ತಿರುಮಲ ವಿವಾದ ಕೊನೆಗೊಳ್ಳುವುದೆಂದು?


Team Udayavani, May 30, 2018, 6:00 AM IST

v-12.jpg

ಈಗ ಮತ್ತೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಾದಗಳು ಸದ್ದು ಮಾಡುತ್ತಿವೆ. ಆದರೂ ರಮಣದೀಕ್ಷಿತುಲು ಹೊರಗಿಟ್ಟ ಅನೇಕ ಸಂಗತಿಗಳಿಂದಾಗಿ ದೇವಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಭಕ್ತರು ಕಳವಳಕ್ಕೆ ಈಡಾಗುತ್ತಿದ್ದಾರೆ. ಅಧಿಕಾರ ವರ್ಗದಿಂದ ದೇವಸ್ಥಾನದ ಎಲ್ಲಾ ಸೇವೆಗಳನ್ನು ಹತ್ತು ನಿಮಿಷಗಳಲ್ಲಿ ಮುಗಿಸುವಂತೆ ಒತ್ತಡ ಹೆಚ್ಚುತ್ತಿದೆಯಂತೆ. ರಾಜಕಾರಣಿಗಳು, ಉದ್ಯಮಿಗಳು, ಸಿನಿ ತಾರೆಯರ ಸೇವೆಯಲ್ಲಿಯೇ ಅಧಿಕಾರ ವರ್ಗ ಧನ್ಯವಾಗುತ್ತಿದೆ. 

“ಕೊಂಡಲಲೋ ನೆಲಕೊನ್ನ ಕೊನೇಟಿ ರಾಯಡು ವಾಡು,
ಕೊಂಡಲಂತ ವರಮುಲು ಗುಪ್ಪೆಡು ವಾಡು’
ಬೆಟ್ಟಗಳಲ್ಲಿ (ಏಳು ಬೆಟ್ಟಗಳ ಒಡೆಯ ವೆಂಕಟೇಶ್ವರ) ನೆಲೆಗೊಂಡಿರುವ ಸ್ವಾಮಿಯು ಬೆಟ್ಟದಷ್ಟು ವರಗಳನ್ನು ಭಕ್ತರಿಗೆ ಕರುಣಿಸುತ್ತಾನೆ ಎಂಬ ಅರ್ಥಪೂರ್ಣವಾದ ಭಾವಹಿನ್ನೆಲೆಯನ್ನು ಅನ್ನಮಾಚಾರ್ಯರ ಈ ತೆಲುಗು ಕೀರ್ತನೆ ಅರ್ಥೈಸುತ್ತದೆ. ಕಲಿ ಯುಗದಲ್ಲಿ ಭೂದೇವಿ-ಶ್ರೀದೇವಿಯೊಂದಿಗೆ ನೆಲೆಗೊಂಡಿರುವ ಗೋವಿಂದನ ಸನ್ನಿಧಾನ ಸಮಸ್ತ ಹಿಂದೂಗಳ ಪಾಲಿಗೆ ಶ್ರೀಮನ್ನಾರಾಯಣನ ಕರಕಮಲಗಳ, ಅಭಯಹಸ್ತಗಳ, ನಯನ ಮನೋಹರ ರೂಪದ ಕ್ಷಣ ಮಾತ್ರದ ದರ್ಶನದಿಂದ ಜೀವನವನ್ನೇ ಪಾವನವಾಗಿಸಿಕೊಳ್ಳುವ ಪವಿತ್ರ ಸ್ಥಳ. 

ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತುಲು ಹಾಗೂ ಇತರ ಮೂವರನ್ನು ಕಡ್ಡಾಯ ನಿವೃತ್ತಿಗೊಳಿಸಿ ತಿರುಪತಿ ತಿರುಮಲ ದೇವಸ್ಥಾನಂ ಬೋರ್ಡ್‌ ತೆಗೆದುಕೊಂಡ ನಿರ್ಣಯ, ಈ ನಿರ್ಣ ಯದ ವಿರುದ್ಧ ಎದ್ದುನಿಂತಿರುವ ರಮಣ ದೀಕ್ಷಿತುಲು ದೇವಸ್ಥಾನದಲ್ಲಿ ಆಗಮಶಾಸ್ತ್ರದ ವಿರುದ್ಧದ ಕಾರ್ಯಕಲಾಪಗಳು ನಡೆಯುತ್ತಿವೆಯೆಂದು ಆರೋಪಿಸಿದ್ದಾರೆ. ಇನ್ನು ಬಹುಮುಖ್ಯ ವಾಗಿ ಮೈಸೂರು ಮಹಾರಾಜರು ಸ್ವಾಮಿಗೆ ಭಕ್ತಿಯಿಂದ ಸಮರ್ಪಿ ಸಿದ ಪಿಂಕ್‌ (ಗುಲಾಬಿ) ಡೈಮಂಡ್‌ ಕಣ್ಮರೆ ಹಿಂದಿರುವ ಕಾಣದ ಶಕ್ತಿಗಳ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಸ್ವಲ್ಪ ಹಿಂದೆ ಕ್ರೆ„ಸ್ತ ಸಮು ದಾಯದ ಪರವಾಗಿ ಒಲವಿರುವ ಪುಟ್ಟಾ ಸುಧಾಕರ್‌ ಯಾದವ್‌ರನ್ನು ಟಿಟಿಡಿ ಬೋರ್ಡ್‌ಗೆ ಅಧ್ಯಕ್ಷರಾಗಿ ನೇಮಿಸಿದ ವಿವಾದ, ಜೊತೆಗೆ ಶಾಸಕರ ಕೋಟಾದಲ್ಲಿ ಮೂಲತಃ ಕ್ರೆ„ಸ್ತ ಧರ್ಮದ ಶಾಸಕಿ ಅನಿತಾರನ್ನು ಸದಸ್ಯರಾಗಿ ನೇಮಕ ಮಾಡಿದ್ದು, ಅನಂತರ ಆಕೆಯನ್ನು ಆ ಸ್ಥಾನದಿಂದ ಕೆಳಗಿಳಿಸಿದ್ದು ಇವೆಲ್ಲ ತಿರುಪತಿಯನ್ನು ವಿವಾದದ-ಚರ್ಚೆಯ ಕೇಂದ್ರವಾಗಿಸುತ್ತಲೇ ಬಂದಿವೆ. ಆದರೆ ತಿರುಪತಿಯ ಹಿನ್ನೆಲೆಯನ್ನು ಸರಿಯಾಗಿ ತಿಳಿಯದೇ ವಿವಾದ ಗಳನ್ನು ಅರಿಯುವುದು ಕಷ್ಟವಾಗುತ್ತದೆ. ಹೀಗಾಗಿ ತಿರುಮಲದ ಹಿನ್ನೆಲೆಯಿಂದಲೇ ಮುನ್ನೆಲೆಗೆ ಬರೋಣ.

ಇಂದಿಗೂ ಇಲ್ಲಿ ವಿಶೇಷವಾದ ಒಂದು ಆಚರಣೆ ರೂಢಿಯಲ್ಲಿದ್ದು, ಗೊಲ್ಲರ ಕುಟುಂಬದವರು ಪ್ರಧಾನ ಅರ್ಚಕರನ್ನು ನಿತ್ಯ ಮುಂಜಾನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಬಂಗಾ ರದ ಬಾಗಿಲನ್ನು ತೆರೆದು ಮೊದಲು ಇವರೇ ಒಳಗೆ ಪ್ರವೇಶಿಸು ತ್ತಾರೆ. ಅನಂತರ ರಾತ್ರಿ ಇವರೇ ಸ್ವಾಮಿ ಸನ್ನಿಧಾನದ ಬಾಗಿಲನ್ನು ಮುಚ್ಚುತ್ತಾರೆ. ಇವರನ್ನು “ಸನ್ನಿಧಿ ಗೊಲ್ಲ’ ಅಂತ ಕರೆಯುತ್ತಾರೆ.

ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಧಾನ ಅರ್ಚಕರು (ಇದು ಗೋಪಿನಾಥುಲು ವಂಶಸ್ಥರಿಗೆ ಅನ್ವಯಿಸುತ್ತದೆ) ವೈಖಾನಸ ಆಗಮ ಶಾಸ್ತ್ರದ ಪ್ರಕಾರ ಭಾರದ್ವಾಜ ಗೋತ್ರದವರಾಗಿದ್ದು, ಚರ್ತುವೇದದ ಶಿಕ್ಷಾಯಜುರ್ವೇದ ಶಾಖಕ್ಕೆ ಸೇರಿದವರು ಕ್ಷೇತ್ರ ದಲ್ಲಿ ಆರಾಧನೆ ಮಾಡಲು ಆರ್ಹರಾಗಿರುತ್ತಾರೆ. ವೈಖಾನಸ ಅರ್ಚಕನಿಗೆ ತಾಯಿಯ ಗರ್ಭದಲ್ಲಿರುವಾಗಲೇ ಎಂಟನೆಯ ತಿಂಗಳಿನಲ್ಲಿ ವಿಷ್ಣುಬಲಿ ನಡೆಯುತ್ತದೆ. ಪ್ರಧಾನ ಆರ್ಚಕರಿಗೆ ಹದಿನೆಂಟು ಸಂಸ್ಕಾರಗಳಿದ್ದು ಇದರಲ್ಲಿ ಮೊದಲ ನೆಯದು ಹಾಗೂ ಅತಿಮುಖ್ಯವಾದದ್ದು ವಿಷ್ಣುಬಲಿ. ವಿಷ್ಣುಬಲಿ ಯೆಂದರೆ ತಾಯಿಯ ಗರ್ಭದಲ್ಲಿರುವ ಮಗುವಿಗೆ ಮಹಾ ವಿಷ್ಣುವಿನ ಅಷ್ಟಾಕ್ಷರಿ ಮಂತ್ರ, ಶಂಖ ಚಕ್ರಧಾರಣೆ ನಡೆದು ಹೋಗುತ್ತದೆ. ಇದನ್ನೇ ಗರ್ಭ ವೈಷ್ಣವತ್ವಃ ಎಂದು ಕೂಡ ಕರೆಯುತ್ತಾರೆ. ಹೀಗಾಗಿ ಪ್ರಧಾನ ಅರ್ಚಕರ ಹುದ್ದೆ ವಂಶ ಪಾರಂಪರ್ಯವಾಗಿರುವುದು. ಈಗ ಪ್ರಧಾನ ಅರ್ಚಕರ ಹುದ್ದೆ ಯಿಂದ ರಮಣದೀಕ್ಷಿತುಲು ಅವರನ್ನು ಮುಕ್ತಗೊಳಿಸಿರುವುದು ಧರ್ಮವಿರುದ್ಧವೂ ಆಗಿದೆ. 

