ಸೆ‌ಮಿಸ್ಟರ್‌ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಎಲ್ಲಿದೆ ಲಾಭ?


Team Udayavani, May 11, 2017, 9:14 AM IST

11-ANKANA-1.jpg

ವಿದ್ಯಾರ್ಥಿಗಳು ಒಮ್ಮೆ ಪದವಿ ತರಗತಿಗೆ ಪ್ರವೇಶ ಪಡೆದರೆ ಆರನೆಯ ಸೆಮಿಸ್ಟರ್‌ ಬರೆದು ಮುಗಿಸುವವರೆಗೂ ವಿಶ್ರಾಂತಿ ಇರುವುದಿಲ್ಲ. ಮೂರು ವರ್ಷ ನಿರಂತರವಾಗಿ ತರಗತಿ, ಅಸೈನ್‌ಮೆಂಟ್‌, ವರ್ಗ ಪರೀಕ್ಷೆಗಳು, ವಾರ್ಷಿಕ ಪರೀಕ್ಷೆಗಳು ಎಂಬ ವರ್ತುಲದಲ್ಲಿ ಸುತ್ತುವುದೇ ಆಗುತ್ತದೆ. ಹೀಗಾಗಿ, ಯಾವುದೇ ವಿಷಯದ ಮೇಲೂ ಅವರಿಗೆ ಆಳವಾದ ಜ್ಞಾನ ಸಿಗುವುದೇ ಇಲ್ಲ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರದ ವಿಷಯಗಳಲ್ಲಿ ಸೆಮಿಸ್ಟರ್‌ ಪದ್ಧತಿಯನ್ನು  ಅಳವಡಿಸಿಕೊಂಡು ಒಂದು ದಶಕ ಪೂರ್ತಿಗೊಂಡಿರುವ ಸಂದರ್ಭದಲ್ಲಿ ಈ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕನ ಮಾಡುವುದು ಅವಶ್ಯಕ. ಶಿಕ್ಷಣ ತಜ್ಞರ ಶಿಫಾರಸಿನಂತೆ; ತಾಂತ್ರಿಕ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಂತೆ ಸಾಂಪ್ರದಾಯಿಕ ಶಿಕ್ಷಣಗಳಾದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೂ ಸೆಮಿಸ್ಟರ್‌ ಪದ್ಧತಿಯನ್ನು ಜಾರಿಗೆ ತಂದಿರುವುದು ಎಷ್ಟು ಸಮಂಜಸ? ಸೆಮಿಸ್ಟರ್‌ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ ಎರಡು ಪರೀಕ್ಷೆಗಳು ನಡೆಯುತ್ತಿವೆ. ಪ್ರತಿ ಸೆಮಿಸ್ಟರಿಗೆ ಸರಿ ಸುಮಾರು ನಾಲ್ಕು ತಿಂಗಳು  ತರಗತಿಗಳನ್ನು ನಡೆಸಿ, ನಿಗದಿ ಪಡಿಸಿದ ಪಠ್ಯಕ್ರಮವನ್ನು ಮುಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ಗಳನ್ನು  ಕೊಡಬೇಕು. ಇನ್ನು ಇದೇ ಅವಧಿಯಲ್ಲಿ ಎರಡು ವರ್ಗ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಶಿಕ್ಷಕರು ತಮ್ಮ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಕೊಡಬೇಕು. ಬೋಧನಾ ಅವಧಿ ಮುಗಿದ ಒಂದು ವಾರದಲ್ಲಿಯೇ ವಿಶ್ವವಿದ್ಯಾಲಯದ ಪರೀಕ್ಷೆಗಳು ನಡೆಯುತ್ತವೆ. 

