ಬಡತನಕ್ಕೂ ಉಗ್ರವಾದಕ್ಕೂ ಏನು ಸಂಬಂಧ?
Team Udayavani, Aug 28, 2018, 6:00 AM IST
ಅನೇಕ ಸಂದರ್ಭಗಳಲ್ಲಿ ಅಧಿಕ ಶಿಕ್ಷಣವೇ ಹೆಚ್ಚು ಭಯೋತ್ಪಾದನಾ ಪ್ರಸರಣಕ್ಕೆ ಕಾರಣವಾಗಿದೆ ಎನ್ನುವುದು ಅರ್ಥವಾಗುತ್ತದೆ. ಒಸಾಮಾ ಬಿನ್ ಲಾಡೆನ್ ಕೆಮಿಕಲ್ ಇಂಜಿನಿಯರಿಂಗ್ ಓದಿದ್ದ, ಇಸ್ಲಾಮಿಕ್ ಸ್ಟೇಟ್(ಐಸಿಸ್) ನಾಯಕ ಅಬು ಬಕರ್ ಅಲ್ ಬಗ್ಧಾದಿ ಇಸ್ಲಾಮಿಕ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ ಮಾಡಿದ್ದಾನೆ. ಅಮೆರಿಕದ ಅವಳಿ ಕಟ್ಟಡಗಳ ವಿದ್ವಂಸದ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾದ ಅಯ್ಮನ್ ಅಲ್-ಜವಾಹಿರಿ ಕಾಯ್ರೋ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿದ್ದಾನೆ (ವೈದ್ಯರು ಮತ್ತು ಇಸ್ಲಾಮಿಕ್ ವಿದ್ವಾಂಸರ ಕುಟುಂಬದಿಂದ ಬಂದ ವ್ಯಕ್ತಿಯೀತ. ಇನ್ನು “ಟೈಂ ಸ್ಕ್ವೇರ್’ ಬಾಂಬರ್ ಎಂದು ಕುಖ್ಯಾತನಾದ ಪಾಕಿಸ್ತಾನ ಮೂಲದ ಫೈಜಲ್ ಶೆಹಜಾದ್ ಎಂಬಿಎ ಪದವೀಧರನಾಗಿದ್ದರೆ, ಓಮರ್ ಸಯೀದ್ ಶೇಖ್ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ನಲ್ಲಿ ಸಂಖ್ಯಾಶಾಸ್ತ್ರ ಓದುತ್ತಿದ್ದ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಬುಸೇರಿಯಸ್ ಸಮ್ಮರ್ ಸ್ಕೂಲ್‌ನಲ್ಲಿ ಮಾತನಾಡುತ್ತಾ “”ಜನರಿಗೆ 21ನೇ ಶತಮಾನದ ಮುನ್ನೋಟವನ್ನು ನೀವು ಕೊಡದೇಹೋದರೆ, ಅದನ್ನು ಇನ್ನೊಬ್ಬರು ಕೊಟ್ಟುಬಿಡುತ್ತಾರೆ. ವಿಕಾಸ ಪ್ರಕ್ರಿಯೆಯಿಂದ ಒಂದು ಬೃಹತ್ ಸಮೂಹವನ್ನು ಹೊರಗಿಟ್ಟರೆ ಎದುರಾಗಬಹುದಾದ ನಿಜ ಅಪಾಯವಿದು” ಎಂದರು.
ಅಂದರೆ, ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ದೂರವಿಟ್ಟಿದೆ, ಇದು ಅಪಾಯಕ್ಕೆ ಹಾದಿಮಾಡಿ ಕೊಡಬಹುದು ಎಂಬ ಧಾಟಿಯಲ್ಲಿ ಮಾತನಾಡಿದರು ರಾಹುಲ್. ಇಷ್ಟಕ್ಕೇ ನಿಲ್ಲದೇ ತಮ್ಮ ಮಾತುಗಳನ್ನು ರುಜುವಾತು ಮಾಡುವುದಕ್ಕಾಗಿ ಅವರು ಹೇಗೆ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಸಂಘಟನೆಯ ಉಗಮವಾಯಿತು ಎನ್ನುವ ಬಗ್ಗೆಯೂ ತಮ್ಮ ಥಿಯರಿ ಮುಂದಿಟ್ಟುಬಿಟ್ಟರು.
