ಯಾರವರು ನಿಲುಕದ ನಕ್ಷತ್ರವಾಗಿಸಿದವರು?


Team Udayavani, Feb 15, 2018, 8:45 AM IST

YARIVARU.jpg

ಕನಿಷ್ಟ ಅರ್ಹತೆಯುಳ್ಳ ಸಂಗೀತಾಸಕ್ತರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲವೆ? ಕಲಾವಂತ ಕುಟುಂಬದವರು ಮಾತ್ರ ಅರ್ಹರೆ? ಗುರುಕುಲ ಪದ್ಧತಿಯಲ್ಲಿದ್ದು ಎಂಟತ್ತು ತಾಸು ರಿಯಾಝ್ ಮಾಡಿದರಷ್ಟೇ ಸಂಗೀತ ಒಲಿಯುವುದೆ? ಇಂಥ ಪ್ರಶ್ನೆಗಳು ಅದೆಷ್ಟು ವರ್ಷಗಳಿಂದ ಅದೆಷ್ಟು ಜನರನ್ನು ಇನ್ನೂ ಕಾಡುತ್ತಿಲ್ಲ?

“ರಾಗವೊಂದನ್ನು ಕಲಿಯಲು ಎಷ್ಟು ದಿನಗಳು ಬೇಕು? ಎಷ್ಟು ದಿನಗಳಲ್ಲಿ ವೇದಿಕೆಯನ್ನೇರಬಹುದು? ರಿಯಾಲಿಟಿ ಷೋಗೆ ತಯಾರು ಮಾಡಬಹುದಾ? ಕಛೇರಿ ಕೊಡುವಷ್ಟೆಲ್ಲ ಬೇಡ, ಸುಮ್ಮನೆ ಸಂಜೆ ಹೊತ್ತು ಒಂದು ತಾಸು ತೊಡಗಿಕೊಂಡಿದ್ದರೆ ಸಾಕು. ನಮ್ಮ ಸಂಬಂಧಿಕರ ಮಗು ಕಲೀತಿದೆ, ಅದಕ್ಕೇ ನಮ್ಮ ಮಗೂನೂ ಕಲೀಲಿ ಅಂತಷ್ಟೇ…’

ಬೇಕು ಎಲ್ಲವೂ ಈಗಿಂದೀಗಲೇ ದಕ್ಕಬೇಕು ಮತ್ತದರ ಫ‌ಲ ಹೀಗಿØàಗೇ ಪ್ರತಿಫ‌ಲನಗೊಳ್ಳುವಂತಿರಬೇಕು. ಒಂದು ರೀತಿಯ ಅವಸರದ ಹುಕುಂ ಮಾಡುವುದನ್ನು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಇಂಥ ನಿರೀಕ್ಷೆಗಳನ್ನಿಟ್ಟುಕೊಂಡು ಬಂದ ಪೋಷಕರಿಗೆ ಮಗು ಎಂದರೆ ಅದೊಂದು ಪ್ರಾಡಕ್ಟ್ ಅಲ್ಲ. ಕಲೆ ಎಂದರೆ ಇನ್‌ಸ್ಟಂಟ್‌ ಅಲ್ಲ ಎಂದು ಹೇಗೆ ಹೇಳುವುದು? 
ಕಲೆ ಅಥವಾ ಸಂಗೀತ ಎನ್ನುವುದು ಸೃಜನಶೀಲ ಒ¨ªಾಟ. 

