ಭಾವ ಗಾನ ಯಾನಿ

ಎಚ್ಚೆಸ್ವಿಯೊಂದಿಗೆ ನೆನಪಾಗುವ ಭಾವಗೀತೆಗಳು

Team Udayavani, Feb 6, 2020, 5:35 AM IST

sam-14

ಎಚ್ಚೆಸ್ವಿಯವರ ಕಾವ್ಯವನ್ನು ಅಭ್ಯಸಿಸದವರೂ, ಅವರ ಹೆಸರನ್ನು ಕೇಳದಿರುವ ಜನರೂ, ಅವರ ಭಾವಗೀತೆಗಳ ಮೂಲಕ ರಾಧೆಯನ್ನು ಕಂಡಿರುತ್ತಾರೆ. ಅವರ ಭಾವಗೀತೆಗಳ ಕಾರಣದಿಂದಲೇ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿರುತ್ತಾರೆ…

ರಾಧೆ- ಕೃಷ್ಣರ ಪ್ರೀತಿ ಯಾರಿಗೆ ಗೊತ್ತಿಲ್ಲ. ಜಯದೇವನ ರಾಧೆ, ಮುಂದೆ ಕವಿಗಳನ್ನು, ಪ್ರೇಮಿಗಳನ್ನು ಆವರಿಸಿದ ಪರಿ ಅಚ್ಚರಿ… ರಾಧೆಯ ನಿಷ್ಠೆ ಕೃಷ್ಣನಿಗೂ ಸವಾಲು, ಧನ್ಯತೆ… ಅಷ್ಟು ಪ್ರೀತಿಗೆ ಒಳಗಾಗುವುದು, ಪ್ರೀತಿಸಲ್ಪಡುವುದು ಧನ್ಯತೆಯಲ್ಲದೆ ಮತ್ತೇನು? ಅದನ್ನು ಎಚ್ಚೆಸ್ವಿಯವರ ಭಾವಗೀತೆಗಳಲ್ಲಿ ಓದುವುದೇ ಒಂದು ಸೊಗಸು. ಎಚ್ಚೆಸ್ವಿಯವರ ಕಾವ್ಯವನ್ನು ಅಭ್ಯಸಿಸದವರೂ, ಅವರ ಹೆಸರನ್ನು ಕೇಳದಿರುವ ಜನರೂ, ಅವರ ಭಾವಗೀತೆಗಳ ಮೂಲಕ ರಾಧೆಯನ್ನು ಕಂಡಿರುತ್ತಾರೆ. ಅವರ ಭಾವಗೀತೆಗಳ ಕಾರಣದಿಂದಲೇ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿರುತ್ತಾರೆ. ತನ್ನನ್ನು ಪ್ರೀತಿಸಿದವರಿಗೆ ಕೃಷ್ಣ ಏನೇನು ಕೊಟ್ಟ ಎಂದು “ಪ್ರೀತಿ ಕೊಟ್ಟ ರಾಧೆಗೆ…’ ಎಂಬ ಗೀತೆಯಲ್ಲಿ ಎಚ್ಚೆಸ್ವಿ ಹೇಳುತ್ತಾರೆ ಕೇಳಿ: ತನ್ನನಿತ್ತ ಕೊಳಲಿಗೆ ರಾಗ ತೆತ್ತವನು ಅವನು, ಹಾಲು ಕೊಟ್ಟ ವಿದುರನಿಗೆ ಬಾಳು ಕೊಟ್ಟವನು… ದೇಹವಿಟ್ಟ ಮಣ್ಣಿಗೆ ಜೀವ ಕೊಟ್ಟವನು… ಪ್ರೀತಿ ಕೊಟ್ಟವಳಿಗೆ ಮಾತು ಕೊಟ್ಟವನು… ಅನ್ನ ಕೊಟ್ಟ ಭಕ್ತನಿಗೆ ಹೊನ್ನು ಕೊಟ್ಟವನು… ಇಷ್ಟೆಲ್ಲಾ ಕೊಡುವ ಸಾಮರ್ಥ್ಯವಿದ್ದೂ, ಅಮ್ಮನ ಮುಂದೆ ನಾನು ಬೆಣ್ಣೆ ಕದ್ದಿಲ್ಲವೆಂದು ದೇವರಾಣೆ ಹಾಕುವವನು… ಬೆಣ್ಣೆ ಕದ್ದು ತಿಂದ ಬಾಯಿ ಒರೆಸಿದ ಕೈಗಳನ್ನು ಬೆನ್ನ ಹಿಂದೆ ಮರೆಸಿ ಅಮಾಯಕನಂತೆ ನಿಲ್ಲುವವನು…