ಈ ವ್ಯವಸ್ಥೆಯಲ್ಲಿ ಕೆಲವು ಪ್ರಯೋಜನಗಳಿವೆ. ವಿದ್ಯಾರ್ಥಿಗಳಿಗೆ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಇದು ಪ್ರೋತ್ಸಾಹಿಸುತ್ತದೆ. ನಾಲ್ಕು ತಿಂಗಳ ಅವಧಿ ಮುಗಿದ ತಕ್ಷಣವೇ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಬರೆಯುವುದರಿಂದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಮರ್ಥರಾಗುತ್ತಾರೆ. ಪಠ್ಯಕ್ರಮ ಕಡಿಮೆ ಇರುವುದರಿಂದಲೂ ವಿದ್ಯಾರ್ಥಿಗಳಿಗೆ ಅನಕೂಲವೇ. ಸೆಮಿಸ್ಟರ್‌ ಪದ್ಧªತಿ ಬರುವುದಕ್ಕಿಂತ ಪೂರ್ವದಲ್ಲಿ, ಅಂದರೆ, ವಾರ್ಷಿಕ ಪರೀಕ್ಷಾ ಪದ್ಧªತಿಯಲ್ಲಿ  ವಿಶ್ವವಿದ್ಯಾಲಯಗಳ ಪರೀಕ್ಷಾ ಫಲಿತಾಂಶ ಸರಾಸರಿ ಶೇಕಡಾ ಐವತ್ತರ ಆಸು ಪಾಸಿನಲ್ಲಿರುತ್ತಿತ್ತು. ಸೆಮಿಸ್ಟರ್‌ ವ್ಯವಸ್ಥೆಯಲ್ಲಿ ಶೇಕಡಾ 70 ರಿಂದ  80ರ ವರೆಗೆ ಫಲಿತಾಂಶ ಬರುತ್ತಿರುವುದನ್ನು ಕಾಣುತ್ತೇವೆ. 

ಆದರೆ ಈ ಪದ್ಧತಿಯಲ್ಲಿ ಹಲವು ದೋಷಗಳನ್ನು ಗುರುತಿಸಬಹುದು.  ವಿದ್ಯಾರ್ಥಿಗಳು ಒಮ್ಮೆ ಪದವಿ ತರಗತಿಗೆ ಪ್ರವೇಶ ಪಡೆದರೆ ಆರನೆಯ ಸೆಮಿಸ್ಟರ್‌ ಬರೆದು ಮುಗಿಸುವವರೆಗೂ ವಿಶ್ರಾಂತಿ ಇರುವುದಿಲ್ಲ. ಮೂರು ವರ್ಷ ನಿರಂತರವಾಗಿ ತರಗತಿ, ಅಸೈನ್‌ಮೆಂಟ್‌ಗಳು, ವರ್ಗ ಪರೀಕ್ಷೆಗಳು, ವಾರ್ಷಿಕ ಪರೀಕ್ಷೆಗಳು ಎಂಬ ವರ್ತುಲದಲ್ಲಿ ಸುತ್ತುವುದೇ ಆಗುತ್ತದೆ. ಪದವಿ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಾಕಷ್ಟು ಬೆಳೆದಿರುತ್ತಾರೆ. ಈ ಹಂತದಲ್ಲಿ ಯಾವುದೇ ವಿಷಯದ ಆಳವಾದ ಜಾnನವನ್ನು ಅವರಿಗೆ ಬೋಧಿಸಿದರೆ ಒಳಿತು. ಕೇವಲ ವಿಷಯದ ಮೇಲ್ಮೆ„ಯನ್ನು ಅರಿತರೆ ಅವರು ಪರಿಪೂರ್ಣರಾಗುವುದಿಲ್ಲ. ಕಲಾ ವಿಭಾಗದ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್‌, ಹಿಂದಿ. ಐಚ್ಛಿಕ ವಿಷಯಗಳಾದ ರಾಜನೀತಿಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ. ವಿಜ್ಞಾನದ ವಿಷಯಗಳಾದ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ. ವಾಣಿಜ್ಯಶಾಸ್ತ್ರದ ವಿಷಯಗಳಾದ ಲೆಕ್ಕಶಾಸ್ತ್ರ, ಕಂಪನಿಯ ಕಾರ್ಯನಿರ್ವಹಣಾಶಾಸ್ತ್ರ ಅಧುನಿಕ ಬ್ಯಾಂಕಿಂಗ್‌ ಇತ್ಯಾದಿ. ಈ ಎಲ್ಲಾ ವಿಷಯಗಳ ಮೂಲ ಪರಿಭಾವನೆಗಳನ್ನು ಮಾಧ್ಯಮಿಕ ಶಾಲಾ ಹಂತ ಮತ್ತು ಪಿ.ಯು.ಸಿಯಲ್ಲಿ ಕಲಿಸಲಾಗಿರುತ್ತದೆ. ವಿದ್ಯಾರ್ಥಿಯು ಪದವಿ ಮಟ್ಟದಲ್ಲಿ ಆ ವಿಷಯದ ಪರಿಪೂರ್ಣ ಜಾnನ ಪಡೆದುಕೊಳ್ಳುವ ರೀತಿಯಲ್ಲಿ ಅಧ್ಯಯನ ಮಾಡಬೇಕು. ಸೆಮಿಸ್ಟರ್‌ ಪದ್ಧತಿಯಲ್ಲಿ  ಇದು ಸಾಧ್ಯವಾಗುತ್ತಿಲ್ಲ! ಹೀಗಾಗಿ ಒಬ್ಬ ವಿದ್ಯಾರ್ಥಿಗೆ ಪದವಿ ಪ್ರಮಾಣ ಪತ್ರ ಸಿಗುತ್ತದೆಯೇ ಹೊರತು ಜ್ಞಾನವಲ್ಲ.

