ಸೂಫಿ ಬೀದಿಯ ಕನ್ನಡ ತೇರು

ಭಾವೈಕ್ಯತೆಯ ಬಹುರೂಪಗಳ ಕಲಬುರ್ಗಿ

Team Udayavani, Feb 6, 2020, 6:39 AM IST

sam-15

ಕಲಬುರ್ಗಿಯಲ್ಲಿ ಇವತ್ತಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು, ಕನ್ನಡದ ಬದುಕಿನ ತುಂಬೆಲ್ಲ ಹಾಸು ಹೊಕ್ಕಾಗಿವೆ. ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂಥ ಘಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿ ಕಾಣಸಿಗುತ್ತಾರೆ…

ಮೂವತ್ತೆರಡು ವರ್ಷಗಳ ನಂತರ ಕಲಬುರ್ಗಿಯಲ್ಲಿ ಕನ್ನಡದ ಜಾತ್ರೆ ಕಳೆಗಟ್ಟುತ್ತಿದೆ. ಮೊನ್ನೆ, ಮೊನ್ನೆಯವರೆಗೆ ಹೈದ್ರಾಬಾದ್‌ ಕರ್ನಾಟಕ, ಇದೀಗ ತಾನೆ “ಕಲ್ಯಾಣ ಕರ್ನಾಟಕ’ ಎಂಬ ಹೊಸ ಹೆಸರು ಹೊತ್ತು, ನುಡಿಜಾತ್ರೆಗೆ ಸಾಕ್ಷಿಯಾಗುತ್ತಿದೆ. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆ ಮೀರಿ ವಚನ ಚಳವಳಿ ರೂಪಿಸಿದ್ದು ಜನ ಕಲ್ಯಾಣದ ಕಳಕಳಿಯ ದ್ಯೋತಕ. ಜನರಿಗೆ ಮತ್ತೆ ಅಂದಿನ ಕಲ್ಯಾಣದ ಕನಸುಗಳನ್ನು ಇಂದು ಕಾಣುವ ತವಕ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕರುನಾಡ ನೆಲದ ಕಲಬುರ್ಗಿ, ಬೀದರ್‌, ರಾಯಚೂರು- 3 ಜಿಲ್ಲೆಗಳು; ಮರಾಠಿಯ 5, ತೆಲಂಗಾಣದ 8 ಜಿಲ್ಲೆಗಳು ಅಂದಿನ ಮುಸ್ಲಿಂ ದೊರೆ ಮೀರ್‌ ಉಸ್ಮಾನ್‌ ಅಲಿಖಾನ್‌ ಬಹದ್ದೂರ್‌ (ಇದು ನಿಜಾಮನ ಪೂರ್ಣ ಹೆಸರು) ಆಡಳಿತದಲ್ಲೇ ಇದ್ದವು. ಹತ್ತು ಹಲವು ಹೋರಾಟಗಳ ಫ‌ಲವಾಗಿ 17.09.1948ರಂದು ಭಾರತದ ಒಕ್ಕೂಟಕ್ಕೆ ಇವು ಸೇರಿದವು. ಹೀಗೆ, 600 ವರ್ಷಗಳ ಸುದೀರ್ಘ‌ ಕಾಲದ ದೇಶಿಯ ಪರಕೀಯತೆಯಲ್ಲಿದ್ದುದು ಹೈದ್ರಾಬಾದ್‌ ಕರ್ನಾಟಕ.

ಮೊಘಲಾಯಿ ಜವಾರಿ ಶೈಲಿ
ಸಹಜವಾಗಿ ಉರ್ದು, ದಖನಿ, ಮೋಡಿ, ಮರಾಠಿ, ತೆಲುಗು, ಕನ್ನಡಗಳ ಬಹುಭಾಷಾ ಸೌಹಾರ್ದ ಸಂಸ್ಕೃತಿಯ ಚಾರಿತ್ರಿಕ ನೆಲ ಇದು. ಇವತ್ತಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು ಇಲ್ಲಿನ ಕನ್ನಡದ ಬದುಕಿನ ತುಂಬೆಲ್ಲ ಹಾಸು ಹೊಕ್ಕಾಗಿವೆ. ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂಥ ಘಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿರುವುದು ಸರ್ವೇಸಾಮಾನ್ಯ. ಇಲ್ಲಿನ ಆಡುಭಾಷೆ, ಮೊಘಲಾಯಿ ಜವಾರಿ ಶೈಲಿ.