ನಮ್ಮೊ ಳಗಿನ ಗದ್ದಲವ ಕಡೆದು ಶಬ್ದವನ್ನಾಗಿಸಿ ಮಳಲಿದ ನಾದವನ್ನಷ್ಟೇ ಎತ್ತಿ ಮತ್ತೆಮತ್ತೆ ಅದನ್ನು ಸೀಳುವುದು, ಆ ಸೀಳಿನೊಳಗೆ ಹೊಮ್ಮಿದ ಸುರೀಲಿ ಪದರವನ್ನಷ್ಟೇ ಎದೆಗಂಟಿಸಿಕೊಂಡು ನಿರಂತರ ಅನು ಸಂಧಾನಕ್ಕಿಳಿಯುವುದು ಮತ್ತು ಪ್ರಸ್ತುತಿಯ ಮೂಲಕ ಸಂವಾದ ಕ್ಕಿಳಿಯುವುದು; ಕಲಾವಿದರು ಯಾವ ಕಾಲದÇÉೇ ಇರಲಿ ಯಾವ ದೇಶದÇÉೇ ಇರಲಿ, ಅಡಿಗಡಿಗೂ ಈ ಗಡಿಗೆಯೊಳಗೆ ಮಥನಕ್ಕಿಳಿ ಯಲೇಬೇಕಾಗುತ್ತದೆ. ಇದೇ ಅವರ ರೀತಿಯೂ ನೀತಿಯೂ ಪ್ರೀತಿಯೂ ಮತ್ತು ತೀವ್ರತುಡಿತದ ಸಂಕೀರ್ಣತೆಯೂ. 

ಈ ಕತ್ತಲೆ ಬೆಳಕಿನಾಟದೊಳಗಿನ ಖಾಸಗಿ ಅನುಸಂಧಾನದ ಪ್ರಕ್ರಿಯೆ ಅನುಭವ ಪ್ರಧಾನ. ಇದನ್ನು ಸಾಮಾನ್ಯರಿಗೆ ಅರ್ಥ ಮಾಡಿ ಸುವ ರೀತಿಯ ತಾಕಲಾಟ ಒಂದೆಡೆ ಉಳಿದರೆ, ಸಾಂಪ್ರದಾಯಿಕ ಕಲಿಕಾ ವಿಧಾನಕ್ಕಂಟಿಕೊಂಡಿರುವ ಕಲಾಗುರುಗಳ ಮನೋಭಾವ ಇನ್ನೊಂದೆಡೆ. ಈ ಎರಡರ ನಡುವಿನ ಅಂತರದಲ್ಲಿ ನಮ್ಮ ಶಾಸ್ತ್ರೀಯ ಸಂಗೀತ ಅಟ್ಟಕ್ಕೆ! ಕಲೆಗಿರುವ ಎರಡು ತುದಿಗಳಲ್ಲಿ ಒಂದು ಕಲಾವಿದರದು ಇನ್ನೊಂದು ಆಸ್ವಾದಕರದು. ಇದರ ಮಧ್ಯೆ ಪರಂಪರೆ, ಪ್ರಯೋಗ ಮತ್ತು ಕಲಿಕೆಯ ಕೊಂಡಿಗಳು. ಇಲ್ಲಿ ಪರಂಪರೆ ಮತ್ತು ಸಂಪ್ರದಾಯ, ಈ ಎರಡರ ಅರ್ಥಗಳು ಬೇರೆಬೇರೆ ಎಂಬ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳುವುದು ಸದ್ಯದ ಪರಿಸ್ಥಿತಿಯ ತುರ್ತು.ಇನ್ನು ರಿಯಾಝ್, ನೀರಿಗಿಳಿಯುವಾಗಿನ ಪ್ರತೀಸಲದ ಚಳಿಯಂತೆ. ಆರಂಭದಲ್ಲಿ ಗದಗುಟ್ಟುತ್ತಲೇ ಒಂದೊಂದೇ ಸ್ವರಗಳನ್ನು ತೆಕ್ಕೆಗೆಳೆದುಕೊಳ್ಳುತ್ತೇವೆ. ಮುಳುಗೇಳುತ್ತ ತೇಲುತ್ತ ದಡಕ್ಕೆ ಬಂದೆವು ಎನ್ನುವಾಗಲೇ, ಯಾವುದೋ ಸೆಳವು ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿರುತ್ತದೆ. ಆಗ ಆವರಿಸುವ ಶೂನ್ಯಗಳನ್ನು ಮತ್ತದರ ಸುತ್ತ ಏಳುವ ಸೂಕ್ಷ¾ ತರಂಗಗಳನ್ನೇ ಕೈಮರಮಾಡಿಕೊಂಡು ಸಂಪಾದನೆಯಲ್ಲಿ ತೊಡಗುವುದೇ ಸೃಜನಶೀಲಕಲಾವಿದರ ಲಕ್ಷಣ. 

