2022ರ ಹೊರಳು ನೋಟ; ಮಾನವ ರಹಿತ ವಿಮಾನ ಹಾರಾಟ ಯಶಸ್ವಿ
Team Udayavani, Dec 17, 2022, 6:00 AM IST
ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಚಿತ್ರದುರ್ಗ ಸನಿಹದ ವೈಮಾನಿಕ ಪರೀಕ್ಷಾ ಕ್ಷೇತ್ರ ದಲ್ಲಿ ಜು. 1ರಂದು ನಡೆಸಿದ ದೇಶದ ಮೊದಲ ಸ್ವಾಯತ್ತ ಮಾನವ ರಹಿತ ವಿಮಾನದ ಹಾರಾಟ ಯಶಸ್ವಿಯಾಯಿತು. ದೊಡ್ಡ ಪ್ರಮಾಣದ ಚಾಲಕ ರಹಿತ ವಿಮಾನ ಹಾರಾಟದತ್ತ ಪ್ರಥಮ ಹೆಜ್ಜೆ ಇದಾಗಿದ್ದು ದೇಶವು ಚಾಲಕ ರಹಿತ ವಿಮಾನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಯಶಸ್ವೀ ಹೆಜ್ಜೆ ಇರಿಸಿದಂತಾಗಿತ್ತು. 3 ಕಿ.ಮೀ. ಉದ್ದದ ರನ್ ವೇಯಿಂದ 15 ನಿಮಿಷಗಳ ಕಾಲ ಹಾರಿದ ವಿಮಾನ ವಿವಿಧ ದಿಕ್ಕುಗಳೆಡೆ ಚಲನೆ, ಹಾರಾಟ ಮತ್ತು ಇಳಿಯುವಿಕೆಯಲ್ಲಿ ನಿಖರತೆ ಪ್ರದರ್ಶಿಸಿತ್ತು.
ಸರಕಾರಿ ಶಾಲಾ ಮಕ್ಕಳಿಗೆ ಬಸ್
ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ವ್ಯವಸ್ಥೆ ಮಾಡಲು ರಾಜ್ಯ ಸರಕಾರ ಜು. 2ರಂದು ಆದೇಶ ಹೊರಡಿಸಿತ್ತು. ಶಾಸಕರ ಅನುದಾನದಲ್ಲಿ ವಾಹನ ಖರೀದಿಸುವಂತೆ ಸರಕಾರ ಸೂಚನೆ ನೀಡಿದೆ. ಆರಂಭಿಕ ಹಂತದಲ್ಲಿ ರಾಜ್ಯದ ಸುಮಾರು 200 ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಗ್ರಾ. ಪಂ. ಮಟ್ಟದಲ್ಲಿನ ಸರಕಾರಿ ಮಾದರಿ ಶಾಲೆಗಳಿಗೆ ವಾಹನ ಖರೀದಿಸುವ ಕುರಿತು ಯೋಜನೆ ರೂಪಿಸುವಂತೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖೀಕ ಇಲಾಖೆ ಆದೇಶ ಹೊರಡಿಸಿತ್ತು.
ಪಿಎಸ್‌ಐ ಹಗರಣ: ಎಡಿಜಿಪಿ ಅಮೃತ್ ಪೌಲ್ ಸೆರೆ
ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂ ಧಿಸಿ ಈ ಹಿಂದೆ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಅಮೃತ್ ಪೌಲ್‌ರನ್ನು ಸಿಐಡಿ ವಿಶೇಷ ತನಿಖಾ ತಂಡ ಜು.4ರಂದು ಬಂಧಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಲಾಗಿತ್ತು. ಡಿವೈಎಸ್ಪಿಯಾಗಿದ್ದ ಶಾಂತಕುಮಾರ್ ಅಕ್ರಮ ನೇಮಕದ ಸೂತ್ರಧಾರನಾಗಿದ್ದು ಅವರನ್ನು ಕೂಡ ತನಿಖಾ ತಂಡ ಬಂಧಿಸಿತ್ತು.
ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ
ಪ್ರಸಿದ್ಧ ವಾಸ್ತುತಜ್ಞ, ಸರಳ ವಾಸ್ತು ಕಂಪೆನಿಯ ಸಂಸ್ಥಾ ಪಕ ಚಂದ್ರಶೇಖರ ಗುರೂಜಿ (57) ಅವರನ್ನು ಜು.5ರಂದು ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಮಧ್ಯಾಹ್ನದ ವೇಳೆ ದುಷ್ಕರ್ಮಿಗಳೀರ್ವರು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು.
ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರ ಸೆರೆ
ವಿಜ್ಞಾನ ಬರಹಗಾರ ಮತ್ತು ಬ್ಲಾಗರ್ ಅನಂತ್ ವಿಜಯ ದಾಸ್ ಹತ್ಯೆಗೈದು ತಲೆಮರೆಸಿಕೊಂಡಿದ್ದ ಬಾಂಗ್ಲಾ ದೇಶದ ಉಗ್ರ ಸಂಘಟನೆ ಅಸರ್ ಬಾಂಗ್ಲಾದ ಸದಸ್ಯ ಫೈಜಲ್ ಅಹಮದ್‌ನನ್ನು ಜು.7 ರಂದು ಕೋಲ್ಕತಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ದ್ದರು. 2015ರ ಮೇ 12 ರಂದು ಬಾಂಗ್ಲಾದ ಸಿಲೆಟ್ ಎಂಬಲ್ಲಿ ನಡೆದ ದಾಸ್ ಹತ್ಯೆ ಪ್ರಕರಣದಲ್ಲಿ ಫೈಜಲ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದನು.
ಮಾಜಿ ಸಚಿವ ಈಶ್ವರಪ್ಪರಿಗೆ ಕ್ಲೀನ್ ಚಿಟ್
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಜು.20ರಂದು “ಕ್ಲೀನ್ ಚೀಟ್’ ಸಿಕ್ಕಿತ್ತು. ಪ್ರಕರಣದ ತನಿಖೆ ನಡೆಸಿದ ಉಡುಪಿ ಪೊಲೀಸರು ಜು.20ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 85ಕ್ಕೂ ಅಧಿಕ ಪುಟಗಳ “ಬಿ’ ರಿಪೋರ್ಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ಲಿಖಿತ ಅಥವಾ ಮೌಖೀಕವಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಬಿ ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ
ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿದ್ದ ಯುವಕನನ್ನು ಆ.10ರಂದು ಬಂಧಿಸಲಾ ಗಿತ್ತು. ಮೂಡಲಗಿಯ ನಾಗನೂರು ಗ್ರಾಮದ ಸಿದ್ದಪ್ಪ ಮದಿಹಳ್ಳಿ ಬಂಧಿತ ಆರೋಪಿ.
ಎಸಿಬಿ ರದ್ದು: ಲೋಕಾಯುಕ್ತಕ್ಕೆ ಮರುಜೀವ
ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ಎಸಿಬಿ ರಚಿಸಿ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹೊರಡಿಸಿದ್ದ ಆದೇಶವನ್ನು ಆ.11ರಂದು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಚಾರಿತ್ರಿಕ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಮರುಜೀವ ನೀಡಲು ಸರಕಾರ ನಿರ್ಧಾರ ಕೈಗೊಂಡಿತು.
ಸಾವರ್ಕರ್ ಫ್ಲೆಕ್ಸ್ ವಿವಾದ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ ಕ್ರಾಂತಿಕಾರಿ ವೀರ ಸಾವರ್ಕರ್ ಫ್ಲೆಕ್ಸ್
ವಿವಾದ ಶಿವಮೊಗ್ಗದಲ್ಲಿ ಭುಗಿಲೆದ್ದು ಆ.15 ರಂದು ಹಿಂಸಾರೂಪ ತಳೆಯಿತು. ಘಟನೆ ಬೆನ್ನಲ್ಲೇ ನಗರದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಪರಿಣಾಮ ನಗರದಲ್ಲಿ 3 ದಿನ, ಭದ್ರಾವತಿಯಲ್ಲಿ 2 ದಿನಗಳ ಕಾಲ ನಿಷೇ ಧಾಜ್ಞೆ ಜಾರಿಗೊಳಿಸಲಾಗಿತ್ತು. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಆ.13 ರಂದು ನಗರದ ಮಾಲ್‌ವೊಂದರಲ್ಲಿ ಸಾವ ರ್ಕರ್ ಫ್ಲೆಕ್ಸ್ ವಿವಾದಕ್ಕೆ ಕಾರಣವಾಗಿತ್ತು.
