2022 ಹೊರಳು ನೋಟ: ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ, ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ


Team Udayavani, Dec 5, 2022, 12:50 AM IST

2022 ಹೊರಳು ನೋಟ

ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ
ಟೆನಿಸ್‌ ಲೋಕದ ಸಾರ್ವಕಾಲಿಕ ಹೀರೋ, 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸರದಾರ, ಲೆಜೆಂಡ್ರಿ ಆಟಗಾರ ಸ್ವಿಟ್ಸರ್ಲೆಂಡ್‌ನ‌ ರೋಜರ್‌ ಫೆಡರರ್‌(41) ಸೆ.15ರಂದು ತಮ್ಮ ಸುದೀರ್ಘ‌ ಕ್ರೀಡಾಬಾಳ್ವೆಗೆ ನಿವೃತ್ತಿ ಘೋಷಿಸಿದರು. 6 ಬಾರಿ ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ 1, ವಿಂಬಲ್ಡನ್‌ 8 ಮತ್ತು 5 ಬಾರಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿ ದಾಖಲೆ ನಿರ್ಮಿಸಿದ್ದರು.

ಚೀತಾ ಸಂರಕ್ಷಣೆ ಯೋಜನೆಗೆ ಪ್ರಧಾನಿ ಚಾಲನೆ
ನಮೀಬಿಯಾದಿಂದ 5 ಹೆಣ್ಣು 3 ಗಂಡು ಸಹಿತ ಒಟ್ಟು 8 ಚೀತಾಗಳನ್ನು ವಿಶೇಷ ಅಲೊóà ಲಾಂಗ್‌ ಜೆಟ್‌ ಸೆ. 17ರಂದು ಭಾರತಕ್ಕೆ ಕರೆ ತರಲಾಯಿತು. ಈ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17ರಂದು ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದರು.

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ
ಬರೋಬ್ಬರಿ 70 ವರ್ಷಗಳ ಕಾಲ ಇಂಗ್ಲೆಂಡ್‌ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್‌(96) ಸೆ.8ರಂದು ರಾತ್ರಿ ನಿಧನ ಹೊಂದಿದರು. 2ನೇಎಲಿಜಬೆತ್‌ ಅವರು 1952ರ ಫೆ. 6ರಂದು ತಮ್ಮ 25ನೇ ವಯಸ್ಸಿನಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ನೇತಾಜಿ ಪ್ರತಿಮೆ ಲೋಕಾರ್ಪಣೆ: ರಾಜಪಥ ಇನ್ನು ಇತಿಹಾಸ
ಹೊಸದಿಲ್ಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ನೂತನವಾಗಿ ನಿರ್ಮಿಸಲಾದ “ಕರ್ತವ್ಯಪಥ’ ವನ್ನು ಸೆ. 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದಕ್ಕೂ ಮುನ್ನ ಇಂಡಿಯಾ ಗೇಟ್‌ ಬಳಿ ನೇತಾಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಚೀನದ ಗಗನಚುಂಬಿ ಕಟ್ಟಡಕ್ಕೆ ಬೆಂಕಿ
ಚೀನದ ಅತೀ ದೊಡ್ಡ ದೂರಸಂಪರ್ಕ ಕಂಪೆನಿಗೆ ಸೇರಿರುವ 42 ಅಂತಸ್ತುಗಳ ಗಗನಚುಂಬಿ ಕಟ್ಟಡವೊಂದರಲ್ಲಿ ಸೆ.16 ರಂದು ಅಗ್ನಿ ಅವಘಡ ಸಂಭವಿಸಿತು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಉಂಟಾಗಿರಲಿಲ್ಲ.

ಬಾಲಿವುಡ್‌ನ‌ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ
ಜಿಮ್‌ನಲ್ಲಿ ವ್ಯಾಯಾಮ ಮಾಡು ತ್ತಿರುವಾಗ ಹೃದ ಯಾ ಘಾತಕ್ಕೀಡಾಗಿ ಆಸ್ಪತ್ರೆಗೆ ದಾಖ  ಲಾಗಿದ್ದ ಬಾಲಿ ವುಡ್‌ನ‌ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ (58) ಸೆ.21ರಂದು ನಿಧನ ಹೊಂದಿದರು. ಹಿಂದಿ ಸಿನೆಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಲ್ಲದೆ ಟಿ.ವಿ. ರಿಯಾಲಿಟಿ ಶೋಗಳಿಂದ ಜನಪ್ರಿಯರಾಗಿದ್ದರು.