ಹೀಗೆ ರಿಯಾಝ್ನ ಈ ಅಮೂರ್ತ ಪರಿ ವಿವರಿಸಿಬಿಟ್ಟರೆ, ವೇಗಯುಗದ ವಿದ್ಯಾಕಾಂಕ್ಷಿಗಳಿಗೆ ಅರ್ಥವಾಗುವುದೆ? 
ಹಾಗಾ ದರೆ, ಕನಿಷ್ಟ ಅರ್ಹತೆಯುಳ್ಳ ಸಂಗೀತಾಸಕ್ತರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲವೆ? ಕಲಾವಂತ ಕುಟುಂಬದವರು ಮಾತ್ರ ಅರ್ಹರೆ? ಗುರುಕುಲ ಪದ್ಧತಿಯಲ್ಲಿದ್ದು ಎಂಟØತ್ತು ತಾಸು ರಿಯಾಝ್ ಮಾಡಿದರಷ್ಟೇ ಸಂಗೀತ ಒಲಿ ಯುವುದೆ? ಇಂಥ ಪ್ರಶ್ನೆಗಳು ಅದೆಷ್ಟು ವರ್ಷಗಳಿಂದ ಅದೆಷ್ಟು ಜನರನ್ನು ಇನ್ನೂ ಕಾಡುತ್ತಿಲ್ಲ? 

ಇನ್ನು, ತಲೆಮಾರುಗಳಿಂದ ಅದದೇ ಖಯಾಲ್‌, ಪುನರಾ ವರ್ತಿತ ಆಲಾಪ, ತಾನುಗಳ ವೈಖರಿಯನ್ನು ಅದೆಷ್ಟಂತ ಕೇಳು ವುದು? ಅದಕ್ಕಾಗಿ ಕಛೇರಿಗಳಿಗೇ ಯಾಕೆ ಹೋಗಬೇಕು ಎಂಬ ಸಣ್ಣ ನಿರಾಸಕ್ತಿಯ ಎಳೆ ಎಂಥ ಶ್ರದ್ಧಾವಂತ ಕೇಳುಗನಲ್ಲಿಯೂ ಒಂದಿÇÉಾ ಒಂದು ಸಲ ಹಾಯ್ದು ಹೋಗೇ ಹೋಗುತ್ತದೆ. ಹೀಗಾಗಿಯೇ ಆಸ್ವಾದಕರೂ ಕೂಡ ಒಂದು ಹಂತದ ನಂತರ ನಾದದ ಹೊಸ ಪುಳಕಗಳ ಹುಡುಕಾಟಕ್ಕೆ ತೊಡಗುತ್ತಾರೆ. ಅಂತೆಯೇ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಭವಿಷ್ಯದ ಕಲಾವಿದರನ್ನು ಮತ್ತು ಕೇಳುಗರನ್ನೂ ಸೃಷ್ಟಿಸುವ ಜವಾಬ್ದಾರಿ ಇಂದಿನ ಕಲಾವಿದರಿಗೆ ಸವಾಲೇ. ಹಾಗಾಗಿ ಕಲಾವಿದರೇ ಆಯೋಜಕರೂ ಆಗುತ್ತಿ¨ªಾರೆನ್ನುವುದು ಒಳ್ಳೆಯ ಬೆಳವಣಿಗೆಯೇ ಆದರೂ ಇದು ಎಲ್ಲ ಕಲಾವಿದರಿಗೂ ಸಾಧ್ಯವಾಗುತ್ತಿಲ್ಲ, ಯಾಕೆ? ಇಂದು ಮುಂಚೂಣಿಯಲ್ಲಿರುವ ಕೆಲವರು ಕಲಿಕಾ ತಂತ್ರಗಳನ್ನು ಸ್ವಂತಕ್ಕೆ ಮಾತ್ರ ಸಿದ್ಧಿಸಿಕೊಂಡು ಯಶಸ್ಸು ಸಾಧಿ ಸುತ್ತಿ¨ªಾರೆ, ಆದರೆ ಕಲೆಯನ್ನು ಸಾಮಾಜಿಕ ದೃಷ್ಟಿಕೋನ  
ದಿಂದಲೇ ನೋಡಬೇಕಲ್ಲ, ಸಮಾಜವು ಕೊಡುಗೆಯ ರೂಪದಲ್ಲಿ ಕಲಾವಿದರನ್ನು ಸ್ವೀಕರಿಸಿದೆ ಎಂದಮೇಲೆ? 

