ಕೃಷಿ ವಲಯದ ದಿವಾಳಿ ತಡೆಯುವುದೆಂತು?


Team Udayavani, Sep 12, 2017, 7:50 AM IST

12-AN-2.jpg

ಸಗಟು ಹಣದುಬ್ಬರವನ್ನು ಸಲಕರಣೆ ವೆಚ್ಚದ ಮೂಲಕ ಲೆಕ್ಕಾಚಾರ ಮಾಡುವ ಬದಲು ಉತ್ಪನ್ನದ ಬೆಲೆಯ ಮೇಲೆ ಲೆಕ್ಕಾಚಾರ ಹಾಕುವುದರಿಂದ ಹೆಚ್ಚು ನಿಖರವಾಗಿ ಸಗಟು ಹಣದುಬ್ಬರವನ್ನು ವ್ಯಾಖ್ಯಾನಿಸಬಹುದು. ಖರ್ಚು ಮಾಡುವುದು ಮತ್ತು ಹೂಡಿಕೆ ಮಾಡುವುದರ ಆಧಾರದ ಮೇಲೆ ಲೆಕ್ಕಾಚಾರ ಮಾಡಿದರೆ ಸರಿಯಾದ ರೀತಿಯಲ್ಲಿ ಅಂತರಿಕ ಉತ್ಪನ್ನದ ಬೆಳವಣಿಗೆ ಸಿಗಲಾರದು. ಮತ್ತೂಂದು ಅಂಶವೆಂದರೆ ಕೃಷಿ ವಲಯದ ವೃದ್ಧಿದರ 2015-16ರ ಸಂದರ್ಭದಲ್ಲಿ ಶೇ 1.2ರಷ್ಟಿತ್ತು. ಈ ಸಾಲಿನಲ್ಲಿ 2016-17 ಕೃಷಿ ವೃದ್ಧಿದರ ಶೇ. 6ರಷ್ಟು ಅಗುತ್ತದೆಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ನಾವು ಪರಿಶೀಲಿಸಬೇಕು.