ನಿಜಾಮರ ನೆರಳಿನಲ್ಲಿ…
ನಿಜಾಮನ ಕಾಲದಲ್ಲಿ ಭಾಳ ಸಂಖ್ಯೆಯ ಸೂಫಿ- ಸಂತರು, ತತ್ವಪದಗಳ ಅನುಭಾವಿಗಳು ಮೈ ಮನಸು ಬಿಚ್ಚಿ ಕನ್ನಡದಲ್ಲಿ ಮಹಾಕಾವ್ಯಗಳನ್ನೇ ರಚಿಸಿದ್ದಾರೆ. ಹಾಗೆಂದು, ಆಳರಸ ನಿಜಾಮ ಇವರಿಗೆ ಪ್ರೇರಕ, ಪ್ರೋತ್ಸಾಹಕನೇನೂ ಆಗಿರಲಿಲ್ಲ. ಆದರೆ, ಸೂಫಿ, ಅವಧೂತ, ಆರೂಢ ಕವಿಗಳಿಗೆ ಯಾವುದೇ ಘೋಷಿತ ಇಲ್ಲವೇ ಅಘೋಷಿತ ನಿರ್ಬಂಧಗಳನ್ನು ಆತ ವಿಧಿಸಿರಲಿಲ್ಲ ಎಂಬುದು ಮುಖ್ಯ.

“ಜಂಗಮನಾಗ ಬೇಕಾದರೆ/ ಮನಲಿಂಗ ಮಾಡಿಕೊಂಡಿರಬೇಕು//’ ಅಂತ ಚನ್ನೂರ ಜಲಾಲ ಸಾಹೇಬ ಹಾಡಿದರೆ, “ಫ‌ಕೀರನಾಗಬೇಕಾದರೆ/ ಮನಃ ಧಿಕ್ಕಾರ ಮಾಡಿಕೊಂಡಿರಬೇಕು//’ - ಇದು ಕಡಕೋಳ ಮಡಿವಾಳಪ್ಪನವರು ಜಲಾಲ ಸಾಹೇಬರಿಗೆ ಕೊಡುವ ಉತ್ತರ. ಇದು, ಇಬ್ಬರು ಬೇರೆ ಬೇರೆ ಮತ ಧರ್ಮಗಳ, ಒಂದೇ ಗುರುಮಾರ್ಗ ಪಂಥದ ಸೌಹಾರ್ದಯುತ ಸಾಂಸ್ಕೃತಿಕ ಸಂವಾದದ ಸಣ್ಣದೊಂದು ಝಲಕ್‌. ಇಂಥ ನೂರಾರು ನಿದರ್ಶನಗಳು ಇಲ್ಲಿವೆ.