ಇದಕ್ಕೆ ಉತ್ತರವೆಂಬಂತಿ¨ªಾರೆ ಧಾರವಾಡದ ಹಿಂದೂಸ್ತಾನಿ ಕಲಾವಿದ ಪಂಡಿತ್‌ ಕೈವಲ್ಯಕುಮಾರ್‌ ಗುರವ್‌. ಇಡೀ ದೇಶದಲ್ಲಿ “ಶಾಸ್ತ್ರೀಯ ಸಂಗೀತ-ಧ್ವನಿ ಸಂಸ್ಕಾರ’ ತರಬೇತಿ ನೀಡುತ್ತಿರುವ ಏಕೈಕ ಕಲಾವಿದರಿವರು. ಧಾರವಾಡದ ಅವರ ಮನೆಯಲ್ಲಿ ಭೇಟಿಯಾದ ಸಂಜೆ, ವಿದ್ಯಾರ್ಥಿನಿಯೊಬ್ಬರಿಗೆ ಯಮನ್‌ ಹೇಳಿಕೊಡುತ್ತಿದ್ದರು. ಮುಕ್ಕಾಲು ತಾಸಿನ ನಂತರ ಆಕೆ ಹೊರಟರು. ನೋಡಿ ಹೀಗೆ ಸಿಗುವ ತಾಸು-ಅರ್ಧತಾಸಿನೊಳಗೇ ನಾವು ಕಲಿಸಬೇಕು, ಕಲಿಯಬೇಕು ಪ್ರಸ್ತುತಿಯನ್ನೂ ಮಾಡಬೇಕು. ಇಂದು ನಮಗಿರುವುದು ಸಣ್ಣ ಆಯಸ್ಸು, ಕವಲೊಡೆದ ಗುರಿಗಳು ಮತ್ತವುಗಳನ್ನು ತಲುಪುವ ಧಾವಂತ. ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡೇ ಶಾಸ್ತ್ರೀಯ ಕಲೆಗಳನ್ನು ಕಲಿಸಬೇಕು. ಅದಕ್ಕಾಗಿ ಮೊದಲು ನಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು.

