ಇವರು ನಮ್ಮವರೆನ್ನಲು ಪುರಾವೆ ಬೇಕೆ?


Team Udayavani, Apr 3, 2018, 7:00 AM IST

sa-27.jpg

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಈಶಾನ್ಯ ರಾಜ್ಯಗಳನ್ನು ದೇಶದ ಬೇರ್ಯಾವ ಪ್ರಾಂತ್ಯದೊಂದಿಗೂ ಹೋಲಿಕೆ ಮಾಡಲು ಆಗದು. ಅಲ್ಲಿನ ಸೊಗಡೇ ಬೇರೆ. ಪ್ರಚಾರ, ಜಾಹೀರಾತಿನಲ್ಲಿ ತುಸು ಹಿಂದೆ ಬಿದ್ದರೂ ಸಹ ಅಲ್ಲಿನ ವಿಭಿನ್ನತೆ, ವಿಶಿಷ್ಟತೆ ಅದನ್ನು ಸ್ವರ್ಗ ಲೋಕದೆತ್ತರಕ್ಕೆ ಕೊಂಡೊಯ್ದಿದೆ. ಚಹಾ, ಕಲ್ಲಿದ್ದಲು, ತೈಲ ಮೂಲೋತ್ಪನ್ನಗಳು, ಪ್ರವಾಸೋದ್ಯಮ, ಜಲವಿದ್ಯುತ್‌ ಅಲ್ಲಿನ ಭೌಗೋಳಿಕತೆಗೆ ತಕ್ಕಂತೆ ಇರುವ ವಿಶೇಷಗಳು. ವಿಶ್ವದ ಶೇ.5.7ದಷ್ಟು ಆರ್ಕಿಡ್‌ ಸಸ್ಯಗಳನ್ನು ಸಪ್ತಸುಂದರಿಯರೇ ಪೋಷಿ ಸುತ್ತಿದ್ದಾರೆ.

ನಮ್ಮದೊಂದು ವಿಭಿನ್ನ ದೇಶ. ಪ್ರಪಂಚದಲ್ಲೆಲ್ಲೂ ಇರದ ವೈವಿಧ್ಯತೆ, ವಿಶಿಷ್ಟತೆ ನಮ್ಮಲ್ಲಿದೆ. ಅದನ್ನೇ ಪೂರ್ತಿಯಾಗಿ ಅರ್ಥೈಸಿ ಕೊಳ್ಳಬೇಕಾದರೆ ಇದೇ ಭರತ ಖಂಡದಲ್ಲಿ ನಾಲ್ಕೈದು ಬಾರಿಯಾ ದರೂ ಜನ್ಮ ತಾಳಿ ಬರಬೇಕಾದೀತು. ಹಾಗೆಂದು ಈ ವೈವಿಧ್ಯತೆ ಯನ್ನು ಪುರಾವೀಕರಿಸಲು ಉತ್ತರದ ಮುಕುಟ ಕಾಶ್ಮೀರಕ್ಕೋ, ದಕ್ಷಿಣದ ಕನ್ಯಾಕುಮಾರಿಗೋ, ರಾಮ ಜನ್ಮ ಭೂಮಿಗೋ, ಕೃಷ್ಣ ಜನ್ಮಸ್ಥಳಕ್ಕೋ ಪ್ರವಾಸ ಹೋಗಿ ಬರಬೇಕೆಂದೇನಿಲ್ಲ. ಒಂದು ಸಣ್ಣ ಉದಾಹರಣೆ ಚಿಕ್ಕ ಜಿಲ್ಲೆ ಉಡುಪಿಯೇ ಸಾಕು. ಈಗಿನ ಹೊಸ ತಾಲೂಕುಗಳಿಗೂ ಮುನ್ನ ಇದ್ದ ಕುಂದಾಪುರ, ಉಡುಪಿ ಮತ್ತು ಕಾರ್ಕಳವನ್ನೇ ಗಣನೆಗೆ ತೆಗೆದುಕೊಂಡರೂ ಒಂದು ತಾಲೂಕು ಕೇಂದ್ರ ಇನ್ನೊಂದರಿಂದ 30-40 ಕಿ.