ಇನ್ನು ದೇವಾಲಯದ ಅಭಿವೃದ್ಧಿ-ಇಲ್ಲಿರುವ ಬೆಲೆಬಾಳುವ ಆಭರಣಗಳು, ಬಂಗಾರದ ಒಡವೆಗಳ ಬಗ್ಗೆ ಬೆಳಕು ಚೆಲ್ಲುವು ದಾದರೆ… ಈ ದೇವಾಲಯಕ್ಕೆ ರಾಜ ತೊಂಡಮಾನ, ಪಲ್ಲವರು, ಪಾಂಡ್ಯರು, ಚೋಳರು ಸ್ವಾಮಿಗೆ ಅಪಾರ ಪ್ರಮಾಣದ ಕಾಣಿಕೆ ಗಳನ್ನು ಅರ್ಪಿಸಿದ್ದಾರೆ. ವಿಶೇಷವಾಗಿ ಶ್ರೀಕೃಷ್ಣದೇವರಾಯರು ವಿಮಾನಗೋಪುರ ನಿರ್ಮಾಣ ಮಾಡಿಸಿದರು. ಮರಾಠ ಪೇಶ್ವರು ಕೂಡ ಸ್ವಾಮಿಗೆ ಅಪಾರ ಪ್ರಮಾಣದಲ್ಲಿ ಕಾಣಿಕೆಗಳನ್ನು ಸಮರ್ಪಿಸಿ ದ್ದಾರೆ. ಇನ್ನು ಮೈಸೂರು ಮಹಾರಾಜರು ಗೋವಿಂದನ ಪರ ಮಭಕ್ತರು. ಹೀಗಾಗಿ 1945ರಲ್ಲಿ ಗೋಲ್ಕೊಂಡ ಗಣಿಗಳಲ್ಲಿ ದೊರೆತ ಅತ್ಯಂತ ಬೆಲೆ ಬಾಳುವ, ಈಗ ವಿವಾದದ ಕೇಂದ್ರ ಂದುವಾಗಿರುವ ಪಿಂಕ್‌ ಡೈಮಂಡನ್ನು ಸ್ವಾಮಿಗೆ ಸಮರ್ಪಿಸಿದ್ದರು. ಹೀಗಾಗಿ ರಾಜ-ಮಹಾರಾಜ-ಚಕ್ರವರ್ತಿಗಳು ಅಪಾರ ಪ್ರಮಾಣದಲ್ಲಿ ಧನ ಹಾಗೂ ಬಂಗಾರದ ಕಾಣಿಕೆಗಳನ್ನು ಸ್ವಾಮಿಗೆ ಸಮರ್ಪಿಸಿದ್ದಾರೆ. 1843ರಲ್ಲಿ ಈ ದೇವಸ್ಥಾನದ ನಿರ್ವಹಣೆಯನ್ನು ಹಾಥಿರಾಮ್‌ಜೀ ಮಠಕ್ಕೆ ವರ್ಗಾಯಿಸಲಾ ಯಿತು. ಮುಂದೆ 1932ರಲ್ಲಿ ತಿರುಪತಿ ತಿರುಮಲ ದೇವಸ್ಥಾನಂ ಬೋರ್ಡ್‌ ಅಸ್ತಿತ್ವಕ್ಕೆ ಬಂತು. ಬ್ರಿಟಿಷರು ಕೂಡ ಆ ದೇವಾಲಯದ ಆಡಳಿತದಲ್ಲಿ ಎಂದೂ ಮೂಗು ತೂರಿಸಲಿಲ್ಲ.

1956ರಲ್ಲಿ ಆಂಧ್ರ ಪ್ರದೇಶ ರಾಜ್ಯ ಸ್ಥಾಪನೆಗೊಂಡ ಬಳಿಕ ಈ ಪ್ರದೇಶ ಆಂಧ್ರದ ಪಾಲಾಯಿತು. ಆಂಧ್ರ ಪ್ರದೇಶ ಸರ್ಕಾರವೇ ಅಲ್ಲಿಂದ ಟಿಟಿಡಿ ಬೋರ್ಡಿಗೆ ಸದಸ್ಯರ ನೇಮಕ ಮಾಡುತ್ತದೆ, ಜೊತೆಗೆ ಆಡಳಿತ ನಿರ್ವಹಣೆಗಾಗಿ ಒಬ್ಬ ಹಿರಿಯ ಐಎಎಸ್‌ ಅಧಿಕಾರಿಯನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸುತ್ತದೆ. ಆದರೆ ದೇವಸ್ಥಾನದ ಆಡಳಿತ, ವ್ಯವಹಾರವು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿರುವ ಕಾರಣಕ್ಕೆ ಇಲ್ಲಿ ಏನು ನಡೆಯುತ್ತಿದೆ, ಚಿನ್ನಾಭರಣಗಳು, ಹಣಕಾಸಿನ ವ್ಯವಹಾರಗಳು ಹೊರಜಗತ್ತಿಗೆ ಸರಿಯಾಗಿ ತಿಳಿಯದಾಗಿದೆ. ಹಿಂದೆ ಅವ್ಯವಹಾರ ಗಳ ಬಗ್ಗೆ ತನಿಖೆಗಾಗಿ ನ್ಯಾ. ಜಗನ್ನಾಥ ಆಯೋಗವನ್ನು ನೇಮಿಸ ಲಾಯಿತು. ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ. 

