A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

ವಾಜಪೇಯಿ ಜನ್ಮಶತಮಾನೋತ್ಸವ:-ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ- ದೂರದೃಷ್ಟಿಯಿಂದ ದೇಶವನ್ನು ರೂಪಿಸಿದ ರಾಜಕೀಯ ಮುತ್ಸದ್ದಿ

Team Udayavani, Dec 26, 2024, 12:48 AM IST

ABV-Modi

21ನೇ ಶತಮಾನದಲ್ಲಿ ಭಾರತದ “ಪರಿವರ್ತನೆಯ ಶಿಲ್ಪಿ’ಯಾದದ್ದಕ್ಕಾಗಿ ದೇಶವು ಅಟಲ್‌ ಅವರಿಗೆ ಯಾವಾಗಲೂ ಕೃತಜ್ಞವಾಗಿರಬೇಕು. 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ನಮ್ಮ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು.

ಸುಮಾರು 9 ವರ್ಷಗಳಲ್ಲಿ 4 ಲೋಕಸಭೆ ಚುನಾವಣೆಗಳನ್ನು ನೋಡಿದ್ದೆವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಇಂಥ ಸಮಯದಲ್ಲಿ ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಿದವರು ಅಟಲ್‌ ಅವರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಸಾಮಾನ್ಯರ ಹೋರಾಟ ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡರು.

ನಮ್ಮ ಸುತ್ತಮುತ್ತಲಿನ ಹಲವು ಕ್ಷೇತ್ರಗಳಲ್ಲಿ ಅಟಲ್‌ ಅವರ ನಾಯಕತ್ವದ ದೀರ್ಘ‌ಕಾಲೀನ ಪ್ರಭಾವವನ್ನು ನೋಡಬಹುದು. ಅವರ ಯುಗವು ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಸಂವಹನ ಜಗತ್ತಿನಲ್ಲಿ ಒಂದು ದೊಡ್ಡ ಜಿಗಿತವನ್ನು ಕಂಡಿತು. ಯುವ ಶಕ್ತಿಯನ್ನು ಹೊಂದಿರುವ ನಮ್ಮಂಥ ರಾಷ್ಟ್ರಕ್ಕೆ ಇದು ಮಹತ್ವದ್ದಾಗಿತ್ತು. ಮೊದಲ ಬಾರಿಗೆ ಅಟಲ್‌ ನೇತೃತ್ವದ ಎನ್‌ಡಿಎ ಸರಕಾರವು ಸಾಮಾನ್ಯರಿಗೆ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಲು ಗಂಭೀರ ಪ್ರಯತ್ನ ಮಾಡಿತು. ಇಂದಿಗೂ ಬಹುತೇಕ ಜನರು ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುವ “ಸುವರ್ಣ ಚತುಷ್ಪಥ ಯೋಜನೆ’ಯನ್ನು ನೆನಪಿಸಿಕೊಳ್ಳುತ್ತಾರೆ.

“ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ’ಗಳ ಮೂಲಕ ಸ್ಥಳೀಯ ಸಂಪರ್ಕವನ್ನು ಹೆಚ್ಚಿಸಲು ವಾಜಪೇಯಿ ಸರಕಾರದ ಪ್ರಯತ್ನಗಳು ಅಷ್ಟೇ ಗಮನಾರ್ಹವಾಗಿವೆ. ಅಂತೆಯೇ ಅವರ ಸರಕಾರವು ದಿಲ್ಲಿ ಮೆಟ್ರೋಗಾಗಿ ವ್ಯಾಪಕವಾದ ಕೆಲಸವನ್ನು ಮಾಡುವ ಮೂಲಕ ಮೆಟ್ರೋ ಸಂಪರ್ಕವನ್ನು ಉತ್ತೇಜಿಸಿತು. ಇದು ವಿಶ್ವದರ್ಜೆಯ ಮೂಲಸೌಕರ್ಯ ಯೋಜನೆಯಾಗಿ ಹೊರಹೊಮ್ಮಿದೆ. ವಾಜಪೇಯಿ ಸರಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ್ದು ಮಾತ್ರವಲ್ಲದೆ ದೂರದ ಪ್ರದೇಶಗಳನ್ನು ಹತ್ತಿರಕ್ಕೆ ತಂದಿತು, ಆ ಮೂಲಕ ಏಕತೆ ಮತ್ತು ಏಕೀಕರಣವನ್ನು ಉತ್ತೇಜಿಸಿತು.