ಮೀಗಳಷ್ಟೇ ದೂರ. ಹಾಗಿದ್ದರೂ ಸಹ ಭಾಷೆಯ ವಿಚಾರಕ್ಕೆ ಬಂದಾಗ ಒಂದೊಂದು ತಾಲೂಕುಗಳು ಇನ್ನೊಂದರಿಂದ ಭಿನ್ನ. ಅಚ್ಚಗನ್ನಡ ಮತ್ತು ಮಂಗಳೂರು ಕನ್ನಡದ ಮಿಶ್ರಣ ಉಡುಪಿ ತಾಲೂಕಿನ ಭಾಷೆಯಾದರೆ, ಕುಂದಗನ್ನಡವೆಂಬ ವಿಶೇಷ ಭಾಷೆ ಕುಂದಾಪುರದಲ್ಲಿ ಕಂಪು ಸೂಸುತ್ತದೆ. ಕಾರ್ಕಳ ತಾಲೂಕಿನ ವ್ಯಾಪ್ತಿಯೊಳಕ್ಕೆ ನುಸುಳುತ್ತಲೇ ತುಳು ಭಾಷೆಯ ಪರಿಚಯ ವಾಗುತ್ತದೆ. ಬಸ್ಸಿನಲ್ಲೊಮ್ಮೆ ಕುಂದಾಪುರ-ಉಡುಪಿ-ಕಾರ್ಕಳ ಮುಖಾಂತರ ಪ್ರಯಾಣಿಸಿದರೂ ಕೇವಲ 100 ಕಿ.ಮೀ. ವ್ಯಾಪ್ತಿಯೊಳಗೇ ಮೂರು ರೀತಿಯ ಭಾಷೆಯ ದರ್ಶನವಾಗುತ್ತದೆ. ಇದೇ ನೋಡಿ ಭಾರತೀಯತೆ! ಆಯಾ ಪ್ರದೇಶಕ್ಕೆ ತನ್ನದೇ ವಿಭಿನ್ನತೆ, ಅದರೊಳಗೂ ಏಕತೆ!

ಹೀಗೆಯೇ ದೇಶದ ಪ್ರತಿಯೊಂದು ರಾಜ್ಯದ ಹೆಸರೂ ಉಚ್ಚರಿ ಸುವಾಗ ಒಂದೊಂದು ವಿಚಾರ ಕಣ್ಮುಂದೆ ಸುಳಿದು ಹೋಗುತ್ತದೆ. ಕಾಶ್ಮೀರ ಎನ್ನುವಾಗ ಭಯೋತ್ಪಾದನೆಯ ನಲುಗಾಟದಿಂದ ಬದುಕನ್ನೆ ದುರಿಸುತ್ತಿರುವ ಜನಜೀವನ, ಗುಜರಾತ್‌ ಎನ್ನುವಾಗ ಮೋದಿ, ರಾಜಸ್ಥಾನವೆಂದಾಗ ಮರಳು ಗಾಡು ಮತ್ತು ಒಂಟೆ, ಮಹಾರಾಷ್ಟ್ರ ಎಂದಾಗ ಶಿವಾಜಿ, ಉತ್ತರ ಪ್ರದೇಶ ಎನ್ನುವಾಗ ಕಾಶಿ-ವಾರಾಣಾಸಿ ಜಗತøಸಿದ್ಧ ತಾಜ್‌ಮಹಲ್‌ಕಣ್ಮುಂದೆ ಸುಳಿ ಯುತ್ತವೆ. ಹೀಗೆ ಒಂದೊಂದು ರಾಜ್ಯಕ್ಕೂ ಅದರದ್ದೇ ಘಮ. ಆದರೆ ನಿಜಕ್ಕೂ ನಾವೆಲ್ಲರೂ ಅತೀ ಕಡಿಮೆ ಇತಿಹಾಸ ತಿಳಿದ ಇಂದಿಗೂ ಅಷ್ಟೊಂದು ಮುಖ್ಯವಾಹಿನಿಗೆ ಬಾರದ ಅಥವಾ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸದ ನತದೃಷ್ಟ ಪ್ರಾಂತ್ಯವೇನಾ ದರೂ ಇದ್ದರೆ ಅದು ದೇಶದ ಈಶಾನ್ಯ ಭಾಗವೇ ಆಗಿದೆ.

