1 ಪ್ರಕರಣ ಇತ್ಯರ್ಥಕ್ಕೆಬೇಕು 4 ವರ್ಷ
ನಿಧಾನಗತಿಯಿಂದ ಹೊರಬರದ ನ್ಯಾಯಾಲಯಗಳು
Team Udayavani, Jan 23, 2020, 6:35 AM IST
ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಮಂದಗಾಮಿ ಪ್ರವೃತ್ತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ರಾಜ್ಯದಲ್ಲಿನ ನ್ಯಾಯಾಲ ಯಗಳು ಒಂದು ಕೇಸ್ ಇತ್ಯರ್ಥ ಮಾಡಲು ನಾಲ್ಕು ವರ್ಷ ತೆಗೆದುಕೊಳ್ಳುತ್ತಿವೆ ಎಂದು ವಾರ್ಷಿಕ ನ್ಯಾಯಾಲ ಯದ ವರದಿ ಹೇಳಿದೆ.
6ನೇ ಸ್ಥಾನ
ನಿಗದಿತ ಸಮಯಕ್ಕೆ ಕಾನೂನು ನೆರವು ಲಭ್ಯತೆ ಆಗುತ್ತಿದೆಯೇ ಎಂಬ ಮಾನದಂಡ ದಡಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ದೊರಕಿದೆ. ಪೊಲೀಸ್ ಮತ್ತು ಕಾರಾಗೃಹಗಳ ಕಾರ್ಯಾಚರಣೆ ವಿಭಾಗಗಳಲ್ಲಿ ಕ್ರಮವಾಗಿ ಆರನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದೆ. ಒಟ್ಟಾರೆ ಯಾಗಿ ಸುಸ್ಥಿತ ನ್ಯಾಯಾಂಗ ಕಾರ್ಯಾ ಚರಣೆ ನಿರ್ವಹಿಸುವ 18 ರಾಜ್ಯಗಳ ಪೈಕಿ ಕರ್ನಾಟಕ 6ನೇ ಸ್ಥಾನದಲ್ಲಿದೆ.
4 ವರ್ಷಗಳು ಬೇಕು
ಹೈಕೋರ್ಟ್ನ ಕೇಸ್ ರೆಸಲ್ಯೂಶನ್ ಸಮಯದ ಪ್ರಕಾರ, ಕರ್ನಾಟಕ ದಲ್ಲಿನ ಉನ್ನತ ನ್ಯಾಯಾಲಯಗಳು ಒಂದು ಪ್ರಕರಣ ನಿರ್ವಹಿಸಲು ಸರಾಸರಿ ನಾಲ್ಕು ವರ್ಷಗಳ ಕಾಲಾವ ಕಾಶ ತೆಗೆದು ಕೊಳ್ಳುತ್ತಿದ್ದು, ದೇಶದ 18 ದೊಡ್ಡ ಮತ್ತು ಮಧ್ಯಮ ರಾಜ್ಯಗಳ ಪೈಕಿ 10ನೇ ಸ್ಥಾನದಲ್ಲಿದೆ.
4.1 ವರ್ಷ
ಕೆಳ ನ್ಯಾಯಾಲಯಗಳು ಒಂದು ಪ್ರಕರಣವನ್ನು ಇತ್ಯರ್ಥ ಮಾಡಲು 4.1 ವರ್ಷ ತೆಗೆದುಕೊಳ್ಳುತ್ತಿದ್ದು, 18 ರಾಜ್ಯಗಳ ಪೈಕಿ 4ನೇ ಸ್ಥಾನದಲ್ಲಿದೆ.