ವೆಂಕಟೇಶ್ವರ ಸ್ವಾಮಿಗೆ ಭಕ್ತರು ಸಮರ್ಪಿಸುವ ಒಟ್ಟು ಕಾಣಿಕೆಗಳ ಬಗ್ಗೆಯೇ ಟಿಟಿಡಿಯಲ್ಲಿ ಗೊಂದಲಗಳಿವೆ. ಕೆಲವು ದಾಖಲೆ ಗಳಲ್ಲಿ ಇದ್ದರೆ, ಇನ್ನುಳಿದವು ದಾಖಲೆಗಳಿಂದ ಮರೆಯಾಗಿವೆ ಎನ್ನಲಾಗುತ್ತಿದೆ. 1996ರಿಂದ ಅನೇಕ ಬೆಲೆಬಾಳುವ ಆಭರಣಗಳು ಕಾಣೆಯಾಗಿವೆ, ಈ ವಿಷಯದಲ್ಲಿ ತನಿಖೆಯಾಗಬೇಕು ಎಂದು ರಮಣ ದೀಕ್ಷಿತುಲು ಆಗ್ರಹಿಸಿದ್ದಾರೆ. 

ವಿಶ್ವದ ಅತ್ಯಂತ ಶ್ರೀಮಂತ ದೇವರೆಂದು ಜಗತøಸಿದ್ಧವಾಗಿದ್ದೇ ತಡ, ಎಲ್ಲರ ಕಣ್ಣು ಗೋವಿಂದನ ಮೇಲೆ ಬಿತ್ತು. ಗೋವಿಂದ ಸನ್ನಿಧಿಯೂ ಇಲ್ಲಿಂದಲೇ ವಿವಾದಗಳಿಗೆ ತುತ್ತಾಗುತ್ತಾ ಹೋದದ್ದು. ಬಹುಮುಖ್ಯವಾಗಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಏಳುಬೆಟ್ಟಗಳ ಒಡೆಯನನ್ನು ಕೇವಲ ಎರಡು ಬೆಟ್ಟಗಳಿಗೆ ಸೀಮಿತಗೊಳಿಸಲು ಮುಂದಾಗಿದ್ದರು! ಕೊನೆಗೆ ರಾಷ್ಟ್ರೀಯ ಮಟ್ಟ ದಲ್ಲಿ ದೊಡ್ಡ ಹೋರಾಟ ನಡೆದ ಪರಿಣಾಮ ಏಳುಬೆಟ್ಟಗಳೂ ತಿಮ್ಮಪ್ಪನಿಗೇ ಸೇರಿದ್ದು ಅಂತ ಘೋಷಣೆ ಮಾಡಲಾಯಿತು. 

