2022 ಹೊರಳು ನೋಟ: ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ
Team Udayavani, Dec 16, 2022, 6:20 AM IST
ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ
ಸಾರ್ವಜನಿಕವಾಗಿ ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಮೇ 9ರಂದು ಮುಖ್ಯಮಂತ್ರಿ ಬೊಮ್ಮಾಯಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶಿಸಿದ್ದರು. ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಈಗಾಗಲೇ ಕಾನೂನುಬಾಹಿರವಾಗಿ ಧ್ವನಿವರ್ಧಕ ಅಳವಡಿಸಿಕೊಂಡವರು ಕೂಡಲೇ ಅವುಗಳನ್ನು ತೆಗೆಯ ಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ಆದೇಶ ಪಾಲಿಸುವಂತೆ ಸೂಚನೆ ನೀಡಲಾಯಿತು. ಧ್ವನಿ ವರ್ಧಕ ಬಳಕೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ಸರಕಾರ ಮಾರ್ಗಸೂಚಿ ಹೊರಡಿಸಿತ್ತು.
ದೇಶದ ಮೊದಲ ಸೆಮಿ ಕಂಡಕ್ಟರ್ ಘಟಕ ಮೈಸೂರಿನಲ್ಲಿ
ರಾಜ್ಯದ ಮೈಸೂರಿನಲ್ಲಿ ಮೊದಲ ಸೆಮಿ ಕಂಡಕ್ಟರ್ ಘಟಕ ಸ್ಥಾಪಿಸಲು ಐಎಸ್‌ಎಂಸಿ ಆ್ಯನಲಾಗ್ ಫ್ಯಾಬ್ ಪ್ರೈ.ಲಿ. ಮುಂದಾಗಿದ್ದು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮೇ 1ರಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಘಟಕ ಸ್ಥಾಪನೆಗೆ ಕಂಪೆನಿ ಸುಮಾರು 22,900 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ ಮುಂದಿನ ಏಳು ವರ್ಷಗಳಲ್ಲಿ 1,500 ಜನರಿಗೆ ಉದ್ಯೋಗ ದೊರೆಯಲಿದೆ.
ಯುಪಿಎಸ್‌ಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ 30ಕ್ಕೂ ಹೆಚ್ಚು ರ್‍ಯಾಂಕ್
ಐಎಎಸ್, ಐಪಿಎಸ್‌ಮತ್ತು ಐಎಫ್ಎಸ್ ಸೇವೆಗಳ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2021ನೇ ಸಾಲಿನ ಪರೀಕ್ಷಾ ಫಲಿತಾಂಶ ಮೇ 30 ರಂದು ಪ್ರಕಟವಾಗಿದ್ದು, ರಾಜ್ಯದ 30ಕ್ಕೂ ಹೆಚ್ಚು ಮಂದಿ ರ್‍ಯಾಂಕ್ ಗಳಿಸಿದ್ದರು. ದಾವಣಗೆರೆಯ ವಿ. ಅವಿನಾಶ್ 31ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯದ ಅಭ್ಯರ್ಥಿಗಳ ಪೈಕಿ ಅಗ್ರಸ್ಥಾನಿಯಾಗಿ ದ್ದರು. ಬೆಂಗಳೂರಿನ ನ್ಯಾಶನಲ್ ಲಾ ಕಾಲೇಜಿ ನಲ್ಲಿ ಕಾನೂನು ಪದವಿ ಪಡೆದ ಬಳಿಕ ಅವಿನಾಶ್ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಪಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.
ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ
ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ತೆಲುಗರಿಂದ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದ್ದು ಜೂ.5ರಂದು ಬೆಳಕಿಗೆ ಬಂದಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಶ್ರೀಶೈಲ ಕ್ಷೇತ್ರಕ್ಕೆ ತೆರಳಿದ್ದಾಗ ಜೂ.2ರ ಮಧ್ಯರಾತ್ರಿ ಶ್ರೀಶೈಲದ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕ ಮಲಗಿದ್ದಾಗ ಮಧ್ಯರಾತ್ರಿ ಏಕಾಏಕಿ ಆಗಮಿಸಿದ ಸುಮಾರು 12 ಜನರಿದ್ದ ತಂಡ, ಚಾಲಕ, ನಿರ್ವಾಹಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.
ಬಸ್-ಟೆಂಪೋ ಢಿಕ್ಕಿ: 7 ಮಂದಿ ದಹನ
ಕಲಬುರಗಿಯ ಕಮಲಾಪುರ ಸಮೀಪ ಜೂ. 3 ರಂದು ಖಾಸಗಿ ಬಸ್ ಹಾಗೂ ಟೆಂಪೋ ಮುಖಾ ಮುಖೀ ಢಿಕ್ಕಿಯಾಗಿ 7 ಮಂದಿ ಸಜೀವವಾಗಿ ದಹನಗೊಂಡಿದ್ದರು. ಢಿಕ್ಕಿ ಹೊಡೆದ ರಭಸಕ್ಕೆ ಬಸ್ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಬಿದ್ದಿತ್ತು. ಅದರ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಸ್ಪರ್ಶವಾಗಿ ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿತ್ತು.
