ಚುನಾವಣೆಗೆ ಸಲ್ಲದ ಯುವ ನಾಯಕರು 


Team Udayavani, Feb 12, 2018, 11:25 AM IST

youth-2.jpg

ರಾಜಕೀಯ ಕೇವಲ ಹಿರಿಯರಿಗೆ ಎನ್ನುವ ಕಾಲ ಇದಲ್ಲ. ಆದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹಾಗೂ ವ್ಯಾಪಕವಾಗಿ ಯುವ ಸಂಪತ್ತು ಹೊಂದಿದ ಈ ರಾಷ್ಟ್ರದಲ್ಲೇ ಯುವ ನೇತಾರರಿಗೆ ಕೊರತೆ ಇದೆ. ದೇಶದ ಚುನಾವಣೆಯಲ್ಲಿ ಯುವಕರಿಗೂ ಮೀಸಲಾತಿ ಇರಲಿ. ಶಿಕ್ಷಣವೇ ಒಂದು ಮಾನದಂಡವಾಗಲಿ. ಕ್ರಿಕೆಟ್‌ ರೀತಿ ದೇಶದ ರಾಜಕೀಯ ಆಯ್ಕೆಯ ಮಾನದಂಡವನ್ನೂ ಅನುಕರಿಸಲಿ. 

ಜಗತ್ತಿನಲ್ಲೇ ಅತಿ ಹೆಚ್ಚು ಯುವ ಸಂಪನ್ಮೂಲ ಮತ್ತು ಭವ್ಯ ರಾಜಕೀಯ ಇತಿಹಾಸ ಹೊಂದಿದ ದೇಶ ನಮ್ಮದು. ನಮ್ಮಲ್ಲಿ ಯುವ ಸಂಪನ್ಮೂಲವನ್ನೇನೋ ಬಳಸುತ್ತಿದ್ದೇವೆ. ಆದರೆ ಸದ್ಬಳಕೆ ಮಾಡುವಲ್ಲಿ ಎಡವುತ್ತಿದ್ದೇವೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಕರಿದ್ದರೂ, ಅವರೆಲ್ಲ ಅನಗತ್ಯವಾದ ಚರ್ಚೆ ಮತ್ತು ವಿವಾದಗಳಲ್ಲೇ ಕಳೆದುಹೋಗುತ್ತಿದ್ದಾರೆ. 
ಯುವಕ, ಯುವತಿಯರ ಸಂಖ್ಯೆ ಹೆಚ್ಚಿದ್ದರೂ, ದಿಟ್ಟ ನಿರ್ಧಾರ ಕೈಗೊಂಡು ರಾಜಕೀಯಕ್ಕೆ ಬರುವವರ ತೀವ್ರ ಕೊರತೆ ಇದೆ. ಪ್ರತಿ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಈ ಪೈಕಿ ಬಹುತೇಕ ಪಕ್ಷಗಳು ಚುನಾವಣೆ ಬಳಿಕ ಎಲ್ಲಿರುತ್ತವೆ ಎಂದು ಟಾರ್ಚು ಹಿಡಿದು ಹುಡುಕಬೇಕಾಗುತ್ತದೆ. ಹೊಸ ಪಕ್ಷಗಳೇನೋ ಬರುತ್ತಿವೆ. ಆದರೆ ಹೊಸ ಮುಖಗಳು ಕಾಣುತ್ತಲೇ ಇಲ್ಲ.ಹೊಸ ಪಕ್ಷ ಸ್ಥಾಪಿಸುವವರಲ್ಲಿ ಹೆಚ್ಚಿನವರು ತಾವಿದ್ದ ಪಕ್ಷದಿಂದ ಅತೃಪ್ತರಾಗಿ ಹೊರಬಂದವರೇ ಆಗಿರುತ್ತಾರೆ. ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳಿಂದ ಬಂಡಾಯ ಎದ್ದು ಹೊಸ ಪಕ್ಷವನ್ನು ಹುಟ್ಟು ಹಾಕಿದರೂ, ಮತ್ತದೇ ಹಳೇ ತಲೆಗಳು ಚುನಾವಣೆಗೆ ನಿಲ್ಲುತ್ತಾರೆ. ಆದ್ದರಿಂದ ದೇಶದಲ್ಲಿ ಯುವ ರಾಜಕಾರಣಿಗಳ ಕೊರತೆ ಇದೆ. ಯುವ ರಾಜಕಾರಣಿಗಳಿಗೆ ಅವಕಾಶಗಳೂ ದೊರೆಯುತ್ತಿಲ್ಲ. ಯುವ ನಾಯಕ ವರುಣ್‌ ಗಾಂಧಿ ಅಂಕಣವೊಂದರಲ್ಲಿ “ನಮ್ಮ ದೇಶ ಯೌವನ ಭರಿತ ಆದರೆ ನಮ್ಮ ಸಂಸತ್ತಿಗೆ ವಯಸ್ಸಾಗುತ್ತಿದೆ’ ಎಂದಿರುವುದು ಬಹಳ ಅರ್ಥ ಪೂರ್ಣ. ರಾಜಕೀಯ ಪಕ್ಷಗಳು ಮತ್ತು ನಾಯಕರು ಆಳವಾಗಿ ಚಿಂತಿಸಬೇಕಾದ ವಿಚಾರವಿದು. 

