ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾಗಿರುವುದೇನು?


Team Udayavani, Nov 8, 2019, 5:06 AM IST

cc-51

ಸಾಂದರ್ಭಿಕ ಚಿತ್ರ

ಬೆಟ್ಟಗುಡ್ಡಗಳು, ಕೆರೆ, ನದಿಗಳು, ದ್ವೀಪಗಳು, ಸಮದ್ರ ಕಿನಾರೆಗಳಂತಹ ಭೌಗೋಳಿಕ ವೈಶಿಷ್ಟ್ಯಗಳು, ಐತಿಹಾಸಿಕ ಸ್ಥಳಗಳು, ನಿಸರ್ಗ ಧಾಮಗಳು, ವಿಶಿಷ್ಟ ರಚನೆ – ಸ್ಮಾರಕಗಳಂತಹ ಆಕರ್ಷಣಾ ಕೇಂದ್ರಗಳು, ಧಾರ್ಮಿಕ ಮತ್ತು ಪಾರಂಪರಿಕ ಮಹತ್ವದ ಸ್ಥಳಗಳು, ತಿಂಡಿ ತಿನಿಸುಗಳು, ಕಲಾ ಪ್ರಕಾರಗಳು, ವೇಷಭೂಷಣಗಳು ಇಂತಹ ಹತ್ತು ಹಲವು ವಿಸ್ಮಯ-ವಿಶೇಷತೆಗಳು ಪ್ರವಾಸೋದ್ಯಮದಲ್ಲಿ ಮಹತ್ವ ಪಡೆಯುತ್ತವೆ. ಒಂದೂರಿನಲ್ಲಿರುವ ವಿಶೇಷತೆಗಳಿಗೆ ಸಾಕ್ಷಿಯಾಗುವಂತೆ ಪ್ರವಾಸಿಗರ ಮನಸೆಳೆಯುವುದು, ಆಕರ್ಷಿತರಾದ ಪ್ರವಾಸಿಗರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವುದು, ಆದರಾತಿಥ್ಯದಿಂದ ಮನ ಗೆಲ್ಲುವುದೇ ಪ್ರವಾಸೋದ್ಯಮದ ಯಶಸ್ವಿನ ಗುಟ್ಟು. ಸಂದರ್ಶಿಸಿದವರ ಬಾಯ್ದೆರೆ ಪ್ರಚಾರದ ಮೂಲಕವೇ ಪ್ರವಾಸೋದ್ಯಮ ಮತ್ತಷ್ಟು ಎತ್ತರಕ್ಕೆ ಸಾಗಬಹುದಾಗಿದೆ.

ನೈಸರ್ಗಿಕ ಮತ್ತು ಪಾರಂಪರಿಕ ವಿಚಾರಗಳಲ್ಲಿ ಭಾರತದಲ್ಲಿ ಇರುವಷ್ಟು ವೈವಿಧ್ಯತೆ ಬೇರೆಲ್ಲಿಯೂ ಇರಲಿಕ್ಕಿಲ್ಲ. ದೇಶದ ಉದ್ದಗಲಕ್ಕೆ ಇಂತಹ ವಿಶೇಷತೆಗಳನ್ನು ಕಾಣಬಹುದು. ಇಂತಹ ವೈವಿಧ್ಯಗಳನ್ನು ಇಟ್ಟುಕೊಂಡು ಕ್ಷೇತ್ರಗಳನ್ನು ಜತೆ ಗೂಡಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಾಗಿದೆ. ಅಲೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತಿತರ ಎಲ್ಲಾ ಪ್ರಕಾರ ಗಳನ್ನು ಒಳಗೊಂಡಿರುವ ಮೆಡಿಕಲ್‌ ಸವಲತ್ತುಗಳು ಹೇರಳವಾಗಿ ರುವಲ್ಲಿ ಮೆಡಿಕಲ್‌ ಪ್ರವಾಸೋದ್ಯಮ ರೂಪಿಸ ಬಹುದಾಗಿದೆ. ಧಾರ್ಮಿಕ ಕೇಂದ್ರಗಳ ಸಂದರ್ಶನದೊಂದಿಗೇ ರಮಣೀಯ ಸ್ಥಳಗಳ ಭೇಟಿಗೂ ಪ್ರೋತ್ಸಾಹಿಸಬಹುದಾಗಿದೆ.

