“ಸವಿ’ಗನ್ನಡಂ ಗೆಲ್ಗೆ


Team Udayavani, Feb 6, 2020, 5:07 AM IST

sam-1

ಖಡಕ್‌ ರೊಟ್ಟಿ, ಪುಂಡಿ ಪಲ್ಯಾ- ಹುಳ್‌ ನುಚ್ಚ 

ಕಲಬುರಗಿಯಲ್ಲಿ ಸಿಗುವ ಖಡಕ್‌ ಜೋಳದ ರೊಟ್ಟಿ, ಪುಂಡಿಪಲ್ಯೆ, ಎಣ್ಣೆಗಾಯಿ, ಗೋಧಿ ಹುಗ್ಗಿ ಊಟದ ಮಜಾನೇ ಬೇರೆ. ಬದನೆಕಾಯಿ ಜೋಳದ ರೊಟ್ಟಿ ಜತೆಗೆ ಸಜ್ಜೆ ರೊಟ್ಟಿ ಸಹ, ಅದರಲ್ಲೂ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ. ಒಂದೊಂದು ಪ್ರದೇಶದಲ್ಲಿ ತನ್ನದೇ ಆದ ಆಹಾರ ಪದ್ಧತಿ ಇರುತ್ತದೆ. ಜನಸಾಮಾನ್ಯರ ಉಪಹಾರ ಸುಸಲಾ- ಮಿರ್ಚಿಯಾದರೆ, ಊಟಕ್ಕೆ ಜೋಳದ ರೊಟ್ಟಿಯೇ ಮುಖ್ಯ ಆಹಾರ. ಕಲಬುರಗಿ ಉದ್ದಕ್ಕೂ, ಬೆಳಿಗ್ಗೆ ಹೊತ್ತು ಚುರುಮುರಿ ಸುಸಲಾ- ಜವಿಗೋಧಿ ರವಾದ ಉಪ್ಪಿಟ್ಟು ಸೇವಿಸುವುದು ಸರ್ವೇ ಸಾಮಾನ್ಯ. ಒಮ್ಮೆ ರೊಟ್ಟಿ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.

ಮಸಲಾ- ಮಿರ್ಚಿ ಮಾಮೂಲು
ಹೊಟೇಲ್‌ಗ‌ಳು, ಅದರಲ್ಲೂ ಚಿಕ್ಕ ಹೋಟೆಲ್‌ಗ‌ಳು ಚುರುಮುರಿ ಸುಸಲಾ- ಮಿರ್ಚಿ ಭಜಿಗಳಿಂದಾಗಿಯೇ ಬೆಳಗ್ಗೆ ಹೊತ್ತು ಗ್ರಾಹಕರಿಂದ ತುಂಬಿ ತುಳುಕುತ್ತಾ ಜನರನ್ನು ಆಕರ್ಷಿಸುತ್ತವೆ. ಬಿಳಿ ಜೋಳದ ರೊಟ್ಟಿಯೊಂದಿಗೆ ಶೇಂಗಾ ಹಿಂಡಿ, ಅಗಸಿ ಹಿಂಡಿ, ಕಾರೆಳ್ಳು ಹಿಂಡಿ, ಪುಂಡಿ ಪಲ್ಯ ಸೇರಿದಂತೆ ಎಲ್ಲಾ ತರಕಾರಿಗಳನ್ನು ಸೇರಿಸಿ ಮಾಡುವ ಮುದ್ದೆ ಪಲ್ಯೆ ಬಾಯಿಯಲ್ಲಿ ನೀರೂರುವಂತೆ ಮಾಡುತ್ತದೆ.
ಅದರಲ್ಲೂ ಖಡಕ್‌ ಜೋಳದ ರೊಟ್ಟಿ, ಹುಳಾನುಚ್ಚು, ಅಗಸಿ ಹಿಂಡಿ, ಕುಸುಬಿ ಎಣ್ಣಿಯೊಂದಿಗೆ ಉಳ್ಳಾಗಡ್ಡಿ ಸೇರಿಸಿಕೊಂಡು ತಿಂದರೆ ಅದು ಪಂಚ ಪರಮಾನ್ನಕ್ಕಿಂತಲೂ ಶ್ರೇಷ್ಠ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಈ ಭಾಗದಲ್ಲಿ ಗೋಧಿ ರವೆಗೆ ಬೆಲ್ಲ ಸೇರಿಸಿ ಮಾಡುವ ಸಜ್ಜಕ, ಅದರಲ್ಲಿ ತುಪ್ಪ ಹಾಕಿ ಸವಿಯುವುದು ಸರ್ವೇ ಸಾಮಾನ್ಯ. ಇದು ಸರಳವಾಗಿ ಹಾಗೂ ಶೀಘ್ರವಾಗಿ ತಯಾರಾಗುವ ಆಹಾರ. ಯಾರಾದರೂ ನೆಂಟರು ಸಮಯವಲ್ಲದ ಸಮಯಕ್ಕೆ ಬಂದಾಗ ತುರ್ತಿನಲ್ಲಿ ಮಾಡಲು ಸಜ್ಜಕ ಒಂದು ಉತ್ತಮವಾದ ಆಯ್ಕೆ. ಸಜ್ಜಕವನ್ನು ಈಗಲೂ ದೊಡ್ಡ ದೊಡ್ಡ ಜಾತ್ರೆ ಹಾಗೂ ಖಾಂಡಗಳಲ್ಲೂ ಪ್ರಸಾದ ರೂಪದಲ್ಲಿ ಮಾಡಿ ಬಡಿಸಲಾಗುತ್ತದೆ.