ಎಚ್ಚೆಸ್ವಿಯವರ ಆಪ್ತಗೀತದ ಕೃಷ್ಣನ ಸರಳ ರೂಪು ಇದು. ಶ್ರಾವಕ, ಸೇವಕ, ಯಾದವ, ಕಾದವ ಎಲ್ಲವೂ ಆದವನು, ಅಮ್ಮನಿಗೆ ಮಗುವಾಗುವ, ಭಕ್ತರಿಗೆ ಧೇನುವಾಗುವ, ಪ್ರೀತಿಸಿದವಳ ಬದುಕಾಗುವ, ಗೋಪಿಯರಿಗೆ ಸಾಂಗತ್ಯದ ಸಾರ್ಥಕತೆ ನೀಡುವ ಸಾಲುಗಳನ್ನು ಎಚ್ಚೆಸ್ವಿಯವರ ಗೀತ ಸಾಲುಗಳು ಕಟ್ಟಿಕೊಡುವ ಪರಿ ಅನನ್ಯ.

ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು. ಆದರೆ, ಆಕೆ ಪ್ರೀತಿಯ ಮೂಲಕ ಕೃಷ್ಣನನ್ನು ಕಾಣಿಸುತ್ತಾಳೆ. ಮತ್ತೆ ಬಾರದ, ಮರಳಿ ಬಾರದ ಮೋಹನನ ಪ್ರೀತಿಸುತ್ತಲೇ ಉಳಿಯುತ್ತಲೇ ಆಕೆ, ಎಲ್ಲರಂತೆ ಅಲ್ಲ ಎಂಬುದನ್ನು ನಿರೂಪಿಸುತ್ತಾಳೆ… ಮರಳಿ ಬಾರದ ಕೃಷ್ಣ ಅಲ್ಲಿ ರಾಧೆಯನ್ನು ನೆನೆಯುತ್ತಿಲ್ಲವಾ? ಅದಕ್ಕೆಂದೇ ಭೂಮಿಯ ಮೇಲಿರುವ ಆತನ ಪ್ರತಿನಿಧಿಗಳ ಬಗ್ಗೆ ಹೇಳುತ್ತಾ ಕೃಷ್ಣನ ನೋವನ್ನು ಎಚ್ಚೆಸ್ವಿ ಹೇಳುವುದು, “ಯಾರೋ ಮೋಹನ ಯಾವ ರಾಧೆಗೊ ಪಡುತಿರುವನು ಪರಿತಾಪ…’

ಯಾರೋ ಮೋಹನನನ್ನು ಮೋಹನನ ಎತ್ತರಕ್ಕೆ ಕೊಂಡೊಯ್ಯುವ ಎಚ್ಚೆಸ್ವಿ ಯಾರೋ ರಾಧೆಯನ್ನು ನಿಜವಾದ ರಾಧೆಯನ್ನಾಗಿಸುತ್ತಾರೆ. ಅದು ಪುರಾಣದ ಕಥನ, ಅಲ್ಲಿ ಅಗಲಿಕೆ ದೈವ ನಿಯಾಮಕ ಎಂದು ಸಮಾಧಾನ ಪಟ್ಟುಕೊಳ್ಳುವೆಡೆಯಲ್ಲಿ ಈ ಭೂಮಿಯ ಮೋಹನರ ಅಸಹಾಯಕತೆ, ಪರಿತಾಪ ಹೇಳುವ ಮೂಲಕ, ಇಲ್ಲಿರುವ ಯಾರೋ ರಾಧೆಯರ ನಿಷ್ಠೆಯನ್ನು ಹೇಳುವ ಮೂಲಕ, ಪ್ರೇಮದ ತೀವ್ರತೆಯನ್ನು ಮನದಟ್ಟು ಮಾಡಿಕೊಡುತ್ತಾ ಕಣ್ತುಂಬಿಸುತ್ತಾರೆ .. ದೈವತ್ವವನ್ನು ಮಾನವತ್ವಕ್ಕೂ, ಮಾನವತ್ವವನ್ನು ದೈವತ್ವಕ್ಕೂ ಕೊಂಡೊಯ್ಯುವ ಈ ಪದ್ಯ, ಲೋಕದ ಮನೆಮಾತಾಗಿದ್ದರಲ್ಲಿ ಅಚ್ಚರಿಯೇನು?