ಮಂಗಳೂರಿಗೆ ಪ್ರವಾಸ ಬರುವವರು ನಗರ ಮತ್ತು ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು, ಸಮುದ್ರ ಕಿನಾರೆ, ಪಿಲಿಕುಳದಂತಹ ಆಕರ್ಷಣೀಯ ಸ್ಥಳಗಳನ್ನು ಸಂದರ್ಶಿಸಬಹುದಾಗಿದೆ. ಧಾರ್ಮಿಕ ಸ್ಥಳಗಳ ಭೇಟಿಗೆ ಬೆಳಗಿನ ಸಮಯ ಪ್ರಶಸ್ತ. ಅದೇ ರೀತಿ ಸಮುದ್ರ ಕಿನಾರೆ ಭೇಟಿಗೆ ಸಂಜೆ ಸಮಯ ಸೂಕ್ತವಾದದ್ದು. ಆ ಪ್ರಕಾರ ಒಂದು ದಿನದ ಪ್ರವಾಸವಾದರೆ ಬೆಳಿಗ್ಗೆ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿ, ಬಳಿಕ ಪಿಲಿಕುಳಕ್ಕೆ ಭೇಟಿ ನೀಡಿ, ಸಾಯಂಕಾಲ ಸೋಮೇಶ್ವರ, ತಣ್ಣೀರುಬಾವಿ ಅಥವಾ ಪಣಂಬೂರು ಸಮುದ್ರ ತೀರಕ್ಕೆ ವಿಹಾರ ಕೈಗೊಳ್ಳಬಹುದು. ಎರಡು/ಮೂರು ದಿನಗಳ ಪ್ರವಾಸವಾದರೆ ಧರ್ಮಸ್ಥಳ, ಕಾರ್ಕಳ, ಮಣಿಪಾಲ, ಉಡುಪಿ, ಮಲ್ಪೆಗಳಿಗೆ ಭೇಟಿ ನೀಡಿ ಮಂಗಳೂರು,ಧರ್ಮಸ್ಥಳ,ಉಡುಪಿಗಳಲ್ಲಿ ವಸತಿ ಕೈಗೊಳ್ಳ ಬಹುದು. ಈ ಬಗ್ಗೆ ಬೇಕಾದ ವ್ಯವಸ್ಥೆಗಳನ್ನು ಪ್ರವಾಸಕ್ಕೆ ಸಂಬಂಧಪಟ್ಟ ಸಂಸ್ಥೆಗಳು ರೂಪಿಸಬಹದಾಗಿದೆ.

ಕರ್ನಾಟಕದ ನೆಲೆಯಲ್ಲಿ ಹೇಳುವುದಾದರೆ ಇಲ್ಲಿ ಸುಮಾರು 320 ಕಿ.ಮಿ. ಸಮುದ್ರ ತೀರಗಳಿ ವೆ. ನಮಗಿಂತಲೂ ಕಡಿಮೆ ತೀರವಿರುವ ಗೋವಾ, ಸಮುದ್ರ ತೀರವನ್ನು ಚೆನ್ನಾಗಿ ಬಳಸಿ ಪ್ರವಾಸೋದ್ಯದಲ್ಲಿ ಅದ್ಭುತ ಸಾಧನೆಗೈದಿದೆ. ಕೇರಳವಂತೂ ಈ ದಿಶೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಹಳಷ್ಟು ಮುಂದುವರಿದಿದೆ. ಕರ್ನಾಟಕದ ಎರಡನೇ ನಗರ ಎಂದು ಹೇಳಲ್ಪಡುವ ಮಂಗಳೂರಿನಲ್ಲಿಯೂ ಇಲ್ಲದ ಪಂಚತಾರ ಸವಲತ್ತುಗಳು ಕೇರಳದ ಬೇಕಲಕೋಟೆಯಲ್ಲಿವೆ. ದ.ಕ. ಸಮುದ್ರ ಕಿನಾರೆಯಲ್ಲಿ ಅನೇಕ ವರ್ಷಗಳಿಂದ ಪ್ರವಾಸೋದ್ಯಮದಲ್ಲಿ ತೊಡಗಿದ್ದು ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದಿರುವ ಉದ್ಯಮಿಯೋರ್ವರ ಪ್ರಕಾರ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಸರಕಾರದ ಪ್ರೋತ್ಸಾಹ ಏನೇನೋ ಸಾಲದು. ಈಗಲಾದರೂ ಹೊಸ ಸಿಆರ್‌ಝಡ್‌ ನಿಯಮಾವಳಿಗಳ ಪ್ರಕಾರ ಕರ್ನಾಟಕದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸಮುದ್ರಕಿನಾರೆ ಪ್ರವಾಸೋದ್ಯಮ ಬೆಳೆಸಲು ಏನೆಲ್ಲಾ ಸಾಧ್ಯವೋ ಅದನ್ನು ಮಾಡುವುದು ಅಗತ್ಯ. ನದಿಗಳನ್ನೂ ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸಬಹುದಾಗಿದೆ. ಊಟೋಪಚಾರದಲ್ಲಿ ಕರ್ನಾಟಕ ಅದರಲ್ಲಿಯೂ ಕರಾವಳಿಗರು ಮುಂಚೂಣಿಯಲ್ಲಿದ್ದಾರೆ. ಇಲ್ಲಿಯ ಬಗೆಬಗೆಯ ಅಡುಗೆ ತಿಂಡಿಗಳಿಗೆ ಪ್ರಚಾರ ನೀಡಿ ಪ್ರವಾಸೋದ್ಯಮದ ಅಭಿವೃದ್ದಿಯಲ್ಲಿ ಪೂರಕವಾಗುವಂತೆ ಮಾಡ‌ಬಹುದಾಗಿದೆ.

