Nepali ಭಾಷೆಯಲ್ಲಿ ಪ್ರಕಟವಾಗಿವೆ 2 ಪ್ರಾಚೀನ ರಾಮಾಯಣ ಕೃತಿಗಳು!
Team Udayavani, Jan 8, 2024, 5:51 AM IST
ರಾಮಾಯಣ ಇಂದು ಕೇವಲ ಭಾರತದ ಮಹಾ ಕೃತಿಯಾಗದೇ ವಿಶ್ವಾದ್ಯಂತ ವಿವಿಧ ದೇಶಗಳಲ್ಲಿ, ವಿವಿಧ ಭಾಷೆಗಳಲ್ಲಿ ಇದನ್ನು ಅನುವಾದಿಸಿ ಅಳವಡಿ ಸಿಕೊಳ್ಳಲಾಗಿದೆ. ಅಲ್ಲದೇ ಶ್ರೀರಾಮನಿಗಾಗಿಯೇ ದೇಗುಲಗಳನ್ನು ನಿರ್ಮಿ ಸಲಾಗಿದೆ. ಶ್ರೀಲಂಕಾ ಸೇರಿದಂತೆ ನೇಪಾಲ, ಮ್ಯಾನ್ಮಾರ್, ಇಂಡೋ ನೇಷ್ಯಾ, ಕಾಂಬೋಡಿಯಾ ಹಾಗೂ ಇತರ ದೇಶಗಳಲ್ಲಿ ರಾಮಾಯಣದ ಕುರುಹು ಗಳು ಹಾಗೂ ಅಲ್ಲಿನ ಸಂಸ್ಕೃತಿಯಲ್ಲಿ ರಾಮಾಯಣ ಒಳಗೊಂಡಿರುವುದನ್ನು ನಾವು ಕಾಣಬಹುದಾಗಿದೆ.
ಸೀತಾಮಾತೆ, ಜಾನಕಿಯ ಜನ್ಮಸ್ಥಳ ವೆಂದೇ ಹೇಳಲಾಗುವ ನೇಪಾಲ ದಲ್ಲಿಯೂ ರಾಮಾಯಣ ಕೃತಿಗಳು ಲಭ್ಯವಿವೆ. ರಾಮಾಯಣದ ಅತೀ ಹಳೆಯ ಪ್ರತಿಯು ನೇಪಾಲದಲ್ಲಿ ದೊರಕಿ ದೆ. 19ನೇ ಶತಮಾನದ ಮಧ್ಯ ಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ನೇಪಾಲದಲ್ಲಿ ರಾಮಾಯಣ ಸಂಬಂಧಿ ಎರಡು ಕೃತಿಗಳು ರಚನೆಯಾಗಿದ್ದವು.
ಆದಿಕವಿ ಭಾನುಭಕ್ತ ಆಚಾರ್ಯರಿಂದ ರಚಿತವಾದ “ಭಾನುಭಕ್¤ಕೋ ರಾಮಾ ಯಣ’ ವು ನೇಪಾಲಿ ಭಾಷೆಯ ಮೊದಲ ಮಹಾಕಾವ್ಯವಾಗಿದೆ ಹಾಗೂ ಅತ್ಯಂತ ಪ್ರಸಿದ್ಧವಾದ ಕೃತಿಯಾಗಿದೆ. ಈ ಕಾರಣ ದಿಂದ ಭಾನುಭಕ್ತನನ್ನು ಆದಿ ಕವಿ ಎಂದೇ ಕರೆಯಲಾಗಿದೆ.
ಇನ್ನೊಂದು ಮಹಾಕವಿ ಸಿದ್ಧಿಃದಾಸ ಮಹಾಜು ಅವರಿಂದ ನೇಪಾಲಿ ಭಾಷೆ ಯಲ್ಲಿ ರಚಿಸಲಾದ ಸಿದ್ಧಿ ರಾಮಾಯಣವು ನೇಪಾಲಿ ಭಾಷೆಯ ಪುನರುಜ್ಜೀವನದಲ್ಲಿ ಅತ್ಯಂತ ಮಹತ್ತರವಾದ ಪ್ರಭಾವವನ್ನು ಬೀರಿದೆ ಎಂದು ಹೇಳಲಾಗುತ್ತದೆ.
ನೇಪಾಲದ ಸಂಸ್ಕೃತಿ ಯಲ್ಲೂ ರಾಮಾಯಣ ಹಾಸು ಹೊಕ್ಕಾಗಿದೆ. ಪ್ರತೀ ವರ್ಷ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹದ ಸಂಕೇತವಾಗಿ “ಬಿಬಾಹ ಪಂಚಮಿ’ ಎಂಬ ಹಬ್ಬವನ್ನು ಆಚರಿ ಸಲಾಗುತ್ತದೆ.
ಜನಕಪುರ: ನೇಪಾಲದ ಧಾನುಷಾ ಜಿಲ್ಲೆಯಲ್ಲಿ ಜನಕ್‌ಪುರ್‌ಧಾಮ್ ಅಥವಾ ಜನಕಪುರ ವೆಂಬ ನಗರವಿದೆ. ಸೀತಾಮಾತೆಯ ತಂದೆ, ಜನಕ ಈ ಸ್ಥಳದ ರಾಜನಾಗಿದ್ದ ಹಾಗೂ ಈ ಪುಣ್ಯಭೂಮಿಯಲ್ಲೇ ಜನಕನಿಗೆ ಸೀತೆ ದೊರಕಿದ್ದು ಎಂಬ ನಂಬಿಕೆ ಇಲ್ಲಿನ ರಾಮಭಕ್ತರದ್ದಾಗಿದೆ. ಈ ನಗರದಲ್ಲಿ ಸೀತೆ ಹಾಗೂ ರಾಮರ ದೇಗುಲಗಳಿವೆ. ಜನಕಪುರ ನಗರದ ಮಧ್ಯದಲ್ಲಿ ಜಾನಕಿ ಮಂದಿರವಿದ್ದು ನೇಪಾಲದ ಅತೀ ದೊಡ್ಡ ಮಂದಿರಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಸೀತೆಯ ವಿಗ್ರಹವು ಹೂವಿನ ಆಕಾರದಿಂದ ಆವೃತವಾಗಿದ್ದು, ಅಯೋಧ್ಯೆಯ ಸರಯೂ ನದಿಯ ಸಮೀಪದಲ್ಲಿ ಇದು ದೊರಕಿದೆ ಎಂದು ಹೇಳಲಾಗುತ್ತದೆ. ಇದರ ಪಕ್ಕದಲ್ಲೇ ಶ್ರೀರಾಮ ಹಾಗೂ ಸಹೋದರರ ಪ್ರತಿಮೆಗಳನ್ನು ಕಾಣಬಹುದು. ಈ ಮಂದಿರದ ಪಕ್ಕದಲ್ಲೇ ರಾಮ ಸೀತಾ ವಿಹಾರ ಮಂದಿ ರವಿದೆ. ಇನ್ನು ಈ ನಗರದ ಅತೀ ಹಳೆಯ ದೇಗುಲ ಶ್ರೀ ರಾಮ ದೇಗುಲದಲ್ಲಿ 200ಕ್ಕಿಂತಲೂ ಅಧಿಕ ಪವಿತ್ರ ಕೊಳಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.