ಶಾಲೆ- ಕಾಲೇಜು- ಉದ್ಯೋಗ- ಸಂಸಾರದ ಜತೆಜತೆಗೇ ಜನ ಆಸಕ್ತಿ ತೋರಿಸುತ್ತಿ¨ªಾರೆ ಎಂದಾಗ, ನಮ್ಮ ಒಳಗನ್ನು ಎÇÉಾ ರೀತಿಯಿಂದ ಹಿಗ್ಗಿಸಿಕೊಳ್ಳಬೇಕು. ಅದಕ್ಕಾಗಿ ಹಳೇ ತಲೆಮಾರಿನ ಸಾಂಪ್ರದಾಯಿಕ ಕಲಿಕಾ ಪದ್ಧತಿಯನ್ನು ಮೊಟಕುಗೊಳಿಸಲೇಬೇಕು.
“”ಸುಮಾರು ಹತ್ತು ವರ್ಷದವನಾಗಿ¨ªಾಗ ಒಮ್ಮೆ ಪ್ರಸಿದ್ಧ ಗಾಯಕರೊಬ್ಬರ ಕಛೇರಿಗೆ ಹೋಗಿ¨ªೆ. ಅಕ್ರಾಳವಿಕ್ರಾಳ ಮುಖ ಮಾಡಿ ಹಾಡುತ್ತಿದ್ದರು. “ಶಾಸ್ತ್ರೀಯ ಸಂಗೀತವೆಂದರೆ ಇಷ್ಟು ಕಷ್ಟ¨ªಾ?’ ಎಂದು ತಂದೆಯವರಿಗೆ ಕೇಳಿದ್ದಕ್ಕೆ, “ಹೌದು ಮಾರಾಯಾ ಇದು ಭಾಳಾ ಕಠಿಣ ಎಲ್ಲರಿಗೂ ಒಲಿಯೂದಿಲ್ಲ’ ಅಂತೆಲ್ಲ ಹೇಳಿದ್ದರು. ಅಯ್ಯೋ ಇದರ ಸಹವಾಸವೇ ಬೇಡ ಎಂದು ಇಪ್ಪತ್ತೂಂದು ವರ್ಷ ತುಂಬುವವರೆಗೂ ಲಘು, ಸಿನೆಮಾ, ಪಾಪ್‌ ರ್ಯಾಪ್‌ ಹಾಡಿಕೊಂಡು ಬಹುಮಾನಗಳನ್ನು ಪಡೆದುಕೊಂಡಿ¨ªೆ. ಒಂದು ದಿನ ತಂದೆಯ ಸ್ನೇಹಿತ ದಾಂಡೇಕರ್‌, “ನೀ ಯಾಕೆ ಶಾಸ್ತ್ರೀಯ ಸಂಗೀತ ಕಲಿಯಬಾರದು?’ ಎಂದರು. ಹೌದೆನಿಸಿ ತಂದೆಯವರಿಗೆ (ಪಂಡಿತ್‌ ಸಂಗಮೇಶ್ವರ ಗುರವ) ಹೇಳಿಕೊಡು ವಂತೆ ಕೇಳಿಕೊಂಡೆ. ಅರ್ಥವಾಗದ್ದನ್ನು ಕೇಳಿದಾಗೆಲ್ಲ, “ಕೇಳ್ತಾ, ರಿಯಾಝ… ಮಾಡ್ತಾ ಹೋಗು ನಿನ್‌ ನಿನಗ ಅರ್ಥ ಆಗ್ತದ’ ಎಂದು ಹೇಳುವುದೇ ಅವರ ನಿರಂತರ ಮಂತ್ರವಾಗಿತ್ತು. 