ಯೋಗ ದಿನದಲ್ಲಿ ಮೋದಿ ಭಾಗಿ
2022ನೇ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ದ್ದರು. “ಮಾನವತೆಗಾಗಿ ಯೋಗ’ ಎಂಬ ಧ್ಯೇಯ ವಾಕ್ಯ ದಡಿ ಈ ಬಾರಿಯ ಯೋಗ ದಿನವನ್ನು ಆಚ ರಿಸಲಾಗಿತ್ತು. 15 ಸಾವಿರ ಜನರು ಪ್ರಧಾನಿ ಯವರೊಂದಿಗೆ ಮೈಸೂರಿನಲ್ಲಿ ನಡೆದ ಯೋಗ ದಲ್ಲಿ ಪಾಲ್ಗೊಂಡಿದ್ದರು. ಜಗತ್ತಿನಾದ್ಯಂತ 25 ಕೋಟಿ ಜನ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಜತೆಗೆ ಇದೇ ಮೊದಲ ಬಾರಿಗೆ ಬೆಂಗ ಳೂರಿನ ಹೈಕೋರ್ಟ್ ಆವರಣದಲ್ಲೂ ಯೋಗ ದಿನವನ್ನು ಆಚರಿಸಲಾಯಿತು. ಇದೇ ವೇಳೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು.
ಮಳೆಯ ಅಬ್ಬರ: ವ್ಯಾಪಕ ಹಾನಿ
ಜೂ.30 ರಂದು ಸುರಿದ ಭಾರೀ ಮಳೆಗೆ ರಾಜ್ಯದ ಹಲ ವೆಡೆ ಕೃತಕ ನೆರೆ ಉಂಟಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ನೆರೆ ಭೀತಿ ಎದು ರಾಗಿತ್ತು. ದ. ಕನ್ನಡದಲ್ಲಿ ಮಳೆಗೆ 11 ಮನೆಗಳಿಗೆ ಹಾನಿ ಯಾಗಿತ್ತು. ಭೂಕುಸಿತ ಉಂಟಾಗಿ, ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಂಗಳೂರು ನಗರದ ಅನೇಕ ಪ್ರದೇಶಗಳು ಜಲಾವೃತವಾಗಿದ್ದವು.
ಪ್ರಮುಖ ಘಟನೆಗಳು
ಮೇ
ಮೇ 2: ಕಲ್ಯಾಣ ಮಿತ್ರ ಸಹಾಯವಾಣಿಗೆ ಚಾಲನೆ
ಮೇ 3: ನ್ಯಾಟ್ ಗ್ರಿ ಡ್‌ಗೆ ಅಮಿತ್ ಶಾ ಚಾಲನೆ
ಮೇ 4: ಚಿತ್ರದುರ್ಗದಲ್ಲಿ ಪುನೀತ್ ರಾಜಕುಮಾರ್‌ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ
ಮೇ 5: 300 ಕೋಟಿ ಕ್ಲಬ್‌ಗ ಕೆಜಿಎಫ್ 2 ಚಿತ್ರ
ಮೇ 7: ಸಿನೆಮಾ, ಕಿರುತೆರೆ ನಟ ಮೋಹನ್ ಜುನೇಜಾ ನಿಧನ
ಮೇ 11: ಗ್ರಾ.ಪಂ. ನೌಕರರ ಶವ ಸಂಸ್ಕಾರಕ್ಕೆ ಸರಕಾರದಿಂದ 10 ಸಾವಿರ ರೂ. ಮಂಜೂರು
ಮೇ 12: ಪಿಎ ಸ್‌ಐ ಹಗರಣ; ಕಿಂಗ್ ಪಿನ್ ಶಾಂತ ಕು ಮಾರ್ ಸೆರೆ
ಮೇ 13: ಆ್ಯಸಿಡ್ ದಾಳಿ ಸಂತ್ರಸ್ತರಿಗೆ 10 ಸಾವಿರ ರೂ. ಮಾಸಾಶನ, 5 ಲಕ್ಷ ರೂ ಸಹಾಯಧನ ನಿರ್ಧಾರ
ಮೇ 16: ಸಭಾಪತಿ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ
ಮೇ 17: ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರ ಅಂಕಿತ
ಮೇ 19: ಶಿವಮೊಗ್ಗದಲ್ಲಿ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ
ಮೇ 20: ಹೊರಗುತ್ತಿಗೆ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಆದೇಶ
ಮೇ 25: ಬೆಂಗಳೂರು- ಚೆನ್ನೈ ಸಾರಿಗೆ ಎಕ್ಸ್‌ಪ್ರೆಸ್ ವೇ ಗೆ ಪ್ರಧಾನಿಯಿಂದ ಶಂಕುಸ್ಥಾಪನೆ
ಮೇ 26: ಡಿಕೆಶಿ ಅಕ್ರಮ ಆಸ್ತಿ ಆರೋಪ; ದಿಲ್ಲಿ ವಿಶೇಷ ಕೋರ್ಟ್ ಆರೋಪ ಪಟ್ಟಿ ಸಲ್ಲಿಕೆ
ಮೇ 27: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ನೇಮಕ
ಮೇ 28: ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನಕ್ಕೆ ಚಾಲನೆ
ಮೇ 30: ರೈತ ಚಳವಳಿ-ಆತ್ಮಾವಲೋಕನ ಕಾರ್ಯಕ್ರಮದಲ್ಲಿ ರಾಕೇಶ್ ಟಿಕಾ ಯತ್‌ಗೆ ಮಸಿ ಬಳಿದು ಹಲ್ಲೆ
ಜೂನ್
ಜೂ. 3: 612 ಕೋ.ಟಿ ರೂಗಳ ಅನುಭವ ಮಂಟಪ ಕಾಮಗಾರಿಗೆ ಬೀದರ್‌ನಲ್ಲಿ ಚಾಲನೆ
ಜೂ.4: ನಾ.ಸೋಮೇಶ್ವರ, ಡಾ| ಮೋಹನ್ ಆಳ್ವ, ಡಾ| ಗುರು ಲಿಂಗ, ಕಾಪಸೆ 2021ನೇ ಸಾಲಿನ ಪುಸ್ತಕ ಪ್ರಾಧಿಕಾರ ಪ್ರಶಸ್ತಿಗೆ ಆಯ್ಕೆ.
ಜೂ.6: ಮಂಗಳೂರಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಯ 52 ಸಾವಿರ ಕೋಟಿ ಒಪ್ಪಂದಕ್ಕೆ ಸಿಎಂ ಸಹಿ
ಜೂ.8: ಗಡಿನಾಡ ಚೇತನ, ನಾಡೋಜ ಡಾ| ಕಯ್ನಾರ ಕಿಂಞಣ್ಣ ರೈ ಅವರ ಜನ್ಮದಿನವನ್ನು ನಾಡಹಬ್ಬವಾಗಿ ಆಚರಿಸಲು ನಿರ್ಧಾರ
ಜೂ 10: ರಾಜ್ಯಸಭೆ ಚುನಾವಣೆ ಬಿಜೆಪಿಗೆ 3, ಕಾಂಗ್ರೆಸ್‌ಗೆ 1 ಸ್ಥಾನ.
l ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಆದೇಶ
ಜೂ.14: ನೂತನ ಲೋಕಾ ಯುಕ್ತರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಬಿ.ಎಸ್. ಪಾಟೀಲ್ ನೇಮಕ
ಜೂ.15: ಪದವೀಧರ ಶಿಕ್ಷಕರ ಕ್ಷೇತ್ರದ ಮತದಾನ ಫಲಿತಾಂಶ; ವಾಯವ್ಯ ಕ್ಷೇತ್ರದಲ್ಲಿ ಬಿಜೆಪಿ, ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು
ಜೂ.18: ದ್ವಿತೀಯ ಪಿಯುಸಿ ಫಲಿತಾಂಶ; ದಕ್ಷಿಣ ಕನ್ನಡ ಪ್ರಥಮ
ಜೂ.23: ಕರಾವಳಿಯಲ್ಲಿ 3 ಸೈನಿಕ ತರಬೇತಿ ಶಾಲೆಗೆ ಅನುಮೋದನೆ
ಜೂ.24: ಹಿರಿಯ ಲೇಖಕ ಡಾ| ಕಾಪಸೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ
ಜೂ.25: ಎಸ್.ಎಂ. ಕೃಷ್ಣ, ಎನ್.ಆರ್. ನಾರಾಯಣ ಮೂರ್ತಿ ಮತ್ತು ಪ್ರಕಾಶ್ ಪಡುಕೋಣೆಗೆ ಅಂತಾರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ
ಜೂ.26: ಬೆಳಗಾವಿಯಲ್ಲಿ ಕ್ರೂಸರ್ ಪಲ್ಟಿಯಾಗಿ 7 ಮಂದಿ ಸಾವು
ಜೂ.27: ರಾಜ್ಯದ ಕಾಶಿಯಾತ್ರೆ ಪ್ರಯಾಣಿಕರಿಗೆ 5 ಸಾವಿರ ರೂ. ಸಹಾಯಧನ
ಜೂ.30: ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.