ಪ್ರಯೋಗ ಯಾಕಿಲ್ಲ?
ಓರ್ವ ಯುವ ನಾಯಕನಿಗೆ ಪಕ್ಷದ ಟಿಕೆಟ್‌ ನೀಡಬೇಕೆಂದರೆ ಹತ್ತು ಮಂದಿ ಹಿರಿಯ ನಾಯಕರನ್ನು ಎದುರು ಹಾಕಿಕೊಳ್ಳ
ಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರಿಗೆ ಟಿಕೆಟ್‌ ಸಿಗುವಂತೆ ಮಾಡುವುದು ಕಷ್ಟವೇ ಸರಿ. ಎಲ್ಲ ಪಕ್ಷಗಳು ಗೆಲ್ಲುವ ಸಾಧ್ಯತೆ ಇರುವ ಸ್ಪರ್ಧಿಯನ್ನೇ ಕಣಕ್ಕೆ ಇಳಿಸುತ್ತವೆ. ಭಾರತದಲ್ಲಿ ಯುವಕರನ್ನೇ ಇಟ್ಟುಕೊಂಡು ಚುನಾವಣೆ ಗೆಲ್ಲುವಂತೆ ಪ್ರಯೋಗ ನಡೆಸಲು ಯಾವುದೇ ರಾಜಕೀಯ ಪಕ್ಷಗಳೂ ಸಿದ್ಧವಿಲ್ಲ. ಕೆಲವೊಮ್ಮೆ ಯುವಕರಿಗೇ ಆದ್ಯತೆ ನೀಡಲು ಆಲೋಚಿ ಸಿದಾಗ ಹಿರಿಯ ರಾಜಕಾರಣಿ ತನ್ನ ಮಗನಿಗೇ ಸ್ಥಾನ ಬಿಟ್ಟು ಕೊಟ್ಟು ಬೇರೆಡೆ ಚುನಾವಣೆ ಎದುರಿಸಲು ಯೋಚಿಸುತ್ತಾನೆ. ಇದು ಪ್ರಯೋಗವಲ್ಲ, ಬದಲಾಗಿ ಅಧಿಕಾರ ತನ್ನ ಕುಟುಂಬದ ಕೈತಪ್ಪಿ ಹೋಗಬಾರದೆಂಬ ಸ್ವಾರ್ಥ. 