ಶಿಕ್ಷಣ ಕ್ಷೇತ್ರದ ಸುಧಾರಣೆ
ಸಾಮಾಜಿಕ ಕ್ಷೇತ್ರದಲ್ಲಿ ಸರ್ವಶಿಕ್ಷಾ ಅಭಿಯಾನದಂಥ ಯೋಜನೆಗಳು ದೇಶಾದ್ಯಂತ ಜನರು, ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರು ಆಧುನಿಕ ಶಿಕ್ಷಣವನ್ನು ಪ್ರವೇಶಿಸುವ ಭಾರತವನ್ನು ನಿರ್ಮಿಸುವ ಕನಸನ್ನು ಅಟಲ್‌ ಅವರು ಕಂಡಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಅವರ ಸರಕಾರವು ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದಿತು. ಇದು ಸ್ವಜನಪಕ್ಷಪಾತ ಮತ್ತು ನಿಶ್ಚಲತೆಯನ್ನು ಉತ್ತೇಜಿಸುವ ಆರ್ಥಿಕ ತತ್ವವನ್ನು ಅನುಸರಿಸಿದ ದಶಕಗಳ ಅನಂತರ ಭಾರತದ ಆರ್ಥಿಕ ಉತ್ಕರ್ಷಕ್ಕೆ ವೇದಿಕೆಯಾಯಿತು.

ಪರಮಾಣು ಪರೀಕ್ಷೆ ಪರಾಕ್ರಮ
ವಾಜಪೇಯಿ ಅವರ ನಾಯಕತ್ವದ ಅದ್ಭುತ ಉದಾಹರಣೆಯನ್ನು 1998ರ ಬೇಸಗೆಯಲ್ಲಿ ಕಾಣಬಹುದು. ಅವರ ಸರಕಾರವು ಆಗತಾನೇ ಅಧಿಕಾರ ವಹಿಸಿಕೊಂಡಿತ್ತು ಮತ್ತು ಮೇ 11 ರಂದು ಭಾರತವು “ಆಪರೇಶನ್‌ ಶಕ್ತಿ’ ಹೆಸರಿನಲ್ಲಿ ಪೊಖಾರಣ್‌ನಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳು ಭಾರತದ ವೈಜ್ಞಾನಿಕ ಸಮುದಾಯದ ಶಕ್ತಿಗೆ ಉದಾಹರಣೆಯಾದವು. ಭಾರತ ಈ ಪರೀಕ್ಷೆ ನಡೆಸಿದಾಗ ವಿಶ್ವವೇ ಬೆಚ್ಚಿಬಿದ್ದು, ಅಸಮಾಧಾನವನ್ನು ವ್ಯಕ್ತಪಡಿಸಿತು.