ಕ್ರಮೇಣ ತಾಕಲಾಟ ಹೆಚ್ಚಾಗಿ, ನಮ್ಮ ಮನೆಗೆ ಬರುತ್ತಿದ್ದ (ಮದಿಹಾಳದಲ್ಲಿದ್ದ ದತ್ತ ಪರಂಪರೆಯ ಆಶ್ರಮದ) ಗುರುಗಳನ್ನು ಕಂಡೆ. ಸುಮಾರು ಎರಡು ವರ್ಷಗಳ ತನಕ ಅವರೊಂದಿಗಿದ್ದು ಕೇವಲ ಓಂಕಾರ ಸಾಧನೆ ಮಾಡಿದೆ. ಅಲ್ಲಿಗೆ ಎಂಜಿನಿಯರಿಂಗ್‌ ಪಕ್ಕಕ್ಕೆ ಸರಿಯಿತು. ಶಾಸ್ತ್ರೀಯ ಸಂಗೀತದ ಅಮಲು ಪುಣೆ, ಮುಂಬೈನ ನಂಟು ಬೆಳೆಸಿತು. ಸಂಪೂರ್ಣ ಕಛೇರಿಗಳಲ್ಲಿ ಮುಳು ಗಿದೆ. ಆಗಲೇ ಧ್ವನಿಸಂಸ್ಕಾರದ ಬಗ್ಗೆ ನನ್ನೊಳಗೇ ನಡೆಯುತ್ತಿದ್ದ ಸಂಶೋಧನೆಗೆ ಒಂದು ರೂಪು ಕೊಡಬೇಕು ಎಂದು ನಿರ್ಧರಿಸಿದೆ. ಈ ಮೂಲಕ ಧ್ವನಿಸಂಸ್ಕಾರವು ಅತ್ಯಂತ ಖಾಸಗಿ ಮತ್ತು ಸ್ವಯಂ ಸಿದ್ಧಿಗೆ ಸಂಬಂಧಿಸಿದ್ದು ಎನ್ನುವ ಹಳೇ ನಂಬಿಕೆಯನ್ನು ಕಾರ್ಯಾ ಗಾರಗಳ ಮೂಲಕ ಮುರಿಯುತ್ತ ಬಂದೆ. ಇಂದು ದೇಶವಿದೇಶ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಾಯೋಗಿಕ ಪ್ರಯೋಜನ ಪಡೆದುಕೊಳ್ಳುತ್ತಿ¨ªಾರೆ. ಲೀಲಾಜಾಲವಾಗಿ ಮೂರು ಸ್ಥಾಯಿಗಳಲ್ಲಿ ಸಂಚರಿಸುತ್ತ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ರಾಗವನ್ನು ಕಟ್ಟಿಕೊಡುವುದನ್ನು ಸಾಧಿಸಿಕೊಂಡಿ¨ªಾರೆ. ರಿಯಾಲಿಟಿ ಷೋ ಮತ್ತು ಅನೇಕ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಲಿ¨ªಾರೆ. ಒಂದು ವಾರದ ಅವಧಿಯ ಈ ಕಾರ್ಯಾಗಾರಕ್ಕೆ ಯೋಗ, ಪ್ರಾಣಾಯಾಮ ಮತ್ತು ಓಂಕಾರ ಸಾಧನೆಯೇ ತಳಪಾಯ. ದಿನದ ಅರ್ಧಗಂಟೆಯನ್ನು ಧ್ವನಿ ಸಂಸ್ಕರಿಸಿಕೊಳ್ಳಲು ಮೀಸಲಿಟ್ಟರೆ ಸಾಕು, ಶಾರೀರ ತನ್ನಿಂತಾನೇ ಹದಗೊಂಡುಬಿಡುತ್ತದೆ.

ಆಮೇಲೆ, ಶಿಷ್ಯ ಎಂದರೆ ಗುರುವಿನ ನಕಲಲ್ಲ. ಪ್ರತಿಯೊಬ್ಬ ರದೂ ಪ್ರತ್ಯೇಕ ವ್ಯಕ್ತಿತ್ವ. ಗುರುವಾದವರು ಮೊದಲಿಗೇ ಸ್ಪಷ್ಟವಾಗಿ ಹೇಳಿಬಿಡಬೇಕು, ನನ್ನ ದನಿ-ಬಾನಿ-ಹಾವ-ಭಾವವನ್ನು ಅನುಕರಿ ಸದೇ ನಿನ್ನ ಒಳಗನ್ನು ಗಮನಿಸಿಕೋ, ನಿನ್ನದೇ ಸ್ವತಂತ್ರ ಶೈಲಿ ವೃದ್ಧಿಸಿಕೋ ಎಂದು. ಏಕೆಂದರೆ ಒಂದು ಮರದ ಕೆಳಗೆ ಇನ್ನೊಂದು ಮರ ಬೆಳೆಯದು ನೋಡಿ?” ಇದು ಕೈವಲ್ಯಕುಮಾರರ ಸ್ಪಷ್ಟ ನೇರ ಮತ್ತು ಮುನ್ನೋಟದ ಹಾದಿ. 