ಭೌಗೋಳಿಕವಾಗಿ ದೇಶವನ್ನು ವಿಂಗಡಿಸುವಾಗಲೂ ಈಶಾನ್ಯ ರಾಜ್ಯಗಳಿಗೆ ಅಂತಹ ಮಹತ್ವ ನೀಡಲಿಲ್ಲ. ಅದರಲ್ಲೊಂದು ಉಡಾ ಫೆತನವಿದೆ. ನಮ್ಮ ಮಾನಸಿಕತೆಗೆ ತೀರಾ ಹತ್ತಿರವಿರುವ ಮೂರು ಪ್ರಮುಖ ಕ್ಷೇತ್ರಗಳೆಂದರೆ ರಾಜಕೀಯ, ಸಿನೆಮಾ ಮತ್ತು ಕ್ರಿಕೆಟ್‌. ಈಶಾನ್ಯದ ಯಾವ ರಾಜ್ಯದಲ್ಲೂ ಈ ಮೂರೂ ಕ್ಷೇತ್ರದ ಜನಪ್ರಿ ಯರನ್ನು ಹುಡುಕ ಹೊರಟರೆ ಭ್ರಮನಿರಸನವಾಗುವುದು ಖಚಿತ. ರಾಜ್ಯದ ವ್ಯಾಪ್ತಿಯನ್ನೂ ಮೀರಿ ಜನಮನ್ನಣೆಗಳಿಸಿದ ಬೆರಳೆಣಿಕೆಯ ರಾಜಕಾರಣಿಯ ಹೆಸರೂ ನಮಗೆ ಅಲ್ಲಿ ಸಿಗ ಲಾರದು. ನಾವು ಆರಾಧಿಸುವ ಅದ್ಯಾವ “ಖಾನ್‌’ಗಳೂ ಈಶಾನ್ಯ ರಾಜ್ಯಗಳೊಂದಿಗೆ ಸಂಬಂಧವನ್ನು ಹೊಂದದಿರುವುದು ಸುಸ್ಪಷ್ಟ. ನಮ್ಮ ಮನಮುಟ್ಟಿರುವ ಅದ್ಯಾವ ಕ್ರಿಕೆಟ್‌ ಆಟಗಾರರಲ್ಲೂ ಈಶಾನ್ಯಕ್ಕೆ ಸಂಬಂಧಿಸಿದವರಿಲ್ಲ. ಅಷ್ಟೇ ಅಲ್ಲ, ದೇಶಕ್ಕೆ ದೇಶವೇ ವಲಸೆ ಹೋಗುವಂತಹ ಐಟಿ ರಾಜಧಾನಿಯೂ ಅಲ್ಲಿಲ್ಲ. ಜನ ಸಾಮಾನ್ಯನೊಬ್ಬನನ್ನು ಮುಗಿಲೆತ್ತರಕ್ಕೆ ಕೊಂಡೊಯ್ದು ಸುಪ್ರಸಿದ್ಧ ನಾಗಿಸುವ ಮುಂಬಯಿಯೆಂಬ ಶಹರವೂ ಇಲ್ಲ. ಇನ್ನೂ ಅದನ್ನು ಇಷ್ಟಪಡಬೇಕೆಂದರೆ ಅದ್ಯಾವ ಕಾರಣಕ್ಕಾಗಿ?