ಅವಕಾಶಗಳ ಕೊರತೆ
ನಮ್ಮಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಿಗೆ, ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳಿಗೆ ವಿದ್ಯಾರ್ಥಿ ಘಟಕ, ಯುವ ಘಟಕ ಮೊದಲಾದ ಉಪ ಸಂಘಟನೆಗಳಿವೆ. ಅದರಿಂದ ಪಕ್ಷಗಳಿಗೆ ಲಾಭವೇ ಹೊರತು ಯುವ ನಾಯಕರಿಗೆ ಲಾಭವಿಲ್ಲ. ನಾಯಕತ್ವ ಗುಣ ರೂಢಿಸಿಕೊಳ್ಳಲು ತಳಮಟ್ಟದ ಸಂಘಟನೆಗಳು ಹೆಚ್ಚು ಪರಿಣಾ ಮಕಾರಿ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ. ಆದರೆ ಹೀಗೆ ಗುರುತಿಸಿಕೊಂಡವರೂ ರಾಜಕೀಯದ ಮುಖ್ಯ ಭೂಮಿಕೆಗೆ ಬರುವುದು ನಡುವಯಸ್ಸು ಕಳೆದ ಮೇಲೆಯೇ. ಅಷ್ಟರಲ್ಲಿ ಯುವ ಚಿಂತನೆಗಳು ಕಾಲ ಚಕ್ರದ ಅಡಿಗೆ ಸಿಲುಕಿ “ಔಟ್‌ ಡೇಟೆಡ್‌’ ಆಗಿ ಬಿಡುತ್ತವೆ. ಅನೇಕ ವರ್ಷಗಳಿಂದ ನಮ್ಮಲ್ಲಿ ಇದೇ ನಡೆದುಕೊಂಡು ಬಂದಿದೆ. ಪಕ್ಷಗಳ ಸಂಘಟನೆಗಾಗಿ ಯುವಕರ ಮೇಲೆಯೇ ಜವಾಬ್ದಾರಿ ಹೊರಿಸಲಾಗುತ್ತದೆ. ಆದರೆ ಪ್ರಾತಿನಿಧ್ಯ ಮಾತ್ರ ಸಿಗುತ್ತಿಲ್ಲ. ಪಕ್ಷದಲ್ಲಿ ಅವಿರತವಾಗಿ ಶ್ರಮಿಸಿದ ಯುವ ನಾಯಕನಿಗೆ ಬಿ ಫಾರಂ ಪಡೆದುಕೊಳ್ಳುವುದೂ ತೀರಾ ಸವಾಲಿನ ಕೆಲಸ. ಯುವ ಸಮುದಾಯ ಪಕ್ಷಕ್ಕಾಗಿ ದುಡಿಯಬೇಕು. ಆದರೆ ಅವರನ್ನು ನಾಳಿನ ನಾಯಕರನ್ನಾಗಿಸುವುದು ಯಾವ ಪಕ್ಷಕ್ಕೂ ಬೇಡವಾಗಿದೆ. 

ಕುಟುಂಬ ರಾಜಕಾರಣ
ಭಾರತದಲ್ಲಿ ಈಗ 60+ ರಾಜಕಾರಣಿಗಳ ಸಂಖ್ಯೆ ಏರಿಕೆಯಾಗಿ ರುವುದರಿಂದ ಯುವ ಸಮುದಾಯ ಅವಕಾಶದಿಂದ ವಂಚಿತವಾ ಗಿದೆ. ಆದರೂ ನಮ್ಮಲ್ಲಿ ರಾಹುಲ್‌ ಗಾಂಧಿ, ವರುಣ್‌ ಗಾಂಧಿ, ಸಚಿನ್‌ ಪೈಲಟ್‌, ಅಖೀಲೇಶ್‌ ಯಾದವ್‌, ಜ್ಯೋತಿರಾಧಿತ್ಯ ಸಿಂಧಿಯಾ, ನವೀನ್‌ ಜಿಂದಾಲ್‌, ದುಶ್ಯಂತ್‌ ಸಿಂಗ್‌ ಮೊದಲಾ ದವರು ಗುರುತಿಸಿಕೊಂಡಿದ್ದಾರೆ. ಇವರೆಲ್ಲ ಪ್ರಮುಖ ರಾಜಕಾರಣಿ ಗಳ ಮಕ್ಕಳು ಎನ್ನುವುದು ಗಮನಾರ್ಹ ಅಂಶ. ಇನ್ನು ಯುವ ನಾಯಕರುಗಳನ್ನು ನಾವು ಪ್ರೋತ್ಸಾಹಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್‌ ಹಾಗೂ ಕೀಳುಮಟ್ಟದ ಹೇಳಿಕೆಗಳಿಂದಲೇ ಹೀಗಳೆಯುತ್ತಿದ್ದೇವೆ. 