“ಸಬ್‌ ಕಹತೆ ಹೈ ಈಶ್ವರ ಅಲ್ಲಾ ಅಲ್ಲಾ/ ಇದರ ಒಳಮರ್ಮ ಯಾರಿಗೂ ತಿಳಿದಿಲ್ಲಾ//’ - ಹೀಗೆ ಉರ್ದು ಕನ್ನಡ ಮಿಶ್ರಿತ ಸಂಕರ ಪ್ರಜ್ಞೆಯಿಂದ ರೂಪುಗೊಂಡ ಅನೇಕ ತತ್ವಪದಗಳ ಭಾವ ಮತ್ತು ಭಾಷೆಯಲ್ಲಿ ಸಹೃದಯ ಸಮನ್ವಯತೆ ಸಾಧಿಸಿರುವುದನ್ನು ಗುರುತಿಸಬಹುದು. “ಕಸವರಮೆಂಬುದು ಸೈರಿಸಲಾರ್ಪೊಡೆ ಪರ ಧರ್ಮಮುಮಂ/ ಪರ ವಿಚಾರಮುಮಂ//’- ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಕವಿರಾಜಮಾರ್ಗಕಾರನು ಹೇಳಿದ ಪರರ ಧರ್ಮ ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ, ಮನುಷ್ಯ ಪ್ರೀತಿಯ ನಿಜದ ನೆಲೆಯ ಸಂಪತ್ತು. ನೃಪತುಂಗ ನೆಲದ ಬೀಜದ ಮಾತುಗಳು ಇಡೀ ದೇಶಕ್ಕೇ ಇವತ್ತು ಹೆಚ್ಚು ಹೆಚ್ಚು ಅನ್ವಯಿಸಿ ಅನುಷ್ಠಾನಕ್ಕೆ ಬರಬೇಕಾದ ದುರಿತ ಸಂದರ್ಭಗಳಲ್ಲಿದ್ದೇವೆ. ಬುದ್ಧಧರ್ಮದ “ಸಾರ’ ಸಾರುವ ಅಶೋಕ ಚಕ್ರವರ್ತಿಯ “ದೇವನಾಂಪ್ರಿಯ’ ಕುರುಹು ದೊರಕಿದ ಸನ್ನತಿ, ಘಟಿಕಾಲಯಗಳ ನಾಗಾವಿ, ಬಸವ- ಅಲ್ಲಮರ ವಚನ ಚಳವಳಿಯ ಶಕ್ತಿಕೇಂದ್ರ, ಸಂತ ಕಥನದ ಗೇಸುದರಾಜ್‌ ಬಂದೇನವಾಜ್‌, ಗಾಣಗಾಪುರದ ದತ್ತಾವಧೂತ, ಮಹಾದಾಸೋಹಿ ಶರಣಬಸವೇಶ್ವರ, ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ ಮತ್ತು ಅವರ ಅನೇಕ ಮಂದಿ ತತ್ವಪದಕಾರ ಶಿಸುಮಕ್ಕಳು, ಊರೂರಿಗೂ ದೊರಕುವ ನೂರಾರು ಮಂದಿ ಮುಸ್ಲಿಂ ಸೂಫಿ ಸಂತರು ಬಾಳಿ ಬದುಕಿದ ಕಲ್ಯಾಣ ಕರ್ನಾಟಕದಲ್ಲಿ ಜರುಗುವ ಕನ್ನಡದ ನುಡಿಹಬ್ಬವು, ಸೌಹಾರ್ದತೆಯ ಸಾಕ್ಷಿಪ್ರಜ್ಞೆಯೇ ಆಗಿದೆ. ಇವತ್ತಿಗೂ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯಲ್ಲಿ ಗದ್ದುಗೆಗೆ ಮುಸ್ಲಿಂ ಧರ್ಮದ ಹಸಿರು ಗಲ್ಲೀಫ‌ದ ಗೌರವ. ಸ್ವಾಮೀಜಿಯವರು ಸುತ್ತುವ ರುಮಾಲು ಹಸಿರು. ಇಂದಿಗೂ ಕಲಬುರ್ಗಿಯ ಬಂದೇನವಾಜ ಉರುಸ್‌ನಲ್ಲಿ, ನಿತ್ಯದ ದರ್ಗಾದ ದರುಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಿಂದೂಗಳ ಸಕ್ಕರೆ ಲೋಬಾನದ ಅಕ್ಕರೆ. ಇದು ನಿಸರ್ಗ ಸುಭಗ ಕೋಮು ಸೌಹಾರ್ದತೆಯ ಕುರುಹು.