ಯಾವುದೇ ಸಾಮಾನ್ಯ ನಾಯಕರಾಗಿದ್ದರೆ ತಲೆಬಾಗುತ್ತಿದ್ದರು, ಆದರೆ ಅಟಲ್‌ ಅವರು ವಿಭಿನ್ನವಾಗಿದ್ದರು. ಅನಂತರ ಏನಾಯಿತು? ಭಾರತವು ಬಲವಾಗಿ ಮತ್ತು ದೃಢವಾಗಿ ನಿಂತಿತು ಮತ್ತು ಸರಕಾರವು 2 ದಿನಗಳ ನಂತರ ಮೇ 13 ರಂದು ಮರು ಪರೀಕ್ಷೆ ನಡೆಸಿತು. ಮೇ 11ರ ಪರೀಕ್ಷೆಗಳು ವೈಜ್ಞಾನಿಕ ಪರಾಕ್ರಮವನ್ನು ತೋರಿಸಿದರೆ, ಮೇ 13ರ ಪರೀಕ್ಷೆಗಳು ನಿಜವಾದ ನಾಯಕತ್ವವನ್ನು ಪ್ರದರ್ಶಿದವು. ಭಾರತವು ಬೆದರಿಕೆ ಅಥವಾ ಒತ್ತಡಕ್ಕೆ ಮಣಿಯುವ ದಿನಗಳು ಮುಗಿದುಹೋದವು ಎಂಬ ಸಂದೇಶವನ್ನು ಜಗತ್ತಿಗೆ ಸಾರಿತು. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದ್ದರೂ ವಾಜಪೇಯಿ ಅವರ ಆಗಿನ ಎನ್‌ಡಿಎ ಸರಕಾರವು ತನ್ನ ಸಾರ್ವಭೌಮತ್ವವನ್ನು ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುವುದರ ಜತೆಗೆ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕನಾಗಿತ್ತು.

ಮೈತ್ರಿ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ
ಅಟಲ್‌ ಅವರು ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನೂ ಅರ್ಥೈಸಿಕೊಂಡರು. ಅಟಲ್‌ ಅವರು ಎನ್‌ಡಿಎಯ ಅಧ್ಯಕ್ಷತೆ ವಹಿಸಿದ್ದರು. ಇದು ಭಾರತೀಯ ರಾಜಕೀಯದಲ್ಲಿ ಮೈತ್ರಿಗಳನ್ನು ಮರು ವ್ಯಾಖ್ಯಾನಿಸಿತು. ಅವರು ಇತರರನ್ನು ಒಟ್ಟುಗೂಡಿಸಿದರು ಮತ್ತು ಎನ್‌ಡಿಎಯನ್ನು ಅಭಿವೃದ್ಧಿ, ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳ ಶಕ್ತಿಯನ್ನಾಗಿ ಮಾಡಿದರು. ಅಟಲ್‌ ಅವರ ರಾಜಕೀಯ ಜೀವನದುದ್ದಕ್ಕೂ ಅವರ ಸಂಸದೀಯ ಪ್ರತಿಭೆ ಕಂಡುಬಂದಿದೆ.

ಬೆರಳೆಣಿಕೆಯ ಸಂಸದರಿದ್ದ ಪಕ್ಷಕ್ಕೆ ಸೇರಿದ ಅವರು, ಆಗಿನ ಸರ್ವಶಕ್ತ ಕಾಂಗ್ರೆಸ್‌ ಪಕ್ಷದ ಅಧಿಕಾರವನ್ನೇ ಅಲ್ಲಾಡಿಸಲು ಅವರ ಮಾತು ಸಾಕಾಗಿತ್ತು. ಪ್ರಧಾನಿಯಾಗಿ ಅವರು ವಿಪಕ್ಷಗಳ ಟೀಕೆಗಳನ್ನು ತಮ್ಮ ಶೈಲಿ ಮತ್ತು ವಿಷಯದಿಂದ ಮೊಂಡಾಗಿಸಿದರು. ಅವರ ರಾಜಕೀಯ ಜೀವನವು ಹೆಚ್ಚಾಗಿ ವಿಪಕ್ಷದಲ್ಲಿಯೇ ಕಳೆಯಿತು, ಆದರೆ ಕಾಂಗ್ರೆಸ್‌ ಅವರನ್ನು ದೇಶದ್ರೋಹಿ ಎಂದು ಕರೆಯುವ ಕೀಳುಮಟ್ಟಕ್ಕೆ ಇಳಿದಾಗಲೂ ಅವರಲ್ಲಿ ಯಾರ ಬಗ್ಗೆಯೂ ಕಹಿಯ ಕುರುಹು ಕೂಡ ಇರಲಿಲ್ಲ!

ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1996ರಲ್ಲಿ ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಅವರು ಭಾವಿಸಿದರು. 1999ರಲ್ಲಿ ಅವರ ಸರಕಾರ ಒಂದು ಮತದಿಂದ ಸೋತಿತು. ಆ ಸಮಯದಲ್ಲಿ ನಡೆಯುತ್ತಿದ್ದ ಅನೈತಿಕ ರಾಜಕಾರಣವನ್ನು ಪ್ರಶ್ನಿಸುವಂತೆ ಅನೇಕರು ಕೇಳಿಕೊಂಡರು, ಆದರೆ ಅವರು ನಿಯಮಗಳನ್ನು ಅನುಸರಿಸಲು ಆದ್ಯತೆ ನೀಡಿದರು. ಅಂತಿಮವಾಗಿ ಅವರು ಜನರಿಂದ ಮತ್ತೂಂದು ಪ್ರಬಲ ಜನಾದೇಶದೊಂದಿಗೆ ಮರಳಿದರು.

ಸಂವಿಧಾನ ರಕ್ಷಕ
ಸಂವಿಧಾನವನ್ನು ರಕ್ಷಿಸುವ ಬದ್ಧತೆಯ ವಿಷಯಕ್ಕೆ ಬಂದಾಗ, ಅಟಲ್‌ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಡಾ| ಶ್ಯಾಮಪ್ರಸಾದ್‌ ಮುಖರ್ಜಿಯವರ ಬಲಿದಾನದಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ಅನಂತರ ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆಧಾರಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯ ಸಮಯದಲ್ಲಿ ಅವರು ತಮ್ಮ ಪಕ್ಷ ಜನಸಂಘವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡರು. ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಿತ್ತೆಂದು ನನಗೆ ಖಾತ್ರಿಯಿದೆ, ಆದರೆ ಸಂವಿಧಾನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿತ್ತು.

ಭಾರತೀಯ ಸಂಸ್ಕೃತಿಯಲ್ಲಿ ಅಟಲ್‌ ಅವರು ಎಷ್ಟು ಆಳವಾಗಿ ಬೇರೂರಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ. ಭಾರತದ ವಿದೇಶಾಂಗ ಸಚಿವರಾದ ಅನಂತರ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾದರು. ಇದು ಭಾರತದ ಪರಂಪರೆ ಮತ್ತು ಅಸ್ಮಿತೆಯ ಬಗ್ಗೆ ಅವರಿಗಿದ್ದ ಅಪಾರ ಹೆಮ್ಮೆಯನ್ನು ಪ್ರದರ್ಶಿಸಿತು, ಜಾಗತಿಕ ವೇದಿಕೆಯಲ್ಲಿ ಅಳಿಸಲಾಗದ ಗುರುತು ಮೂಡಿಸಿತು.

ಆಕರ್ಷಕ ವ್ಯಕ್ತಿತ್ವ
ಅಟಲ್‌ ಅವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಅವರ ಸಾಹಿತ್ಯ ಮತ್ತು ಅಭಿವ್ಯಕ್ತಿಯ ಮೇಲಿನ ಪ್ರೀತಿಯಿಂದ ಅವರ ಜೀವನವು ಶ್ರೀಮಂತವಾಗಿತ್ತು. ಸೃಜನಶೀಲ ಬರಹಗಾರ ಮತ್ತು ಕವಿಯಾಗಿ ಅವರು ಸ್ಫೂರ್ತಿ ನೀಡಲು, ಆಲೋಚನೆಯನ್ನು ಪ್ರಚೋದಿಸಲು ಮತ್ತು ಸಾಂತ್ವನ ಹೇಳಲು ಪದಗಳನ್ನು ಬಳಸಿದರು. ರಾಷ್ಟ್ರಕ್ಕಾಗಿ ಅವರ ಆಂತರಿಕ ಹೋರಾಟಗಳು ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಅವರ ಕವಿತೆಗಳು ಎಲ್ಲ ವಯೋಮಾನದ ಜನರಲ್ಲಿ ಅನುರಣಿಸುತ್ತಲೇ ಇವೆ.