ಭಾರತ ವಿಶ್ವದಲ್ಲೇ ಏಳನೇ ದೊಡ್ಡ ದೇಶ. ಪ್ರವಾಸೋದ್ಯಮ ಬೆಳೆಸುವ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಎಲ್ಲಾ ಅನುಕೂಲಗಳು ನಮ್ಮಲ್ಲಿವೆ. ವರ್ಷದ ಹಲವಾರು ತಿಂಗಳುಗಳಲ್ಲಿ ಹವೆಯೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಬೇಕಾಗಿರುವುದು ಸರಕಾರದ ಸಮರ್ಪಕ ಯೋಜನೆಗಳು ಮತ್ತು ಜನರ ಸಹಭಾಗಿತ್ವ. ಈ ರೀತಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ದೇಶದಾದ್ಯಂತ ಕೋಟಿಗಟ್ಟಲೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು. ಆರ್ಥಿಕ ಹಿಂಜರಿತದಿಂದ ಸೊರಗಿದ ಉದ್ಯೋಗ ಮಾರುಕಟ್ಟೆಗೆ ಈ ರೂಪದಲ್ಲಿ ಪುನಶ್ಚೇತನ ನೀಡಬಹುದು.

ತಮ್ಮ ಜಿಡಿಪಿಗೆ ದೊಡ್ಡ ಪಾಲು ಪ್ರವಾಸೋದ್ಯಮ ಕ್ಷೇತ್ರದಿಂದ ಸಲ್ಲುವುದಕ್ಕೆ ಒತ್ತು ನೀಡಿರುವ ಹಲವಾರು ದೇಶಗಳಿವೆ. ಅಂತಹ ಹೆಚ್ಚಿನ ದೇಶಗಳಲ್ಲಿ ಅತಿಥಿ ದೇವೋಭವ ಅಕ್ಷರಶಃ ಪಾಲನೆಯಾಗುತ್ತದೆ. ಅಲ್ಲಿನ ಕಾನೂನು ಕಟ್ಟಳೆಗಳು, ನೀತಿ ನಿಯಮಗಳು ಪ್ರವಾಸಿಗರ ರಕ್ಷಣೆಗೆ, ಆತಿಥ್ಯಕ್ಕೆ ಇನ್ನಿಲ್ಲದ ಮಹತ್ವ ನೀಡುತ್ತವೆ. ಮರುಭೂಮಿಯಾಗಿರುವ ದುಬೈ ತನ್ನ ಶಾಪಿಂಗ್‌ ಫೆಸ್ಟಿವಲ್‌ ವೇಳೆ ಮಾತ್ರವಲ್ಲದೆ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಲ್ಲಿಯ ಸ್ವತ್ಛತೆ, ನಾಜೂಕಾದ ರಸ್ತೆಗಳು, ಮೋಸವಿಲ್ಲದ ವ್ಯವಹಾರ ಎಲ್ಲಕ್ಕೂ ಮಿಗಿಲಾಗಿ ಎಲ್ಲರಿಗೂ ಅನ್ವಯವಾಗುವ ಕಠಿಣ ಕಾನೂನು ಕ್ರಮಗಳು ಇತ್ಯಾದಿಗಳನ್ನು ಅನುಕರಣೀಯ. ಇನ್ನೊಂದು ಉದಾಹರಣೆ ನೀಡುವುದಾದರೆ ಥಾಯ್ಲೆಂಡಿನ ಪುಟ್ಟ ದ್ವೀಪ ಫ‌ುಕೆತ್‌. ವಿಸ್ತೀರ್ಣ ಕೇವಲ 576 ಚ.ಕಿ.ಮೀ. ಆಕರ್ಷಕ ಸಮುದ್ರ ಕಿನಾರೆ, ಬೆಟ್ಟಗುಡ್ಡಗಳನ್ನು ಒಳಗೊಂಡ ಪ್ರದೇಶ. ಅಲ್ಲಿ ಆಹಾರ ವಿಹಾರ, ಮೋಜಿಗೆ ಪ್ರಾಮುಖ್ಯತೆ ಇರುವುದು °ಫ‌ುಕೆತ್‌ಗೆ ಭೇಟಿ ನೀಡಿರುವ ಪ್ರವಾಸಿಗರು ಮೆಚ್ಚಿಕೊಳ್ಳುತ್ತಾರೆ. ಅಲ್ಲಿಯ ಜನಸಂಖ್ಯೆಯ ಅರ್ಧದಷ್ಟು ಪಾಲು ಪ್ರವಾಸೋದ್ಯಮದಲ್ಲಿ ತೊಡಗಿದ್ದು ಪ್ರವಾಸೋದ್ಯಮ ಆ ಪ್ರದೇಶದ ಅಭಿವೃದ್ಧಿಯಲ್ಲಿ ವಹಿಸಿರುವ ಪಾತ್ರವನ್ನು ಗಮನಿಸಬಹುದು. ಮಧ್ಯರಾತ್ರಿ ಕಳೆದರೂ ಫ‌ುಕೆತ್‌ನ ಬೀದಿಗಳಲ್ಲಿ ಸ್ತ್ರೀಯರು ನಿರ್ಭೀತಿಯಿಂದ ನಡೆದಾಡಬಹುದೆಂದಾದರೆ ಅಲ್ಲಿಯ ಕಾನೂನು ಮತ್ತು ವ್ಯವಸ್ಥೆ ಪಾಲನೆಯ ಮಟ್ಟವನ್ನು ತಿಳಿಸುತ್ತದೆ.