ಅರುಣಾಚಲ, ಅಸ್ಸಾಂ, ಸಿಕ್ಕಿಂ, ಮಿಜೋರಾಂ, ಮಣಿಪುರ, ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್‌ ಒಟ್ಟಾರೆಯಾಗಿ ದೇಶದ ಶೇಕಡಾ ಎಂಟರಷ್ಟು ಭೂಭಾಗವನ್ನು ಆವರಿಸಿಕೊಂಡಿವೆ. ಇವೆಲ್ಲ ಸೇರಿ 4500 ಕಿ.ಮೀ.ಗೂ ಮಿಕ್ಕಿ ತನ್ನ ಗಡಿಗಳನ್ನು ನಾಲ್ಕು ದೇಶಗಳೊಂದಿಗೆ ಹಂಚಿಕೊಂಡಿವೆ. ಸಿಕ್ಕಿಂ ಹೊರತುಪಡಿಸಿ ಉಳಿದ ಏಳು ರಾಜ್ಯಗಳ ಅಪ್ರತಿಮ ಸೌಂದರ್ಯಕ್ಕೆ ಮತ್ತು ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ ಅದನ್ನು “ಸಪ್ತಸುಂದರಿಯರು’ ಎಂದು ಕರೆಯ ಲಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಈಶಾನ್ಯ ರಾಜ್ಯಗಳನ್ನು ದೇಶದ ಬೇರ್ಯಾವ ಪ್ರಾಂತ್ಯದೊಂದಿಗೂ ಹೋಲಿಕೆ ಮಾಡಲಾಗದು. ಅಲ್ಲಿನ ಸೊಗಡೇ ಬೇರೆ. ಪ್ರಚಾರ, ಜಾಹೀರಾತಿನಲ್ಲಿ ತುಸು ಹಿಂದೆ ಬಿದ್ದರೂ ಸಹ ಅಲ್ಲಿನ ವಿಭಿನ್ನತೆ, ವಿಶಿಷ್ಟತೆ ಅದನ್ನು ಸ್ವರ್ಗ ಲೋಕದೆತ್ತರಕ್ಕೆ ಕೊಂಡೊಯ್ದಿದೆ. ಚಹಾ, ಕಲ್ಲಿದ್ದಲು, ತೈಲ ಮೂಲೋತ್ಪನ್ನಗಳು, ಪ್ರವಾಸೋದ್ಯಮ ಮತ್ತು ಜಲವಿದ್ಯುತ್‌ ಅಲ್ಲಿನ ಭೌಗೋಳಿಕತೆಗೆ ತಕ್ಕಂತೆ ಇರುವ ವಿಶೇಷಗಳು. ವಿಶ್ವದ ಶೇ.5.7ದಷ್ಟು ಆರ್ಕಿಡ್‌ ಸಸ್ಯಗಳನ್ನು ಸಪ್ತಸುಂದರಿಯರೇ ಪೋಷಿ ಸುತ್ತಿದ್ದಾರೆ. ಮಣಿಪುರದಲ್ಲಿರುವ ಲೋಕ್‌ತಕ್‌ ಸರೋವರ ದೇಶದ ಅತಿದೊಡ್ಡ ಶುದ್ಧನೀರಿನ ಸರೋವರ. ಪ್ರಪಂಚದಲ್ಲೇ ಅತಿ ದೊಡ್ಡ ನದಿದ್ವೀಪವೆಂಬ ಹೆಗ್ಗಳಿಕೆ ಅಸ್ಸಾಮಿನ ಮಜೂಲಿ ದ್ವೀಪದ್ದು!