ಈಗ ಮತ್ತೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಾದಗಳು ಸದ್ದು ಮಾಡುತ್ತಿವೆ. ಆದರೂ ರಮಣದೀಕ್ಷಿತುಲು ಹೊರಗಿಟ್ಟ ಅನೇಕ ಸಂಗತಿಗಳಿಂದಾಗಿ ದೇವಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಭಕ್ತರು ಕಳವಳಕ್ಕೆ ಈಡಾಗುತ್ತಿದ್ದಾರೆ. ಮೊದಲನೆಯದಾಗಿ ದೇವರಿಗೆ ಸಮಯಕ್ಕೆ ಸರಿಯಾಗಿ ನಡೆಯ ಬೇಕಾದ ಸುಪ್ರಭಾತ ಸೇವೆ, ತೋಮಲ ಸೇವೆ, ಅಷ್ಟದಳ, ಪೂರ್ವಾ ಭಿಷೇಕ ಸೇರಿದಂತೆ ಯಾವುದೇ ಸೇವೆಗಳೂ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲವಂತೆ. ಅಧಿಕಾರ ವರ್ಗದಿಂದ ಎಲ್ಲಾ ಸೇವೆಗಳನ್ನು ಹತ್ತು ನಿಮಿಷಗಳಲ್ಲಿ ಮುಗಿಸುವಂತೆ ಒತ್ತಡ ಹೆಚ್ಚುತ್ತಿದೆಯಂತೆ. ರಾಜಕಾರಣಿಗಳು, ಉದ್ಯಮಿಗಳು, ಸಿನಿ ತಾರೆ ಯರು, ನ್ಯಾಯ ಮೂರ್ತಿಗಳು ಇವರ‌ ಸೇವೆಯಲ್ಲಿಯೇ ಅಧಿ ಕಾರಿವರ್ಗ ಧನ್ಯವಾಗುತ್ತಿದೆ. ಸಾಮಾನ್ಯ ಭಕ್ತರನ್ನು ಕಡೆಗಣಿ ಸುತ್ತಿದೆ. ದೇವರಿಗೆ ಸಮಯಕ್ಕೆ ಸರಿಯಾಗಿ ನೈವೇದ್ಯವನ್ನೂ ನೀಡುತ್ತಿಲ್ಲ. ಪ್ರಸಾದವನ್ನು ಸಹ ಕಡಿತಗೊಳಿಸುವಂತೆ ನಿರಂತರ ಒತ್ತಡ ತರಲಾಗುತ್ತಿದೆಯಂತೆ. (ಈಗ ನಾವು ಸ್ವೀಕರಿಸುತ್ತಿರುವ ಪುಳಿಯೋಗರೆ, ಪೊಂಗಲ್‌, ಮೊಸರನ್ನದಲ್ಲಿನ ಹಿಂದಿನ ರುಚಿ ಯಾಕೆ ಮಾಯವಾಗಿದೆ ಎಂದು ಅರ್ಥವಾಗಿರಬಹುದು). “ರಿಪೇರಿಯ ಹೆಸರಲ್ಲಿ 25 ದಿನ ಪಾಕ ಶಾಲೆಯನ್ನು ಮುಚ್ಚಿ ಉತನನ ಮಾಡಲಾಗಿದೆ, ಗೋಡೆಯಿಂದ ಬೆಲೆಬಾಳುವ ಹರಳುಗಳನ್ನು ತೆಗೆಯಲಾಗಿದೆ’ ಎಂಬ ಗಂಭೀರ ಆರೋಪವಷ್ಟೇ ಅಲ್ಲದೇ, ಈಗ ಬಹುಮುಖ್ಯವಾಗಿ ಜಿನೀವಾದಲ್ಲಿ ಹರಾಜಿಗೆ ಬಂದಿರುವ ಪಿಂಕ್‌ ಡೈಮಂಡ್‌ ವೆಂಕಟರಮಣ ಸ್ವಾಮಿಯ ವಜ್ರ ಆಗಿರ ಬಹುದೆಂದು ದೀಕ್ಷಿತುಲು ಅನುಮಾನ ವ್ಯಕ್ತಪಡಿಸಿದ್ದಾರೆ. 

ಒಟ್ಟಲ್ಲಿ ಅವರ ಆರೋಪಗಳು ನಿಜವೆಂದಾದರೆ ಹೀಗೆ ಮಾಡುತ್ತಿರುವವರು ಒಂದು ಕಡೆ ಆ ಸಾಕ್ಷಾತ್‌ ದೈವಕ್ಕೆ ವಂಚನೆ ಮಾಡಿದವರಷ್ಟೇ ಅಲ್ಲದೇ ಅವನ ಭಕ್ತಸಮೂಹಕ್ಕೂ ಅವಮಾನ ಮಾಡುತ್ತಾ ತಮ್ಮ ಹಿತಾಸಕ್ತಿಗಾಗಿ ಜನರ ನಂಬಿಕೆಗೆ, ಭಕ್ತಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರ್ಥ. ಏನೇ ಆದರೂ ಸತ್ಯಾಸತ್ಯತೆ ಶೀಘ್ರವೇ ಹೊರಬರುವಂತಾಗಲಿ.

ರವೀಂದ್ರ ಕೊಟಕಿ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.