ಕಲಾ ಪದವಿಯ ಕೆಲವು ವಿಷಯಗಳಲ್ಲಿ ವಾರ್ಷಿಕ ಪರೀûಾ ಪದ್ಧªತಿಯಲ್ಲಿದ್ದ (ನಾನ್‌ ಸೆಮಿಸ್ಟರ್‌) ಪಠ್ಯಕ್ರಮವನ್ನು ಎರಡು ಭಾಗ ಮಾಡಿ ಸೆಮಿಸ್ಟರ್‌ಗಳಲ್ಲಿ ಹಂಚಿರುವುದು ಕಂಡು ಬರುತ್ತದೆ. ಒಂದು ವಿಷಯದ ಪಠ್ಯಕ್ರಮದಲ್ಲಿ ಒಂದು ವರ್ಗಕ್ಕೆ ಹತ್ತು ಅಧ್ಯಾಯಗಳಿದ್ದರೆ ಅದನ್ನು ವಿಂಗಡಿಸಿ ತಲಾ ಐದು ಅಧ್ಯಾಯಗಳನ್ನು ಮುಂದಿನ ಸೆಮಿಸ್ಟರ್‌ಗೆ ನಿಗದಿ ಪಡಿಸಿದ್ದನ್ನು ಕಾಣುತ್ತೇವೆ. ಆದರೆ ವಾಣಿಜ್ಯಶಾಸ್ತ್ರದಲ್ಲಿ ನಾನ್‌ ಸೆಮಿಸ್ಟರ್‌ ಪದ್ಧತಿಯಲ್ಲಿ ಒಬ್ಬ ವಿದ್ಯಾರ್ಥಿ ಬಿ.ಕಾಂ ಪದವಿ ಪಡೆಯುವ ಹಂತದಲ್ಲಿ ಕೇವಲ 12 ತಲೆ ಬರಹಗಳಿದ್ದ ವಿಷಯಗಳನ್ನು ಕಲಿಯುತ್ತಿದ್ದ. ಸೆಮಿಸ್ಟರ್‌ನಲ್ಲಿ 20 ತಲೆಬರಹಗಳಿರುವ ವಿಷಯಗಳನ್ನು ಕಲಿಯಬೇಕಾಗಿದೆ. ಪ್ರತಿ ಸೆಮಿಸ್ಟರ್‌ನಲ್ಲಿ ಏಳು ವಿಷಯಗಳಂತೆ ಒಟ್ಟು ಆರು ಸೆಮಿಸ್ಟರ್‌ಗಳಲ್ಲಿ 4,200 ಅಂಕಗಳಿಗೆ ಪರೀಕ್ಷೆ ಬರೆದು ಬಿ.ಕಾಂ ಪದವಿ ಪಡೆಯಬೇಕಾಗುತ್ತದೆ. ಕಲಾ ವಿಭಾಗದಲ್ಲಿ 3,800 ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತದೆ, ಒಬ್ಬ ಬಿ.ಕಾಂ ವಿದ್ಯಾರ್ಥಿ ಯಾವ ವಿಷಯ ಎಷ್ಟು ಕಲಿತೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಒತ್ತಟ್ಟಿಗಿರಲ್ಲಿ, ಅವರಿಗೆ ಪದವಿ  ಪೂರೈಸಿದ ನಂತರ ಯಾವ ಸೆಮಿಸ್ಟರ್‌ನ‌ಲ್ಲಿ ಯಾವ ವಿಷಯಗಳಿವೆ ಎಂಬುದನ್ನು ನೆನೆಪಿಡುವುದೂ ಕಷ್ಟವಾಗುತ್ತಿದೆ! 