ಇನ್ನು ರಾಜ್ಯ-ರಾಜ್ಯಗಳ ಬಗೆಗೆ ಮಾತನಾಡ ಹೊರಟರೆ ತ್ರಿಪುರ ಮತ್ತು ಮಿಜೋರಾಂ ಈಶಾನ್ಯ ಭಾರತದ ಅತ್ಯಂತ ಸಾಕ್ಷರ ರಾಜ್ಯಗಳೆಂದು ಖ್ಯಾತಿ ಪಡೆದಿವೆ. ದಶಕಗಳಿಗೂ ಹಿಂದಿನ ದಾಖಲೆ ಗಳ ಪ್ರಕಾರ ಕೇರಳ ಸಾಕ್ಷರತೆಯಲ್ಲಿ ಪ್ರಥಮ ರಾಜ್ಯವೆನಿಸಿದ್ದರೂ 2013ರ ಗಣತಿಯ ಪ್ರಕಾರ ಶೇ. 94.65 ಸಾಕ್ಷರರನ್ನು ಹೊಂದಿ ತ್ರಿಪುರ ರಾಜ್ಯ ಕೇರಳ(ಶೇ.93.91)ವನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದಿರುವುದು ಪುಟ್ಟ ರಾಜ್ಯದ ದಿಟ್ಟ ಸಾಧನೆ. ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೇಘಾಲಯ ಅಂಗ್ರಪಕ್ತಿಯಲ್ಲಿ ಕಾಣಸಿಗುತ್ತದೆ. ಸಿಕ್ಕಿಂ ರಾಜ್ಯದ ಸುಮಾರು 75,000 ಹೆಕ್ಟೇರ್‌ ಭೂ ಪ್ರದೇಶ ಸಾವಯವ ಕೃಷಿಯಲ್ಲಿ ಲೀನವಾಗಿದೆ. ಈ ಮೂಲಕ 2016ರಲ್ಲಿ ದೇಶದ ಮೊಟ್ಟಮೊದಲ ಸಂಪೂರ್ಣ ಸಾವಯವ ರಾಜ್ಯವೆಂಬ ಗೌರವಕ್ಕೆ ಅದು ಪಾತ್ರವಾಗಿದ್ದು ನಿರಂತರ ಧ್ಯಾನದ ಫ‌ಲ. ಇನ್ನು ವೈಟ್‌ ಪ್ಯಾಟ್‌, ಗೋಲ್ಡನ್‌ ಮುಗಾ ಮತ್ತು ವಾರ್ಮ್ಏರಿ ಎಂಬ ಮೂರು ಬಗೆಯ ವಿಭಿನ್ನ ರೇಷ್ಮೆ ತಯಾರಾಗುವುದು ಕೇವಲ ಅಸ್ಸಾಂ ರಾಜ್ಯದಲ್ಲಿ. ದೇಶದಲ್ಲಿ ಬೆಳೆಯುವ ಚಹಾದ ಒಟ್ಟು ಪ್ರಮಾಣದ ಅರ್ಧಕ್ಕೂ ಹೆಚ್ಚು ಅಸ್ಸಾಮಿನದ್ದೇ ಎನ್ನುವುದು ಈಶಾನ್ಯದ ಗರಿಮೆಗೆ ಮತ್ತೂಂದು ಸಾಕ್ಷಿ. ವರದಕ್ಷಿಣೆಯ ಪಿಡುಗು ಪೂರ್ತಿ ಈಶಾನ್ಯ ರಾಜ್ಯದಲ್ಲೆಲ್ಲೂ ಇಲ್ಲವೆನ್ನುವುದು ಒಂದೆಡೆ ಹೆಮ್ಮೆ ಮೂಡಿಸಿದರೆ ಇನ್ನೊಂದೆಡೆ ಕನ್ನಡಿ ಕಂಡುಕೊಂಡಾಗ ನಾಚಿಕೆಯೆನ್ನಿಸುವುದೂ ಹೌದು. ಒಟ್ಟು 220 ಭಾಷೆಗಳ ತವರು ಈಶಾನ್ಯವೆಂಬುದು ಸೋಜಿಗದ ಸಂಗತಿ. ಮೊಘಲರು ಆಕ್ರಮಿಸಲಾಗದ ಭಾರತದ ಭೂಮಿಯಿದ್ದರೆ ಅದು ಕೇವಲ ಈಶಾನ್ಯ ಭಾಗ ಮಾತ್ರ. ದೇಶದ ಪ್ರಮುಖ ಏಳು ರಾಷ್ಟ್ರೀಯ ಉದ್ಯಾನಗಳಿರುವುದು ಈಶಾನ್ಯದಲ್ಲಿಯೇ. ಅದರಲ್ಲೂ ಒಂದು ಕೊಂಬಿನ ಘೇಂಡಾಮೃಗ ಕಾಣಸಿಗುವುದು ಅಸ್ಸಾಮಿನ ಕಾಜಿರಂಗದಲ್ಲಿ ಮಾತ್ರ.