ರಾಧಾ- ಮಾಧವರ ಪ್ರೇಮ, ಆ ಕ್ಷಣದ ತಳಮಳ, ವಿರಹ, ಅಲ್ಲಿಯೇ ಇರುವ ಕಂಡೂ ಕಾಣದಂಥ ನಿರ್ಲಕ್ಷ್ಯ- ಇವು ಕಟ್ಟಿಕೊಡುವ ಭಾವತೀವ್ರತೆಯನ್ನು ಆಪ್ತವಾಗಿ ಹೇಳುವ ಎಚ್ಚೆಸ್ವಿ, ಪರಸ್ಪರ ವಿರುದ್ಧವಿದ್ದರೂ ಜೊತೆ ಜೊತೆಗಿರಬಲ್ಲ ಅಭೇದ್ಯ ಸಂಬಂಧದ ಕುರಿತು ಮತ್ತೂಂದು ಭಾವಗೀತೆಯಲ್ಲಿ ಹೇಳುತ್ತಾರೆ: “ನಂಬಬಹುದೇ ಗೆಳತಿ…’ ಎಂಬ ಆ ಗೀತೆಯಲ್ಲಿ, ಕೆಲವು ಜೊತೆಗಳನ್ನು ಹೇಳುತ್ತಾ ಹೋಗುತ್ತಾರೆ… ಅವು ಒಂದಕ್ಕೊಂದು ವಿರುದ್ಧವಾದರೂ, ಒಂದಕ್ಕೊಂದು ಜೊತೆ ಎಂದು ಪರಿಗಣಿಸಲಾಗದಿದ್ದರೂ ಆಗಲಿರಲಾರವು.. ನಗೆಯೊಳಗೆ ಹಗೆ, ನೀರಿನೊಳಗೆ ಧಗೆ ಹೇಳುತ್ತಾ, ನಿನ್ನ ಒಳಗೇ ನಾನಿರುವುದ ನಂಬಬಹುದೇ ಎಂದು ಪ್ರಶ್ನಿಸುತ್ತಲೇ ಅದೆಲ್ಲವೂ ಇದ್ದರೂ ನಾವಿಬ್ಬರೂ ಒಂದೇ ಎನ್ನುವುದನ್ನು ಸೊಗಸಾಗಿ ಹೇಳುತ್ತಾರೆ.

ಸಂಬಂಧಗಳೆಂದರೆ ಹಾಗೇ… ರಾಧೆಯ ರೀತಿ ಎಂದಿಗೂ ಬಾರದವನನ್ನು ಪ್ರೀತಿಸುತ್ತಲೇ ಅವನತ್ತ ತಿರುಗಿಯೂ ನೋಡದೇ ಇದ್ದು ಬಿಡಬಹುದು. ತೂಗುಮಂಚದಲ್ಲಿ ಕೂತ ಸಂತೃಪ್ತ ದಾಂಪತ್ಯ ಪೊರೆಯಬಹುದು. ಸಂಬಂಧಗಳ ಅಳವರಿಯದೆ ನಿಭಾವಣೆಯಲ್ಲಿ ಸೋತು ಒಟ್ಟಿಗಿದ್ದರೂ ಒಟ್ಟಿಗಿರದಂತೆ ಬದುಕು ಸಾಗಿಸಿಬಿಡಬಹುದು ಅಥವಾ ಪರಸ್ಪರ ವೈರುಧ್ಯಗಳಿದ್ದರೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡು ನಗೆ ಚೆಲ್ಲಬಹುದು… ಎಚ್ಚೆಸ್ವಿ ಭಾವಗೀತೆಗಳು ಮನಮುಟ್ಟುವುದು ಇಂತಹ ಕಾರಣಗಳಿಗಾಗಿ.

ಎಚ್ಚೆಸ್ವಿ ಟಾಪ್‌ 8 ಭಾವಗೀತೆಗಳು
ನಾಕು ದಿನದ ಬಾಳಿಗೆ
ಇರಲಿ ಹಾಲು ಹೋಳಿಗೆ
ಕೆಡಿಸಬಹುದೇ ಬಾಳ ಹದವ
ಹುಳಿಯ ಹಿಂಡಿ ಹಾಲಿಗೆ
**********
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯ್ಗೆ ಬೆಣ್ಣೆ ಮೆತ್ತಿದರಮ್ಮ
**********
ತೂಗುಮಂಚದಲ್ಲಿ ಕೂತು
ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು- ರಾಧೇ ನಾಚುತಿದ್ದಳು
*******
ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತುಮಾತಿಗೇಕೋ ನಗೆ
ಮರುಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ
********
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
********
ನನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಡೆಯಬೇಡ ಒಲವಿಲ್ಲದೆ
ನೋಯುತ್ತಿರುವ ಎದೆಯ
************
ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೊ ತಾಳಕೆ
*********
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವಾ…

ಮಾಲಿನಿ ಗುರುಪ್ರಸನ್ನ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.