ಆದರೆ ನರೇಂದ್ರ ಮೋದಿ ಸರ್ಕಾರವು ಅಭಿವೃದ್ಧಿ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರನ್ನು ದೂರವಿಟ್ಟಿದೆ ಎನ್ನುವ ತಮ್ಮ ವಾದವನ್ನು ಸಮರ್ಥಿಸುವಂಥ ಯಾವ ಅಂಕಿಅಂಶವನ್ನೂ ರಾಹುಲ್ ಎದುರಿಡಲಿಲ್ಲ. ಹೀಗಾಗಿ ಅವರ ವಾದವೇ ಅನುಮಾನಾಸ್ಪ ದವಾಗಿದೆ. ಇದರ ಬಗ್ಗೆ ಇನ್ನೊಂದು ಪ್ರತ್ಯೇಕ ಲೇಖನವನ್ನೇ ಬರೆಯಬೇಕಾದೀತು. “ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದರಿಂದಲೇ ಐಸಿಸ್ ಉಗ್ರರು ಹುಟ್ಟಿಕೊಂಡರು’ ಎಂದು ರಾಹುಲ್ ಭಾವಿಸುತ್ತಾರೆ ಎನ್ನುವುದು ನಾವಿಲ್ಲಿ ತಲೆಕೆಡಿಸಿಕೊಳ್ಳಲೇಬೇಕಾದ ವಿಚಾರ. ಅಂದರೆ- ಭಾರತದ ಪ್ರಮುಖ ವಿರೋಧ ಪಕ್ಷದ ಅಧ್ಯಕ್ಷರು ಇಸ್ಲಾಮಿಸ್ಟ್ ಉಗ್ರವಾದವನ್ನು ತರ್ಕಬದ್ಧಗೊಳಿಸಲು ಪ್ರಯತ್ನಿಸಿ ದ್ದಾರೆ ಎಂದಾಯಿತು!
ಈ ವಿಷಯದಲ್ಲಿ ಅವರನ್ನು ಪ್ರಶ್ನಿಸಲೇಬೇಕಿದೆ. ಹಾಗಿದ್ದರೆ, ಜೀವನದಲ್ಲಿ ಕಳೆದುಕೊಳ್ಳಲು ಇನ್ನೇನೂ ಉಳಿದಿರದ ವ್ಯಕ್ತಿಗಳಿಂದ ಉಗ್ರ ಕೃತ್ಯಗಳು ನಡೆಯುತ್ತವೇನು? ಒಂದು ವೇಳೆ ನೀವು ಉಗ್ರವಾದವನ್ನು ನಿಹಿಲಿಸಂ ದೃಷ್ಟಿಕೋನದಲ್ಲಿ (ನಿರಾಕರಣ ವಾದ) ನೋಡುತ್ತೀರಿ ಎಂದಾದರೆ ಈ ಮಾತನ್ನು ಒಪ್ಪಬಹುದು. ಆದರೆ ಉಗ್ರವಾದದ ನಿಜವಾದ ಗುರುತು-ಚಹರೆ ಇದಲ್ಲವಲ್ಲ? ಸತ್ಯವೇನೆಂದರೆ, ಉಗ್ರವಾದವೆನ್ನುವುದು ಸ್ಪಷ್ಟ ತಂತ್ರಗಾರಿಕೆಗಳು, ರಣತಂತ್ರಗಳು, ನಿಯಮಗಳನ್ನು ಒಳಗೊಂಡಿರುವ ರಾಜಕಾರಣ ವಿದ್ದಂತೆ. ಈ ಕಾರಣಕ್ಕಾಗಿಯೇ ಉಗ್ರವಾದವನ್ನು ಬಡತನ, ನಿರುದ್ಯೋಗ ಮತ್ತು ಅವಿದ್ಯಾವಂತರೊಂದಿಗೆ ಬೆಸೆಯುವುದು ನಿಜಕ್ಕೂ ಅಪ್ರಾಮಾಣಿಕ ಕೆಲಸವಾಗುತ್ತದೆ. ಏಕೆಂದರೆ ಇಸ್ಲಾಮಿಕ್ ಅಥವಾ ನಕ್ಸಲ್ ಐಡಿಯಾಲಜಿಗಳನ್ನು ರೊಮ್ಯಾಂಟಿಸೈಸ್ ಮಾಡುವುದಕ್ಕೆ ಆಗುವುದಿಲ್ಲ, ಈಗ ತೀವ್ರವಾದಕ್ಕೆ/ ಉಗ್ರವಾದಕ್ಕೆ ಮತ್ತು ಶಿಕ್ಷಣದ ಕೊರತೆಗೂ ಸಂಬಂಧವಿಲ್ಲ.