ಇಂದಿನ ಅರ್ಥವ್ಯವಸ್ಥೆ ಯಾವುದೇ ರೀತಿಯಲ್ಲೂ ಬದಲಾವಣೆಗೆ ಒಡ್ಡಿಕೊಂಡಿಲ್ಲ. ಬದಲಾವಣೆಗೊಡ್ಡಿಕೊಳ್ಳದ ಅರ್ಥ ವ್ಯವಸ್ಥೆಯನ್ನು ಯಥಾಸ್ಥಿತ ಅರ್ಥ ವ್ಯವಸ್ಥೆ ಎಂದು ಕರೆಯಬಹುದು. ಯಥಾಸ್ಥಿತ ಅರ್ಥ ವ್ಯವಸ್ಥೆಯೆಂದರೆ ಕೃಷಿ, ಕೈಗಾರಿಕೆ, ಸೇವಾವಲಯಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದಿರುವುದು ಎಂದರ್ಥ. ಕೃಷಿವಲಯ ಶೇ. 65ರಿಂದ 70ರಷ್ಟು ಇದ್ದರೂ ಇದು ಗ್ರಾಮೀಣ ಜನರು ಸೃಷ್ಟಿಸುವ ಬೇಡಿಕೆಯನ್ನು ಕುಗ್ಗಿಸಿದೆ. ಉದಾಹರಣೆಗೆ ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ ಮುಂತಾದ ಗ್ರಾಹಕ ಉತ್ಪನ್ನಗಳ ವಿಷಯದಲ್ಲಿ ಕಳೆದ ಎರಡು ವರ್ಷಗಳಿಂದ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಯಾಕೆಂದರೆ ಕಳೆದ ಎರಡು ವರ್ಷಗಳಿಂದ ಬರಗಾಲ ಅನುಭವಿಸುವುದರಿಂದ ಗ್ರಾಮೀಣ ಜನರಲ್ಲಿ ಹಣ ಸಂಗ್ರಹ ಕಡಿಮೆ ಇದೆ. ಹೀಗೆ ಹಣ ಸಂಗ್ರಹ ಕಡಿಮೆ ಇರುವುದರಿಂದ ಮೇಲೆ ಹೇಳಿದಂತೆ ಎಲ್ಲ ತರಹದ ಗ್ರಾಹಕ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗಿದೆ. ಕೃಷಿ ವಲಯ ಅಲ್ಪ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿದ್ದರೂ ಅಕಾಲಿಕ ಮಳೆ, ಪ್ರವಾಹ, ಬರಗಾಲ ಇವೆಲ್ಲವನ್ನೂ ಹೇಗೆ ನಿಭಾಯಿಸಬೇಕು ಎಂಬ ವಿಷಯದಲ್ಲಿ 
ಕೇಂದ್ರ ಮತ್ತು ರಾಜ್ಯ ಸರಕಾರ ಸೋತಿದೆ. ಈಗ ಕೈಗಾರಿಕೋದ್ಯ ಮಿಗಳು ಎಷ್ಟೇ ಜಾಹೀರಾತು ಹಾಗೂ ಇನ್ನಿತರ ಪ್ರಚಾರ ನಡೆಸಿದರೂ ಗ್ರಾಮೀಣ ಜನರ ಬೇಡಿಕೆಯ ಇಳಿಮುಖವನ್ನು ತಪ್ಪಿಸಲು ಆಗಿಲ್ಲ. ಗ್ರಾಮೀಣ ವ್ಯವಸ್ಥೆ ನಗರ ಆರ್ಥಿಕ ವ್ಯವಸ್ಥೆಗೆ ಹೋಲಿಸಿದರೆ ಏನೇನು ಪ್ರಗತಿ ಹೊಂದಿಲ್ಲ ಎಂದು ಭಾವಿಸಬೇಕಾಗಿದೆ. ಕೆಲವು ಸಂದರ್ಭದಲ್ಲಿ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಕೃಷಿ ಅಭಿವೃದ್ಧಿಗೆ ಬೇಕಾದ ಸರಕರಣೆಗಳ ಕೊರತೆಯನ್ನು ಕಾಣಬಹುದಾಗಿದೆ. ಇದಕ್ಕೆ ಉದಾಹರಣೆಯೆಂದರೆ ರಾಣೆಬೆನ್ನೂರಿನಲ್ಲಿ ಕೆಲವು ವರ್ಷಗಳ ಹಿಂದೆ ರಸಗೊಬ್ಬರಗಳ ಕೊರತೆಯಿಂದ, ರೈತರು ನಡೆಸಿದ ಚಳವಳಿ. ಅದನ್ನು ಹತ್ತಿಕ್ಕಲು ನಡೆಸಲಾದ ಗೋಲಿಬಾರ್‌.ಆದ್ದರಿಂದ ಗ್ರಾಮೀಣ ಜನರು ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿದರೆ ಇದು ಗ್ರಾಮೀಣ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಈಗ ಅಂದರೆ 2016-17ನೇ ಸಾಲಿನಲ್ಲಿ ಊಹಿಸಿರುವ ಅಂತರಿಕ ಉತ್ಪನ್ನದ ಬೆಳವಣಿಗೆ ಶೇ 8ರಷ್ಟು ಎಂದು ಹೇಳಲಾಗುತ್ತಿದೆ. ಆದರೆ 2015-16ರಲ್ಲಿ ಅಂತರಿಕ ಉತ್ಪನ್ನದ ಬೆಳವಣಿಗೆ ಶೇ 6.3ರಷ್ಟಿತ್ತು. ಅಂದರೆ ಆಂತರಿಕ ಉತ್ಪನ್ನದ ಏರಿಕೆಯಿಂದ ಗ್ರಾಮೀಣ ಜನರ ಹಣ ಸಂಗ್ರಹ ಶಕ್ತಿ ಏರುತ್ತದೆ. ಇದನ್ನು ಗಮನಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರ ಹೊಸ ಕೃಷಿ ನೀತಿಯನ್ನು ರೂಪಿಸಬೇಕಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಬಡತನಕ್ಕೆ ಅಲ್ಲಿ ಸಂಪ ನ್ಮೂಲಗಳು ವಿಫ‌ುಲವಾಗಿದ್ದರೂ, ಅವನ್ನು ದುಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕಾಗಿದೆ. ಕೌಶಲಾಭಿವೃದ್ಧಿಯು ಮುಖ್ಯ ಕೃಷಿ ನೀತಿಯಾಗಬೇಕು. ಕೌಶಲಾಭಿವೃದ್ಧಿ ಎಂದರೆ, ಗ್ರಾಮೀಣ ಜನರು ಉದ್ಯೋಗದ ಬಗ್ಗೆ ಗುಣಾತ್ಮಕ ಅಂಶಗಳನ್ನು ಮೈಗೂಡಿ ಸಿಕೊಳ್ಳುವುದಾಗಿದೆ.  ಇದಾಗದಿರುವುದರಿಂದಲೇ ಕರ್ನಾಟಕ ಸರಕಾರ ಉಚಿತವಾಗಿ ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ಗಳನ್ನು ನೀಡುತ್ತಿದ್ದರೂ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು. ಕೇಂದ್ರ ಸರಕಾರ ಕೈಗೊಂಡಿರುವ ಗ್ರಾಮೀಣ ಕೌಶಲಾಭಿವೃದ್ಧಿ ಯೋಜನೆ ಜನರ ಇಚ್ಛೆಗನುಗುಣ ವಾಗಿ ಸ್ಪಂದಿಸಬೇಕಾಗಿದೆ. ಕಳೆದ 69 ವರ್ಷಗಳಿಂದ ಸರಕಾರಗಳು ಈ ನಿಟ್ಟಿನಲ್ಲಿ ಯೋಚಿಸದೇ ಇರುವುದು ದುರಂತವಷ್ಟೆ.