ಶೇಂಗಾ ಹೋಳಿಗೆ ಕರಾಮತ್ತು
ಬಡವರ ಮನೆಯ ಮದುವೆಗಳಲ್ಲಿ ಹಿಂದೆ ಸಜ್ಜಕವೇ ಸಿಹಿ ತಿಂಡಿಯಾಗಿತ್ತು. ಶ್ರೀಮಂತರ ಮದುವೆಗಳಲ್ಲಿ ಶೀರಾ ಸಿಹಿ ತಿಂಡಿಯಾಗಿರುತ್ತಿತ್ತು. ಜವೆ ಗೋಧಿಯಿಂದ ತಯಾರಾಗುವ ಗೋಧಿ ಹುಗ್ಗಿ ಸಹ ಈ ಭಾಗದ ಜನಪ್ರಿಯ ಖಾದ್ಯ. ಜವೆಗೋಧಿಯನ್ನು ಅದರ ಮೇಲಿನ ಹೊಟ್ಟು ಹೋಗುವಂತೆ ನೀರು ಹಚ್ಚಿ, ಚೆನ್ನಾಗಿ ಒಣಗಿಸಿ, ನಂತರ ಒನಕೆಯಿಂದ ಕುಟ್ಟಿ ಹುಗ್ಗಿ ಅಕ್ಕಿಯನ್ನು ಮಾಡಲಾಗುತ್ತದೆ. ಅದನ್ನು ಕುದಿಸಿ ಗೋದಿಯ ಹೊಟ್ಟೆಯೊಡೆದು ಕುದ್ದಮೇಲೆ ಅದಕ್ಕೆ ಬೆಲ್ಲ, ಯಾಲಕ್ಕಿ ಇತ್ಯಾದಿ ಸೇರಿಸಿ ತಯಾರಿಸಲಾಗುತ್ತದೆ. ಇದಲ್ಲದೆ, ಅಂಬಲಿ ಎಂಬ ಖಾದ್ಯವನ್ನೂ ಗ್ರಾಮೀಣ ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಇದು ಹೊಟ್ಟೆಗೆ ತಂಪು ನೀಡುತ್ತದೆ.

ಕಡಲೆಬೇಳೆಯಿಂದ ತಯಾರಿಸಲಾಗುವ ಹೋಳಿಗೆ ಈ ಭಾಗದಲ್ಲಿ ಹೆಚ್ಚು ಜನಪ್ರಿಯ. ಇದರೊಂದಿಗೆ ತೊಗರಿಬೇಳೆಯಿಂದಲೂ ಹೋಳಿಗೆ ಮಾಡಲಾಗುತ್ತದೆ. ಬಿಸಿ ಬಿಸಿ ಹೋಳಿಗೆ ಅದರ ಮೇಲೆ ತುಪ್ಪ, ಪಕ್ಕದಲ್ಲಿ ಬದನೆಕಾಯಿ ಪಲ್ಯೆ, ಸಂಡಿಗೆ, ಹಪ್ಪಳ, ಬಾಳಕದ ಮೆಣಸಿನಕಾಯಿ ಇದ್ದರೆ, ಒಬ್ಬೊಬ್ಬರೂ ನಾಲ್ಕೈದು ಹೋಳಿಗೆಯನ್ನು ಸವಿದೇ ಸವಿಯುತ್ತಾರೆ. ಶೇಂಗಾ, ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಶೇಂಗಾ ಹೋಳಿಗೆ ಸಹ ಈ ಭಾಗದ ಇನ್ನೊಂದು ಜನಪ್ರಿಯ ಸಿಹಿತಿಂಡಿಯಾಗಿದೆ.

ಟಾಪ್ ನ್ಯೂಸ್

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.