ದೇಶದಲ್ಲಿ 5ಜಿ ಯುಗಾರಂಭ: ಪ್ರಧಾನಿ ಚಾಲನೆ
ದೇಶದಲ್ಲಿ ಇದೇ ಮೊದಲ ಬಾರಿಗೆ ಬಹುನಿರೀಕ್ಷಿತ 5ಜಿ ಸೇವೆಗೆ ಇಂಡಿಯಾ ಮೊಬೈಲ್‌ ಕಾನ್ಫರೆನ್ಸ್‌- 2022ರಲ್ಲಿ ಪ್ರಧಾನಿ ಮೋದಿ ಅವರಿಂದ ಅ.1ರಂದು ಲೋಕಾರ್ಪಣೆಗೊಂಡಿದ್ದು, ಸದ್ಯ ಆಯ್ದ ನಗರಗಳಲ್ಲಿ ಮಾತ್ರ 5 ಜಿ ಸೇವೆ ಗ್ರಾಹಕರಿಗೆ ಲಭ್ಯವಾಗುತ್ತಿದ್ದು ವರ್ಷಾಂತ್ಯದೊಳಗಾಗಿ ದೇಶಾದ್ಯಂತ ಲಭ್ಯವಾಗಲಿದೆ.

ಫ‌ುಟ್‌ಬಾಲ್‌ ಪಂದ್ಯದಲ್ಲಿ ಸೋಲು: ಅಭಿಮಾನಿಗಳ ದಾಂಧಲೆಗೆ 125 ಸಾವು
ತಮ್ಮ ನೆಚ್ಚಿನ ಫ‌ುಟ್‌ಬಾಲ್‌ ತಂಡ ಪಂದ್ಯದಲ್ಲಿ ಸೋಲನ್ನಪ್ಪಿತು ಎನ್ನುವ ಕಾರಣಕ್ಕೆ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ, ದಾಂಧಲೆ ಎಬ್ಬಿಸಿ 125 ಮಂದಿಯ ಸಾವಿಗೆ ಕಾರಣವಾದ ಘಟನೆಗೆ ಇಂಡೋ ನೇಷ್ಯಾದ ಮಲಾಂಗ್‌ ಸಾಕ್ಷಿಯಾಯಿತು. ಈ ಘಟನೆಯಲ್ಲಿ 180ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ದೇಶದ ಸ್ವತ್ಛ ನಗರ ಇಂದೋರ್‌ ಪ್ರಥಮ
ಕೇಂದ್ರ ಸರಕಾರ ನಡೆಸಿದ ಸ್ವತ್ಛ ಸರ್ವೇಕ್ಷಣ 2022ರ ಸರ್ವೇಯಲ್ಲಿ ಭಾರತದ ಸ್ವತ್ಛ ನಗರ ಎಂಬ ಕೀರ್ತಿಗೆ ಸತತ ಆರನೇ ಬಾರಿಗೆ ಇಂದೋರ್‌ ಮತ್ತು ಮಧ್ಯಪ್ರದೇಶವು ಸ್ವತ್ಛ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಯಿತು. ಕರ್ನಾಟಕದ ಮೈಸೂರಿಗೆ 8ನೇ ಸ್ಥಾನ ಲಭಿಸಿತು.

ಪಾಕ್‌: ಆಸ್ಪತ್ರೆಯಲ್ಲಿ 400 ಶವಗಳು ಪತ್ತೆ
ಪಾಕಿಸ್ಥಾನದ ಪಂಜಾಬ್‌ ಪ್ರಾಂತದ ಸರಕಾರಿ ಆಸ್ಪತ್ರೆಯ ಛಾವಣಿಯಲ್ಲಿ ಅ. 15ರಂದು 400ಕ್ಕೂ ಹೆಚ್ಚು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು. ಇವು ನಿರಾಶ್ರಿತರದ್ದಾ ಗಿರಬಹುದು ಎಂದು ಶಂಕೆ ವ¤ಕ್ತಪಡಿಸಲಾಗಿತ್ತು.

