ಶಿಕ್ಷಣದ ಅಧೋಗತಿಗೆ ಉರು ಹೊಡೆಯುವ ಸಂಸ್ಕೃತಿ ಕಾರಣವೇ?


Team Udayavani, Jul 12, 2017, 9:45 AM IST

ANKAN-1.jpg

ಉತ್ತಮ ಅಂಕಗಳಿಸುವವರ ಸಂಖ್ಯೆ ಹೆಚ್ಚುತ್ತಿರುವ ಹೊರತಾಗಿಯೂ ಭಾರತಕ್ಕೆ “ಉದ್ಯೋಗಾರ್ಹತೆಯಿಲ್ಲದ ಸುಶಿಕ್ಷಿತರ’ ಸಮಸ್ಯೆ ಬಾಧಿಸುತ್ತಿದೆ. ಕೆಲವು ಸಂಶೋಧನಾ ವರದಿಗಳ ಪ್ರಕಾರ, ಭಾರತದ ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕಾಲೇಜುಗಳ ಪ್ರತೀ ನಾಲ್ಕು ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಉದ್ಯೋಗಕ್ಕೆ ಅರ್ಹನಾಗಿರುತ್ತಾನೆ. ಈ ಸಮಸ್ಯೆಗೆ ಕಾರಣವೇನು?

ಭಾರತದ ಬಹುತೇಕ ಪದವಿಪೂರ್ವ ಕಾಲೇಜುಗಳು ಅಡ್ಮಿಷನ್‌ ಪ್ರಕ್ರಿಯೆಯ ಕೊನೆಯ ಹಂತವನ್ನು ತಲುಪಿರುವ ಸಮಯವಿದು. ಹತ್ತನೇ ತರಗತಿ ಪರೀಕ್ಷೆ ಮುಗಿಸಿರುವ ನೂರಾರು-ಸಾವಿರಾರು ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ, ಅವರ ಚಿಂತಾಗ್ರಸ್ತ ಪೋಷಕರಿಗೆ ತಮ್ಮ ಹಣೆಬರಹ ಹೇಗಿರಲಿದೆ ಎಂಬ ಅಂದಾಜಂತೂ ಈ ಹೊತ್ತಿಗೆ ಸಿಕ್ಕೇ ಸಿಕ್ಕಿರುತ್ತದೆ. 

ಶಾಲೆಯ ಮೆಟ್ಟಿಲು ದಾಟಿರುವ ವಿದ್ಯಾರ್ಥಿಗಳಲ್ಲಿ ತಮಗೆ ಇಷ್ಟವಾದ ಕಾಲೇಜು ಮತ್ತು ಕೋರ್ಸುಗಳನ್ನು ಪಡೆದ ವಿನ್ನರ್‌ಗಳೂ ಇದ್ದಾರೆ, ಅವರ ಜೊತೆಗೆ ಕಡಿಮೆ ಅಂಕ ಗಳಿಸಿ ಅನಿವಾರ್ಯವಾಗಿ ತಮ್ಮ ಯೋಜನೆಯನ್ನು ಬದಲಿಸಿ ಕೊಂಡು ಇನ್ನೊಂದು ಕೋರ್ಸಿಗೆ ಸೇರುವ ವಿದ್ಯಾರ್ಥಿಗಳೂ ಇದ್ದಾರೆ. ಇದರಲ್ಲೂ ಒಂದು ವಿದ್ಯಾರ್ಥಿ ವರ್ಗವಿದೆ. ಯಾವುದೋ ಕಾರಣಕ್ಕಾಗಿ ಇವರೆಲ್ಲ ತಮ್ಮ ವಿದ್ಯಾಭ್ಯಾಸ ವನ್ನು ಮೊಟಕುಗೊಳಿಸಬೇಕಾಗುತ್ತದೆ. ಇನ್ನೊಂದು ಗುಂಪು ವಿದೇಶಗಳಲ್ಲಿನ ದುಬಾರಿ ಮತ್ತು ಕಣ್ಣುಕೋರೈಸುವ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತದೆ. 