ಜಗತ್ತಿನ ಅತಿ ಕುಖ್ಯಾತ ಉಗ್ರರ ಹಿನ್ನೆಲೆಯನ್ನು ಗಮನಿಸಿದಾಗ ಶಿಕ್ಷಣದ ಕೊರತೆಗೂ ಇಸ್ಲಾಮಿಕ್ ಮೂಲಭೂತವಾದದ ಪ್ರಸರಣಕ್ಕೂ ಹೆಚ್ಚು ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅಧಿಕ ಶಿಕ್ಷಣವೇ ಹೆಚ್ಚು ಭಯೋತ್ಪಾದನಾ ಪ್ರಸರಣಕ್ಕೆ ಕಾರಣವಾಗಿದೆ ಎನ್ನುವುದು ಅರ್ಥವಾಗುತ್ತದೆ. ಒಸಾಮಾ ಬಿನ್ ಲಾಡೆನ್ ಕೆಮಿಕಲ್ ಇಂಜಿನಿಯರಿಂಗ್ ಓದಿದ್ದ, ಇಸ್ಲಾಮಿಕ್ ಸ್ಟೇಟ್(ಐಸಿಸ್) ನಾಯಕ ಅಬು ಬಕರ್ ಅಲ್ ಬಗ್ಧಾದಿ ಇಸ್ಲಾಮಿಕ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ ಮಾಡಿದ್ದಾನೆ. ಅಮೆರಿಕದ ಅವಳಿ ಕಟ್ಟಡಗಳ ವಿದ್ವಂಸದ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾದ ಅಯ್ಮನ್ ಅಲ್-ಜವಾಹಿರಿ ಕಾಯ್ರೋ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿದ್ದಾನೆ (ವೈದ್ಯರು ಮತ್ತು ಇಸ್ಲಾಮಿಕ್ ವಿದ್ವಾಂಸರ ಕುಟುಂಬದಿಂದ ಬಂದ ವ್ಯಕ್ತಿಯೀತ.), ಕ್ಯಾಂಪ್ ಚಾಪಾನ್‌ನ ಆತ್ಮಾಹುತಿ ಬಾಬರ್ ಹಮಾಮ್-ಖಲೀಲ್ ಅಲ್-ಬಲವಿ ಕೂಡ ವೈದ್ಯಕೀಯ ಪದವಿ ಪಡೆದಿದ್ದ. ಇನ್ನು “ಟೈಂ ಸ್ಕ್ವೇರ್’ ಬಾಂಬರ್ ಎಂದು ಕುಖ್ಯಾತನಾದ ಪಾಕಿಸ್ತಾನ ಮೂಲದ ಫೈಜಲ್ ಶೆಹಜಾದ್ ಎಂಬಿಎ ಪದವೀಧರನಾಗಿದ್ದರೆ, ಅದೇ ದಾಳಿಯಲ್ಲಿ ಭಾಗಿಯಾದ ಓಮರ್ ಸಯೀದ್ ಶೇಖ್ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಸಂಖ್ಯಾಶಾಸ್ತ್ರ ಓದುತ್ತಿದ್ದ.