ನಮ್ಮಲ್ಲಿ ಸ್ವಚ್ಛತೆಯ ಕಲ್ಪನೆಯನ್ನು ಅದರ ಬಗೆಗೆ ಅರಿವನ್ನು ಮೂಡಿಸಿದ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಯವರದ್ದು. ಅಂದಿನವರೆಗೂ ಸಂಕೀರ್ಣವಾಗಿದ್ದ ಆ ಜನಜಾಗೃತಿ ಮೋದಿ ಯವರು ಪ್ರಧಾನಿಯಾದ ಬಳಿಕ ದಟ್ಟೈಸಿತು. ಆದರೆ ಮೇಘಾಲ ಯದಲ್ಲಿ ಮೌಲಿನ್ನಾಂಗ್‌ ಎಂಬೊಂದು ಹಳ್ಳಿಯಿದೆ. 2003ರಲ್ಲಿ “ಡಿಸ್ಕವರ್‌ ಇಂಡಿಯಾ’ ಎಂಬ ಪತ್ರಿಕೆಯೊಂದು ಸಮೀಕ್ಷೆ ನಡೆಸಿ ಏಷ್ಯಾದ ಅತಿ ಸ್ವತ್ಛ ಹಳ್ಳಿ ಎಂಬ ಪಟ್ಟ ಹಳ್ಳಿಗೆ ನೀಡಿತು. ಹಳ್ಳಿಯ ಬೀದಿಬದಿಯಲ್ಲಿ, ಮನೆಮನೆಗಳೆದುರು ಬಿದಿರಿನ ಬುಟ್ಟಿಯೊಂದು ತೂಗುತ್ತಿದ್ದು ಅದರಲ್ಲೇ ಕಸವನ್ನು ಎಸೆಯ ಲಾಗುತ್ತಿತ್ತು. ಹುಟ್ಟಿದ ಮಗುವೊಂದು ಶಾಲೆಗೆ ಸೇರುವುದಕ್ಕೂ ಮುನ್ನವೇ ಅದಕ್ಕೆ ನೀಡಲಾಗುತ್ತಿದ್ದ ಪ್ರಾಥಮಿಕ ಶಿಕ್ಷಣವೇ ಸ್ವತ್ಛತೆಯ ಅರಿವು. ಇಂದಿಗೂ ಅಲ್ಲಿ ಮರದಿಂದ ಉದುರುವ ಎಲೆಗಳನ್ನು ಹೂವು ಗಳನ್ನು ಗುಂಡಿಯಲ್ಲಿ ಹಾಕಿ ಗೊಬ್ಬರ ತಯಾರಿಸಲಾಗುತ್ತದೆ. ಮನೆಯಲ್ಲಿ ಉಳಿದ ತಿನಿಸನ್ನು ಊರಿಂದ ಹೊರಗೆ ಹಂದಿಗಳಿಗೆ ಹಾಕಲಾಗುತ್ತದೆ. ಯಾವುದೇ ಮನೆ ನಿರ್ಮಾಣಕ್ಕೂ ಮುನ್ನವೇ ಅದರ ಶೌಚಾಲಯವನ್ನು ನಿರ್ಮಿಸಲಾಗುತ್ತದೆ. ಇನ್ನು ಬಯಲು ಶೌಚದ ಬಗೆಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಗಮನಾರ್ಹವೆಂಬುದನ್ನು ಸಾಧಿಸಿ ತೋರಿವೆ. ಇವೆರಡೂ ರಾಜ್ಯಗಳು ಈಶಾನ್ಯದ ಬಯಲು ಶೌಚಮುಕ್ತವೆಂದು ಘೋಷಿಸುವ ಮೂಲಕ ಅಕ್ಟೋಬರ್‌ 2, 2019ಕ್ಕಿದ್ದ ಸ್ವತ್ಛತಾ ಗುರಿಯನ್ನು ಬಹುಬೇಗನೆ ತಲುಪಿ ಉಳಿದ ರಾಜ್ಯಗಳಿಗೆ ಮಾದರಿಯೆನಿಸಿವೆ.

ಇಷ್ಟೆಲ್ಲಾ ಹೇಳಬೇಕಾಯಿತೇಕೆಂದರೆ ಈಶಾನ್ಯ ಭಾರತೀಯರು ಮೊದಲಿನಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಇದ್ದಾರೆ. ಅವರ ಭಾಷೆ, ವರ್ಣ, ಮುಖಚರ್ಯೆಯ ನೆಪದಲ್ಲಿ ಅವರನ್ನು ಭಾರತದಿಂದ ವಿಭಿನ್ನರೆಂದು ಬದಿಗೊತ್ತಿದ್ದೇವೆ. ದೇಶದ ನಾನಾ ಕಡೆ ಅವರು ನಿಂದನೆಗೊಳಗಾಗುತ್ತಿರುವುದು ಅನ್ಯಾಯವೇ ಸರಿ. ಮುಖಾಕೃತಿಗೆ ಅವರನ್ನು ಚೀನೀಯರ ಜೊತೆಗೆ ಹೋಲಿಕೆ ಮಾಡುತ್ತಿರುವುದು ಕೂಡ ಅಕ್ಷಮ್ಯ. ಕಾಶ್ಮೀರ, ಕೇರಳದಲ್ಲಿಯ ಭಯಾನಕ ವಾತಾವರಣ ಈಶಾನ್ಯ ರಾಜ್ಯಗಳಲ್ಲಿ ಅದೆಂದೋ ನೆಲೆಯಾಗಿತ್ತು. ನುಸುಳುಕೋರರ ಸಮಸ್ಯೆ, ಬಂಡುಕೋರರ ಸಮಸ್ಯೆ, ಜನಾಂಗೀಯ ಘರ್ಷಣೆ, ಯುವ ಜನಾಂಗದ ವಲಸೆ, ನಿರುದ್ಯೋಗ, ಬಡತನ, ಅನಿಶ್ಚಿತ ಅಲೆಮಾರಿ ಬದುಕು, ಮತಾಂತ ರದ ಜ್ವಾಲೆಗಳು ಅವರನ್ನು ಅದಾಗಲೇ ಸಾಕಷ್ಟು ಸುಟ್ಟು ಹಾಕಿವೆ. ಅದಕ್ಕೆ ಅಲ್ಲಿನ ಸರ್ಕಾರದ ಮತ್ತು ಜನರ ಕೊಡುಗೆಯೂ ಇಲ್ಲವೆಂದಿಲ್ಲ. ಹಾಗೆಂದು ಅಲ್ಲಿನ ಶ್ರೀಮಂತಿಕೆಗೇನೂ ಕುಂದು ಬಂದಿಲ್ಲ. ನೂರೆಂಟು ಸಮಸ್ಯೆಗಳ ನಡುವೆಯೂ ಈಶಾನ್ಯ ದೇಶಕ್ಕೆ ಅದರದ್ದೇ ಆದ ಕೊಡುಗೆ ನಿರಂತರವಾಗಿ ನೀಡುತ್ತಲೇ ಬಂದಿದೆ. ಅಖಂಡ ಭಾರತದ ಪರಿಕಲ್ಪನೆಯಲ್ಲಿ ಭಾರತ ತೇಲಾಡುತ್ತಿರುವ ಈ ಸಂದರ್ಭ ಯಾವುದೇ ರೀತಿಯ ತಾರತಮ್ಯ, ಬೇರ್ಪಡುವಿಕೆ, ಮನಸ್ಸುಗಳ ನಡುವೆ ತಡೆಗೋಡೆಗಳ ನಿರ್ಮಾಣ ಸಲ್ಲದು. ಈಶಾನ್ಯದವರನ್ನು ಭಾರತದ ತೆಕ್ಕೆಗೆ ಸ್ವಾಗತಿಸುವ ಮೂಲಕ ಅವರ ಲ್ಲಿನ ಅಸಮಾಧಾನಕ್ಕೆ ಕೊನೆ ಹಾಡುವುದು ಇಂದಿನ ತುರ್ತು. ಅದಕ್ಕೇ ಇರಬೇಕು ನಮ್ಮ ನಾಡಿನ ಈಶಾನ್ಯದ ರಾಜ್ಯಪಾಲ ಪಿ.ಬಿ. ಆಚಾರ್ಯರು ಹೇಳಿದ್ದು ನಾವು ಅಮೆರಿಕಾದ ಬಗ್ಗೆ ತಿಳಿದು ಕೊಂಡಷ್ಟು ಕೂಡ ಈಶಾನ್ಯ ರಾಜ್ಯಗಳ ಬಗ್ಗೆ ಅರಿತಿಲ್ಲ ಎಂದು. 