ಇನ್ನು, ಸೆಮಿಸ್ಟರ್‌ ಪದ್ಧತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಭಾಷಣ, ಗಾಯನ ಸ್ಪರ್ಧೆ, ನಾಟಕ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ  ಕಡಿಮೆ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಕೇವಲ ಪಠ್ಯವನ್ನು ಕಲಿಯುವುದರಿಂದ ಸಾಧ್ಯವಿಲ್ಲ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆದರೂ ಕೇವಲ ಕಾಟಾಚಾರದ ಕ್ರಿಯೆಗಳಾಗಿವೆಯಷ್ಟೆ! 

ಈಗ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವಾರ್ಷಿಕ  ವೇಳಾಪಟ್ಟಿಯತ್ತ ಗಮನ ಹರಿಸೋಣ. ಜೂನ್‌ ಮಧ್ಯ ಭಾಗದಲ್ಲಿ ಅಥವಾ ಜುಲೈ ಮೊದಲನೆ ವಾರದಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ. ಅಕ್ಟೋಬರ್‌ ತಿಂಗಳ ಮಧ್ಯೆ /ಅಂತಿಮಕ್ಕೆ ತರಗತಿಗಳು ಮುಕ್ತಾಯವಾಗುತ್ತವೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ವಿಷಯದಲ್ಲಿ ಬರುವ ಐದರಿಂದ ಆರು ಅಧ್ಯಾಯಗಳನ್ನು ಬೋಧಿಸಬೇಕು. ವಿವರವಾಗಿ ಬೋಧನೆಯಲ್ಲಿ ತೊಡಗಿದರೆ ಐದು ಅಧ್ಯಾಯಗಳ ಪೈಕಿ ಮೂರು ಅಧ್ಯಾಯಗಳನ್ನು ಮುಗಿಸಲೂ ಆಗುವುದಿಲ್ಲ. ಜೂನ್‌ ನಡುವೆ/ಜುಲೈ ಮೊದಲನೆಯ ವಾರ ವರ್ಗಗಳು ಪ್ರಾರಂಭವಾದರೂ ಬಹಳಷ್ಟು ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ಕಾರ್ಯದಲ್ಲಿರುತ್ತಾರೆ! ಅವರು ಮೌಲ್ಯಮಾಪನ ಮುಗಿಸಿಕೊಂಡು ಬರುವುದು ಕಾಲೇಜು ಪ್ರಾರಂಭವಾದ ಒಂದು ವಾರದಿಂದ ಹಿಡಿದು 15 ದಿನದ ನಂತರವೇ. ಹೀಗಾಗಿ ಶಿಕ್ಷಕರಿಗೆ ತಮಗೆ ತೃಪ್ತಿಯಾಗುವಂತೆ ಪಾಠ ಮಾಡಲು ಸಮಯಾವಕಾಶವೇ ಇಲ್ಲ. ಮೊದಲನೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ವಿವಿಯ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಶಿಕ್ಷಕರು ಆ ಪರೀಕ್ಷೆ‌ ಕಾರ್ಯಗಳನ್ನು ಮಾಡಬೇಕು, ಪರೀಕ್ಷೆಗಳು ಮುಕ್ತಾಯ ಆಗುವ ಪೂರ್ವದಲ್ಲಿಯೇ ಮೌಲ್ಯಮಾಪನಕ್ಕೆ ಕರೆ ಬರುತ್ತದೆ! ವಾಪಸ್‌ ಬಂದ ನಂತರ ಮತ್ತೆ ಅವಸರ ಅವಸರವಾಗಿ ಪಾಠ, ಸೆಮಿನಾರು,  ಅಸೈನ್‌ಮೆಂಟ್‌, ವರ್ಗ ಪರೀಕ್ಷೆಗಳು, ಆ ಪರೀಕ್ಷೆಗಳ ಮೌಲ್ಯಮಾಪನ ಮತ್ತೆ ಒಂದು ಚಕ್ರ ಮುಕ್ತಾಯ! 

ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಯುಜಿಸಿ ವೇತನ ಪಡೆದು ಆರಾಮದಿಂದ ಇರುತ್ತಾರೆ, ಅವರಿಗೆ ರಜಾ ಅವಧಿ ಸಾಕಷ್ಟು ಇರುತ್ತದೆ ಎಂದು ಜನ ಸಾಮಾನ್ಯರು ತಿಳಿದಿರುತ್ತಾರೆ. ಆದರೆ ಸೆಮಿಸ್ಟರ್‌ ಪದ್ಧತಿ ಜಾರಿಗೆ ಬಂದಾಗಿನಿಂದ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಪ್ರಾಧ್ಯಾಪಕರು ರಜಾ ರಹಿತ ಉದ್ಯೋಗಿಗಳಾಗಿದ್ದಾರೆ. ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಲ್ಲಿ ಸೆಮಿಸ್ಟರ್‌ ವ್ಯವಸ್ಥೆ ಸರ್ವಥಾ ಸೂಕ್ತವಲ್ಲ. ನಾನು 32 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ 22 ವರ್ಷ ನಾನ್‌ ಸೆಮಿಸ್ಟರ್‌ ಪದ್ಧತಿಯಲ್ಲಿ ಮತ್ತು ಹತ್ತು ವರ್ಷ ಸೆಮಿಸ್ಟರ್‌ ಪದ್ಧತಿಯಲ್ಲಿ ಕಾರ್ಯನಿರ್ವಸಿದ ಅನುಭವದಲ್ಲಿ ಹೇಳುವುದಾದರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆಯುವಲ್ಲಿ ಸೆಮಿಸ್ಟರ್‌ ಪದ್ಧತಿ ಯಾವುದೇ ಕಾರಣಕ್ಕೂ ಸೂಕ್ತವಾದದುದಲ್ಲ. ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು, ಸರಕಾರ ಈ ವಿಷಯವನ್ನು ಪುನರ್‌ ಪರೀಶಿಲನೆಗೆ ಒಳಪಡಿಸುವುದು ವಿಹಿತ ಎಂದು ನನ್ನ ಭಾವನೆ.

ಪ್ರೊ| ಎಸ್‌.ಎ. ತಾಂಬೆ

ಟಾಪ್ ನ್ಯೂಸ್

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.