ಗುಜರಾತ್‌ ಮಾದರಿ
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಯುವ ಮತದಾರರ ಸಂಖ್ಯೆ ಯಲ್ಲಿ ಹೆಚ್ಚಳವಾದರೂ ಯುವ ನಾಯಕರು ಮುಂಚೂಣಿಗೆ ಬರುತ್ತಿಲ್ಲ. ಸ್ವತಂತ್ರವಾಗಿ ನಿಂತು ಚುನಾವಣೆ ಎದುರಿಸುವ ಸಾಹಸಕ್ಕೂ ಹೋಗುತ್ತಿಲ್ಲ. ಕಳೆದ ಗುಜರಾತ್‌ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಿದ ಜಿಗ್ನೇಶ್‌ ಮೇವಾನಿ, ಅಲ್ಪೇಶ್‌ ಠಾಕೂರ್‌ ಹಾಗೂ ಹಾರ್ದಿಕ್‌ ಪಟೇಲ್‌ ಅಂತಹ ಹುಮ್ಮಸ್ಸಿನ ನೇತಾರರು ಬೇಕಾಗಿದ್ದಾರೆ. ಅವರ ರಾಜಕೀಯ ಸಿದ್ಧಾಂತ ಮತ್ತು ನಡೆಗಳು ಸರಿಯೊ ತಪ್ಪೋ ಎನ್ನುವುದು ಬೇರೆ ವಿಚಾರ. ಅವರು ಅಪ್ಪ ಹಾಕಿದ ಆಲದ ಮರಕ್ಕೆ ನೇತು ಬಿದ್ದವರಲ್ಲ. ತಮ್ಮದೇ ಆದ ವಿಚಾರಧಾರೆಯನ್ನೂ, ಹೋರಾಟದ ಶೈಲಿಯನ್ನೂ ರೂಢಿಸಿಕೊಂಡ ವರು. ಒಂದು ರಾಜ್ಯದ ರಾಜಕೀಯದ ದಿಕ್ಕನ್ನು ಬದಲಿಸುವ ಛಲವನ್ನು ತುಂಬಿಕೊಂಡಿರುವವರು ಎನ್ನುವುದು ಇಲ್ಲಿ ಮುಖ್ಯ ವಾಗುವ ಅಂಶ. ಅಂತಹ ಸ್ಫೂರ್ತಿಯಿಂದ ಇಂದು ಒಂದಷ್ಟು ಯುವ ರಾಜಕಾರಣಿಗಳು ಬೆಳಗಬೇಕು. ಸ್ವಾತಂತ್ರ್ಯ ಪಡೆದು 70 ವರ್ಷ ತುಂಬಿದ ರಾಷ್ಟ್ರಕ್ಕೆ ಬೇಕಾಗಿರುವುದು ಬಲಿಷ್ಠ ಯುವ ನಾಯಕತ್ವವೇ ಹೊರತು ಧರ್ಮ, ಜಾತಿ ತೋಳ್ಬಲಗಳು ಅಲ್ಲ. ರಾಷ್ಟ್ರೀಯ ಪಕ್ಷಗಳ ಕುರಿತಾಗಿ ಭ್ರಮನಿರಸನ ಹೊಂದಿದ ಅದೆಷ್ಟೋ ಯುವಕರು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆಯು ತ್ತಾರೆ. ಆದರೆ ನಾವೆಲ್ಲ ಮನಸ್ಸು ಮಾಡಿದರೆ ಏನು ಮಾಡಬಲ್ಲೆವು ಎಂಬುದು ಇನ್ನೂ ಮನದಟ್ಟಾಗಿಲ್ಲ. 

ಕರ್ನಾಟಕದ ಸಂದರ್ಭಕ್ಕೆ ಬಂದಾಗಲೂ ಸ್ವತಂತ್ರವಾಗಿ ಚಿಂತಿಸುವ ಯುವ ನಾಯಕರ ಕೊರತೆ ಢಾಳಾಗಿ ಕಾಣಿಸುತ್ತದೆ. ಹೇಳಿಕೊಳ್ಳಲೇನೋ ಅನೇಕ ಯುವ ನಾಯಕರಿದ್ದಾರೆ. ಆದರೆ ಅವರೆಲ್ಲ ಒಂದು ಪಕ್ಷದ ಗರಡಿಯಲ್ಲಿ ಪಳಗಿದವರು ಇಲ್ಲವೆ ಅಪ್ಪನ ನಾಮಬಲದಿಂದ ರಾಜಕಾರಣಕ್ಕೆ ಬಂದವರು. ಸ್ವತಂತ್ರ ಚಿಂತನೆ ರೂಢಿಸಿಕೊಂಡಿರುವ, ಚಳವಳಿಯ ಹಿನ್ನೆಲೆಯಿಂದ ನಾಯಕರಾದವರ್ಯಾರೂ ಕಾಣಿಸುತ್ತಿಲ್ಲ. ಸದ್ಯಕ್ಕೆ ಚಾಲ್ತಿಯಲ್ಲಿರುವ ಯುವ ನಾಯಕರಿಂದ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಅವರೆಲ್ಲ ತಮ್ಮ ಪಕ್ಷಗಳ ಅದೇ ಹಳೇ ಸಿದ್ಧಾಂತಗಳನ್ನು ಮುಂದುವರಿಸುವ ರಾಯಭಾರಿಗಳೇ ಹೊರತು ಹೊಸತನ್ನು ನೀಡುವ ಮೇಧಾವಿಗಳಲ್ಲ. ಹೊಸತನವಿಲ್ಲದ ನೀರಸ ರಾಜಕಾರಣ ನಮ್ಮದು. ಹೀಗಾಗಿ ರಾಜಕಾರಣ ಎನ್ನುವುದು ಈಗ ನಿಂತ ನೀರಾಗಿದೆ. ಈ ನೀರಿನಲ್ಲೇ ಈಜಾಡಲು ಇಳಿಯುವವರನ್ನು ಯುವ ನಾಯಕರು ಎಂದು ಕರೆಯುವುದು ಹೇಗೆ? 