ನಾವು ಅಂತರಿಕ ಉತ್ಪನ್ನದಲ್ಲಿ ಈ ಸಾಲಿನಲ್ಲಿ, ಅಂದರೆ 2016- 17ರಲ್ಲಿ ಶೇ. 8ರಷ್ಟು ಬೆಳವಣಿಗೆ ಸಾಧಿಸಿದರೂ ಗ್ರಾಮೀಣ ಚಿತ್ರಣ ಬದಲಾಗದು. ಅದ್ದರಿಂದ ಮೊದಲು ಕೌಶಲಾಭಿವೃದ್ಧಿಯತ್ತ ಹೆಚ್ಚಿನ ಪ್ರಮಾಣದಲ್ಲಿ ನಾವು ಗಮನ ಹರಿಸಬೇಕಾಗಿದೆ. ರಾಜಕೀಯ ವಿಕೇಂದ್ರಿಕರಣದ ಜೊತೆಗೆ ಆರ್ಥಿಕ ವಿಕೇಂದ್ರಿಕರಣವನ್ನೂ ಪರಿಗಣಿಸಬೇಕಾಗಿದೆ. ಆರ್ಥಿಕ ವಿಕೇಂದ್ರಿಕರಣವೆಂದರೆ ಸಣ್ಣ ಸಣ್ಣ  ಗ್ರಾಮೀಣ ಉದ್ಯಮಗಳನ್ನು ಸ್ಥಾಪಿಸುವುದು. ಹೀಗೆ ಸಣ್ಣ ಸಣ್ಣ ಗ್ರಾಮೀಣ ಉದ್ಯಮಗಳು ಗ್ರಾಮೀಣರ ಕೈಯಲ್ಲಿ ಹಣ ಸಂಗ್ರಹಕ್ಕೆ ಪೂರಕವಾಗಬಹುದು. ಕೆಲವರು ಹಣದುಬ್ಬರ ತೀವ್ರವಾಗಬಹುದೆಂದು ಊಹಿಸುತ್ತಾರೆ. ಆದರೆ ಗ್ರಾಮೀಣರಿಗಿಂತ ನಗರ ಪ್ರದೇಶಗಳ ಜನರಲ್ಲಿ ಹಣ ಸಂಗ್ರಹ ವಿಫ‌ುಲವಾಗಿರುವುದರಿಂದ ಹಣದುಬ್ಬರ ತೀವ್ರಗೊಂಡಿರುವುದು. ಕೆಲವು ತಜ್ಞರ ಪ್ರಕಾರ ಈ ವರ್ಷ ಹಣದುಬ್ಬರ ಶೇ. 6.5ರಿಂದ ಶೇ. 5ಕ್ಕೆ ಕುಸಿಯಲಿದೆ. ಆದರೆ ಇದು ಸಾಧ್ಯವಾಗದು ಎಂಬುದು ನನ್ನ ಅಭಿಪ್ರಾಯ. ನಗರ ಪ್ರದೇಶಗಳಲ್ಲಿ ಕೂಲಿ ಗಳಿಸುವ ಆದಾಯ ಗ್ರಾಮೀಣ ಪ್ರದೇಶದಲ್ಲಿರುವ ಕೂಲಿಗೆ ಸಿಗುವುದಿಲ್ಲ.