2016ರಲ್ಲಿ, ಅಂದರೆ, ಐಸಿಸ್ ಉಗ್ರರ ಕ್ರೌರ್ಯದ ಅಟ್ಟಹಾಸ ಮುಗಿಲುಮುಟ್ಟಿದ್ದ ಸಮಯದಲ್ಲಿ ವಿಶ್ವ ಬ್ಯಾಂಕ್ ಒಂದು ಅಧ್ಯಯನ ನಡೆಸಿತು. ಐಸಿಸ್‌ನಿಂದ ಸೋರಿಕೆಯಾದ ದಾಖಲೆಗಳ ಆಧಾರದಲ್ಲಿ ಈ ಅಧ್ಯಯನ ವರದಿಯನ್ನು ತಯ್ನಾರಿಸಲಾಯಿತು. ಆಗ ತಿಳಿದದ್ದೇನೆಂದರೆ, ಐಸಿಸ್ ಉಗ್ರ ಸಂಘಟನೆಯಲ್ಲಿ ಸದಸ್ಯರಾಗಿರುವವರಲ್ಲಿ ಬಹುಪಾಲು ಉಗ್ರರು ಸುಶಿಕ್ಷಿತರು ಮತ್ತು ಆರ್ಥಿಕವಾಗಿ ಸ್ಥಿತಿವಂತರು ಎನ್ನುವುದು. ಅಲ್ಲದೇ ಆತ್ಮಹತ್ಯಾ ಬಾಂಬರ್‌ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಮತ್ತು ಹಣವಂತರೇ ಇದ್ದªರು. ಸುಮಾರು 3800ಕ್ಕೂ ಹೆಚ್ಚು ಐಸಿಸ್ ಉಗ್ರರ ಮೇಲೆ ನಡೆದದ್ದು ಅಧ್ಯಯನ. 3800 ಉಗ್ರರಲ್ಲಿ ಕೇವಲ 15 ಪ್ರತಿಶತ ಉಗ್ರರು ಮಾತ್ರ ಹೈಸ್ಕೂಲ್‌ನಿಂದ ಹೊರಬಿದ್ದವರು ಎನ್ನುವುದು ತಿಳಿಯಿತು.
ವಿಶ್ವಬ್ಯಾಂಕ್‌ನ ಈ ವರದಿಯು “ಯುವಕರು ಹಿಂಸಾತ್ಮಕ ತೀವ್ರವಾದದತ್ತ ಹೊರಳುವುದಕ್ಕೆ ಅಸಮಾನತೆಯಾಗಲಿ ಅಥವಾ ಬಡತನವಾಗಲಿ ಕಾರಣವಲ್ಲ’ ಎಂದು ಸ್ಪಷ್ಟವಾಗಿ ಹೇಳಿತು. ಒಬ್ಬ ವ್ಯಕ್ತಿ ಸುಶಿಕ್ಷಿತನಾದಾಗ, ಸ್ಥಿತಿವಂತನಾದಾಗ ಚಿಕ್ಕ ಪುಟ್ಟ ಆರ್ಥಿಕ ಜಂಜಾಟಗಳಿಂದ ಅವನು ಮುಕ್ತನಾಗಿಬಿಡುತ್ತಾನೆ. ಆಗ ಅವನಿಗೆ ತೀವ್ರವಾದದತ್ತ ಗಮನ ಹರಿಸಲು, ಅದಕ್ಕೆ ಪೂರ್ಣ ಶರಣಾಗಲು ಅವಕಾಶ ಸಿಕ್ಕುಬಿಡುತ್ತದೆ ಎನ್ನುವುದೇ ವಾಸ್ತವ. ಬೇಕಿದ್ದರೆ ಕೋಬಡ್ ಗಾಂಡಿ ಮತ್ತು ಅನುರಾಧಾ ಗಾಂಡಿಯ ವಿಷಯವನ್ನೇ ನೋಡಿ. ಇವರಿಬ್ಬರೂ ಅತ್ಯಂತ ಸ್ಥಿತಿವಂತ ಹಿನ್ನೆಲೆಯಿಂದಲೇ ಬಂದವರು. ಇಬ್ಬರೂ ಅತ್ಯುತ್ತಮ ಶಿಕ್ಷಣವನ್ನು ಪಡೆದರು. ಆದರೆ ಮುಂದೆ ಆದದ್ದೇನು? ಈ ಜೋಡಿ ಮುಂದೆ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಸಶಸ್ತ್ರ ನಕ್ಸಲ್ ಚಟುವಟಿಕೆಗಳ ಮುಂಚೂಣಿ ಚಹರೆಯಾದರು.