ಇದು ಇಲ್ಲಿನ ಕತೆ…
ಕೃಷ್ಣೆ ಮೈತುಂಬಿ ಹರಿದರೂ ಕಷ್ಟಗಳು ಬಗೆ ಹರಿಯಲಿಲ್ಲ. 371 “ಜೆ’ ಕಾನೂನು ಹಾಗೆಯೇ ಇದೆ. ಹಕ್ಕಿನೊಡೆಯರಾಗಿ ಮೂಲ ಸೌಲಭ್ಯಗಳನ್ನು ಪಡೆಯದೇ ನಾವು ಬಡವರಾದೆವು. ಕನ್ನಡನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ನಾವು ಹಿಂದುಳಿದವರಲ್ಲ, ಹಿಂದುಳಿಸಲ್ಪಟ್ಟವರು. ಎಲ್ಲಕ್ಕೂ “ಜಾಂದೇ ಚೋಡೋ’ ಎಂದು ಉದಾಸೀನ ತೋರುವ ಅಸಡ್ಡೆ ಜಾಯಮಾನ ನಮ್ಮದು. ಜವಾರಿ ಮುಗ್ಧªತೆ ಉಳಿಸಿಕೊಂಡುದೇ ನಮ್ಮ ಹೆಗ್ಗಳಿಕೆ. ಕಲಬುರ್ಗಿ ಹೆಸರಿನೊಂದಿಗೆ ಅಂಟಿಕೊಂಡಿರುವುದು ಕೆಂಡದ ಬಿಸಿಲು ಮತ್ತು ತೊಗರಿ. ಕಲಬುರ್ಗಿಯಲ್ಲಿ ಸರ್ಕಾರದ ಖರೀದಿಗಿಂತಲೂ ಭರ್ಜರಿಯಾಗಿ ಖಾಸಗಿ ಖರೀದಿದಾರರ ಕಿಗ್ಗಳದ ರೇಟುಗಳಿಗೆ ರೈತರು ತೊಗರಿ ಮತ್ತು ಹತ್ತಿ ಮಾರುವಂತಾಗಿದೆ. ಸಮ್ಮೇಳನದ ಗೋಷ್ಠಿಗಳಲ್ಲಿ ಇವೆಲ್ಲ ಚರ್ಚೆಯಾದರೆ, ನಿಜಕ್ಕೂ ಅದು ಅರ್ಥಪೂರ್ಣ.

ಭಾವೈಕ್ಯದ ಕಂಪು
ಶತಮಾನಗಳಿಂದ ಕೃಷ್ಣೆಯ ಒಂದು ದಡ ಹರಿದಾಸ ಸಾಹಿತ್ಯ, ಮತ್ತೂಂದು ದಡ ತತ್ವಪದ ಮತ್ತು ವಚನಗಳ ಬಹುತ್ವದ ಜೀವತುಂಬಿ ಹರಿದಿದೆ. “ಓಂ ಏಕ್‌ ಲಾಖ್‌ ಅಸ್ಸೀ ಹಜಾರ ಪಾಚೋರ್ಪಿ ಮೌನ್ದಿನ್‌’ - ತಿಂಥಣಿ ಮಾನಪ್ಪಯ್ಯನ ಇಂಥ ನುಡಿಗಟ್ಟುಗಳು ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಹಿಡಿದ ನಿಲುಗನ್ನಡಿ. ಅಫ‌ಜಲಪುರ, ಆಳಂದ, ಜೇವರ್ಗಿ, ಶಹಾಪುರ- ಹೀಗೆ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳಲ್ಲಿ ಹಿಂದೂಗಳ ಮನೆದೇವರು ಸೂಫಿ ಸಂತರು. ಕರ್ಜಗಿಯ ಸೈಫ‌ುಲ್ಲಾ ಮುಲ್ಕ ದರ್ಗಾ, ನೀಲೂರು ಮಹಬೂಬ ಸುಬಾನಿ ದರ್ಗಾ, ಹೈದ್ರಾ ದರ್ಗಾಗಳ ಸೂಫಿ ದೈವಗಳು ಬಹುಪಾಲು ಹಿಂದೂ ವೀರಶೈವ, ಲಿಂಗಾಯತರ ಪಾಲಿನ ಉಪಾಸನಾ ದೇವರುಗಳು.

– ಮಲ್ಲಿಕಾರ್ಜುನ ಕಡಕೋಳ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.