ವೈರಲ್ ಸ್ಟೋರಿ : ಇದು 82ರ ವೃದ್ಧನೋರ್ವನ ಪ್ರೇಮ ಕಥೆ..! ಪ್ರೀತಿಯೆಂದರೇ, ಶುದ್ಧ ಸಲಿಲ..!

ಶ್ರೀರಾಜ್ ವಕ್ವಾಡಿ, Apr 2, 2021, 7:52 PM IST

82-yr-old gatekeeper of haunted Rajasthan village connects with his first love after 50 years. Viral story

ಪ್ರೀತಿಗೆ ಯಾವ ಗಡಿರೇಖೆ ಇದೆ ಹೇಳಿ..? ಅದು ಶುದ್ಧ ಸಲಿಲ ಎಂಬುವುದು ಕೇವಲ ಪುಸ್ತಕಗಳ ಪುಟಗಳಲ್ಲಿರುವ ನುಡಿಗಟ್ಟಲ್ಲ. ಅದು ಕೆಲವೊಬ್ಬರ ಜೀವನದಲ್ಲಿ ಶುದ್ಧ ಸಲಿಲದಂತೆಯೇ ಸ್ಪಷ್ಟವಾಗಿರುತ್ತದೆ.

ರಾಜಸ್ಥಾನದ ಜೈಸಲ್ಮೇರ್‌ ನ ಹಳ್ಳಿಯಾದ ಕುಲಧಾರದ 82 ವರ್ಷದ ಗೇಟ್ ಕೀಪರ್ ವೊಬ್ಬರು ತಮ್ಮ ಬದುಕಿನ ಮೊದಲ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಮೊದಲ ನೋಟದ ಪ್ರೀತಿಯ ಪುಳಕವನ್ನು ಹೊರ ಹಾಕಿ ಸಂತೋಷ ಪಟ್ಟಿದ್ದಾರೆ ಎಂದರೇ ನಿಮಗೆ ಆಶ್ಚರ್ಯವಾಗಲೇ ಬೇಕು.

‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಸಾಮಾಜಿಕ ಮಾಧ್ಯಮವೊಂದರೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಮೊದಲ ಪ್ರೀತಿಯ ಚಿತ್ರಣವನ್ನು ವಿವರಿಸುತ್ತಾ, ನನಗೆ ಮೊದಲ ನೋಟದಲ್ಲಿ ಪ್ರೀತಿಯಾಗಿತ್ತು ಎಂದು ತಮ್ಮ ಪ್ರೇಮ ಪುರಾಣವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ಓದಿ : ತಮಿಳು ಸಂಸ್ಕೃತಿ ಮುಖ್ಯ : ತಮಿಳು ನಾಡಿನಲ್ಲಿ ಪ್ರಧಾನಿ ‘ಜಲ್ಲಿಕಟ್ಟು’ ಗುಣಗಾನ

1970 ರ ದಶಕದಲ್ಲಿ ಜೈಸಲ್ಮೇರ್‌ ಗೆ ಮರೀನಾ ಎಂಬ ಆಸ್ಟ್ರೇಲಿಯಾದ ಮಹಿಳೆ ಐದು ದಿನಗಳ ಪ್ರವಾಸಕ್ಕೆಂದು ಬಂದಿದ್ದಾಗ, ಆಕೆಯ ಮತ್ತು ನನ್ನ ನಡುವೆ ಈ ಪ್ರೇಮಾಂಕುರವಾಗಿದ್ದು ಎಂದು ಪ್ರೀತಿಯ ಸುಕೋಮಲ ಭಾವವನ್ನು ಹ್ಯೂಮನ್ಸ್ ಆಫ್ ಬಾಂಬೆ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ ಎಂಬತ್ತರ ಅಜ್ಜ.

ಆಸ್ಟ್ರೇಲಿಯಾಕ್ಕೆ ವಾಪಸ್ ತೆರಳುವ ಮೊದಲು, ಮರೀನಾ ತನ್ನೊಳಗಿನ ಭಾವನೆಗಳನ್ನು ನನ್ನೊಂದಿಗೆ ಹೇಳಿಕೊಂಡಳು, ಆಕೆ ನನಗೆ, ‘ನಾನು ನಿನ್ನನ್ನು ಇಷ್ಟ ಪಡುತ್ತಿದ್ದೇನೆ’ ಎಂದಾಗ ನಾನು ತುಂಬಾ ನಾಚಿಕೆ ಪಟ್ಟೆ. ಈ ಹಿಂದೆ ನನಗೆ ಯಾರೂ ಹೀಗೆ ಹೇಳಿರಲಿಲ್ಲ. ಆಕೆಗೆ ಪ್ರತಿಕ್ರಿಯೆಯಾಗಿ ನನಗೆ ಒಂದು ಪದವನ್ನೂ ಹೇಳಲಾಗಿಲ್ಲ ಎಂದು ನಾಚಿಕೆ ಪಟ್ಟುಕೊಳ್ಳುತ್ತಾರೆ ಇಳಿವಯಸ್ಸಿನ ಪ್ರೇಮಿ.