ಪ್ರಮುಖ ಘಟನೆಗಳು
ಜುಲೈ
ಜು. 6: ರಾಜ್ಯದೆಲ್ಲೆಡೆ ವರುಣಾರ್ಭಟ:ಪ್ರವಾಹ, ವ್ಯಾಪಕ ಬೆಳೆಹಾನಿ
ಜು.11: ಜೆಇಇ ಮುಖ್ಯ ಪರೀಕ್ಷೆ ರಾಜ್ಯಕ್ಕೆ ಸಾತ್ವಿಕ್ ಪ್ರಥಮ
ಕುಂದಾಪುರ ಮೂಲದ ಡಾ| ಜಯಕರ ಶೆಟ್ಟಿ ಬೆಂ.ವಿ.ವಿ. ಕುಲಪತಿ
ಜು.12: ಉಳ್ಳಾಲ ಕಡಲ್ಕೊರೆತ ಪ್ರದೇಶ ವೀಕ್ಷಿಸಿದ ಸಿಎಂ ಬೊಮ್ಮಾಯಿ; “ಸೀ ವೇವ್ ಬ್ರೇಕರ್’ ನಿರ್ಮಾಣದ ಭರವಸೆ
ಜು. 13: ರಾಜ್ಯಾದ್ಯಂತ ಅತಿವೃಷ್ಟಿ, ಮಳೆ ಹಾನಿಗೆ 500 ಕೋ.ರೂ. ತುರ್ತು ನೆರವು: ಸಿಎಂ ಘೋಷಣೆ
ಜು. 15: ಸರಕಾರಿ ಕಚೇರಿಗಳಲ್ಲಿ ಫೋಟೊ, ವೀಡಿಯೋ ಚಿತ್ರೀಕರಣ ನಿಷೇಧ: ಸರಕಾರದ ಆದೇಶಕ್ಕೆ ತೀವ್ರ ವಿರೋಧ
ಜು. 16: ಮೈಸೂರಿನಲ್ಲಿ ಶಿಲಾಶಾಸನಗಳ ಡಿಜಿಟಲೀಕರಣ
ಜು. 22: ಚುನಾವಣ ರಾಜಕೀಯ ನಿವೃತ್ತಿ ಘೋಷಿಸಿದ ಬಿಎಸ್‌ವೈ
l”ಕರ್ನಾಟಕ ಉದ್ಯೋಗ ನೀತಿ-2025’ಕ್ಕೆ ಸಂಪುಟ ಅಸ್ತು.
ಜು: 25: ಬೆಂಗಳೂರಿನಲ್ಲಿ ಅಲ್ ಕಾಯಿದಾ ಶಂಕಿತರಿಬ್ಬರ ಸೆರೆ
ಜು. 26: 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ; ಶಿಕ್ಷಣ ಇಲಾಖೆ ಆದೇಶ
ಜು. 29: ಬುಲೆಟ್ ರೈಲಿಗೆ ಮೊದಲ ಹೆಜ್ಜೆ; ಕೇಂದ್ರ ಸರಕಾರದಿಂದ ಹಸುರು ನಿಶಾನೆ
ಜು. 30: ಸಿಇಟಿ ಫಲಿತಾಂಶ: ಬಾಲಕರ ಪಾರಮ್ಯ
ಜು. 31: ರಾಜ್ಯದ ವಿವಿಧೆಡೆ ಎನ್‌ಐಎ ದಾಳಿ
ಆಗಸ್ಟ್
ಆ. 2: ರಾಜ್ಯದ ಹಲವೆಡೆ ಮುಂದುವರಿದ ವರುಣನ ಪ್ರತಾಪ; ವಿವಿಧ ಜಿಲ್ಲೆಗಳಲ್ಲಿ 11 ಮಂದಿ ಸಾವು
ಆ. 11: ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಚೇತನ ಶಿವಮೊಗ್ಗ ಸುಬ್ಬಣ್ಣ ನಿಧನ.
ಆ.12: ಶಿಕ್ಷಕರ ನೇಮಕ: ವಯೋಮಿತಿ ಸಡಿಲಿಕೆ; ಕಟ್ ಆಫ್ ಅಂಕವೂ ಇಳಿಕೆಗೆ ಸಂಪುಟ ನಿರ್ಧಾರ
ಅ. 13: ಅಂಗಾಂಗ ದಾನ: ಸಿಎಂ ಸಹಿತ ಸಚಿವರ ನೋಂದಣಿ
ಆ. 15: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ
ಆ. 16: ಎಲ್ಲ ಇಲಾಖೆಗಳಿಗೂ ಕ್ರೀಡಾ ಮೀಸಲಾತಿ ವಿಸ್ತರಣೆ
ಆ. 17: ಯಡಿಯೂರಪ್ಪರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ; ಬಿ. ಎಲ್. ಸಂತೋಷ್ ಅವರಿಗೂ ಹುದ್ದೆ
ಆ. 18: ಕೊಡಗಿನಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ
ಆ. 24: ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ
ಆ. 25: ಹೈಕೋರ್ಟ್ ಆದೇಶದಿಂದಾಗಿ ಎಸಿಬಿ ಮಾನ್ಯತೆ ರದ್ದು, ಲೋಕಾಯುಕ್ತಕ್ಕೆ ಬಲ ತುಂಬಲು ಸಂಪುಟ ನಿರ್ಧಾರ ತುಮಕೂರು: ಭೀಕರ ಅಪಘಾತ; 10 ಮಂದಿ ಸಾವು
ಆ. 27: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ವಿರುದ್ಧ ಪ್ರಕರಣ ದಾಖಲು
ಆ. 29: ಆತ್ಮಹತ್ಯೆ ಪ್ರಕರಣ: ಕರ್ನಾಟಕಕ್ಕೆ 5ನೇ ಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.