ಆಹಾರದ ಹಣದುಬ್ಬರ ಈಗ ತೀವ್ರಗತಿಯಲ್ಲಿ ಮೇಲೇರುತ್ತಿದೆ. ಕಳೆದ ಸಾಲಿನಲ್ಲಿ ಶೇ. 5.5ರಷ್ಟಿದ್ದ ಆಹಾರ ಹಣದುಬ್ಬರ, ಇಂದು ಶೇ. 6.5ರಷ್ಟು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಇದನ್ನು ನಿಲ್ಲಿಸದೇ ಹೋದರೆ, ನಮ್ಮ ಅರ್ಥವ್ಯವಸ್ಥೆ ಕುಸಿಯಬಹುದು. ತರಕಾರಿ, ಆಹಾರ ಧಾನ್ಯಗಳು ಜನರ ಕೈಗೆಟುಕದ ರೀತಿಯಲ್ಲಿ ಮೇಲೇರುತ್ತಿವೆ. ನಮ್ಮ ಅಂತರಿಕ ಉತ್ಪನ್ನ ಶೇ. 8ರಷ್ಟು ಆದರೂ, ಆಹಾರ ಹಣದುಬ್ಬರದಿಂದಾಗಿ ಏನೇನೂ ಉಪಯೋಗವಾಗುವುದಿಲ್ಲ. ಆಹಾರದಣದುಬ್ಬರವನ್ನು ಸಗಟು ಹಣದುಬ್ಬರದ ಮೇಲೆ ನಿರ್ಧರಿಸಲಾಗುತ್ತದೆ. ಸಗಟು ಹಣ ದುಬ್ಬರವನ್ನು ಸಲಕರಣೆ ವೆಚ್ಚದ ಮೂಲಕ ಲೆಕ್ಕಾಚಾರ ಮಾಡುವ ಬದಲು ಉತ್ಪನ್ನದ ಬೆಲೆಯ ಮೇಲೆ ಲೆಕ್ಕಾಚಾರ ಹಾಕುವುದರಿಂದ ಹೆಚ್ಚು ನಿಖರವಾಗಿ ಸಗಟು ಹಣದುಬ್ಬರವನ್ನು ವ್ಯಾಖ್ಯಾನಿಸಬಹುದು. ಖರ್ಚು ಮಾಡುವುದು ಮತ್ತು ಹೂಡಿಕೆ ಮಾಡುವುದರ ಆಧಾರದ ಮೇಲೆ ಲೆಕ್ಕಾಚಾರ ಮಾಡಿದರೆ ಸರಿಯಾದ ರೀತಿಯಲ್ಲಿ ಅಂತರಿಕ ಉತ್ಪನ್ನದ ಬೆಳವಣಿಗೆ ಸಿಗಲಾರದು. ಮತ್ತೂಂದು ಅಂಶವೆಂದರೆ ಕೃಷಿ ವಲಯದ ವೃದ್ಧಿದರ 2015-16ರ ಸಂದರ್ಭದಲ್ಲಿ ಶೇ 1-2ರಷ್ಟಿತ್ತು. ಈ ಸಾಲಿನಲ್ಲಿ 2016-17 ಕೃಷಿ ವೃದ್ಧಿದರ ಶೇ. 6ರಷ್ಟು ಅಗುತ್ತದೆಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ನಾವು ಪರಿಶೀಲಿಸಬೇಕು. ಕೃಷಿ ಉತ್ಪನ್ನಗಳ ಉತ್ಪಾದನೆ 285 ದಶಲಕ್ಷ  ಟನ್‌ಗಳಷ್ಟು ಆದಾಗ ನಾವು ಶೇ. 6ರಷ್ಟು ಕೃಷಿ ವಲಯದ ವೃದ್ಧಿದರವನ್ನು ಸಾಧಿಸಬಹುದು.