ಇನ್ನು, ಪತ್ರಗಳ ಮೂಲಕ ಇಬ್ಬರೂ ದೀರ್ಘಕಾಲದವರೆಗೆ ಪರಸ್ಪರ ಸಂಪರ್ಕದಲ್ಲಿದ್ದರು. ಅಷ್ಟಲ್ಲದೇ,  ತನ್ನ ಕುಟುಂಬಕ್ಕೆ ತಿಳಿಸದೆ 30,000 ಸಾವಿರ ಸಾಲ ಮಾಡಿ,  ಆಕೆಯನ್ನು ಭೇಟಿಯಾಗಲು ಆಸ್ಟ್ರೇಲಿಯಾಕ್ಕೆ ಹೋಗಿದ್ದ ಗೇಟ್ ಕೀಪರ್ ಅಜ್ಜ, ಸುಮಾರು ಮೂರು ತಿಂಗಳು ಅಲ್ಲಿಯೇ ಇದ್ದಿದ್ದರು.

ಆಕೆ ನನ್ನಲ್ಲಿ ನಾವು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸೋಣ ಎಂದು ಕೇಳಿಕೊಂಡಳು. ಆದರೆ ಮರೀನಾ ಭಾರತದಲ್ಲಿರಲು ಸಿದ್ಧವಿರಲಿಲ್ಲ. ಇತ್ತ,  ನನ್ನ  ಕುಟುಂಬವನ್ನು ರಾಜಸ್ಥಾನದಲ್ಲಿ ಬಿಡಲು ಆಗದ  ಕಾರಣ  ನಾವು ಬೇರ್ಪಡಬೇಕಾಯಿತು ಎಂದು ಮೆಲುದನಿದಲ್ಲಿ ಪ್ರೀತಿಯನ್ನು ಪಡೆಯಲು ಸಾಧ್ಯವಾಗದ ಸಣ್ಣ ನೋವಿನಲ್ಲಿ ವಿವರಿಸುತ್ತಾರೆ ಅಜ್ಜ.

ನಂತರದಲ್ಲಿ ಕುಟುಂಬದವರ ಒತ್ತಡದಲ್ಲಿ ಮದುವೆಯಾದ ಅವರು ಕುಲಧಾರದ ಗೇಟ್ ಕೀಪರ್ ಆಗಿ ಕೆಲಸವನ್ನು ಮುಂದುವರಿಸುತ್ತಾರೆ.

“ಆದರೆ ನಾನು ಆಗಾಗ್ಗೆ ಮರೀನಾ ಬಗ್ಗೆ ಯೋಚಿಸುತ್ತೇನೆ‘ಅವಳು ಮದುವೆಯಾಗಬಹುದೇ ? ’,‘ ನಾನು ಅವಳನ್ನು ಮತ್ತೆ ನೋಡಬಹುದೇ ? ’ಆದರೆ ಅವಳಿಗೆ ಪತ್ರ ಬರೆಯಲು ನನಗೆ ಎಂದಿಗೂ ಧೈರ್ಯವಿರಲಿಲ್ಲ,” ಎಂದು ಅವರು ಪ್ರೀತಿಯಲ್ಲಿನ ತೆಳುವಾದ ನೋವನ್ನು ಹಂಚಿಕೊಳ್ಳುತ್ತಾರೆ.

ಸಂಸಾರದ ಜವಾಬ್ದಾರಿಯ ನಡುವೆ ಆಕೆಯ ನೆನಪುಗಳು ನನಗೆ ಗೊತ್ತಿಲ್ಲದೇ, ಮರೆಯಾದವು. ಮಕ್ಕಳು ಉದ್ಯೋಗ ನಿಮಿತ್ತ ಹೊರಗೆ ಹೋದರು ಮತ್ತು ಪತ್ನಿ ಎರಡು ವರ್ಷಗಳ ಹಿಂದೆ ನಿಧನರಾದರು ಎಂದು ವಿಷಾದ ವ್ಯಕ್ತ ಪಡಿಸಿಕೊಂಡಿದ್ದಾರೆ.

ಓದಿ : ಹೈವೋಲ್ಟೇಜ್ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ‌ ಪತ್ತೆ…!