ಅಟಲ್‌ ಅವರಂತಹ ವ್ಯಕ್ತಿಯೊಂದಿಗೆ ಕಲಿಯಲು ಮತ್ತು ಅವರೊಂದಿಗೆ ಸಂವಹನ ನಡೆಸಲು ನನ್ನಂತಹ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿದ್ದು ಅದೃಷ್ಟ. ಬಿಜೆಪಿಗೆ ಅವರ ಕೊಡುಗೆ ಮೂಲಭೂತವಾದುದು. ಆ ದಿನಗಳಲ್ಲಿ ಕಾಂಗ್ರೆಸ್‌ ಪ್ರಾಬಲ್ಯವನ್ನು ಕೊನೆಗೊಳಿಸಲು ಪರ್ಯಾಯ ನಿರೂಪಣೆಯನ್ನು ಮುನ್ನಡೆಸಿದ್ದು ಅವರ ಹಿರಿಮೆಯನ್ನು ತೋರಿಸುತ್ತದೆ.

ಎಲ್‌.ಕೆ. ಆಡ್ವಾಣಿ ಅವರು ಮತ್ತು ಡಾ| ಮುರಳಿ ಮನೋಹರ ಜೋಶಿ ಅವರಂಥ ದಿಗ್ಗಜರೊಂದಿಗೆ ಅವರು ಆರಂಭಿಕ ವರ್ಷಗಳಲ್ಲಿ ಪಕ್ಷವನ್ನು ಬೆಳೆಸಿದರು, ಸವಾಲುಗಳು, ಹಿನ್ನಡೆಗಳು ಮತ್ತು ಗೆಲುವುಗಳ ಮೂಲಕ ಅದನ್ನು ಮುನ್ನಡೆಸಿದರು. ಸಿದ್ಧಾಂತ ಮತ್ತು ಅಧಿಕಾರದ ನಡುವೆ ಆಯ್ಕೆ ಇ¨ªಾಗಲೆಲ್ಲ ಅವರು ಸಿದ್ಧಾಂತವನ್ನೇ ಆರಿಸಿಕೊಂಡರು. ಕಾಂಗ್ರೆಸ್‌ಗಿಂತ ಭಿನ್ನವಾದ ಪರ್ಯಾಯ ಜಗತ್ತಿನ ದೃಷ್ಟಿಕೋನವು ಸಾಧ್ಯ ಮತ್ತು ಅಂತಹ ವಿಶ್ವ ದೃಷ್ಟಿಕೋನವು ಫ‌ಲಿತಾಂಶಗಳನ್ನು ನೀಡಬಲ್ಲುದು ಎಂದು ಅವರು ದೇಶಕ್ಕೆ ಮನವರಿಕೆ ಮಾಡಲು ಅವರಿಂದ ಸಾಧ್ಯವಾಯಿತು.

ಅವರ ಆದರ್ಶ ಸಾಕಾರಗೊಳಿಸೋಣ
ವಾಜಪೇಯಿ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಅವರ ಆದರ್ಶಗಳನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸನ್ನು ನನಸಾಗಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಅವರ ಉತ್ತಮ ಆಡಳಿತ, ಏಕತೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ಅಟಲ್‌ಜೀ ಅವರ ಅಚಲವಾದ ನಂಬಿಕೆಯು ಉನ್ನತ ಗುರಿಗಾಗಿ ಹೆಚ್ಚು ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ.

-ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

Kazakhstan: ವಿಮಾನ ದುರಂತದ ಸಂದರ್ಭದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kazakhstan: ವಿಮಾನ ದುರಂತದ ಸಂದರ್ಭದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.