ಕೆಲವರು ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಲ ಪುರುಷರು ಯಾತನೆ ಅನುಭವಿಸುತ್ತಿದ್ದಾರೆ” ಎಂದು ಹೇಳಿದಿರಿ ಎಂದುಕೊಳ್ಳಿ. ಈ ಮಾತು ಸತ್ಯವೆನ್ನುವುದಕ್ಕೆ ಯಾವುದೇ ಒಬ್ಬ ವಕೀಲ ಅಥವಾ ಪೊಲೀಸ್ ಸಾಕ್ಷಿ ಒದಗಿಸಬಲ್ಲ ತಾನೆ?
ಆದರೆ ನೀವು ಹೀಗೆ ಹೇಳಿದ್ದೇ ತಡ ಈ ವಚ್ಯುì ಸಿಗ್ನಲರ್‌ಗಳು ಇಡೀ ದಿನ ನಿಮ್ಮ ಹಿಂದೆ ಬಿದ್ದು, ನಿಮ್ಮನ್ನು “ಮಹಿಳಾ ವಿರೋಧಿ’, “ಅಲ್ಪಜ್ಞಾನಿ’, “ತಾರತಮ್ಯವಾದಿ’ ಎಂದು ಹೀಗಳೆಯುತ್ತಾರೆ. ಹಾಗೆಂದು ಇವರ ವ್ಯಾಪ್ತಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಎಲ್ಲಾ ಕ್ಷೇತ್ರದ ವಿಚಾರದಲ್ಲೂ, ಎಲ್ಲಾ ವಿಷಯದಲ್ಲೂ ಈ ರೀತಿ ವರ್ತಿಸುತ್ತಾರೆ. ಒಂದು ದಿನವೂ ಇವರು ತಮ್ಮ ಟಿ.ವಿ.ಯಲ್ಲಿ ಮಹಿಳಾ ಕ್ರಿಕೆಟ್ ನೋಡಿರುವುದಿಲ್ಲ, ಆದರೂ ಮಹಿಳಾ ಕ್ರಿಕೆಟ್ ಬಗ್ಗೆ ದಂಡಿಯಾಗಿ ಮಾತನಾಡುತ್ತಾರೆ. ಇವರು ಕಮರ್ಷಿಯಲ್ ಸಿನೆಮಾದ ಬದಲು ಸ್ವತಂತ್ರ(ಇಂಡಿಪೆಂಡೆಂಟ್) ಸಿನೆಮಾಗಳೇ ಸರಿ ಎಂಬ ಸಮರ್ಥನೆಗೆ ನಿಲ್ಲುತ್ತಾರೆ. ಆದರೆ ಇಂಡಿಪೆಂಡೆಂಟ್ ಸಿನೆಮಾಗಳನ್ನು ಇವರು ಥಿಯೇಟರ್‌ಗೆ ಹೋಗಿ ಮಾತ್ರ ನೋಡು ವುದಿಲ್ಲ! ತಾವು ದಲಿತರು ಮತ್ತು ಮುಸಲ್ಮಾನರ ಪರ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಸತ್ಯವೇನೆಂದರೆ ಇವರಿಗೆ ದಲಿತರ ಬಗ್ಗೆಯಾಗಲಿ, ಮುಸಲ್ಮಾನರ ಬಗ್ಗೆಯಾಗಲಿ ಇವರಿಗೆ ನಿಜಕ್ಕೂ ಸಹಾನುಭೂತಿ ಇರುವುದಿಲ್ಲ. ಆದರೆ ಹೀಗೆ ಮಾಡುವುದರಿಂದ ಇಮೇಜ್ ಚೆನ್ನಾಗಿರುತ್ತದಲ್ಲ!
ಇಂಥವರಿಂದ ಸಾಧ್ಯವಾದಷ್ಟೂ ದೂರವಿರಿ. ಯಾವುದೇ ಕಾರಣಕ್ಕೂ ಇವರುಗಳ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವಾದ ಮಾಡಲು ಹೋಗಬೇಡಿ. ನೀವು ಎದುರಿಡುವ ಪ್ರಶ್ನೆಗಳಿಗೆ ಇವರು ಉತ್ತರಿಸುವುದೇ ಇಲ್ಲ. ಬದಲಾಗಿ, ತಾವು ಮಹಾನ್ ಸಂಪನ್ನರು ಎಂದು ತೋರಿಸಿಕೊಳ್ಳುವಂಥ ಹೇಳಿಕೆಗಳನ್ನೇ ಉತ್ತರದ ರೂಪದಲ್ಲಿ ಮುಂದಿಡುತ್ತಾರೆ. ವಚ್ಯುì ಸಿಗ್ನಲಿಂಗ್ ಎನ್ನುವುದು ಇಂದಿನ ಸೋಷಿಯಲ್ ಮೀಡಿಯಾ ಜಗತ್ತಿನ ಕಟು ವಾಸ್ತವ. ತಮ್ಮನ್ನು ಬಹಳಷ್ಟು ಜನ ಗಮನಿಸುತ್ತಿದ್ದಾರೆ (ಸೋಷಿಯಲ್ ಮೀಡಿಯಾದಲ್ಲಿ) ಎಂದು ಅರಿವಾದಾಕ್ಷಣ ತಮ್ಮ ಅಸಲಿ ಮುಖವನ್ನು ಬಚ್ಚಿಟ್ಟು ಎಲ್ಲರನ್ನೂ ಮೆಚ್ಚಿಸುವಂಥ ಮುಖವಾಡ ವನ್ನು ಧರಿಸಿಬಿಡುತ್ತಾರೆ.
ಈ ಗುಣಸಂಪನ್ನರಿಗೂ ಟ್ರೋಲ್‌ಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಟ್ರೋಲ್‌ಗಳಂತೆಯೇ ಇವರನ್ನೂ ಕಡೆಗಣಿಸುವುದೇ ಒಳ್ಳೆಯದು. ವಾಸ್ತವ ಏನಿದೆಯೋ ಅದನ್ನೇ ಎದುರಿಟ್ಟು ನಾವಿಂದು ಚರ್ಚೆ ಮಾಡಬೇಕಿದೆ. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು.
ಚೇತನ್ ಭಗತ್, ಲೇಖಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.