ಕೊನೆಮಾತು
ಸಂಘದ ಮಾದರಿ ಮತ್ತು ಮಾರ್ಗದರ್ಶನದಲ್ಲಿ ಕರ್ನಾಟಕದ ಅನೇಕ ವಿದ್ಯಾಸಂಸ್ಥೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈಶಾನ್ಯದ ಮಕ್ಕಳು ವಿದ್ಯಾರ್ಜನೆಯಲ್ಲಿ ತೊಡಗಿದ್ದಾರೆ. ಮತಾಂತರವೂ ಸೇರಿದಂತೆ ಈಶಾನ್ಯದ ಹತ್ತಾರು ಸಮಸ್ಯೆಗಳಿಗೆ ಯುವಜನಾಂಗ ಬಲಿಯಾಗದಿರಲೆಂಬ ಆಶಯದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದಕ್ಷಿಣದ ಅನೇಕ ರಾಜ್ಯಗಳಿಗೆ ಅವರನ್ನು ಕರೆತಂದು ಬಹುತೇಕ ಉಚಿತ ವಿದ್ಯೆಯನ್ನು ದೊರಕಿಸುತ್ತಿದೆ. ಅವರಲ್ಲೊಬ್ಬ ಅತ್ಯುತ್ತಮ ಪ್ರಜೆ ಮತ್ತು ರಾಷ್ಟ್ರಭಕ್ತಿಯ ರೂವಾರಿ ಯನ್ನು ಸ್ಥಾಪಿಸಿ ಈಶಾನ್ಯಕ್ಕೆ ಹಿಂದಿರುಗಿಸುತ್ತಿದೆ. ಆ ಮೂಲಕ ಅವರು ಅಲ್ಲಿಯೇ ಶಿಕ್ಷಕರಾಗಿಯೋ ಅಥವಾ ಇನ್ನಿತರ ಚಟುವಟಿಕೆಗಳಿಂದಲೋ ದೇಶಕ್ಕೆ ಕೊಡುಗೆ ನೀಡಲೆಂಬುದು ಅದರ ಮೂಲೋದ್ದೇಶ. 

ಸಣ್ಣ ಪ್ರಾಯದಲ್ಲೇ ಇಲ್ಲಿ ಬಂದು ನೆಲೆಸುವ ಅಂತಹಾ ಮಕ್ಕಳು ಇಲ್ಲಿನ ಭಾಷೆಯನ್ನು ಸಂಪೂರ್ಣವಾಗಿ ಗ್ರಹಿಸುತ್ತವೆ. ಇದೇ ಮಾದರಿಯಲ್ಲಿ ಈಶಾನ್ಯದ ಹಲವಾರು ಮಕ್ಕಳನ್ನು ಪೋಷಿಸುತ್ತಿರುವ “ಅಮೃತಭಾರತಿ’ ಎಂಬ ವಿದ್ಯಾಸಂಸ್ಥೆಯೊಂದು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿದೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಈ ವಿದ್ಯಾಸಂಸ್ಥೆಯ ಮಕ್ಕಳು ಒಂದಿಷ್ಟೂ ಉಚ್ಚಾರ ದೋಷವಿಲ್ಲದೇ ಕನ್ನಡದ ಗೀತೆಯೊಂದನ್ನು ಸೊಗಸಾಗಿ ಹಾಡಿ ನೋಡುಗರ ಹುಬ್ಬೇರಿಸಿದರು. ಈಶಾನ್ಯದವರು ನಮ್ಮವರೇ ಎನ್ನಲು ಇದಕ್ಕಿಂತ ದೊಡ್ಡ ಪುರಾವೆ ಇನ್ನೇನು ಬೇಕು?

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.