ವಯೋಮಿತಿ ನಿಗದಿಪಡಿಸಿ
ಸರಕಾರಿ ಕೆಲಸಗಳಿಗೆ ಪ್ರಾಯ ಮಿತಿಯನ್ನು ನಿಗದಿಪಡಿಸು ವಂತೆಯೇ ರಾಜಕಾರಣಿಗಳಿಗೂ ಸ್ಪಷ್ಟವಾದ ವಯಸ್ಸನ್ನು ನಿಗದಿ ಮಾಡಬೇಕು. ವರ್ಷದಿಂದ ವರ್ಷಕ್ಕೆ ನಿಗದಿತ ಪ್ರಮಾಣದ ಸಮರ್ಥ ಯುವ ನೇತಾರರು ಮುಂಚೂಣಿಗೆ ಬರುವುದರಿಂದ ನಾಳಿನ ದಿನಗಳು ಚಿಂತನೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಲಿದೆ. ಯುವ ನಾಯಕರನ್ನು ರಾಜಕೀಯದಲ್ಲಿ ಬಳಸಿಕೊಳ್ಳುವುದರ ಮೂಲಕ ಹಿರಿಯ ನಾಯಕರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವುದು ಉತ್ತಮ. ಇಲ್ಲದಿದ್ದರೆ, ಎತ್ತಿನ ದುಡಿಯುವ ಸಾಮರ್ಥ್ಯ ಕಡಿಮೆಯಾದಾಗ ವಯಸ್ಸಾಯಿತು ಎಂದು ಕಸಾಯಿಖಾನೆಗೆ ಸಾಗಿಸಿದಂತಾಗುತ್ತದೆ. 

ಕ್ರಿಕೆಟ್‌ ತಂಡದಂತಿರಲಿ
ರಾಜಕೀಯದಲ್ಲಿ ಯುವಕರ ಪಾಲುದಾರಿಕೆಯು ಒಂದು ಕ್ರಿಕೆಟ್‌ ತಂಡದಂತಿರಬೇಕು. ಕ್ರಿಕೆಟ್‌ನಲ್ಲಿ ಯೋಗ್ಯತೆಯುಳ್ಳ ಯುವ ಆಟಗಾರನಿಗೆ ಮಾತ್ರ ಅವಕಾಶ ಲಭಿಸುತ್ತದೆ. ಅನಾರೋಗ್ಯವಿ ದ್ದಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ. ಹಿರಿಯ ಆಟಗಾರು ತಂಡದ ಮಾರ್ಗದರ್ಶಕರಾಗುತ್ತಾರೆ. ಭ್ರಷ್ಟಾಚಾರ (ಮ್ಯಾಚ್‌ ಫಿಕ್ಸಿಂಗ್‌) ಮಾಡಿದವರಿಗೆ ಆಜೀವ ನಿಷೇಧ ಹೇರಲಾಗುತ್ತಿದೆ. ಇದೇ ಮಾದರಿಯನ್ನು ರಾಷ್ಟ್ರದ ರಾಜಕೀಯದಲ್ಲಿ ಅಳವಡಿಸಬೇಕು. ನಮ್ಮಲ್ಲಿ ಮಾರ್ಗದರ್ಶರಾಗಿರಬೇಕಾದವರು ಆಡುತ್ತಿದ್ದಾರೆ. ಆಡಬೇಕಾದವರು ಇನ್ನೂ ದೇಶೀಯ ಟೂರ್ನಿಯಲ್ಲಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ 5 ವರ್ಷ ನಿಷೇಧವನ್ನು ಹೇರಬೇಕು. ಅನಾರೋಗ್ಯವಿದ್ದರೂ ಚುನಾವಣೆಗೆ ಸ್ಪರ್ಧಿಸುವ ಮನಸ್ಥಿತಿ ಇನ್ನೂ ಜೀವಂತವಾಗಿದೆ. ಆಸ್ಪತ್ರೆಯಲ್ಲಿ ಮಲಗಿರುವಾಗ ಹೆಂಡತಿ, ಮಕ್ಕಳ ಕೈಯಿಂದ ಸರಕಾರ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಅನಾರೋಗ್ಯ ಹೊಂದಿರುವ ನಾಯಕರ ನಾಮಪತ್ರಗಳನ್ನು ಚುನಾವಣಾ ಆಯೋಗ ಪುರಸ್ಕರಿಸಬಾರದು. ಇಂತಹ ಕಠಿನ ನಿಯಮಾವಳಿಗನ್ನು ರೂಪಿಸಬೇಕು.