ಇನ್ನು, “ಈಗ ನಾನು 82ರ ವರ್ಷದಲ್ಲಿದ್ದೇನೆ, ಗೇಟ್ ಕೀಪರ್ ಆಗಿದ್ದೇನೆ. ಜೀವನವು ಇನ್ನು ಮುಂದೆ ನನ್ನನ್ನು ಆಶ್ಚರ್ಯಗೊಳಿಸಲಾರದು ಎಂದು ನಾನು ಭಾವಿಸಿದಾಗ,  ಮತ್ತೆ ಆಶ್ಚರ್ಯ ಪಡುವ ಹಾಗೆ ಮಾಡಿದೆ. ಒಂದು ತಿಂಗಳ ಹಿಂದೆ ಮರೀನಾ ನನಗೆ ಪತ್ರ ಬರೆದಿದ್ದಾಳೆ. ’50 ವರ್ಷಗಳ ನಂತರ, ಆಕೆ ನನ್ನನ್ನು ನೆನಪಿಸಿಕೊಂಡಿದ್ದಾಳೆ. ಆಕೆಗೆ ಇನ್ನೂ ನನ್ನ ಮೇಲಿನ ಪ್ರೀತಿ ಮಾಸಿಲ್ಲ. ಆಕೆ ನನ್ನನ್ನು ನಿತ್ಯ ಸ್ಮರಿಸಿಕೊಂಡಿರಬಹದು.

ಅಷ್ಟೇ ಏಕೆ..? ಮರಿನಾ ಇನ್ನೂ ಮದುವೆಯಾಗಿಲ್ಲ. ಆಕೆ ನನ್ನ ನೆನಪಿನಲ್ಲಿಯೇ ಇದ್ದಿರಬಹುದು. ಶೀಘ್ರದಲ್ಲೇ ಭಾರತಕ್ಕೆ ಬರುವುದಕ್ಕೆ ಯೋಜಿಸುತ್ತಿದ್ದೇನೆ ಎಂದು ಆಕೆ ಪತ್ರದಲ್ಲಿ ಹೇಳಿಕೊಂಡಿದ್ದಾಳೆ. ರಾಮನ ಸತ್ಯವಾಗಿಯೂ ನಾನಿಗ ಮತ್ತೆ 21 ರ ಹರೆಯದವನಂತಾಗಿದ್ದೇನೆ. ಆಕೆಯನ್ನು ನೋಡುವುದಕ್ಕೆ ಕಾತುರನಾಗಿದ್ದೇನೆ. ಭವಿಷ್ಯ ಹೇಗಿರುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೇ ನನ್ನ ಮೊದಲ ಪ್ರೀತಿ ನನಗೆ ಮತ್ತೆ ಸಿಕ್ಕಿದೆ. ಆ ಖುಷಿಯನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹರ್ಷ ವ್ಯಕ್ತ ಪಡಿಸಿಕೊಂಡಿದ್ದಾರೆ 82 ರ ವೃದ್ದ ಪ್ರೇಮಿ.

ಈ ಅಪರೂಪದ  ‘ಲವ್ ಸ್ಟೋರಿ’ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಗಳನ್ನು ಪಡೆದುಕೊಳ್ಳುತ್ತಿದೆ. ಕಮೆಂಟ್ಸ್ ಗಳಲ್ಲಿ ಕೆಲವರು ಮರಿನಾ ಅವರ ಫೋಟೋ ಗಾಗಿ ವಿನಂತಿಸಿಕೊಂಡಿದ್ದಾರೆ. ಇನ್ನು ಕೆಲವರು, ಈ ವೃದ್ಧ ಪ್ರೀತಿ ಹಕ್ಕಿಗಳ ಭೇಟಿಯನ್ನು ತೋರಿಸಲು ‘ಹ್ಯೂಮನ್ಸ್ ಆಫ್ ಬಾಂಬೆ’ ಗೆ ಕೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ, ಪ್ರೀತಿ ಅಮರ ಎಂದು ಮತ್ತೆ ನೆನಪಿಸಿಕೊಟ್ಟಿದೆ ಈ ಪ್ರೇಮ ಕಥನ. ದಶಕಗಳ ನಂತರ ಭೇಟಿಯಾಗುತ್ತಿರುವ ಜೋಡಿ ಹಕ್ಕಿಗಳ ಮನಸ್ಸು ಭರ್ತಿಯಾಗಲಿ ಎಂದು ಹಾರೈಸೋಣ.

ಪ್ರೀತಿಯೆಂದರೇ, ಪ್ರೀತಿಯಷ್ಟೇ ಅಲ್ಲ. ನೆಲ ಮುಗಿಲನ್ನು ಸ್ಪರ್ಶಿಸುವ ಸುಂದರ ದಿಗಂತ.

ಓದಿ : ಮಹಾಲಿಂಗಪುರಕ್ಕೆ ಮತ್ತೇ ಕೋವಿಡ್ ಕಂಟಕ : 7 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢ

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.