ಚೀನ: ಅಧ್ಯಕ್ಷರಾಗಿ ಜಿನ್‌ಪಿಂಗ್‌ ಪುನರಾಯ್ಕೆ ಚೀನದ ಅಧ್ಯಕ್ಷರಾಗಿ ಅ. 23 ರಂದು ಕ್ಸಿ ಜಿನ್‌ಪಿಂಗ್‌ ಅವರು ಪುನರಾಯ್ಕೆಯಾದರು. ಈ ಮೂಲಕ ಜಿನ್‌ಪಿಂಗ್‌ ಅವರು ಮಾವೋ ಝೆಡಾಂಗ್‌ ಬಳಿಕ ಸತತ ಮೂರನೇ ಅವಧಿಗೆ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಜಿನ್‌ಪಿಂಗ್‌ ನೇತೃತ್ವಕ್ಕೆ ಕಮ್ಯುನಿಸ್ಟ್‌ ಪಕ್ಷ ಮತ್ತೂಮ್ಮೆ ಮಣೆ ಹಾಕಿತು.

“ಪ್ರಚಂಡ ‘ಹೆಲಿಕಾಪ್ಟರ್‌ ಲೋಕಾರ್ಪಣೆ
ಭಾರತೀಯ ಸೇನೆಗೆ ಭೀಮ ಬಲ ತಂದುಕೊಡಬಲ್ಲ, ದೇಶೀಯ ವಾಗಿ ನಿರ್ಮಿತವಾದ “ಪ್ರಚಂಡ’ ಲಘು ಸಮರ ಹೆಲಿಕಾಪ್ಟರ್‌ಗಳನ್ನು ಅ.3ರಂದು ರಕ್ಷಣ ಸಚಿವ ರಾಜ ನಾಥ್‌ ಸಿಂಗ್‌ ಅವರು ಲೋಕಾ ರ್ಪಣೆ ಮಾಡಿದರು.ಬೆಂಗಳೂರಿ ನಲ್ಲಿರುವ ಎಚ್‌ಎ ಎಲ್‌ ಈ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಈಗ ಎಲ್ಲೆಡೆ ಬಳ ಸಲು ಅನು ಕೂಲವಾಗುವಂತೆ ಈ ಹೆಲಿಕಾಪ್ಟರ್‌ ಅನ್ನು ಮರುರೂಪಿಸ ಲಾಗಿದೆ.

ಪ್ರಮುಖ ಘಟನೆಗಳು
ಸೆಪ್ಟಂಬರ್‌
ಸೆ. 2: ಅ.ಭಾ. ಫ‌ುಟ್‌ಬಾಲ್‌ ಫೆಡರೇಶನ್‌ ಅಧ್ಯಕ್ಷರಾಗಿ ಕಲ್ಯಾಣ್‌ ಚೌಬೆ
ಸೆ. 6: ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಸುರೇಶ್‌ ರೈನಾ ನಿವೃತ್ತಿ
ಸೆ. 10: 3ನೇ ಚಾರ್ಲ್ಸ್‌ ಬ್ರಿಟನ್‌ನ ನೂತನ ದೊರೆ; ಅಧಿಕೃತ ಘೋಷಣೆ
ಸೆ. 11: ಏಷ್ಯಾ ಕಪ್‌ ಕ್ರಿಕೆಟ್‌: ಲಂಕಾ ಚಾಂಪಿಯನ್‌
l ಮುಂಬಯಿ: ಸ್ಟೆಲ್ತ್‌ ಯುದ್ಧ ನೌಕೆ ತಾರಾಗಿರಿ ಅನಾವರಣ
ಸೆ.14: ಜಮ್ಮುವಿನಲ್ಲಿ ಮಿನಿ ಬಸ್‌ ಕಮರಿಗೆ ಬಿದ್ದು 11 ಮಂದಿ ಸಾವು
ಸೆ. 16: ಲಕ್ನೋದಲ್ಲಿ ಗೋಡೆ ಕುಸಿದು 13 ಮಂದಿ ಸಾವು
ಸೆ.17: ಲಡಾಖ್‌ ಗಡಿಯಲ್ಲಿ 2 ವರ್ಷಗಳಿಂದ ಇದ್ದ ಚೀನ ಸೇನೆ ವಾಪಸು
ಸೆ. 21: ಉಕ್ರೇನ್‌ಗೆ ಮತ್ತೆ ರಷ್ಯಾದ 3 ಲಕ್ಷ ಸೈನಿಕರ ಲಗ್ಗೆ
ಸೆ.23: ಎನ್‌ಐಎಯಿಂದ ಆಪರೇಶನ್‌ ಮಿಡ್‌ನೈಟ್‌: 45ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ ಬಂಧನ
ಸೆ. 26: ಇರಾನ್‌ನಲ್ಲಿ ಹಿಂಸಾಚಾರ: 50 ಮಂದಿ ಸಾವು
ಸೆ. 28: ಕೇಂದ್ರ ಸರಕಾರದಿಂದ ಪಿಎಫ್ಐ ನಿಷೇಧ
ಸೆ. 30: ವಂದೇ ಭಾರತ್‌ 2.0 ಹಳಿಗೆ ಮೋದಿ ಹಸುರು ನಿಶಾನೆ
– ಕಾಬೂಲ್‌ ಆತ್ಮಾಹುತಿ ದಾಳಿ: 23 ಸಾವು