ಬ್ಯಾಂಕುಗಳಲ್ಲಿ ಕೃಷಿ ವಲಯದಿಂದ ವಾಪಸ್ಸು ಬರದ ಸಾಲ (NPA) ಶೇ. 8.60ರಷ್ಟಿದೆ. ಇದು ಸಾಮಾನ್ಯ ಸಾಲಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಆದರೆ ಈ ಸಾಲಿನಲ್ಲಿ ಇದು ಶೇ. 6.83ರಷ್ಟು ಆಗುವುದು ನಿಜವಾಗಲೂ ಆತಂಕಕಾರಿ ಅಂಶವಾಗಿದೆ. ಆದ್ದರಿಂದ ಕೃಷಿ ವಲಯದ ವಾಪಸ್ಸು ಬರದ ಸಾಲದ ಬಗ್ಗೆ ಸರಕಾರ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ. ವಾಪಸ್ಸು ಬರದ ಸಾಲ (NPA) ಕೃಷಿಯಲ್ಲಿ ಹೆಚ್ಚಿರುವುದಕ್ಕೆ ನಮ್ಮ ತಂತ್ರಜ್ಞಾನ ಹಾಗೂ ಸಾಲದ ಪ್ರಯೋಜನ ಪಡೆಯುತ್ತಿರುವ ಶ್ರೀಮಂತ ರೈತರೇ ಕಾರಣ ಎಂದರೆ ಅತಿಶಯೋಕ್ತಿಯೇನಿಲ್ಲ. ಆದ್ದರಿಂದ ಇಚ್ಛಾ ಸಾಲಗಾರರ ಪ್ರಮಾಣ(ವಿಲ್‌ಫ‌ುಲ್‌ ಡಿಫಾಲ್ಟರ್‌) ಕೃಷಿ ವಲಯದಲ್ಲಿ ತೀವ್ರ ಪ್ರಮಾಣದಲ್ಲಿ, ತೀವ್ರ ಸ್ವರೂಪದಲ್ಲಿ ಬೆಳೆಯುತ್ತಿದೆ. ಆದ್ದರಿಂದ ಇದಕ್ಕೆ ಸರಕಾರ ಕಡಿವಾಣ ಹಾಕಬೇಕಾಗಿದೆ. ಸರಕಾರ ಕಡಿವಾಣ ಹಾಕದಿದ್ದರೆ, ನಮ್ಮ ಕೃಷಿವಲಯ ದಿವಾಳಿಯಾಗಬಹುದು. ಭಾರತದಲ್ಲಿ ಸಣ್ಣ ರೈತರು ಶೇ. 80ರಷ್ಟಿದ್ದಾರೆ, ಇಂತಹ ಸಂದರ್ಭದಲ್ಲಿ ಸಾಲ, ಬಡ್ಡಿ, ಆದಾಯ ಮತ್ತು ಬೇಡಿಕೆ ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹೆಜ್ಜೆಯಿಡಲೇಬೇಕಾಗಿದೆ.

ಡಾ| ಹ. ಸೋಮಶೇಖರ್‌, ಕೃಷಿ ಅರ್ಥಶಾಸ್ತ್ರ ಪ್ರಾಧ್ಯಾಪಕ

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.