ನಿಜ. ಇನ್ನಾÂರೋ ಬಂದು ನಮ್ಮನ್ನು ಉದ್ಧರಿಸುವುದಿಲ್ಲ. ರಚನಾ ತ್ಮಕ ವಾಗಿ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಮಾತ್ರ, ಸಂಪ್ರ ದಾಯ ಎಂಬ ಕೋಶ ಒಡೆದು ಹೊರಬರುತ್ತೇವೆ. 

ಕೆ ವಿ ಸುಬ್ಬಣ್ಣ, ಇಪ್ಪತ್ತು ವರ್ಷಗಳ ಹಿಂದೆ ಹೇಳಿದ್ದು ಇಂದಿಗೂ ಪ್ರಸ್ತುತ. “ಕುಶಲರಾದ ನಮ್ಮ ತರುಣರಲ್ಲಿ ಪರಂಪರೆಯ ಬಗ್ಗೆ ಆಸಕ್ತಿಯೂ ಅನುಮಾನವೂ ಅತೃಪ್ತಿ ಅಸಹನೆಗಳು ಒಟ್ಟೊಟ್ಟಿಗೆ ಬೆಳೆಯುತ್ತಿರುವುದೇ ಒಳ್ಳೆಯ ಸೂಚನೆ. ಇದು ಅವರ ಸಂವೇ ದನೆಯ ಜೀವಂತಿಕೆಗೆ ದೊಡ್ಡ ಸಾಕ್ಷಿ’. ನಿಜ, ಹೀಗೊಂದು ಸಂಘರ್ಷ ವಿ¨ªಾಗಲೇ ಹೊಸತು ಹುಟ್ಟಿಕೊಳ್ಳುತ್ತದೆ. ಎಂಟØತ್ತು ಸ್ವರಗಳಲ್ಲಿ ಇಡೀ ಜೀವ ತೇಯುವುದೆಂದರೆ ಸಾಮಾನ್ಯವೆ? ನಮಗರಿವಿಲ್ಲದೆ ನಿರ್ಮಾಣಗೊಳ್ಳುವ ಚೌಕಟ್ಟುಗಳನ್ನು ಬುದ್ಧಿ, ಭಾವದಿಂದ ಸ್ಥಿತಪ್ರಜ್ಞರಾಗಿ ನಿರಂತರ ಭೇದಿಸುತ್ತಲೇ ಇರಬೇಕು. ಅಂದಾಗ ಮಾತ್ರ ಸಮಕಾಲೀನಕ್ಕೆ ಸ್ಪಂದಿಸುವ, ಸಂಪ್ರದಾಯವನ್ನು ಪ್ರಶ್ನಿ
ಸುವ, ಅವಶ್ಯವೆನ್ನಿಸಿದಲ್ಲಿ ಅದನ್ನು ಮೀರುವ ಮತ್ತೂ ಹೊಸತನ್ನು ಕಟ್ಟಿಕೊಡುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಯುತ್ತದೆ. ಆಗ ಹರಿವು ತಾನಾಗೇ ಹೆಚ್ಚುತ್ತದೆ.

ಅಂದಹಾಗೆ ಈ ನೀತಿ-ನಿಯಮ, ಪರಂಪರೆ-ಸಂಪ್ರದಾಯದ ಹಗ್ಗಜಗ್ಗಾಟದಲ್ಲಿ ಕಲಾವಿದರು ನಲುಗುವುದುಂಟು. ಈ ನೋವು, ಕಾವು ಇರುವ ಅವಿಶ್ರಾಂತ ಹೋರಾಟದ ಹಾದಿಯÇÉೇ ಕಲೆಯ ಹುಟ್ಟು. ಇಲ್ಲವಾದರೆ ಕಲಾ ಸ್ವಾತಂತ್ರÂದ ರುಚಿ ಕಲಾವಿದರಿಗೆ ದಕ್ಕುವುದಾದರೂ ಹೇಗೆ?

– ಶ್ರೀದೇವಿ ಕಳಸದ

ಟಾಪ್ ನ್ಯೂಸ್

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.