ಅಕ್ಟೋಬರ್‌
ಅ. 1: ಭಾರತೀಯ ವಾಯುಪಡೆಗೆ ದೇಶೀಯ ಎಲ್‌ಸಿಎಚ್‌ ಬಲ
ಅ. 4: ಉತ್ತರಕಾಶಿಯಲ್ಲಿ ಹಿಮಪಾತ 26 ಸಾವು
ಅ. 5: ಡೆಹ್ರಾಡೂನ್‌ನಲ್ಲಿ ದಿಬ್ಬಣದ ಬಸ್‌ ಕಮರಿಗೆ ಬಿದ್ದು 33 ಸಾವು
ಅ.7: ಹಿರಿಯ ನಟ ಅರುಣ್‌ ಬಾಲಿ ವಿಧಿವಶ
ಅ.10: ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ನಿಧನ
ಅ.12: ಅಪಪ್ರಚಾರದ ಆರೋಪ: ರಷ್ಯಾದಲ್ಲಿ ಮೆಟಾ ಉಗ್ರ ಪಟ್ಟಿಗೆ ಸೇರ್ಪಡೆ
ಅ.15: ಪಾಕಿಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ 400 ಶವಗಳು ಪತ್ತೆ
ಅ.20: ಉಡುಗೊರೆಗಳನ್ನು ಮಾರಿ ಸಿಕ್ಕಿಬಿದ್ದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ಖಾನ್‌ ಅನರ್ಹ
ಅ. 23: ಅಯೋಧ್ಯೆಯಲ್ಲಿ ಹಣತೆ ದೀಪಗಳ ಚಿತ್ತಾರ; 15 ಲಕ್ಷ ದೀಪ ಬೆಳಗಿ ಗಿನ್ನೆಸ್‌ ದಾಖಲೆ
ಅ.24: ನೈಪಿಡಾವ್‌-ಮ್ಯಾನ್ಮಾರ್‌ ಸೇನೆಯಿಂದ ವೈಮಾನಿಕ ದಾಳಿ: 60 ಸಾವು
ಅ.25: ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ
ಅ.28: ಚೀನ, ಪಾಕ್‌ ಗಡಿಯಲ್ಲಿ ಸೇನಾ ಬಳಕೆಗಾಗಿ ಹೆಲಿಪ್ಯಾಡ್‌, ಸೇತುವೆಗಳ ನಿರ್ಮಾಣ, ಮಸ್ಕ್ ತೆಕ್ಕೆಗೆ ಟ್ವಿಟರ್‌
ಅ.30: ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 137 ಸಾವು, ದ. ಕೊರಿಯಾದಲ್ಲಿ ಹ್ಯಾಲೋವೀನ್‌ ಆಚರಣೆ : ಕಾಲು¤ಳಿತಕ್ಕೆ 151 ಬಲಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.