ಸತ್ಯವೇನೆಂದರೆ ಭಾರತದಲ್ಲಿ ಹೈಸ್ಕೂಲ್‌ನಿಂದ ಕಾಲೇಜು ಪ್ರವೇಶಿಸುವ ಪ್ರಕ್ರಿಯೆ ನಿರಾಶಾದಾಯಕ ಹಂತಕ್ಕೆ ಬಂದು ತಲುಪಿದೆ. ಯುವಜನರ ಸಂಖ್ಯೆಗೆ ತಕ್ಕಷ್ಟು ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ದೇಶದಲ್ಲಿಲ್ಲ ಎನ್ನುವ ಕಾರಣಕ್ಕಾಗಿಯೇ ಅಲ್ಲ, ಅದರ ಜೊತೆ ಜೊತೆಗೇ, ನಮ್ಮ ಶಾಲೆಗಳು ಯಾವ ರೀತಿಯ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆ ಎನ್ನುವ ಕಾರಣಕ್ಕಾಗಿಯೂ ಕೂಡ. ಪರೀಕ್ಷೆಗಳಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ನೋಡುವುದಾದರೆ ಇಂದು ಬಹುತೇಕ ವಿದ್ಯಾರ್ಥಿಗಳು 3 ತಾಸಿನ ಕಠಿಣತಮ ಪರೀಕ್ಷೆಯಲ್ಲಿ ಕಡಿಮೆ ತಪ್ಪು ಮಾಡಿದ್ದಾರೆ ಎಂದೇ ಅನಿಸುತ್ತದೆ. ಆದರೆ ನನ್ನ ತಲೆಮಾರಿ ನವರಿಗೆ ಈ ಸಂಗತಿ ನಿಜಕ್ಕೂ ಆಶ್ಚರ್ಯ ತರಿಸುವಂತಿದೆ. 

ಸಾಹಿತ್ಯ, ಇತಿಹಾಸ ಮತ್ತು ಸಮಾಜ ವಿಜ್ಞಾನದಂಥ ವಿಷಯ ಗಳಲ್ಲಿ ಅದ್ಹೇಗೆ ವಿದ್ಯಾರ್ಥಿಗಳು ಈ ಪಾಟಿ ಅಂಕ ಗಳಿಸುತ್ತಿ
ದ್ದಾರೆ ಎನ್ನುವ ಗೊಂದಲ ನನ್ನ ತಲೆಮಾರಿನ ಜನರಿಗೆ. ಜೊತೆ ಜೊತೆಗೆ ಈ ವಿಷಯಗಳು ಅದೆಷ್ಟು ವಸ್ತುನಿಷ್ಠವಿರಬೇಕು 
ಎನ್ನುವ ವಿಸ್ಮಯ ಪ್ರಶ್ನೆಯೂ ಮೂಡುತ್ತದೆ. ಆದರೆ ಉತ್ತಮ ಅಂಕ ಗಳಿಸುವವರ ಸಂಖ್ಯೆ ಹೆಚ್ಚುತ್ತಿರುವ ಹೊರತಾಗಿಯೂ ಭಾರತಕ್ಕೆ “ಉದ್ಯೋಗಾರ್ಹತೆಯಿಲ್ಲದ ಸುಶಿಕ್ಷಿತರ’ ಸಮಸ್ಯೆ ಬಾಧಿಸುತ್ತಿದೆ. ಕೆಲವು ಸಂಶೋಧನಾ ವರದಿಗಳ ಪ್ರಕಾರ, ಭಾರತದ ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕಾಲೇಜುಗಳ ಪ್ರತೀ ನಾಲ್ಕು ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಉದ್ಯೋಗಾರ್ಹನಾಗಿರು ತ್ತಾನೆ. ಇನ್ನು ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ಪರಿಗಣಿಸಿದಾಗ ಈ ಪ್ರಮಾಣ ಹತ್ತರಲ್ಲಿ ಒಂದಕ್ಕೆ ಬಂದು ನಿಲ್ಲುತ್ತದೆ! ಅಂದರೆ ಹತ್ತು ಜನರಲ್ಲಿ ಒಬ್ಬನಿಗೆ ಮಾತ್ರ ಉದ್ಯೋಗ ವಲಯವನ್ನು ಪ್ರವೇಶಿಸುವ ಕೌಶಲಗಳಿರುತ್ತವೆ. ಇಂದು ನಮ್ಮ ಅನೇಕಾನೇಕ ಎಂಜಿನಿಯರ್‌ಗಳು ಮತ್ತು ದೇಶದ ವೈವಿಧ್ಯಮಯ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಹೊರಬರುವವ ರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥಯವಿರುವುದಿಲ್ಲ, ಅವರ ಭಾಷಾ ಕೌಶಲ್ಯ ಉತ್ತಮವಾಗಿರುವುದಿಲ್ಲ ಮತ್ತು “ಗ್ರಹಿಕೆ’/ಕಲಿಕೆ ಎಂಬ ಮೂಲಭೂತ ಅಂಶವೇ ಅವರಲ್ಲಿ ದುರ್ಬಲವಾಗಿರುತ್ತದೆ. ಸತ್ಯವೇನೆಂದರೆ ಅವರಲ್ಲಿನ ಇಂಥ ಅಸಮರ್ಪಕತೆ ಮತ್ತು ವೈಫ‌ಲ್ಯದ ಮೂಲವಿರುವುದು ಕಳಪೆ ಶಿಕ್ಷಣ ವ್ಯವಸ್ಥೆಯಲ್ಲಿ. ಇದನ್ನೆಲ್ಲ ನೋಡಿದಾಗ ಕಳಪೆ ಶಿಕ್ಷಣ ಪಡೆ ಯುವುದಕ್ಕಿಂತ ಶಿಕ್ಷಣ ಪಡೆಯದಿರುವುದೇ ಎಷ್ಟೋ ವಾಸಿ ಎಂದೆನಿಸದೇ ಇರದು!