ಶೇ.11.6 ರಷ್ಟು ಕೇಸ್ ಬಾಕಿ
ರಾಜ್ಯದ ಕೆಳ ನ್ಯಾಯಾಲಯಗಳಲ್ಲಿ ಹತ್ತು ವರ್ಷಗಳ ಹಿಂದಿನ ಶೇ. 11.6ರಷ್ಟು ಕೇಸ್ಗಳು ಬಾಕಿ ಇದ್ದು, ದಶಮಾನಗಳ ಹಿಂದಿನ ಶೇ.2.3ರಷ್ಟು ಕೇಸ್ಗಳು ಬಾಕಿ ಇವೆ.
ಅರ್ಧದಷ್ಟು ಹುದ್ದೆಗಳು ಖಾಲಿ
ರಾಜ್ಯದ ಉನ್ನತ ನ್ಯಾಯಾಲಯಗಳಲ್ಲಿ ಪ್ರತಿ ಎರಡರಲ್ಲಿ ಒಂದು ಹುದ್ದೆ ಖಾಲಿ ಇದ್ದು, ರಾಷ್ಟ್ರೀಯ ಸರಾಸರಿ ಮಟ್ಟಕ್ಕಿಂತ ಇದರ ಪ್ರಮಾಣ ಶೇ.42 ರಷ್ಟು ಹೆಚ್ಚಿದೆ.
ಕೆಳ ನ್ಯಾಯಾಲಯವೂ
ರಾಜ್ಯದ ಕೆಳ ನ್ಯಾಯಾಲಯಗಳಲ್ಲಿ ಶೇ. 29ರಷ್ಟು ಹುದ್ದೆಗಳು ಖಾಲಿ ಇದ್ದು, 66,300 ಜನರಿಗೆ ಕೇವಲ ಓರ್ವ ನ್ಯಾಯಾಧೀಶ ರಿದ್ದಾರೆ.
ಕೆಲವೇ ಮಹಿಳಾ ಸಿಬಂದಿ
ರಾಜ್ಯದ ಉನ್ನತ ನ್ಯಾಯಾಲಯ ಗಳಲ್ಲಿ ಕೇವಲ ಬೆರಳೆನಿಕೆಯಷ್ಟು ಮಹಿಳಾ ಸಿಬಂದಿ ಇದ್ದು, ಪ್ರತಿ ಹತ್ತು ನ್ಯಾಯಾಧೀಶರ ಪೈಕಿ ಒಬ್ಬರು ಮಹಿಳಾ ನ್ಯಾಯಾಧೀಶೆ ಇದ್ದಾರೆ.
ವರದಿಯ ಪ್ರಮುಖ ಅಂಶಗಳು
ನ್ಯಾಯಾಂಗ ಸೇವೆಯಲ್ಲಿ 16ನೇ ಸ್ಥಾನ.
ಕಾನೂನು ನೆರವು ಸೇವೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ.
ಜೈಲು ವ್ಯವಸ್ಥೆಯಲ್ಲಿ 3ನೇ ಸ್ಥಾನ.
ಪೊಲೀಸ್ ಸಿಬಂದಿ ಕೊರತೆಯೇ ಸಮಸ್ಯೆಗೆ ಪ್ರಮುಖ ಕಾರಣ
ಪೊಲೀಸ್ ಇಲಾಖೆಯ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ
ಇಲಾಖೆಯಲ್ಲಿ ಶೇ.5.4ರಷ್ಟು ಮಾತ್ರ ಮಹಿಳೆಯರು.
141 ಕೈದಿಗಳಿಗೆ ಕೇವಲ ಓರ್ವ ಜೈಲು ಅಧಿಕಾರಿ./11
11 ಕೈದಿಗಳಿಗೆ ಓರ್ವ ಜೈಲು ಸಿಬಂದಿ.
ಹೈಕೋರ್ಟ್ನಲ್ಲಿ ಶೇ. 14ರಷ್ಟು ಪ್ರಕರಣಗಳು, ಕೆಳ ನ್ಯಾಯಾಲಯಗಳಲ್ಲಿ ಶೇ. 7ರಷ್ಟು ಪ್ರಕರಣಗಳು ಇತ್ಯರ್ಥ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.