ತಂಬಾಕು ನಿಯಂತ್ರಣ 164 ರಾಷ್ಟ್ರಗಳು ವಿಫಲ
2025 ಸುಮಾರಿಗೆ ಎಷ್ಟು ಇಳಿಕೆ
Team Udayavani, Dec 25, 2019, 8:30 AM IST
ಜಾಗತಿಕವಾಗಿ ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಪ್ರಸ್ತಾವಕ್ಕೆ ಹಿನ್ನಡೆಯಾಗಿದೆ. ಭಾರತ ಸೇರಿದಂತೆ 164 ರಾಷ್ಟ್ರಗಳು ತಮ್ಮ ಗುರಿಯಿಂದ ವಿಮುಖವಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಇದರಲ್ಲಿ ಜಗತ್ತಿನ ಯಾವುದೇ ರಾಷ್ಟ್ರ ತನ್ನ ಗುರಿಯನ್ನು ತಲುಪುವುದಿಲ್ಲ. ಆದರೆ ಕೆಲವು ರಾಷ್ಟ್ರಗಳು ಪಥದಲ್ಲಿವೆ.
25,70,20,000
ಧೂಮಪಾನದಿಂದ ದೂರ ಇರುವವರು.
11,55,63,000
ಧೂಮಪಾನ ಮಾಡುವವರು.
ಪುರುಷ
2010ಶೇ. 57.4
2025ಶೇ. 35.8
ಮಹಿಳೆ
2010ಶೇ. 29.8
2025ಶೇ. 8.0
ಏನಿದು ಗುರಿ ?
ಜಗತ್ತಿನಲ್ಲಿ ತಂಬಾಕನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಪರೋಕ್ಷವಾಗಿ ಅನೇಕ ಜೀವ ಹಾನಿಗಳಿಗೆ ಕಾರಣವಾಗಿದೆ. ಇದನ್ನು ನಿಗ್ರಹಿಸುವ ಉದ್ದೇಶದಿಂದ ಪ್ರತಿ ದೇಶದಲ್ಲಿ ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಯೋಜನೆಯೊಂದನ್ನು ಹಾಕಿಕೊಳ್ಳಲಾಗಿತ್ತು. ಆದರೆ ಯಾವುದೇ
ರಾಷ್ಟ್ರಗಳು ಈ ಗುರಿ ತಲುಪಿಲ್ಲ.
ಶೇ. 30 2025ರ ವೇಳೆಗೆ ಶೇ. 30ರಷ್ಟು ತಂಬಾಕು ಬಳಕೆಯನ್ನು ಕಡಿಮೆಗೊಳಿಸುವ ಗುರಿಯಿತ್ತು. ಆದರೆ ಭಾರತ 2025ರ ವೇಳೆಗೆ ಶೇ. 23ರಷ್ಟು ಮಾತ್ರ ಗುರಿ ಸಾಧಿಸಲಿದೆ.
ಎಲ್ಲೆಲ್ಲಿ ಎಷ್ಟು ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಪೈಕಿ 1 ರಾಷ್ಟ್ರ, 27 ಪಾಶ್ಚಾತ್ಯ ಪೆಸಿಫಿಕ್ ರಾಷ್ಟ್ರಗಳ ಪೈಕಿ 3 ರಾಷ್ಟ್ರಗಳು, 53 ಐರೋಪ್ಯ ರಾಷ್ಟ್ರಗಳ ಪೈಕಿ 6 ರಾಷ್ಟ್ರ ಗಳು, 23 ಪೂರ್ವ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ 1 ರಾಷ್ಟ್ರ, 35 ಅಮೆರಿಕದ ರಾಷ್ಟ್ರಗಳ ಪೈಕಿ 13 ರಾಷ್ಟ್ರಗಳು ಮತ್ತು 46 ಆಫ್ರಿಕಾ ರಾಷ್ಟ್ರಗಳ ಪೈಕಿ 8 ರಾಷ್ಟ್ರಗಳು ಮಾತ್ರ ಈ ಗುರಿಯನ್ನು ಸಾಧಿಸುವ ಪಥದಲ್ಲಿವೆ. ಆದರೆ ಪೂರ್ಣ ಗುರಿ ತಲುಪುವುದು ಅಸಾಧ್ಯ.