ಭಾರತದಲ್ಲಿ ಇಸ್ಲಾಮಿಕ್ ಆತಂಕವಾದ ಮತ್ತು ನಕ್ಸಲೀಯ ಚಟುವಟಿಕೆಗಳನ್ನು ನಿಲ್ಲಿಸುವುದು ಅತ್ಯಂತ ಜಟಿಲವಾದ ಕೆಲಸ, ಇದಕ್ಕೆ, ಸೈನಿಕರ ಬದಲಾಗಿ ಹೈಲೆವೆಲ್ ಇಂಟಲಿಜೆನ್ಸ್‌ನ ಅಗತ್ಯ ವಿರುತ್ತದೆ. ಉದಾಹರಣೆಗೆ, ಜಗತ್ತಿನಾದ್ಯಂತ ನಡೆಯುತ್ತಿರುವ ಉಗ್ರ ಚಟುವಟಿಕೆಗಿಂತ ಕಾಶ್ಮೀರದಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಆಂದೋಲನ ಭಿನ್ನವೇನೂ ಅಲ್ಲ. ಬಡತನ ಅಥವಾ ಶಿಕ್ಷಣದ ಕೊರತೆಗೂ ಮತ್ತು ಉಗ್ರವಾದವೆಂಬ “ರಾಜಕೀಯ’ಕ್ಕೂ ಸಂಬಂಧವಿಲ್ಲ. ಸತ್ಯವೇನೆಂದರೆ ತೀವ್ರ ಜಾಗೃತ ಸ್ಥಿತಿ ಮತ್ತು ಲಕ್ಷ್ಯದೆಡೆಗಿನ ಬೌದ್ಧಿಕ ಸಮ್ಮತಿಯಿಂದಾಗಿ ಸುಶಿಕ್ಷಿತ ಯುವಕರೇ ಹೆಚ್ಚಾಗಿ ಉಗ್ರವಾದದತ್ತ ಹೆಚ್ಚಿನ ಸೆಳೆತಕ್ಕೆ ಒಳಗಾಗುತ್ತಿದ್ದಾರೆ.
ಈಗ ಯೋಚಿಸಿ ನೋಡಿ, ರಾಹುಲ್ ಗಾಂಧಿಯವರು ತಿಳಿದೋ ಅಥವಾ ತಿಳಿಯದೆಯೋ “ಭಾರತ್ ತೇರೇ ತುಕ್ದೇ ಹೋಂಗೇ’ (ಭಾರತ ನಿನ್ನ ತುಂಡಾಗುತ್ತದೆ) ಎನ್ನುವ ಘೋಷಣೆಯನ್ನು ಸಮರ್ಥಿಸುತ್ತಿದ್ದಾರೆ ಎಂದನ್ನಿಸುತ್ತಿಲ್ಲವೇ? 2010ರಲ್ಲಿ ಎಕನಾಮಿಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು ಹೀಗೆ ಹೇಳಿತ್ತು: “ದಿ ಸೋರ್ಡ್ ಈಸ್ ಮೈಟೀಯರ್ ವಿತ್ ಪೆನ್’ ಎಂದು.
ಅಂದರೆ, ಲೇಖನಿಯೊಂದಿಗಿರುವ ಕತ್ತಿ ಇನ್ನೂ ಹರಿತವಿರುತ್ತದೆ!
(ಕೃಪೆ: ಸ್ವರಾಜ್ಯ)
ಪ್ರತ್ಯಾಶಾ ರಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.