ಆದರೆ ನಮ್ಮಲ್ಲಿ? ಬೆಂಗಳೂರಿನಂತಹ ಮಹಾನಗರಗಳಲಿ ಘಟಿಸಿದ ಕೆಲವೊಂದು ಅಹಿತಕರ ಘಟನೆಗಳಿಂದಾಗಿ ಮಧ್ಯರಾತ್ರಿ ಬಿಡಿ ಹಗಲು ಹೊತ್ತಿನಲ್ಲೇ ದೂರದೂರಿನ ಪ್ರಯಾಣದ ಬಳಿಕ ವಿಮಾನ / ರೈಲು ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ಹಿಂತಿರುಗಿ ಬರಲು ಒಬ್ಬಂಟಿ ಸ್ತ್ರೀಯರು ಹೆದರುವ ಪರಿಸ್ಥಿತಿ ಇದೆಯಲ್ಲವೇ? ಇಂತಹ ಸನ್ನಿವೇಶದಲ್ಲಿ ಪ್ರವಾಸೋದ್ಯಮದ ಮಾತೆಲ್ಲಿ ಬಂತು?

ಯಾವುದೇ ಪ್ರವಾಸಿ ಸ್ಥಳ ಪ್ರವೇಶಿಸುವಾಗ ಪ್ರವಾಸಿಗರು ಮೊದಲು ಭೇಟಿಯಾಗುವುದು ಅಟೋರಿಕ್ಷಾ ಅಥವಾ ಟ್ಯಾಕ್ಸಿಗಳನ್ನು. ಅಂತಹ ವಾಹನಗಳ ಚಾಲಕರು ಒಂದರ್ಥದಲ್ಲಿ ಆಯಾ ಪ್ರದೇಶಗಳ ಸ್ವಾಗತಕಾರರು ಅಥವಾ ರಾಯಭಾರಿಗಳೆಂದರೂ ತಪ್ಪಲ್ಲ. ಇಂತಹ ವರು ಪ್ರವಾಸಿಗರೊಡನೆ ಅನುಚಿತವಾಗಿ ವರ್ತಿಸಿದರೆ, ಮೀಟರ್‌ ಹಚ್ಚದೆ ಅಥವಾ ಹಚ್ಚಿಯೂ ನಿಗದಿಗಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡಿದರೆ, ಹೆಚ್ಚಿನ ಸಂಪಾದನೆಯ ಆಸೆಯಿಂದ ಸುತ್ತಾಡಿಸಿದರೆ, ಬಾಡಿಗೆ ದೊರಕಿಸಿಕೊಳ್ಳುವ ವಿಚಾರದಲ್ಲಿ ಘರ್ಷಣೆಗೆ ತೊಡಗಿದರೆ ಆ ಪ್ರದೇಶದ ಘನತೆ ಮತ್ತು ಪ್ರಾಮಾಣಿಕತೆಗೆ ಮಸಿ ಬಳಿದಂತಾ ಗುತ್ತದೆ. ಪ್ರವಾಸಿಗರ ಮನಮುಟ್ಟುವ ಇನ್ನೊಂದು ಅಂಶ ಭೇಟಿ ನೀಡಿದ ಪ್ರದೇಶಗಳ ರಸ್ತೆಗಳು. ವಿದೇಶಿ ಪ್ರವಾಸಿಗರು ಐಷಾರಾಮಿ ಹಡಗುಗಳ ಮೂಲಕ ನವಮಂಗಳೂರು ಬಂದರಿಗೆ ಆಗಮಿಸುತ್ತಾರೆ. ಅಂತಹವರಲ್ಲಿ ಕೆಲವರು ನಗರ ಸುತ್ತಾಟ ನಡೆಸುತ್ತಾರೆ. ಅಂತಹ ಪ್ರವಾಸಿಗರಿಗೆ, ಅದರಲ್ಲಿಯೂ ಪ್ರಯಾಣಕ್ಕಾಗಿ ಅಟೋರಿಕ್ಷಾಗಳನ್ನು ಆಯುುªಕೊಂಡವರಿಗೆ ನಮ್ಮ ಕೆಟ್ಟ ರಸ್ತೆಗಳು ಯಾವ ಸಂದೇಶ ನೀಡುತ್ತವೆ? ಈ ಸುಧಾರಿತ ಕಾಲದಲ್ಲಿಯೂ ಮಳೆಗಾಲ ಎಂಬ ಸಬೂಬು ನೀಡಿದರಾಯಿತೇ? ಎಲ್ಲಾ ಕಾಲದಲ್ಲೂ ಹಾಳಾಗದ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕಲ್ಲವೇ?

ಊರು, ರಸ್ತೆಗಳು, ಕಟ್ಟಡ, ಸ್ಮಾರಕ ಎಲ್ಲೆಡೆಯಲ್ಲಿಯೂ ಅವುಗಳ ಹೆಸರುಗಳಿರಬೇಕಿರುವುದು ಅಗತ್ಯ. ಬಹಳಷ್ಟು ಕಡೆ ಇದಕ್ಕೆ ಗಮನವನ್ನೇ ನೀಡಲಾಗುತ್ತಿಲ್ಲ. ರೈಲ್ವೇ ನಿಲ್ದಾಣಗಳ ಮಾದರಿಯಲ್ಲಿ ಕನಿಷ್ಟ ಪೇಟೆಯ ಆರಂಭ ಮತ್ತು ಅಂತ್ಯದಲ್ಲಿ ಆಯಾ ಊರಿನ ಹೆಸರನ್ನು ದೊಡ್ಡಕ್ಷರಗಳಲ್ಲಿ ಕಾಣಿಸಬೇಕು. ಊರಿನ ಚರಿತ್ರೆ ಅಥವಾ ಮಹತ್ವವನ್ನು ತಿಳಿಸುವ ಮಾಹಿತಿಯನ್ನು ಚುಟುಕಾಗಿ ಪ್ರದರ್ಶಿ ಸುವುದೂ ಅಗತ್ಯ. ಎಲ್ಲೆಲ್ಲಿ ಏನೇನಿದೆ, ಅಲ್ಲಿಗೆ ಯಾವ ರೀತಿ ತಲಪಬಹುದು ಎಂಬಂತಹ ವಿಚಾರಗಳನ್ನು ತಿಳಿಸಿದ ಮಾತ್ರಕ್ಕೆ ಪ್ರವಾಸೋದ್ಯಮ ಅಭಿವೃದ್ದಿಯಾಗುವುದಿಲ್ಲ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕಾನೂನು ಮತ್ತು ಶಿಸ್ತು ಪರಿಪಾಲನೆ, ವಂಚಿನೆಯಿಲ್ಲದ ವ್ಯವಹಾರ, ಸ್ವತ್ಛತೆ ಇಂತಹ ವಿಚಾರಗಳೂ ಪ್ರವಾಸೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸರಕಾರದ ನೀತಿಯಲ್ಲಿ ಇಂತಹ ಅಂಶ‌ಗಳಿಗೂ ಮಹತ್ವವಿರಲಿ.

– ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.