ಶೇ. 15: ಅಮೆರಿಕದ ಕೆಲವು ರಾಷ್ಟ್ರಗಳು 2010ರಲ್ಲಿ ಶೇ. 23ರಷ್ಟು ತಂಬಾಕು ಬಳಕೆಯನ್ನು ಕಡಿತಗೊಳಿಸಿದ್ದವು. ಆದರೆ 2025ರ ವೇಳೆಯಲ್ಲಿ ಅವುಗಳು ಶೇ. 15ರ ಆಸುಪಾಸಿನಲ್ಲೇ ಇವೆ.
84 ರಾಷ್ಟ್ರಗಳು: ಒಟ್ಟು 194 ರಾಷ್ಟ್ರಗಳ ಪೈಕಿ 84 ರಾಷ್ಟ್ರಗಳು 2010ಕ್ಕೆ ಹೋಲಿಸಿದರೆ ತಂಬಾಕು ಬಳಕೆಯನ್ನು ಕಡಿಮೆ ಮಾಡಿವೆೆ. ಅವುಗಳು ಶೇ. 30ರ ಆಸುಪಾಸಿನಲ್ಲಿವೆ.
5 ರಾಷ್ಟ್ರಗಳಲ್ಲಿ ಹೆಚ್ಚಳ: 5 ರಾಷ್ಟ್ರಗಳಲ್ಲಿ ತಂಬಾಕಿನ ಬಳಕೆ ಹೆಚ್ಚಾಗಿದೆ. ಕಾಂಗೋ, ಲೆಸ್ತೋ, ನಿಸೊತೊ, ನೈಜರ್, ಈಜಿಪ್ಟ್ ಮತ್ತು ಒಮಾನ್ ರಾಷ್ಟ್ರಗಳಲ್ಲಿ ತಂಬಾಕು ಬಳಕೆ ಹೆಚ್ಚಾಗಿದೆ.
ಮಹಿಳೆಯರು ಇಳಿಕೆ: ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.
1.31 ಕೋಟಿ: ಜಾಗತಿಕವಾಗಿ ಸುಮಾರು 1.31 ಕೋಟಿ ಮಂದಿ ಹೊಗೆ ರಹಿತ ತಂಬಾಕನ್ನು ಸೇವಿಸುವವರಿದ್ದಾರೆ. ಅವರಲ್ಲಿ 80.1ಲಕ್ಷ ಮಂದಿ ಭಾರತದವರು.
ಶೇ. 44: 2010ರ ಅಂಕಿ ಅಂಶಗಳ ಆಧಾರದಲ್ಲಿ ಭಾರತದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಂಬಾಕು ಸೇವಿಸುತ್ತಿದ್ದಾರೆ. ಭಾರತದ ಟಾಪ್ 10 ತಂಬಾಕು ಗ್ರಾಹಕ ರಾಷ್ಟ್ರಗಳಲ್ಲಿ ಒಂದಾಗಿದೆ.
80 ಲಕ್ಷ ಸಾವು
ಪ್ರತಿ ವರ್ಷ ತಂಬಾಕು ಸೇವನೆ ಯಿಂದ ಸುಮಾರು 80 ಲಕ್ಷ ಮಂದಿ ಸಾವನ್ನ ಪ್ಪುತ್ತಿದ್ದಾರೆ. ಇವರಲ್ಲಿ 10.2 ಲಕ್ಷ ಮಂದಿ ಧೂಮಪಾನ ಮಾಡದವರು.
ಜಾಗತಿಕವಾಗಿ 6 ಕೋಟಿ ಇಳಿಕೆ
ಕೆಲವು ರಾಷ್ಟ್ರಗಳಲ್ಲಿ ತಂಬಾಕು ಸೇವನೆ ಹೆಚ್ಚಾಗಿದ್ದರೂ ಒಟ್ಟು ಸಂಖ್ಯೆಯಲ್ಲಿ ಸುಮಾರು 6 ಕೋಟಿ ಮಂದಿ ತಂಬಾಕು ತಿನ್ನುವುದನ್ನು ಬಿಟ್ಟಿದ್ದಾರೆ. ಇವರಲ್ಲಿ ಮಹಿಳೆಯರೆ ಹೆಚ್ಚಿದ್ದಾರೆ. ಆದರೆ ಪುರುಷರಲ್ಲಿ 4 ಕೋಟಿ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.