ದೇಶದ ನೀತಿ ನಿರೂಪಕರು ಮತ್ತು ಕಾರ್ಪೊರೇಟ್‌ ಮುಖ್ಯ ಸ್ಥರು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬೃಹತ್‌ ಪರಿವರ್ತನೆ ಯಾಗುವ ಅನಿವಾರ್ಯತೆ ಎಷ್ಟಿದೆ ಎನ್ನುವುದರ ಬಗ್ಗೆ ಬಹಳ ಚರ್ಚಿಸತೊಡಗಿದ್ದಾರೆ. ಪಠ್ಯ ಪರಿಷ್ಕರಣೆ, ಜಗತ್ತಿನ ಅತ್ಯುತ್ತಮ ಶಿಕ್ಷಣ ಮಾದರಿಗಳನ್ನು ಅಳವಡಿಸಿಕೊಳ್ಳುವುದು, ಉದ್ಯಮ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಸಂಪರ್ಕ ಜಾಲವನ್ನು ವಿಸ್ತರಿಸುವುದು, ಸಾಫ್ಟ್ ಸ್ಕಿಲ್‌ ಟ್ರೇನಿಂಗ್‌ ಇತ್ಯಾದಿ ಬದಲಾವಣೆಗಳ ಮೂಲಕ ಭಾರತೀಯ ಯುವ ಜನತೆಯಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ತುರ್ತಿದೆ ಎನ್ನುತ್ತಿದ್ದಾರೆ ಇವರೆಲ್ಲ. ಆದರೆ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿರುವ ಮೂಲ ಸಮಸ್ಯೆಯನ್ನು ಬಗೆಹರಿಸದಿದ್ದರೆ ಈ ಯಾವ ಬದಲಾವಣೆಗಳು ಪರಿಣಾಮಕಾರಿಯಾಗುವುದಿಲ್ಲ. ಏನು ಆ ಸಮಸ್ಯೆ? ಅದೇ, ಉರು ಹೊಡೆಯುವುದು! ನಾವು ವರ್ಷಗಳಿಂದ ನಮ್ಮ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಸೃಷ್ಟಿಸಿ-ಬೆಳೆಸಿಕೊಂಡು ಬಂದಿರುವ ಶಿಕ್ಷಣ ಪದ್ಧತಿಯಿದೆಯಲ್ಲ ಅದು ಜ್ಞಾನಕ್ಕೆ ಮಹತ್ವ ನೀಡುವುದೇ ಇಲ್ಲ. ಬದಲಾಗಿ ಉರು ಹೊಡೆದು ಪಠ್ಯದಲ್ಲಿರುವುದನ್ನೆಲ್ಲ ಪರೀಕ್ಷೆಯಲ್ಲಿ ಬರೆಯುವುದಕ್ಕೇ ಹೆಚ್ಚು ಮನ್ನಣೆ ಕೊಡುತ್ತಾ ಬರುತ್ತಿದೆ. ಒಂದು ಮಗು ಶಾಲೆಗೆ ಪ್ರವೇಶಿಸುತ್ತಿದ್ದಂತೆಯೇ, ಆಕೆ/ಅವನಿಗೆ ಜ್ಞಾನಸಂಪಾದನೆಗಿಂತಲೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದೇ ಬಹಳ ಮುಖ್ಯ ಎಂದು ಕಲಿಸುತ್ತಾ ಬರಲಾಗುತ್ತಿದೆ. ಇಂಥ ವಾತಾವರಣದಲ್ಲಿ ಬೆಳೆಯುವ ಮಗು ಕೂಡ ಜ್ಞಾನಕ್ಕಿಂತ ಅಂಕವೇ ದೊಡ್ಡದು ಎಂಬ ನಂಬಿಕೆಯನ್ನು ಅಂತರ್ಗತಮಾಡಿಕೊಂಡು ಬಿಡುತ್ತದೆ. ಉದಾಹರಣೆಗೆ, ಇತಿಹಾಸದಲ್ಲಿ ಆಸಕಿ ¤ಯಿರುವ 17 ವರ್ಷದ ಹುಡುನಿದ್ದಾನೆ ಎಂದುಕೊಳ್ಳಿ. ಆತನಿಗೆ ಇತಿಹಾಸದಲ್ಲಿ ಎಷ್ಟು ಆಸಕ್ತಿಯಿದೆ ಎನ್ನುವುದನ್ನು ಆತನಿಗೆ ಐತಿಹಾಸಿಕ ಘಟನಾವಳಿಗಳ ದಿನಾಂಕ ನೆನಪಿದೆಯೇ ಇಲ್ಲವೇ ಎನ್ನುವುದರ ಮೇಲೆಯೇ ಅಳೆಯಲಾಗುತ್ತಿದೆಯೇ ಹೊರತು, ಇತಿಹಾಸವನ್ನು ಹಿನ್ನೆಲೆ ಯಲ್ಲಿಟ್ಟುಕೊಂಡು ಇಂದಿನ ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಪರಿಣಾಮಗಳ ವಿಶ್ಲೇಷಣೆ ಮಾಡುವ ಸಾಮರ್ಥಯ ಅವನಲ್ಲಿ ಎಷ್ಟಿದೆ ಎನ್ನುವುದನ್ನು ಯಾರೂ ನೋಡುವುದೇ ಇಲ್ಲ. ಎಂಜಿನಿಯರ್‌ ಅಥವಾ ವಿಜ್ಞಾನಿಯಾಗಬೇಕೆಂದು ಕನಸು ಕಾಣುತ್ತಿರುವವನಿಗೆ ಗಣಿತ ಮತ್ತು ವೈಜ್ಞಾನಿಕ ಸೂತ್ರಗಳನ್ನು ಕಲಿಸಿಕೊಡುತ್ತೇವಲ್ಲ, ಅದು ಆತನ/ ಆಕೆಯ ಸುತ್ತಲಿನ ಜಗತ್ತಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದರೆ ಈ ಸೂತ್ರಗಳಿಂದ ಆಗುವ ಉಪಯೋಗವಾದರೂ ಏನು? 

ಈ ಕಾರಣಕ್ಕಾಗಿಯೇ ಯುನೈಟೆಡ್‌ ಕಿಂಗ್ಡಮ್‌, ಅಮೆರಿಕ ಸಂಸ್ಥಾನ, ಸ್ವಿಜರ್‌ಲೆಂಡ್‌, ಜರ್ಮನಿ, ಫ್ರಾನ್ಸ್‌, ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಸೇರಿದಂತೆ ಓಇಸಿಡಿ ಅಡಿ ಬರುವ ಇನ್ನಿತರ ರಾಷ್ಟ್ರಗಳ ಸಾಮಾನ್ಯ ಶಾಲೆ-ಕಾಲೇಜುಗಳ ಮುಂದೆ, ಭಾರತದ ಅತ್ಯುತ್ತಮ ಶಾಲೆ-ಕಾಲೇಜುಗಳೂ ಥಂಡಾ ಹೊಡೆದುಬಿಡುತ್ತವೆ! 

ಹೀಗಾಗಿಯೇ ಈಗ ಯಾರೂ ಕೂಡ ಭಾರತದ ಯುವಕರ ವಿಷಯವಾಗಿ ಮಾತನಾಡುವಾಗ ಉತ್ಪಾದಕತೆಯ ವಿಚಾರದ ಬಗ್ಗೆ ಸೊಲ್ಲೆತ್ತುವುದೇ ಇಲ್ಲ. ಮುಂದಿನ ದಿನಗಳಲ್ಲಿ ಬೃಹತ್‌ ಪರಿಣಾಮಗಳನ್ನು ತಂದೊಡ್ಡಲಿರುವ ಸಮಸ್ಯೆ ಎಂದೇ ಈಗ ಯುವ ಜನಾಂಗದ ಹೆಚ್ಚುತ್ತಿರುವ ಸಂಖ್ಯೆಯನ್ನು ನಾವು ವಿಶ್ಲೇಷಿಸುತ್ತಿರುವುದು. 

ಉರುಹೊಡೆಯುವ ಸಂಸ್ಕೃತಿಯ ಮೇಲೆ ಬೃಹತ್‌ ಸಮರ ಸಾರಲು ಸಮಯ ಎದುರಾಗಿದೆ. ಆದರೆ ಈ ಯುದ್ಧದಲ್ಲಿ 
ಗೆಲುವು ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಉರುಹೊಡೆಯುವ ಪರಿಪಾಠದ ಮೇಲೆ ಯುದ್ಧ ಸಾರುವುದು ಎಂದರೆ ಅದರಿಂದಾಗಿ ಆರ್ಥಿಕ ಸವಾಲನ್ನು ಎದುರಿ ಸಲೂ ದೇಶ ಸಜ್ಜಾಗಬೇಕಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ ಈ ವಿಷಯ ರಾಜಕೀಯವಾಗಿಯೂ ಜನಪ್ರಿಯವಾದುದಲ್ಲ. ಇಂಥ ಬದಲಾವಣೆಯು ಧೈರ್ಯ ಮತ್ತು ಬೃಹತ್‌ ಪರಿಶ್ರಮವನ್ನು ನಮ್ಮಿಂದ ನಿರೀಕ್ಷಿಸು ತ್ತದೆ. ಇಂಥ ಧೈರ್ಯ ಮತ್ತು ಪರಿಶ್ರಮವನ್ನು ನಾವು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಬದಲಾಯಿಸುವ ಹೋರಾಟ 
ದಲ್ಲಿ ತೋರಿಸಿದ್ದೆವು. 

ಶಿಕ್ಷಣ ಹಕ್ಕು ಕಾಯ್ದೆಯ ಮಹತ್ವಾಕಾಂಕ್ಷೆಗಳನ್ನು ಪುನರ್‌ವ್ಯಾಖ್ಯಾನಿಸಲು ಇದು ಸುಸಮಯ. ಕೇವಲ ಶಿಕ್ಷಣವಷ್ಟೇ ಅಲ್ಲ, ಗುಣಮಟ್ಟದ ಶಿಕ್ಷಣ ನಮ್ಮ ಮೂಲಭೂತ ಹಕ್ಕಾಗಬೇಕು. 

(ಲೇಖಕರು ಹಿರಿಯ ಪತ್ರಕರ್ತರು)
 ರಾಜೇಶ್‌ ಮಹಾಪಾತ್ರ

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.