ಶಿಕ್ಷಣ ಒಂದು ಮಾನದಂಡವಾಗಲಿ
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ಅಕ್ಷರಸ್ಥರ ಸಂಖ್ಯೆ ಶೇ.45ರಷ್ಟು ಮಾತ್ರವಿತ್ತು. ಬೆರಳೆಣಿಕೆಯ ನಾಯಕರು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಹೊಂದಿದ್ದರು. ಬಹುಶಃ ಇದೇ ಕಾರಣಕ್ಕೆ ಚುನಾವಣೆ ಅರ್ಹತೆಗೆ ಶಿಕ್ಷಣವನ್ನು ಒಂದು ಮಾನದಂಡವಾಗಿ ಇರಿಸಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. 70 ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಶಿಕ್ಷಣ ಸಾರ್ವತ್ರಿಕವಾಗಿ ದೊರಕುತ್ತಿದೆ. ಇನ್ನು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಶಿಕ್ಷಣವನ್ನು ಮಾನದಂಡವನ್ನಾಗಿ ಮಾಡಿದರೆ, ಯುವಕರಿಗೆ ಹೆಚ್ಚು ಅವಕಾಶ ದೊರಕಬಹುದು. ಎಸ್ಸೆಸ್ಸೆಲ್ಸಿ ಓದಿದ ಓರ್ವ ಜನಪ್ರತಿನಿಧಿ ಐಎಎಸ್‌, ಐಪಿಎಸ್‌ ಮೊದಲಾದ ಪ್ರತಿಷ್ಠಿತ ಹುದ್ದೆಗಳ ಅಧಿಕಾರಿಗಳ ಮೇಲೆ ನೇರ ಸ್ವಾಮ್ಯ ಸಾಧಿಸುತ್ತಾನೆ. ಈ ವಿರೋಧಾಭಾಸವನ್ನು ಇದರಿಂದ ತೊಡೆದು ಹಾಕಬಹುದು.

ಯುವಕರಿಗೆ ಮೀಸಲಾತಿ ನೀಡಿ
ದೇಶದ ಸಂವಿಧಾನದಲ್ಲಿ ನೀಡಲಾದ ಮೀಸಲಾತಿ ಸಮಾಜ ದಲ್ಲಿರುವ ಅಸಮತೋಲನ ನಿವಾರಿಸುವಲ್ಲಿ ಸ್ವಲ್ಪ ಮಟ್ಟಿಗಾದರೂ ಸಫ‌ಲವಾಗಿದೆ. ಇದನ್ನು ರಾಜಕೀಯ ಕ್ಷೇತ್ರಗಳಲ್ಲಿ ಯುವಕರಿಗೂ ಅನ್ವಯವಾಗುವಂತೆ ರೂಪಿಸಬೇಕು. ಕೆಲವು ನಿರ್ದಿಷ್ಟ ಕ್ಷೇತ್ರಗಳು ಯುವ ಸಮುದಾಯಕ್ಕೆ ಸೀಮಿತ ಎಂದು ಚುನಾವಣಾ ಆಯೋಗ ನಿಯಮ ರೂಪಿಸಬೇಕು. ಎಸ್‌ಟಿ, ಎಸ್‌ಸಿ, ಮಹಿಳಾ ಕ್ಷೇತ್ರಗಳಿಗೆ ಅವಕಾಶ ನೀಡಿದಂತೆ ಯುವಕರಿಗೂ ಅವಕಾಶ ಕಲ್ಪಿಸಬೇಕು.

– ಕಾರ್ತಿಕ್‌ ಅಮೈ 

ಟಾಪ್ ನ್ಯೂಸ್

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.